GK TODAY DAILY CURRENT AFFAIRS OCTOBER 2021
USEFUL FOR ALL COMPETITIVE EXAMS
PLEASE NOTE THIS
ಪ್ರಚಲಿತ ವಿದ್ಯಮಾನಗಳು
📮13 October 2021
💠INTERNATIONAL DAY FOR DISASTER RISK REDUCTION
(ಅನಾಹುತಕಾರಿ ಅಪಾಯ ಕಡಿತಕ್ಕೆ ಅಂತರಾಷ್ಟ್ರೀಯ ದಿನ)
🔷To promote global culture towards risk awareness and disaster reduction.
🔷In 1989 the day was started by the UNGA
🔷Disater management Act :- 2005
🔷First Parliamentary forum on DISASTER MANGEMENT constituted-2011
♦National Disaster Management Authority (NDMA)
◾Established :-2006
◾Hq :- New delhi
◾National DISASTER MANGEMENT Authority chaired By :- Prime Minister of India
♦Union Home Minister
Chairperson of the
◾National Platform for Disaster Risk Reduction (NPDRR)
♦The National Executive Committee (NEC) for disaster management is chaired by Cabinet secretary
🔶NDRF was constituted as per Disaster Management Act, 2005.
🔶NDRF functions under the purview of the Ministry of Home Affairs (MHA) and is headed by a Director General.
🔰NEWS 👇👇👇👇👇
🔶Uttarakhand :- 1st state in India to use Quick Deployment Antenna (QDA) technology for disaster management
🔶India will launch its first state of the art earth observation satellite Geo Imaging Satellite (GISAT-1) to provide real time images of large areas as well as quick monitoring of natural disasters.
🔶The Energy and Resources Institute (TERI) in association with National Disaster Management Authority (NDMA) launched flood and heavy rain warning system in Guwahati
🔶iFLOWS is a flood warning system that alerts flood prone areas. It was launched in Mumbai.
♦INFORM RISK INDEX for Humanitarian crises & Disasters 2020
💢 INDIA Ranked - 31
💢TOPEED BY - Somalia
🔷Abhas Jha appointed by the World Bank to a key position on climate change and disaster management in South Asia
🔷Kamal Kishore Appointed Member Of National Disaster Management Authority
🔷Subhash Chandra Bose Aapda Prabandhan Puraskar 2021
Dr Rajendra Kumar Bhandari in the Individual category and Sustainable Environment and Ecological Development Society (SEEDS) in Institutional category.
🔷BIMSTEC Disaster Management Exercise - Odisha(Bhubaneshwar)
🔷International Chernobyl Disaster Remembrance Day - 26 April
🍁🍁🍁🍁🍁🍁🍁🍁🍁🍁🍁🍁🍁🍁🍁🍁🍁🍁
🏆 ಡಿಆರ್‌ಡಿಒ ಅಧ್ಯಕ್ಷ ಜಿ ಸತೀಶ್ ರೆಡ್ಡಿ ಅವರಿಗೆ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಯನ್ನು ನೀಡಲಾಗಿದೆ.
👉 ಭಾರತದಲ್ಲಿ ಗಗನಯಾತ್ರಿಗಳ ಪ್ರಚಾರಕ್ಕಾಗಿ ಅವರ ಅತ್ಯುತ್ತಮ ಜೀವಮಾನದ ಕೊಡುಗೆಗಾಗಿ ಭಾರತದ ಖಗೋಳಶಾಸ್ತ್ರ ಸೊಸೈಟಿಯಿಂದ ಪ್ರಶಸ್ತಿಯನ್ನು ನೀಡಲಾಗಿದೆ.
♦️♦️♦️♦️♦️♦️♦️♦️♦️♦️♦️♦️♦️♦️♦️♦️♦️♦️
💈 ತಮಿಳುನಾಡಿನ 'ಕನ್ನಿಯಕುಮಾರಿ ಲವಂಗ' ಜಿಐ ಟ್ಯಾಗ್ ಪಡೆದಿದೆ.
