Ad Code

Ticker

6/recent/ticker-posts

Click Below Image to Join Our Telegram For Latest Updates

History of Ancient India Foreign Invasion of India Part - 2. Use for all competitive Exams.ಭಾರತದ ಮೇಲೆ ವಿದೇಶಿಯರ ದಾಳಿಗಳು ಭಾಗ 2.

              ಪ್ರಾಚೀನ ಭಾರತದ ಇತಿಹಾಸ 

 ಭಾರತದ ಮೇಲೆ ವಿದೇಶಿಯರ ದಾಳಿ ಗಳು ಭಾಗ-2. 


ಕುಶಾನರು. 

           ಮೌರ್ಯ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅತ್ಯಂತ ವಿಶಾಲವಾದ ಸಾಮ್ರಾಜ್ಯ ವಿಸ್ತರಿಸಿದ ಕೀರ್ತಿ ಕುಶಾನರದು. ಇವರು ಮೂಲತಃ  ಚೀನಾದ ಯೂ-ಚಿ ಬುಡಕಟ್ಟಿಗೆ ಸೇರಿದ ಜನಾಂಗ ಆರಂಭದಲ್ಲಿ ಯೂ-ಚಿ ಗಳಲ್ಲಿ ಹುಪ್ಪಿ,  ತುಪ್ಪು,  ಕುಲಿಶಾಂಗ್, ಹಿಲಿಯಾನ್ ಮತ್ತು ಕ್ರಿಷಾಂಗ್ ಎಂಬ ಐದು ಪಂಗಡಗಳಿದ್ದವು. ಕ್ರಿಷಾಂನ್ ಪದವೇ ಪ್ರಸಿದ್ದಿಯಾಗಿ ಕುಶಾನ ಎಂಬ ಹೆಸರು ಪಡೆಯಿತು. ಕ್ರಿಷಾಂಗ್ ಪಂಗಡದ ನಾಯಕ ಒಂದನೇ ಕುಜಲ ಕಢಫಿಸಸ್  ಐದು ಪಂಗಡಗಳನ್ನು ಒಂದುಗೂಡಿಸಿ ಕುಶಾಣ ಮನೆತನದ ಸ್ಥಾಪಕನಾದನು. 

ಒಂದನೇ ಕುಜಲ್ ಕಢಫಿಸಸ್ ಸಾಮಾನ್ಯ ಶಕ 15 ರಿಂದ 65. 

◾ಈತ ಕುಶಾನ ಮನೆತನದ ಸ್ಥಾಪಕ. 

◾ಈತ ಐದು ಪಂಗಡಗಳನ್ನು ಒಂದುಗೂಡಿಸಿದಕ್ಕಾಗಿ ವಾಂಗ್ ಎಂಬ ಬಿರುದು ಪಡೆದರು. 

◾ಇಂಡೋ ಗ್ರೀಕರು ಪಾರ್ಥಿಯನ್ನರು ಮತ್ತು ಶಕರನ್ನು ಸೋಲಿಸಿ ಅಪಘಾನಿಸ್ತಾನ್, ತಕ್ಷಶಿಲೆ. ಪೇಜಾವರ ,ಸಿಂಧ್ ಮತ್ತು ಪಂಜಾಬ ಪ್ರಾಂತ್ಯಗಳನ್ನು ವಶಪಡಿಸಿಕೊಂಡನು. 

ಪೇಷಾವರ ಅಥವಾ ಪುರುಷಪುರವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು. 

◾ಈತನ ಸಾಮ್ರಾಜ್ಯವು ಪರ್ಷಿಯಾದಿಂದ ಸಿಂಧೂ ನದಿಯವರೆಗೆ ವಿಸ್ತರಿಸಿತ್ತು. 

◾ಚೀನಾ ಮತ್ತು ರೋಮನ್ ಸಾಮ್ರಾಜ್ಯಗಳೊಂದಿಗೆ ವಾಣಿಜ್ಯ ಸಂಪರ್ಕ ಹೊಂದಿದ್ದನು. 

◾ಬೌದ್ಧ ಮತಾವಲಂಬಿಯಾಗಿದ್ದರು ರೋಮನ್ ಮಾದರಿಯಲ್ಲಿ ದಿನಾರ್ ಎಂಬ ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತಂದನು.

◾ ಚೀನಾದ ಅರಸರಿಗೆ ಕಪ್ಪ-ಕಾಣಿಕೆ ಸಲ್ಲಿಸುತ್ತಿದ್ದನು.

◾ಈತನಿಗೆ ರಾಜಾಧಿರಾಜ, ಧರ್ಮಮಹಾರಾಜ  ಎಂಬ ಬಿರುದುಗಳಿದ್ದವು. 


ಎರಡನೇ ಕುಜಲ್ ಕಡಫಿಸಸ್ ಸಾಮಾನ್ಯ ಶಕ 65ರಿಂದ 78.

 ◾ಒಂದನೇ ಕುಜಲ್  ಕಢಫಿಸಸ್ ನ್ ಮಗನಾಗಿದ್ದಾನೆ.

