MULTIPLE CHOICES QUESTION ANSWERS WITH EXPLANATIONS FOR ALL COMPETITIVE EXAMS
ಬಹು ಆಯ್ಕೆಯ ಪ್ರಶ್ನೋತ್ತರಗಳು ವಿವರಣೆಯ ಸಹಿತ
🔰🔰ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!!
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
ಸ್ನೇಹಿತರೇ ಈ ಕೆಳಕಂಡ ವಿಷಯ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳಾಗಿವೆ.
🔰🔰
ಬಹು ಆಯ್ಕೆಯ ಪ್ರಶ್ನೋತ್ತರಗಳು ವಿವರಣೆಯ ಸಹಿತ
01] ಎಫ್ ಟಿ ಪಿ (FTP) ಯ ಪೂರ್ಣರೂಪ?
ಎ) ಫ್ಯಾಕ್ಚುವಲ್ ಟ್ರಾನ್ಸ್ಫರ್ ಪ್ರೋಗ್ರಾಮ್
ಬಿ) ಫೈಲ್ ಟ್ರಾನ್ಸ್ಫರ್ ಪ್ರೊಟೋಕಾಲ್
ಸಿ) ಫಾಸ್ಟ್ ಟ್ರಾನ್ಸ್ಫರ್ ಪ್ರೊಟೋಕಾಲ್
ಡಿ) ಮ್ಯೂಚರ್ ಟ್ರಾನ್ಸ್ಫರ್ ಪ್ರೊಟೊಕಾಲ್
ಉತ್ತರ:- ಫೈಲ್ ಟ್ರಾನ್ಸ್ಫರ್ ಪ್ರೊಟೋಕಾಲ್
ವಿವರಣೆ:- FTP-(File Transfer Protocol) ಕಂಪ್ಯೂಟರ್ ನೆಟ್‌ವರ್ಕ್ ಮೇಲೆ ಸರ್ವರ್ ಮತ್ತು ಕೈಟ್ ನಡುವೆ ಕಂಪ್ಯೂಟರ್ ಫೈಲ್ಸ್ ನ್ನು ವರ್ಗಾಯಿಸಲು ಬಳಸುವ ನೆಟ್ವರ್ಕ್ ಪ್ರೊಟೋಕಾಲ್ ಆಗಿದೆ, ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿ ಹೊಂದುವ ಮುಂಚೆ ಕಮಾಂಡ್ ಲೈನ್ ಪ್ರೋಗ್ರಾಮ್ಸ್ ಬಳಸಲಾಗುತ್ತಿತ್ತು. ಈಗ ವಿಂಡೋಸ್, ಯುನಿಕ್ಸ್, ಲೈನಕ್ಸ್ ಆಪರೇಟಿಂಗ್ ಸಿಸ್ಟಂಗಳನ್ನು
ಬಳಸಲಾಗುತ್ತಿದೆ. ಮೊದಲ ಬಾರಿ 1971ರಲ್ಲಿ ಅಭಯ್
ಭೂಷಣ್ ಅವರು File Transfer Protocol ನ್ನು
ಬರೆದು ಪ್ರಕಟ ಪಡಿಸಿದ್ದರು.
02] ಪುಷ್ಯಮಿತ್ರ ಶುಂಗ ಒಬ್ಬ ನಿಷ್ಠಾವಂತ.........ಆಡಳಿತಗಾರ.
ಎ) ಬೌದ್ಧ
ಬಿ) ಜೈನ
ಸಿ) ಹಿಂದೂ
ಡಿ) ನಾಸ್ತಿಕ
ಉತ್ತರ:- ಹಿಂದೂ
ವಿವರಣೆ:- ಪುಷ್ಯಮಿತ್ರಾ ಶುಂಗ ಓರ್ವ ನಿಷ್ಠಾವಂತ ಹಿಂದೂ
ಆಡಳಿತಗಾರ, ಬ್ರಾಹ್ಮಣ ರಾಜ, ಬ್ರಾಹ್ಮಣ ಗೋತ್ರದ
ವ್ಯಕ್ತಿ ಕೂಡ. ಪೂರ್ವ ಭಾರತದಲ್ಲಿ ಶುಂಗ ಸಾಮ್ರಾಜ್ಯವನ್ನು
ಸ್ಥಾಪಿಸಿದ ಮತ್ತು ಆಡಳಿತ ನಡೆಸಿದ ಮೊದಲ ವ್ಯಕ್ತಿ ಸಹ.
ಪುಷ್ಯಮಿತ್ರಾ ಮೂಲತಃ ಭಾರತ ಕಂಡ ಮೊದಲ ಸಾಮ್ರಾಜ್ಯ ಎಂಬ ಖ್ಯಾತಿ ಪಡೆದ ಮೌರ್ಯ ಸಾಮ್ರಾಜ್ಯದಲ್ಲಿ
ಸೇನಾಪತಿಯಾಗಿದ್ದರು. ಮೌರ್ಯರ ಕೊನೆಯ ದೊರೆ ಬೃಹದ್ರಥಮೌರ್ಯನ ನಂತರ ಸ್ವತಂತ್ರವಾಗಿ ಪುಷ್ಯಮಿತ್ರಾ ಶುಂಗ ಆಡಳಿತವನ್ನು ಕ್ರಿ.ಪೂ. 184ರಲ್ಲಿ ಪ್ರಾರಂಭಿಸಿದರು.
ಇವನ ಆಡಳಿತಾತ್ಮಕ ರಾಜಧಾನಿ ಪಾಟಲೀಪುತ್ರ ಆಗಿತ್ತು.03] ಕೆಳಗಿನ ಯಾವುದು ಕೋರ್ಟ್‌ನಲ್ಲಿ ನ್ಯಾಯವಾದದ್ದು?
