Ad Code

Ticker

6/recent/ticker-posts

Click Below Image to Join Our Telegram For Latest Updates

ವಿವರಣೆ ಸಹಿತ ಅರ್ಥಗರ್ಭಿತ ಪ್ರಮುಖ ಗಾದೆಮಾತುಗಳು /Proverbs with Explanation in Kannada

ವಿವರಣೆ ಸಹಿತ ಅರ್ಥಗರ್ಭಿತ ಪ್ರಮುಖ ಗಾದೆಮಾತುಗಳು
Proverbs with Explanation in Kannada

ವಿವರಣೆ ಸಹಿತ ಅರ್ಥಗರ್ಭಿತ ಪ್ರಮುಖ ಗಾದೆಮಾತುಗಳು/Proverbs with Explanation in Kannada
💥
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ !! 💐💐🙏

ಜನಪ್ರಿಯ  ಗಾದೆಗಳ ಸರಮಾಲೆ . ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಹಿರಿಯರ ಮಾತು ಇಂದಿಗೂ ರೂಢಿಯಲ್ಲಿದೆ.ಮಾತಿನ ಮಧ್ಯೆ ಒಂದು ಗಾದೆಯನ್ನು ಬಳಸಿ ಮಾತನಾಡಿದಾಗ ಕೇಳುಗರಿಗೆ ಆ ಮಾತಿನ ಸ್ವಾದ ಹೆಚ್ಚುತ್ತದೆ. ಹಂತಾ ಅದ್ಭುತವಾದ ಗಾದೆಗಳು ಇಲ್ಲಿವೆ.

