ESSAY FOR PSI ASPIRANTS
ಎಲ್.ಪಿ. ಜಿ ಮತ್ತು ಆರ್ಥಿಕ ನ್ಯಾಯ
🥏🥏🥏
♦️ಎಲ್.ಪಿ. ಜಿ ಮತ್ತು ಆರ್ಥಿಕ ನ್ಯಾಯ♦️
ಪೀಠಿಕೆ :-ಎಲ್.ಪಿ.ಜಿ ಎಂದರೇನು ? ಉದಾರೀಕರಣ, ಖಾಸಗೀಕರಣ, ಜಾಗತೀಕರಣದಲ್ಲಿ ಸರ್ಕಾರದ ಪಾತ್ರವೇನು ? ಖಾಸಗಿ ಕಂಪನಿ ಹಾಗೂ ಸರ್ಕಾರದ ಕಂಪನಿಗಳಲ್ಲಿನ ವ್ಯತ್ಯಾಸವೇನು ? ಆರ್ಥಿಕ ವ್ಯವಸ್ಥೆಯಲ್ಲಿ ಖಾಸಗಿ ಕಂಪನಿಯಿಂದ ದೇಶಕ್ಕೆ ಆಗುವ ಅನುಕೂಲಗಳುಗಳೇನು? ಆರ್ಥಿಕ ಅಭಿವೃದ್ಧಿಯಿಂದ ನಿರುದ್ಯೋಗಗಳನ್ನು ಹೇಗೆ ಹೋಗಲಾಡಿಸಬಹುದು. ಉದ್ಯೋಗದಿಂದ ಬಡತನವನ್ನು ನೀಗಿಸಿ ಆರ್ಥಿಕತೆಯಲ್ಲಿ ಶ್ರೀಮಂತ ಮತ್ತು ಬಡವನೆಂಬ ಬೇಧ ಭಾವವಿಲ್ಲದೆ, ದೇಶದಲ್ಲಿ ಆರ್ಥಿಕ ನ್ಯಾಯವನ್ನು ಹೇಗೆ ಒದಗಿಸಬೇಕು. ಸಂಮಿಶ್ರ ಆರ್ಥಿಕ ವ್ಯವಸ್ಥೆ ಎಂದರೇನು ? ಬಂಡವಾಳಶಾಹಿತ್ವ ತೆರಿಗೆ ಪದ್ಧತಿಯಲ್ಲಿ ಸುಧಾರಣೆಯನ್ನು ಹೇಗೆ ಮಾಡಬೇಕು. ಎಲ್.ಪಿ.ಜಿ ಯ ದುಪರಿಣಾಮಗಳೇನು ? ಎಲ್.ಪಿ.ಜಿ ಯಿಂದ ಹೇಗೆ ಆರ್ಥಿಕ ನ್ಯಾಯ ದೊರಕಿದೆ?
🥏🥏🥏
ವಿಷಯ ನಿರೂಪಣೆ :-ಇಂದು ಆರ್ಥಿಕ ಉದಾರೀಕರಣ ಮತ್ತು ಖಾಸಗೀಕರಣವು ವಿಶ್ವದಾದ್ಯಂತ ಜನಪ್ರಿಯವಾಗುತ್ತಿದೆ. ವಿಶ್ವದೆಲ್ಲೆಡೆ ಸ್ವೀಕಾರವಾಗುತ್ತಿರುವ ಆರ್ಥಿಕ ಬೆಳವಣಿಗೆಯು ಆರ್ಥಿಕ ವಿಚಾರವಾಹಿನಿಯೇ ಆಗಿದೆ. ಕ್ಯಾಂಡಲ್ ಫಿಟ್ಟಗೆರಾತ್‌ರವರ ಪ್ರಕಾರ ಖಾಸಗೀಕರಣವೆಂದರೆ ಉತ್ಪಾದಿಸುವ ಆಯ್ಕೆಯ ಆವಿಷ್ಕರಿಸುವ ಮತ್ತು ಉತ್ಕರ್ಷ ಸಾಧಿಸುವ ಸ್ವಾತಂತ್ರ್ಯವೆಂದರ್ಥ. ಖಾಸಗೀಕರಣವೆಂದರೆ ಸರ್ಕಾರದ ಕೆಲಸ ಕಾರ್ಯಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವುದು. ಉದಾಹರಣೆಗೆ ಸರ್ಕಾರದ ಸಾರಿಗೆ ಸಂಸ್ಥೆಯು ಸೋರಿಕೆಯ ಸಂಸ್ಥೆಯಾಗಿತ್ತು. ಆರ್ಥಿಕ ಸುಧಾರಣೆ ತರುವ ಕ್ರಮದಿಂದ ಕ್ರಿ.ಶ.1991 ರಲ್ಲಿ ಪ್ರಧಾನ ಮಂತ್ರಿಯಾದ ಪಿ.ವಿ.ನರಸಿಂಹರಾವ್ ರವರು ಕೆಲವು ನಿಯಮ ಮತ್ತು ನಿರ್ಭಂದಗಳನ್ನು ಸಡಿಲಗೊಳಿಸಿ ತಿದ್ದುಪಡಿ ಮಾಡಿದರು.