ಭಾರತದ ಸಂವಿಧಾನದ ಲಕ್ಷಣಗಳು
01. ಬೃಹತ್ ಸಂವಿಧಾನವಾಗಿದೆ
ಭಾರತದ ಸಂವಿಧಾನವು ಬೃಹತ್ ಸಂವಿಧಾನವಾಗಿದೆ ಇದು 1935 ರ ಕಾಯ್ದೆಯಿಂದ ಶೇಕಡಾ 70ರಷ್ಟು ಅಂಶವನ್ನು ಮತ್ತು ಇನ್ನುಳಿದ ಅಂಶಗಳನ್ನು ವಿವಿಧ ದೇಶಗಳಿಂದ ಎರವಲಾಗಿ ಪಡೆಯಲಾಗಿದೆ.
ಭಾರತದ ಸಂವಿಧಾನದಲ್ಲಿ ದಿನದಿಂದ ದಿನಕ್ಕೆ ತಿದ್ದುಪಡಿಮಾಡಿ ಅನೇಕ ವಿಷಯಗಳನ್ನು ಸೇರಿಸಲಾಗುತ್ತದೆ.
ಉದಾಹರಣೆ :- 2011 ರಲ್ಲಿ 97ನೇ ತಿದ್ದುಪಡಿ ಮಾಡುವುದರ ಮೂಲಕ 9B ಹೊಸದಾದ ಭಾಗ ಮಾಡಿಕೊಂಡು ಅದರಲ್ಲಿ ಸಹಕಾರ ಸಂಘಗಳ ಸ್ಥಾಪನೆಯ ಕುರಿತು 243 ZH ವಿಧಿಯಿಂದ 243 ZT ವಿಧಿಯವರಿಗೂ ವಿವರಿಸಲಾಗಿದೆ.
ಸಹಕಾರ ಸಂಘಗಳ ಸ್ಥಾಪನೆ ಕುರಿತು ಮೂಲಭೂತ ಹಕ್ಕುಗಳಲ್ಲಿ 19 (1) ಸಿ ವಿಧಿಯಲ್ಲಿ ಸೇರಿಸಲಾಗಿದೆ.
ಸಹಕಾರ ಸಂಘಗಳ ಸ್ಥಾಪನೆ ಕುರಿತು ರಾಜ್ಯ ನಿರ್ದೇಶಕ ತತ್ವ ದಲ್ಲಿ 43ಬಿ ಹೊಸದಾದ ವಿಧಿ ಮಾಡಿಕೊಂಡು ಅದರಲ್ಲಿ ವಿವರಿಸಲಾಗಿದೆ.
☀️ವಿಷಯ ವಿಧಗಳು ಮೂಲದಲ್ಲಿ 395 ಪ್ರಸ್ತುತ 465
☀️ವಿಷಯ ಭಾಗಗಳು ಮೂಲದಲ್ಲಿ 22 ಪ್ರಸ್ತುತ 25
☀️ವಿಷಯ ಅನುಸೂಚಿಗಳು ಮೂಲದಲ್ಲಿ 8 ಪ್ರಸ್ತುತ 12
02. ವಯಸ್ಕರ ಮತದಾನ ಪದ್ಧತಿ
ಪ್ರಾರಂಭದಲ್ಲಿ ಮತದಾನದ ವಯಸ್ಸು 21 ಆಗಿತ್ತು 1988 ರಲ್ಲಿ 61ನೇ ತಿದ್ದುಪಡಿ ಮಾಡುವುದರ ಮೂಲಕ ಮತದಾನದ ವಯಸ್ಸು 18ಕ್ಕೆ ಇಳಿಸಲಾಯಿತು. 1989 ಇದು ಜಾರಿಗೆ ಬಂದಿದ್ದು 1989 ರಲ್ಲಿ ಮತದಾನದ ಹಕ್ಕಿನ ಕುರಿತು ಸಂವಿಧಾನದ 15ನೇ ಭಾಗದ 326ನೇ ವಿಧಿಯಲ್ಲಿ ತಿಳಿಸುತ್ತದೆ.
