Ad Code

Ticker

6/recent/ticker-posts

Click Below Image to Join Our Telegram For Latest Updates

INDIAN CONSTITUTION NOTES ಭಾರತದ ಸಂವಿಧಾನ ಮೇಲೆ ಒಂದು ವಾಕ್ಯದ ಪ್ರಶ್ನೋತ್ತರಗಳು


INDIANA CONSTITUTION NOTES 

ಭಾರತದ ಸಂವಿಧಾನ ಮೇಲೆ ಒಂದು ವಾಕ್ಯದ ಪ್ರಶ್ನೋತ್ತರಗಳು

Useful for all competitive Exams 




ಹಾಯ್ ಸ್ನೇಹಿತರೆ ಎಲ್ಲರಿಗೂ ನಮಸ್ಕಾರಗಳು..!! 

ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ. ಸ್ನೇಹಿತರೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಭಾರತದ ಸಂವಿಧಾನದ ವಿಷಯದ ಮೇಲೆ ಅನೇಕ ಒಂದು ವಾಕ್ಯದ ಪ್ರಶ್ನೋತ್ತರಗಳನ್ನು ಚಾಣಕ್ಯ ಕಣಜ ನಿಮಗಾಗಿ ನೋಟ್ ಮಾಡಿ ಪರೀಕ್ಷಾ ಅಧ್ಯಯನಕ್ಕಾಗಿ ಒದಗಿಸುತ್ತಿದೆ. ತುಂಬಾ ಪ್ರಮುಖವಾದಂತಹ ಪ್ರಶ್ನೋತ್ತರಗಳು ಓದಿಕೊಂಡು ನೋಟ್ ಮಾಡಿಕೊಳ್ಳಿ.

ಆತ್ಮೀಯ ಸ್ಪರ್ಧಾರ್ಥಿಗಳೇ ಪ್ರಸ್ತುತ ಸಂದರ್ಭದಲ್ಲಿ ಸ್ಪರ್ಧಾ ಕ್ಷೇತ್ರದಲ್ಲಿಯ ಸಾಧನೆ ಕಷ್ಟಸಾಧ್ಯವಾಗುತ್ತಿದೆ. ಏಕೆಂದರೆ ದಿನದಿಂದ ದಿನಕ್ಕೆ ಸ್ಪರ್ಧಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿಯೂ ಗುರಿ ತಲುಪಲು, ಉತ್ತಮ ಬದುಕನ್ನು ರೂಪಿಸಿಕೊಳ್ಳಲು, ನಿರಂತರ ಪ್ರಯತ್ನ ಅನಿವಾರ್ಯವಾಗಿದೆ. ಆ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಲು ಉತ್ತಮ ಪಿಡಿಎಫ್ ಪುಸ್ತಕಗಳ ಸಂಗ್ರಹವೂ ಅವಶ್ಯಕವಾಗಿರುವದರಿಂದ ನಿಮ್ಮ ಚಾಣಕ್ಯ ಕಣಜ ವೆಬ್ ತಾಣವು ಅತ್ಯುತ್ತಮ ಅವಶ್ಯಕವಿರುವ ಪಿಡಿಎಫ್ ಗಳ ಸಂಗ್ರಹ ಅಪಲೋಡ ಮಾಡಲಾಗಿದೆ. ಮಾಡಲಾಗುತ್ತಿದೆ ಕೂಡ . ಹಾಗಾಗಿ ಪ್ರತಿದಿನ ನಮ್ಮ ವೆಬ್ ತಾಣಕ್ಕೆ ಭೇಟಿ ನೀಡಿ ನಿಮ್ಮ ಜ್ಞಾನ ದಾಹವನ್ನು ನೀಗಿಸಿಕೊಳ್ಳಿ.


🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

1.ಯಾರು ಸಂವಿಧಾನ ರಚನಾ ಸಮಿತಿಯ ತಾತ್ಕಾಲಿಕ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು?

= ಡಾ ಸಚ್ಚಿದಾನಂದ ಸಿನ್ಹ. 

2.ಸಂವಿಧಾನ ರಚನಾ ಸಮಿತಿಯ ಕರಡು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು ?

= ಡಾ. ಬಿ.ಆರ್ ಅಂಬೇಡ್ಕರ್. 

3.ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದ ವರ್ಷ 

= 1951.