ನೋ ಪ್ರಾಫಿಟ್ ನೋ ಲಾಸ್ (No profit No loss) ನಿಂದ ಸ್ವಲ್ಪ ಲಾಭದಾಯವಾಗುವ ಹಾದಿಯನ್ನು ನೋಡುವಂತಾಯಿತು.21 ಜೂನ್ 1991 ರಲ್ಲಿ 22ನೇ ಕೇಂದ್ರ ಹಣಕಾಸು ಮಂತ್ರಿಯಾಗಿ ಡಾ|| ಮನ್‌ಮೋಹನ್ ಸಿಂಗ್‌ರವರನ್ನು ನೇಮಿಸಿದ ಮೇಲೆ 16 ಮೇ 1996 ರವರೆಗೆ ಆರ್ಥಿಕವಾಗಿ ಭಾರತ ಸರ್ಕಾರದಲ್ಲಿ ಚೇತರಿಕೆ ಕಾಣುವಂತಾಯಿತು. ನಂತರ ಮೇ23 2004 ರಲ್ಲಿ ಪ್ರಧಾನ ಮಂತ್ರಿಯಾಗಿ ತಮ್ಮ ಕಾರ್ಯ ನಿರ್ವಹಿಸಿದರು. ಸಮ್ಮಿಶ್ರ ಆರ್ಥಿಕ ವ್ಯವಸ್ಥೆಯ ನೀತಿಯಿಂದಾಗಿ ಆರ್ಥಿಕತೆಯಲ್ಲಿ ಹೆಚ್ಚಿನ ಲಾಭಗಳಿಸುವಂತಾಯಿತು. ಆರ್ಥಿಕ ವ್ಯವಸ್ಥೆಯಲ್ಲಿ ಖಾಸಗಿ ಕಂಪನಿಗೆ ಆದ್ಯತೆ ನೀಡುವುದರ ಮೂಲಕ ನಮ್ಮ ದೇಶಿಯ ಕಂಪನಿಗಳಾದ ಇನ್‌ಫೋಸಿಸ್,ಬಜಾಜ್ ರಿಲೆಯನ್, ಬಿ.ಎಸ್.ಎನ್.ಎಲ್ ಕಂಪನಿಗಳ ಜೊತೆ ಜೊತೆ ಜಿಯೋ, ಖಾಸಗಿ ಹಾಗೂ ಸರ್ಕಾರಿ ಕಂಪನಿಯು ಜೊತೆಗೂಡಿತು. ಮಾರುಕಟ್ಟೆಯಲ್ಲಿ ಎರಡರ ಮಧ್ಯ ಸ್ಪರ್ಧೆ ಏರ್ಪಡ ತೊಡಗಿತು. ಆರ್ಥಿಕ ಸಮಸ್ಯೆಗಳಿಗೆ ಖಾಸಗೀಕರಣವೇ ಪರಿಹಾರವೆಂಬ ಭಾವನೆಯನ್ನು ಹುಟ್ಟಿಸಲು ಕೇಂದ್ರ ಸರ್ಕಾರವು ಪ್ರಯತ್ನಿಸಿತು. ಕೇಂದ್ರ ಸರ್ಕಾರ ನೇಮಿಸಿದ ಅರ್ಜುನ ಸೇನಾಗುಪ್ತ ಸಮಿತಿ ಹೆಚ್ಚು ಪ್ರಾಧ್ಯಾನತೆ ಇಲ್ಲದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವಂತೆ ಸಲಹೆ ನೀಡಿತು. 2015-16ನೇ ಕೇಂದ್ರ ಬಜೆಟ್‌ನಲ್ಲಿ ಸಚಿವ ಅರುಣ್ ಜೇಟ್ಲರವರು ದೇಶದ ಪ್ರಮುಖ ಬಂದರನ್ನು ಖಾಸಗೀಕರಣ ಮಾಡುವ ಪ್ರಸ್ತಾಪ ಮಾಡಿದ ಹಿನ್ನಲೆಯಲ್ಲಿ ಐದು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ಮಾಡಿದವು. ಖಾಸಗೀ ಕಂಪನಿಗಳು ತಮ್ಮದೇ ಆದ ಗುರಿ ಹೊಂದಿದ್ದು ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವುದು ಕಡಿಮೆ ಬೆಲೆ, ಉತ್ತಮ ಗುಣಮಟ್ಟದ ವಸ್ತುಗಳನ್ನು ಖಾಸಗೀ ಕಂಪನಿಯು ಒದಗಿಸಿತು. ಇದರಿಂದ ಹೊಸ ಹೊಸ ಉದ್ಯಮಗಳು ಪ್ರಾರಂಭವಾದವು. ವಿನೂತನ ಆವಿಷ್ಕಾರಗಳು, ನೂತನ ತಂತ್ರಗಾರಿಕೆ ಖಾಸಗಿ ಕಂಪನಿಯಿಂದ ದೊರೆಯಿತು.
