Ad Code

Ticker

6/recent/ticker-posts

Click Below Image to Join Our Telegram For Latest Updates

General Science Notes With Question Answers For All Competitive Exams/ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು

General Science Notes With Question Answers For All  Competitive Exams

ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು

General Science Notes With Question Answers For All  Competitive Exams/ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು

💠💠
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸ್ನೇಹಿತರೇ ಸಾಮಾನ್ಯ ವಿಜ್ಞಾನದ  ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ ವಿಷಯವಾದ್ದರಿಂದ ಅಪಲೋಡ ಮಾಡಲಾಗುತ್ತದೆ. ನೋಟ್ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ.
💠💠

General Science Notes With Question Answers For All  Competitive Exams

ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು

🦜 ಅರಿಶಿಣದ ಹಳದಿ ಬಣ್ಣಕ್ಕೆ ಕಾರಣವಾದ ಸಂಯುಕ್ತ ಯಾವುದು?

🦋 ಕರ್ ಕ್ಯುಮಿನ್.

🦜 ಅರಿಶಿಣದ ಪುಡಿಯನ್ನು ಸುಣ್ಣದ ಜೊತೆಗೆ ಬೆರೆಸಿದಾಗ ಕೆಂಪು ಬಣ್ಣಕ್ಕೆ ತಿರುಗಲು ಕಾರಣವೇನು?

🦋 ಅರಿಶಿಣದ ಹಳದಿ ಬಣ್ಣಕ್ಕೆ "ಕರ್ ಕ್ಯುಮಿನ್" ಸಂಯುಕ್ತದ ಇರುವಿಕೆಯೇ ಕಾರಣವಾಗಿದೆ.  ಹೈಡ್ರಾಕ್ಸಿಲ್ ಗುಂಪುಗಳು ಇದರಲ್ಲಿರುವುದರಿಂದ ಸಂಯುಕ್ತವು ಸ್ವಲ್ಪ ಆಮ್ಲೀಯ ಗುಣವನ್ನು ಹೊಂದಿದೆ.

ಈ ಆಮ್ಲೀಯ ಸಂಯುಕ್ತವು ಆಮ್ಲೀಯ ಮಾಧ್ಯಮದಲ್ಲಿ ಯಾವುದೇ ರೀತಿಯ ಅಣು ಬದಲಾವಣೆ ಕಾಣಲಾರದು. ಆದರೆ ಪ್ರತ್ಯಾಮ್ಲೀಯ ಮಾಧ್ಯಮದಲ್ಲಿ ಬದಲಾವಣೆಯನ್ನು ತೋರುತ್ತದೆ.

ಸುಣ್ಣವು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಆಗಿದ್ದು‌ ಪ್ರತ್ಯಾಮ್ಲೀಯ ಲಕ್ಷಣವನ್ನು ಹೊಂದಿದೆ. ಹಾಗಾಗಿ ಅರಿಶಿಣದ ಪುಡಿಯು ಕೆಂಪು ಬಣ್ಣಕ್ಕೆ ತಿರುಗುತ್ತದೆ.

🦜 ತಾವರೆಯ ಎಲೆಯ ಮೇಲೆ ನೀರು ಅಂಟಿಕೊಳ್ಳದಿರಲು ಕಾರಣವೇನು?

🦋 ಆ ಎಲೆಗಳ ಮೇಲಿರುವ "ಕ್ಯುಟಿಕಲ್ ಪದರ" ( ಇದು ಮೇಣದಂತಹ ವಸ್ತುಗಳ ಪದರ).

🦜 ಉಷ್ಣತಾ ಮಾಪಕದಲ್ಲಿ ಪಾದರಸವನ್ನು ಬಳಸಲು ಕಾರಣವೇನು?

🦋 ಉಷ್ಣತಾಮಾಪಕದಲ್ಲಿ ಪಾದರಸ ಬಳಸಲು ಕಾರಣ ಅದರ ಹೊಳೆಯುವ ಗುಣ. ಪಾದರಸವು 40° ಯಿಂದ 360° ವರೆಗೆ ದ್ರವರೂಪದಲ್ಲಿಯೆ ಇರುತ್ತದೆ. ಪಾದರಸವು ಗಾಜಿಗೆ ಅಂಟುವುದಿಲ್ಲ. ಗಾಜಿನಲ್ಲಿ ಇದು ಅಪಾರದರ್ಶಕವಾಗಿದ್ದು ಅದರ ಮಟ್ಟವನ್ನು ಸುಲಭವಾಗಿ ಗುರುತಿಸಬಹುದು. 

ಪಾದರಸವು ಒಳ್ಳೆಯ ಉಷ್ಣವಾಹಕವಾಗಿದ್ದು ಸಂಪರ್ಕದ ವಸ್ತುಗಳ  ಉಷ್ಣತೆಯನ್ನು ಶೀಘ್ರವಾಗಿ ಗ್ರಹಿಸಬಲ್ಲದು. ಇದರ ಗ್ರಾಹೋಷ್ಣ ಕಡಿಮೆ ಇದ್ದು ವ್ಯತ್ಯಾಸಕ್ಕೂ ಪ್ರತಿಕ್ರಿಯೆ ನೀಡುವುದಕ್ಕೆ ಉಷ್ಣತಾಮಾಪಕದಲ್ಲಿ ಬಳಸಲಾಗುತ್ತದೆ.

💠💠

🦜 ರಕ್ತ ಕೆಂಪಾಗಿರಲು ಕಾರಣ?

🦋 ಹಮೋಗ್ಲೋಬಿನ್ ವರ್ಣಕ.

🦜 ಸೂರ್ಯನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಅನಿಲ ಯಾವುದು?

🦋 ಜಲಜನಕ (71%)

🦜 ಮರಳುಗಾಡಿನಲ್ಲಿ ಮರೀಚಿಕೆ ಕಂಡುಬರಲು ಕಾರಣ?

🦋 ಸಂಪೂರ್ಣ ಆಂತರಿಕ ಪ್ರತಿಫಲನ.

🦜 ಜೇನುತುಪ್ಪ ನಿಧಾನವಾಗಿ ಹರಿಯಲು ಕಾರಣವೇನು?

🦋 ಜೇನುತುಪ್ಪ ಹೆಚ್ಚು ಸ್ನಿಗ್ಧತೆ( ವಿಸ್ಕಾಸಿಟಿ) ಹೊಂದಿದೆ. ವಿಸ್ಕಾಸಿಟಿಯನ್ನು ದಿನ ನಿತ್ಯದಲ್ಲಿ ದಪ್ಪ ಎಂದು ಕರೆಯುತ್ತಾರೆ.ನೀರು ತೆಳುವಾದುದ್ದರಿಂದ ಸ್ನಿಗ್ಧತೆ ಕಡಿಮೆ ಇದೆ‌. ಎಣ್ಣೆ, ಜೇನುತುಪ್ಪ ದಪ್ಪ ಆದುದ್ದರಿಂದ ಅದರ "ವಿಸ್ಕಾಸಿಟಿ" ಹೆಚ್ಚಾಗಿರುತ್ತದೆ. 

🦜 ಕೂದಲುಗಳು ಬೆಳ್ಳಗಾಗಲು ಕಾರಣವೇನು?

🦋 ಮಲಾನಿನ್ ವರ್ಣಕ.

🦜 ಬಾವಲಿಗಳು ಉಂಟು ಮಾಡುವ ಶಬ್ದದ ಅಲೆಗಳು ಯಾವುವು?

🦋 ಅಲ್ಟ್ರಾಸಾನಿಕ್.

🦜‌ ನೀರಿನಲ್ಲಿ ಭಾರವಾದ ವಸ್ತುಗಳನ್ನು ಮೇಲೆ ಎತ್ತುವುದು ಸುಲಭ ಹೇಗೆ?

🦋 ಒಂದು ವಸ್ತುವನ್ನು ನೀರಿನಲ್ಲಿ ಮುಳುಗಿಸಿದಾಗ ಮೇಲ್ಮೈ ಸೆಳೆತ( Upward thrust) ಉಂಟಾಗುವುದರಿಂದಾಗಿ ಸುಲಭವಾಗಿ ಮೇಲೆ ಎತ್ತಬಹುದು.

🦜 ಅತಿ ಹೆಚ್ಚು ವಿದ್ಯುತ್ ವಾಹಕ ಲೋಹ ಯಾವುದು?

🦋 ಬಳ್ಳಿ. ಆದರೆ ತಾಮ್ರ ಮತ್ತು ಅಲ್ಯೂಮಿನಿಯಂ ನ್ನು ವಿದ್ಯುನ್ಮಂಡಲದಲ್ಲಿ ಬಳಸುತ್ತಾರೆ.

🦜 ಸೋಡಿಯಂ ಮತ್ತು ಪೊಟ್ಯಾಸಿಯಂ ನ್ನು ಸೀಮೆ ಎಣ್ಣೆಯಲ್ಲಿ ಸಂಗ್ರಹಿಸಲು ಕಾರಣವೇನು?

🦋 ಸೋಡಿಯಂ ಮತ್ತು ಪೊಟ್ಯಾಸಿಯಂ ಕ್ರಿಯಾಶೀಲ ಮೂಲವಸ್ತು ಹಾಗೂ ಮೃದು ಲೋಹಗಳು, ವಾತಾವರಣದ ಗಾಳಿಯಲ್ಲಿ ವರ್ತಿಸುವುದರಿಂದ ಈ ಎರಡೂ ಲೋಹಗಳನ್ನು ಸೀಮೆ ಎಣ್ಣೆಯಲ್ಲಿ ಸಂಗ್ರಹಿಸುತ್ತಾರೆ‌.

💠💠

🦜 ಶಾಯಿ ಪೆನ್ನನ್ನು ಎತ್ತರದ ಪ್ರದೇಶಕ್ಕೆ ತೆಗೆದುಕೊಂಡು ಹೋದರೆ ಶಾಯಿಯು ತಾನಾಗಿಯೇ ಹೊರ ಚೆಲ್ಲುವುದೇಕೆ?

🦋 ನಾವು ಎತ್ತರದ ಪ್ರದೇಶಕ್ಕೆ ಹೋದಂತೆಲ್ಲಾ ವಾಯುವಿನ ಸಾಂದ್ರತೆ ಹಾಗೂ ಒತ್ತಡ ಎರಡೂ ಕಡಿಮೆಯಾಗುತ್ತದೆ. ಆಗ ಶಾಯಿ ಪೆನ್ನಿನ ಒಳಗಡೆಯಿರುವ ವಾಯುವಿನ ಒತ್ತಡ ಹೆಚ್ಚಾಗಿ ಶಾಯಿ ಹೊರಚೆಲ್ಲುತ್ತದೆ.

🦜 ಅರೆವಾಹಕಗಳು ಎಂದರೇನು? ಉಪಯೋಗವೇನು?

🦋 ಕಲವು ಮೂಲ ವಸ್ತುಗಳು ಸ್ವಲ್ಪ ಪ್ರಮಾಣದಲ್ಲಿ ಲೋಹ ಮತ್ತು ಅಲೋಹ ಗುಣಗಳನ್ನು ಹೊಂದಿರುವುದಕ್ಕೆ ಅರೆವಾಹಕಗಳು ಎನ್ನುವರು. ಉದಾ: ಅಯೋಡಿನ್, ಸಿಲಿಕಾನ್ ಮತ್ತು ಜರ್ಮೇನಿಯಂ.ಇವುಗಳು ಅರೆವಾಹಕಗಳಾಗಿರುವುದರಿಂದ ಎಲೆಕ್ಟ್ರಾನ್ ಕ್ಷೇತ್ರದಲ್ಲಿ ಬಳಸುತ್ತಾರೆ.