ಎ) ಫಂಡಮೆಂಟಲ್ ರೈಟ್ಸ್
ಬಿ) ಫಂಡಮೆಂಟಲ್ ಡ್ಯೂಟಿಸ್
ಸಿ) ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ
ಡಿ) ಪ್ರಿಯಮ್ ಬಲ್
ಉತ್ತರ:- ಫಂಡಮೆಂಟಲ್ ರೈಟ್ಸ್
ವಿವರಣೆ:- ಫಂಡಮೆಂಟಲ್ ರೈಟ್ಸ್ (ಮೂಲಭೂತ
ಹಕ್ಕು )ಗಳಿಗೆ ಭಾರತ ಸಂವಿಧಾನದ 32ನೇ ವಿಧಿಯ
ಸಂವಿಧಾನದ ಪರಿಹಾರದ ಹಕ್ಕಿನ ಅಡಿಯಲ್ಲಿ
ನ್ಯಾಯಾಂಗದಿಂದ ರಕ್ಷಣೆ ಒದಗಿಸಿದ್ದು,ಮೂಲಭೂತ ಹಕ್ಕುಗಳು ಉಲ್ಲಂಘನೆ ಆದ ಸಂದರ್ಭದಲ್ಲಿ ನ್ಯಾಯಾಲಯವುದು ವಿಧದ ರಿಟ್‌ಗಳನ್ನು ಹೊರಡಿಸಬಹುದಾಗಿದೆ.ಮೂಲಭೂತ ಹಕ್ಕುಗಳು ಉಲ್ಲಂಘನೆಯಾದ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನಲ್ಲಿ 139ನೇ ವಿಧಿ ಮತ್ತು ಹೈಕೋರ್ಟ್‌ನಲ್ಲಿ 226ನೇ ವಿಧಿ ಅನ್ವಯ ರಿಟ್‌ಗಳನ್ನು ಹೊರಡಿಸಬಹುದಾಗಿದೆ. ಒಟ್ಟಾರೆಯಾಗಿ 5 ಬಗೆಯ ರಿಟ್‌ಗಳು ಇವೆ
1.ಹೇಬಿಯಸ್ ಕಾರ್ಪಸ್ (ಬಂಧಿ ಪ್ರತ್ಯಕ್ಷಿಕರಣ)
2. ಮ್ಯಾಂಡಮಸ್ (ಪರಮಾದೇಶ)
3. ಸರ್ಷಿಯೋರರಿ
4. ಕೋ-ವಾರೆಂಟ್
5. ಪ್ರೊಹಿಬಿಷನ್
ಹಾಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ
ಪರಿಹಾರ ಹಕ್ಕನ್ನು ಭಾರತ ಸಂವಿಧಾನದ ಆತ್ಮ
ಹಾಗೂ ಹೃದಯ ಇದ್ದಂತೆ ಎಂದು ಕರೆದಿದ್ದಾರೆ.
04] ಮೊಘಲ್ ಆಡಳಿತದಲ್ಲಿ, ನೌಕಾಸೈನ್ಯದ ಅಧಿಕಾರಿಯನ್ನು.......ಎಂದು ಕರೆಯಲಾಗುತ್ತಿತ್ತು.
ಎ) ಮಿರ್-ಐ-ಅತಿಶ್'
ಬಿ) ಮಿರ್ -ಐ-ಬಹರ್
ಸಿ) ಅಹದಿಸ್
ಡಿ) ದಹಬಾಶಿ
ಉತ್ತರ:- ಮಿರ್-ಐ-ಐಹರ್
ವಿವರಣೆ:- ಮಧ್ಯಯುಗದ ಭಾರತದ ಇತಿಹಾಸದಲ್ಲಿ 1526
ರಿಂದ 1857ರವರೆಗೆ ಮೊಘಲರ ಆಡಳಿತವಿತ್ತು. ಬಾಬರ್
ಮೊಘಲ್ ಸಾಮ್ರಾಜ್ಯ ಸ್ಥಾಪಕನಾಗಿದ್ದನು. ಮೊಘಲರ
ಆಡಳಿತ ಅವಧಿಯಲ್ಲಿ ಪರ್ಶಿಯನ್ ಭಾಷೆ ಆಡಳಿತ
ಭಾಷೆಯಾಗಿತ್ತು. ಮೊಘಲರ ಕಾಲದಲ್ಲಿ ಸಾಮ್ರಾಟನನ್ನು
(ಬಾದಷಹಾ) ಎಂದು, ವಕೀಲನನ್ನು (ಪ್ರಧಾನಮಂತ್ರಿ) ಎಂದು, ದಿವಾನನನ್ನು(ಹಣಕಾಸು ಮಂತ್ರಿ) ಎಂದು, ಖಾಜಿ (ನ್ಯಾಯ ಪರಿಪಾಲನೆ),ಸದರ್ ಉರ್ ಭಕ್ಷಿ (ಧರ್ಮದತ್ತಿಗಳ ಮಂತ್ರಿ), ಪೌಜುದಾರ(ಮಿಲಿಟರಿ ಅಧಿಕಾರಿ), ಮಿರ್-ಐ-ಬಹರ್ (ನೌಕಾಸೈನ್ಯದ ಅಧಿಕಾರಿ) ಮೀರ್ ಭಕ್ಷಿ (ಮಿಲಿಟರಿ ವೇತನ ಅಧಿಕಾರಿ) ಎಂದು ಕರೆಯಲಾಗುತ್ತಿತ್ತು.
05] ಭಾರತದಲ್ಲಿ ಪ್ರಜೆಗಳಿಗೆ.........ಪ್ರಕಾರ ಚುನಾವಣೆಯಲ್ಲಿ
ಮತ ನೀಡಲು ಅಧಿಕಾರವಿದೆ.
ಎ) ವಯಸ್ಸು
ಬಿ) ವಿದ್ಯಾಭ್ಯಾಸ
ಸಿ) ಅಸ್ತಿಯ ಅರ್ಹತೆ
ಡಿ) ದೇಶದಲ್ಲಿರುವ ಕಾಲಾವಧಿ
ಉತ್ತರ:- ವಯಸ್ಸು
ವಿವರಣೆ:- ವಯಸ್ಕ ಮತದಾನ ಪದ್ಧತಿ ಎಂಬುದು ಭಾರತದ ಪ್ರಜೆಗಳಿಗೆ ಚುನಾವಣೆಯಲ್ಲಿ ಮತ ನೀಡಲು ಕಲ್ಪಿಸಿರುವ ಸೌಲಭ್ಯವಾಗಿದೆ. ಭಾರತ ಸಂವಿಧಾನದ 15ನೇ ಭಾಗದಲ್ಲಿರುವ 326ನೇ ವಿಧಿಯು ಲೋಕಸಭೆಗೆ ಹಾಗೂ ರಾಜ್ಯವಿಧಾನ ಸಭೆಗೆ ವಯಸ್ಕ ಮತದಾನದ ಮೂಲಕ ಆಯ್ಕೆ ಮಾಡಲು ಅವಕಾಶ ಕಲ್ಪಿಸಿದೆ.1988ರ 61ನೇ ತಿದ್ದುಪಡಿ ಕಾಯ್ದೆ ಪ್ರಕಾರ ಮತದಾನ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಲಾಗಿದೆ.
🔰🔰06) ಭಾರತದ 100ನೆಯ ವಿಮಾನ ನಿಲ್ದಾಣ 'ಪಾಕ್ಯಾಂಗ್' ಯಾವ ರಾಜ್ಯದಲ್ಲಿದೆ?