(Tamil Nadu’s ‘Kanniyakumari Clove’ gets GI Tag)
🔶 ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಬೆಟ್ಟಗಳಲ್ಲಿ ಬೆಳೆಯುವ ವಿಶಿಷ್ಟ ಲವಂಗ ಮಸಾಲೆಗೆ 'ಕನ್ಯಾಕುಮಾರಿ ಲವಂಗ' ಎಂದು ಭೌಗೋಳಿಕ ಸೂಚನೆ (ಜಿಐ) ನೀಡಲಾಗಿದೆ. ಭಾರತದಲ್ಲಿ, ಲವಂಗದ ಒಟ್ಟು ಉತ್ಪಾದನೆಯು 1,100 ಮೆಟ್ರಿಕ್ ಟನ್‌ಗಳು ಮತ್ತು ಇದರಲ್ಲಿ ತಮಿಳುನಾಡಿನಲ್ಲಿ 1,000 ಮೆಟ್ರಿಕ್ ಟನ್‌ಗಳನ್ನು ಪ್ರತಿ ವರ್ಷ ಉತ್ಪಾದಿಸಲಾಗುತ್ತದೆ ಆದರೆ ಕನ್ಯಾಕುಮಾರಿ ಜಿಲ್ಲೆಯಲ್ಲಿ ಮಾತ್ರ 750 ಮೆಟ್ರಿಕ್ ಟನ್ ಲವಂಗವನ್ನು ಉತ್ಪಾದಿಸಲಾಗುತ್ತದೆ.
👉 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾದ ಅಂಶಗಳು:-👇👇
✍ ತಮಿಳುನಾಡು ರಾಜಧಾನಿ: ಚೆನ್ನೈ
✍ ತಮಿಳುನಾಡು ಮುಖ್ಯಮಂತ್ರಿ: ಎಂ ಕೆ ಸ್ಟಾಲಿನ್
✍ ತಮಿಳುನಾಡು ರಾಜ್ಯಪಾಲರು: ಆರ್.ಎನ್.ರವಿ
✍ ತಮಿಳುನಾಡು ರಾಜ್ಯ ನೃತ್ಯ: ಭರತನಾಟ್ಯ.
🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼
🌳 ಪ್ರತಿಷ್ಠಿತ ಸಿ.ಕೆ.ಪ್ರಹ್ಲಾದ್ ಪ್ರಶಸ್ತಿಗೆ ಸತ್ಯ ನಾದೆಲ್ಲಾ ಆಯ್ಕೆ
ಉದ್ಯಮ ಹಾಗೂ ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ತೋರಿದ ನಾಯಕತ್ವಕ್ಕಾಗಿ ಮೈಕ್ರೋಸಾಫ್ಟ್‌ನ ಸಿಇಒ, ಭಾರತೀಯ ಅಮೆರಿಕನ್ ಸತ್ಯ ನಾದೆಲ್ಲಾ ಅವರನ್ನು ‘ಗ್ಲೋಬಲ್ ಬಿಸಿನೆಸ್ ಸಸ್ಟೇನಬಿಲಿಟಿ ಲೀಡರ್‌ಷಿಪ್’ಗಾಗಿ ನೀಡುವ ಪ್ರತಿಷ್ಠಿತ ಸಿ.ಕೆ.ಪ್ರಹ್ಲಾದ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೈಕ್ರೋಸಾಫ್ಟ್‌ನ ಉನ್ನತ ಅಧಿಕಾರಿಗಳಾದ, ಅಧ್ಯಕ್ಷ ಬ್ರ್ಯಾಡ್ ಸ್ಮಿತ್, ಮುಖ್ಯ ಹಣಕಾಸು ಅಧಿಕಾರಿ ಅಮಿ ಹೂಡ್ ಹಾಗೂ ಮುಖ್ಯ ಪರಿಸರ ಅಧಿಕಾರಿ ಲೂಕಾಸ್ ಜೊಪ್ಪಾ ಅವರು ಸಹ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಈ ಪ್ರತಿಷ್ಠಿತ ಪ್ರಶಸ್ತಿ ನೀಡುವ ‘ಕಾರ್ಪೋರೇಟ್ ಇಕೊ ಫೋರಂ’ನ ಸಂಸ್ಥಾಪಕ ಎಂ.ಆರ್.ರಂಗಸ್ವಾಮಿ ತಿಳಿಸಿದ್ದಾರೆ.