🦜 ಚಂದ್ರನ ಮೇಲೆ ವಸ್ತುವಿನ ತೂಕವು ಭೂಮಿಯ ಮೇಲಿನ ತೂಕಕ್ಕಿಂತ ಕಡಿಮೆ ಇರಲು ಕಾರಣವೇನು?

🦋 ಚಂದ್ರನ ಗುರುತ್ವಾಕರ್ಷಣ ಬಲವು ಭೂಮಿಗಿಂತ ಕಡಿಮೆ ಇರುತ್ತದೆ. ಹಾಗಾಗಿ ಭೂಮಿಯ ಮೇಲೆ ವಸ್ತುವಿನ ತೂಕದ 1/6 ರಷ್ಟು ಭಾಗ ಕಡಿಮೆ ತೂಕ ಚಂದ್ರನಲ್ಲಿ ಕಂಡುಬರುತ್ತದೆ.

🦜 ತೈಲ ಮತ್ತು ನೀರು ಮಿಶ್ರಣಗೊಳ್ಳುವುದಿಲ್ಲ, ಕಾರಣವೇನು?

🦋 ತೈಲದ ಅಣುಗಳು ನೀರಿನ ಅಣುಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹಾಗಾಗಿ ಸುಲಭವಾಗಿ ಬೆರೆಯುವುದಿಲ್ಲ. ನೀರಿನ ಅಣುಗಳು ಧೃವೀಯವಾಗಿರುತ್ತವೆ. ಅಂದರೆ ಆ ಅಣುಗಳ ಭಿನ್ನ ದೃವಗಳಲ್ಲಿ ಧನ‌ ಮತ್ತು ಋಣ ಆವೇಶಗಳನ್ನು ಕಾಣಬಹುದು. ಆದರೆ ಈ ಗುಣವನ್ನು ತೈಲ ಹೊಂದಿರುವುದಿಲ್ಲ. ಈ ಕಾರಣದಿಂದಲೇ ಅವು ಮಿಶ್ರಣ ಹೊಂದುವುದಿಲ್ಲ.

🦜 ಬೇಳೆಯನ್ನು ನೀರಿನಲ್ಲಿ ಹಾಕಿ ಕುದಿಸುವಾಗ ಆ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಲು ಹೇಳುವುದು ಏಕೆ?

🦋 ನೀರಿಗೆ ಉಪ್ಪನ್ನು ಹಾಕುವುದರಿಂದ ಅದರ ಕುದಿಯುವ ಬಿಂದು ಹೆಚ್ಚಾಗುತ್ತದೆ, ಆದ್ದರಿಂದ ಬೇಳೆ ಬೇಗ ಬೇಯಲು ಸಹಕರಿಸುತ್ತದೆ.

🦜 ಮದು ಕಬ್ಬಿಣವನ್ನು ವಿದ್ಯುತ್ಕಾಂತವಾಗಿ ಏಕೆ ಬಳಸಲಾಗುತ್ತದೆ ?

🦋 ತಂತಿಯ ಸುರುಳಿಯಲ್ಲಿ ವಿದ್ಯುತ್ ಹರಿಯುತ್ತಿರುವಷ್ಟು ಕಾಲ ಮಾತ್ರ ಮೆದು ಕಬ್ಬಿಣವು ಆಯಸ್ಕಾಂತದಂತೆ ವರ್ತಿಸುತ್ತದೆ. ವಿದ್ಯುತ್ ಹರಿಯುವಿಕೆಯು ನಿಂತೊಡನೆಯೇ ಅದು ತನ್ನ ಆಯಸ್ಕಾಂತೀಯ ಗುಣವನ್ನು ಕಳೆದುಕೊಳ್ಳುತ್ತದೆ. ಈ ತತ್ವದ ಆಧಾರದ ಮೇಲೆ ವಿದ್ಯುತ್ ಕರೆಗಂಟೆಗಳಲ್ಲಿ ಬಳಸಲಾಗುತ್ತದೆ.

🦜 ಆಕಾಶ ನೀಲಿಯಾಗಿರುವುದೇಕೆ?

🦋 ನೇರಳೆ ಮತ್ತು ನೀಲಿ ಬಣ್ಣ ಕಡಿಮೆ ಅಲೆಯುದ್ದ( Short wavelength) ನ್ನು ಹೊಂದಿರುವುದರಿಂದ ವಾಯುಮಂಡಲದಲ್ಲಿ ಹೆಚ್ಚು ಚದುರುತ್ತದೆ. ಆದ್ದರಿಂದ ಆಕಾಶ ನೀಲಿಯಾಗಿ ಕಾಣುತ್ತದೆ.

🦜 ಕಲವು ದ್ರವಗಳಿಗೆ ಬೆಂಕಿ ಹಿಡಿಯುತ್ತದೆ ಮತ್ತು ಕೆಲವಕ್ಕೆ ಹಿಡಿಯುವುದಿಲ್ಲ, ಕಾರಣವೇನು?

🦋 ದರವದಲ್ಲಿನ ಅಣುಗಳು ವಾತಾವರಣದಲ್ಲಿನ ಆಕ್ಸಿಜನ್ ನೊಂದಿಗೆ ಜೊತೆಗೂಡಿ ಉಷ್ಣವನ್ನು ಉತ್ಪಾದಿಸಲು ‌ಸಾಧ್ಯವಾದರೆ ಅಂತಹ ದ್ರವವು ಬೆಂಕಿ ಹಿಡಿಯುತ್ತದೆ.

💠💠

🦜 ರಾಕೇಟ್ ಉಡಾಯಿಸುವುದು ಯಾವ ತತ್ವವನ್ನು ಆಧರಿಸಿದೆ?

🦋 ನಯೂಟನ್ ಚಲನೆಯ 3 ನೇ ತತ್ವವನ್ನು ಆಧರಿಸಿದೆ. ರಾಕೇಟ್ ಉಡಾವಣೆಯಲ್ಲಿ ಕೆಳಮುಖವಾಗಿ ಚಿಮ್ಮುವ ಇಂಧನವು ಅಷ್ಟೇ ಮೇಲ್ಮುಖ ಬಲದೊಂದಿಗೆ ರಾಕೇಟ್ ಮೇಲೇರುವುದು.

🦜 ಕರೆ ಬಾವಿ ನೀರನ್ನು ಶುದ್ಧೀಕರಿಸುವ ವಿಧಾನ ಯಾವುದು?

🦋 ಕರೆ ಬಾವಿಗಳ ನೀರು ರೋಗಾಣುಗಳಿಂದ ಕೂಡಿರುವುದರಿಂದ ಕುಡಿಯಲು ಯೋಗ್ಯವಾಗಿರುವುದಿಲ್ಲ, ಕುದಿಸುವಿಕೆ, ಪ್ರತಿಕ್ಷೇಪಣಾ ವಿಧಾನ ( Coagulation method), ಬ್ಲೀಚಿಂಗ್ ಪೌಡರ್ ಸೇರಿಸುವುದರ ಮೂಲಕ ಶುದ್ಧೀಕರಿಸಬಹುದು.

🦜 ಸದೆಯನ್ನು ಬೆಂಕಿಯಲ್ಲಿ ಸುಡುವಾಗ ಚಟಪಟ ಸಿಡಿಯಲು ಕಾರಣವೇನು?

🦋 ಸದೆಯ ರಂಧ್ರಗಳಲ್ಲಿ ವಿವಿಧ ಅನಿಲಗಳು ಇರುವುದರಿಂದ ಸೌದೆ ಉರಿಯುವಾಗ ಚಟಪಟ ಸಿಡಿಯುವ ಶಬ್ದವನ್ನುಂಟು ಮಾಡುತ್ತದೆ.

🦜 ಒಂದು ಮರದ ತುಂಡು ಹಾಗೂ ಕಬ್ಬಿಣದ ಗುಂಡನ್ನು ಏಕಕಾಲದಲ್ಲಿ ನಿರ್ವಾತ ಪ್ರದೇಶದಲ್ಲಿ ಮೇಲಿಂದ ಬಿಟ್ಟಾಗ ಯಾವುದು ಮೊದಲು ಭೂಮಿಯನ್ನು ತಲುಪುತ್ತದೆ?

🦋 ಭೂಮಿಯ ಗುರುತ್ವಾಕರ್ಷಣೆ ಎರಡೂ ವಸ್ತುಗಳ ಮೇಲೂ ಒಂದೇ ಆಗಿರುತ್ತದೆ. ನಿರ್ವಾತದಲ್ಲಿ ಅದಕ್ಕೆ ವಾಯುವಿನ ಪ್ರತಿರೋಧವಿಲ್ಲದಿರುವುದರಿಂದ ಎರಡೂ ವಸ್ತುಗಳು ಒಂದೇ ವೇಗದಲ್ಲಿ ನೆಲಕ್ಕೆ ಬೀಳುತ್ತವೆ.

🦜 "ನೀರಿನ ಅಸಂಗತ ವಿಕಾಸ" ಎಂದರೇನು?

🦋 ಯಾವುದೇ ವಸ್ತು ಉಷ್ಣ ನೀಡಿದಾಗ ವಿಕಾಸವಾಗುತ್ತದೆ ಮತ್ತು ಉಷ್ಣ ಕಡಿಮೆ ಮಾಡಿದಾಗ ಸಂಕೂಚನವಾಗುತ್ತದೆ. ಆದರೆ ನೀರು ಮಾತ್ರ 0° ಯಿಂದ 4° ವರೆಗೆ ಉಷ್ಣಾಂಶ ಹೆಚ್ಚಿಸಿದಾಗ ವಿಕಸನವಾಗುವ ಬದಲು ಸಂಕೂಚನವಾಗುತ್ತದೆ. ಹಾಗೂ 4° ಯಿಂದ 0° ಗೆ ಉಷ್ಣಾಂಶ ಕಡಿಮೆ ಮಾಡಿದಾಗ ಸಂಕುಚನವಾಗುವ ಬದಲು ವಿಕಸನವಾಗುತ್ತದೆ.  ಇಂತಹ ನೀರಿನ ಗುಣವನ್ನು ಅಸಂಬದ್ಧ ವಿಕಾಸ ( Anamoulus Expansion) ಎನ್ನುವರು. ನೀರಿನ ಗರಿಷ್ಠ ಸಾಂದ್ರತೆ ಇರುವುದು 4° ಸೆಂಟಿಗ್ರೇಡ್ ನಲ್ಲಿ.

🦜 ನರ್ವಾತ ಪ್ರದೇಶದಲ್ಲಿ ಶಬ್ದ ಕೇಳದಿರಲು ಕಾರಣವೇನು?

🦋 ಕಾರಣ ಶಬ್ದ ಪ್ರಸಾರಕ್ಕೆ ಮಾಧ್ಯಮ ಅವಶ್ಯಕ, ಶಬ್ದದ ಅಲೆಗಳು ಉದ್ದ ಅಲೆಗಳು ಆದ್ದರಿಂದ ಇವುಗಳ ಪ್ರಸಾರಕ್ಕೆ ಮಾಧ್ಯಮ ಅವಶ್ಯಕ.

🦜 ನಕ್ಷತ್ರಗಳು ಮಿನುಗಲು ಕಾರಣವೇನು?

🦋 ನಕ್ಷತ್ರಗಳಿಂದ ಬರುವ ಬೆಳಕು ವಾಯುಮಂಡಲದ ಹಲವು ಪದರಗಳನ್ನು ಹಾದು ಬರುತ್ತದೆ‌. ಸಾಂದ್ರತೆ ಭಿನ್ನವಾಗಿರುವುದರಿಂದ ವಕ್ರೀಭವನ ( Refraction) ಆಧಾರದ ಮೇಲೆ ನಕ್ಷತ್ರಗಳು ಮಿನುಗುತ್ತವೆ.

