Article
ಬದುಕೆಂಬ ಪಾಠಶಾಲೆಯ ನಿತ್ಯ-ಸತ್ಯ ವಿದ್ಯಾರ್ಥಿಗಳಿವರು
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!!
ಮೊದಲನೆಯದಾಗಿ ಚಾಣಕ್ಯ ಕಣಜ ವೆಬ್ ತಾಣಕ್ಕೆ ಎಲ್ಲರಿಗೂ ಸ್ವಾಗತ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
ಪ್ರಿಯ ಓದುಗರೆ ಈ ಪುಟ್ಟ ಲೇಖನ ನಿಮಗೆಲ್ಲ ಖಂಡಿತಾ ಇಷ್ಟವಾಗುತ್ತೆ ಎಂದುಕೊಳ್ಳುತ್ತೇನೆ.ತುಂಬಾ ವಾಸ್ತವತೆಗೆ ನಮಗೆಲ್ಲ ಅರಿವಿಗೆ ಬರುವಂತದ್ದು. ಈ ಲೇಖನ ಅಪಲೋಡ ಮಾಡುತ್ತಿರುವ ಕಾರಣ ಇಷ್ಟೆ ನಮ್ಮಲ್ಲಿ ಕೆಲವರು ನಿರಾಶವಾದಿಗಳಾದವರಿಗೆ ತುಂಬಾ ಅವರನ್ನ ಅವರು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ
ಬದುಕೆಂಬ ಪಾಠಶಾಲೆ:-
ಕಾಲ ಕೂಡಿಬರಲಿ ಎನ್ನುತ್ತಾ, ಕಾಲ ಕಳೆಯಬೇಡ, ಕಳಗೇಡಿ.
ಕಾಲ ಕೆಟ್ಟದ್ದು ಎನ್ನುತ್ತಾ, ನೀನು ಕೆಡಬೇಡ ತಿಳಿಗೇಡಿ.
ನಿಮಿಷ ನಿಮಿಷದಂತೆ ಕಾಲದ ಸದುಪಯೋಗ ಮಾಡಿಕೋ ನೀ ನೋಡಿ.
ಆಗ ಯಶ ಬರುವುದು ನಿನ್ನ ಬಳಿ ತಾ ಓಡೋಡಿ.
🌺🌺🌺🌺🌺🌺🌺🌺🌺🌺🌺🌺🌺🌺🌺
ಆತ್ಮೀಯ ಸ್ನೇಹಿತರೇ ಬದುಕೆಂಬ ಪಾಠಶಾಲೆಯಲ್ಲಿ ನಾವು ಅನೇಕ ಪಾಠಗಳನ್ನು ಕಲಿಯುತ್ತೇವೆ. ಅದು ಹೇಗೆ ಎಂದು ಈ ಒಂದು ಪುಟ್ಟ ಲೇಖನದಲ್ಲಿ ತಿಳಿದುಕೊಳ್ಳೋಣ.
ಸ್ನೇಹಿತರೆ ಯಾರು ಈ ಲೋಕದಲ್ಲಿ ಅತ್ಯಂತ ಮೂಢರು ಹಾಗೂ ಯಾರು ಅತ್ಯಂತ ಬುದ್ಧಿಶಾಲಿಗಳೋ ಅವರು ಸುಖವಾಗಿರುತ್ತಾರೆ. ಮಧ್ಯಮ ದರ್ಜೆಯವರು ಕಷ್ಟಪಡುತ್ತಾರೆ ಎಂಬುದಾಗಿ ಮಹಾಭಾರತವು ಹೇಳುತ್ತದೆ. ಒಬ್ಬ ಅತ್ಯಂತ ಸುಖಿ ಯಾಗಿದ್ದಾನೆ ಎಂದರೆ ಅವನು ಏನೂ ಅರಿಯದ ಮೂಡನಾಗಿರಬೇಕು ಅಥವಾ ಅತ್ಯಂತ ಬುದ್ಧಿಶಾಲಿ ಯಾಗಿರಬೇಕು.