ಪರಿಸರಕ್ಕೆ ಇಂಗಾಲ ಸೇರುವುದನ್ನು ತಡೆಗಟ್ಟಲು ಕಂಪನಿ ಕೈಗೊಂಡ ಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 2030ರ ವೇಳೆಗೆ ಮೈಕ್ರೋಸಾಫ್ಟ್‌ಅನ್ನು ‘ಕಾರ್ಬನ್ ನೆಗೆಟಿವ್ ಕಂಪನಿ’ಯನ್ನಾಗಿ ಪರಿವರ್ತಿಸಲು ಈ ನಾಲ್ವರ ಸಂಘಟಿತ ಪ್ರಯತ್ನ, ನಾಯಕತ್ವ ಅನುಕರಣೀಯ’ ಎಂದು ರಂಗಸ್ವಾಮಿ ಹೇಳಿದ್ದಾರೆ..
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
🌲 ನಿರ್ಮಾಣಗೊಳ್ಳಲಿದೆ ದೇಶದ ಮೊದಲ ಎಲೆಕ್ಟ್ರಿಕ್ ಹೈವೇ
ದೇಶದಲ್ಲೇ ಮೊದಲ ಎಲೆಕ್ಟ್ರಿಕ್ ಹೈವೇ ನಿರ್ಮಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಇದು ಹೊಸದಿಲ್ಲಿಯಿಂದ ಜೈಪುರವನ್ನು ಸಂಪರ್ಕಿಸಲಿದೆ. ಕಡಿಮೆ ವೆಚ್ಚ ಮತ್ತು ಮಾಲಿನ್ಯ ನಿಯಂತ್ರಣದಲ್ಲಿ ಮಹತ್ತರ ಪಾತ್ರ ವಹಿಸುವ ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕಾಗಿಯೇ ಈ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ.
☘ ಎಲೆಕ್ಟ್ರಿಕ್ ಹೈವೇ ಎಂದರೇನು?
ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆಂದೇ ನಿರ್ಮಿಸಲಾಗುವ ಹೆದ್ದಾರಿ ಇದಾಗಿದೆ. ಸಾಮಾನ್ಯವಾಗಿ ವಿದ್ಯುತ್ ಚಾಲಿತ ರೈಲುಗಳ ಸಂಚಾರಕ್ಕಾಗಿ ಹಳಿಗಳ ಮೇಲ್ಭಾಗದಲ್ಲಿ ವಿದ್ಯುತ್ ತಂತಿಯನ್ನು ಅಳವಡಿಸಲಾಗಿರುತ್ತದೆ. ಇದರಿಂದ ರೈಲಿನ ಎಂಜಿನ್‌ಗೆ ವಿದ್ಯುತ್ ಸಂಪರ್ಕದ ವ್ಯವಸ್ಥೆಯನ್ನು ಅಳವಡಿಸಲಾಗಿರುತ್ತದೆ. ಈ ಮೂಲಕ ರೈಲುಗಳು ಸಂಚರಿಸುತ್ತವೆ. ಅದೇ ರೀತಿ ಹೆದ್ದಾರಿಯಲ್ಲಿ ವಿದ್ಯುತ್ ತಂತಿಗಳನ್ನು ಅಳವಡಿಸಲಾಗುತ್ತದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಈ ತಂತಿಗಳಿಂದ ವಿದ್ಯುತ್ ಪಡೆಯುತ್ತವೆ. ಇದನ್ನು ಇ- ಹೆದ್ದಾರಿ ಅಂದರೆ ಎಲೆಕ್ಟ್ರಿಕ್ ಹೈವೇ ಎಂದು ಕರೆಯಲಾಗುತ್ತದೆ
☘ ಕಾರ್ಯನಿರ್ವಹಣೆ ಹೇಗೆ?
ಪ್ರಪಂಚದಾದ್ಯಂತ ಇ- ಹೆದ್ದಾರಿಗಳಿಗೆ ಮೂರು ರೀತಿಯ ತಂತ್ರಜಾnನಗಳನ್ನು ಬಳಸಲಾಗುತ್ತದೆ. ಭಾರತ ಸರಕಾರ ಸ್ವೀಡಿಷ್ ಕಂಪೆನಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದರಿಂದ ಸ್ವೀಡನ್‌ನಲ್ಲಿ ಬಳಸುವ ತಂತ್ರಜಾnನ ವನ್ನೇ ಭಾರತದಲ್ಲೂ ಬಳಸುವ ಯೋಚನೆ ಇದೆ ಎನ್ನಲಾಗುತ್ತಿದೆ
☘ ಎಲ್ಲಿ ನಿರ್ಮಾಣ ಆಗಲಿದೆ?