💠💠

🦜 ಮರಳುಗಾಡಿನಲ್ಲಿ ಮರಿಚಿಕೆ ಕಂಡುಬರಲು  ಕಾರಣ?

🦋 ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ ತತ್ವದ ಆಧಾರದ ಮೇಲೆ ಮರಳುಗಾಡಿನಲ್ಲಿ ಮರಿಚಿಕೆ ಕಂಡುಬರುತ್ತದೆ.

🦜 ಬೆಳಕಿನ ವಕ್ರೀಭವನ ( Light refraction) ದ ಅನ್ವಯಗಳಾವುವು?

🦋 👉 ಓರೆಯಾಗಿ ನೀರಿನಲ್ಲಿ ಮುಳುಗಿಸಿದ ಪೆನ್ಸಿಲ್ ತುಂಡರಿಸಿದಂತೆ ಭಾಸವಾಗುತ್ತದೆ.

👉 ನೀರಿನಲ್ಲಿ ‌ಮುಳುಗಿದ ನಾಣ್ಯ ಮೇಲೇರಿದಂತೆ ಭಾಸವಾಗುತ್ತದೆ.

👉 ಸೂರ್ಯನ ಉದಯದ ಮುಂಚೆ ಮತ್ತು ಸೂರ್ಯಾಸ್ತವಾದ ನಂತರ ಬೆಳಕು ಕಾಣುವುದು.

👉 ನಕ್ಷತ್ರಗಳು ಮಿನುಗುವುದು.

👉 ಡರೈವಿಂಗ್ ಬೋರ್ಡ್ ಎತ್ತರಕ್ಕೆ ಬಂದಂತೆ ಭಾಸವಾಗುತ್ತದೆ.

👉 ಕೊಳದಲ್ಲಿರುವ ಮೀನು ದಡದಲ್ಲಿರುವ ವ್ಯಕ್ತಿಗೆ ಹತ್ತಿರದಲ್ಲಿರುವಂತೆ ಭಾಸವಾಗುತ್ತದೆ. ಅದೇ ಮೀನಿಗೆ ವ್ಯಕ್ತಿ ದೂರವಾದಂತೆ ಭಾಸವಾಗುತ್ತದೆ.

👉 ವಯಕ್ತಿ ಮತ್ತು ಮೀನು ಒಂದೇ ಮಾದ್ಯಮದಲ್ಲಿರುವಾಗ ಯಾವುದೇ ವ್ಯತ್ಯಾಸವಿರುವುದಿಲ್ಲ.

🦜 ಬಂದೂಕಿನಿಂದ ಗುಂಡು ಹಾರಿಸಿದ ವ್ಯಕ್ತಿ ತುಸು ಹಿಂದಕ್ಕೆ ಜರುಗುತ್ತಾನೆ ಕಾರಣವೇನು?

🦋 ಇದು ನ್ಯೂಟನ್ ಚಲನೆಯ ಮೂರನೇ ನಿಯಮದ ಮೇಲೆ ನಿಂತಿದೆ, ಬಂದೂಕಿನಿಂದ ನಿರ್ದಿಷ್ಟ ಸಂವೇಗದಿಂದ ಗುಂಡು ಹೊರ ಹೊರಟಾಗ ಅದಕ್ಕೆ ಸಮಾನವಾದ ಸಂವೇಗವು ಬಂದೂಕಿನ ವಿರುದ್ಧ ದಿಕ್ಕಿನಲ್ಲಿ ಬಂದೂಕಿನ ಮೇಲೂ ಉಂಟಾಗುತ್ತದೆ.  ಆದ್ದರಿಂದ ಗುಂಡು ಹಾರಿಸಿದ ವ್ಯಕ್ತಿ ತುಸು ಹಿಂದಕ್ಕೆ ಸರಿಯುತ್ತಾನೆ.

🦜 ಕಾಯದ ತೂಕ ಭೂಕೆಂದ್ರದಲ್ಲಿ ಶೂನ್ಯವಾಗಿರಲು ಕಾರಣವೇನು?

🦋 ಭೂ ಕೇಂದ್ರದಲ್ಲಿ  ಭೂ ತ್ಯಾಜ್ಯ ಮತ್ತು ವಸ್ತುವಿನ‌ ಮೇಲಿನ ಗುರುತ್ವಾಕರ್ಷಣೆ ಶೂನ್ಯವಾಗಿರುವುದರಿಂದ ವಸ್ತುವಿನ ತೂಕ ಶೂನ್ಯ ಬಾಗಿರುತ್ತದೆ.

🦜 ಭೂ ಮಧ್ಯ ರೇಖೆಯಲ್ಲಿ ವಸ್ತುವಿನ ತೂಕ ಕಡಿಮೆ ತೂಗಲು ಕಾರಣವೇನು?

🦋 ಭೂ ಮಧ್ಯ ರೇಖೆಯಲ್ಲಿ ಭೂ ತ್ಯಾಜ್ಯ ಕಡಿಮೆ ಇರುವುದರಿಂದ ಭೂ ಕೇಂದ್ರ ಹತ್ತಿರವಾಗಿರುವುದುರಿಂದ ವಸ್ತುವಿನ ತೂಕ ಕಡಿಮೆ ತೂಗುತ್ತದೆ.

🦜 ಟೀಪಾಯಿಯನ್ನು ಹಿಂದಿನಿಂದ ತಳ್ಳುತ್ತಾ ಉರುಳಿಸಿಕೊಂಡು ಹೋಗುವುದು ಸುಲಭ ಆದರೆ ಮೇಲಿಂದ ಎಳೆಯುತ್ತಾ ಮುಂದುವರೆಸುವುದು ಕಷ್ಟದಾಯಕ ಕಾರಣವೇನು?

🦋 ಉರುಳುವ ವಸ್ತುವಿನ ಘರ್ಷಣ ಬಲ ಕಡಿಮೆ, ಜಾರುವಾಗ ಬಳಕೆಯಾಗುವ ಘರ್ಷಣ ಬಲ ಹೆಚ್ಚು ಆದ್ದರಿಂದ ಮುಂದಕ್ಕೆ ಉರುಳಿಸಿಕೊಂಡು ಹೋಗುವುದು ಸುಲಭ.

💠💠

🦜 ಕಾಯವು ಭೂಮಧ್ಯ ರೇಖೆಗಿಂತ ಧೃವಗಳ ಬಳಿ ತುಸು ಹೆಚ್ಚುತ್ತದೆ, ಕಾರಣವೇನು?

🦋 ಭೂ ಮಧ್ಯ ರೇಖೆಗೆ ಹೋಲಿಸಿದರೆ ಧೃವಗಳು ಭೂ ಕೇಂದ್ರಕ್ಕೆ ಹತ್ತಿರವಾಗಿರುತ್ತದೆ. ಆದ ಕಾರಣ ಧೃವಗಳಲ್ಲಿ ಗುರುತ್ವಾಕರ್ಷಣ ಹೆಚ್ಚಿರುತ್ತದೆ. ಕಾಯವೊಂದರ ತೂಕ ಹೆಚ್ಚಾಗಲು ಭೂ ತ್ಯಾಜ್ಯ ಕಾರಣ.

🦜 ಬೇಸಿಗೆಯಲ್ಲಿ ನಾವು ಬೆವರಲು ಕಾರಣವೇನು?

🦋 ದೇಹದ ಉಷ್ಣಾಂಶವು ಹೆಚ್ಚಿದಾಗ ಬೆವರು ಬಿಡುಗಡೆಯಾದ ಬೆವರು ಗ್ರಂಥಿಗಳು ಉತ್ತೇಜನಗೊಳ್ಳುತ್ತವೆ. ಬೆವರು ದೇಹದ ಮೇಲಿಂದ ಆವಿಯಾಗಿ ಹೋಗುವಾಗ ದೇಹ ತಂಪಾಗಿ ಉಷ್ಣಾಂಶ ತುಸು ಕಡಿಮೆಯಾಗುತ್ತದೆ.

🦜 ಮಳೆಗೂ ಮುನ್ನ ಸಾಮಾನ್ಯವಾಗಿ ಬೆವರುವುದೇಕೆ?

🦋 ಮಳೆಗೂ ಮುನ್ನ ವಾತಾವರಣದಲ್ಲಿ ಆರ್ಧ್ರತೆಯ ಪ್ರಮಾಣವು ತೀವ್ರವಾಗಿ ಹೆಚ್ಚುತ್ತದೆ, ಇದರಿಂದಾಗಿ ಮಳೆಗೂ ಮುನ್ನ ದೇಹದಿಂದ ಬೆವರು ಉಂಟಾಗುತ್ತದೆ.

🦜 ಶುದ್ಧ ನೀರು ಕುಡಿಯಲು ಯೋಗ್ಯವಲ್ಲ, ಏಕೆ?

🦋 ಶುದ್ಧ ನೀರಿನಲ್ಲಿ ಉಪಯುಕ್ತ ಲವಣಗಳು ಕರಗದಿರುವುದರಿಂದ ಶುದ್ಧ ನೀರು ಕುಡಿಯಲು ಯೋಗ್ಯವಲ್ಲ.

🦜 ಒಂದೇ ಉಷ್ಣತೆಯಲ್ಲಿರುವ ಎರಡು ವಸ್ತುಗಳ ನಡುವೆ ಶಾಖ ಪ್ರಸಾರವಾಗದಿರಲು ಕಾರಣವೇನು?

🦋 ಇದು ಉಷ್ಣಗತಿ ಶಾಸ್ತ್ರದ ಶೂನ್ಯ ನಿಯಮದ ತತ್ವವನ್ನು ಆಧರಿಸಿದೆ. ಒಂದೇ ಉಷ್ಣತೆಯಲ್ಲಿರುವ ಎರಡು ವಸ್ತುಗಳ ನಡುವೆ ಶಾಖ ಪ್ರಸಾರವಾಗುವುದಿಲ್ಲ ಅಥವಾ ಎರಡು ವಸ್ತುಗಳ ಉಷ್ಣತೆ ಒಂದೇ ಇದ್ದಾಗ ಪರಸ್ಪರ ಸಂಪರ್ಕದಲ್ಲಿದ್ದರೂ ಶಾಖ ಒಂದರಿಂದ ಇನ್ನೊಂದಕ್ಕೆ ಹರಿಯುವುದಿಲ್ಲ.

🦜 ತಮಿಂಗಲವನ್ನು "ಗ್ರೇಟೆಸ್ಟ್ ಡ್ರೈವರ್" ಎಂದು ಕರೆಯಲು ಕಾರಣ?

🦋 ತಮಿಂಗಲವು ಎರಡು ಗಂಟೆಗಳವರೆಗೆ ನೀರಿನ ಆಳದಲ್ಲಿಯೇ ಇರುತ್ತದೆ.   3000 ಮೀ. ಆಳದಲ್ಲಿ ಈಜಬಲ್ಲದು ಆದ್ದರಿಂದ ತಿಮಿಂಗಲವನ್ನು "ಗ್ರೇಟೆಸ್ಟ್‌ ಡ್ರೈವರ್" ಎಂದು ಕರೆಯಲಾಗುತ್ತದೆ.

🦜 ತಮಿಂಗಿಲವು ಯಾವ ರೂಪದಲ್ಲಿ ಆಹಾರ ಸಂಗ್ರಹಿಸುತ್ತದೆ?