ಏನೂ ಅರಿಯದ ಮೂಢನಿಗೆ ಯಾವ ಪ್ರಶ್ನೆಯೂ ಇಲ್ಲ. ನೀತಿ ಅನೀತಿಗಳ, ಧರ್ಮ-ಅಧರ್ಮಗಳ, ನ್ಯಾಯ- ಅನ್ಯಾಯಗಳ, ಪಾಪ-ಪುಣ್ಯಗಳ ಯಾವ ಪ್ರಶ್ನೆಯೂ ಇಲ್ಲ. ಆತನು ತನ್ನದೇ ಆದ ಒಂದು ಲೋಕದಲ್ಲಿ ತನ್ಮಯನಾಗಿರುತ್ತಾನೆ. ಆ ತನ್ಮಯತೆಯಿಂದ ಆತ ಆನಂದವಾಗಿರುತ್ತಾನೆ. ಅಜ್ಞಾನವೇ ಆ ಪರಮಾನಂದ. ಅವನಿಗೆ ಸಮಸ್ಯೆಗಳ ಅನುಭವವೇ ಆಗುವುದಿಲ್ಲ. ಎಷ್ಟೋಸಲ ತನಗೆ ಸಮಸ್ಯೆಗಳು ಇವೆ ಎಂಬುದು ಕೂಡ ಆತನಿಗೆ ತಿಳಿಯುವುದಿಲ್ಲ. ತಿಳಿದರೂ ಕೂಡ ಆ ಬಗ್ಗೆ ಆತ ತಲೆ ಬಿಸಿ ಮಾಡಿಕೊಳ್ಳುವುದಿಲ್ಲ ಅಂದರೆ ತಲೆಕೆಡಿಸಿಕೊಳ್ಳುವುದಿಲ್ಲ. ಅಜ್ಞಾನದ ಆನಂದವೇ ಅಂತದ್ದು.ಆತನನ್ನು ವಿಚಲಿತಗೊಳಿಸದು. ಸಂವೇದನೆ ಇದ್ದರೆ ಪ್ರತಿಕ್ರಿಯೆ ಅಲ್ಲವೇ? ಅದೇ ಅವನಲ್ಲಿ ಇರುವುದಿಲ್ಲ. ಹಾಗಾಗಿ ಅವನಿಗೆ ಚಿಂತೆಯಿಲ್ಲ ಉದ್ವೇಗವಿಲ್ಲ ಆತ ನಿಶ್ಚಿಂತ ಜಗತ್ತಿನ ಯಾವ ಘಟನೆಗಳು ಆತನ ಮೇಲೆ ಏನು ಮಾಡುವುದಿಲ್ಲ.
ಹಾಗೆಂದು ಸರ್ವರಿಗೂ ಇದು ಅಪೇಕ್ಷಣೀಯ ಸ್ಥಿತಿಯಲ್ಲ. ಆದರೆ ಅಜ್ಞಾನಿ ನಿಶ್ಚಿಂತ ಎಂಬುದು ಖಚಿತ. ಆದರೆ ಇಂತಹ ಅಜ್ಞಾನ ಮೂಲಕವಾದ ಸೌಖ್ಯ ಪಡೆಯುವುದು ಗುರಿಯಾಗಬಾರದು.ಈ ಸ್ಥಿತಿಯು ಯಾರಿಗೂ ಬರಬಾರದು. ಮನುಷ್ಯ ಅಜ್ಞಾನವನ್ನು ಕಳೆದುಕೊಳ್ಳಬೇಕು. ಜ್ಞಾನದ ಮೂಲಕ ತನ್ನ ಸಮಸ್ಯೆಯ ಆಳವನ್ನು ಅರಿಯಬೇಕು, ಎದುರಿಸಬೇಕು ಮತ್ತು ಅನುಭವದಿಂದ ಬೆಳೆಯಬೇಕು.
🌺🌺🌺🌺🌺🌺🌺🌺🌺🌺🌺🌺🌺🌺🌺🌺🌺
ಬುದ್ಧಿಯಲ್ಲಿ ಪಾರಂಗತರು ಆಗಿರುತ್ತಾರೆ ಎಂಬುದು ಮುಂದಿನ ಮಾತು. ಸುಖಿಯಾಗಿರು ಎಂಬುದು ಅವರಿಗೆ ಗೊತ್ತು. ಕಷ್ಟಗಳು ಬರದಂತೆ ಬುದ್ಧಿಯಿಂದ ದಾಟುತ್ತ ಮುಂದುವರಿದ ಇವರು ಸುಖಿಗಳಾಗಿರಬಲ್ಲರು. ಅಕಸ್ಮಾತ್ ಕಷ್ಟಗಳು ಬಂದರೆ ಯಾವುದನ್ನು ಹೇಗೆ ಎದುರಿಸಬೇಕು ಎಂಬುದು ಗೊತ್ತು ಇರುತ್ತದೆ.