4.ಭಾರತ ಸಂವಿಧಾನದ ಪ್ರಸ್ತಾವನೆ ಯಾವ ಪದಗಳಿಂದ ಪ್ರಾರಂಭವಾಗುತ್ತದೆ?

= ಭಾರತದ ಪ್ರಜೆಗಳಾದ ನಾವು. 

5.ಪ್ರಸ್ತಾವನೆಯನ್ನು ಸಂವಿಧಾನದ ಆತ್ಮ ಎಂದು ಘೋಷಿಸಿದವರು ಯಾರು? 

= ಠಾಕೂರ್ ದಾಸ್ ಭಾರ್ಗವ್. 

6.ಭಾರತದ ಸಂವಿಧಾನ ಸ್ವರೂಪದಲ್ಲಿ ಒಕ್ಕೂಟದಂತೆಯೂ ಧೋರಣೆಯಲ್ಲಿ ಏಕಾತ್ಮಕ ರೀತಿಯು ಕಂಡುಬರುತ್ತದೆ ಎಂದು ಹೇಳಿದವರು ಯಾರು? 

= ಕೆ.ಸಿ.ವ್ಹೀರ್. 

7.ಭಾಷಾವಾರು ವಿಂಗಡಣೆಯಲ್ಲಿ ರಚಿತವಾದ ಮೊದಲ ರಾಜ್ಯ? 

= ಆಂಧ್ರಪ್ರದೇಶ.

8.ಪಾಂಡಿಚೇರಿ 1962 ರ ನಂತರ ಭಾರತದ ಒಕ್ಕೂಟಕ್ಕೆ ಸೇರಲ್ಪಟ್ಟಿದ್ದು ಯಾವ ಕಂಪನಿಯ ನಿರ್ಗಮನದಿಂದ? 

= ಫ್ರೆಂಚ್. 

9.ಸಂವಿಧಾನ ಪಾರಮ್ಯತೆಯು ಭಾರತದ ಪ್ರಜಾಪ್ರಭುತ್ವದಲ್ಲಿ ಮಾನ್ಯತೆ ಪಡೆದಿದೆ. (ಇದರ ಉತ್ತರ ಪ್ರಶ್ನೆಯಲ್ಲೇ ಅಡಗಿದೆ)

10.ಸಂಸತ್ ಅಧಿವೇಶನಗಳನ್ನು ಮುಂದುವರೆಸಲು ಅಗತ್ಯವಿರುವ ಹಾಜರಾತಿ ಎಷ್ಟು?

= ಶೇಕಡಾ 10. 

11.ಭಾರತದ ರಕ್ಷಣಾ ಪಡೆಯ ಮಹಾದಂಡನಾಯಕ ಯಾರು? 

= ರಾಷ್ಟ್ರಪತಿ.

12.ಇಡೀ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ನಿರ್ಧರಿಸುವ ವಿಧಿ ಯಾವುದು? 

= 44ನೇ ವಿಧಿ

13.ಭಾರತದಲ್ಲಿ ಗಣರಾಜ್ಯ ದಿನಾಚರಣೆ ಯಾವ ದಿನದಂದು ಆಚರಿಸಲಾಗುತ್ತದೆ?

= ಜನವರಿ 26.

14.ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಕನಿಷ್ಠ ವಯೋಮಿತಿ ಎಷ್ಟು?

= 35 

15.ಯಾವ ಸಂವಿಧಾನ ತಿದ್ದುಪಡಿಯನ್ನು ಮಿನಿ ಸಂವಿಧಾನ ಎನ್ನಲಾಗುತ್ತದೆ?

= 42 ನೇ ತಿದ್ದುಪಡಿ. 

16.ರಾಷ್ಟ್ರಧ್ವಜದಲ್ಲಿನ ಚಕ್ರವು ಎಷ್ಟು ಅಡ್ಡಪಟ್ಟಿಗಳನ್ನು ಒಳಗೊಂಡಿದೆ. 

= 24 ಅರಗಳು.

17.ಯಾವ ಹಕ್ಕು ಯಾವುದೇ ಸಂದರ್ಭದಲ್ಲೂ ಆಗುವುದಿಲ್ಲ? 

= ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು. 

18.32ನೇ ವಿಧಿಯನ್ನು ಮೂಲಭೂತ ಹಕ್ಕುಗಳ ಆತ್ಮ ಎಂದು ಕರೆದವರು ಯಾರು. 