🦋 ತಮಿಂಗಿಲ ಅಡಿಪೋಸ್ ಅಂಗಾಂಶದ ರೂಪದಲ್ಲಿ ಆಹಾರ ಸಂಗ್ರಹಿಸುತ್ತದೆ. ಈ ಅಂಗಾಂಶ ಹಸಿವು ದೇಹಕ್ಕೆ ಪುಷ್ಟಿಯನ್ನು ಒದಗಿಸುತ್ತದೆ.

🦜 ಸೈಕಲ್ ಚಾಲಕ ಸೈಕಲ್ ಚಲಿಸುವಾಗಿಗಿಂತ ಪ್ರಾರಂಭದಲ್ಲಿ ಹೆಚ್ಚು ಶಕ್ತಿ ಬಳಸಬೇಕಾಗುತ್ತದೆ , ಏಕೆ?

🦋 ಸೈಕಲ್ ಚಲಿಸಲು ಪ್ರಾರಂಭಿಸಬೇಕೆಂದರೆ‌ ಅದಕ್ಕೆ ಸಂವೇಗವನ್ನು ಒದಗಿಸಬೇಕು. ಆದ್ದರಿಂದ ಪ್ರಾರಂಭದಲ್ಲಿ ಹೆಚ್ಚಿನ ಶಕ್ತಿ ಒದಗಿಸಬೇಕು. ಒಂದು ಬಾರಿ ಸಂವೇಗ ಪಡೆದ ನಂತರ ಹೆಚ್ಚು ಶಕ್ತಿಯ  ಅವಶ್ಯಕತೆ ಇರುವುದಿಲ್ಲ.

💠💠

🦜 ಒಂಟೆ ಬೆನ್ನಿನ ದಿಬ್ಬದ ಗಾತ್ರ ಬದಲಾವಣೆಯಾಗಲು ಕಾರಣವೇನು?

🦋 ಒಂಟೆ ಬೆನ್ನಿನ ದಿಬ್ಬವು ಕೊಬ್ಬಿನಿಂದ ಕೂಡಿದ್ದು, ಒಂಟೆಗೆ ಹಸಿವಾದಾಗ ಕೊಬ್ಬು ಕರಗುತ್ತದೆ, ಆದ್ದರಿಂದ ಬೆನ್ನಿನ ದಿಬ್ಬದ ಗಾತ್ರ ಬದಲಾವಣೆಯಾಗುತ್ತದೆ.

🦜 ಧೂಮಕೇತುವಿನ ಬಾಲವು ಸೂರ್ಯನಿಂದ ದೂರ ಸರಿಯಲು ಕಾರಣವೇನು?

🦋 ಕೇಂದ್ರಾಭಿಮುಖ ಬಲದಿಂದ ಧೂಮಕೇತುವು ಸೂರ್ಯನ ಸುತ್ತ ವೃತ್ತಾಕಾರದಲ್ಲಿ ಚಲಿಸುತ್ತಿರುವಾಗ ಹೆಚ್ಚು ಸಾಂದ್ರತೆಯಿರುವ ತಲೆಯು ಸೂರ್ಯನ ಕಡೆಗೆ ಇದ್ದರೆ ಬಾಲವು ಸೂರ್ಯನಿಂದ ದೂರ ಸಾಗುತ್ತದೆ.

🦜 ತುಕ್ಕು ಹಿಡಿದ ಕಬ್ಬಿಣ ಹೆಚ್ಚು ತೂಕವಿರಲು ಕಾರಣವೇನು?

🦋 ಕಬ್ಬಿಣವು ವಾತಾವರಣದ ಆಮ್ಲಜನಕದೊಂದಿಗೆ ವರ್ತಿಸಿ ಕಬ್ಬಿಣದ ಆಕ್ಸೈಡ್ ಆಗಿ ತುಕ್ಕು ಹಿಡಿಯುತ್ತದೆ. ತುಕ್ಕು ಹಿಡಿದ ಕಬ್ಬಿಣದ ತೂಕ ಹೆಚ್ಚಾದಂತೆ ಹೆಚ್ಚಳವಾದ ತೂಕವು ಹೀರಲ್ಪಟ್ಟ ಆಮ್ಲಜನಕ ಪ್ರಮಾಣಕ್ಕೆ ಸಮವಾಗಿರುತ್ತದೆ.

🦜 ಹಸಿರು ಹುಲ್ಲಿನ ಮೇಲೆ ನೀಲಿ ಬೆಳಕನ್ನು ಹಾಯಿಸಿದಾಗ ಹುಲ್ಲು ಕಪ್ಪು ಬಣ್ಣಕ್ಕೆ ಕಾಣಲು ಕಾರಣವೇನು?

🦋 ಹಸಿರು ಹುಲ್ಲು ಹಸಿರು ಬಣ್ಣವನ್ನು ಹೊರತುಪಡಿಸಿ ಉಳಿದೆಲ್ಲಾ ಬಣ್ಣಗಳನ್ನು ಹೀರಿಕೊಳ್ಳುವುದರಿಂದ ಹುಲ್ಲು ಕಪ್ಪು ಬಣ್ಣಕ್ಕೆ ಕಾಣುತ್ತದೆ.

🦜 ಒಂದು ಸ್ವಚ್ಛ ಗಾಜಿನ ಮೇಲೆ ನೀರಿನ ಅಥವಾ ಪಾದರಸದ ಬಿಂದುವೊಂದನ್ನು ಹಾಕಿದಾಗ ಅದು ಯಾವಾಗಲೂ ವೃತ್ತಾಕಾರದ ರಚನೆಯಲ್ಲೇ ಬಿದ್ದಿರುತ್ತದೆ, ಏಕೆ?

🦋‌ ದ್ರವಗಳಲ್ಲಿ ಕಂಡುಬರುವ ಮೇಲ್ಮೈ ಆಕರ್ಷಣೆ ( Surfacetension) ಈ ಪ್ರಭಾವದ ಕಾರಣ ದ್ರವದ ಮೇಲ್ಮೈನ ಅಣುಗಳ ಜೊತೆಯಾಗಿ ಪೊರೆಯಂತೆ ವರ್ತಿಸುತ್ತವೆ. ಮೇಲ್ಮೈಯಲ್ಲಿರುವ ಅಣುಗಳು ಒಳಭಾಗದಲ್ಲಿರುವ ಅಣುಗಳ ಮೇಲೆ ಒತ್ತಡ ಹೇರಿ, ಸಾಧ್ಯವಾದಷ್ಟು ಕಡಿಮೆ ಗಾತ್ರದಲ್ಲಿ ಇರುವಂತೆ ಮಾಡುತ್ತವೆ. ಆದ್ದರಿಂದ, ನೀರಿನ ಬಿಂದು ಗೋಳಾಕಾರದಲ್ಲಿರುತ್ತದೆ.

🦜 ಧೂಮವು ಗಾಳಿಯಲ್ಲಿ ಸುರುಳಿ - ಸುರುಳಿಯಾಗಿ ಮೇಲೇರುವುದೇಕೆ?

🦋 ಧೂಮವು ಬಿಸಿ ಅನಿಲಗಳನ್ನು ಹೊಂದಿರುತ್ತದೆ. ಅವು ಹಗುರವಾಗುವುದರಿಂದ ಗಾಳಿಯಲ್ಲಿ ಮೇಲೇರುತ್ತವೆ.  ಗಾಳಿಯಲ್ಲಿನ ಆವರ್ತ ಪ್ರವಾಹದ ಪರಿಣಾಮದಿಂದಾಗಿ ಧೂಮವು ಸುರುಳಿ - ಸುರುಳಿಯಾಗಿ ಮೇಲೇರುತ್ತದೆ.

🦜 ವದ್ಯುತ್ ಬಲ್ಬನ್ನು ಒಡೆದರೆ ಅದು ಭೀಕರವಾಗಿ ಸಿಡಿಯುವುದೇಕೆ?

🦋 ವದ್ಯುತ್ ಬಲ್ಬ್ ನ ಒಳಭಾಗದಲ್ಲಿ ನಿರ್ವಾತವನ್ನು ಏರ್ಪಡಿಸಿರುತ್ತಾರೆ. ಬಲ್ಬನ್ನು ಒಡೆದಾಗ ಸುತ್ತಲಿನ ವಾಯು ಆ ನಿರ್ವಾತ ಪ್ರದೇಶಕ್ಕೆ ನುಗ್ಗುವುದರಿಂದ ಸಿಡಿಯುವಿಕೆ ಉಂಟಾಗುತ್ತದೆ.

🦜 ವದ್ಯುತ್ ಹೀಟರ್ ಗಳ ಘಟಕವನ್ನು ತಯಾರಿಸಲು ತಾಮ್ರದ ತಂತಿಯನ್ನು ಏಕೆ ಬಳಸುವಂತಿಲ್ಲ?

🦋 ತಾಮ್ರವು 1083°c ಕರಗಿ ವಾತಾವರಣದಲ್ಲಿನ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿ ಕಪ್ಪು ಪುಡಿಯನ್ನು ರೂಪಿಸುತ್ತದೆ.‌ಆದರೆ ಹೀಟರ್ ನ ಉದ್ದೇಶವು ಉಷ್ಣವನ್ನು ಒದಗಿಸುವುದರಿಂದ ಬಳಸಲಾಗುವ ಲೋಹವು ಹೆಚ್ಚಿನ ರೋಧವನ್ನು ಹೊಂದಿರಬೇಕಾಗುತ್ತದೆ.

💠💠

🦜 ಎತ್ತರದ ‌ಪ್ರದೇಶದಗಳಲ್ಲಿ‌ ಉಸಿರಾಟ ಕಷ್ಟವಾಗಲು ಕಾರಣವೇನು?

🦋 ಎತ್ತರದ ಪ್ರದೇಶದಲ್ಲಿ ಕಡಿಮೆ ವಾಯುವಿನ ಒತ್ತವಿರುತ್ತದೆ ಹಾಗೂ ಆಮ್ಲಜನಕದ ಪ್ರಮಾಣ ಕಡಿಮೆಯಾಗಿರುತ್ತದೆ. ಆದ್ದರಿಂದ ಎತ್ತರದ ಪ್ರದೇಶಗಳಲ್ಲಿ ಉಸಿರಾಟ ಕಷ್ಟದಾಯಕ.

🦜 ನೀರಿನಲ್ಲಿರುವ ಭಾರವಾದ ವಸ್ತುವನ್ನು ಮೇಲೆತ್ತಲು ಸುಲಭ ಕಾರಣವೇನು?

🦋 ನೀರಿನ ಮೇಲ್ಮೈ ಎಳೆತ (Upward - thrust) ಉಂಟಾಗಿ ಆರ್ಕಿಮಿಡೀಸ್ ತತ್ವದನ್ವಯ ಕಡಿಮೆಯಾದ ತೂಕದಷ್ಟೇ ಪ್ರಮಾಣದ ನೀರು ಹೊರಹೊಮ್ಮುವುದರಿಂದ ನೀರಿನಲ್ಲಿ ಸುಲಭವಾಗಿ ಭಾರವಾದ ವಸ್ತುವನ್ನು ಮೇಲೆತ್ತಬಹುದು.

🦜 ನದಿಯಿಂದ ಸಮುದ್ರಕ್ಕೆ ಪ್ರವೇಶಿಸಿದ ಹಡಗು ತಕ್ಷಣ ಮೇಲೇರಲು ಕಾರಣವೇನು?

🦋 ಸಮುದ್ರ ನೀರಿನ ಸಾಂದ್ರತೆ ನದಿ ನೀರಿನ ಸಾಂದ್ರತೆಗಿಂತ ಅಧಿಕವಾಗಿರುತ್ತದೆ.

