Ad Code

Ticker

6/recent/ticker-posts

Click Below Image to Join Our Telegram For Latest Updates

ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-3

ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು

Modern Indian History Questions and Answers Part-3

ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-1


ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ...!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ....!!

ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಲೇಬಲ್ಸ್ ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ. ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.

ಇತಿಹಾಸವನ್ನ 3 ಭಾಗ ಮಾಡುತ್ತೇವೆ .

1. ಪ್ರಾಗೈತಿಹಾಸಿಕ ಕಾಲ : ಇಲ್ಲಿ ಲಿಪಿ ಇಲ್ಲ ಓದಲು ಬರೆಯಲು ಸಾಧ್ಯವಿಲ್ಲದನ್ನು ಪ್ರಾಗೈತಿಹಾಸಿಕ ಕಾಲ ಎನ್ನುವರು ಇದರ ಪಿತಾಮಹ ರಾಬರ್ಟ್ ಬ್ರೂಸ್ ಪುಟ್ 

2. ಇತಿಹಾಸ ಪೂರ್ವ ಕಾಲ : ಇಲ್ಲಿ ಲಿಪಿ ಇದೆ ಆದರೆ ಓದಲು- ಬರೆಯಲು ಸಾಧ್ಯವಿಲ್ಲದನ್ನು ಇತಿಹಾಸ ಪೂರ್ವ ಕಾಲ ಎನ್ನುವರು. ಇಲ್ಲಿ ಚಿತ್ರ ಲಿಪಿಯನ್ನು ಕಾಣುತ್ತೇವೆ.

3. ಇತಿಹಾಸ ಕಾಲ : ಇಲ್ಲಿ ಲಿಪಿ ಇದೆ ಓದಬಹುದು ಮತ್ತು ಬರೆಯಲುಬಹುದು.

ಈ ಇತಿಹಾಸ ಕಾಲವನ್ನು ಅಧ್ಯಯನದ ದೃಷ್ಟಿಯಿಂದ ಮತ್ತೆ 3 ಭಾಗ ಮಾಡಲಾಗುತ್ತದೆ.

1. ಪ್ರಾಚೀನ ಭಾರತದ ಇತಿಹಾಸ : ಇದು ಸಿಂಧೂ ನಾಗರಿಕತೆಯಿಂದ ಸಾ.ಶ.1206 ವರೆಗಿನ ಕಾಲ

2. ಮಧ್ಯಕಾಲೀನ ಭಾರತದ ಇತಿಹಾಸ : ಇದು ಸಾ.ಶ.1206 ರಿಂದ ಸಾ.ಶ.1707ರವರೆಗಿನ ಇತಿಹಾಸವನ್ನ ಮಧ್ಯಯುಗಿನ ಇತಿಹಾಸ ಅಂತ ಹೇಳಬಹುದು ಇಲ್ಲಿ 2 ಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು 1. ದೆಹಲಿ ಸುಲ್ತಾನರು 2. ಮೊಘಲ್ ಸಾಮ್ರಾಜ್ಯ 

3. ಆಧುನಿಕ ಭಾರತದ ಇತಿಹಾಸ : ಇದು ಸಾ.ಶ.1707 ರಿಂದ ಸಾ.ಶ. 1947 ರೋ ವರೆಗಿನ ಇತಿಹಾಸ. ಕೆಲವೊಂದಿಷ್ಟು ಇತಿಹಾಸಕಾರರು ಇದು ಸಾ.ಶ.1498 ರಿಂದ ಸಾ.ಶ.1947ರ ವರೆಗೆ ಎಂದು ಹೇಳುತ್ತಾರೆ.

