Ad Code

Ticker

6/recent/ticker-posts

Click Below Image to Join Our Telegram For Latest Updates

[NOTES]FDA/SDA/PDO/D.Ed/B.Ed General knowledge /ಸಾಮಾನ್ಯ ಜ್ಞಾನ Top-10 Question Answers With Explanation For Competitive Exams

[NOTES]FDA/SDA/PDO/D.Ed/B.Ed General knowledge/ಸಾಮಾನ್ಯ ಜ್ಞಾನ 

Top-10  Question Answers With Explanation For Competitive Exams 

[NOTES]FDA/SDA/PDO/D.Ed/B.Ed General knowledge /ಸಾಮಾನ್ಯ ಜ್ಞಾನ Top-10  Question Answers With Explanation For Competitive Exams

🔶️🔷️🔶️

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ
ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು,ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ,
ಕಂಪ್ಯೂಟರ್ ಸಾಕ್ಷರತೆ, ಪ್ರಚಲಿತ ಘಟನೆಗಳನ್ನು ಒಳಗೊಂಡ ಟಾಪ್ 10 ವಿವರಣೆ ಸಹಿತ ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್ ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂಉಪಯುಕ್ತವಾಗಲಿದೆ.

Top-10  Question Answers With Explanation For Competitive Exams

 ಸಾಮಾನ್ಯ ಜ್ಞಾನ ಟಾಪ್-10 ಪ್ರಶ್ನೋತ್ತರಗಳು ವಿವರಣೆ ಸಹಿತ  ನೋಟ್ ಮಾಡಿಕೊಳ್ಳಿ. 

1) ಜಪಾನ್ ದೇಶದ ನಾಣ್ಯ?

ಎ) ರೂಪಯ್ಯ

ಬಿ) ಯನ್

ಸಿ) ದಿನಾರ್

ಡಿ) ಡಾಲರ್

ಉತ್ತರ:- ಯೆನ್

ವಿವರಣೆ:- ಜಪಾನ್ ದೇಶದ ನಾಣ್ಯ ಯೆನ್ ಆಗಿದೆ.ಅಮೇರಿಕಾದ ಕರೆನ್ಸಿ – ಡಾಲರ್, ಯುರೋಪ್ ಯೂನಿಯನ್‌ನ19 ದೇಶಗಳಲ್ಲಿ ಯುರೋ ನಾಣ್ಯವನ್ನು ಅಳವಡಿಸಿಕೊಂಡಿದ್ದಾರೆ.ದಿನಾರ್‌ನ್ನು ಇರಾಕ್‌ನಲ್ಲಿ ಬಳಕೆ ಮಾಡಲಾಗುತ್ತದೆ. ಸ್ವೀಡನ್ ದೇಶ - ಕೋನ, ಬ್ರೆಜಿಲ್ - ರಿಯಾಲ್ (Real), ಇರಾನ್ ರೈಯಲ್ (Rial), ಬಾಂಗ್ಲಾ - ಟಾಕಾ,



2) "ಟಾಸ್ ಕೇಂದ್ರ ವಾರ್ತಾ ಸಂಸ್ಥೆಯು ಯಾವ ದೇಶದಲ್ಲಿದೆ?

ಎ) ರಷ್ಯಾ 

ಬಿ) ಜಪಾನ್

ಸಿ) ಇಂಗ್ಲೆಂಡ್ 

ಡಿ) ಫ್ರಾನ್ಸ್

ಉತ್ತರ:- ರಷ್ಯಾ

ವಿವರಣೆ:- ಟಾಸ್ (TASS - Telegraph Agency of the Soviet Union). ಇದು ರಷ್ಯಾದ ಆಂತರಿಕ ಮತ್ತು ಅಂತರಾಷ್ಟ್ರೀಯ ವಾರ್ತೆಗಳನ್ನು ಸಂಗ್ರಹಿಸಿ ಸೋವಿಯತ್ ಯೂನಿಯನ್‌ನ ವಾರ್ತಾ ಪತ್ರಿಕೆ, ರೇಡಿಯೋ, ಮತ್ತು ಟೆಲಿವಿಷನ್‌ಗಳಿಗೆ ವಿತರಿಸುತ್ತದೆ.
ಇದನ್ನು ಜುಲೈ 25, 1925 ರಂದು ಸ್ಥಾಪಿಸಲಾಯಿತು.


3) ಯಾವ ಲೋಹವು ತಣ್ಣೀರಿನೊಂದಿಗೆ ವರ್ತಿಸುತ್ತದೆ?