ಎ) ಮಣಿಪುರ
ಬಿ) ಮಿಜೋರಾಂ
ಸಿ) ಸಿಕ್ಕಿಂ
ಡಿ) ಅಸ್ಸಾಂ
ಉತ್ತರ:- ಸಿಕ್ಕಿಂ
ವಿವರಣೆ:- 2018ರ ಸೆಪ್ಟೆಂಬರ್ 24 ರಂದು ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್ ಬಳಿಯ ಪಾಕ್ಯಾಂಗ್‌ನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಇದು ಸಿಕ್ಕಿಂ ರಾಜ್ಯದ ಮೊದಲ & ದೇಶದ 100ನೇ ವಿಮಾನ ನಿಲ್ದಾಣವಾಗಿದೆ. ಇದು ಭಾರತ & ಚೀನಾದ ಗಡಿಯಿಂದ 60 ಕಿ.ಮೀ ದೂರದಲ್ಲಿದ್ದು, ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಲ್ಯಾಂಡ್ ಮಾಡಲು ಅನುಕೂಲಕರವಾಗಿದೆ. ರೈಲ್ವೆ ಸೌಲಭ್ಯವನ್ನು ಪಡೆಯದೇ ಇರುವ ಸಿಕ್ಕಿಂ ರಾಜ್ಯಕ್ಕೆ ವಾಯು ಸೌಲಭ್ಯ ದೊರೆತಿರುವುದು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. (ಕೇರಳದ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಮೊದಲ ಸಂಪೂರ್ಣ ಸೌರ ಚಾಲಿತ ವಿಮಾನ ನಿಲ್ದಾಣ ಹಾಗೂ ಪಶ್ಚಿಮ ಬಂಗಾಳದ ದುರ್ಗಾಪುರ ವಿಮಾನ ನಿಲ್ದಾಣವು ದೇಶದ ಮೊದಲ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವಾಗಿದೆ.)
07) 2010-2020 ಯಾವ ದಶಕವಾಗಿ SAARC ನಿಂದ
ಘೋಷಿಸಲ್ಪಟ್ಟಿದೆ?
ಎ) ಹೆಣ್ಣು ಮಕ್ಕಳಿಗಾಗಿ
ಬಿ) ಬಡತನ ಕಡಿಮೆ ಮಾಡುವುದಕ್ಕಾಗಿ
ಸಿ) ಮಕ್ಕಳ ನ್ಯಾಯವಾದ ಹಕ್ಕುಗಳಿಗಾಗಿ
ಡಿ) ಪ್ರಾಂತ್ಯಗಳ ಸಂಪರ್ಕಗಳಿಗಾಗಿ
ಉತ್ತರ:- ಪ್ರಾಂತ್ಯಗಳ ಸಂಪರ್ಕಗಳಿಗಾಗಿ
ವಿವರಣೆ:- ದಕ್ಷಿಣ ಏಷ್ಯಾ ಭಾಗದ 8 ರಾಷ್ಟ್ರಗಳ ಒಕ್ಕೂಟವಾದ ಸಾರ್ಕ್ 2010 ರಿಂದ 2020ರ ದಶಕವನ್ನು ಪ್ರಾಂತ್ಯಗಳ ಸಂಪರ್ಕಗಳಿಗಾಗಿ ಎಂದು ಘೋಷಣೆ ಮಾಡಿದೆ (Intra-Regional Connectivity). ಸಾರ್ಕ್ ಒಕ್ಕೂಟದಲ್ಲಿ
ಭಾರತ, ಭೂತಾನ್,ಬಾಂಗ್ಲಾದೇಶ, ನೇಪಾಳ, ಮಾಲ್ಡಿವ್,ಪಾಕಿಸ್ತಾನ, ಶ್ರೀಲಂಕಾ & ಆಫ್ಘಾನಿಸ್ತಾನ ದೇಶಗಳು ಸೇರಿ ಒಟ್ಟು 8 ರಾಷ್ಟ್ರಗಳು ಸದಸ್ಯತ್ವವನ್ನು ಪಡೆದಿವೆ. ಬಾಂಗ್ಲಾ ದೇಶದ ಢಾಕಾದಲ್ಲಿ ಸಾರ್ಕ್‌ನ ಮೊದಲ ಸಭೆಯು 1985ರ ಡಿಸೆಂಬರ್ 8 ರಂದು ಜರುಗಿತ್ತು. ಸಾರ್ಕ್‌ನ 19ನೇ ಶೃಂಗಸಭೆಯು 2016ರಲ್ಲಿ ಪಾಕಿಸ್ತಾನದಲ್ಲಿ ಜರುಗಬೇಕಾಗಿದ್ದು ರದ್ದಾಗಿದೆ. ಮುಂದಿನ ಶೃಂಗಸಭೆಯು ಶ್ರೀಲಂಕಾದ ಆತಿಥ್ಯದಲ್ಲಿ ಜರುಗಲಿದೆ.ಸಾರ್ಕ್ ಸಂಸ್ಥೆಯು 1985 ಡಿಸೆಂಬರ್ 8 ರಂದು ಸ್ಥಾಪನೆಯಾಗಿರುವ ಕಾರಣ ಪ್ರತಿವರ್ಷ ಡಿಸೆಂಬರ್ 8ನ್ನು ಸಾರ್ಕ್ ದಿನ ಎಂದು ಆಚರಿಸಲಾಗುತ್ತದೆ. ನೇಪಾಳದ ಕಠ್ಮಂಡುವಿನಲ್ಲಿ ಈ ಸಂಸ್ಥೆಯ ಸಚಿವಾಲಯವಿದೆ.
08) 1857ರಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು?
ಎ) ಲಾರ್ಡ್ ಡಾಲ್ ಹೌಸಿ,
ಬಿ) ಲಾರ್ಡ್ ಕ್ಯಾನಿಂಗ್
ಸಿ) ಲಾರ್ಡ್ ಹಾರ್ಡಿಂಜ್
ಡಿ )ಲಾರ್ಡ್ ಲಿಟ್ಟನ್
ಉತ್ತರ: ಲಾರ್ಡ್ ಕ್ಯಾನಿಂಗ್
ವಿವರಣೆ:- 1897ರಲ್ಲಿ ಪ್ರಥಮ ಸ್ವಾತಂತ್ರ ಹೋರಾಟದ
ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್
ಲಾರ್ಡ್ ಕ್ಯಾನಿಂಗ್ ಆಗಿದ್ದರು. 1857ರಲ್ಲಿ ನಡೆದ
ದಂಗೆಯನ್ನು ಭಾರತೀಯ ಇತಿಹಾಸಕಾರರು ಪ್ರಥಮ
ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದಿದ್ದಾರೆ. ಆದರೆ,
ಇಂಗ್ಲಿಷ್ ಇತಿಹಾಸಕಾರರ ಪ್ರಕಾರ ಇದು ಒಂದು ಕೆವಲ ಸಿಪಾಯಿ ದಂಗೆ ಮಾತ್ರವಾಗಿದೆ ಎಂದಿದ್ದಾರೆ.
ಕಾರಣ:- ಮೀರತ್‌ನಲ್ಲಿ 1857ರ ಮೇ 10ರಂದು ಪ್ರಾರಂಭವಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ ತುಪಾಕಿಗಳ ಬಳಕೆಯು
ದಂಗೆಗೆ ತತ್‌ಕ್ಷಣದ ಕಾರಣವಾಗಿತ್ತು. ಮಂಗಲ್ ಪಾಂಡೆ ಎಂಬ ಸೈನಿಕ ಬ್ರಿಟಿಷ್ ಅಧಿಕಾರಿ ಮೇಜರ್ ಹಡ್ಸನ್ ನನ್ನು ಕೊಂದು ಸಿಪಾಯಿ ದಂಗೆಗೆ ಕಾರಣವಾದನು.
