ಪ್ರಬಂಧ / Essay
Essay, Education Should Be Nationalized ...?
ಶಿಕ್ಷಣ ರಾಷ್ಟ್ರೀಕರಣ ವಾಗಬೇಕೇ...?
ಶಿಕ್ಷಣ ರಾಷ್ಟ್ರೀಕರಣ ವಾಗಬೇಕೇ...?
ಆಧುನಿಕ ನಾಗರಿಕ ಸಮಾಜದಲ್ಲಿ ಶಿಕ್ಷಣ ವ್ಯವಸ್ಥೆ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಶಿಕ್ಷಣದಿಂದಲೇ ಸಮಾನತೆ ಸಾಧ್ಯ. ಆದರೆ ಸಮಾನ ಶಿಕ್ಷಣ ಇಂದು ಅಗತ್ಯವಾಗಿದೆ. ದೇಶದಲ್ಲಿ ಕೆಲವರ ಮಕ್ಕಳು ಸುಸಜ್ಜಿತ ಶಾಲೆಗಳಲ್ಲಿ ಹಲವಾರು ಮಕ್ಕಳು ಮೂಲ ಸೌಕರ್ಯವಿಲ್ಲದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನು ಹೋಗಲಾಡಿಸಲು ರಾಷ್ಟ್ರದಾದ್ಯಂತ ಒಂದೇ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವ ಅಗತ್ಯವಿದೆ.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸುವ್ಯವಸ್ಥಿತ ಶಿಕ್ಷಣ ಪದ್ಧತಿ ಇತ್ತು. ನಳಂದ, ತಕ್ಷಶಿಲಾ ಮತ್ತು ವಿಕ್ರಮಶೀಲ ವಿಶ್ವ ವಿದ್ಯಾಲಯಗಳು ಇದಕ್ಕೆ ಸಾಕ್ಷಿ. ಇಂದು ದಂತಕಥೆಯೇ ಎಂದು ಭಾಸವಾಗುವಂತೆ ಶಿಕ್ಷಣದ ಉತ್ತುಂಗವನ್ನು ಸಾರಿವೆ. ಅಂದಿನ ಶಿಕ್ಷಣ ಕೇಂದ್ರಗಳು ಕೇವಲ ಧಾರ್ಮಿಕ ತಾಣಗಳು ಆಗಿರದೆ ವಿಜ್ಞಾನ. ಹಸ್ತಸಾಮುದ್ರಿಕೆ ,ಔಷಧಿ ,ವೇದಾಂತ ಮುಂತಾದ ಕ್ಷೇತ್ರಗಳಲ್ಲಿ ಪಾರಂಗತೆಯನ್ನು ಸಾಧಿಸಿದ್ದವು. ಜಾಗತೀಕರಣದ ಸಾಧನೆಗಳಿಗೆ ಸರಿಸಮನಾದ ವಿದ್ವತ್ತು ಪುರಾತನ ಭಾರತದಲ್ಲಿ ಕಂಡು ಬರುವುದು ನಮಗೆ ಸೋಜಿಗ ತರುವ ಸಂಗತಿಯಾಗಿದೆ.
🏵🏵
ಶಿಕ್ಷಣದ ಉದ್ದೇಶ.