ಆಧುನಿಕ ಭಾರತದ ಇತಿಹಾಸ ಸಂಕ್ಷಿಪ್ತ ಪರಿಚಯ  :

ಆಧುನಿಕ ಭಾರತದ ಇತಿಹಾಸ ಎಂಬ ಪದವು 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ ಭಾರತದ ಇತಿಹಾಸವನ್ನು ಉಲ್ಲೇಖಿಸುತ್ತದೆ. ಈ ಅವಧಿಯಲ್ಲಿನ ಪ್ರಮುಖ ಐತಿಹಾಸಿಕ ಘಟನೆಗಳೆಂದರೆ

★ ಮೊಘಲ್ ಸಾಮ್ರಾಜ್ಯದ ಅವನತಿ 

★ ಭಾರತದ ಮೇಲೆ ಬ್ರಿಟಿಷ್ ರ ವಿಜಯ

★ 1857 ರ ದಂಗೆ 

★ ಎರಡು ವಿಶ್ವ ಯುದ್ಧಗಳ ಸಾಮಾಜಿಕ - ಆರ್ಥಿಕ ಪರಿಣಾಮಗಳು, ಕ್ಷಾಮಗಳು 

★ ರಾಷ್ಟ್ರೀಯತೆಯ ಉದಯ 

★ ಭಾರತೀಯ ಸ್ವಾತಂತ್ರ್ಯ ಚಳುವಳಿ, ವಿಭಜನೆ

★ ಎಡಪಂಥೀಯ ರಾಜಕೀಯ ಉದಯ 

★ ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣೆಗಳು 

★ ಅಲಿಪ್ತ ಚಳುವಳಿ, ನೆಹರೂ ಅವರ ಪಾತ್ರ 

★ ಜಾಗತೀಕರಣದ ಪರಿಣಾಮಗಳು ಮತ್ತು ಆರ್ಥಿಕ ನೀತಿಯಲ್ಲಿನ ಬದಲಾವಣೆ ಮುಂತಾದವುಗಳು.

ಈಗ ಆಧುನಿಕ ಭಾರತದ ಇತಿಹಾಸಕ್ಕೆ ಸಂಬಂಧಪಟ್ಟ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಅಧ್ಯಯನದ ದೃಷ್ಟಿಯಿಂದ 20 ಪ್ರಶ್ನೆಗಳಂತೆ ಪ್ರತಿ ದಿನ ಅಪ್ಲೋಡ್ ಮಾಡಲಾಗುವುದು. ಈ ಒಂದು ವಿಷಯದ ಮೇಲೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಮಾರು 10-12 ಪ್ರಶ್ನೆಗಳು ಪರೀಕ್ಷೆಗೆ ಬರುವ ಸಾಧ್ಯತೆ ಹೆಚ್ಚು ಹಾಗಾಗಿ ಆ ಒಂದು ಕಾರಣಕ್ಕೆ ಈ ಒಂದು ಸಣ್ಣ ಪ್ರಯತ್ನ ಇದರ ಸದುಪಯೋಗ ಪಡೆದುಕೊಳ್ಳಿ.

ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು

Modern Indian History Questions and Answers Part-3

1. ತಾನೇ ಪೇಶ್ವೆ ಎಂದು ಘೋಷಿಸಿ ಕಾನ್ಪುರ ದಂಗೆಯ ನಾಯಕತ್ವ ವಹಿಸಿದವನು

ಎ) ಬಹದ್ದೂರ್ ಷಾ

ಬಿ) ತಾಂತ್ಯಾಟೋಪೆ

ಸಿ) ನಾನಾ ಸಾಹೇಬ್ 

ಡಿ) ವಾಜಿದ್ ಅಲಿ

ಸರಿಯಾದ ಉತ್ತರ : ಸಿ) ನಾನಾ ಸಾಹೇಬ್ 

2. ಭಾರತದ ಒಕ್ಕೂಟದಲ್ಲಿ ಕಾಶ್ಮೀರವು ವಿಲೀನಗೊಂಡ ವರ್ಷವಿದು

ಎ) 1947 

ಬಿ) 1949

ಸಿ) 1951

ಡಿ) 1961

ಸರಿಯಾದ ಉತ್ತರ : ಎ) 1947 

3. 1962ರಲ್ಲಿ ಚೀನಾ ಭಾರತದ ಮೇಲೆ ಧಾಳಿ ಮಾಡಲು ಕಾರಣ

ಎ) ದಲೈಲಾಮ ಮತ್ತು ಅವನ ಅನುಯಾಯಿಗಳಿಗೆ ಆಶ್ರಯ ನೀಡಿದ್ದು 

ಬಿ) ಭಾರತ ಪಂಚಶೀಲ ತತ್ತ್ವಗಳಿಗೆ ಸಹಿ ಹಾಕಿದ್ದು

ಸಿ) ಭಾರತದಿಂದ ನಿರಾಶ್ರಿತರು ಚೀನಾಕ್ಕೆ ನುಸುಳಿದ್ದು

ಡಿ) ಚೀನಾದಲ್ಲಾದ ಸಮಾಜವಾದಿ ಕ್ರಾಂತಿ

ಸರಿಯಾದ ಉತ್ತರ : ಎ) ದಲೈಲಾಮ ಮತ್ತು ಅವನ ಅನುಯಾಯಿಗಳಿಗೆ ಆಶ್ರಯ ನೀಡಿದ್ದು  

4.“ನನಗೆ ಹೊಡೆದ ಹೊಡೆತಗಳು ಭಾರತದಲ್ಲಿ ಬ್ರಿಟಿಷ್ ಆಡಳಿತದ ಶವಪೆಟ್ಟಿಗೆಯ ಕೊನೆಯ ಮೊಳೆಗಳಾಗಲಿವೆ" ತಮ್ಮ ಸಾವಿಗೆ ಮುನ್ನ ಹೀಗೆಂದು ಘೋಷಿಸಿದವರು-