03. ಏಕಪೌರತ್ವ
ಏಕಪೌರತ್ವ ಪದ್ಧತಿಯನ್ನು ಬ್ರಿಟನ್ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಏಕಪೌರತ್ವ ಪದ್ಧತಿಯನ್ನು ಅಳವಡಿಸಲು ಕಾರಣ ನಮ್ಮಲ್ಲಿ ರಾಷ್ಟ್ರೀಯ ಮನೋಭಾವನೆ ಬೆಳೆಸುವುದಾಗಿದೆ. ಪೌರತ್ವ ವಿಷಯದ ಕುರಿತು ಸಂವಿಧಾನದ 2ನೇ ಭಾಗದಲ್ಲಿ 5ನೇ ವಿಧಿಯಿಂದ 11ನೇ ವಿಧಿಯವರೆಗೆ ವಿವರಿಸಲಾಗಿದೆ.
04. ತುರ್ತು ಪರಿಸ್ಥಿತಿಯ ಅಧಿಕಾರಗಳು
ಈ ತುರ್ತು ಪರಿಸ್ಥಿತಿ ಎಂಬ ವಿಷಯವನ್ನು ಜರ್ಮನಿ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ ಭಾರತದ ಸಂವಿಧಾನದಲ್ಲಿ 18ನೆಯ ಭಾಗದಲ್ಲಿ 352 ನೇ ವಿಧಿ ಯಿಂದ 360 ನೇ ವಿಧಿಯವರೆಗೂ 3 ಪ್ರಕಾರದ ತುರ್ತು ಪರಿಸ್ಥಿತಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಈ 3 ಪ್ರಕಾರದ ತುರ್ತುಪರಿಸ್ಥಿತಿಯನ್ನು ಹೊರಡಿಸುವವರೂ ರಾಷ್ಟ್ರಪತಿಗಳು ಅವುಗಳೆಂದರೆ.
👉 ರಾಷ್ಟ್ರೀಯ ತುರ್ತು ಪರಿಸ್ಥಿತಿ - 352 ವಿಧಿ
👉 ರಾಜ್ಯ ತುರ್ತು ಪರಿಸ್ಥಿತಿ - 356 ವಿಧಿ
👉 ಹಣಕಾಸು ತುರ್ತು ಪರಿಸ್ಥಿತಿ - 360 ವಿಧಿ
05. ತಿದ್ದುಪಡೆಯ ವಿಧಾನ
ವಿಷಯವನ್ನು ದಕ್ಷಿಣ ಆಫ್ರಿಕಾ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ. ಸಂವಿಧಾನದ 368 ನೇ ವಿಧಿಯ ಪ್ರಕಾರ ಎರಡು ರೀತಿಯಲ್ಲಿ ತಿದ್ದುಪಡಿ ಮಾಡಲಾಗುತ್ತದೆ. ಅವುಗಳೆಂದರೆ
👉 ಸರಳ ತಿದ್ದುಪಡಿ ವಿಧಾನ
ಸಂಸತ್ತಿನಲ್ಲಿ 2/3 ರಷ್ಟು ಬಹುಮತ ಪಡೆಯುವುದರೊಂದಿಗೆ ಮಾಡುವ ತಿದ್ದುಪಡಿಯನ್ನು ಸರಳ ತಿದ್ದುಪಡಿ ಎಂದು ಕರೆಯುವರು.
ಉದಾಹರಣೆ : ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು, ಮೂಲಭೂತ ಕರ್ತವ್ಯಗಳು ,ಇತ್ಯಾದಿ .
👉 ಕಠಿಣ ತಿದ್ದುಪಡಿ ವಿಧಾನ
ಸಂಸತ್ತಿನಲ್ಲಿ 2/3 ರಷ್ಟು ಜನ ಸದಸ್ಯರ ಬಹುಮತ ಜೊತೆಗೆ ಅರ್ಧದಷ್ಟು ರಾಜ್ಯಗಳ ಪಡೆಯುವುದರ ಮೂಲಕ ಮಾಡುವ ತಿದ್ದುಪಡಿಯನ್ನು ಕಠಿಣ ತಿದ್ದುಪಡಿ ವಿಧಾನ ಎನ್ನುವರು.