ಹೋರಾಟಗಾರರು:-ಕಾನ್ಪುರದಲ್ಲಿ ನಾನಾ ಸಾಹೇಬ ತಾಂತ್ಯಾಟೋಪೆ,ಔದ್ ಪ್ರಾಂತ್ಯದ ಲಕೋದಲ್ಲಿ ಬೇಗಂ ಹಜರತ್ ಮಹಲ್, ಝಾನ್ಸಿಯಲ್ಲಿ ರಾಣಿ ಲಕ್ಷ್ಮೀಬಾಯಿ ಹಾಗೂ ಬಿಹಾರದಲ್ಲಿ ಕುನ್ವರ್ ಸಿಂಗ್ 1857ರ ದಂಗೆಯ ವಿವಿಧ ಪ್ರಾಂತ್ಯಗಳಲ್ಲಿ ನಾಯಕತ್ವ ವಹಿಸಿದವರು. 80 ವರ್ಷದ
ವಯಸ್ಸಿನ ಮೊಘಲ್ ಆಡಳಿತಗಾರ ಬಹದ್ದೂರ್ ಷಾ
ಜಾಫರ್ ನನ್ನು 1857ರ ದಂಗೆಯ ಹೋರಾಟಗಾರರು
ಭಾರತದ ಚಕ್ರವರ್ತಿಯೆಂದು ಘೋಷಿಸಲ್ಪಟ್ಟಿದ್ದರು.
ನೆನಪಿಡಿ 1857 ರ ದಂಗೆಯ ಹೋರಾಟಗಾರರ ಮೇಲೆ ಹೊಂದಿಸುವ ಮಾದರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಬರುವುದು ಹೆಚ್ಚು.ಹಾಗೆ ಲಾರ್ಡ್ ಡಾಲ್‌ಹೌಸಿಯು ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ಧತಿ ನೀತಿಯನ್ನು ಜಾರಿಗೆ ತಂದವರು.1911ರ ಡಿಸೆಂಬರ್ 12ರಲ್ಲಿ ಲಾರ್ಡ್ 2ನೇ ಹಾರ್ಡಿಂಜ್ ಅವಧಿಯಲ್ಲಿ ಭಾರತದ ರಾಜಧಾನಿಯನ್ನು ಕೊಲ್ಕತ್ತಾದಿಂದ ನವದೆಹಲಿಗೆ ವರ್ಗಾಯಿಸಲಾಗಿದೆ.ಲಾರ್ಡ್ ಲಿಟ್ಟನ್ ಕಾಲದಲ್ಲಿ ನಾಗರೀಕ ಸೇವೆಗಳ ಗರಿಷ್ಠ ವಯೋಮಿತಿಯನ್ನು 19 ರಿಂದ 21ಕ್ಕೆ ಹೆಚ್ಚಿಸಲಾಯಿತು.
09) ಈ ಕೆಳಗಿನವರಲ್ಲಿ ಯಾರು ಪಟ್ಟದಕಲ್ಲು ಮತ್ತು ಐಹೋಳೆಗಳ ಸುಂದರ ದೇಗುಲಗಳನ್ನು ನಿರ್ಮಿಸಿದರು?
ಎ) ಚಾಲುಕ್ಯರು
ಬಿ) ಹೊಯ್ಸಳರು
ಸಿ) ಶಾತವಾಹನರು
ಡಿ) ರಾಷ್ಟ್ರಕೂಟರು
ಉತ್ತರ:- ಚಾಲುಕ್ಯರು
ವಿವರಣೆ:- ಬಾದಾಮಿ ಚಾಲುಕ್ಯರು ಪಟ್ಟದಕಲ್ಲು ಮತ್ತು
ಐಹೊಳೆಗಳಲ್ಲಿ ಸುಂದರ ದೇಗುಲಗಳನ್ನು ನಿರ್ಮಿಸಿದರು.
ಸಂಪೂರ್ಣ ಕರ್ನಾಟಕವನ್ನು ಒಂದೇ ಮನೆತನದ ಆಳ್ವಿಕೆಗೆ
ಒಳಪಡಿಸಿದ ಮೊದಲ ರಾಜ ಮನೆತನ ಎಂದರೆ ಅದು ಬಾದಾಮಿ ಚಾಲುಕ್ಯರು. ವಾತಾಪಿ ಅಥವಾ ಬಾದಾಮಿಯನ್ನು ರಾಜಧಾನಿಯಾಗಿ ಮಾಡಿಕೊಂಡು ರಾಜ ಜಯಸಿಂಹನು ಆಡಳಿತವನ್ನು ಪ್ರಾರಂಭಿಸಿದನು.ಈ ಮನೆತನದ ಪ್ರಸಿದ್ಧ ಅರಸ ಎಂದರೆ ಇಮ್ಮಡಿ ಪುಲಿಕೇಶಿ ಆಗಿದ್ದಾನೆ.ಚಾಲುಕ್ಯರು 'ಚಾಲುಕ್ಯ ಶೈಲಿ' ಎಂಬ ಶೈಲಿಯನ್ನು ಪ್ರಾರಂಭಿಸಿದರು.ಇವರ ದೇವಾಲಯಗಳನ್ನು ಐಹೊಳೆ, ಬಾದಾಮಿ ಮತ್ತು ಪಟ್ಟದಕಲ್ಲಿನಲ್ಲಿ ಕಾಣಬಹುದಾಗಿದೆ.ಇಲ್ಲೊಂದು ವಿಶೇಷತೆ ಇದೆ ಇದರ ಮೇಲೆ ಸಾಕಷ್ಟು ಬಾರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಯು ಕೂಡ ಬಂದಿದೆ ನೆನಪಿಡಿ ಐಹೊಳೆಯನ್ನು 'ವಾಸ್ತುಶಿಲ್ಪಕಲೆಯ ತೊಟ್ಟಿಲು' ಎಂದು ಕರೆದವರು 'ಪರ್ಸಿಬ್ರೌನ್ '. ಇನ್ನೂ ಬಾದಾಮಿ ಇದಕ್ಕೆ ವಾತಾಪಿ ಅಂತಾನು ಕರೆಯುತ್ತಾರೆ ಇಲ್ಲಿ ಗುಹಾಂತರ ದೇವಾಲಯಗಳು ಹಾಗೂ ಪಟ್ಟದಕಲ್ಲಿನಲ್ಲಿ ವಿರೂಪಾಕ್ಷ & ಮಲ್ಲಿಕಾರ್ಜುನ ದೇವಾಲಯ,ಐಹೊಳೆಯಲ್ಲಿ (ವಾಸ್ತುಶಿಲ್ಪಗಳ ತೊಟ್ಟಿಲು) ದುರ್ಗಾ, ಹುಚ್ಚಿಮಲ್ಲಿಗುಡಿ, ಲಾಡ್ ಖಾನ್ ದೇವಾಲಯ ಕಂಡುಬರುತ್ತವೆ. ಪಟ್ಟದಕಲ್ಲು ಇದನ್ನು 1987ರಲ್ಲಿ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ.