🦜 ಸಾಮಾನ್ಯ ಗಾಜಿನ ಲೋಟದೊಳಕ್ಕೆ ಅತಿ ಬಿಸಿ ದ್ರವವನ್ನು ಸುರಿದರೆ ಅದು ಬಿರುಕು ಬಿಡಲು ಕಾರಣವೇನು?

🦋 ಗಾಜಿನ ಲೋಟದೊಳಗೆ ಬಿಸಿ ನೀರನ್ನು ಸುರಿದಾಗ ಒಳಪದರವು ಹಿಗ್ಗುತ್ತದೆ. ಆದರೆ‌ ಗಾಜಿನ ಹೊರ ಪದರಕ್ಕೆ ಉತ್ತೇಜನದ ಕಾರಣ ಹಿಗ್ಗುವುದಿಲ್ಲ. ಈ ಎರಡು ಪದರಗಳ ನಡುವಿನ ಹಿಗ್ಗುವಿಕೆಯ ವ್ಯತ್ಯಯದಿಂದ ಗಾಜಿನ ಲೋಟ ಬಿರುಕು ಬಿಡುತ್ತದೆ.

🦜 ಹಾಲು ಹುಳಿಯಾಗಲು ಕಾರಣವೇನು?

🦋 ಹಾಲಿನಲ್ಲಿ ಲ್ಯಾಕ್ಟೋಸ್ ಲ್ಯಾಕ್ಟಿಕ್ ಆಮ್ಲವಾಗಿ‌ ಪರಿವರ್ತನೆಯಾಗುವುದರಿಂದ ಹಾಲು ಹುಳಿಯಾಗುತ್ತದೆ.

🦜 ಬಸಿಲು ಮಳೆಯ ನಂತರ ಕಾಮನಬಿಲ್ಲು ಕಾಣಿಸುವುದೇಕೆ?

🦋 ಮಳೆಯ ನಂತರ ನೀರಿನ ಅತಿ ಚಿಕ್ಕ ಕಣಗಳು ವಾತಾವರಣದಲ್ಲಿ ತೇಲಾಡುತ್ತಿರುತ್ತವೆ. ಸೂರ್ಯನ ಬೆಳಕಿನ ಕಿರಣಗಳು ಅಶ್ರಕದಂತೆ(PRISM) ವರ್ತಿಸುವುದರಿಂದ ಬೆಳಕು ವಕ್ರೀಭವನಗೊಂಡು ಕಾಮನಬಿಲ್ಲು ಕಾಣಿಸಿಕೊಳ್ಳುತ್ತದೆ.

🦜 ಎತ್ತರದ ಪ್ರದೇಶದಲ್ಲಿ ಆಹಾರ ಬೇಗ ಬೇಯಲು ಕಾರಣವೇನು?

🦋 ಎತ್ತರದ ಪ್ರದೇಶದಲ್ಲಿ ವಾತಾವರಣದ ಒತ್ತಡ ಕಡಿಮೆಯಿರುತ್ತದೆ. ಮತ್ತು ನೀರು 100° ಗಿಂತ ಕಡಿಮೆ ಉಷ್ಣತೆಯಲ್ಲಿ ಕುದಿಯುವುದು. ಆದ್ದರಿಂದ ಎತ್ತರದ ಪ್ರದೇಶದಲ್ಲಿ ಆಹಾರ ಬೇಗ ಬೇಯುತ್ತದೆ.

🦜 ಹೀರು ಕಾಗದ ಶಾಹಿಯನ್ನು ಹೇಗೆ ಹೀರಿಕೊಳ್ಳುತ್ತದೆ?

🦋 ಹೀರು ಕಾಗದದಲ್ಲಿ ಸೂಕ್ಷ್ಮ ರಂಧ್ರಗಳಿರುತ್ತವೆ. ಅವು ಲೋಮನಾಳಗಳಂತೆ ( Capillaries ) ಕಾರ್ಯ ನಿರ್ವಹಿಸುತ್ತವೆ. ಹೀರು ಕಾಗದದ ಸಂಪರ್ಕಕ್ಕೆ ಶಾಹಿಯು ಬಂದಾಗ  "ಮೇಲ್ಮೈ ಆಕರ್ಷಣೆ" ( Surface tension) ಕಾರಣ ಶಾಹಿಯು ಈ ರಂಧ್ರದೊಳಕ್ಕೆ ಪ್ರವೇಶಿಸುತ್ತದೆ ಹಾಗೂ ಹೀರಿಕೊಳ್ಳುತ್ತದೆ.

🦜 ವದ್ಯುತ್ ಬಲ್ಬನಲ್ಲಿ ಬಳಸಲಾಗುವ ಪಿಲಮೆಂಟ್ ಸುಟ್ಟುಹೋಗುವುದಿಲ್ಲ, ಏಕೆ?

🦋 ವದ್ಯುತ್ ಬಲ್ಬ್ ನಲ್ಲಿ "ಟಂಗಸ್ಟನ್" ಪಿಲಮೆಂಟ್ ಅನ್ನು ಬಳಸಲಾಗುತ್ತದೆ. ಇದರ ಕರಗುವ ಬಿಂದು 3410° c ಆದರೆ ಅದು ಹೊಳೆಯಲು ಬೇಕಾಗುವ ಉಷ್ಣಾಂಶ 2700° c ಹಾಗೂ ಬಲ್ಬ್ ನಲ್ಲಿ "ಜಡ ಅನಿಲ" ವನ್ನು ತುಂಬಿರುವುದರಿಂದ ಆಮ್ಲಜನಕವಿರುವುದಿಲ್ಲ. ಆದ್ದರಿಂದ ಪಿಲಮೆಂಟ್ ಸುಡುವುದಿಲ್ಲ.

💠💠

🦜 ಮೋಡ ತುಂಬಿದ ಹಗಲುಗಳೇಕೆ ತಂಪಾಗಿರುತ್ತವೆ?

🦋 ಮೋಡಗಳು ದುರ್ಬಲ ಉಷ್ಣವಾಹಕಗಳು ಅವು ಸೂರ್ಯನಿಂದ ಬಂದ ವಿಕಿರಣಗಳನ್ನು ಭೂಮಿಗೆ ತಲುಪಿಸುವುದಕ್ಕೆ ಬಿಡುವುದಿಲ್ಲ. ಆದ್ದರಿಂದ ಮೋಡ ತುಂಬಿದ ಹಗಲುಗಳು ತಂಪಾಗಿರುತ್ತವೆ.

🦜 ವಾಹನಗಳು ನಯವಾದ ಜಾಗದಲ್ಲಿ ಚಲಿಸಿದರೆ ಜಾರಲು ಕಾರಣವೇನು?

🦋 ನಯವಾದ ಜಾಗದಲ್ಲಿ ಘರ್ಷಣೆ ಕಡಿಮೆ ಇರುತ್ತದೆ. ಯಾವುದೇ ವಸ್ತು ಚಲಿಸಿದಾಗ ನಿಲ್ಲಲು ಘರ್ಷಣೆ ಬೇಕಾಗುತ್ತದೆ. ಆದ್ದರಿಂದ ನಯವಾದ ಜಾಗದಲ್ಲಿ ಚಲಿಸುವ ವಾಹನಗಳು ಜಾರುತ್ತವೆ.

🦜 ತಂಪಾಗಿನ ನೀರನ್ನು ಹೊಂದಿದ ಬಾಟಲಿನ ಹೊರ ಭಾಗದಲ್ಲಿ ಆಂಧ್ರತೆ ಶೇಖರಗೊಳ್ಳುವುದೇಕೆ?

🦋 ಬಾಟಲಿಯ ಹೊರ ಭಾಗವು ತಂಪಾಗಿರುತ್ತದೆ. ಅಂತಹ ಭಾಗದ ಮೇಲೆ ವಾತಾವರಣದಲ್ಲಿರುವ ಆಂಧ್ರತೆಯು ಸಾಂಧ್ರೀಕರಣಗೊಳ್ಳುತ್ತದೆ. (Condensation) ಆದ್ದರಿಂದಲೇ ಬಾಟಲಿಯ ಹೊರ ಭಾಗದಲ್ಲಿ ನೀರಿನ ಹನಿಗಳು ಕಂಡುಬರುತ್ತವೆ.

🦜 ಸರೋವರದಲ್ಲಿನ ನೀರು ಬೇಸಿಗೆಯಲ್ಲಿ ತಂಪಾಗಿರಲು ಕಾರಣವೇನು?

🦋 ಕೊಳದ ಮೇಲ್ಮೈನಿಂದ ನೀರು ಆವಿಯಾಗಿ ಹೋಗುವಾಗ ಉಷ್ಣಾಂಶವನ್ನು ಕೊಂಡೊಯ್ಯುತ್ತದೆ. ಈ ಕಾರಣದಿಂದ ಸರೋವರದ ಮೇಲ್ಮೈ ತಂಪಾಗಿರುತ್ತದೆ.

🦜 ಆಗಸದಲ್ಲಿ ಮೋಡ ತುಂಬಿಕೊಂಡರೆ ಚಳಿಗಾಲದ ರಾತ್ರಿಯು ಬೆಚ್ಚಗಾಗಿರುತ್ತದೆ, ಕಾರಣವೇನು?

🦋 ಮೋಡಗಳು ಉಷ್ಣದ ದುರ್ಬಲ ವಾಹಕಗಳು ಭೂಮಿಯಿಂದ ವಿಕಿರಣ ರೂಪದಲ್ಲಿ ಚಿಮ್ಮಿಬರುವ ಉಷ್ಣವನ್ನು ತಡೆಯುತ್ತವೆ. ಹೀಗೆ ಉಷ್ಣವು ವಾಯುಮಂಡಲದಲ್ಲಿಯೇ ಉಳಿಯುವುದರಿಂದ ಚಳಿಗಾಲದ ಮೋಡ ತುಂಬಿದ ರಾತ್ರಿಗಳೇ ಬೆಚ್ಚಗಿರುತ್ತವೆ.

🦜 ಸೋಡಾ ಅಥವಾ ಪೆಪ್ಸಿ ಬಾಟಲ್ ತೆರೆದಾಗ ಹೊರಬರುವ ಹೊಗೆಯಂತಹ ಅನಿಲ ಯಾವುದು?

🦋 ಇಂಗಾಲದ ಡೈಆಕ್ಸೈಡ್, ಸೋಡಾ ಸೀಸದ ಮುಚ್ಚಳವನ್ನು ತೆರೆದಾಗ ದ್ರಾವಣದಲ್ಲಿ ಹೆಚ್ಚು ಒತ್ತಡದಲ್ಲಿ ಕರಗಿರುವ ಇಂಗಾಲದ ಡೈಆಕ್ಸೈಡ್ ಅನಿಲವು ರಭಸದಿಂದ ಹೊರಬರುತ್ತದೆ. ಇಂಗಾಲದ ಡೈಆಕ್ಸೈಡ್ ಇದು ಬಣ್ಣ, ವಾಸನೆಯಿಲ್ಲದ ಅನಿಲ ಆದರೆ ವಾಯುವಿನಿಗಿಂತಲೂ ಭಾರವಾಗಿದೆ.  ಈ ಅನಿಲವನ್ನು ದ್ರವ ಹಾಗೂ ಘನ ರೂಪಕ್ಕೆ ತರಬಹುದು.  ಘನ ರೂಪಕ್ಕೆ ತಂದರೆ ಅದನ್ನು "ಒಣ ಮಂಜುಗಡ್ಡೆ" ಎನ್ನುವರು.

