🍀🍀 ಸುಸ್ಥಿರ ಅಭಿವೃದ್ಧಿ ಗುರಿಗಳು🍀🍀
🍀ಎಸ್‌ಡಿಜಿ 1- ಬಡತನ ನಿರ್ಮೂಲನೆ- ಯಾವ ಸ್ವರೂಪದಲ್ಲಿಯೂ ಬಡತನವಿರಬಾರದು . ಸಮಸ್ತ ನಾಗರಿಕರಿಗೂ ಸಾಮಾಜಿಕ ಭದ್ರತೆ ಇರಬೇಕು .
🍀ಎಸ್‌ಡಿಜಿ 2 - ಶೂನ್ಯ ಹಸಿವು- ಹಸಿವಿನಿಂದ ಯಾರೂ ಬಳಲಬಾರದು . ಎಲ್ಲರಿಗೂ ಆಹಾರ ಭದ್ರತೆ ಇರಬೇಕು . ಪೌಷ್ಟಿಕಾಂಶಯುಕ್ತ ಆಹಾರ ದೊರೆಯಬೇಕು . ಸುಸ್ಥಿರ ಕೃಷಿ ನೀತಿಗೆ ಉತ್ತೇಜನ.
🍀ಎಸ್‌ಡಿಜಿ 3 - ಉತ್ತಮ ಆರೋಗ್ಯ- ಎಲ್ಲರಿಗೂ ಉತ್ತಮ ವೈದ್ಯಕೀಯ ಸೌಲಭ್ಯ ದೊರೆಯಬೇಕು . ಎಲ್ಲಾ ವಯಸ್ಸಿನವರು , ವರ್ಗದವರ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರಬೇಕು.
🍀ಎಸ್‌ಡಿಜಿ 4 --ಗುಣಮಟ್ಟದ ಶಿಕ್ಷಣ ~ ಎಲ್ಲರನ್ನೂ ಒಳಗೊಂಡ ಶಿಕ್ಷಣ ನೀತಿ . ಜೀವನ ನಿರ್ವಹಣೆಗೆ ಅವಕಾಶಗಳನ್ನು ಒದಗಿಸುವಂತಹ ಗುಣಮಟ್ಟದ ಶಿಕ್ಷಣ
🍀ಎಸ್‌ಡಿಜಿ 5 - ಲಿಂಗ ಸಮಾನತ- ಲಿಂಗ ಸಮಾನತೆ ಎಲ್ಲೆಡೆ ಸಾಧ್ಯವಾಗಬೇಕು . ಮಹಿಳೆಯರು ಮತ್ತು ಬಾಲಕಿಯರ ಸಬಲೀಕರಣ.
🍀ಎಸ್‌ಡಿಜಿ 6- ಶುದ್ಧ ನೀರು ಮತ್ತು ಶುಚಿತ್ವ- ಎಲ್ಲರಿಗೂ ಶುದ್ಧನೀರಿನ ನಿರಂತರ ಲಭ್ಯತೆ ಮತ್ತು ಶುಚಿತ್ವ ನಿರ್ವಹಣೆಗೆ ಅಗತ್ಯವಾದ ಸೌಲಭ್ಯ.
🍀ಎಸ್‌ಡಿಜಿ 7 - ಕೈಗೆಟಕುವ ಶುದ್ಧ ಇಂಧನ- ಎಲ್ಲರಿಗೂ ಕೈಗೆಟಕುವ 10 ಬೆಲೆಯಲ್ಲಿ ಪರಿಸರ ಸ್ನೇಹಿ ಇಂಧನ ದೊರೆಯಬೇಕು .
🍀ಎಸ್‌ಡಿಜಿ 8 - ಗುಣಮಟ್ಟದ ಕೆಲಸ ಮತ್ತು ಆರ್ಥಿಕ ಬೆಳವಣಿಗೆ- ಎಲ್ಲರಿಗೂ ಉತ್ತಮ ಗುಣಮಟ್ಟದ ಕೆಲಸ ದೊರೆಯಬೇಕು , ಎಲ್ಲರನ್ನೂ ಒಳಗೊಳ್ಳುವ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ .
🍀ಎಸ್‌ಡಿಜಿ 9 - ಕೈಗಾರಿಕೆ / ಅನ್ವೇಷಣೆ / ಮೂಲಸೌಕರ್ಯ- ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ .
🍀ಎಸ್‌ಡಿಜಿ 10 - ಅಸಮಾನತೆ ನಿರ್ಮೂಲನೆ- ಜನರು / ಜಿಲ್ಲೆಗಳು ರಾಜ್ಯಗಳು / ದೇಶಗಳ ನಡುವಣ ಅಸಮಾನತೆ ನಿರ್ಮೂಲನೆ.
🍀ಎಸ್‌ಡಿಜಿ 11 - ಸುಸ್ಥಿರ ನಗರ ಮತ್ತು ಸಮುದಾಯಗಳು- ಜನವಸತಿ ಪ್ರದೇಶಗಳು ಸುರಕ್ಷಿತ ಮತ್ತು ಸುಸ್ಥಿರವಾಗಿರಬೇಕು.
🍀ಎಸ್‌ಡಿಜಿ 12 - ಹೊಣೆಯಾಧಾರಿತ ಬಳಕೆ ಮತ್ತು ಉತ್ಪಾದನೆ- ಎಲ್ಲಾ ಸರಕು ಮತ್ತು ಸೇವೆಗಳ ಸುಸ್ಥಿರವಾದ ಉತ್ಪಾದನಾ ನೀತಿ ಮತ್ತು ಜವಾಬ್ದಾರಿಯುತ ಬಳಕೆ ಉತ್ತೇಜನ.
🍀ಎಸ್‌ಡಿಜಿ 13 - ಹವಾಮಾನ- ಹವಾಮಾನ ವೈಪರೀತ್ಯ ಮತ್ತು ಅದರ ಪರಿಣಾಮಗಳ ನಿಯಂತ್ರಣಕ್ಕೆ ತಕ್ಷಣದ ಕ್ರಮಗಳು .
🍀ಎಸ್‌ಡಿಜಿ 14 - ಜಲಚರ ಜೀವಿಗಳು- ಜಲಚರ ಜೀವಿಗಳ ಸಂರಕ್ಷಣೆ ಮತ್ತು ಸಮುದ್ರದ ಸಂಪನ್ಮೂಲಗಳ ಸುಸ್ಥಿರ ಬಳಕೆ .
🍀ಎಸ್‌ಡಿಜಿ 15 - ನೆಲಜೀವಿಗಳು- ಪರಿಸರ ಸಂರಕ್ಷಣೆ , ಜೀವವೈವಿಧ್ಯ ಸಂರಕ್ಷಣೆ .
🍀ಎಸ್‌ಡಿಜಿ 16 - ಶಾಂತಿ , ನ್ಯಾಯ ಮತ್ತು ಪ್ರಬಲ ಸಂಸ್ಥೆಗಳು- ಸಮುದಾಯಗಳಲ್ಲಿ ಶಾಂತಿಯನ್ನು ಉತ್ತೇಜಿಸಬೇಕು . ಎಲ್ಲರಿಗೂ ನ್ಯಾಯ ಕೈಗೆಟುಕಬೇಕು .
🍀🍀ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು 2015 ರಲ್ಲಿ 2030 ಕಾರ್ಯಸೂಚಿ'ಯ ಭಾಗವಾಗಿ ಒಟ್ಟು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ( ಎಸ್‌ಡಿಜಿ ) ನಿಗದಿಪಡಿಸಲಾಗಿದೆ . ಭಾರತದ ಶ್ರೇಯಾಂಕವು 115 ರಿಂದ 117 ಕ್ಕೆ ಕುಸಿದಿದೆ.
🌀🌀🌀🌀🌀🌀🌀🌀🌀🌀🌀🌀🌀🌀🌀🌀🌀🌀🌀
0 Comments