ಎ) ಮ್ಯಾಗ್ನೆಸಿಯಂ 

ಬಿ) ಸೋಡಿಯಂ

ಸಿ) ಅಲ್ಯೂಮಿನಿಯಂ 

ಡಿ) ಕಬ್ಬಿಣ

ಉತ್ತರ:- ಸೋಡಿಯಂ

ವಿವರಣೆ:- ಸೋಡಿಯಂ (Na) ಬಹಳ ಮೃದುವಾದ ಲೋಹವಾಗಿದ್ದು, ಈ ಲೋಹವು ತಣ್ಣೀರಿನೊಂದಿಗೆ ಅಥವಾ ತೇವಾಂಶದೊಂದಿಗೆ ವರ್ತಿಸುತ್ತದೆ. ಆದುದ್ದರಿಂದ ಸೋಡಿಯಂನ್ನು ಸೀಮೆಎಣ್ಣೆ ಯಲ್ಲಿ ಸಂಗ್ರಹಿಸಿಡುತ್ತಾರೆ. ರಂಜಕ (P)ವು ವಾತಾವರಣದಲ್ಲಿರುವ ಗಾಳಿಯೊಂದಿಗೆ ವರ್ತಿಸುತ್ತದೆ.ರಂಜಕವನ್ನು ನೀರಿನಲ್ಲಿ ಶೇಖರಿಸಿಡುತ್ತಾರೆ. ಆದುದ್ದರಿಂದ ರಂಜಕವನ್ನು 'ಜಲಪಾಷಾಣ' ಎಂದು ಕರೆಯುತ್ತಾರೆ.


4) ಕಾಮನಬಿಲ್ಲು ಉಂಟಾಗಲು ಕಾರಣ ಬೆಳಕಿನ?

ಎ) ವಕ್ರವಿನಿಯೋಜನೆ 

ಬಿ) ಪ್ರತಿಫಲನ

ಸಿ) ದೃವೀಕರಣ 

ಡಿ) ವಕ್ರೀಭವನ

ಉತ್ತರ:- ವಕ್ರೀಭವನ

ವಿವರಣೆ:- ಸೂರ್ಯನ ಬೆಳಕು ಮಳೆಯ ನೀರಿನಿಂದ ವಿಭಜನೆಯಾಗಿ ಅದರಲ್ಲಿರುವ 7 ಬಣ್ಣಗಳು ವಿಭಜನೆಗೊಂಡು ಸೂರ್ಯನ ವಿರುದ್ಧ ದಿಕ್ಕಿಗೆ ವಕ್ರೀಭವನ ಹೊಂದಿ ಕಾಮನಬಿಲ್ಲು ಮೂಡುತ್ತದೆ. (VIBGOUR) ಅತ್ಯಂತ ಹೆಚ್ಚು ಬಾಗುವಂತಹ ಬಣ್ಣ ನೇರಳೆ, ನಂತರದಲ್ಲಿ ಬಾಗುವ ಬಣ್ಣ ಇಂಡಿಗೊ. ನಂತರ ನೀಲಿ, ಕಡಿಮೆ ಬಾಗುವ ಬಣ್ಣ ಕೆಂಪು ಬಣ್ಣ.


5) ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ ಇವುಗಳನ್ನು ಕೂಡಿಸಿವುದು?