ವಿವರಣೆ ಸಹಿತ ಅರ್ಥಗರ್ಭಿತ ಪ್ರಮುಖ ಗಾದೆಮಾತುಗಳು
Proverbs with Explanation in Kannada

1) ಕಟ್ಟುವುದು ಕಠಿಣ ಕೆಡಿಸುವುದು ಸುಲಭ
ಗಾದೆಗಳು ವೇದಕ್ಕೆ ಸಮಾನ. ಗಾದೆಸುಳ್ಳಾದರೂ ವೇದ ಸುಳ್ಳಾಗದು ಎಂಬ ಮಾತಿದೆ. ಇವು ಜನಮಾನಸದ ಅನುಭವದ ನುಡಿಮುತ್ತುಗಳು ಗಾದೆಗಳು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿವೆ. ದಿನ ನಿತ್ಯದ ಮಾತಿನಲ್ಲಿ ನಲಿದಾಡುವ ಗಾದೆಗಳು ಮಾತಿಗೆ ಚೆಲುವನ್ನು ತಂದು ಕೊಡುತ್ತವೆ. ಇಂತಹ ಪ್ರಸಿದ್ಧ ಗಾದೆಗಳಲ್ಲಿ ಕಟ್ಟುವುದು ಕಠಿಣ ಕೆಡಿಸುವುದು ಸುಲಭ ಎಂಬುದೂ ಒಂದಾಗಿದೆ ಯಾವುದೇ ಒಂದು ಕಾರ್ಯವನ್ನು ಮಾಡಲು ಶ್ರಮ ವಹಿಸಬೇಕು.ಆದರೆ, ಹಾಳು ಮಾಡಲು ಹೆಚ್ಚು ಶ್ರಮ ಬೇಡ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಈ ಮಾತನ್ನು ಹೆಚ್ಚು ಸ್ಪಷ್ಟಪಡಿಸುತ್ತದೆ. ಒಂದು ಮನೆ ಕಟ್ಟಬೇಕಾದರೆ ಬೇಕಾಗುವ ಶ್ರಮಕ್ಕೂ ಹೋಲಿಕೆ ಮಾಡಿದಾಗ ಈ ಮೇಲಿನ ಗಾದೆ ಮಾತು ಅರ್ಥವಾಗಬಹುದು. ಜೀವನದಲ್ಲಿ ಯಶಸ್ಸು ಗಳಿಸಲುಶ್ರಮ ವಹಿಸಲೇಬೇಕು.ಉತ್ತಮನೆನಿಸಿಕೊಳ್ಳಲು ಪ್ರಯತ್ನಶೀಲನಾಗಿ ಸದಾ ಎಚ್ಚರದಿಂದಿರಬೇಕು ಎಂಬುದನ್ನು ಈ ಗಾದೆಯಿಂದ ಮನಗಾಣಬಹುದು.
2)ಶಕ್ತಿಗಿಂತ ಯುಕ್ತಿ ಮೇಲು
ದೈಹಿಕ ಶಕ್ತಿಗಿಂತ ಬುದ್ಧಿಶಕ್ತಿಯೇ ಮೇಲು, ತೋಳಲ್ಬದಲ್ಲಾಗದ್ದು ಬುದ್ಧಿ ಬಲದಿಂದಾಯಿತು ಎನ್ನುತ್ತಾರೆ. ಮೃಗರಾಜನಾದ ಸಿಂಹವನ್ನು ಸಾಮಾನ್ಯ ಜೀವಿ ಮೊಲವೊಂದು ಸಾಹಿಸುವುದು ಬುದ್ಧಿಯ ಬಲದಿಂದಲೇ ಯುದ್ಧ ನೀತಿಯಲ್ಲಿ ಚಾಣುಕ್ಯ ಗೆಲ್ಲುವುದು ಉಪಾಯ ಕುಶಲಿಯಾಗಿ ಬೌದ್ಧಿಕ ಬಲದಿಂದಲೇ ಎದುರಾಳಿಗಳು ಬಲಿಷ್ಟರಾಗಿದ್ದಾಗ ಶಕ್ತಿಗಿಂತ ಯುಕ್ತಿಯಿಂದ ಗೆಲ್ಲಬೇಕಾಗುತ್ತದೆ ಎಂದು ಈ ಗಾದೆ ತಿಳಿಸುತ್ತದೆ.
3) ದೇಶ ಸುತ್ತು ಕೋಶ ಓದು
ಜ್ಞಾನ ಸಂಪಾದನೆ ಜೀವನದ ಸಾರ್ಥಕ್ಯಕ್ಕೆ ಅತ್ಯವಶ್ಯಕ, ಓದಿನಿಂದ ಗಳಿಸುವ ಜ್ಞಾನಕ್ಕಿಂತ ಅನುಭವದಿಂದ ಗಳಿಸುವ ಜ್ಞಾನ ಹೆಚ್ಚು ಶ್ರೇಷ್ಟ . ಹಾಗಾಗಿ ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬುದೂ ಒಂದು ಗಾದೆಯೇ ಆಗಿದೆ ದೇಶ ಸುತ್ತಿ ಪಡೆದ ಅನುಭವಗಳೊಂದಿಗೆ ಓದಿನಿಂದ ಗಳಿಸಿದ ಜ್ಞಾನವೂ ಸೇರಿದರೆ ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದೆಂಬುದು ಈ ಮೇಲಿನ ಗಾದೆಯಅಂತರರ್ಥವಾಗಿದೆ ಹೀಗಾಗಿಯೇ ಪುಸ್ತಕದ ಬದನೆಕಾಯಿ ಏನು ಮಾಡೀತು ಜನರೊಡನೆ ಒಡನಾಡಿ ಬದುಕು ಎಂಬುದು ಹಿರಿಯರ ಆಶಯವಾಗಿದೆ.