ಹಳ್ಳಿಯಿಂದ ದಿಲ್ಲಿಯವರೆಗೆ ಸಿಬಿಎಸ್ಇ, ಐಸಿಎಸ್ಇ. ಪಠ್ಯಕ್ರಮ ಕಾನ್ವೆಂಟ್, ಪಬ್ಲಿಕ್ ಶಾಲೆ ,ವಿದ್ಯಾಲಯ ಅಂತರಾಷ್ಟ್ರೀಯ ವಸತಿ ಶಾಲೆ ಎಂಬ ಬಣ್ಣಬಣ್ಣದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳು ಶುರುವಾದವು. ಇದರಿಂದ ಸಮಾನತೆ ಶಿಕ್ಷಣ ಎಂಬ ಆಶಯ ನುಚ್ಚುನೂರಾಗಿ ಶ್ರೀಮಂತರ ಮಕ್ಕಳಿಗೆ ಕಾನ್ವೆಂಟ್ನಲ್ಲಿ ಇಂಗ್ಲೀಷ್ ಕಲಿಕೆ ಬಡವರ ಮಕ್ಕಳಿಗೆ ಸರಕಾರಿ ಶಾಲೆ ಎಂಬ ಅಸಮಾನತೆ ಪರಿಸ್ಥಿತಿ ಉದ್ಭವಿಸಿತು. ಇದರಿಂದ ಸಮಾಜದ ತಳಸಮುದಾಯ ಮತ್ತು ಆರ್ಥಿಕವಾಗಿ ದುರ್ಬಲರಾದ ಜನರಲ್ಲಿ ಒಂದು ರೀತಿಯ ತಳಮಳ ಶುರುವಾಯಿತು. ಸಮಾಜದಲ್ಲಿ ತಾರತಮ್ಯಗಳು ಕಾಣಿಸಿಕೊಂಡವು. ಈ ಬೆಳವಣಿಗೆಗೆ ಎಲ್ಲರಿಗೂ ಸಮಾನ ಶಿಕ್ಷಣ ಎಂಬ ಹೊಸ ಚಳುವಳಿಯ ಹುಟ್ಟಿಗೆ ಕಾರಣವಾಯಿತು. ಶಿಕ್ಷಣ ರಾಷ್ಟ್ರೀಕರಣ ಎಂಬುದು ಈ ಕೂಗಿನ ಮುಂದುವರಿದ ಭಾಗ ಬಡವ-ಶ್ರೀಮಂತ ,ಶ್ರೇಷ್ಠ-ಕನಿಷ್ಠ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬ ಮಕ್ಕಳಿಗೂ ಪ್ರೌಢ ಶಿಕ್ಷಣ ಮುಗಿಯುವವರೆಗೂ ಸಮಾನ ಗುಣಮಟ್ಟದ ಶಿಕ್ಷಣ ದೊರಕಬೇಕು.
ಶಿಕ್ಷಣ ವ್ಯವಸ್ಥೆ.
ಭಾರತದ ರಾಜ್ಯಗಳಲ್ಲೂ ಮಾತ್ರವಲ್ಲದೆ ರಾಜ್ಯದೊಳಗೆ ವೈವಿಧ್ಯಮಯ ಪಠ್ಯಕ್ರಮದ ವಿಧಾನ, ಪದ್ಧತಿ, ಭಾಷೆ ,ಗುರಿ ಮತ್ತು ಉದ್ದೇಶಗಳು ಶಿಕ್ಷಣವು ಏಕರೂಪದ ಶಿಕ್ಷಣಕ್ಕೆ ಅವಕಾಶವಿಲ್ಲದೆ ಕೆಲವು ರಾಜ್ಯಗಳು ಸಾಕ್ಷರತೆಯಲ್ಲಿ ಉದ್ಯೋಗಗಳಲ್ಲಿ.