ಎ) ಬಾಲ ಗಂಗಾಧರ ತಿಲಕ್‌

ಬಿ) ಸುಭಾಷ್ ಚಂದ್ರಬೋಸ್

ಸಿ) ಲಾಲಾ ಲಜಪತರಾಯ್ 

ಡಿ) ಬಿಪಿನ್ ಚಂದ್ರಪಾಲ್

ಸರಿಯಾದ ಉತ್ತರ : ಎ) ಬಾಲ ಗಂಗಾಧರ ತಿಲಕ್‌ 

5. ಸ್ವಾತಂತ್ರ್ಯಾ ನಂತರ ಭಾರತ ಸರ್ಕಾರಕ್ಕೆ ಹರಸಾಹಸದ ಕೆಲಸವಾದದ್ದು

ಎ) ನಿರಾಶ್ರಿತರ ಸಮಸ್ಯೆ 

ಬಿ) ಮತೀಯ ಗಲಭೆಗಳು 

ಸಿ) ಸರ್ಕಾರದ ರಚನೆ

ಡಿ) ದೇಶೀಯ ಸಂಸ್ಥಾನಗಳ ವಿಲಿನೀಕರಣ

ಸರಿಯಾದ ಉತ್ತರ : ಎ) ನಿರಾಶ್ರಿತರ ಸಮಸ್ಯೆ & ಡಿ) ದೇಶೀಯ ಸಂಸ್ಥಾನಗಳ ವಿಲಿನೀಕರಣ

6. 1857ರ ಜೂನ್‌ ನಲ್ಲಿ ಬ್ರಿಟಿಷ್ ವಿರುದ್ಧ ಲಕ್ಕೋದಲ್ಲಿ ದಂಗೆ ಎದ್ದವರು

ಎ) ಬೇಗಂ ಹಜರತ್ ಮಹಲ್

ಬಿ) ಮಂಗಲ್ ಪಾಂಡೆ

ಸಿ) ನಾನಾ ಸಾಹೇಬ್ 

ಡಿ) ತಾಂತ್ಯಾ ಟೋಪಿ

ಸರಿಯಾದ ಉತ್ತರ : ಎ) ಬೇಗಂ ಹಜರತ್ ಮಹಲ್

7. ತರುಣ ಬಂಗಾಳ ಚಳವಳಿಯ ಹರಿಕಾರ

ಎ) ಹನ್ರಿ ಲೂಯಿಸ್ ವಿವಿಯನ್ ಡೆರೋಜಿಯೊ

ಬಿ) ಆನಿಬೆಸೆಂಟ್ 

ಸಿ) ಮೇಡಂ ಬ್ಲಾವಟ್ಸ್ಕಿ

ಡಿ) ಕಲೋನಲ್ ಆಲ್ಕಾಬ

ಸರಿಯಾದ ಉತ್ತರ : ಎ) ಹನ್ರಿ ಲೂಯಿಸ್ ವಿವಿಯನ್ ಡೆರೋಜಿಯೊ

8. 3ನೇ ಕರ್ನಾಟಿಕ್ ಕದನದಲ್ಲಿ ಫ್ರೆಂಚರು ಸೋಲನ್ನಪ್ಪದಿದ್ದರೇ 

ಎ. ಫ್ರೆಂಚರ ಸಾಮ್ರಾಜ್ಯ ಸ್ಥಾಪನೆಯಾಗುತ್ತಿತ್ತು. 

ಬಿ. ಫ್ರೆಂಚರು ಹಾಗೂ ಇಂಗ್ಲೀಷರ ನಡುವೆ ಸ್ನೇಹಬಾಂಧವ್ಯ ಏರ್ಪಾಡಾಗುತ್ತಿತ್ತು. 

ಸಿ. ಭಾರತದಲ್ಲಿ ಕೈಗಾರಿಕಾ ಕ್ರಾಂತಿಯಾಗುತ್ತಿತ್ತು.

ಡಿ. ಫ್ರೆಂಚ್ ಭಾಷೆ ಭಾರತೀಯರ ಸಂಪರ್ಕ ಭಾಷೆಯಾಗುತ್ತಿತ್ತು.  

ಎ) ಸಿ ಮತ್ತು ಡಿ ಮಾತ್ರ

ಬಿ) ಬಿ ಮತ್ತು ಡಿ ಮಾತ್ರ

ಸಿ) ಎ ಮತ್ತು ಡಿ ಮಾತ್ರ 

ಡಿ) ಬಿ ಮತ್ತು ಸಿ ಮಾತ್ರ

ಸರಿಯಾದ ಉತ್ತರ : ಸಿ) ಎ ಮತ್ತು ಡಿ ಮಾತ್ರ 

9. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಈ ಕೆಳಗಿನ ಯಾವ ಘಟನೆ ಕಾರಣವಲ್ಲ?

ಎ) ದಂಗೆಕೋರರಲ್ಲಿ ಸಮಾನ ಉದ್ದೇಶ ಇರಲಿಲ್ಲ.

ಬಿ) ಬ್ರಿಟೀಷರು ಜಾರಿಗೆ ತಂದ ದ್ವಿಸರ್ಕಾರದ ಪದ್ಧತಿ 

ಸಿ) ಸುಸಜ್ಜಿತ ಸೇನೆ ಹಾಗೂ ಇತರೆ ಸಂಪನ್ಮೂಲಗಳು ಬ್ರಿಟೀಷರಿಗೆ ಸಂಗ್ರಾಮ ಹತ್ತಿಕ್ಕಲು ಸಹಕರಿಸಿದವು.

ಡಿ) ಭಾರತದ ಅರಸರುಗಳು ಒಗ್ಗೂಡಿ ದಂಗೆಗೆ ಚಾಲನೆ ನೀಡಲಿಲ್ಲ.