4) ಊಟ ಬಲ್ಲವನಿಗೆ ರೋಗವಿಲ್ಲ; ಮಾತು ಬಲ್ಲವನಿಗೆ ಜಗಳವಿಲ್ಲ
ಆರೋಗ್ಯದ ಬಗೆಗೆ ಎಚ್ಚರವಹಿಸುವವರು ಆಹಾರದ ಬಗೆಗೂ ಜಾಗೃತರಾಗಿರಬೇಕು ಅತಿಯಾದ ಊಟ ಅಜೀರ್ಣಕ್ಕೆ ದಾರಿ ಅಜೀರ್ಣವು ರೋಗಗಳಿಗೆ ಮೂಲ ಸೇವಿಸುವ ಆಹಾರ ಹಿತವು ಮಿತವೂ,ಶುದ್ದವೂ ಆಗಿರಬೇಕು ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಸರಿಯಾದಆಹಾರ ಸೇವಿಸುವುದರಿಂದ ಆರೋಗ್ಯದ ಜೊತೆಗೆ ಸಧೃಡ ಶರೀರವನ್ನು ಹೊಂದಬಹುದು ನುಡಿದರೆ ಮುತ್ತಿನ ಹಾರದಂತಿರಬೇಕು. ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯಿತು.ಮಾತೇ ಮುತ್ತು ಮಾತೇ ಮೃತ್ಯು ಎಂಬ ಮಾತುಗಳು ಮಾತಿನ ಮಹತ್ವವನ್ನು ಎತ್ತಿ ಹೇಳುತ್ತವೆ. ಹತ್ತು ಮಾತನಾಡುವ ಕಡೆ ಪರಿಣಾಮಕಾರಿಯಾದ ಮನಸ್ಸಿಗೆ ನಾಟುವಂತಹ ಒಂದು ಮಾತು ಸಾಕು. ಮಾತಿನಲ್ಲಿ ಚುರುಕುತನ, ಜಾಣತನವಿರಬೇಕುಸಮಯೋಚಿತ,ಸಂಧರ್ಬೋಚಿತ ನಡತೆಯೊಂದಿಗೆ ಮಾತು ಆಡಿದಾಗಜಗಳಕ್ಕಾಗಲಿ ಮನಸ್ತಾಪಕ್ಕಾಗಲಿ ಆಸ್ಪದವಿರುವುದಿಲ್ಲ. ಹೀಗೆ ಊಟ ಮಾಡುವ ಬಗ್ಗೆ ಮಾತನಾಡುವ ರೀತಿಎರಡೂ ಮಿತವಾಗಿದ್ದರೆ ವಿಶ್ವವನ್ನೇ ಜಯಿಸಬಹುದಲ್ಲವೇ?
5) ಅತಿಆಸೆ ಗತಿಗೆಡಿಸಿತು
ಆಸೆಯೆ ದುಖಃಕ್ಕೆ ಮೂಲ ಎಂದು ಬುದ್ದ ಉಪದೇಶಿಸಿದ ಅತಿ ಆಸೆಯಿಂದ ಮಾನವ ತನ್ನ ಬದುಕನ್ನು ಆಳು ಮಾಡಿಕೊಳ್ಳುತ್ತಾನೆ. ವ್ಯಕ್ತಿತಿಯೊಬ್ಬ ಪ್ರತಿ ದಿನ ಚಿನ್ನದ ಮೊಟ್ಟೆಯನ್ನು ಪಡೆದು ತೃಪ್ತಿ ಪಡದೆ ಕೋಳಿಯ ಹೊಟ್ಟೆಯಲ್ಲಿರುವ ಎಲ್ಲ ಮೊಟ್ಟೆಗಳನ್ನು ಒಟ್ಟಿಗೆ ಪಡೆದುಶ್ರೀಮಂತನಾಗಲು ಕೋಳಿಯನ್ನೇ ಕತ್ತರಿಸುತ್ತಾನೆ ಆದರೆ ಬಂದ ಪ್ರತಿಫಲ? ಸೊನ್ನೆ ಅತಿಯಾದ ಆಸೆಯ ಬಲೆಗೆ ಬಿದ್ದ ವ್ಯಕ್ತಿ ಸಾಧಿಸಿದ್ದಾದರೂ ಏನು? ಹಾಗಾಗಿ ಆಸೆ ಇರಬೇಕು ಆದರೆ ಆ ಆಸೆಗೆ ಮಿತಿ ಇರಬೇಕು ನಾವು ಆಸೆಯನ್ನು ಹಿಡಿತದಲ್ಲಿಟ್ಟು ಕೊಂಡು ಬದುಕಿನಲ್ಲಿ ತಾಳ್ಮೆ, ಶ್ರದ್ಧೆ, ಸಂಯಮ,ಪರಿಶ್ರಮ ಮತ್ತು ಸಂತೃಪ್ತಿಗಳ ಮೂಲಕ ನೆಮ್ಮದಿ ಕಂಡುಕೊಳ್ಳುವುದು ಲೇಸು.
6) ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು
“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ”ಎಂಬ ಮಾತನ್ನೇ ಮೇಲಿನ ಗಾದೆ ಧ್ವನಿಸುತ್ತದೆ.ಹಡೆದ ತಾಯಿ ಜನ್ಮಕೊಟ್ಟ ನಾಡು, ಸ್ವರ್ಗಕ್ಕಿಂತ ಶ್ರೇಷ್ಠವಾದವು. ಅವುಗಳ ರಕ್ಷಣೆಗಾಗಿ ನಾವುಸದಾ ಸಿದ್ಧರಾಗಿರಬೇಕು. ಹೆತ್ತ ತಾಯಿಯ ಮಡಿಲಲ್ಲಿ ದೊರಕುವ ಸುಖಕ್ಕಿಂತ ಸಮಾನವಾದಸುಖ ಬೇರೊಂದಿಲ್ಲ ತಾಯಿ ಮಕ್ಕಳನ್ನು ಹೆತ್ತು ಹೊತ್ತು ಸಲಹಿ ತನ್ನ ಸುಖವನ್ನೆಲ್ಲ ಮರೆತು ಆಹಾರ ನಿದ್ರೆಗಳನ್ನು ತೊರೆದು ಮಗುವಿನ ಲಾಲನೆ ಪಾಲನೆಯಲ್ಲಿ ಸುಖವನ್ನು ಕಾಣುತ್ತಾಳೆ ಹಾಗೆಯೇ ನಾವು ಜನ್ಮ ಪಡೆದ ನಾಡು ನಮಗೆ ಇಂದ್ರನ ನಂದನವನಕ್ಕಿಂತಲೂ ಮಿಗಿಲು. ನಮಗೆಜಗತ್ತಿನಾದ್ಯಂತ ಉನ್ನತ ಹುದ್ದೆಗಳು ದೊರೆತರೂ ನಮ್ಮ ಮನ ಸದಾ ತಾನ್ನಾಡನ್ನು ಕುರಿತು ಚಿಂತಿಸುತ್ತದೆ. ಇದಕ್ಕೆ ಮೂಲ ಕಾರಣ ನಮ್ಮಲ್ಲಿ ಹುದುಗಿರುವ ಮಾತೃ ಭೂಮಿಯ ಕುರಿತಾದ ಗೌರವ ಭಾವನೆಗಳು ಒಟ್ಟಾರೆ ನಮ್ಮ ತಾಯಿ ಮತ್ತು ನಮ್ಮ ತಾಯ್ಯಾಡಿನ ರಕ್ಷಣೆಗಾಗಿ ಪ್ರಾಣ ಕೊಡಲು ನಾವು ಸಿದ್ಧರಾಗಿರಬೇಕು.
7) ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ಸತ್ಯ ಸದಾ ಜೀವಂತವಾದುದು.ಸುಳ್ಳು ಎಂದೂ ಸುಖವನ್ನು ಕೊಡಲಾರದು ಎಂಬುದೇ ಈ ಗಾದೆ ಮಾತಿನ ಅರ್ಥ.ಸತ್ಯವನ್ನು ಹೇಗೆ ಹುದುಗಿಸಿಟ್ಟರೂ ಮರೆಮಾಚಿದರೂ ಒಂದಲ್ಲ ಒಂದು ದಿನ ಪ್ರಕಟ ವಾಗಿಯೇ ತೀರುತ್ತದೆ ಈ ಕಾರಣಕ್ಕಾಗಿಯೇ ಸತ್ಯಕ್ಕೆ ಜಯ ಸತ್ಯಮೇವ ಜಯತೆ ಎಂದು ಉಪನಿಷತ್ತು ಸಾರಿರುವುದು. ಅಂತೆಯೇ 'ಸತ್ಯಂ ಶಿವಂ ಸುಂದರಂ ಸತ್ಯವು ಶಿವನಷ್ಟೇಪ್ರಕಾಶಮಾನವಾದುದು. ಸುಳ್ಳು ಕತ್ತಲೆಯಾದರೆ ಸತ್ಯವು ಜ್ಯೋತಿ ಅದಕ್ಕೆ ಎಂದೂ ಸಾವಿಲ್ಲ ಜೀವನದಲ್ಲಿ ನಾವು ಎಷ್ಟೇ ಸುಳ್ಳನ್ನು ಹೇಳಬಹುದು ಆದರೆ ಅದು ಕ್ಷಣಿಕ ನಮ್ಮ ಅಂತರಾತ್ಮಕ್ಕೆ ಮಾತ್ರ ಸತ್ಯ ಗೊತ್ತಿರುತ್ತದೆ. ಸುಳ್ಳಿನಿಂದ ಸುಖವೆಷ್ಟೇ ಇದ್ದರೂ ಸಹ ಆ ಸುಳ್ಳು ಸತ್ಯಕ್ಕೆ ಹೆದರುತ್ತದೆ.ಆದರೆ ಅದೆ ಸತ್ಯವನ್ನು ಮುಚ್ಚಲು ಹಲವಾರು ಸುಳ್ಳಿನ ಸರಮಾಲೆಯನ್ನೇ ನಾವು ಕಟ್ಟುತ್ತೇವೆ. ಒಮ್ಮೆ ನಾವು ಸುಳ್ಳುಗಾರರೆಂದು ಸಾಬೀತಾದರೆ ಶಾಶ್ವತ ದುಃಖವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಸತ್ಯ ಶಾಶ್ವತ ಸುಳ್ಳು ಕ್ಷಣಿಕ..
8) ಚಿಂತೆಯೇ ಮುಪ್ಪು ಸಂತೋಷವೇ ಯೌವನ