🦜 ಚಳಿಗಾಲದಲ್ಲಿ ಉಸಿರುಬಿಟ್ಟಾಗ ಕಂಡುಬರುತ್ತದೆ, ಆದರೆ ಬೇಸಿಗೆಯಲ್ಲಿ ಕಾಣುವುದಿಲ್ಲ, ಕಾರಣವೇನು?

🦋 ನಾವು ಬಿಟ್ಟ ಉಸಿರಿನಲ್ಲಿದ್ದ ನೀರಿನ ಬಾಷ್ಪವು ಚಳಿಗಾಲದಲ್ಲಿ ತತ್ ಕ್ಷಣವೇ ಚಿಕ್ಕ ಕಣಗಳಾಗಿ ರೂಪುಗೊಳ್ಳವುದರಿಂದ ಗೋಚರವಾಗುತ್ತದೆ. ಆದರೆ ಬೇಸಿಗೆಯಲ್ಲಿ ಅವು ಕ್ಷಣ ಮಾತ್ರದಲ್ಲಿ ಆವಿಯಾಗುವುದರಿಂದ ಕಾಣುವುದಿಲ್ಲ.

🦜 ಸಾವನ್ನಪ್ಪುತ್ತಿರುವ ವ್ಯಕ್ತಿಗೆ ನಾಡಿ ಮಿಡಿತವನ್ನು ನೋಡಲು ಕಾರಣವೇನು?

🦋 ಅಪಧಮನಿ ರಕ್ತನಾಳಗಳ ಒಳಗೋಡೆಯ ಮೇಲೆ ಉಂಟಾಗುವ ಆಂತರಿಕ ಒತ್ತಡಕ್ಕೆ " ನಾಡಿ ಮಿಡಿತ " ಎನ್ನುವರು. ಇದನ್ನು ಪರೀಕ್ಷಿಸುವುದರ ಮೂಲಕ ವ್ಯಕ್ತಿಯ ಹೃದಯದ ಬಡಿತವನ್ನು ಗುರುತಿಸಬಹುದು. ಆದ್ದರಿಂದ ಸಾಯುತ್ತಿರುವ ವ್ಯಕ್ತಿಗೆ ನಾಡಿ ಮಿಡಿತವನ್ನು ಪರೀಕ್ಷಿಸುತ್ತಾರೆ.

💠💠

🦜 ಸಕರ್ವಿ ರೋಗಿಗಳಿಗೆ ವಿಟಮಿನ್  'C' ಯನ್ನು ಒದಗಿಸುವ ಪದಾರ್ಥಗಳನ್ನು ತಿನ್ನಲು ಸಲಹೆ ನೀಡಲು ಕಾರಣವೇನು?

🦋 ನಮ್ಮ ದೇಹದಲ್ಲಿ ವಿಟಮಿನ್ 'ಸಿ' ಅನ್ನಾಂಗದ ಕೊರತೆಯಿಂದ ಸ್ಕರ್ವಿ ರೋಗ ಉಂಟಾಗುತ್ತದೆ. ಇದನ್ನು ತಡೆಯಲು ವಿಟಮಿನ್ 'ಸಿ' ಅನ್ನಾಂಗಯುಕ್ತ ಆಹಾರವನ್ನು ಬಳಸಲು ಸಲಹೆ ನೀಡುತ್ತಾರೆ.

🦜 ಧೃವ ಪ್ರದೇಶದ ವಾಹನಗಳ ಎಂಜಿನ್ ಗಳಲ್ಲಿ ಶೈತ್ಯರೋಧಕ ( Antifreeze) ವಸ್ತುವನ್ನು ಏಕೆ ಬಳಸುತ್ತಾರೆ?

🦋 ಶೀತ ಹೆಚ್ಚಾಗಿರುವೆಡೆ ಇಂಧನ ಹೆಪ್ಪುಗಟ್ಟಿ ಎಂಜಿನ್ ಕಾರ್ಯನಿರ್ವಹಿಸುವುದಿಲ್ಲ. ಇಂತಹ ಎಂಜಿನ್ ಗಳು ಶೀತಲದಲ್ಲೂ ಕಾರ್ಯ ನಿರ್ವಹಿಸುವಂತೆ ಮಾಡಲು ಶೈತ್ಯರೋಧ ಆಗಿ " ಈಥಲಿನ್ ಗ್ಲೈಕಾಲ್" ಬಳಸುತ್ತಾರೆ. ಇದನ್ನು ಸೇರಿಸಿದಾಗ ಇಂಧನ ಹೆಪ್ಪುಗಟ್ಟುವುದಿಲ್ಲ.

🦜 ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಬಳಸುವ ಪ್ರಜ್ಞಾಹೀನ ರಾಸಾಯನಿಕ ವಸ್ತು ಯಾವುದು?

🦋 ಕಲೋಲೋಫಾರಂ (CHCL3).

🦜 ನದಿಯಲ್ಲಿ ಈಜುವುದಕ್ಕಿಂತ ಸಮುದ್ರದಲ್ಲಿ ಈಜುವುದು ಸುಲಭವೇಕೆ?

🦋 ಸಮುದ್ರದ ನೀರು ಹೆಚ್ಚು ಸಾಂದ್ರತೆಯನ್ನು ಹೊಂದಿರುತ್ತದೆ. ಹೀಗಾಗಿ ನದಿ ನೀರಿಗಿಂತಲೂ ಹೆಚ್ಚಿನ ಉತ್ಪವನತೆಯನ್ನು ( Upthrust ) ಅದು ಒದಗಿಸಿ, ಈಜುವವರಿಗೆ ನೀಡುತ್ತದೆ.

🦜 ಯಾರು ವೇಗವಾಗಿ ಈಜನ್ನು ಕಲಿಯಲು ಸಾಧ್ಯ? - ದಪ್ಪಗಿರುವವನೋ ಅಥವಾ ತೆಳ್ಳಗಿರುವವನೋ?

🦋 ದಪ್ಪ ವ್ಯಕ್ತಿಯ ದೇಹ ಹೆಚ್ಚು ನೀರನ್ನು ವಿಸ್ಥಾಪನೆ( Displace ) ಗೊಳಿಸುವುದರಿಂದ ಅವನು ತೆಳು ವ್ಯಕ್ತಿಗಿಂತಲೂ ಸುಲಭವಾಗಿ ತೇಲುತ್ತಾನೆ. ಮನಸ್ಸು ಮಾಡಿದರೆ ಆತ ಬೇಗನೆ ಈಜುವುದನ್ನು ಕಲಿಯಬಹುದು.

🦜 ಬಳ್ಳುಳ್ಳಿಯ ವಾಸನೆಗೆ ಕಾರಣವೇನು?

🦋 ಬಳ್ಳುಳ್ಳಿಯ ವಾಸನೆಗೆ ಕಾರಣವಾದ ಧಾತು ಗಂಧಕ, ಇದರ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.

🦜 ಅನೀಮಿಯಾ ರೋಗಿಯು ಕಬ್ಬಿಣದ ಅಂಶವಿರುವ ಆಹಾರ ಪದಾರ್ಥವನ್ನು ಸೇವಿಸಬೇಕು, ಕಾರಣವೇನು?

🦋 ರಕ್ತದ ಹಿಮೋಗ್ಲೋಬಿನ್ ನಲ್ಲಿ ಕಬ್ಬಿಣದ ಅಂಶವಿರುತ್ತದೆ‌. ಇದರ ಕೊರತೆಯಿಂದ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುವುದರಿಂದ   ಅನೀಮಿಯಾ ಉಂಟಾಗುತ್ತದೆ. ಹಾಗಾಗಿ ಕಬ್ಬಿಣದ ಅಂಶಯುಕ್ತವಾದ ಆಹಾರ ಸೇವಿಸುವುದರಿಂದ ಅನೀಮಿಯಾ ರೋಗ ನಿವಾರಿಸಬಹುದು.

🦜 ಚಳಿಗಾಲದಲ್ಲಿ ಎಣ್ಣೆ ಕಾಳುಗಳನ್ನು ಸೇವಿಸಬೇಕು, ಏಕೆ?

🦋 ನಮ್ಮ ದೇಹದಲ್ಲಿ ಕೊಬ್ಬು ಚಳಿಗಾಲದಲ್ಲಿ ಘನೀಕರಿಸಿ ಚರ್ಮದ ತಳಭಾಗದಲ್ಲಿ ಪರ್ಯಾಪ್ತ ಆಮ್ಲದ ರೂಪದಲ್ಲಿ ಸಂಗ್ರಹವಾಗುತ್ತದೆ. ಕೊಬ್ಬಿನ ಕೊರತೆಯಿಂದ ಚರ್ಮ ಸೀಳಿಕೊಳ್ಳುತ್ತದೆ. ಆದ್ದರಿಂದ ಇದನ್ನು ತಡೆಯಲು ಎಣ್ಣೆ ಕಾಳುಗಳನ್ನು ಸೇವಿಸಬೇಕು.

💠💠

🦜 ವದ್ಯುತ್ ಬಲ್ಬ್ ಗಳಲ್ಲಿ ಜಡ ಅನಿಲಗಳನ್ನು ಬಳಸಲು ಕಾರಣವೇನು?

🦋 ಜಡ ಅನಿಲಗಳು ಅಂತಿಮ ಕಕ್ಷೆಯಲ್ಲಿ 8 ಎಲೆಕ್ಟ್ರಾನ್ ಗಳನ್ನು ಹೊಂದಿರುವುದರಿಂದ ಅಷ್ಟಕ ಜೋಡಣೆಯನ್ನು ಹೊಂದಿರುತ್ತದೆ. ಇವು ಬೇರೆ ಧಾತುಗಳೊಡನೆ ವರ್ತಿಸದೆ ಸೊನ್ನೆ ಗುಂಪಿನ ಮೂಲ ವಸ್ತುಗಳಾಗಿರುವುದರಿಂದ ವಿದ್ಯುತ್ ಬಲ್ಬ್ ಗಳಲ್ಲಿ ಜಡ ಅನಿಲಗಳನ್ನು ಬಳಸುತ್ತಾರೆ.

🦜 ಸೊಳ್ಳೆಗಳ ಬೆಳವಣಿಗೆಯನ್ನು ತಡೆಯಲು ನಿಂತ ನೀರಿನ ಕೊಳಗಳ ಮೇಲೆ ತೈಲವನ್ನು ಚಿಮುಕಿಸುವಂತೆ ಸೂಚಿಸಲಾಗಿದೆ, ಕಾರಣವೇನು?

🦋 ನಂತ ನೀರಿನಲ್ಲಿ ಸೊಳ್ಳೆಗಳು ಬೆಳವಣಿಗೆ ಹೊಂದುತ್ತವೆ. ನೀರಿನ ಮೇಲ್ಮೈ ಕರ್ಷಣದ ಕಾರಣ ಸೊಳ್ಳೆಯ ಲಾವಣಗಳು ತೇಲುತ್ತಿರುತ್ತವೆ. ಆದರೆ ತೈಲವನ್ನು ಚಿಮುಕಿಸಿದಾಗ ಮೇಲ್ಮೈ ಕರ್ಷಣ ಕಡಿಮೆಯಾಗುತ್ತದೆ. ಇದರಿಂದ ಲಾವಣಗಳು ನೀರಿನಲ್ಲಿ ಮುಳುಗಿ ಸತ್ತು ಹೋಗುತ್ತದೆ.

🦜 ಪಟ್ರೋಲ್ ಕಾರಣ ಹೊತ್ತಿದ ಬೆಂಕಿಯನ್ನು ನೀರಿನಿಂದ ಆರಿಸಲು ಸಾಧ್ಯವಿಲ್ಲ, ಏಕೆ?