ಎ) ಪನಾಮಾ ಕಾಲುವೆ 

ಬಿ) ಸುಯೆಜ್ ಕಾಲುವೆ

ಸಿ) ಬಿಳಿಸಮುದ್ರ ಕಾಲುವೆ 

ಡಿ) ಭಾಕ್ರಾ ಕಾಲುವೆ

ಉತ್ತರ:- ಸುಯೆಜ್ ಕಾಲುವೆ

ವಿವರಣೆ:- ಸೂಯೆಜ್ ಕಾಲುವೆಯು ಕೆಂಪು ಸಮುದ್ರ ಮತ್ತು
ಮೆಡಿಟರೇನಿಯನ್ ಸಮುದ್ರವನ್ನು ಕೂಡಿಸುತ್ತದೆ. ಇದು
ಈಜಿಪ್ಟನಲ್ಲಿದೆ. ಈ ಎರಡೂ ಸಮುದ್ರಗಳನ್ನು ಸಂಪರ್ಕಿಸುವ
ಕಾಲುವೆಯಾಗಿದೆ. ಇದನ್ನು 1869 " ನವೆಂಬರ್ 17ರಂದು
ಸಂಪರ್ಕಕ್ಕೆ ಉದ್ಘಾಟಿಸಲಾಯಿತು. ಈ ಕಾಲುವೆಯು 193.30
ಕಿ.ಮೀ ಉದ್ದ ಹೊಂದಿದ್ದು, ಯುರೋಪ್ ಮತ್ತು ದ. ಏಷ್ಯಾದ
ಹಡಗುಗಳ ಸಂಚಾರಕ್ಕೆ ಸಹಕಾರಿಯಾಗಿದೆ.ಪನಾಮಾ ಕಾಲುವೆಯು ಅಟ್ಲಾಂಟಿಕ್ ಸಾಗರ ಮತ್ತು ಫೆಸಿಫಿಕ್ ಸಾಗರದ ಸಂಪರ್ಕಕ್ಕೆ ಸಹಕಾರಿಯಾಗಿದೆ. ಇದನ್ನು 1914 ಆಗಸ್ಟ್ 15ರಂದು ಉದ್ಘಾಟಿಸಲಾಯಿತು. ಈ ಕಾಲುವೆಯ ಉದ್ದ 77.1 ಕಿ.ಮೀ ಇದೆ. ಬಿಳಿ ಸಮುದ್ರ ಕಾಲುವೆಯು 1933ರಲ್ಲಿ ಉದ್ಘಾಟಿಸಲಾಯಿತು. ಇದು ಬಿಳಿ ಸಮುದ್ರ ಮತ್ತು ಬಾಲ್ಟಿಕ್ ಸಮುದ್ರವನ್ನು ಸಂಪರ್ಕಿಸುತ್ತದೆ. ರಷ್ಯಾದಲ್ಲಿ ಈ ಕಾಲುವೆಯು ಕಂಡುಬರುತ್ತದೆ. ಭಾಕ್ರಾ ಕಾಲುವೆಯು ಸಟ್ಲೇಜ್ ನದಿಗೆ ನಿರ್ಮಿಸಲಾಗಿರುವ ಅಣೆಕಟ್ಟಾಗಿದೆ.

🔶️🔷️🔶️

6) ಭಾರತದ ಉಪರಾಷ್ಟ್ರಪತಿಯನ್ನು ಚುನಾಯಿಸುವವರು?

ಎ) ರಾಜ್ಯಗಳ ವಿಧಾನ ಸಭೆಗಳ ಸದಸ್ಯರು

ಬಿ) ಭಾರತದ ಸಂಸತ್ ಸದಸ್ಯರು

ಸಿ) ಸಂಸತ್ ಸದಸ್ಯರು ಮತ್ತು ವಿಧಾನ ಸಭೆಗಳ
ಸದಸ್ಯರು

ಡಿ) ಸಂಸತ್ ಸದಸ್ಯರು ಮತ್ತು ವಿಧಾನ ಪರಿಷತ್
ಸದಸ್ಯರು

ಉತ್ತರ:- ಭಾರತದ ಸಂಸತ್ ಸದಸ್ಯರು

ವಿವರಣೆ:- ಭಾರತದ ಉಪರಾಷ್ಟ್ರಪತಿಗಳನ್ನು ಭಾರತ ಸಂಸತ್ತಿನ
ಎರಡೂ ಸದನದ ಸದಸ್ಯರು ಆಯ್ಕೆ ಮಾಡುತ್ತಾರೆ.
ಭಾರತದ ಉಪರಾಷ್ಟ್ರಪತಿಗಳಾಗಲು ಕನಿಷ್ಠ 35 ವರ್ಷ
ವಯಸ್ಸಾಗಿರಬೇಕು. ಯಾವುದೇ ಲಾಭದಾಯಕ
ಹುದ್ದೆಯಲ್ಲಿರಬಾರದು, ಭಾರತದ ಉಪರಾಷ್ಟ್ರಪತಿಗಳು
ರಾಜ್ಯಸಭೆಯ. ಪದನಿಮಿತ್ತ ಸದಸ್ಯರಾಗಿರುತ್ತಾರೆ.ಭಾರತದ ಉಪರಾಷ್ಟ್ರಪತಿಗಳು ನಾಮಪತ್ರ ಸಲ್ಲಿಸಲು 20 ಜನ ಸೂಚಕರು ಮತ್ತು 20 ಜನ ಅನುಮೋದಕರ ಸಹಿ, ಮತ್ತು 15,000 ರೂ.ಗಳ ಠೇವಣಿಯನ್ನು ಇಟ್ಟಿರಬೇಕಾಗುತ್ತದೆ.