= ಡಾ. ಬಿ.ಆರ್. ಅಂಬೇಡ್ಕರ್.

19.ಭಾರತ ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಯಾವ ಸಂವಿಧಾನದಿಂದ ಎರವಲು ಪಡೆದುಕೊಳ್ಳಲಾಗಿದೆ. 

= ರಷ್ಯಾ ಸಂವಿಧಾನದಿಂದ 

20.ಭಾರತದ ಸಂವಿಧಾನ ಯಾವ ಪ್ರಕಾರದ ಪೌರತ್ವವನ್ನು ನೀಡಿದೆ?

= ಏಕಪೌರತ್ವ. 

21.ಚುನಾವಣೆ ಇಲ್ಲದೆ ಆಯ್ಕೆಯಾದ ರಾಷ್ಟ್ರಪತಿ ಯಾರು?

= ನೀಲಂ ಸಂಜೀವ ರೆಡ್ಡಿ.

22.ಲೋಕಸಭೆಯ ಮೊದಲ ಸ್ಪೀಕರ್ ಯಾರು?

= ಜಿ.ವಿ. ಮಾವಳಂಕರ್. 


🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

23.ಕರ್ನಾಟಕದಿಂದ ಎಷ್ಟು ಸದಸ್ಯರು ಲೋಕಸಭೆಗೆ ಆಯ್ಕೆಯಾಗುತ್ತಾರೆ?

= 28. 

24.ಯಾವ ವಿಧಿ ಅಸ್ಪೃಶ್ಯತೆಯನ್ನು ವಿರೋಧಿಸುತ್ತದೆ?

= 17ನೇ ವಿಧಿ. 

25.ಸಂವಿಧಾನದ ಯಾವ ತಿದ್ದುಪಡಿ ಕೇಂದ್ರ ಮತ್ತು ರಾಜ್ಯಗಳ ಸಚಿವ ಸಂಪುಟದ ಗಾತ್ರವನ್ನು ಮಿತಿಗೊಳಿಸಿ?

= 91 ನೇ ತಿದ್ದುಪಡಿ.

26.ಯಾವುದೇ ಸಚಿವನ ವಿರುದ್ಧ ಅವಿಶ್ವಾಸ ನಿರ್ಣಯ ಅನುಮೋದಿಸಲ್ಪಟ್ಟರೆ, ಸಂಬಂಧಪಟ್ಟ ಮಂತ್ರಿ ರಾಜೀನಾಮೆ ನೀಡಬೇಕು. (ಇದು ಉತ್ತರ ಸಹಿತ ಪ್ರಶ್ನೆ ಇದೆ)

27.ಜನಸಂಖ್ಯಾ ನಿಯಂತ್ರಣ ಮತ್ತು ಕುಟುಂಬ ಯೋಜನೆ ಯಾವ ಪಟ್ಟಿಗೆ ಸಂಬಂಧಿಸಿದೆ?

= ಸಮವರ್ತಿ ಪಟ್ಟಿ. 

28.ಭಾರತದಲ್ಲಿ ಸರ್ವರೀತಿಯ ರಾಜಕೀಯ ಶಕ್ತಿಯ ಮೂಲ ಯಾವುದು?

= ಸಂವಿಧಾನ.

29.ಮೂಲಭೂತ ಹಕ್ಕುಗಳ ಜಾರಿಗಾಗಿ  ರಿಟ್ ಗಳನ್ನು ಹೊರಡಿಸುವವರೂ ಯಾರು?

= ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್. 

30.ಲೋಕಸಭಾ ಸದಸ್ಯ ಯಾರಿಗೆ ರಾಜೀನಾಮೆ ಪತ್ರ ಸಲ್ಲಿಸಬೇಕು?

= ಸ್ಪೀಕರ್. 

31.ರಾಜ್ಯಸಭೆಯು ಯಾವುದನ್ನು ತಾನೇ ಸ್ವತಃ ನಿರ್ಧರಿಸಬಹುದು?

= ಅಖಿಲ ಭಾರತ ಸೇವೆಗಳ ಸೃಷ್ಟಿ.

32.ಸಂಸತ್ತಿನ ಜಂಟಿ ಅಧಿವೇಶನಗಳ ಅಧ್ಯಕ್ಷತೆ ವಹಿಸುವವರು ಯಾರು?