10) ಕರ್ನಾಟಕದ ಮೊದಲ ಜಲವಿದ್ಯುತ್ ಸ್ಥಾವರ ಯಾವ
ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ?
ಎ) ಶಿವನ ಸಮುದ್ರದ ಬಳಿ ಕಾವೇರಿ
ಬಿ) ಕೃಷ್ಣರಾಜಸಾಗರದ ಬಳಿ ಕಾವೇರಿ
ಸಿ) ಗೇರುಸೊಪ್ಪೆ ಬಳಿ ಶರಾವತಿ
ಡಿ) ಹೊಸಪೇಟೆ ಹತ್ತಿರ ತುಂಗಭದ್ರಾ
ಉತ್ತರ: ಶಿವನ ಸಮುದ್ರದ ಬಳಿ ಕಾವೇರಿ
ವಿವರಣೆ:-ಏಷ್ಯಾದ ಮೊಟ್ಟ ಮೊದಲ ಜಲವಿದ್ಯುತ್
ಯೋಜನೆಯನ್ನು ಮಂಡ್ಯ ಜಿಲ್ಲೆಯ ಶಿವನಸಮುದ್ರದ ಬಳಿ
1902ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಯಿತು .
ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ಅವಧಿಯಲ್ಲಿ ಹಾಗೂ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು.1902 ರಲ್ಲಿ ಶಿವನಸಮುದ್ರದಿಂದ ಜಲವಿದ್ಯುತ್‌ನ್ನು ಮೊದಲಿಗೆ ಕೋಲಾರದ ಚಿನ್ನದ ಗಣಿಗೆ ಒದಗಿಸಲಾಯಿತು. 1905ರಲ್ಲಿ ಬೆಂಗಳೂರು ನಗರಕ್ಕೆ ವಿದ್ಯುತ್ ಒದಗಿಸಲಾಯಿತು. ನೆನಪಿರಲಿ ಮೊಟ್ಟ ಮೊದಲು ವಿದ್ಯುತ್ ಪಡೆದ ನಗರ ಬೆಂಗಳೂರು.ಆದ್ದರಿಂದ ಜಲವಿದ್ಯುತ್ ಪಡೆದ ಭಾರತದ ಮೊಟ್ಟ ಮೊದಲ ನಗರ ಎಂಬ ಕೀರ್ತಿಗೆ ಬೆಂಗಳೂರು ಪಾತ್ರವಾಗಿದೆ. ಈ ಜಲವಿದ್ಯುತ್ ಸ್ಥಾವರವನ್ನು ಕೆ.ಶೇಷಾದ್ರಿ ಅಯ್ಯರ್ ಜಲವಿದ್ಯುತ್ ಕೇಂದ್ರ ಎಂದು ಕೂಡ ಕರೆಯುವರು.
🔰🔰
11) ಕೆಳಗಿನವುಗಳಲ್ಲಿ ಯಾವುದು ಗಾಂಧಿ-ಇರ್ವಿನ್ ಪ್ಯಾಕ್ಸ್‌ನಲ್ಲಿ ಒಪ್ಪಿಗೆಯಾಗಲಿಲ್ಲ?
ಎ) ಹಿಂಸೆಗೆ ಸಂಬಂಧ ಪಡದ ಎಲ್ಲಾ ನಿರಪರಾಧಿ
ಬಂಧಿಗಳನ್ನು ಕೂಡಲೇ ಬಿಡುಗಡೆ ಮಾಡುವುದು,
ಬಿ) ಸಿವಿಲ್ ಡಿಎಸ್‌ಒಬೀಡಿಯಂಟ್ ಮೂವ್‌ಮೆಂಟ್ ಅನ್ನು
ತಡೆ ಹಿಡಿಯುವುದು.
ಸಿ) ಭಗತ್ ಸಿಂಗ್ ಮತ್ತು ಅವನ ಸಹಪರಾಧಿಗಳ ಮರಣಾಜ್ಞೆಯನ್ನು ಜೀವನ ಪರ್ಯಂತ ಜೈಲುವಾಸವಾಗಿ
ವಿನಿಮಯಗೊಳಿಸುವುದು.
ಡಿ) ಮುಂದಿನ ರೌಂಡ್ ಟೇಬಲ್ ಕಾನ್ಫರೆನ್ಸ್‌ನಲ್ಲಿ
ಭಾಗವಹಿಸುವುದು.
ಉತ್ತರ:- ಭಗತ್‌ಸಿಂಗ್ ಮತ್ತು ಅವನ ಸಹಪರಾಧಿಗಳ
ಮರಣಾಜ್ಞೆಯನ್ನು ಜೀವನ ಪರ್ಯಂತ ಜೈಲುವಾಸವಾಗಿ
ವಿನಿಮಯಗೊಳಿಸುವುದು.
ವಿವರಣೆ:- 1931ರ ಮಾರ್ಚ್ 5 ರಂದು ದೆಹಲಿಯಲ್ಲಿ ನಡೆದ
ಗಾಂಧಿ ಇರ್ವಿನ್ ಒಪ್ಪಂದದಲ್ಲಿ ಭಗತ್ ಸಿಂಗ್ ಮತ್ತು
ಅವನ ಸಹಪರಾಧಿಗಳ ಮರಣಾಜ್ಞೆಯನ್ನು ಜೀವನ
ಪರ್ಯಂತ ಜೈಲುವಾಸವಾಗಿ ವಿನಿಮಯಗೊಳಿಸುವುದರ
ಬಗ್ಗೆ ಪ್ರಸ್ತಾಪವಿರಲಿಲ್ಲ.1930 ರಿಂದ 1932ರ ನಡುವೆ ಇಂಗ್ಲೆಂಡಿನ ಪ್ರಧಾನಿ ರಾಮ್ಸೆ ನೆಕ್ ಡೋನಾಲ್ಡ್ ಅವರ ಅಧ್ಯಕ್ಷತೆಯಲ್ಲಿ 3 ದುಂಡು ಮೇಜಿನ ಸಮ್ಮೇಳನಗಳು ನಡೆದವು.ಅದರಲ್ಲಿ ಮೊದಲ ದುಂಡು ಮೇಜಿನ ಸಮ್ಮೇಳನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಯಾರು ಭಾಗವಹಿಸದ ಕಾರಣ ಹಾಗೂ 2ನೇ ದುಂಡು ಮೇಜಿನ ಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮನವೊಲಿಸಿ ದುಂಡು ಮೇಜಿನ ಸಭೆಯ ಉದ್ದೇಶವನ್ನು ಈಡೇರಿಸಲು ಗಾಂಧಿ ಮತ್ತು ವೈಸ್‌ರಾಯ್ ಇರ್ವಿನ್ ನಡುವೆ 1931 ಫೆಬ್ರವರಿ 14 ರಂದು ಮಾತುಕತೆಯಾಗುತ್ತದೆ.1931 ಮಾರ್ಚ್ 5 ರಂದು ನಡೆದ ಒಪ್ಪಂದವೇ ಗಾಂಧಿ ಇರ್ವಿನ್ (ದೆಹಲಿ ಒಪ್ಪಂದ) ಒಪ್ಪಂದ ಆಗಿದೆ. ಇದರ ಪ್ರಕಾರ ರಾಜಕೀಯ ಬಂಧಿಗಳ ಬಿಡುಗಡೆ, ತುರ್ತು ಪರಿಸ್ಥಿತಿಯ ಸುಗ್ರೀವಾಜ್ಞೆಗಳ ವಾಪಸಾತಿ, ಶಾಂತಿಯುತ ಪ್ರತಿಭಟನೆಗೆ ಅವಕಾಶ, ಕಾನೂನು ಭಂಗ ಚಳುವಳಿ ಹಿಂತೆಗೆತ, ಈ ಒಪ್ಪಂದದ ಪ್ರಕಾರ ಕಾಂಗ್ರೆಸ್ಸಿನ ಪ್ರತಿನಿಧಿಯಾಗಿ ಗಾಂಧೀಜಿ ಅವರು 2ನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದರು. ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಕರ್ನಾಟಕದಿಂದ ಸರ್.ಮಿರ್ಜಾ ಇಸ್ಮಾಯಿಲ್ ರವರು 3ನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ ವ್ಯಕ್ತಿಯಾಗಿದ್ದಾರೆ. ಕಾರ್ಮಿಕ ವರ್ಗದಪರವಾಗಿ ವಿ.ವಿ.ಗಿರಿ ಅವರು ಭಾಗವಹಿಸಿದ್ದರು.
