ಭಾರತದಲ್ಲಿದ್ದ ಪ್ರಸಿದ್ಧ ವೈಸರಾಯಗಳು
💢 ವಾರನ್ ಹೇಸ್ಟಿಂಗ್ [ 1773 ರಿಂದ 1785 ]
ಬಂಗಾಳದ ಮೊದಲ ಗೌರ್ನರ್ ಜನರಲ್ ರೇಗುಲೇಟಿಂಗ್ ಆಕ್ಟ್ ಅನ್ನು ಜಾರಿಗೆ ತಂದರು.
💢 ಲಾರ್ಡ್ ಕಾರ್ನ್ ವಾಲ್ಸ್ [1786 ರಿಂದ 1793 ]
ಖಾಯಂ ಜಮೀನ್ದಾರಿ ಪದ್ಧತಿಯನ್ನು 1793 ಜಾರಿಗೆ ತಂದರು. ಭಾರತದ ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದನು. ಕಂದಾಯ ಮತ್ತು ಪೊಲೀಸ್ ಇಲಾಖೆಯಲ್ಲಿ ಸುಧಾರಣೆಗಳನ್ನು ಜಾರಿಗೆ ತಂದರು ಇವನ್ನು ಕಾರ್ನ ವಾಲೀಸ್ ಕೋಡ್ ಎನ್ನುವರು.
💢 ಲಾರ್ಡ್ ವೆಲ್ಲೆಸ್ಲಿ [ 1798 ರಿಂದ 1805 ]
ಇವರನ್ನು ಬಂಗಾಳದ ಹುಲಿ ಎನ್ನುತ್ತಿದ್ದರು. 1798 ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದವರು.
💢 ಲಾರ್ಡ್ ಹೇಸ್ಟಿಂಗ್ [1813 ರಿಂದ 1823 ]
ಲಾರ್ಡ್ ಹೇಸ್ಟಿಂಗ್ ರವರ ಕಾಲಾವಧಿಯಲ್ಲಿ ಮದ್ರಾಸ್ ಗವರನರ್ ಆದ ಥಾಮಸ್ ಮನ್ರೋ ರವರು 1820 ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದರು. ಪೇಶ್ವೆ ಹುದ್ದೆಯನ್ನು ರದ್ದತಿ ಮಾಡಿದರು.
💢 ಲಾರ್ಡ್ ವಿಲಿಯಂ ಬೆಂಟಿಂಗ್[ 1828 ರಿಂದ 1835 ]
ಇವರು ಸತಿ ಪದ್ಧತಿಯನ್ನು 1829 ರಲ್ಲಿ ಹೋಗಲಾಡಿಸಿದರು. ಬಂಗಾಳದ ಕೊನೆಯ ಹಾಗೂ ಭಾರತದ ಮೊದಲ ಗವರ್ನರ್ ಜನರಲ್ ಭಾರತದ ಆಡಳಿತ ಭಾಷೆಯಾಗಿ ಇಂಗ್ಲಿಷ್ ಜಾರಿಗೆ ತಂದರು. 1835 ರಲ್ಲಿ ಮೆಕಾಲೆ ವರದಿ ಜಾರಿಗೆ ತಂದರು.
💢 ಲಾರ್ಡ್ ಡಾಲ್ ಹೌಸಿ [1848 ರಿಂದ 1856 ]
ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆಯನ್ನು ಜಾರಿಗೆ ತಂದನು. ಭಾರತದ ಶಿಕ್ಷಣದ ಮ್ಯಾಗ್ನಕಾರ್ಟ ಎನ್ನುವ ಚಾಲ್ಸ್ ವುಡ್ ರವರ ನೇತೃತ್ವದ ಆಯೋಗ ರಚಿಸಿದನು. 1853 ರಲ್ಲಿ ಮುಂಬೈನಿಂದ ತಾನದ ವರೆಗೆ ರೈಲು ಮಾರ್ಗ ನಿರ್ಮಿಸಿದನು .
💢 ಲಾರ್ಡ್ ಲಿಟ್ಟನ್ [1876 ರಿಂದ 1880 ]
ದೇಶೀಯಾ ಭಾಷಾ ಪತ್ರಿಕಾ ಕಾಯ್ದೆಯನ್ನು 1878 ರಲ್ಲಿ ಜಾರಿಗೆ ತಂದರು.
💢 ಲಾರ್ಡ್ ಡಫರಿನ್ [1884 ರಿಂದ 1888]
ಇವರ ಅವಧಿಯಲ್ಲಿ 1885 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಯಾಯಿತು.
💢 ಲಾರ್ಡ್ ಕರ್ಜನ್ [1899 ರಿಂದ 1905 ]
ಇವರ ಕಾಲದಲ್ಲಿ 1905 ರಲ್ಲಿ ಬಂಗಾಳದ ವಿಭಜನೆ .
💢 ಲಾರ್ಡ್ ಹಾರ್ಡಿಂಜ್ [1910 ರಿಂದ 1916]
1911 ರಲ್ಲಿ ಬಂಗಾಳದ ವಿಭಜನೆ ರದ್ದತಿ ಮಾಡಲಾಯಿತು. ಕಲ್ಕತ್ತಾದಿಂದ ದೆಹಲಿಗೆ ರಾಜಧಾನಿ ವರ್ಗಾಯಿಸಲಾಯಿತು.
💢 ಲಾರ್ಡ್ ಮೌಂಟ್ ಬ್ಯಾಟನ್ ಫೆಬ್ರುವರಿ.[ 21. 1947 ರಿಂದ ಜುಲೈ ಜೂನ್. 21. 1948 ]
ಇವರು ಬ್ರಿಟಿಷರ ಸರಕಾರದ ಕೊನೆಯ ಹಾಗೂ ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್.
💢 ಸಿ ರಾಜಗೋಪಾಲಚಾರಿ [ ಜೂನ್. 21. 1948 ರಿಂದ ಜನವರಿ 26 1950 .]
ಇವರು ಸ್ವತಂತ್ರ ಭಾರತದ ಕೊನೆಯ ಹಾಗೂ ಭಾರತೀಯ ಗವರ್ನರ್ ಜನರಲ್.
🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺

0 Comments