= ಸ್ಪೀಕರ್. 

33.ರಾಜ್ಯಗಳ ವಿಧಾನಸಭೆಯ ಗರಿಷ್ಠ ಸದಸ್ಯರ ಸಂಖ್ಯೆ ಎಷ್ಟು?

= 500. 

34.ಭಾರತ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿ ಯಾರು? 

= ಅಟಾರ್ನಿ ಜನರಲ್. 

35.ಭಾರತ ಸಂವಿಧಾನದ 8ನೇ ಪರಿಚ್ಛೇದ ಯಾವುಕ್ಕೆ ಸಂಬಂಧಿಸಿದೆ. 

= 22 ಭಾಷೆಗಳು.

36.ಭಾರತದ ಸಂಸತ್ತಿನಲ್ಲಿ ಶೂನ್ಯ ವೇಳೆ ಎಂಬುದು ಪ್ರಶ್ನೋತ್ತರ ವೇಳೆ ಮತ್ತು ಮುಂದಿನ ಚರ್ಚೆಯ ನಡುವಿನ ಅವಧಿಯಾಗಿರುತ್ತದೆ (ಉತ್ತರವನ್ನು ಒಳಗೊಂಡ ಪ್ರಶ್ನೆ)

37.ನ್ಯಾಯಾಂಗ ಕ್ರಿಯಾಶೀಲತೆ ಸಂಬಂಧಿಸಿರುವುದು? 

= ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ. 

38.ರಾಜ್ಯ ಲೋಕಸೇವಾ ಆಯೋಗದ ಸದಸ್ಯರ ಅಧಿಕಾರ ಅವಧಿ. 

= ಆರು ವರ್ಷ ಅಥವಾ 62 ವಯಸ್ಸು.

39.ಪಂಚಾಯತ್ ವ್ಯವಸ್ಥೆಯು ಆಧರಿಸಿರುವ ತತ್ವ ?

= ಅಧಿಕಾರ ವಿಕೇಂದ್ರೀಕರಣ. 

40.ಕಾನೂನು ಬಾಹಿರ ಬಂಧನದ ವಿರುದ್ಧ ಯಾವ ರಿಟ್ ಅನ್ನು ಹೊರಡಿಸಬಹುದು? 

= ಹೇಬಿಯಸ್ ಕಾರ್ಪಸ್.

41.ಹೈಕೋರ್ಟಿನ ನ್ಯಾಯಾಧೀಶರನ್ನು ನೇಮಿಸುವವರು?

= ರಾಷ್ಟ್ರಪತಿ. 

42.ಯೋಜನಾ ಆಯೋಗ ರಚನೆಯಾದದ್ದು ?

= ಕೇಂದ್ರ ಸಚಿವ ಸಂಪುಟದ ನಿರ್ಣಯದ ಮೂಲಕ.

43.ಮೂಲಭೂತ ಹಕ್ಕುಗಳು ಮೂಲಭೂತವಾದವು ಎಂದು ಕರೆಯಲ್ಪಡುವ ಕಾರಣ ಮಾನವನ ಬೆಳವಣಿಗೆಗೆ ಅಗತ್ಯವಾದ ಅಂಶಗಳು. (ಉತ್ತರ ಒಳಗೊಂಡ ಪ್ರಶ್ನೆ)

44.ಯಾವ ಸದನದಲ್ಲಿ ಸದಸ್ಯರಲ್ಲದ ಅವರು ಅಧ್ಯಕ್ಷತೆ ವಹಿಸುತ್ತಾರೆ?

= ರಾಜ್ಯಸಭೆ. 

45.ಭಾರತ ಸಂಸತ್ತಿನ ಜಂಟಿ ಅಧಿವೇಶನದ ಅಧ್ಯಕ್ಷತೆ ವಹಿಸುವವರು ಯಾರು. 

= ಸ್ಪೀಕರ್. 

46.ಮತದಾನದ ಹಕ್ಕು ಭಾರತೀಯ ಪೌರನಿಗೆ ಯಾವುದಾಗಿದೆ. = = ರಾಜಕೀಯ ಹಕ್ಕು.

ಧನ್ಯವಾದಗಳು 💐💐💐💐💐🙏



Post a Comment

0 Comments

Important PDF Notes

Ad Code