🥏🥏🥏
ಉದ್ಯೋಗಾವಕಾಶದಲ್ಲಿ ಹೆಚ್ಚಳ (Rise in Employment opportunities) ಬಹು ರಾಷ್ಟ್ರೀಯ ಕಂಪನಿಗಳು ಬಂಡವಾಳವನ್ನು ಹೂಡುವುದರ ಮೂಲಕ ಬಡ ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಬೃಹತ್ ಪ್ರಮಾಣದ ಕೈಗಾರಿಕೆಗಳನ್ನು, ಸಂಸ್ಥೆಗಳನ್ನು ಹಾಗೂ ಕಾರ್ಖಾನೆಗಳನ್ನು ಆರಂಭಿಸಲಾಗುತ್ತದೆ.ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.ಖಾಸಗಿ ಕಂಪನಿಗಳು ತಮ್ಮ ಬಂಡವಾಳಗಳನ್ನು ವಿವಿಧ ಬಗೆಯಲ್ಲಿ ಷೇರು, ಡಿಬೆಂಚರ್, ಈಕ್ವಿಟಿ ಮುಂತಾದ ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡುವುದರ ಮೂಲಕ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಖಾಸಗೀಕರಣ ಕೋರ್ಸ್ ನೀಡಿ ಅಲ್ಲಿಂದ ಹೊರಬರುವ ಪದವಿಧದರಿಗೆ ಉತ್ತಮ ಉದ್ಯೋಗಾವಕಾಶ ನೀಡಿ ಆರ್ಥಿಕತೆಯನ್ನು ಹೆಚ್ಚಿಸಬಹುದಾಗಿದೆ.ಮಾಡಿ ಹಲವಾರು ಕ್ರೀಯಾಶೀಲತೆಯ ಬೆಳವಣಿಗೆಯ ಪ್ರತೀಕವೇ ಜಾಗತೀಕರಣವಾಗಿದೆ. ಮಾನವರ ಬಯಕೆ, ಬೇಡಿಕೆಗಳನ್ನು ಯಾವುದೇ ನಿರ್ಬಂದವಿಲ್ಲದೆ ಈಡೇರಿಸಿಕೊಳ್ಳಲು ನಡೆಸಿದ ಆವಿಷ್ಕಾರವೇ ಜಾಗತೀಕರಣಕ್ಕೆ ಕಾರಣವಾಗಿದೆ. ದೇಶದ ಆರ್ಥಿಕತೆಯನ್ನು ವಿಶ್ವದ ಆರ್ಥಿಕತೆಯೊಂದಿಗೆ ಸಂಯೋಜಿಸುವುದು..1991 ರ ನಂತರ ಭಾರತದ ಆರ್ಥಿಕ ನೀತಿ ಧೋರಣೆಯಲ್ಲಿ ವಿಶ್ವಬ್ಯಾಂಕ್, ಅಂತರ ರಾಷ್ಟ್ರೀಯ ಹಣಕಾಸು ನಿಧಿ ಮೊದಲಾದ ಹಣಕಾಸಿನ ಸಂಸ್ಥೆಗಳು ಪ್ರತಿಪಾದಿಸಿದ ಸಮಗ್ರ ಆರ್ಥಿಕತೆಯು ಹೊಂದಾಣಿಕೆಯ ನೀತಿಗಳಿಗೆ ಅನುಗುಣವಾಗಿ ಬದಲಾವಣೆಗೆ ತರಲಾಗಿದ್ದು ಜಾಗತೀಕರಣ ಪ್ರವೃತ್ತಿಗೆ ಪೂರಕವಾಗಿವೆ. Closed Economy ಮುಚ್ಚಲ್ಪಟ್ಟ ಆರ್ಥಿಕ ವ್ಯವಸ್ಥೆ ದೇಶದಲ್ಲಿ
