PSI ESSAYS PDF
ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉಜ್ವಲ ಅಕಾಡೆಮಿಯ PSI ಪ್ರಬಂಧಗಳ PDF
Useful for PSI Aspirants
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!!
ಚಾಣಕ್ಯ ಕಣಜ ವೆಬ್ ತಾಣಕ್ಕೆ ಎಲ್ಲರಿಗೂ ಸ್ವಾಗತ. ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ. ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
✍✍✍✍✍✍✍✍✍✍✍✍✍✍✍✍✍✍
ಈ ವಿಷಯ PSI ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತ. ಹಲವಾರು ಜನರಿಗೆ ಪ್ರಬಂಧ ಬರೆಯುವ ಹವ್ಯಾಸ ಇರುತ್ತದೆ.ಆದರೆ ಅದರಲ್ಲಿ ಕೆಲವಷ್ಟು ಯಶಸ್ಸನ್ನು ಕಾಣುತ್ತವೆ, ಕೆಲವು ಕೇವಲ ಬರಹಗಳಾಗಿ ಉಳಿದುಬಿಡುತ್ತವೆ. ಯಾಕೆ? ಏಕೆಂದರೆ ಈ ಪ್ರಬಂಧ ಬರಹ ಅದರದೇ ಆದ ರೂಪುರೇಷೆಗಳನ್ನು ಹೊಂದಿರುತ್ತದೆ ಅದನ್ನ ಸರಿಯಾಗಿ ಅರಿತುಕೊಂಡರೆ ಯಾವುದೇ ವಿಷಯವನ್ನು ಕೊಟ್ಟರು ಅದ್ಭುತವಾದ ಪ್ರಬಂಧ ರಚಿಸಬಹುದು. ಆ ಕಾರಣಕ್ಕಾಗಿ ಈ ಒಂದು ಮಾಹಿತಿಯನ್ನು , ನಮ್ಮ ಚಾಣಕ್ಯ ಕಣಜ ನಿಮಗೆ ಈ ಒಂದು ಮಾಹಿತಿಯನ್ನು ಒದಗಿಸುತ್ತಿದೆ.
ಪ್ರಬಂಧ ಎಂದರೇನು?
ಯಾವುದಾದರೊಂದು ಸೂಕ್ತ ವಿಷಯವನ್ನು ಆರಿಸಿಕೊಂಡು ಅದಕ್ಕೆ ಸಂಬಂಧಿಸಿದಂತೆ ವಿವೇಚಿಸುತ್ತ ಹತ್ತಾರು ವಾಕ್ಯವೃಂದಗಳನ್ನು ಬರೆಯಬಹುದು. ಇಂತಹ ಬರಹವು ಅಖಂಡವಾಗಿ ಕಲಾತ್ಮಕವಾಗಿ ಅನುಭವಪೂರ್ವಕವೆಂಬಂತೆ ಸುಂದರವಾಗಿ ರೂಪಿತಗೊಳ್ಳುವುದನ್ನು "ಪ್ರಬಂಧ " ಎನ್ನಬಹುದು. ಆಯ್ಕೆ ಮಾಡಿದ ವಿಷಯದ ಬಗ್ಗೆ ತೂಕವಾಗಿ ಅಥವಾ ಲಘುವಾಗಿ ಬರೆಯುವುದು ಅವರವರ ಮನೋಧರ್ಮ, ಅನುಭವ, ಸಂಸ್ಕಾರಗಳ ಮೇಲೆ ಅನ್ವಯಿಸುತ್ತದೆ.
