💥 ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಜ್ಞಾನ ನೋಟ್ಸ್ 💥
💥 ವಿಟಮಿನ್‌ಗಳೆಂದರೇನು?, ಪ್ರಮುಖ ಜೀವಸತ್ವಗಳು / ವಿಟಾಮಿನ್ ಗಳು ಹಾಗೂ ಅವುಗಳ ಕೊರತೆಯಿಂದ ಬರುವ ರೋಗಗಳು. What are vitamins ?, major vitamins and diseases that are lacking.
🔅 ವಿಟಮಿನ್‌ಗಳೆಂದರೇನು?
ನಾವು ತಿನ್ನುವ ಆಹಾರದಲ್ಲಿರುವ ಅಂಶಗಳಲ್ಲಿ ವಿಟಾಮಿನ್ ಗಳು ಸೇರಿವೆ. ಅವು ದೇಹಕ್ಕೆ ಅಗತ್ಯವಿರುವ ಸಾಮರ್ಥ್ಯ ನೀಡುತ್ತವೆ.
🔅 ವಿಟಮಿನ್ ಬಿ1’ ಅನ್ವೇಷಣೆಗೆ ಕಾರಣವಾದ ಪ್ರಯೋಗ ಯಾವುದು?
1896 ರಲ್ಲಿ ಡಚ್ ರೋಗತಜ್ಞ ಡಾ.ಕ್ರಿಸ್ಟಿಯನ್ ಈಜಿಕ್ ಮನ್ ಜಾವಾದಲ್ಲಿ ಬೆರಿಬೆರಿ ಎಂಬ ನರರೋಗದಿಂದ ನರಳುತ್ತಿದ್ದವರಿಗೆ ಚಿಕಿತ್ಸೆ ನೀಡುತ್ತಿದ್ದರು.ಆ ರೋಗಿಗಳಂತೆಯೇ ಕೆಲವು ಕೋಳಿಗಳು ಕುಂಟುವುದನ್ನು ಅವರು ಗಮನಿಸಿದರು.ಹಾಗೆ ಕುಂಟುತ್ತಿದ್ದ ಕೋಳಿಗಳಿಗೆ ಅವರು ಪಾಲಿಷ್ ಮಾಡಿದ ಅಕ್ಕಿ ತಿನ್ನಿಸಿದ್ದರು.
ಪಾಲಿಷ್ ಮಾಡದ ಅಕ್ಕಿಯನ್ನು ತಿಂದಿದ್ದ ಕೋಳಿಗಳು ಆರೋಗ್ಯವಾಗಿಯೇ ಇದ್ದವು. ಪಾಲಿಷ್ ಮಾಡದ ಅಕ್ಕಿಯಲ್ಲಿ ಇದ್ದ ಪೋಷಣೆಗೆ ಕಾರಣವಾಗುವ ಅಂಶವೇ ವಿಟಮಿನ್ ಬಿ] ಅಥವಾ ಥಯಮಿನ್ ಎಂದು ಗೊತ್ತಾದದ್ದು ಕ್ರಿಸ್ಟಿಯನ್ ಪ್ರಯೋಗ ಮಾಡಿದ 30 ವರ್ಷಗಳ ನಂತರ.
🔅 ಬ್ರಿಟಿಷ್ ಹಡಗುಗಳ ನಾವಿಕರನ್ನು ‘ಲೈಮೀಸ್’ ಎಂದೇಕೆ ಕರೆಯುತ್ತಿದ್ದರು?
ಯಾಕೆಂದರೆ, ಅವರಿಗೆ ಕುಡಿಯಲು ಲಿಂಬು ಪಾನಿ ಕೊಡುತ್ತಿದ್ದರು. ಲಿಂಬು ಪಾನಿ ಅಥವಾ ನಿಂಬೆರಸವನ್ನು ಪ್ರತಿದಿನ ಸೇವಿಸುವುದರಿಂದ ವಿಟಾಮಿನ್ ಸಿ ದೊರೆಯುತ್ತದೆ. ಇದರಿಂದ ರಕ್ತಪಿತ್ತ ವ್ಯಾಧಿ ಬಾರದು.
🔅 ಪಾಲಿಷ್ ಆಸಿಡ್ ಕಂಡುಹಿಡಿದದ್ದು ಯಾರು ?