ಅತ್ಯಂತ ಬುದ್ಧಿಶಾಲಿ ಯಾಗಿರುವ ಆತನನ್ನು ಯಾವ ಕಷ್ಟಗಳು ಏನೂ ಮಾಡಲಾರವು. ಒಬ್ಬ ಬುದ್ಧಿಶಾಲಿಯಾಗಿರುವ ಮನುಷ್ಯನು ಮನೆಯಲ್ಲಿದ್ದರೆ ಆ ಮನೆಯು ನೆಮ್ಮದಿಯಾಗಿ ಇರುತ್ತದೆ. ಗೃಹಿಣಿಯೊಬ್ಬಳು ಬುದ್ಧಿಶಾಲಿ ಯಾಗಿದ್ದರೆ ಆ ಮನೆಯು ನಂದಗೋಕುಲವಾಗಿರುತ್ತದೆ. ಸಾಹೇಬನು (ಅಧಿಕಾರಿಗಳು) ಬುದ್ಧಿಶಾಲಿ ಯಾಗಿದ್ದರೆ ಅಲ್ಲೇ ಸ್ವರ್ಗವೇ ಸೃಷ್ಟಿಯಾಗಿರುತ್ತದೆ. ಶಿಕ್ಷಕರು ಬುದ್ಧಿಶಾಲಿಯಾಗಿದ್ದರೆ ಶಾಲೆಯು ಉದ್ದಾರವಾಗುತ್ತದೆ. ಸ್ವಾಮಿಯೊಬ್ಬ ಬುದ್ಧಿವಂತನಾಗಿದ್ದರೆ ಆತ ಕೈಲಾಸವನ್ನೇ ಧರೆಗಿಳಿಸಬಲ್ಲ. ಬುದ್ಧಿಯೇ ಇವರಿಗೆಲ್ಲಾ ಕಷ್ಟ ತಾರಕ ಸಾಧನ ಎಂದು ಹೇಳಿದರೆ ತಪ್ಪಾಗಲಾರದು.
ಈ ಎರಡೂ ವರ್ಗಗಳ ನಡುವಿನವರು ಸುಖಿಗಳು. ಇವರಿಗೆ ಕಷ್ಟಗಳು ಬರುತ್ತವೆ. ಬಂದ ಬಹಳಷ್ಟು ಕಷ್ಟಗಳಿಂದ ಇವರು ಉದ್ವಿಗ್ನರಾಗುತ್ತಾರೆ. ಇವರು ತಮ್ಮ ಎಲ್ಲಾ ಕಷ್ಟಗಳಲ್ಲಿ ಯಶಸ್ವಿ ಗಳಾಗುತ್ತಾರೆ ಎಂದು ಹೇಳಲು ಬರುವುದಿಲ್ಲ. ಇದಕ್ಕೆ ಇವರಲ್ಲಿರುವ ಆತ್ಮವಿಶ್ವಾಸದ ಕೊರತೆ ಮುಖ್ಯ ಕಾರಣ. ಚಿಂತೆಯಂತೂ ಇವರಿಗೆ ಕಟ್ಟಿಟ್ಟ ಬುತ್ತಿ. ಬದುಕಿನ ಮೂಲ ಸಮಸ್ಯೆಯನ್ನು ಸರಿಯಾಗಿ ತಿಳಿದುಕೊಳ್ಳಲಾರರು. ತಿಳಿದುಕೊಂಡರು ಏನೂ ಅರ್ಥವಾಗದೆ ಸುಖವಾಗಿರಲು ಬೇಕಾದ ಯೋಜನೆ ಹಾಕಿಕೊಳ್ಳುವಷ್ಟು ಸಮಯವಿಲ್ಲ, ಜಾಗೃತಿಯು ಇವರಿಗಿಲ್ಲ. ಕಷ್ಟದಲ್ಲಿ ತೊಳಲಾಡುವವರು ಪ್ರಪಂಚದಲ್ಲಿ ಇವರದೇ ದೊಡ್ಡ ಸಂಖ್ಯೆ ಇದೆ. ಈ ಜನ ಅನುಭವಿಗಳು ಸುಖ-ದುಃಖಗಳ ದೃಷ್ಟಿಯಿಂದ ಇವರು ಮಧ್ಯಮರು. ಜೀವನದ ಕಷ್ಟಗಳ ನಿಜವಾದ. ಪರಿಚಯ ವಿರುವುದು ಇವರಿಗೆ ಮಾತ್ರ. ಇವರೇ ಶ್ರೀಸಾಮಾನ್ಯರು ಇವರು ಕಷ್ಟ ಕುತೂಹಲಿಗಳು ಕೂಡ. ಕಷ್ಟಗಳನ್ನು ಧೈರ್ಯದಿಂದ ಎದುರಿಸಬಲ್ಲರು ಜೀವನ ಸಾಗರದಲ್ಲಿ ಸೋಲದೆ . ದಡದತ್ತ ಈಜುತ್ತಲೇ ಇರುವ ಇವರು ಕಷ್ಟ ಪ್ರಪಂಚದ ಪ್ರಯೋಗ ಪಟುಗಳು ಬದುಕೆಂಬ ಪಾಠಶಾಲೆಯ ನಿತ್ಯ ಸತ್ಯ ವಿದ್ಯಾರ್ಥಿಗಳಿವರು.
ಧನ್ಯವಾದಗಳು🙏 ಮತ್ತೆ ಹೊಸ ಲೇಖನದೊಂದಿಗೆ ಬರುವೆ ನಿಮ್ಮ ಚಾಣಕ್ಯ ಕಣಜ

1 Comments
Nice
ReplyDelete