ಇದು ಅನುಭವ ಪೂರ್ಣವಾದ ಉಕ್ತಿ. ಗಾದೆಗಳಿಂದ ಜೀವನ ಮೌಲ್ಯ ಹೆಚ್ಚುತ್ತದೆ. ಚಿಂತೆಗೂ ಚಿತೆಗೂ ಒಂದು ಸೋನ್ನೆಯಷ್ಟೇ ವ್ಯತ್ಯಾಸ. ಆದರೆ ಚಿತೆ ಸತ್ತ ವ್ಯಕ್ತಿಯನ್ನು ಸುಟ್ಟರೆ ಚಿಂತೆ ಜೀವಂತ ವ್ಯಕ್ತಿಯನ್ನೇ ಸುಡುತ್ತದೆ ಹಾಗಾಗಿ ಚಿತೆಗಿಂತಲೂ ಚಿಂತೆ ಹೆಚ್ಚು ಅಪಾಯಕಾರಿ..ಚಿಂತೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿ ಮುಪ್ಪನ್ನು ತರಿಸುತ್ತದೆ. ಅದ್ದರಿಂದ ಚಿಂತೆಯನ್ನು ಬಿಡಬೇಕು.ಜೀವನವೆಲ್ಲ ಬರಿ ಸಂತೋಷವು ಅಲ್ಲ ಚಿಂತೆಯೂ ಅಲ್ಲ ಹಾಗಾಗಿ ಚಿಂತೆಯ ಚಿತೆಯಲ್ಲಿ ಬದುಕಿರುವಾಗಲೇ ಬೇಯುವುದು ತಪ್ಪು ಸಂತೋಷ ಸಾವಿರ ಜನರನ್ನು ಹತ್ತಿರ ತಂದರೆ ಚಿಂತೆ ಸಾವಿರ ಜನರನ್ನು ದೂರಮಾಡುತ್ತದೆ. ಆದರೆ ಸಂತೋಷವು ಬದುಕಬೇಕು, ಸಲ್ಲಬೇಕು, ಗೆಲ್ಲಬೇಕುಎಂಬ ಛಲವನ್ನು ಬೆಳೆಸುತ್ತದೆ.
9) ಹಾಸಿಗೆ ಇದ್ದಷ್ಟು ಕಾಲುಚಾಚು
ಈ ಗಾದೆಯು ಮುಖ್ಯವಾಗಿ ನಮ್ಮ ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಂಡು ಜೀವನ ಮಾಡಬೇಕೆಂದು ತಿಳಿಸಿಕೊಡುತ್ತದೆ. ಹಾಸಿಗೆಯ ಅಳತೆಗೆ ತಕ್ಕಂತೆ ಕಾಲುಚಾಚಿ ಮಲಗುವುದೆಂದರೆ ಇರುವ ಸ್ತಿತಿಗೆ ಹೊಂದಿಕೊಳ್ಳುವುದು ಎಂದರ್ಥ. ಮನುಷ್ಯನ ಆಸೆಗಳಿಗೆ ಇತಿಮಿತಿಯೇ ಇರುವುದಿಲ್ಲ.ಅತಿಆಸೆ ಗತಿಗೆಡಿಸಿತು ಎಂಬಂತೆ ಕೆಲವರು ತಮ್ಮ ಶಕ್ತಿಮೀರಿ ಅಲ್ಲಿ ಇಲ್ಲಿ ಸಾಲಮಾಡಿ ದುಂದುವೆಚ್ಚ ಮಾಡುವುದನ್ನು ನೋಡುತ್ತೇವೆ.ಕೊನೆಗೆ ಸಾಲ ತೀರಿಸಲಾಗದೆ ಎಲ್ಲವನ್ನೂ ಮಾರಿ ಹಿಂದೆ ಇದ್ದುದನ್ನೂ ಕಳೆದುಕೊಳ್ಳುವ ಸಂಭವ ಬರುತ್ತದೆ.ಆದುದರಿಂದ ನಾವು ಮೊದಲುಇರುವುದರಲ್ಲೇ ತೃಪ್ತಿಕರವಾದ ಆರೋಗ್ಯಕರವಾದ ಜೀವನವನ್ನು ನಡೆಸಬೇಕು ಇಲ್ಲದಿದ್ದರೆ.ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ತಿಳಿಸುತ್ತದೆ.
10) ಉಪ್ಪಿಗಿಂತ ರುಚಿಇಲ್ಲ ; ತಾಯಿಗಿಂತ ಬಂಧುವಿಲ್ಲ
ತಾಯಿಗಿಂತ ಮಿಗಿಲಾದ ಬಂಧುವಾಗಲಿ ಉಪ್ಪಿಗಿಂತ ರುಚಿಯಾದ ಖಾದ್ಯವಾಗಲಿ ಯಾವುದೂ ಇಲ್ಲವೆಂಬುದು ಈ ಗಾದೆ ಮಾತಿನ ಅರ್ಥ ಒಂದು ಮೃಷ್ಟಾನ್ನ ಭೋಜನಕ್ಕೆಅನೇಕ ಬೆಲೆ ಬಾಳುವ ವಸ್ತುಗಳನ್ನೆಲ್ಲ ತಂದು ಘಮಘಮ ಎನ್ನುವಂತೆ ಅಡುಗೆಯನ್ನು ಮಾಡಿ ಅಗ್ಗದ ಬೆಲೆಯ ಉಪ್ಪನ್ನು ಹಾಕುವುದನ್ನು ಮರೆತರೆ ಆ ಭೋಜನಕ್ಕೆ ಅರ್ಥವಿರದು ಉಪ್ಪು ಇಲ್ಲದ ಅಡುಗೆ ಯಾರೂ ತಿನ್ನಲು ಸಾದ್ಯವಿಲ್ಲ ತಾಯಿದ್ರೆ ತವರೆಚ್ಚು ತಂದಿದ್ರೆ ಬಳಗೆಚ್ಚು ಎನ್ನುವ ಜನಪದ ಮಾತು ಯಾರೂ ಆದರು ಹೆತ್ತ ತಾಯಂತೆ ಆದಾರೋ ಸಾವಿರ ಸೌದೆ ಒಲೆಯಲ್ಲಿ ಉರಿದಾರೂ ದೀವಿಗೆಯಂತ ಬೆಳಕುಂಟೆ ಎಂಬ ಮಾತಿನಲ್ಲಿ ತಾಯಿಯ ಮಹತ್ವ ತಿಳಿಯುತ್ತದೆ. ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟತಾಯಿ ಇರಲಾರಳು ತಾಯಿ ನೀಡುವ ಪ್ರೀತಿ ಜಗತ್ತಿನ ಯಾವ ಬಂಧುವೂ ನೀಡಲು ಸಾಧ್ಯವಿಲ್ಲ
💥
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

Post a Comment

0 Comments

Karnataka TET Social Science and Social Science Pedagogy Quiz Series-01/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Karnataka TET Kannada Pedagogy Quiz Series-05/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-05
Kannada Pedagogy PDF for TET Paper 1 and Paper 2/ಕನ್ನಡ ಬೋಧನಾಶಾಸ್ತ್ರ
KARTET Educational Psychology Quiz Series-07/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-07
Karnataka TET Mathematics Pedagogy Quiz Series-01/ಕರ್ನಾಟಕ ಟಿಇಟಿ ಗಣಿತ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Karnataka TET Environmental Science Quiz Series-03/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-03
Karnataka TET Social Science and Social Science Pedagogy Quiz Series-02/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02
Social Science Quizzes For all Competitive Exams Part-100/ಸಮಾಜ ವಿಜ್ಞಾನ ರಸಪ್ರಶ್ನೆಗಳು
General Kannada Quiz For All Competitive Exams Part-59
ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಪಿಡಿಎಫ್ /Pedagogy of Social Science PDF Very Useful For TET, CET Competitive Exams

Important PDF Notes

Ad Code