⛔✡ ವ್ಯಕ್ತಿತ್ವ ವಿಕಸನಕ್ಕೊಂದು ಪುಟ್ಟ ಲೇಖನ ✡⛔
🚶♂️🚶♀️ ನಡೆಯುವವರು ಎಡುಹದೇ 🧘♂️🧘♀️ ಕುಳಿತವರು ಎಡವುತ್ತಾರೆಯೇ?
ನಮಸ್ಕಾರ ಎಲ್ಲರಿಗೂ, ಈ ಮೇಲಿನ ಮಾತು ಎಲ್ಲರಿಗೂ ಚಿರಪರಿಚಿತ ಆದರೂ ಮತ್ತೆ ನೆನಪಿಸುವ ಹಂಬಲ.
ಅಸಾಧ್ಯವಾದುದನ್ನು ಸಾಧಿಸಲು ಹೊರಟ ವ್ಯಕ್ತಿಯೋರ್ವನಿಗೆ ಸುತ್ತಮುತ್ತಲಿನ ಜನ ಅಪಹಾಸ್ಯ ಮಾಡುತ್ತಲೇ ಇರುತ್ತಾರೆ. ಆದರೆ ಇದರಿಂದ ವಿಚಲಿತರಾಗದೆ ಅದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಛಲ ಯಾರಿಗೆ ಇರುತ್ತದೆಯೋ ಅಂತವರು ಮಾತ್ರ ಜೀವನದಲ್ಲಿ ಅದ್ವಿತೀಯರಾಗುತ್ತಾರೆ. ದುರಂತ ಎಂದರೆ ನಮ್ಮೊಳಗೆ ನಾವು ಮಾಡುವ ಕೆಲಸದ ಕುರಿತು ಸಂದೇಹ ಇರುತ್ತದೆ ಅದಕ್ಕೆ ಯಾರಾದರೂ ಧನಿಗೂಡಿದರೆ ಮುಗಿದೇ ಹೋಯಿತು. ನಾವು ಹಾಸಿದ ಹಾಸಿಗೆ ಮೇಲೆ ಮಲಗಿ ಬಿಡುತ್ತೇವೆ. ಆದರೆ ದೃಢ ನಿರ್ಧಾರ ಮಾಡಿದ ವ್ಯಕ್ತಿ ಇಂತಹ ಅಡತಡೆಗಳನ್ನು ಮೊದಲೇ ಗಮನಿಸಿ ಅದನ್ನು ಎದುರಿಸಲು ಸಿದ್ಧವಾಗಿ ನಿಂತಿರುತ್ತಾರೆ. ಅವರು ಯಾವ ಅಪಹಾಸ್ಯ ಗಳಿಗೂ ಆಡಿಕೆ ಮಾತುಗಳಿಗೂ ಹಾಗೂ ಹತಾಶೆಯಿಂದ ಮನವನ್ನ ಮುದುಡಿಸಿ ಕೊಳ್ಳುವುದಿಲ್ಲ. ತಾವು ನಡೆಯಬೇಕೆಂಬ ಹಾದಿಯಲ್ಲಿ ಅವರು ನಡೆದೇ ಹೋಗುತ್ತಾರೆ. ಯಶಸ್ಸನ್ನು ತನ್ನದಾಗಿರಿಸಿಕೊಳ್ಳುತ್ತಾರೆ. ಇಂತಹ ದಿಟ್ಟ ನಿರ್ಧಾರದಿಂದಲೇ ವ್ಯಕ್ತಿ ತಾವು ಸುಧಾರಿಸುತ್ತಾರೆ. ಅದರೊಂದಿಗೆ ಸಮಾಜವನ್ನು ಸುಧಾರಿಸುತ್ತಾರೆ. ಕೆಲವೊಂದು ಬಾರಿ ನಮ್ಮ ಪರಿಸ್ಥಿತಿಯೂ ಮೀರಿ ಕೆಲಸಕ್ಕೆ ವಿಘ್ನ ಬರುವುದುಂಟು. ನಡೆಯುವವನು ಎಡುಹದೆ, ಕುಳಿತವನು ಎಡಹುವವನೇ? ಎಂಬಂತೆ ಸಾಧಿಸಬೇಕೆಂಬ ಕೆಲಸವನ್ನು ಮತ್ತೆ ಪ್ರಾರಂಭಿಸಬೇಕು. ಎಡವಿ ಬಿದ್ದ ವ್ಯಕ್ತಿ ಹಾಗೆಯೇ ಕೆಳಗೆ ಮಲಗದೇ ಮತ್ತೆ ಮೇಲೆದ್ದು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು. ಇಂತಹ ಯುವಪೀಳಿಗೆಯ ಹೆಚ್ಚಿನ ಅವಶ್ಯಕತೆ ಈ ಕ್ಷಣದ ಅಗತ್ಯತೆ. ಅದು ಈ ಕ್ಷಣದಿಂದಲೇ ಆರಂಭಗೊಳ್ಳಬೇಕು.
ಅಂದಾಗ ಮಾತ್ರ ಸುಧಾರಣೆಯ ಹಾದಿ ತುಳಿಯಲು ಸಾಧ್ಯ ಅಲ್ಲವೇ....?
ಧನ್ಯವಾದಗಳು
🔴🔴🔴🔴🔴🔴🔴🔴🔴🔴🔴🔴🔴🔴🔴🔴🔴🔴🔴

0 Comments