ದೇಶದ ಮೊದಲ ಎಲೆಕ್ಟ್ರಿಕ್ ಹೈವೇಯನ್ನು ಹೊಸದಿಲ್ಲಿ- ಜೈಪುರದ ನಡುವೆ ನಿರ್ಮಿಸಲಾಗುತ್ತದೆ. 200 ಕಿ.ಮೀ. ಉದ್ದದ ಈ ಹೆದ್ದಾರಿ ಹೊಸದಿಲ್ಲಿ- ಮುಂಬಯಿ ಎಕ್ಸ್‌ಪ್ರಸ್ ವೇ ಜತೆಗೆ ಹೊಸ ಪಥದಲ್ಲಿ ನಿರ್ಮಿಸಲಾಗುತ್ತಿದೆ. ಈ ಪಥಕ್ಕೆ ವಿದ್ಯುತ್ ಜೋಡಣೆಯಾಗಿರುವುದರಿಂದ ವಿದ್ಯುತ್ ಚಾಲಿತ ವಾಹನಗಳು ಮಾತ್ರ ಇದರಲ್ಲಿ ಸಂಚರಿಸುತ್ತವೆ. ಈ ಕುರಿತು ಸ್ವೀಡಿಷ್ ಕಂಪೆನಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಇದು ಸಂಪೂರ್ಣ ಸಿದ್ಧವಾದರೆ ದೇಶದ ಮೊದಲ ಇ- ಹೆದ್ದಾರಿ ಎನ್ನುವ ಖ್ಯಾತಿಗೆ ಪಾತ್ರವಾಗಲಿದೆ.
♦️♦️♦️♦️♦️♦️
☘ ಎಲೆಕ್ಟ್ರಿಕ್ ಹೈವೆ ಯಾವ ವಾಹನಗಳಿಗೆ?
ಸ್ವೀಡನ್ ಮತ್ತು ಜರ್ಮನಿಯಲ್ಲಿ ಎಲೆಕ್ಟ್ರಿಕ್ ಹೈವೆಯನ್ನು ಸಾರ್ವಜನಿಕ ಸಾರಿಗೆಗೆ ಬಳಸುವ ವಾಹನಗಳ ಸಾಗಾಣೆಗೆ ಮಾತ್ರ ಬಳಸಲಾಗುತ್ತದೆ. ಆದರೆ ಕಾರು, ಜೀಪ್‌ಗಳಂತಹ ವೈಯಕ್ತಿಕ ವಾಹನಗಳನ್ನೂ ಇದರಲ್ಲಿ ಚಲಾಯಿಸಬಹುದು. ಆದರೆ ಅವುಗಳನ್ನು ಬ್ಯಾಟರಿಗಳಿಂದಲೂ ನಿರ್ವಹಿಸಬಹುದು. ಸಾರ್ವಜನಿಕ ಸಾರಿಗೆಗೆ ಬಳಸುವ ಟ್ರಕ್, ವಾಹನಗಳಲ್ಲಿ ನೇರ ಪೂರೈಕೆ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳಾಗಿದ್ದರೆ ಇದರಲ್ಲಿ ಚಲಾಯಿಸಬಹುದು. ಅನುಕೂಲಕ್ಕಾಗಿ ಅಲ್ಲಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳೂ ಇರುತ್ತವೆ.
☘ ಏನು ಪ್ರಯೋಜನ?
ಹಾಲಿ ಇಂಧನ ಚಾಲಿತ ವಾಹನಗಳಿಗೆ ಹೋಲಿಸಿದರೆ ಇ-ಹೈವೇಯಲ್ಲಿ ವಾಹನಗಳ ಓಡಾಟಕ್ಕೆ ತಗಲುವ ವೆಚ್ಚ ಬಹಳಷ್ಟು ಕಡಿಮೆಯಾಗಲಿದೆ. ಇದು ಒಟ್ಟಾರೆ ವೆಚ್ಚದಲ್ಲಿ ಸುಮಾರು ಶೇ. 70ರಷ್ಟು ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಸಾರಿಗೆ ವೆಚ್ಚ ಕಡಿಮೆಯಾದರೆ ಸಹಜವಾಗಿ ಸರಕುಗಳ ಸಾಗಣೆ ವೆಚ್ಚ ಕಡಿಮೆಯಾಗಿ ವಸ್ತುಗಳ ಬೆಲೆಯೂ ಅಗ್ಗವಾಗಲಿದೆ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಇ-ಹೆದ್ದಾರಿ ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು ಮಾಲಿನ್ಯದ ಪ್ರಮಾಣ ಬಹಳಷ್ಟು ಕಡಿಮೆಯಾಗಲಿದೆ.
