Ad Code

Ticker

6/recent/ticker-posts

Click Below Image to Join Our Telegram For Latest Updates

🔥ಕೃತಿಕಾರರ ಪರಿಚಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್ 🔥

           🔥ಮಾಸ್ತಿ ವೆಂಕಟೇಶ ಅಯ್ಯಂಗಾರ್ 🔥


             ಕನ್ನಡ ಸಾಹಿತ್ಯ ಲೋಕದಲ್ಲಿ 'ಸಣ್ಣಕಥೆಗಳ ಜನಕ 'ರೆಂದೇ ಖ್ಯಾತಿಪಡೆದು, 'ಶ್ರೀನಿವಾಸ ' ಕಾವ್ಯನಾಮದಿಂದ ಹೆಸರಾಂತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ೬-೬-೧೮೯೧ ರಲ್ಲಿ ಜನಿಸಿದರು. ಈ ತುಂಬು ಬಡತನವಿದ್ದರೂ ಕಷ್ಟ ಪಟ್ಟು ಹೆಚ್ಚು ವಿದ್ಯಾಭ್ಯಾಸ ಪಡೆದ ಮಾಡಿ ಉತ್ತಮ ಗುಣಮಟ್ಟದ ದರ್ಜೆಯಲ್ಲಿ ಇಂಗ್ಲೀಷ್ ಎಂ. ಎ. ಪದವಿ ಪಡೆದರು. ' ಮೈಸೂರು ಸಿವಿಲ್ ಸರ್ವೀಸ್ ' ಪರೀಕ್ಷೆಯಲ್ಲಿ ಮೊದಲಸ್ಥಾನ ಪಡೆದು ಅಸಿಸ್ಟೆಂಟ್ ಕಮಿಷನರ್ ಆಗಿ ಅವರು ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸಿ ನಿವೃತ್ತರಾದರು. 

           ಇವರು ಕಾವ್ಯ, ನಾಟಕ, ಕಾದಂಬರಿ ವಿಮರ್ಶೆ  ಹೀಗೆ ಕನ್ನಡ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಇವರ ಸಣ್ಣಕಥೆಗಳು ಒಟ್ಟು ಹದಿಮೂರು ಸಂಪುಟಗಳಲ್ಲಿ ಪ್ರಕಟವಾಗಿವೆ. ' ಗೌತಮಿ ಹೇಳಿದ ಕಥೆ ', 'ಸಾರಿಪುತ್ರನ ಕೊನೆಯ ದಿನಗಳು ', ' ಕುಚೇಲನ ಭಾಗ್ಯ ', 'ಹೇಮಕೂಟದಿಂದ ಬಂದ ಮೇಲೆ ', 'ಚಿಕ್ಕವೀರ ರಾಜೇಂದ್ರ ಮೊದಲಾದವು ಪ್ರಮುಖ ಕೃತಿಗಳು. ಇವರ ಚಿಕ್ಕವೀರರಾಜೇಂದ್ರ ಕೃತಿಗೆ ೧೯೮೩ ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರು ೬-೬-೧೯೮೬ ರಲ್ಲಿ ನಿಧನರಾದರು. 

💢💢💢💢💢💢💢💢💢💢💢💢💢💢💢💢💢

Post a Comment

0 Comments

Important PDF Notes

Ad Code