🦋 ಪಟ್ರೋಲ್ ಗಿಂತ ನೀರಿನ ಸಾಂಧ್ರತೆ ಹೆಚ್ಚಿರುವ ಕಾರಣ ಪೆಟ್ರೋಲ್ ನೀರಿನ ಮೇಲೆ ತೇಲುತ್ತದೆ. ಹೀಗಾಗಿ ಬೆಂಕಿಯನ್ನು ಆರಿಸಲಾಗದು. ಒಂದು ವೇಳೆ ಕಡಿಮೆ ಪ್ರಮಾಣದ ನೀರನ್ನು ಎರಚಿದ್ದರೆ ಅದು ಉಷ್ಣದ ಜಳಕ್ಕೆ ಕ್ಷಣ ಮಾತ್ರದಲ್ಲಿ ಆವಿಯಾಗಿ ಹೋಗುತ್ತದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು.

🦜 ಮಣ್ಣಿನ ಮಡಕೆಯಲ್ಲಿನ ನೀರು ತಂಪಾಗಿರಲು ಕಾರಣವೇನು?

🦋 ಮಣ್ಣಿನ ಮಡಕೆಯಲ್ಲಿ ಅತ್ಯಂತ ಸೂಕ್ಷ್ಮ ರಂಧ್ರಗಳಿರುತ್ತವೆ. ಅವುಗಳ ಮೂಲಕ ಒಳಗಿನ ನೀರು ಅತ್ಯಲ್ಪ ಪ್ರಮಾಣದಲ್ಲಿ ಹೊರ ಮೇಲ್ಮೈಗೆ ಬಸರುತ್ತದೆ. ಅದು ಆವಿಯಾಗುವುದರಿಂದ ತಂಪನೆಯ ಪರಿಣಾಮ ಉಂಟಾಗುತ್ತದೆ.

🦜 ಸಾಮಾನ್ಯ ಪೆಂಡ್ಯುಲಮ್ ಗಡಿಯಾರ ಬೇಸಗೆಯಲ್ಲಿ ಹಿಂದೆ ಓಡಲು ಕಾರಣವೇನು?

🦋 ಬೇಸಿಗೆಯಲ್ಲಿ ಉಷ್ಣದ ಕಾರಣ ಪೆಂಡ್ಯುಲಂ ಉದ್ದ ಹೆಚ್ಚುತ್ತದೆ. ಈ ಕಾರಣದಿಂದ ಅದರ ಆಂದೋಲನ ಅವಧಿ ಹೆಚ್ಚುತ್ತದೆ. ತತ್ಪರಿಣಾಮ ಬೇಸಿಗೆಯಲ್ಲಿ ಗಡಿಯಾರ ಹಿಂದೆ ಓಡುತ್ತದೆ.

🦜 ತೀರಾ ಕಡಿಮೆ ಉಷ್ಣಾಂಶವನ್ನು ಅಳೆಯಲು ಪಾದರಸದ ಥರ್ಮಾಮೀಟರನ್ನು ಏಕೆ ಬಳಸುವುದಿಲ್ಲ?

🦋 ಪಾದರಸದ ಘನೀಭವನ ಬಿಂದುವು ಕೇವಲ - 39° ಸೆಂ. ಜೊತೆಗೆ ಅದು ಕಡಿಮೆ ಉಷ್ಣಾಂಶಗಳಲ್ಲಿ ಅನಿಯಮಿತ ಹಿಗ್ಗುವಿಕೆಯನ್ನು ಪ್ರದರ್ಶಿಸುತ್ತದೆ.

🦜 ಅತಿಯಾದ ಉಷ್ಣಾಂಶದಿಂದ ಬಳಲುತ್ತಿರುವ ವ್ಯಕ್ತಿಗೆ ಯೂ-ಡಿ-ಕಲೋನ್( EAU-DE-COLOGNE) ಅನ್ನು ಹೆಚ್ಚಿಸುತ್ತಾರಲ್ಲ, ಏಕೆ?

🦋 ಅದರಲ್ಲಿ ಮಧ್ಯಸಾರವಿರುತ್ತದೆ. ಮಧ್ಯಸಾರವು ವೇಗವಾಗಿ ಆವಿಯಾಗಿ ಹೋಗುವುದರಿಂದ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ.

💠💠

🦜 ಕೊಳ್ಳಿ ದೆವ್ವ ಹೇಗೆ ಉಂಟಾಗುತ್ತದೆ?

🦋 ಮೂಳೆಗಳಲ್ಲಿರುವ ರಂಜಕ ವಾತಾವರಣದ ಆಮ್ಲಜನಕದೊಂದಿಗೆ ಸೇರಿ ಉಂಟು ಮಾಡುವ ಬೆಂಕಿಗೆ "ಕೊಳ್ಳಿದೆವ್ವ" ಎನ್ನುತ್ತಾರೆ.

🦜 ಬೇಸಿಗೆ ಕಾಲದಲ್ಲಿ ಆಹಾರ ಬೇಗ ಕೆಡಲು ಕಾರಣವೇನು ?

🦋 ಆಹಾರ ಸೂಕ್ಷ್ಮ ಜೀವಿಗಳ ಚಟುವಟಿಕೆಯಿಂದ ಕೆಡುತ್ತದೆ. ಬೇಸಿಗೆ ಕಾಲದಲ್ಲಿ ಸೂಕ್ಷ್ಮಾಣು ಜೀವಿಗಳು ಬೆಳೆಯಲು ಸೂಕ್ತವಾದ ಉಷ್ಣತೆಯನ್ನು ಹೊಂದಿರುವುದರಿಂದ ಬೇಸಿಗೆ ಕಾಲದಲ್ಲಿ ಆಹಾರ ಬೇಗ ಕೆಡುತ್ತದೆ.

🦜 ಬೇಸಿಗೆ ಕಾಲದಲ್ಲಿ ಹಾಲು ಬೇಗ ಮೊಸರಾಗಲು ಕಾರಣವೇನು?

🦋 ಬೇಸಿಗೆ ಕಾಲದಲ್ಲಿ ಹಾಲು 4 ಗಂಟೆಯೊಳಗೆ ಮೊಸರಾಗುತ್ತದೆ. ಅದೇ ಹಾಲು ಚಳಿಗಾಲದಲ್ಲಿ 12 ಗಂಟೆಯೊಳಗೆ ಮೊಸರಾಗುತ್ತದೆ. ಕಾರಣ ಮೊಸರಿನಲ್ಲಿರುವ ಲ್ಯಾಕ್ಟೋ ಬೆಸಿಲಸ್ ಬ್ಯಾಕ್ಟೀರಿಯಾದ ಬೆಳವಣಿಗೆಗೆ 30 ರಿಂದ 35° ಉಷ್ಣಾಂಶವು ಅನುಕೂಲಕರವಾದದ್ದು, ಬೇಸಿಗೆಯಲ್ಲಿ ಇಂತಹ ಉಷ್ಣಾಂಶವಿರುತ್ತದೆ. ಆದರೆ ಚಳಿಗಾಲದಲ್ಲಿ ಅತಿ ಕಡಿಮೆ ಉಷ್ಣಾಂಶವಿರುತ್ತದೆ.

🦜 ಸಸ್ಯಗಳ ಬೇರಿನಿಂದ ನೀರು ಮೇಲೆರಲು ಕಾರಣವೇನು?

🦋 ಸಸ್ಯಗಳ ಬೇರಿನಿಂದ ನೀರು ಲೋಮನಾಳಗಳ‌ ಕ್ರಿಯೆಯ ಮೂಲಕ ಮೇಲೇರುತ್ತದೆ. ಅಂದರೆ ನೀರು ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಮೇಲೇರುತ್ತದೆ.

🦜 ಬಾವಲಿಗಳು ರಾತ್ರಿಯಲ್ಲಿ ಮಾತ್ರ ಚಲಿಸಲು ಕಾರಣವೇನು?

🦋 ಬಾವಲಿಗಳು ನಿಶಾಚರ ಪ್ರಾಣಿಗಳು ಆದ್ದರಿಂದ ರಾತ್ರಿ ವೇಳೆಯಲ್ಲಿ ಮಾತ್ರ ಚಟುವಟಿಕೆಯಿಂದಿರುತ್ತವೆ.

🦜 ರಾತ್ರಿಯ ವೇಳೆಯಲ್ಲಿ ಕಲ್ಲಿನಂತಹ ವಸ್ತುಗಳಿಗೆ ಹೋಲಿಸಿದರೆ, ಹುಲ್ಲು ಹೆಚ್ಚಿನ ಇಬ್ಬನಿ‌ ಹನಿಗಳನ್ನು ಹೊಂದಿರುತ್ತದೆ, ಬೆಳಿಗ್ಗೆ ಇದನ್ನು ಪರಿಶೀಲಿಸಿ ನೋಡಬಹುದು ಇದಕ್ಕೆ ಕಾರಣ?

🦋 ಉತ್ತಮ ರೇಡಿಯೇಟರ್ ಗಳು ಹಾಗೂ ದುರ್ಬಲ ವಾಹಕಗಳ( conduct) ಮೇಲೆ ಇಬ್ಬನಿ ಚೆನ್ನಾಗಿ ರೂಪುಗೊಳ್ಳುತ್ತದೆ. ಹುಲ್ಲು ಉತ್ತಮ ರೇಡಿಯೇಟರ್ ಆಗಿರುವ ಕಾರಣ ವಾಯುವಿನಲ್ಲಿನ ನೀರಿನ ಬಾಷ್ಪವು ತನ್ನ ಮೇಲೆ ಸಾಂದ್ರೀಕರಣಗೊಳ್ಳಲು(condense) ಅವಕಾಶ ಮಾಡಿಕೊಡುತ್ತದೆ. ಬಾಷ್ಪ ವಿಸರ್ಜನೆಯ ಕಾರಣ ಹುಲ್ಲಿನಿಂದ ನಿರಂತರವಾಗಿ ಹೊರಬೀಳುವ ಆರ್ಧ್ರತೆಯ ಅಂಶವು ಇದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹುಲ್ಲಿನ ಸುತ್ತಲಿನ ವಾಯುವು ಹೆಚ್ಚು ನೀರಿನ ಅಂಶವನ್ನು ಹೊಂದಿರುತ್ತದೆ ಹಾಗೂ ಆವಿಯಾಗುವಿಕೆಯನ್ನು ನಿಧಾನಗೊಳಿಸುತ್ತದೆ.

🦜 ಮಂಚು ಹುಳುವಿನಲ್ಲಿ ಬೆಳಕು ಹೇಗೆ ಉತ್ಪತ್ತಿಯಾಗುತ್ತದೆ?

🦋 ಮಂಚು ಹುಳುವಿನಲ್ಲಿ ಲೂಸಿಪೆಲಿಸ್  ಎಂಬ ಜೈವಿಕ ವರ್ಣಕವಿದ್ದು, ಲೂಸಿಪೆರಿಸ್ ಎಂಬ ಕಿಣ್ವದ ಸಹಾಯದಿಂದ ಅದು ಬೆಳಕನ್ನು ನೀಡುತ್ತದೆ. ಇಂತಹ ಬೆಳಕನ್ನು " ಜೈವಿಕ ದೀಪ್ತಿ"( Bio Lumine Scence) ಎಂದು ಕರೆಯುತ್ತಾರೆ. ಮಿಂಚು ಹುಳುಗಳಲ್ಲಿ ಹೆಣ್ಣು ಮಿಂಚುಹುಳುವು ಮಾತ್ರ ಬೆಳಕನ್ನು ನೀಡುತ್ತದೆ. ಈ ಬೆಳಕು ಮಿಂಚುಹುಳುವಿನ ಉದರ ಭಾಗದಲ್ಲಿ ರಾಸಾಯನಿಕ ಕ್ರಿಯೆಯಿಂದಾಗಿ ಉತ್ಪತ್ತಿಯಾಗುತ್ತದೆ. ಮಿಂಚು ಹುಳುವು ಈ ಬೆಳಕನ್ನು ನೀಡುವ ಪ್ರಮುಖ ಉದ್ದೇಶ ಗಂಡು ಮಿಂಚುಹುಳುವನ್ನು ಸಂತಾನೋತ್ಪತ್ತಿಗೆ ಆಹ್ವಾನಿಸುವುದಾಗಿರುತ್ತದೆ.