ಪ್ರಬಂಧವನ್ನು3ರೀತಿಯಲ್ಲಿ ವಿಂಗಡಿಸಬಹುದು. ವಸ್ತುನಿಷ್ಠ, ಭಾವನಿಷ್ಠ ಮತ್ತು ವಿಚಾರಪರ ಅಂತ. ಉದಾಹರಣೆಗೆ ಗಡಿಯಾರ, ವಿಮಾನ, ಪೆನ್ನು ಮುಂತಾದ ವಿಷಯಗಳ ಬಗ್ಗೆ ಪ್ರಬಂಧಗಳನ್ನು ಬರೆಯುವುದಾದರೆ,ಅವು ವಸ್ತುನಿಷ್ಠ ಪ್ರಬಂಧಗಳೆನಿಸುತ್ತವೆ. ಇಂಂತಹ ಪ್ರಬಂಧಗಳನ್ನು ಹತ್ತಾರು ಮಂದಿ ಬರೆದರೂ ಎಲ್ಲವೂ ಒಂದೇ ತೆರನಾಗಿರುತ್ತವೆ. ವಿಚಾರ ವೈವಿಧ್ಯವಿರುವುದಿಲ್ಲ . 'ಮಳೆ ಬಂದ ಮಾರನೆಯ ದಿನ ', 'ಅವನ ಕರವಸ್ತ್ರ ', 'ಆ ಪಾರ್ಕಿನಲ್ಲಿ ' ಮುಂತಾದ ವಿಷಯಗಳ ಕುರಿತು ಬರೆದಾಗ ಬರಹಗಾರನ ಅನುಭವದ ಇತಿಮಿತಿಗಳು ವ್ಯಕ್ತವಾಗುತ್ತವೆ. ನಿರೂಪಣೆಯಲ್ಲಿ ಹೊಸ ಹೊಸ ಭಾವನೆಗಳನ್ನು ನಿರೀಕ್ಷಿಸಬಹುದು. 'ಸಾರಿಗೆ ರಾಷ್ಟೀಕರಣ', ' ವ್ಯವಸಾಯ ಯೋಜನೆಗಳು ', 'ಶಿಕ್ಷಣ ಮಾಧ್ಯಮ ' ಮುಂತಾದವು ವಿಚಾರಪರ ಪ್ರಬಂಧಗಳು ಎನಿಸಿಕೊಳ್ಳಳುತ್ತವೆ. ಈ ರೀತಿಯ ವಿಚಾರಪರ ಪ್ರಬಂಧಗಳೆ PSI ಪರೀಕ್ಷೆಗಳಲ್ಲಿ ಹೆಚ್ಚಾಗಿ ಬರುತ್ತವೆ.
♻️♻️♻️♻️♻️♻️♻️♻️♻️♻️♻️♻️♻️♻️♻️♻️♻️♻️
ಪ್ರಬಂಧ ರಚನೆಗೆ ಸೂಕ್ತ ವಿಷಯವನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಪೀಠಿಕೆ, ವಿಷಯ ನಿರೂಪಣೆ, ಉಪಸಂಹಾರ ಎಂಬ ಮೂರು ವಿಭಾಗಗಳಲ್ಲಿ ಬರವಣಿಗೆ ಸಾಗಬೇಕು. ಹೀಗೆ ಬರವಣಿಗೆ ಸಾಗುತ್ತಿರುವಾಗ ಪ್ರಬಂಧದ ಅಖಂಡತೆಗೆ ತೊಡಕಾಗಬಾರದು, ಭಾವನೆಗಳು ಕಲಸುಮೇಲೋಗರವಾಗಬಾರದು. ಅಂತೆಯೇ ಭಾಷೆಯೂ ಸಹ ಸ್ಪಷ್ಟ ಮತ್ತು ಶುದ್ಧವಾಗಿರಬೇಕು. ವಿಷಯ ನಿರೂಪಣಾ ವಿಧಾನ ಗಂಭೀರವಾಗಿಯೂ ಇರಬೇಕು, ಸನ್ನಿವೇಶ, ವಿಚಾರ ವೈವಿಧ್ಯಕ್ಕೆ ತಕ್ಕಂತೆ ರಸಭಾವಗನೆಗಳ ಗಾರುಡಿಗ ಇರಬೇಕು. ವಿಷಯ ಸಂಗ್ರಹ, ವಿಷಯ ವಿಸ್ತಾರ, ಸರಳ ಶೈಲಿ, ಸಂಕ್ಷಿಪ್ತತೆ, ಸುಸಂಬದ್ಧತೆ, ವಿಷಯ ತಾರ್ಕಿಕ ಜೋಡಣೆ ಮುಂತಾದ ಅಂಶಗಳು ಸತ್ವಪೂರ್ಣವಾಗಿದ್ದಾಗ ಉತ್ತಮ ಪ್ರಬಂಧ ಮೂಡಿಬರುತ್ತದೆ. ಹೀಗೆ ಪ್ರಬಂಧ ಬರೆಯುವ ಶೈಲಿ ನಿಮ್ಮದಾದರೆ PSI ಪರೀಕ್ಷೆಯಲ್ಲಿ ಪ್ರಬಂಧ ಬರಹಕ್ಕೆ out of out ಅಂಕಗಳು ನಿಮಗೆ ದೊರೆಯುತ್ತವೆ. ಕೆಲವೂ ಪ್ರಬಂಧಗಳ pdf ಸಹ ಕೆಳಗೆ ಕೊಡಲಾಗಿದೆ.ಡೌನಲೋಡ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.
🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺
ಉಜ್ವಲ ಅಕಾಡೆಮಿ ರಚಿತ PSI ಪ್ರಬಂಧಗಳ PDF
PDF FILE DETAILS
📚📚📚📚📚📚📚📚📚📚📚📚📚📚📚📚📚📚
0 Comments