12) 'ಕವಿರಾಜ ಮಾರ್ಗ' ಯಾರಿಂದ ತಸಲ್ಪಟ್ಟಿತು?
ಎ) ಶಿವಕೋಟಿ ಆಚಾರ್ಯ
ಬಿ) ಕೇಶಿರಾಜ
ಸಿ)ಪಂಪ
ಡಿ) ಅಮೋಘವರ್ಷ
ಉತ್ತರ:- ಅಮೋಘವರ್ಷ
ದಿವರಣೆ:- ರಾಷ್ಟ್ರಕೂಟ ರಾಜನಾದ ಅಮೋಘವರ್ಷ
ನೃಪತುಂಗ (ಕ್ರಿ.ಶ. 850)ನ ಅಥವಾ "ಶ್ರೀವಿಜಯನು
ಬರೆದ ಕವಿರಾಜಮಾರ್ಗವು ಕನ್ನಡ ಸಾಹಿತ್ಯದಲ್ಲಿ
ಲಭ್ಯವಿರುವ ಪ್ರಥಮ ಕೃತಿಯಾಗಿದೆ. ಕವಿರಾಜಮಾರ್ಗ
ಎಂಬುದು ಪಂಪಪೂರ್ವ ಯುಗದಲ್ಲಿ ರಚಿತವಾಗಿದ್ದು,
ಕನ್ನಡದ ಲಾಕ್ಷಣಿಕ ಅಥವಾ ಅಲಂಕಾರಿಕ ಗ್ರಂಥ ಎನಿಸಲ್ಪಟ್ಟಿದೆ.
ಈ ಕೃತಿಯು ಕಾವ್ಯಗಳ ಬಗೆಯದಾಗಿದೆ. ಕ್ರಿ.ಶ. 6-7ನೇ ಶತಮಾನಕ್ಕೆ ಸೇರಿದ ದಂಡಿಯ ಸಂಸ್ಕೃತ ಕೃತಿ “ಕಾವ್ಯಾದರ್ಶ'ದ ಮುಕ್ತ ವ್ಯಾಖ್ಯಾನ ಅಥವಾ ಅರ್ಥಕಲ್ಪನೆಯಾಗಿದೆ.
#ಕೇಶಿರಾಜನು ಜನ್ನನ ಸೋದರಳಿಯ. ಹಳಗನ್ನಡ ವ್ಯಾಕರಣವನ್ನು ವಿವರಿಸುವ ಶಬ್ದಮಣಿದರ್ಪಣ ಎಂಬುದು
ಕೇಶಿರಾಜನ ಪ್ರಸಿದ್ದ ಕೃತಿಯಾಗಿದೆ. ಇದು ಕಂದಪದ್ಯಗಳ
ರೂಪದಲ್ಲಿದ್ದು, 8 ಅಧ್ಯಾಯಗಳನ್ನು ಒಳಗೊಂಡಿದೆ.
ಕ್ರಿ.ಶ. 1260ರ ಅವಧಿಯಲ್ಲಿದ್ದ ಕೇಶಿರಾಜನು ಪ್ರಬೋಧ
ಚಂದ್ರ, ಕಿರಾತ, ಶ್ರೀಚಿತ್ರ ಮಾಲೆ, ಚೋಳ ಪಾಲಕ ಚರಿತ
ಎಂಬ ಕೃತಿಗಳನ್ನು ರಚಿಸಿದ್ದನು. ಶಬ್ದಮಣಿದರ್ಪಣವನ್ನು
ಗ್ಯಾರೆಟ್ ಎಂಬುವರು 1868ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದ್ದು, ನಂತರ 1872ರಲ್ಲಿ ರೆವರೆಂಡ್ ಕಿಟೆಲ್
ಅವರು ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದ್ದಾರೆ.
#ಶಿವಕೋಟ್ಯಾಚಾರ್ಯನು 10ನೇ ಶತಮಾನದ ಕವಿ. ಜೈನ
ಮತಾವಲಂಬಿಯಾದ ಇವನು ಹಳಗನ್ನಡದ ಅತ್ಯಂತ
ಪ್ರಾಚೀನ ಗದ್ಯ ಕೃತಿ ಎನಿಸಿದ ವಡ್ಡಾರಾಧನೆ ಯನ್ನು
ರಚಿಸಿದ ಸಾಹಿತಿ ಎನಿಸಿದ್ದಾರೆ.
#ಕನ್ನಡದ ಆದಿಕವಿ ಎಂದು ಪ್ರಸಿದ್ದಿಯಾದ ಪಂಪನು
ಇಮ್ಮಡಿ ಅರಿಕೇಸರಿಯ ಆಸ್ಥಾನದಲ್ಲಿದ್ದನು. ಗದ್ಯ & ಪದ್ಯ
ಮಿಶ್ರಿತ ಚಂಪೂ ಶೈಲಿಯಲ್ಲಿ ಕೃತಿಗಳನ್ನು ರಚಿಸಿದ ಪಂಪನು ಕನ್ನಡದ ರತ್ನತ್ರಯರಲ್ಲಿ ಒಬ್ಬನು.ಉಳಿದವರುಗಳೆಂದರೆ - ಪೊನ್ನ & ರನ್ನ.[ ಕನ್ನಡದ ರತ್ನತ್ರಯರು ಪಂಪ,ಪೊನ್ನ & ರನ್ನ]
* ಪಂಪನು ಆದಿಪುರಾಣ & ವಿಕ್ರಮಾರ್ಜುನ ವಿಜಯ
ಎಂಬ ಎರಡು ಮೇರು ಕೃತಿಗಳನ್ನು ರಚಿಸಿದವನು.
