🙏ಮನುಷ್ಯನನ್ನು ಗೌರವಿಸಿ🙏
ಪ್ರಿಯ ಓದುಗರೆ ಈ ಒಂದು ಬರಹ ನಿಮಗೆಲ್ಲ ಇಷ್ಟವಾಗುತ್ತದೆ ಎಂದುಕೊಂಡಿದ್ದೆನೆ.. ಈ ಬರಹದಲ್ಲಿ ಅಷ್ಟೇ ಸತ್ಯತೆಯು ಕೂಡ ಅಡಗಿದೆ ಅಂತ ಹೇಳಲು ಇಚ್ಛಿಸುತ್ತೇನೆ.
ಅದೊಂದು ಊರಿನಲ್ಲಿ ಒಬ್ಬ ದೊಡ್ಡ ಶ್ರೀಮಂತ ಇದ್ದ. ಅವನು ತನ್ನ ಮಗಳ ಮದುವೆಗೆ ಊರಿನ ಗಣ್ಯವ್ಯಕ್ತಿಗಳನ್ನೆಲ್ಲ ಆಹ್ವಾನಿಸಿದ , ಆಹ್ವಾನಿತರ ಪಟ್ಟಿಯಲ್ಲಿ ಒಬ್ಬ ಬಡ ಕವಿಯೂ ಸಹ ಇದ್ದ. ಬಹಳ ಅದ್ದೂರಿಯಾಗಿ ನಡೆದ ಮದುವೆಗೆ ಆತ ಬಹಳ ಸರಳವಾಗಿ ಹೋಗಿದ್ದ ಅತೀ ಸಾಧಾರಣ ಬಟ್ಟೆಗಳನ್ನು ತೊಟ್ಟು ಹೋದ, ಜನ ನೋಡಿಯೂ ನೋಡದಂತೆ ಇದ್ದರು. ಕೊನೆಗೆ ಅವನು ಆ ಮದುವೆ ಮನೆಯ ಎದುರಿಗಿದ್ದ ಅಂಗಡಿಗೆ ಹೋಗಿ ಒಳ್ಳೆಯ ಬಟ್ಟೆಗಳನ್ನು ಬಾಡಿಗೆಗೆ ಪಡೆದು ವಾಪಸ್ಸು ಹೋದ ಆಗ ಅವನನ್ನು ಎಲ್ಲರೂ ಗೌರವಿಸುವವರೇ ಎಲ್ಲರೂ ಮಾತಾಡಿಸುವವರೇ ಶ್ರೀಮಂತನೇ ಆ ಕವಿಯ ಕೈ ಹಿಡಿದುಕೊಂಡು ಹೋಗಿ ಅವನಿಗೆ ಊಟ ಬಡಿಸಿದ ,ಆ ಕವಿ ಊಟ ಮಾಡುವ ಬದಲು ಅದನ್ನು ತನ್ನ ಮೈಮೇಲೆ ಸುರಿದುಕೊಂಡ ಎಲ್ಲರೂ ಆಶ್ಚರ್ಯದಿಂದ ಅವನನ್ನೇ ನೋಡಿದರು ತನಗೆ ಅಷ್ಟೊಂದು ಗೌರವ ಸಿಗುತ್ತಿರುವುದು ಆ ಬಟ್ಟೆಗಳಿಂದ ಹೊರತು ತನ್ನ ಪ್ರತಿಭೆಯಿಂದಲ್ಲ ಹಾಗಾಗಿ ಆ ಊಟ ಬಟ್ಟೆಗಳಿಗೆ ಸೇರಬೇಕು ಎಂದ. ಎಲ್ಲರೂ ತಲೆ ತಗ್ಗಿಸಿದರು .
ಇಂದಿನ ಜಗತ್ತಿನಲ್ಲಿ ನಾವು ನಮ್ಮ ಜ್ಞಾನ, ಕೆಲಸ, ತಿಳುವಳಿಕೆ, ಬುದ್ಧಿವಂತಿಕೆಗಿಂಥ ಹೆಚ್ಚಾಗಿ ನಾವು ಆಸ್ತಿ, ಅಂತಸ್ತು, ಜನಪ್ರಿಯತೆಯಿಂದಾಗಿ ಕೆಲವರಿಗೆ ಬೇಕಾಗಿರುತ್ತೇವೆ. ಅದೇ ಕಾರಣಕ್ಕೆ ಸ್ನೇಹಿತರ ಬಳಗ ದೊಡ್ಡದಾಗಿರುತ್ತದೆ. ಆದರೆ ಜನ ನಮ್ಮ ಸ್ನೇಹ ಬಯಸುತ್ತಿರುವುದು ಬೇರೆ ಯಾವುದೋ ಕಾರಣಕ್ಕೆ ಎಂಬ ಸತ್ಯ ಗೊತ್ತಾದಾಗ ಆಗುವ ಆಘಾತ ಅಷ್ಟಿಷ್ಟಲ್ಲ. ಹಾಗಾಗಿ ಜನರನ್ನು ಅವರ ಜ್ಞಾನ ಮತ್ತು ಕೆಲಸಗಳಿಗೆ ಗೌರವಿಸಬೇಕೇ ಹೊರತು ಅವರೆಷ್ಟು ಹಣವಂತರು ಎಂಬ ಕಾರಣಕ್ಕೆ ಗೌರವಿಸುವುದಲ್ಲ. ಅಂಥವರಿಂದ ದಯವಿಟ್ಟು ದೂರವಿರಿ ನಿಮ್ಮ ಯೋಗ್ಯತೆ ಗೊತ್ತಿರುವವರ ಜೊತೆಗೆ ಸ್ನೇಹ ಮಾಡಿ. ಎಲ್ಲರೂ ಮನುಷ್ಯರಾಗಿ ಇರೋಣ, ಮನುಷ್ಯರನ್ನು ಗೌರವಿಸೋಣ.
ಈ ಒಂದು ಲೇಖನ ನಿಮಗೆಲ್ಲ ಸರಿ ಅನಿಸಿದರೆ ಇಷ್ಟವಾದರೆ ಕಮೆಂಟ್ ಮಾಡಿ ಹಾಗೆ ಲೈಕ್ ಕೂಡಾ ಮಾಡಿ. ಮುಂಬರುವ ದಿನಗಳಲ್ಲಿ ಇನ್ನಷ್ಟು ಒಳ್ಳೆ ಬರಹಗಳೊಂದಿಗೆ ಬರುವೆ.
ಧನ್ಯವಾದಗಳು 🙏😊
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜

1 Comments
Super Article
ReplyDelete