🔥 ಬಾಗಲೋಡಿ ದೇವರಾಯ 🔥
ಬಾಗಲೋಡಿ ದೇವರಾಯ ಅವರು ೧೯೨೭ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಾಗಲೋಡಿಯಲ್ಲಿ ಜನಿಸಿದರು. ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಆ ಕಾಲಕ್ಕೆ ಐ .ಎ. ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವಿದೇಶಿ ಸೇವೆಗೆ ಆಯ್ಕೆಯಾದರು. ಮಾಸ್ತಿ ಹಾಗೂ ಇವರೂ ಸಮಕಾಲೀನರು. ಅದಲ್ಲದೆ ಸಣ್ಣ ಕತೆಗಳನ್ನು ಬರೆದವರು. ಅವರು ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಫಿಲಿಫೈನ್ಸ್, ನ್ಯೂಜಿಲೆಂಡ್, ಬಲ್ಗೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯನಿರ್ವಹಿಸಿದರು.
ಬಾಗಲೋಡಿ ದೇವರಾಯ ಅವರ ಕಥಾಸಂಗ್ರಹಗಳೆಂದರೆ "ಹುಚ್ಚು ಮುನಸೀಫ ಮತ್ತು ಇತರ ಕತೆಗಳು, ಆರಾಧನಾ, ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು. " ಬಾಗಲೋಡಿ ದೇವರಾಯ ಅವರು ಒಟ್ಟು ೨೬ ಕತೆಗಳನ್ನು ಬರೆದಿದ್ದಾರೆ. ಇವರು ೧೯೮೫ ರಲ್ಲಿ ನಿಧನರಾದರು.
🌷🌷🌷🌷🌷🌷🌷🌷🌷🌷🌷🌷🌷🌷🌷🌷🌷
0 Comments