ಪ್ರಾರಂಭವಾಗ ತೊಡಗಿತು. ವಿದೇಶದಿಂದ ಬರುತ್ತಿದ್ದ ಆಮದನ್ನು ರದ್ದುಗೊಳಿಸಿ ನಮ್ಮ ಸ್ವದೇಶದಲ್ಲಿ ಖಾಸಗಿ ಕಂಪನಿಯು ಉತ್ಪಾದಿಸ ತೊಡಗಿತು. ಹೆಚ್ಚು ಹೆಚ್ಚು ಉತ್ಪಾದನೆಯಾಗಿ ನಾವೇ ಹೊರ ದೇಶಗಳಿಗೆ ರಫ್ತ ಮಾಡುವ ಮಟ್ಟಕ್ಕೆ ಜಾಗತೀಕರಣವಾಗ ತೊಡಗಿತು.
ITBT, MNC (ಮಲ್ಟಿನ್ಯಾಶನಲ್ ಕಂಪನಿ) 1991ರ ನರಸಿಂಹರಾವ್‌ರವರ ಮುಕ್ತ ಆರ್ಥಿಕ ವ್ಯವಸ್ಥೆಯ ನೀತಿಯಿಂದ ಪ್ರಾರಂಭಗೊಂಡವು ಹೆಚ್ಚಿನ ಬಹುರಾಷ್ಟ್ರೀಯ ಕಂಪನಿಗಳ ಉಗಮವಾಗ. ತೊಡಗಿತು. ಇದರಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಅದೇ ರೀತಿ ಹೈದರಾಬಾದ್‌ನಲ್ಲೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹೆಚ್ಚಿನ ಉದ್ಯೋಗವಕಾಶದ ಜೊತೆಗೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸ ತೊಡಗಿತು.
🥏🥏🥏
ಬಂಡವಾಳಶಾಹಿತ್ವ :-L.P.G ಉದಾರಿಕರಣ + ಖಾಸಗೀಕರಣ + ಜಾಗತೀಕರಣ ದಿಂದ ದೇಶದ ಸಂಪತ್ತು ಹೆಚ್ಚಾಗ ತೊಡಗಿತು. ಸಂಪತ್ತೆಲ್ಲಾ ಖಾಸಗಿ ಕಂಪನಿಗಳಿಗೆ ಸೇರಿ ಶ್ರೀಮಂತರ ಕೈಯಲ್ಲಿ ಸಂಪತ್ತುಗಳೆಲ್ಲಾ ಕೇಂದ್ರಿಕರಣವಾಗುವಂತಾಯಿತು. ಆರ್ಥಿಕ ಶೋಷಣೆ
ಹೆಚ್ಚಾಯಿತು. ದುಡಿಮೆಗೆ ತಕ್ಕ ಪ್ರತಿಫಲ ದೊರೆಯದಂತಾಯಿತು. ಆಗ ಪ್ರಧಾನಮಂತ್ರಿ ನರೇಂದ್ರ ಮೋದಿರವರು ಸ್ವಾವಲಂಬನೆ ಆತ್ಮನಿರ್ಭರಭಾರತ Make in India ಇದರಿಂದ ಸ್ವದೇಶದಲ್ಲೇ ನಮಗೆ ಅವಶ್ಯಕವಾದ ಸರಕುಗಳನ್ನು ನಾವೇ ಉತ್ಪಾದಿಸುವುದರಿಂದ ಆಮದಾಗಿ ತರಿಸಿಕೊಳ್ಳುವ ಟ್ರಾನ್ಸ್ಪೋರ್ಟ್ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಈಗ ನಮ್ಮ ದೇಶದಲ್ಲಿ ಯುದ್ಧಕ್ಕೆ ಬೇಕಾದ ಮದ್ದುಗುಂಡು, ಶಸ್ತ್ರಾಸ್ತ್ರಗಳು ಹಾಗೂ ಸಮವಸ್ತ್ರವೆಲ್ಲವನ್ನು ನಮ್ಮ ಭಾರತವೇ ಉತ್ಪಾದಿಸುವುದರಿಂದ ನಮ್ಮ ಅವಶ್ಯಕತೆಯನ್ನು ನಾವೇ ಪೂರೈಸಿಕೊಳ್ಳುವ ಶಕ್ತಿಯು ಬಂದಿರುವುದು ಹೆಮ್ಮೆಯ ವಿಷಯವಾಗಿದೆ.