7) ಹಾರುವ ಬಲೂನ್‌ಗಳಲ್ಲಿ ತುಂಬುವ ಅನಿಲ?

ಎ) ಸಾರಜನಕ

ಬಿ) ಆಮ್ಲಜನಕ

ಸಿ) ಜಲಜನಕ

ಡಿ) ಗಾಳಿ

ಉತ್ತರ:- ಅಲಜನಕ

ವಿವರಣೆ:-  ಹಾರುವ ಬಲೂನ್‌ಗಳಲ್ಲಿ ಜಲಜನಕವನ್ನು ತುಂಬುತ್ತಾರೆ. ಇತ್ತೀಚಿನ ದಿನಗಳಲ್ಲಿ ಜಲಜನಕದ ಬದಲಿಗೆ ಹೀಲಿಯಂ ನ್ನು ಬಳಸುತ್ತಾರೆ. ಜಲಜನಕವು ಅತ್ಯಂತ ಹಗುರವಾದ ಮೂಲವಸ್ತುವಾಗಿದೆ.ಆದುದ್ದರಿಂದ ಅದನ್ನು ಬಲೂನ್‌ಗಳಲ್ಲಿ ಹಾರುವ ಬಲೂನ್ ಮತ್ತು ಪ್ಯಾರಚೂಟ್‌ಗಳಲ್ಲಿ ಬಳಸಲಾಗುತ್ತಿತ್ತು.ಜಲಜನಕವು ದಹ್ಯ ವಸ್ತುವಾಗಿರುವುದರಿಂದ ಹೆಚ್ಚು ಅಪಾಯದ ಕಾರಣ  ಜಲಜನಕದ ನಂತರದ ಹಗುರವಾದ ಮೂಲವಸ್ತುವಾದ ಹೀಲಿಯಂ ನ್ನು ಬಳಕೆ ಮಾಡುತಾರೆ.


8) ಭಾರತದಲ್ಲಿ ರಾಜ್ಯದ ರಾಜ್ಯಪಾಲರನ್ನು ನೇಮಕ
ಮಾಡುವವರು?

ಎ) ಪ್ರಧಾನ ಮಂತ್ರಿ

ಬಿ) ರಾಷ್ಟ್ರಪತಿ

ಸಿ) ಉಪರಾಷ್ಟ್ರಪತಿ

ಡಿ)ಸರ್ವೋಚ್ಚ ನ್ಯಾಯಾಲಯದ ಮುಖ್ಯ
ನ್ಯಾಯಾಧೀಶರು

ಉತ್ತರ:- ರಾಷ್ಟ್ರಪತಿ

ವಿವರಣೆ:- ಸಂವಿಧಾನದ 155ನೇ ಎಧಿಯ ಪ್ರಕಾರ ಭಾರತದ ರಾಷ್ಟ್ರಪತಿಗಳು ರಾಜ್ಯಗಳ ರಾಜ್ಯಪಾಲರನ್ನು ನೇಮಕ ಮಾಡುತ್ತಾರೆ. ರಾಜ್ಯದ ರಾಜ್ಯಪಾಲರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ನೀಡುತ್ತಾರೆ.ರಾಜ್ಯಪಾಲರಿಗೆ ಪ್ರಮಾಣವಚನವನ್ನು ರಾಜ್ಯದ ಹೈ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಬೋಧಿಸುತ್ತಾರೆ. ರಾಜ್ಯಪಾಲರು ರಾಜ್ಯದ ಪ್ರಥಮ ಪ್ರಜೆ. ರಾಜ್ಯದ ಮುಖ್ಯಸ್ಥರು. ಆದರೆ ರಾಜ್ಯ ಸರ್ಕಾರದ ಮುಖ್ಯಸ್ಥರು ಮುಖ್ಯಮಂತ್ರಿಗಳು.


9) 1917ರ ರಷ್ಯಾದ ಕ್ರಾಂತಿಯ ನೇತಾರ?