💠💠

🦜 ಗಡಸು ನೀರಿನಲ್ಲಿ ಸೋಪಿನ ನೊರೆ ಬರದಿರಲು ಕಾರಣವೇನು?

🦋 ಗಡಸು ನೀರಿನಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಸಲ್ಫೇಟ್ ಗಳು ಮತ್ತು ಕ್ಲೋರೈಡ್ ಗಳು ಕರಗಿರುವುದರಿಂದ ಸೋಪಿ‌ನ ನೊರೆ ಬರುವುದಿಲ್ಲ.

🦜 ಮದು ನೀರನ್ನು ಹೇಗೆ ಪರೀಕ್ಷಿಸಬಹುದು?

🦋 ಸೋಪಿನ ಜೊತೆಗೆ ತಕ್ಷಣ ಬುರುಗನ್ನು ನೀಡುವ ನೀರನ್ನು ಮೆದು ನೀರು ಎಂದು ದೃಢಪಡಿಸಬಹುದು.

🦜 ಐಸ್ ಕ್ರೀಮ್ ತಯಾರಿಸುವಾಗ ಮಂಜುಗಡ್ಡೆಗೆ ಉಪ್ಪನ್ನು ಬೆರೆಸಲು ಕಾರಣವೇನು?

🦋 ಉಪ್ಪನ್ನು ಸೇರಿಸುವಿಕೆಯಿಂದ ಘನೀಭವನ ಬಿಂದು( 0° C) ನಿಂದ ( -5° C) ಗೆ ಕಡಿಮೆಯಾಗುತ್ತದೆ, ಆದ್ದರಿಂದ ಐಸ್ ಕ್ರೀಮ್ ಗೆ ಉಪ್ಪನ್ನು ಬೆರೆಸಲಾಗುತ್ತದೆ.

🦜 ಸಮುದ್ರದ ನೀರು ಕುದಿಯಲು ಹೆಚ್ಚು ಉಷ್ಣಾಂಶ ಏಕೆ ಬೇಕಾಗುತ್ತದೆ?

🦋 ಸಮುದ್ರದ ನೀರಿನಲ್ಲಿ ಉಪ್ಪು ಮೊದಲಾದ ಘಟಕಗಳು ಕರಗುತ್ತವೆ. ಆ ಕಾರಣ ನೀರು ಕುದಿಯಲು ಹೆಚ್ಚು ಉಷ್ಣಾಂಶ ಅವಶ್ಯಕ.

🦜 ಕೋಳಿ ಮೊಟ್ಟೆಯನ್ನು ಬೆಳ್ಳಿ ಚಮಚದಲ್ಲಿ ತಿನ್ನಬಾರದು, ಏಕೆ?

🦋 ಬಳ್ಳಿ ಚಮಚ ಬಳಸಿ ಕೋಳಿ ಮೊಟ್ಟೆಯನ್ನು ತಿನ್ನುವುದು ಅಪಾಯಕಾರಿ, ಕಾರಣ ಬೆಳ್ಳಿಯು ಮೊಟ್ಟೆಯಲ್ಲಿರುವ ಗಂಧಕದೊಡನೆ ವರ್ತಿಸಿ ಗಂಧಕದ ಸಲ್ಫೈಡ್ ನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಬೆಳ್ಳಿ ಚಮಚವು ಕಪ್ಪಾಗಿ ಕಂಡುಬರುತ್ತದೆ.

🦜 ಮೇದೋಜೀರಕ ಗ್ರಂಥಿಯನ್ನು "ಮಿಶ್ರಗ್ರಂಥಿ" ಎನ್ನಲು ಕಾರಣವೇನು?

🦋 ಮೇದೋಜೀರಕ ಗ್ರಂಥಿಯಲ್ಲಿ ನಾಳಗ್ರಂಥಿ( ಮೇದೋಜೀರಕ ಗ್ರಂಥಿ) ಮತ್ತು ನಿರ್ನಾಳ ಗ್ರಂಥಿ( ಲ್ಯಾಂಗರ್ ಹ್ಯಾನ್ಸ್ ನ ಕಿರುದ್ವೀಪಗಳು) ಎರಡೂ ಇರುವುದರಿಂದ ಇದನ್ನು "ಮಿಶ್ರಗ್ರಂಥಿ" ಎನ್ನುತ್ತಾರೆ.

🦜 ಜೇನು ನೊಣ ಕಚ್ಚಿದಾಗ ನೋವು ಮತ್ತು ತುರಿಕೆ ಬರಲು ಕಾರಣವೇನು?

🦋 ಜೇನು ನೊಣ ಕಚ್ಚಿದಾಗ "ಅಪಿಟಾಕ್ಸಿನ್" ( Apitoxin) ಎಂಬ ವಿಷ ವಸ್ತುವನ್ನು ಹೊರಸೂಸುತ್ತದೆ. ಇದರಿಂದಾಗಿ ನೋವು, ಕೆರೆತ, ಊತ ಕಂಡುಬರುತ್ತದೆ. ಇಂತಹ ನೋವನ್ನು ಶಮನ ಮಾಡಲು "ಬೇಕಿಂಗ್ ಸೋಡಾ"ವನ್ನು ಜೇನುನೊಣ ಕಚ್ಚಿದ ಭಾಗಕ್ಕೆ ಸವರುವುದರಿಂದ ಕಡಿಮೆಯಾಗುತ್ತದೆ. ಇತ್ತೀಚೆಗೆ ಮಡಿ ಸಂಧಿವಾತದಂತಹ ರೋಗ ನಿವಾರಣೆಗೆ ಜೇನು ನೊಣದಿಂದ ಉತ್ಪತ್ತಿಯಾಗುವ ವಿಷವನ್ನು ಬಳಸುತ್ತಿದ್ದಾರೆ.

🦜 ಎಣ್ಣೆ ದೀಪದ ಬತ್ತಿಯಲ್ಲಿ ಎಣ್ಣೆಯು ಹೇಗೆ ಮೇಲಕ್ಕೇರುತ್ತದೆ?

🦋 ಬತ್ತಿಯಲ್ಲಿನ ರಂಧ್ರಗಳು ಲೋಮನಾಳದಂತೆ(Capillaries) ಕಾರ್ಯ ನಿರ್ವಹಿಸಿ, ಎಣ್ಣೆಯು ಮೇಲೇರುವಂತೆ ಮಾಡುತ್ತದೆ.

🦜 ಎಲ್ಲಾ ರೂಮುಗಳಲ್ಲಿಯೂ ವೆಂಟಿಲೇಟರ್ ಗಳನ್ನು ಮಾಡಿಗೆ ಸಮೀಪದಲ್ಲಿ ಏಕೆ ಇರಿಸಿರುತ್ತಾರೆ?

🦋 ಬಸಿಯಾದ ಗಾಳಿಯು ತೂಕದಲ್ಲಿ ಹಗುರವಾಗಿರುತ್ತಾದ್ದರಿಂದ ಮೇಲಕ್ಕೆ ಏರಿ, ಹೊರಕ್ಕೆ ಹೋಗಲು ಅನುಕೂಲವಾಗಲೆಂದು ವೆಂಟಿಲೇಟರ್ ಗಳನ್ನು ಹಾಗೆ ಇರಿಸಿರುತ್ತಾರೆ.

💠💠

🦜 ಏರ್ ಕೂಲರ್ ಗಳು ಮಳೆಗಾಲದಲ್ಲಿ ಏಕೆ ಕಡಿಮೆ ಪರಿಣಾಮಕಾರಿಯಾಗಿರುತ್ತದೆ?

🦋 ಮಳೆಗಾಲದಲ್ಲಿ ವಾತಾವರಣದಲ್ಲಿನ ವಾಯುವು ಹೆಚ್ಚಿನ ಪ್ರಮಾಣದಲ್ಲಿ ಆರ್ದ್ರತೆಯನ್ನು ಹೊಂದಿರುತ್ತದೆ. ಕೂಲರ್ ನ ಪ್ಯಾಡ್ ಗಳಿಂದ ನೀರು ಆವಿಯಾಗುವ ಪ್ರಕ್ರಿಯೆಯು ಇದರಿಂದ ನಿಧಾನವಾಗುತ್ತದೆ. ಆದ್ದರಿಂದ ಕೂಲರ್ ನಿಂದ ಹೊರಬೀಳುವ ಗಾಳಿಯು ಅಷ್ಟು ತಂಪಾಗಿರುವುದಿಲ್ಲ.

🦜 ಹೊಟ್ಟೆ ನೋವಿಗೆ ಅಡುಗೆ ಸೋಡಾ ತೆಗೆದುಕೊಳ್ಳುವುದರಿಂದ ಶಮನಗೊಳ್ಳಲು ಕಾರಣವೇನು?

🦋 ಮಾನವನ ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದರ ವೈಪರಿತ್ಯದಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಅಡುಗೆ ಸೋಡಾ ತೆಗೆದುಕೊಳ್ಳುವುದರಿಂದ ತಟಸ್ಥೀಕರಣ ಕ್ರಿಯೆ ಜರುಗುತ್ತದೆ. ಇದರಿಂದ ಹೊಟ್ಟೆನೋವು ಶಮನವಾಗುತ್ತದೆ.

🦜 ರಾತ್ರಿ ವೇಳೆ ಮರದ ಕೆಳಗೆ ಮಲಗುವುದು ಅಪಾಯ ಏಕೆ?

🦋 ರಾತ್ರಿ ವೇಳೆ ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುವುದಿಲ್ಲ. ಆದುದರಿಂದ ಆಮ್ಲಜನಕ ಬಿಡುಗಡೆಯಾಗುವುದಿಲ್ಲ. ಹಾಗಾಗಿ ಮರದ ಕೆಳಗೆ ಆಮ್ಲಜನಕದ ಕೊರತೆಯಾಗಿ ವ್ಯಕ್ತಿಗೆ ಉಸಿರು ಕಟ್ಟಿದಂತಾಗುತ್ತದೆ.

💠💠

Post a Comment

0 Comments

Karnataka TET Environmental Science Quiz Series-03/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-03
KAR-TET Social Science and Social Science Pedagogy Quiz Series-03/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
General Kannada Quiz For All Competitive Exams Part-59
Karnataka TET Social Science and Social Science Pedagogy Quiz Series-01/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
ಶೈಕ್ಷಣಿಕ ಮನೋವಿಜ್ಞಾನ /Educational Psychology Quizzes For GPSTR,HSTR And TET Competitive Exams Part-6
KARTET Educational Psychology Quiz Series-05/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-05
Karnataka TET Social Science and Social Science Pedagogy Quiz Series-02/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02
KARTET Educational Psychology Quiz Series-06/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-06
ಶೈಕ್ಷಣಿಕ ಮನೋವಿಜ್ಞಾನ /Educational Psychology Quizzes For GPSTR,HSTR And TET Competitive Exams Part-2

Important PDF Notes

Ad Code