☘ ಸವಾಲುಗಳೇನು?
ಎಲೆಕ್ಟ್ರಿಕ್ ಹೈವೆ ನಿರ್ಮಾಣದ ವೆಚ್ಚ ಸಾಮಾನ್ಯ ರಸ್ತೆಗಿಂತ ಅಧಿಕವಾಗಿರುತ್ತದೆ. ದೇಶಾದ್ಯಂತ ಇಂತಹ ಹೆದ್ದಾರಿಗಳನ್ನು ನಿರ್ಮಿಸುವುದು ದೊಡ್ಡ ಸವಾಲು ಮಾತ್ರವಲ್ಲ ತುಂಬಾ ದುಬಾರಿ ಹಾಗೂ ಸಾಕಷ್ಟು ಸಮಯ ಬೇಕಾಗುವುದು. ಕೇವಲ ವಿದ್ಯುತ್ ಹೆದ್ದಾರಿ ನಿರ್ಮಿಸಿದರೆ ಸಾಲದು. ಎಲೆಕ್ಟ್ರಿಕ್ ವಾಹನಗಳೂ ಅವುಗಳ ಮೇಲೆ ಓಡಬೇಕು. ಪೆಟ್ರೋಲ್- ಡೀಸೆಲ್ ಚಾಲಿತ ವಾಹನಗಳು ಎಲೆಕ್ಟ್ರಿಕ್ ವಾಹನಗಳೊಂದಿಗೆ ಬದಲಾಯಿಸಲು ಕೆಲವು ವರ್ಷಗಳೇ ಬೇಕಾಗಬಹುದು. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಯೂ ತುಂಬಾ ಕಷ್ಟ. ಯಾಕೆಂದರೆ ಈ ವೇಳೆ ಅನೇಕ ಅಪಾಯಕಾರಿ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇದು ಪರಿಸರಕ್ಕೆ ಹಾನಿಕಾರಕ, ಅಲ್ಲದೇ ಈ ಬ್ಯಾಟರಿಗಳು ತುಂಬಾ ದುಬಾರಿಯಾಗಿರುತ್ತವೆ.
☘ ವಿಶ್ವದ ಇತರ ಯಾವ ದೇಶಗಳಲ್ಲಿ ಎಲೆಕ್ಟ್ರಿಕ್ ಹೆದ್ದಾರಿ ಇವೆ?
ಇ- ಹೆದ್ದಾರಿಯನ್ನು ಪರಿಚಯಿಸಿದ ವಿಶ್ವದ ಮೊದಲ ದೇಶ ಸ್ವೀಡನ್. ಇಲ್ಲಿ 2016ರಲ್ಲಿ ಇ- ಹೆದ್ದಾರಿಯ ಪ್ರಯೋಗ ನಡೆಸಿ 2018ರಲ್ಲಿ ಮೊದಲ ಇ- ಹೆದ್ದಾರಿಯನ್ನು ಪ್ರಾರಂಭಿಸಿತ್ತು. ಅನಂತರ ಜರ್ಮನಿಯಲ್ಲಿ 2019ರಲ್ಲಿ ಇ- ಹೆದ್ದಾರಿ ಪ್ರಾರಂಭಿಸಿತ್ತು. ಇದರ ಉದ್ದ 6 ಮೈಲು. ಇದರ ಹೊರತಾಗಿ ಜರ್ಮನಿಯಲ್ಲಿ ಬಸ್‌ಗಳಿಗಾಗಿ ವಯರ್‌ಲೆಸ್ ಎಲೆಕ್ಟ್ರಿಕ್ ರಸ್ತೆಯನ್ನು ನಿರ್ಮಿಸಿದೆ. ಬ್ರಿಟನ್, ಅಮೆರಿಕದಲ್ಲೂ ಇ- ಹೆದ್ದಾರಿಯ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
🧿🧿🧿🧿🧿🧿🧿🧿🧿🧿🧿🧿🧿🧿🧿🧿🧿🧿
0 Comments