ಪಂಪನ ಮೊದಲ ಕೃತಿ ಆದಿಪುರಾಣವಾಗಿದ್ದು, ಜೈನ ಧರ್ಮದ ಮೊದಲ ತೀರ್ಥಂಕರ ವೃಷಭನಾಥನ ಜೀವನದ ಕಥೆಯನ್ನು ತಿಳಿಸುವ ಚಂಪೂ ಕಾವ್ಯವಾಗಿದೆ.ಇದೊಂದು ಧಾರ್ಮಿಕ ಕಾವ್ಯ. ವಿಕ್ರಮಾರ್ಜುನ ವಿಜಯ ಎಂಬುದು ಲೌಕಿಕ ಕಾವ್ಯವಾಗಿದ್ದು ಪಂಪಭಾರತ ಎಂದು ಪ್ರಸಿದ್ದಿಯಾಗಿದೆ.
13) ಪಾರ್ಲಿಮೆಂಟ್‌ನ ಜಾಯಿಂಟ್ ಸೆಷನ್‌ನ ಅಧ್ಯಕ್ಷತೆ
ವಹಿಸುವವರು ಯಾರು?
ಎ) ರಾಷ್ಟ್ರಪತಿ
ಬಿ) ಉಪರಾಷ್ಟ್ರಪತಿ
ಸಿ) ಡೆಪ್ಯುಟಿ ಸ್ಪೀಕರ್
ಡಿ) ಸ್ಪೀಕರ್
ಉತ್ತರ:- ಸ್ಪೀಕರ್
ವಿವರಣೆ:- ಪಾರ್ಲಿಮೆಂಟಿನ ಜಂಟಿ ಅಧಿವೇಶನ (ಜಾಯಿಂಟ್ ಸೆಷನ್)ದ ಅಧ್ಯಕ್ಷತೆಯನ್ನು ಲೋಕಸಭಾ ಸಭಾಪತಿಗಳು ವಹಿಸುತ್ತಾರೆ. ಕೆಲವು ಮಸೂದೆಗಳ ಮಂಡನೆ ಸಂದರ್ಭದಲ್ಲಿ ಎರಡು ಸದನಗಳ ನಡುವೆ ಬಿಕ್ಕಟ್ಟು ಉಂಟಾದಾಗ 2ನೇ ಸದನಗಳ ನಡುವಿನ ಬಿಕ್ಕಟ್ಟನ್ನು ಹೋಗಲಾಡಿಸಲು ರಾಷ್ಟ್ರಪತಿಗಳು 108ನೇ ವಿಧಿ ಅನ್ವಯ ಜಂಟಿ ಸಭೆಯನ್ನು ಕರೆಯಬಹುದಾಗಿದೆ. ಜಂಟಿ
ಸಭೆಯ ಅಧ್ಯಕ್ಷತೆಯನ್ನು ಲೋಕಸಭೆಯ ಸಭಾಪತಿಗಳು
ವಹಿಸುತ್ತಾರೆ. ಮುಖ್ಯ ಕಾರ್ಯದರ್ಶಿಗಳು ಅವರ ಸಹಾಯಕರಾಗಿರುತ್ತಾರೆ. ಜಂಟಿ ಸಭೆಯು ಲೋಕಸಭೆಯ
ನಿಯಮಾವಳಿಗನುಸಾರ ನಡೆಯುತ್ತದೆ. 2 ಸದನಗಳು
ಹಾಜರಿರುವ ಒಟ್ಟು ಸದನದಲ್ಲಿ ಬಹುಮತದಿಂದ
ಹಾಗೂ ಮತದಾನದಿಂದ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಜಂಟಿ ಸಭೆಯಲ್ಲಿ ಲೋಕಸಭೆಯು ಪ್ರಬಲವಾಗಿರುತ್ತದೆ. ಕಾರಣ ಲೋಕಸಭೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಿರುತ್ತದೆ.
💥ಭಾರತದಲ್ಲಿ ಜಂಟಿ ಅಧಿವೇಶನ ತರದ ಸಂದರ್ಭಗಳು💥
●1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಮಸೂದೆ ಸಂದರ್ಭದಲ್ಲಿ
●1978ರಲ್ಲಿ ಬ್ಯಾಂಕಿಂಗ್ ಸೇವಾ ಆಯೋಗ ಸಂಬಂಧಿಸಿದ
ಮಸೂದೆ ಸಂದರ್ಭದಲ್ಲಿ
●2002ರಲ್ಲಿ ಪೋಟಾ(POTA-Prevention of Terrorism Act) ಕಾಯ್ದೆಯು ಲೋಕಸಭೆಯಲ್ಲಿ ಅಂಗೀಕಾರವಾಗಿ ರಾಜ್ಯ ಸಭೆಯಲ್ಲಿ ತಿರಸ್ಕೃತಗೊಂಡ
ಸಂದರ್ಭದಲ್ಲಿ ಜಂಟಿ ಸಭೆಯ ಮೂಲಕ ಮಸೂದೆಯನ್ನು
ಅಂಗೀಕರಿಸಲಾಯಿತು.
ಡೆಪ್ಯೂಟಿ ಸ್ಪೀಕರ್: ಭಾರತದ ಸಂವಿಧಾನದ 95ನೇ ವಿಧಿಯಲ್ಲಿ
ತಿಳಿಸಿರುವಂತೆ ಲೋಕಸಭಾ ಸಭಾಪತಿಗಳ ಸ್ಥಾನ ಆಕಸ್ಮಿಕ ಕಾರಣದಿಂದ ಖಾಲಿಯಾದ ಸಂದರ್ಭದಲ್ಲಿ ಲೋಕಸಭೆಯ ಉಪಸಭಾಪತಿಯು ಅಧ್ಯಕ್ಷರ ಕರ್ತವ್ಯವನ್ನು ನಿರ್ವಹಿಸುತ್ತಾರೆ.
14) ಕೆಳಗಿನ ಯಾವ ಇಂಡಸ್ಟ್ರಿ ಬಾಕ್ಸೈಟ್ ನ್ನು ಕಚ್ಚಾ
ವಸ್ತುವಾಗಿ ಉಪಯೋಗಿಸುತ್ತದೆ.