ಸರಿಯಾದ ಉತ್ತರ : ಬಿ) ಬ್ರಿಟೀಷರು ಜಾರಿಗೆ ತಂದ ದ್ವಿಸರ್ಕಾರದ ಪದ್ಧತಿ  

10. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕಂಪನಿ ಸರ್ಕಾರದ ವಿರುದ್ಧ ದಂಗೆ ಏಳಲು ಕಾರಣವಾದ ನೀತಿ.

ಎ) ಇಂಗ್ಲೀಷ್ ಶಿಕ್ಷಣ ನೀತಿ

ಬಿ) ದತ್ತು ಮಕ್ಕಳಿಗೆ ಹಕ್ಕಿಲ್ಲ

ಸಿ) ಸಬ್ಸಿಡಿಯರಿ ಅಲೆಯನ್ಸ್

ಡಿ) ವರ್ಣಭೇದ

ಸರಿಯಾದ ಉತ್ತರ : ಬಿ) ದತ್ತು ಮಕ್ಕಳಿಗೆ ಹಕ್ಕಿಲ್ಲ

11. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳ ಸಂಹಾರ ಗುಂಪನ್ನು ಗುರುತಿಸಿ,

1. ವಿ. ಡಿ ಸಾವರ್ಕರ್

2. ಬಾಲಗಂಗಾಧರ ತಿಲಕ್

3. ಕುದಿರಾಮ್ ಬೋಸ್ 

4. ಭಗತ್ ಸಿಂಗ್ 

5. ಲಾಲಾ ಲಜಪತ್ ರಾಯ್

6. ಬಿಪಿನ್ ಚಂದ್ರ ಪಾಲ್

7. ಚಂದ್ರಶೇ ಆಜಾದ್

8. ಮದನ್ ಲಾಲ್ ಡಿಂಗ್ರ 

ಎ) 1, 2, 3, 8, 7

ಬಿ) 1, 3, 4, 7.8

ಸಿ) 2, 5, 6, 8, 4

ಡಿ) 3. 2. 1, 7, 8

ಸರಿಯಾದ ಉತ್ತರ : ಬಿ) 1, 3, 4, 7.8

12.  "ಬ್ರಿಟಿಷರ ಭೂಕಂದಾಯ ನೀತಿಗಳಿಂದ ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು', ಎಂದು ಹೇಳಿದವರು

ಎ) ಚಾರ್ಲ್ಸ್ ಮೆಟಕಾಫ್

ಬಿ) ಜೋನಾಥನ್ ಡಂಕನ್

ಸಿ) ಚಾರ್ಲ್ಸ್ ಗ್ರಾಂಟ್ 

ಡಿ) ಲಾರ್ಡ್ ಕಾರ್ನ್‌ವಾಲೀಸ್

ಸರಿಯಾದ ಉತ್ತರ : ಎ) ಚಾರ್ಲ್ಸ್ ಮೆಟಕಾಫ್ 

13. ನೀಡಿರುವ ಘಟನೆಗಳ ಸರಿಯಾದ ಕಾಲಾನುಕ್ರಮಣಿಕೆಯನ್ನು ಗುರುತಿಸಿ. 

ಎ. ಪ್ಲಾಸಿ ಕದನ

ಬಿ. ಸಹಾಯಕ ಸೈನ್ಯ ಪದ್ಧತಿ

ಸಿ. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

ಡಿ. ಬಕ್ಸಾರ್ ಕದನ

ಎ) ಎ ಬಿ ಸಿ ಡಿ

ಬಿ) ಎ ಡಿ ಬಿ ಸಿ

ಸಿ) ಡಿ ಸಿ ಎ ಬಿ 

ಡಿ) ಸಿ ಬಿ ಎ ಡಿ

ಸರಿಯಾದ ಉತ್ತರ : ಬಿ) ಎ ಡಿ ಬಿ ಸಿ

14. ರೈತವಾರಿ ಪದ್ಧತಿಯನ್ನು ಬಾರಮಹಲ್ ಪ್ರಾಂತ್ಯದಲ್ಲಿ ಮೊದಲಿಗೆ ಜಾರಿಗೊಳಿಸಿದವನು.