🥏🥏🥏
ತೆರಿಗೆ ಪದ್ಧತಿಯಲ್ಲಿ ಸುಧಾರಣೆ :- ಬಡ ಮತ್ತು ಮಾಧ್ಯಮ ವರ್ಗಗಳ ಜನತಿಗೆ ತೆರಿಗೆಯಲ್ಲಿ ವಿನಾಯಿತಿಯನ್ನು ನೀಡಬೇಕು.ಪ್ರೋಗ್ರೆಸಿವ್ (ಪ್ರಗತಿಪರ ತೆರಿಗೆ) ಭಾರತವೇ ಅಧಿಕ ತೆರಿಗೆ ಕಟ್ಟುತ್ತಿರುವ ದೇಶವಾಗಿದೆ. ಹೆಚ್ಚಿಗೆ ತೆರಿಗೆ ವಿಧಿಸುವುದರಿಂದ ಅಪ್ರಮಾಣಿಕತೆ ಹೆಚ್ಚತೊಡಗಿದೆ. ತೆರಿಗೆ ನೀಡಲು ಸಾಧ್ಯವಾಗದೆ ಸರ್ಕಾರಕ್ಕೆ ವಂಚನೆ ಮಾಡಲು ಪ್ರಜೆಗಳು (ಜನತೆಯು) ಮುಂದಾಗುತ್ತಿದ್ದಾರೆ. ಇದರ ನಿವಾರಣೆಗಾಗಿ ಆರ್ಥಿಕ ತಜ್ಞರು ಮತ್ತು ಪ್ರಧಾನಮಂತ್ರಿರವರು ಆರ್ಥಿಕ ಸಲಹಾ ಮಂಡಳಿಯನ್ನು ನೀತಿ ಆಯೋಗ ಸ್ಥಾಪಿಸಿದರು. NGO (Non Government Oraganization) , NITI (National Institution for
Transforming India) ಆಯೋಗದ ಪ್ರಕಾರ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಒಳಗೊಂಡಿದೆ. ಸಂಪಾದನೆಯ (ಗಳಿಕೆಯಲ್ಲಿ) 5- 10 % ತೆರಿಗೆ ಸರ್ಕಾರ ವಿಧಿಸಿದರೆ ಪ್ರಜೆಗಳು ಪ್ರಾಮಾಣಿಕವಾಗಿ ತೆರಿಗೆಯನ್ನು ಸರ್ಕಾರಕ್ಕೆ ಸಂದಾಯ ನೀಡುವರು. ಆದರೆ ಬಂದ ಲಾಭದಲ್ಲಿ 50-60% ತೆರಿಗೆ ವಿಧಿಸಿದರೆ ಜನತೆಯು ತೆರಿಗೆ ಕಳ್ಳತನ ಮಾಡುವುದರಲ್ಲಿ ಯಾವ ಅನುಮಾನವು ಇಲ್ಲ ಆದ್ದರಿಂದ ತೆರಿಗೆ ಪದ್ಧತಿಯಲ್ಲಿ ಸುಧಾರಣೆ ನೀತಿಯನ್ನು ಜಾರಿಗೆ ತರಬೇಕು.