ಎ) ಅಲ್ಯೂಮಿನಿಯಂ
ಬಿ) ಸಿಮೆಂಟ್
ಸಿ) ಜೂಟ್
ಡಿ) ಸ್ಟೀಲ್
ಉತ್ತರ:- ಅಲ್ಯೂಮಿನಿಯಂ
ವಿವರಣೆ:- ಅಲ್ಯೂಮಿನಿಯಂ ಕೈಗಾರಿಕೆಗಳಲ್ಲಿ
ಬಾಕ್ಸೈಟ್ ಅದಿರನ್ನು ಕಚ್ಚಾವಸ್ತುವಾಗಿ ಉಪಯೋಗಿಸಲಾಗುತ್ತದೆ. ಭಾರತದಲ್ಲಿ ಅಲ್ಯೂಮಿನಿಯಂ ಕೈಗಾರಿಕೆಗೆ ಬೇಕಾದ ಪ್ರಮುಖ ಬಾಕ್ಸೈಟ್ ಅದಿರು ಹೇರಳವಾಗಿ ದೊರೆಯುವುದರಿಂದ ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ. ಮೊಟ್ಟ ಮೊದಲ ಬಾರಿಗೆ 1944 ರಲ್ಲಿ ಪಶ್ಚಿಮ ಬಂಗಾಳದ ಅಸನ್ ಸೋಲ್ ಬಳಿ ಇರುವ ಜಯಕಾ ನಗರದಲ್ಲಿ ಅಲ್ಯೂಮಿನಿಯಂ
ಕಂಪನಿಯನ್ನು ಸ್ಥಾಪಿಸಲಾಯಿತು.ಅಲ್ಯೂಮಿನಿಯಂ ಲೋಹವನ್ನು ಬಾಕ್ಸೈಟ್ ಅದಿರಿನಿಂದ ಉತ್ಪಾದಿಸಲು 2 ಹಂತದ ಸಂಸ್ಕರಣೆಯನ್ನು ಮಾಡಲಾಗುತ್ತದೆ.
1ನೇ ಹಂತ: ಬಾಕ್ಸೈಟ್ ಅದಿರಿನಿಂದ ಅಲ್ಯೂಮಿನ
ಪಡೆಯುವರು.
2ನೇ ಹಂತ: ಅಲ್ಯೂಮಿನವನ್ನು ಸಂಸ್ಕರಿಸಿ ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸಲಾಗುತ್ತದೆ.
#ಬಡವರ ಬೆಳ್ಳಿ ಎಂದು ಕರೆಯಲ್ಪಡುವ ಅಲ್ಯೂಮಿನಿಯಂ ಒಂದು ಹಗುರ ಲೋಹ ಹಾಗೂ ಕಡಿಮೆ ಬೆಲೆಯ ಲೋಹವಾಗಿದೆ.ತುಕ್ಕು ನಿರೋಧಕ ಮತ್ತು ಉತ್ತಮ ವಿದ್ಯುತ್ ವಾಹಕ ಹೊಂದಿರುವ ಬಹುಪಯೋಗಿ ಲೋಹವಾಗಿದೆ. ಈ ಲೋಹವನ್ನು ವಿಮಾನ ತಯಾರಿಕೆಯಿಂದ ಹಿಡಿದು ಗೃಹೋಪಯೋಗಿ ವಸ್ತುಗಳಾಗಿ ಬಳಸುತ್ತಾರೆ. ಒಡಿಶಾ ರಾಜ್ಯವು ಬಾಕ್ಸೈಟ್ ಅದಿರು ನಿಕ್ಷೇಪ ಹಾಗೂ
ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.ಕರ್ನಾಟಕದಲ್ಲಿ
ಬೆಳಗಾವಿ ಜಿಲ್ಲೆಯಲ್ಲಿ ಅಲ್ಯೂಮಿನಿಯಂ ಅದಿರನ್ನು ಉತ್ಪಾದಿಸುತ್ತಿದ್ದು, ಅದನ್ನು ಬೆಳಗಾವಿ ಅಲ್ಯೂಮಿನಿಯಂ
ಕಾರ್ಖಾನೆಯಲ್ಲಿ ಸಂಸ್ಕರಿಸಲಾಗುತ್ತಿದೆ.ಭಾರತವು ಪ್ರಪಂಚದ ಉತ್ತಮ ದರ್ಜೆಯ ಬಾಕ್ಸೈಟ್ ಅದಿರನ್ನು ಉತ್ಪಾದಿಸುತ್ತಿದೆ.
ಅಲ್ಯೂಮಿನಿಯಂನ ಇತರ ಅದಿರುಗಳು:-ಡಯಾಸ್‌ಪೋರೆ, ಗಿಬ್ಸೈಟ್, ಬ್ರೋಮೈಟ್.
15) ಕಯ್ಯಾರ ಕಿಞ್ಞಣ್ಣ ರೈ ಅವರ ಕಾವ್ಯನಾಮ
ಎ) ರಘುಸುತ
ಬಿ) ಸೀತಾತನಯ
ಸಿ) ದುರ್ಗದಾಸ
ಡಿ) ರಸಋಷಿ
ಉತ್ತರ:- ದುರ್ಗದಾಸ
ವಿವರಣೆ:- ಕಯ್ಯಾರ ಕಿಞ್ಞಣ್ಣ ರೈ ಅವರ ಕಾವ್ಯನಾಮ ದುರ್ಗದಾಸ, ಇವರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿ ಜನಿಸಿದ್ದಾರೆ. ಮಂಗಳೂರಿನ ಸ್ವದೇಶಾಭಿಮಾನಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು.ಇವರ ಸಾಹಿತ್ಯ ರಚನೆಗಳು: ಶ್ರೀಮುಖ, ಐಕ್ಯಗಾನ,ಪುನರ್ನವಚೇತನ, ಪಂಚಮೀ, ಮಹಾಕವಿ ಕುಮಾರನ್ ಆಶಾನರ ಮೂರು ಖಂಡಕಾವ್ಯಗಳು,ಕೊರಗ ಮತ್ತು ಕೆಲವು ಕವನಗಳು, ಶತಮಾನದಗಾನ, ಗಂಧವತೀ, ಪ್ರತಿಭಾ ಪಯಸ್ವಿನಿ, ಮೊದಲಾದ ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.
* ರತ್ನರಾಶಿ (ಜೀವನ ಚರಿತ್ರೆ), ಲಕ್ಷ್ಮೀಶನ ಕಥೆಗಳು,ಅನ್ನದೇವರು ಮತ್ತು ಇತರ ಕಥೆಗಳು, ಪರಶುರಾಮ ಎಂ.ಬಿ. ಶೆಟ್ಟಿ (ಜೀವನ ಚರಿತ್ರೆ), ಕನ್ನಡದ ಶಕ್ತಿ ಗಡಿನಾಡ ಕಿಡಿ (ಸಂಪಾದನೆ), ಮೊದಲಾದ ಗದ್ಯನಾಟಕಗಳು,ವಿರಾಗಿಣಿ ಎಂಬುದು ನಾಟಕ ಹಾಗೂ ನವೋದಯ ವಾಚನಮಾಲೆ (ಎಂಟು ಭಾಗಗಳು) ಮಕ್ಕಳಿಗಾಗಿ ರಚಿಸಿದ ಸಾಹಿತ್ಯ, ದುಡಿತವೇ ನನ್ನ ದೇವರು ಎಂಬ ಆತ್ಮಕಥೆ ಹೀಗೆ ಅನೇಕ ರೀತಿಯಲ್ಲಿ ಬರೆದಿದ್ದಾರೆ.
* 1997ರಲ್ಲಿ ಮಂಗಳೂರಿನಲ್ಲಿ ಜರುಗಿದ 66ನೇ ಅಖಿಲ
ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
🔰🔰
0 Comments