( IAS IPS IFS.) ಮಾತ್ರವಲ್ಲದೆ ವೈಜ್ಞಾನಿಕ ಪ್ರಗತಿದಾಯಕ ಮತ್ತು ತಂತ್ರಜ್ಞಾನದಲ್ಲಿ ವ್ಯತ್ಯಾಸದ ಸಾಧನೆ ಮಾಡಿ ಅಸಮತೋಲನಕ್ಕೆ ಕಾರಣವಾಗಿದೆ. ನಮ್ಮಲ್ಲಿ ಸದ್ಯ ಚಾಲ್ತಿಯಲ್ಲಿರುವ ಶಿಕ್ಷಣ ಭಾರತೀಯರೇ ರೂಪಿಸಿಕೊಂಡಿದ್ದು ಅಲ್ಲ. ಬ್ರಿಟಿಷರು ಭಾರತಕ್ಕೆ ಬಂದ ನಂತರ ಮೆಕಾಲೆ ಇಂದ ಸೃಷ್ಟಿಯಾದ ಮಾದರಿಯ ಶಿಕ್ಷಣ ನಮ್ಮಲ್ಲಿ ಜಾರಿಯಲ್ಲಿದೆ. ಇತ್ತೀಚಿಗಂತೂ ಎಲ್ಲಾ ಕಡೆ ನಾಯಿಕೊಡೆಗಳಂತೆ ಡೇಕೇರ್, ಪ್ಲೇಸ್ಕೂಲ್ , ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ. ಇವುಗಳಿಗೆ ಯಾವುದೇ ಲಗಾಮು ಇಲ್ಲ ಇವುಗಳನ್ನು ತಡೆಯಲು ಶಿಕ್ಷಣ ರಾಷ್ಟ್ರೀಕರಣ ಅಗತ್ಯ. ಶಿಕ್ಷಣ ಕ್ಷೇತ್ರ ಕಾಲಕಾಲಕ್ಕೆ ರಾಷ್ಟ್ರೀಯ ನೀತಿ ಆಯೋಗಗಳು ರಚನೆಗೊಂಡು ಜಾರಿಯಾದರೂ ಸರ್ವರಿಗೂ ಸಮಾನ ಶಿಕ್ಷಣ ನೀಡುವುದು ಇನ್ನೂ ಸಾಧ್ಯವಾಗಿಲ್ಲ. ( ಶುರು ಆಗುವ ವರೆಗೂ, ಶುರುವಾದ ನಂತರ ಎಷ್ಟರ ಮಟ್ಟಿಗೆ ಯಶಸ್ವಿ ಆಗುವುದು ತಿಳಿದಿಲ್ಲ. ಆದರೂ ಸಮಯ ಬಂದಾಗ ಹೊಸದೊಂದು ಸಮಸ್ಯ ಕೊರೋನ ಕಾಲ ಇರಲಿ ಕಾದು ನೋಡಬೇಕಿದೆ. )
🏵🏵
ರಾಷ್ಟ್ರೀಕರಣ ದಿಂದಾಗುವ ಲಾಭಗಳು.
01.ಏಕರೂಪದ ಸಮಾನ ಗುರಿ, ಉದ್ದೇಶ, ಭಾಷೆ, ಪಠ್ಯಕ್ರಮ ವಿಧಾನ, ಸುವ್ಯವಸ್ಥೆಯಿಂದ ಕೂಡಿದ ಗುಣಮಟ್ಟದ ಶಿಕ್ಷಣ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿದ್ದು ಭಾರತವನ್ನು ಪ್ರಗತಿಯತ್ತ ಸಾಧಿಸಬಲ್ಲದು.
02.ರಾಷ್ಟ್ರೀಕರಣ ದೊಂದಿಗೆ ಸಾರ್ವತ್ರಿಕರಣವಾದಾಗ ಮೇಲು-ಕೀಳು , ಶ್ರೇಷ್ಠ-ಕನಿಷ್ಠ ಎಂಬ ಭೇದಭಾವಗಳು ದೂರಾಗಿ ವಿಶಾಲ ಮನೋಭಾವ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
03. ಶಿಕ್ಷಣ ರಾಷ್ಟ್ರೀಕರಣದಿಂದ ಸಾಮಾಜಿಕವಾಗಿ, ಬೌದ್ಧಿಕವಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತದೆ.
04.ದೇಶದ ಎಲ್ಲಾ ಜನರು ಒಂದೇ ಎಂಬ ಭಾವನೆ ಮೂಡುತ್ತದೆ.
