ಇತಿಹಾಸದ 50 ಪ್ರಮುಖ ಪ್ರಶ್ನೋತ್ತರಗಳು.
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಇತಿಹಾಸದ 50 ಆಯ್ದ ಪ್ರಮುಖ ಪ್ರಶ್ನೋತ್ತರಗಳು.
1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
👉 ಮಲ್ಲಬೈರೆಗೌಡ.
2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
👉 ಟಿಪ್ಪು ಸುಲ್ತಾನ್.
3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
👉 ಚಿತ್ರದುರ್ಗ.
4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
👉 ಕೃಷ್ಣದೇವರಾಯ.
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
👉 ಪಂಪಾನದಿ.
6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
👉- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
👉 - ಹೈದರಾಲಿ.
8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
👉 - ಶ್ರೀರಂಗ ಪಟ್ಟಣದ ಪಾಲಹಳ್ಳಿ.
9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
👉 - ಕಲಾಸಿಪಾಳ್ಯ.
10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
👉 - ಕೆಂಗಲ್ ಹನುಮಂತಯ್ಯ.
11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
👉 - 8
12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
👉 - "ಸರ್. ಮಿರ್ಜಾ ಇಸ್ಮಾಯಿಲ್"
13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
👉 - ರಾಮಕೃಷ್ಣ ಹೆಗ್ಗಡೆ.
14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
👉 - ದೇವನಹಳ್ಳಿ (ದೇವನದೊಡ್ಡಿ)
15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
👉 - ವಿಜಯನಗರ ಸಾಮ್ರಾಜ್ಯ.
16)ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದನು ?
👉- ತಿರುಮಲಯ್ಯ.
17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
👉 - ಶ್ರೀರಂಗ ಪಟ್ಟಣದ ಕೋಟೆ.
18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
👉- ಶಿವಮೊಗ್ಗ ಜಿಲ್ಲೆಯ ಮತ್ತೂರ್.
19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
👉 - ಶಿರಸಿಯ ಮಾರಿಕಾಂಬ ಜಾತ್ರೆ.
20) ಆಂಗ್ಲ ಭಾಷೆಯ ಸಾಫ್ಟ್ವೇರ್ & ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಾಂಶ & ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
👉- H.S. ಕೃಷ್ಣ ಸ್ವಾಮಿ ಅಯ್ಯಂಗಾರ
21) ರಾಯಚೂರಿನ ಮೊದಲ ಹೆಸರೇನು?
👉 - ಮಾನ್ಯಖೇಟ.
22) ಕನ್ನಡದ ಮೊದಲ ಕೃತಿ ಯಾವುದು?
👉 - ಕವಿರಾಜ ಮಾರ್ಗ
23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
👉 -ಹಂಪೆ.
24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
👉 - ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
👉- ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
👉 - ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
👉 - ಮುಳ್ಳಯ್ಯನ ಗಿರಿ.
28) ಮೈಸೂರು ಅರಮನೆಯ ಹೆಸರೇನು?
👉 - ಅಂಬಾವಿಲಾಸ ಅರಮನೆ.
29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
👉- ಬಾಬಾ ಬುಡನ್ ಸಾಹೇಬ.
30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
👉- ದಾವಣಗೆರೆ.
31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
👉 - ಆಗುಂಬೆ.
32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
👉 ಬೆಂಗಳೂರು ನಗರ ಜಿಲ್ಲೆ.
33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
👉 - ಹಲ್ಮಿಡಿ ಶಾಸನ.
34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
👉 - ನೀಲಕಂಠ ಪಕ್ಷಿ.
35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
👉 - ಕೆ.ಸಿ.ರೆಡ್ಡಿ.
36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
👉- ಶ್ರೀ ಜಯಚಾಮರಾಜ ಒಡೆಯರು.
37) ಕರ್ನಾಟಕದ ಮೊದಲ ಕವಯತ್ರಿ ಯಾರು?
👉 - ಅಕ್ಕಮಹಾದೇವಿ.
38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
👉 - ವಡ್ಡರಾದನೆ.
39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
👉- ಮೈಸೂರು ವಿಶ್ವವಿಧ್ಯಾನಿಲಯ.
40)ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?ಬರೆದವರು ಯಾರು?
👉 -"ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
👉- ಪುರಂದರ ದಾಸರು.
42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
👉- ರಾಯಚೂರು ಜಿಲ್ಲೆ.
43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
👉 - ರಾಮನಗರ.
44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
👉 - ಮಂಡ್ಯ ಜಿಲ್ಲೆ.
45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು
ಸೃಷ್ಟಿಸುತ್ತದೆ? ಅವು ಯಾವುದು?
👉-3 ಜಲಪಾತಗಳು
1- ಚುಂಚನಕಟ್ಟೆ ಜಲಪಾತ
2- ಶಿವನಸಮುದ್ರ
3- ಹೋಗನೆಕಲ್ ಜಲಪಾತ
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?
👉-ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
👉 - ಗರಗ,[ ಈಗ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ( KKGSS ) ಇದು ಧಾರವಾಡ ಜಿಲ್ಲೆ, ಹುಬ್ಬಳ್ಳಿಯ ಬೆಂಗೇರಿ ಎನ್ನುವ ಹಳ್ಳಿಯಲ್ಲಿದೆ. ]
48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
👉 - ಕೊಡಗು.
49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
👉 - ಲಿಂಗನಮಕ್ಕಿ ಅಣೆಕಟ್ಟು.
50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು?
👉- ಕುವೆಂಪು.
💐💐💐💐💐💐💐💐💐💐💐💐💐💐💐💐💐💐💐

0 Comments