ಎ) ಆರ್.ಎಂ.ಬರ್ಡ್

ಬಿ) ಜೇಮ್ಸ್ ಥಾಮ್ಸನ್ 

ಸಿ) ಅಲೆಗ್ಸಾಂಡರ್ ರೀಡ್

ಡಿ) ಲಾರ್ಡ್ ವೆಲ್ಲೆಸ್ಲಿ

ಸರಿಯಾದ ಉತ್ತರ : ಸಿ) ಅಲೆಗ್ಸಾಂಡರ್ ರೀಡ್ 

15. ಇವುಗಳಲ್ಲಿ ಮಂದಗಾಮಿ ನಾಯಕರ ಸರಿಯಾದ ಗುಂಪು:

ಎ) ಎಂ.ಜಿ.ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ಅರಬಿಂದೋ ಘೋಷ್, ರಾಜಗುರು

ಬಿ) ಎಂ.ಜಿ.ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ, ದಾದಾಬಾಯಿ ನವರೋಜಿ

ಸಿ) ಅರಬಿಂದೋ ಘೋಷ್, ರಾಜಗುರು, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್

ಡಿ) ಬಾಲಗಂಗಾಧರ್ ತಿಲಕ್, ಬಿಪಿನ್ ಚಂದ್ರಪಾಲ್, ಲಾಲ ಲಜಪತ ರಾಯ್, ಅರಬಿಂದೋ ಘೋಷ್

ಸರಿಯಾದ ಉತ್ತರ : ಬಿ) ಎಂ.ಜಿ.ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ, ದಾದಾಬಾಯಿ ನವರೋಜಿ  

16. 1893ರಲ್ಲಿ ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದ ನಟಾಲ್‌ ಗೆ ಹೋಗಲು ಕಾರಣವೆಂದರೆ:

ಎ) ವರ್ಣಭೇದ ನೀತಿಯ ವಿರುದ್ಧ ಹೋರಾಡಲು

ಬಿ) ದಕ್ಷಿಣ ಆಫ್ರಿಕಾದ ಜನರ ನೆರವು ಪಡೆಯಲು

ಸಿ) ನೆಲ್ಸನ್ ಮಂಡೇಲಾ ಅವರನ್ನು ಭೇಟಿ ಮಾಡಲು

ಡಿ) ದಾದಾ ಅಬ್ದುಲ್ಲಾ ಮತ್ತು ಕಂಪೆನಿಯ ವಕಾಲತ್ತು ವಹಿಸಲು

ಸರಿಯಾದ ಉತ್ತರ : ಡಿ) ದಾದಾ ಅಬ್ದುಲ್ಲಾ ಮತ್ತು ಕಂಪೆನಿಯ ವಕಾಲತ್ತು ವಹಿಸಲು  

17. ' ನೀಲಿ ನೀರಿನ ನೀತಿ 'ಯನ್ನು ಜಾರಿಗೆ ತಂದವನು

ಎ) ವಾಸ್ಕೋಡಗಾಮ

ಬಿ) ಅಲ್ಫೋನ್ಸೊ ಡಿ ಆಲ್ಬುಕರ್ಕ್

ಸಿ) ರಾಬರ್ಟ್ ಕ್ಲೈವ್

ಡಿ) ಫ್ರಾನ್ಸಿಸ್ಕೋ ಡಿ ಆಲ್ಮೇಡ

ಸರಿಯಾದ ಉತ್ತರ : ಡಿ) ಫ್ರಾನ್ಸಿಸ್ಕೋ ಡಿ ಆಲ್ಮೇಡ

18. 18. ಪ್ಲಾಸಿ ಕದನ ನಡೆದ ವರ್ಷ

ಎ) 1764

ಬಿ) 1757

ಸಿ) 1857

ಡಿ) 1761

ಸರಿಯಾದ ಉತ್ತರ : ಬಿ) 1757

19. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ಧತಿ

ಎ) ದಿವಾನಿ ಹಕ್ಕು ಪದ್ಧತಿ

ಬಿ) ಖಾಯಂ ಜಮೀನ್ದಾರಿ ಪದ್ಧತಿ

ಸಿ) ಮಹಲ್ವಾರಿ ಪದ್ಧತಿ

ಡಿ) ರೈತವಾರಿ ಪದ್ಧತಿ

ಸರಿಯಾದ ಉತ್ತರ : ಡಿ) ರೈತವಾರಿ ಪದ್ಧತಿ 

20. ಕೊಟ್ಟಿರುವ ಹೇಳಿಕೆಗಳನ್ನು ಓದಿರಿ ಮತ್ತು ಸರಿಯಾದ ಉತ್ತರವನ್ನು ಆರಿಸಿ.

ಪ್ರತಿಪಾದನೆ (A) :ಲಾರ್ಡ್ ಕಾರ್ನ್‌ವಾಲೀಸನು ಭಾರತೀಯರಿಗೆ  ಮಾತ್ರ ಕೆಳದರ್ಜೆಯ ಉದ್ಯೋಗಗಳನ್ನು ನೀಡಿದನು.

ಸಮರ್ಥನೆ (R) : ಲಾರ್ಡ್ ಕಾರ್ನವಾಲೀಸನು ''ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ" ಎಂದು ವಾದಿಸಿದನು.

ಎ) 'A' ಮತ್ತು 'R' ಎರಡೂ ಸರಿ ಮತ್ತು 'R' 'A' ನ ಸರಿಯಾದ ವಿವರಣೆಯಾಗಿದೆ

ಬಿ) 'A' ಮತ್ತು 'R' ಎರಡೂ ಸರಿ ಆದರೆ 'R' 'A' ನ ಸರಿಯಾದ ವಿವರಣೆಯಾಗಿಲ್ಲ.

ಸಿ) 'A' ಸರಿ ಆದರೆ 'R' ತಪ್ಪು

ಡಿ) 'R' ಸರಿ ಆದರೆ 'A' ತಪ್ಪು

ಸರಿಯಾದ ಉತ್ತರ : ಎ) 'A' ಮತ್ತು 'R' ಎರಡೂ ಸರಿ ಮತ್ತು 'R' 'A' ನ ಸರಿಯಾದ ವಿವರಣೆಯಾಗಿದೆ  

Post a Comment

0 Comments

ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-1
Social Science Quizzes For all Competitive Exams Part-122/ಸಮಾಜ ವಿಜ್ಞಾನ ರಸಪ್ರಶ್ನೆಗಳು
ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-2
General Science Quiz In Kannada For All Competitive Exams -72/ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಜ್ಞಾನ ರಸಪ್ರಶ್ನೆಗಳು
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Social Science Quizzes For all Competitive Exams Part-117/ಸಮಾಜ ವಿಜ್ಞಾನ ರಸಪ್ರಶ್ನೆಗಳು
General Science Quiz In Kannada For All Competitive Exams -71/ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಜ್ಞಾನ ರಸಪ್ರಶ್ನೆಗಳು
Social Science Quizzes For all Competitive Exams Part-116/ಸಮಾಜ ವಿಜ್ಞಾನ ರಸಪ್ರಶ್ನೆಗಳು
General Science Quiz In Kannada For All Competitive Exams -70/ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಜ್ಞಾನ ರಸಪ್ರಶ್ನೆಗಳು
Social Science Quizzes For all Competitive Exams Part-118/ಸಮಾಜ ವಿಜ್ಞಾನ ರಸಪ್ರಶ್ನೆಗಳು

Important PDF Notes

Ad Code