ಉದಾಹರಣೆ : ರಾಷ್ಟ್ರಪತಿಯವರ ಚುನಾವಣೆಯ ವಿಷಯ, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಹುದ್ದೆಗೆ ಸಂಬಂಧಿಸಿದ, ಹಾಗೆ ಮತ್ತು ಜಿ ಎಸ್ ಟಿ ಇತ್ಯಾದಿ.
06 . ಮೂಲಭೂತ ಹಕ್ಕುಗಳು
ಈ ವಿಷಯವನ್ನು ಅಮೇರಿಕಾ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ. ಸಂವಿಧಾನದ 3ನೆಯ ಭಾಗದಲ್ಲಿ 12ನೇ ವಿಧಿಯಿಂದ 35ನೇ ವಿಧಿಯ ವರೆಗೆ ಮೂಲಭೂತ ಹಕ್ಕುಗಳ ಕುರಿತು ವಿವರಿಸಲಾಗಿದೆ . ಇವುಗಳನ್ನು ಭಾರತದ ಮ್ಯಾಗ್ನಕಾರ್ಟ ಎಂದು ಕರೆಯಲಾಗುತ್ತದೆ.
07 . ಸಂಯುಕ್ತ ಪದ್ಧತಿ
ಇದು ದೇಶದ ಏಕಾತ್ಮಕ ಪದ್ಧತಿ ಇದ್ದರೂ ಕೂಡ ನಮ್ಮ ದೇಶದಲ್ಲಿ 1ನೇ ಭಾಗದಲ್ಲಿ ರಾಜ್ಯಗಳ ಒಕ್ಕೂಟ ಎಂದು ಕರೆಯಲಾಗಿದೆ.
👉 ಕೇಂದ್ರ ಪಟ್ಟಿ ➡️ 100 ವಿಷಯಗಳು
👉 ರಾಜ್ಯಪಟ್ಟಿ ➡️ 61 ವಿಷಯಗಳು
👉 ಸಮವರ್ತಿ ಪಟ್ಟಿ ➡️ 52 ವಿಷಯಗಳು
08 . ದ್ವಿಸದನ ಪದ್ಧತಿ
ಈ ಪದ್ಧತಿಯನ್ನು ಬ್ರಿಟನ್ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ.ನಮ್ಮ ಸಂಸತ್ತು ದ್ವಿಸದನ ಹೊಂದಿದೆ.
☀️ ಲೋಕಸಭೆ :- ಈ ಸದನವನ್ನು ಕೆಳಮನೆ, ಕಿರಿಯರ ಸದನ, ಜನತಾ ಸದನ ಎಂದು ಕರೆಯುವರು.
☀️ ರಾಜ್ಯಸಭೆ :- ಈ ಸದನವನ್ನು ಮೇಲ್ಮನೆ ,ಬುದ್ಧಿವಂತರ ಸದನ, ಹಿರಿಯರ ಸದನ, ಶಾಶ್ವತ ಸದನ ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.
09 . ಸ್ವತಂತ್ರ ಸಂಸ್ಥೆಗಳು
ಭಾರತದ ಸಂವಿಧಾನವು ಭಾರತದಲ್ಲಿ ಸ್ವತಂತ್ರವಾಗಿ ಮತ್ತು ನಿರ್ಭಯವಾಗಿ ಕಾರ್ಯನಿರ್ವಹಿಸಲು ಕೆಲವು ಸಂವಿಧಾನಾತ್ಮಕ ಹುದ್ದೆಗಳಿಗೆ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ .
ಉದಾಹರಣೆ :-
▪️324 ನೇ ವಿಧಿ - ಕೇಂದ್ರ ಚುನಾವಣಾ ಆಯೋಗ
▪️315 ನೇ ವಿಧಿ - ಕೇಂದ್ರ ಲೋಕಸೇವಾ ಆಯೋಗ
▪️280ನೇ ವಿಧಿ - ಹಣಕಾಸು ಆಯೋಗ
▪️76 ನೇ ವಿಧಿ - ಅಟಾರ್ನಿ ಜನರಲ್
▪️165 ನೇ ವಿಧಿ - ಅಡ್ವೊಕೇಟ್ ಜನರಲ್
▪️148 ನೇ ವಿಧಿ - ಕಂಟ್ರೋಲರ್ ಮತ್ತು ಆಡಿಟರ್ ಜನರಲ್
10 . ಎರವಲು ಸಂವಿಧಾನ
ಭಾರತದ ಸಂವಿಧಾನ ಕೆಳಗಿನ ವಿಷಯಗಳನ್ನು ಬೇರೆ ಬೇರೆ ದೇಶಗಳಿಂದ ಎರವಲು ಪಡೆದುಕೊಂಡಿದೆ.
⭐ 1935ರ ಕಾಯ್ದೆ
ಒಕ್ಕೂಟ ವ್ಯವಸ್ಥೆ ,ರಾಜ್ಯಪಾಲರ ಹುದ್ದೆ, ಸಾರ್ವಜನಿಕ ಸೇವೆಗಳು, ನ್ಯಾಯಾಂಗ ಪದ್ಧತಿ ,
⭐ ಬ್ರಿಟನ್
ಸಂಸದೀಯ ಪದ್ಧತಿ ,ಏಕಪೌರತ್ವ, ರಿಟ್ಗಳು, ದ್ವಿಸದನ ಕ್ಯಾಬಿನೆಟ್ ಪದ್ಧತಿ .
⭐ ಅಮೇರಿಕಾ
ಪೂರ್ವ ಪೀಠಿಕೆ, ಮೂಲಭೂತ ಹಕ್ಕುಗಳು, ನ್ಯಾಯಿಕ ವಿಮರ್ಶೆ, ರಾಷ್ಟ್ರಾಧ್ಯಕ್ಷರ ಮಹಾಭಿಯೋಗ ,ನ್ಯಾಯಾಧೀಶರ ಹುದ್ದೆ, ಉಪರಾಷ್ಟ್ರಪತಿ ಹುದ್ದೆ.
⭐ ಐರ್ಲೆಂಡ್
ರಾಜ್ಯ ನಿರ್ದೇಶಕ ತತ್ವಗಳು ,ರಾಜ್ಯಸಭೆಗೆ ಸದಸ್ಯರ ನಾಮಕರಣ, ರಾಷ್ಟ್ರಪತಿಯವರ ಚುನಾವಣಾ ವಿಧಾನ .
⭐ ಕೆನಡಾ
ಕೇಂದ್ರದಿಂದ ರಾಜ್ಯಪಾಲರ ನೇಮಕ ,ಕೇಂದ್ರ ಸರಕಾರದಿಂದ ಕೂಡಿದ ಒಕ್ಕೂಟ ವ್ಯವಸ್ಥೆ .
⭐ ಆಸ್ಟ್ರೇಲಿಯಾ
ಸಮವರ್ತಿ ಪಟ್ಟಿ ,ಜಂಟಿ ಅಧಿವೇಶನ.
⭐ ಜರ್ಮನಿ
ತುರ್ತು ಪರಿಸ್ಥಿತಿ.
⭐ ರಷ್ಯಾ
ಮೂಲಭೂತ ಕರ್ತವ್ಯಗಳು ,ಪೂರ್ವ ಪೀಠಿಕೆಯಲ್ಲಿರುವ ಸಾಮಾಜಿಕ ಆರ್ಥಿಕ ರಾಜಕೀಯ ನ್ಯಾಯ ಎಂಬ ಪದಗಳು.
⭐ ಫ್ರೆಂಚ್
ಪೂರ್ವ ಪೀಠಿಕೆಯಲ್ಲಿರುವ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಎಂಬ ಪದಗಳು .
⭐ ದಕ್ಷಿಣ ಆಫ್ರಿಕಾ
ತಿದ್ದುಪಡಿ ವಿಧಾನ.
📓📓📓📓📓📓📓📓📓📓📓📓📓📓📓📓📓📓📓
0 Comments