🥏🥏🥏
ದುಷ್ಪರಿಣಾಮಗಳು :- ಜಾಗತೀಕರಣ, ಉದಾರೀಕರಣ, ಖಾಸಗೀಕರಣ,ಸಾರ್ವಜನಿಕ ಮತ್ತು ಹೊಡೆತದಲ್ಲಿ ವಲಯದ ಉದ್ದಿಮೆಗಳು ಮುಚ್ಚಿಹೋಗುತ್ತಿದ್ದು ಅಸಂಘಟಿತವಲಯ ಹಿಗ್ಗುತ್ತಿದೆ. ಖಾಸಗೀಕರಣ ನೀತಿ ಪ್ರಭಾವದಿಂದ ವಿದೇಶಿ ಒತ್ತಡ ನಮ್ಮ ಮೇಲೆ ಹೆಚ್ಚಾಗುತ್ತಿದೆ. ಇದು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅನೇಕ ಆತಂಕ ಹಾಗೂ ಸಮಸ್ಯೆಯನ್ನು ತಂದಿದೆ.ಜಾಗತೀಕರಣದ ಪ್ರಭಾವದಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಹೆಚ್ಚಾಗಿ ಭಾರತದ ಸರಕುಗಳು ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಸ್ಪರ್ಧಿಸಲಾಗದೆ “ಚೇಳಿನ ಮಂತ್ರ ಬಾರದವನು ಹಾವಿನ ಬುಟ್ಟಿಗೆ ಕೈ ಹಾಕಿದಂತೆ” ಎಂಬ ನಾಣ್ಣುಡಿಯಂತೆ ಅಸಹಾಯಕತೆ ಹಾಗೂ ಸಂಕಷ್ಟಕ್ಕೆ ಸಿಲುಕಿದೆ.
🥏🥏🥏ಉಪಸಂಹಾರ :-ಸರ್ಕಾರವು ತಮ್ಮ ಯೋಜನೆಗಳ ಅನುಷ್ಠಾನಗೊಳಿಸಲು, ಕಾಲಾವಕಾಶ ತೆಗೆದುಕೊಳ್ಳುವುದರ ಬದಲು ಖಾಸಗಿ ಕಂಪನಿಗಳಿಗೆ ವರ್ಗಾಯಿಸಿದರೆ ಸಾರ್ವಜನಿಕರಿಗೆ ಸಹಾಯವಾಗುತ್ತದೆ. ಜಾಗತೀಕರಣದಿಂದ ನವೀನ ಜೀವನ ಶೈಲಿಯನ್ನು ನೋಡಬಹುದಾಗಿದೆ. ಜಾಗತೀಕರಣದಿಂದ ದೂರವಾಣಿ ದೂರದರ್ಶನ ತಂತ್ರಜ್ಞಾನ ಗಣಕಯಂತ್ರ ಮುಂತಾದವುಗಳ ಉಪಯೋಗವು ಜಾಗತೀಕರಣದಿಂದಲೇ ಅಮೇರಿಕಾದ ಮಾಜಿ ಅಧ್ಯಕ್ಷರಾದ ಜಾನ್ ಆಫ್ ಕೆನಡಿ ರವರು ಈ ರೀತಿ ಹೇಳಿದ್ದಾರೆ ರಾಷ್ಟ್ರವು ನನಗೆ ಏನು ಕೊಟ್ಟಿದೆ ಎಂದು ಕೇಳಬೇಡಿ? ನಾನು ಏನು ರಾಷ್ಟ್ರಕ್ಕೆ ಕೊಟ್ಟಿದ್ದೇವೆ ಎಂಬುದನ್ನು ಕೇಳಿ", ಜಪಾನ್ ದೇಶವು 2ನೇ ಮಹಾಯುದ್ಧದಲ್ಲಿ ಸಂಪೂರ್ಣವಾಗಿ ಸೋತು ನಾಶ ಹೊಂದಿತ್ತು. ಆದರೆ L.P.G ಯಿಂದ 40 ವರ್ಷಗಳಲ್ಲಿ ಶ್ರೀಮಂತ ರಾಷ್ಟ್ರವಾಗಿ ನಮ್ಮ ಭಾರತಕ್ಕೆ 1 ಲಕ್ಷ ಕೋಟಿ ರೂಪಾಯಿಯನ್ನು ಸಾಲವಾಗಿ(ಬುಲೆಟ್ ಟ್ರೇನ್ ಯೋಜನೆ) ನೀಡಿದೆ ಎಂದರೆ ಅಚ್ಚರಿಯ ಸಂಗತಿಯಲ್ಲವೆ? ನಮಗೆ L.P.G ಯಿಂದ ಉದಾರೀಕರಣ, ಖಾಸಗೀಕರಣ,ಜಾಗತೀಕರಣ ಆರ್ಥಿಕನ್ಯಾಯ ಸ್ವಲ್ಪಮಟ್ಟಿಗೆ ದೊರೆತಿದೆ ಎಂದರೆ ತಪ್ಪಾಗಲಾರದು.
🥏🥏🥏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
🥏🥏🥏
0 Comments