ಎ) ಬೈಜೀವ್

ಬಿ) ಲಾಲಿ

ಸಿ) ಲೆನಿನ್ 

ಡಿ) ಸ್ಟಾಲಿನ್

ಉತ್ತರ:- ಲೆನಿನ್

ವಿವರಣೆ:- ಲಿನಿನ್‌ರವರು 1917ರಲ್ಲಿ ಝಾರ್ ದೊರೆಗಳ ವಿರುದ್ಧ ನಡೆದ ರಷ್ಯಾ ಕ್ರಾಂತಿಯ ನೇತೃತ್ವ ವಹಿಸಿದ್ದರು.ವ್ಲಾಡಿಮಿರ್ ಲೆನಿನ್‌ರವರು 1917 ರಿಂದ 1922 ರವರೆಗೆ ರಷ್ಯನ್ ಸೋವಿಯತ್ ಫ್ರೆಡರೆಟೀವ್ ಸೋಷಿಯಲ್ ರಿಪಬ್ಲಿಕ್ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಮೂಲತಃ ಕಮ್ಯುನಿಸ್ಟ್ ಪಕ್ಷದವರು.


10) “ಕ್ಲೋರೋಮೈಸಿಟಿನ್ ಔಷಧಿಯನ್ನು ಯಾವ
ಕಾಯಿಲೆಗಳಿಗೆ ಉಪಯೋಗಿಸುತ್ತಾರೆ?

ಎ) ಕಾಲರಾ 

ಬಿ) ಟೈಫಾಯಿಡ್ 

ಸಿ) ಕ್ಷಯ

ಡಿ) ಗಂಟಲು ಮಾರಿ

ಉತ್ತರ:- ಟೈಫಾಯಿಡ್

ವಿವರಣೆ:- ಟೈಫಾಯಿಡ್ ಜ್ವರವು ಬ್ಯಾಕ್ಟಿರಿಯಾದಿಂದ
ಬರುವಂತಹ ಕಾಯಿಲೆಯಾಗಿದ್ದು ಇದನ್ನು ಗುಣಪಡಿಸಲು
"ಕ್ಲೋರೋಮೈಸಿಟಿನ್' ಔಷಧಿಯನ್ನು ಉಪಯೋಗಿಸಲಾಗುತ್ತದೆ.ಕಾಲರಾ ಒಂದು ಬ್ಯಾಕ್ಟಿರಿಯಾಗಳಿಂದ ಬರುವ ರೋಗವಾಗಿದೆ.ಈ ರೋಗವು ಕಲುಷಿತವಾದ ನೀರು ಮತ್ತು ಆಹಾರ ಸೇವನೆಯಿಂದ ಬರುತ್ತದೆ.ಕ್ಷಯ ರೋಗವು ಉಸಿರಾಟಕ್ಕೆ ಸಂಬಂಧಿಸಿದ ರೋಗವಾಗಿದ್ದು,ಈ ರೋಗವು ಬ್ಯಾಕ್ಟಿರಿಯದಿಂದ ಹರಡುವ ರೋಗವಾಗಿದ್ದು,ಈ ರೋಗವನ್ನು ಗುಣಪಡಿಸಲು ಬಿ.ಸಿ.ಜಿ ಚುಚ್ಚುಮದ್ದು ಉಪಯೋಗಿಸುತ್ತಾರೆ.

🔶️🔷️🔶️










Post a Comment

0 Comments

Social Science Quizzes For all Competitive Exams Part-125/ಸಮಾಜ ವಿಜ್ಞಾನ ರಸಪ್ರಶ್ನೆಗಳು
[PDF] ಎಸ್.ಎಲ್.ಭೈರಪ್ಪ ಅವರ ಗೃಹಭಂಗ ಕಾದಂಬರಿ PDF
ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-3
GPSTR Social Science Descriptive Question Answers PDF/ ಸಮಾಜ ವಿಜ್ಞಾನ ವಿವರಣಾತ್ಮಕ ಪ್ರಶ್ನೋತ್ತರಗಳು
Social Science Quizzes For all Competitive Exams Part-122/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-01/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-01
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Social Science Quizzes For all Competitive Exams Part-126/ಸಮಾಜ ವಿಜ್ಞಾನ ರಸಪ್ರಶ್ನೆಗಳು
ಆಧುನಿಕ ಭಾರತ ಇತಿಹಾಸ ಸಂಪೂರ್ಣ ಗಾಂಧಿಯುಗ ಮೈಂಡ್ ಮ್ಯಾಪಿಂಗ್ ನೋಟ್ಸ್ ಪಿಡಿಎಫ್/History of Modern India Quick Revision Series PDF
Social Science Quizzes For all Competitive Exams Part-123/ಸಮಾಜ ವಿಜ್ಞಾನ ರಸಪ್ರಶ್ನೆಗಳು

Important PDF Notes

Ad Code