ಡಾ. ಯಲ್ಲಪ್ರಗಾದ ಸುಬ್ಬರಾವ್ ಹಾಗೂ ಅಮೆರಿಕಾದಲ್ಲಿನ ಅವರ ನೇತೃತ್ವದ ವಿಜ್ಞಾನಿಗಳ ತಂಡ ಕಂಡುಹಿಡಿಯಿತು.
🔅‘ವಿಟಮಿನ್ ಡಿ’ ಅನ್ವೇಷಣೆಯಾದದ್ದು ಯಾವಾಗ?
ಮಕ್ಕಳಿಗೆ ಮೆದುಮೂಳೆ ರೋಗ ಬರದೇ ಇರಲು ಪ್ರತಿದಿನ ಕಾಡ್ ಲಿವರ್ ಆಯಿಲ್ ಕುಡಿಯುವವಂತೆ ಒತ್ತಾಯಿಸಲಾಗುತ್ತಿತ್ತು.1919 ರಲ್ಲಿ ಸರ್ ಎಡ್ವರ್ಡ್ ಮೆಲ್ಲಾನಿಬಿ ಕಾಡ್ ಲಿವರ್ ಆಯಿಲ್ ನಲ್ಲಿ ಮೂಳೆ ಗಟ್ಟಿಯಾಗಲು ಇರುವ ಅಂಶವನ್ನು 1931 ರಲ್ಲಿ ಪತ್ತೆಮಾಡಿದರು.ಅದೇ ವಿಟಮಿನ್ ಡಿ.
ಪ್ರಮುಖ ಜೀವಸತ್ವಗಳು / ವಿಟಾಮಿನ್ ಗಳು ಹಾಗೂ
ಅವುಗಳ ಕೊರತೆಯಿಂದ ಬರುವ ರೋಗಗಳು :
(important vitamins and diseases)
🔘 ಜೀವಸತ್ವ :— ಜೀವಸತ್ವ A
* ಕೊರತೆಯ ರೋಗ :— ನಿಕ್ಟಾಲೋಪಿಯಾ
* ರೋಗ ಲಕ್ಷಣಗಳು :— ರಾತ್ರಿ ಕುರುಡುತನ
🔘 ಜೀವಸತ್ವ :— ಜೀವಸತ್ವ B1
* ಕೊರತೆಯ ರೋಗ :— ಬೆರಿ ಬೆರಿ
* ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ
🔘 ಜೀವಸತ್ವ :— ಜೀವಸತ್ವ B5
* ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
* ರೋಗ ಲಕ್ಷಣಗಳು :— ಅತಿಬೇಧಿ
🔘 ಜೀವಸತ್ವ :— ಜೀವಸತ್ವ B12
* ಕೊರತೆಯ ರೋಗ :— ಪರ್ನಿಸಿಯಸ್
* ರೋಗ ಲಕ್ಷಣಗಳು :— ರಕ್ತಹೀನತೆ, RBC ಯ ಹಾನಿ
🔘 ಜೀವಸತ್ವ :— ಜೀವಸತ್ವ C
* ಕೊರತೆಯ ರೋಗ :— ಸ್ಕರ್ವಿ
*ರೋಗ ಲಕ್ಷಣಗಳು :- ವಸಡುಗಳ ಸ್ರವಿಕೆ & ಹಲ್ಲುಗಳ ಸಡಲಿಕೆ.
🔘 ಜೀವಸತ್ವ :— ಜೀವಸತ್ವ D
* ಕೊರತೆಯ ರೋಗ :— ರಿಕೆಟ್ಸ್
* ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ
🔘 ಜೀವಸತ್ವ :— ಜೀವಸತ್ವ E
* ಕೊರತೆಯ ರೋಗ :— ಬಂಜೆತನ
* ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ
🔘 ಜೀವಸತ್ವ :— ಜೀವಸತ್ವ K
* ಕೊರತೆಯ ರೋಗ :— ರಕ್ತಸ್ರಾವ
* ರೋಗ ಲಕ್ಷಣಗಳು : ರಕ್ತಹೀನವಾಗುವುದು
💥💥💥💥💥💥💥💥💥💥💥💥💥💥💥💥💥💥💥
0 Comments