A brief description of the post of governor. ರಾಜ್ಯಪಾಲ ಹುದ್ದೆಯ ಸಂಕ್ಷಿಪ್ತ
ಹೊಸದಾಗಿ ನೇಮಕಗೊಂಡ ರಾಜ್ಯಪಾಲರೊಂದಿಗೆ,ರಾಜ್ಯಪಾಲ ಹುದ್ದೆಯ ಸಂಕ್ಷಿಪ್ತ ಇತಿಹಾಸ ಪರಿಚಯ. Useful for competitive Exams.
ರಾಜ್ಯಪಾಲರ ಬಗ್ಗೆ ಸಂಕ್ಷಿಪ್ತ ಮಾಹಿತಿ.
ರಾಜ್ಯದ ಮೊದಲ ಪ್ರಜೆ.
153 ನೇ ವಿಧಿ ರಾಜ್ಯಗಳಿಗೆ ರಾಜ್ಯಪಾಲರ ಹುದ್ದೆಗೆ ಅವಕಾಶ ಕಲ್ಪಿಸಿದೆ.
154 ನೇ ವಿಧಿ ರಾಜ್ಯಪಾಲರ ಕಾರ್ಯಾಂಗ ಅಧಿಕಾರ.
155 ನೇ ವಿಧಿ ರಾಜ್ಯಪಾಲರು ರಾಷ್ಟ್ರಪತಿಗಳಿಂದ ನೇಮಕ.
156ನೇ ವಿಧಿ ಅಧಿಕಾರ ಅವಧಿ ಐದು ವರ್ಷಗಳು ಕೆಲವೊಮ್ಮೆ ಉತ್ತರಾಧಿಕಾರಿ ಬರುವವರೆಗೂ ಅಧಿಕಾರವಧಿ ವಿಸ್ತರಿಸಬಹುದು.(ರಾಷ್ಟ್ರಪತಿಗಳ ಇಚ್ಛೆ ಇರುವವರೆಗೂ ಅಧಿಕಾರದಲ್ಲಿ ಇರುತ್ತಾರೆ.)
157 ನೇ ವಿಧಿ ರಾಜ್ಯಪಾಲರಾಗಲು ಅರ್ಹತೆಗಳು.
158 ನೇ ವಿಧಿ ರಾಜ್ಯಪಾಲರ ವೇತನ ಮತ್ತು ಸವಲತ್ತು, ರಾಜ್ಯಪಾಲರ ಅಧಿಕೃತ ನಿವಾಸ ರಾಜ್ಯಭವನ.
159 ನೇ ವಿಧಿ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಪ್ರಮಾಣವಚನ ಬೋಧಿಸುತ್ತಾರೆ.
160 ನೇ ವಿಧಿ ರಾಜ್ಯಪಾಲರ ಹುದ್ದೆ ಖಾಲಿಯಾದಾಗ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಹಂಗಾಮಿ ರಾಜ್ಯಪಾಲರಾಗಿ ರಾಷ್ಟ್ರಪತಿಗಳ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಾರೆ.
161ನೇ ವಿಧಿ ಪ್ರಕರಣಗಳಿಗೆ ಕ್ಷಮಾದಾನ ನೀಡುವ ಅಧಿಕಾರ.
162 ನೇ ವಿಧಿ ರಾಜ್ಯಪಾಲರ ಅಧಿಕಾರಗಳು.
174ನೇ ವಿಧಿ ಶಾಸಕಾಂಗದ ಅಧಿವೇಶನವನ್ನು ಕರೆಯುವ ಮತ್ತು ಮುಂದೂಡುವ ಅಧಿಕಾರವನ್ನು ಹೊಂದಿರುತ್ತಾರೆ.
175 ನೇ ವಿಧಿ ರಾಜ್ಯಪಾಲರು ಶಾಸಕಾಂಗದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಅಧಿಕಾರ ಹೊಂದಿರುತ್ತಾರೆ.
192 ನೇ ವಿಧಿ ರಾಜ್ಯಪಾಲರು ರಾಜ್ಯ ಶಾಸಕರ ಅರ್ಹತೆ ಬಗ್ಗೆ ಚುನಾವಣಾ ಆಯೋಗದ ಸಲಹೆಯಂತೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ ಮತ್ತು ಎಲ್ಲಾ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳ ಆಗಿರುತ್ತಾರೆ.
200ನೇ ವಿಧಿ ವಿಧಾನಮಂಡಲ ಪಾಸ್ ಮಾಡಿ ಅಂಗೀಕರಿಸಿದ ಸಹಿಗೆ ಕಳುಹಿಸಿದ ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ.
213 ನೇ ವಿಧಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ.
ರಾಜ್ಯ ವಿಧಾನಸಭೆಗೆ 333 ನೇ ವಿಧಿ ಒಬ್ಬ ಆಂಗ್ಲೋ ಇಂಡಿಯನ್ನರನ್ನು ಮತ್ತು 171ನೇ ವಿಧಿ ರಾಜ್ಯ ವಿಧಾನಪರಿಷತ್ತಿಗೆ 1/6 ಸ್ಥಾನಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ನಾಮಕರಣ ಮಾಡಿರುತ್ತಾರೆ.
ರಾಜ್ಯಪಾಲರ ವಿಶೇಷ ಅಂಶಗಳು.
ರಾಜ್ಯದ ಮುಖ್ಯಸ್ಥ ರಾಜ್ಯಪಾಲರು.
ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರು.
ರಾಜ್ಯದ ಸಾಂವಿಧಾನಿಕ ಮುಖ್ಯಸ್ಥ ರಾಜ್ಯಪಾಲರು.
ರಾಜ್ಯದ ಪ್ರಥಮ ರಾಜ್ಯಪಾಲ ಜಯಚಾಮರಾಜ ಒಡೆಯರ್.
ಭಾರತದ ಮೊದಲ ಮಹಿಳಾ ರಾಜ್ಯಪಾಲರು ಸರೋಜಿನಿ ನಾಯ್ಡು.
ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು ವಿ. ಎಸ್. ರಮಾದೇವಿ.
ಕರ್ನಾಟಕ ರಾಜ್ಯದ ದೀರ್ಘಾವಧಿ ರಾಜ್ಯಪಾಲರು ಖುರ್ಷಿದ್ ಅಲಾಮ್ ಖಾನ್.
ಪ್ರಸ್ತುತ( 2021). ರಾಜ್ಯದ ರಾಜ್ಯಪಾಲ, 19ನೇ ರಾಜ್ಯಪಾಲರು ಥಾವರ್ ಚೆಂದ್ ಗೆಹ್ಲೋಟ್.👇👇
ನಿರ್ಗಮಿತ ರಾಜ್ಯಪಾಲರು ವಜುಬಾಯಿ ವಾಲಾ.👇👇
💐💐💐💐💐💐💐💐💐💐💐💐
0 Comments