05. ಸಂಕುಚಿತ ಮನೋಭಾವನೆಗಳು, ಸಾಮಾಜಿಕ ಸಮಸ್ಯೆಗಳು ದೂರವಾಗಿ ಸಮಾನತೆ ಬರುತ್ತದೆ.
06. ಖಾಸಗೀಕರಣ ಭ್ರಷ್ಟಾಚಾರಗಳಿಂದ ಶಿಕ್ಷಣ ವ್ಯವಸ್ಥೆಗಳನ್ನು ಮುಕ್ತಗೊಳಿಸಿ ಸರ್ವರಿಗೂ ಸಮಾನ ಶಿಕ್ಷಣ ನೀಡುವುದು.
07. ರಾಜ್ಯದಿಂದ ರಾಜ್ಯಕ್ಕೆ ಇರುವ ಶೈಕ್ಷಣಿಕ ವ್ಯತ್ಯಾಸಗಳು ಕಡಿಮೆಯಾಗಿ ರಾಷ್ಟ್ರೀಯ ಭಾವೈಕ್ಯತೆ ಮೂಡುತ್ತದೆ.
08.ಭಾಷಾ ವೈಷಮ್ಯ. ಪ್ರಾದೇಶಿಕತೆ ವ್ಯಾಜ್ಯಗಳು ದೂರವಾಗಿ ದೇಶಾಭಿಮಾನ ಸರ್ವರ ಹೃದಯದಲ್ಲಿ ನೆಲೆಸಲು ಸಹಕಾರಿ.
09. ಶಿಕ್ಷಣ ರಾಷ್ಟ್ರೀಕರಣದಿಂದಾಗಿ ಮಾನವ ಸಂಪನ್ಮೂಲ ಹೆಚ್ಚುತ್ತದೆ.
10. ಸರಕಾರಿ ಶಾಲಾ-ಕಾಲೇಜುಗಳಲ್ಲಿ ಬಡ ಮಧ್ಯಮ ವರ್ಗದವರು ಸಹ ಉತ್ತಮ ಶಿಕ್ಷಣ ಪಡೆಯಬಹುದು.
🏵🏵
ಸಮಾರೋಪ.
ಭಾರತದಲ್ಲಿ ಎಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಏಕತೆಗಾಗಿ ಶಿಕ್ಷಣ ರಾಷ್ಟ್ರೀಕರಣಗೊಳ್ಳುವುದು ಸಂತಸದ ಸಂಗತಿ. ಹಾಗೆ ರಾಷ್ಟ್ರೀಕರಣದಿಂದ ಕಷ್ಟವೇನಲ್ಲ ಸರಕಾರಕ್ಕೆ ಸ್ವಲ್ಪ ಹೊರೆಯಾದರೂ ಶಿಕ್ಷಣ ಗುಣಮಟ್ಟ ಮತ್ತು ಜನರ ಅನುಕೂಲದ ದೃಷ್ಟಿಯಿಂದ ಉತ್ತಮ. ದೇಶದಲ್ಲಿ ವಿವಿಧ ಭಾಷೆಗಳಿವೆ ಈ ಒಂದು ಭಿನ್ನತೆಯಲ್ಲಿ ಏಕರೂಪದ ಶಿಕ್ಷಣ ನಿರ್ಮಾಣ ಮಾಡುವುದು ಅಷ್ಟೊಂದು ಸುಲಭದ ಕಾರ್ಯವಲ್ಲ ಆದರೂ ಪ್ರಸ್ತುತ ಸಂದರ್ಭದಲ್ಲಿ ಸಾಧ್ಯವೆನಲ್ಲ . ದೇಶದ ಎಲ್ಲಾ ಪ್ರದೇಶದ ಜನಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮುಟ್ಟಬೇಕಾದರೆ ಶಿಕ್ಷಣ ರಾಷ್ಟ್ರೀಕರಣ ಅಗತ್ಯ.
🏵🏵
0 Comments