◾ ಭಾರತದ ಭೂಪ್ರದೇಶಗಳನ್ನು ಗೆದ್ದ ಮೊದಲ ಕುಶಾನರ ಅರಸ. 

◾ತಂದೆಗಿಂತಲೂ ವಿಶಾಲವಾದ ಸಾಮ್ರಾಜ್ಯ ಹೊಂದಿದನು.

◾ಶಿವನ ಆರಾಧಕನಾಗಿದ್ದನು. 

◾ಚೀನಾದ ಅರಸರಿಗೆ ಕಪ್ಪಕಾಣಿಕೆ ಸಲ್ಲಿಸುತ್ತಿದ್ದನು. 

◾ಭಾರತಕ್ಕೆ ಶುದ್ಧ ಬಂಗಾರದ ನಾಣ್ಯಗಳನ್ನು ಪರಿಚಯಿಸಿದ ಮೊಟ್ಟ ಮೊದಲ ಅರಸ. 

◾ಈತನಿಗೆ ಸಮಗ್ರ ಪ್ರಪಂಚದ ಒಡೆಯ ತ್ರೈಲೋಕೇಶ್ವರ ರಾಜ ರಾಜ ಮತ್ತು ಮಹೇಶ್ವರ ಎಂಬ ಬಿರುದುಗಳಿದ್ದವು.


ಕನಿಷ್ಕ. ಸಾಮಾನ್ಯ ಶಕ 78 ರಿಂದ  120. 



◾ಕುಶಾನರ ಪ್ರಸಿದ್ದ ದೊರೆ. 

◾ಸಾಮಾನ್ಯ ಶಕ 78ರಲ್ಲಿ ಶಕ ವರ್ಷವನ್ನು ಪ್ರಾರಂಭಿಸಿದನು.

◾ ಚೀನಾದ ಅರಸ ಷಾನ್ ಯಾಂಗನನ್ನು ಸೋಲಿಸಿ ಅವನ ವಶದಲ್ಲಿದ್ದ   ಕುರ್ಸಾನ,  ಯಾರ್ಕಂದ್ ಮತ್ತು ಕೋಥಾನ ಎಂಬ ಪ್ರದೇಶಗಳನ್ನು ವಶಪಡಿಸಿಕೊಂಡನು. 

◾ಚೀನಾಕ್ಕೆ ನೀಡುತ್ತಿರುವ ಕಪ್ಪ ಕಾಣಿಕೆಯನ್ನು ಸಂಪೂರ್ಣ ನಿಲ್ಲಿಸಿದನು. 

◾ಮಗದ ರಾಜಧಾನಿ ಪಾಟಲಿಪುತ್ರದ ಮೇಲೆ ದಾಳಿ ಮಾಡಿ ಅಶ್ವಘೋಷ ಎಂಬ ಸಾಹಿತಿಯನ್ನು ಅಪಹರಿಸಿಕೊಂಡು ಬಂದನು. 

ಸಾಮಾನ್ಯ ಶಕ 102 ರಲ್ಲಿ  ಕಾಶ್ಮೀರದಲ್ಲಿ ನಾಲ್ಕನೇ ಬೌದ್ಧ ಸಮ್ಮೇಳನ ಏರ್ಪಡಿಸಿ ಬೌದ್ಧ ಧರ್ಮದ ಪ್ರಚಾರಕ್ಕಾಗಿ ತನ್ನ ಸೈನಿಕರನ್ನು ಇಂಡೋನೇಷಿಯಾ, ಮಲೇಶಿಯಾ ,ಟಿಬೆಟ್, ಭೂತಾನ್, ನೇಪಾಳ, ಚೀನಾ, ಉತ್ತರ ಕೊರಿಯಾ ಮತ್ತು ಜಪಾನ್ ರಾಷ್ಟ್ರಗಳಿಗೆ ಕಳುಹಿಸಿದನು. ಅದಕ್ಕಾಗಿ ಇವನನ್ನು ಮೂರನೆಯ ಬುದ್ಧ ಮತ್ತು ಎರಡನೆಯ ಅಶೋಕ ಎಂದು ಕರೆಯುತ್ತಾರೆ.

◾ ಕನಿಷ್ಕ ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಬೂಟ್ ಮತ್ತು ಟೋಪಿಗಳನ್ನು ಪರಿಚಯಿಸಿದನು. 

◾ಆಸ್ಥಾನದಲ್ಲಿದ್ದ ಪ್ರಸಿದ್ಧ ವೈದ್ಯರು ಚರಕ ಮತ್ತು ಶುಶ್ರುತ.

◾ಆಸ್ಥಾನದಲ್ಲಿದ್ದ ಪ್ರಸಿದ್ಧ ಸಾಹಿತಿಗಳು ವಸುಮಿತ್ರ , ಅಶ್ವಘೋಷ, ಒಂದನೇ ನಾಗಾರ್ಜುನ ಎರಡನೇ ನಾಗರ್ಜುನ ಮತ್ತು ವಾಗ್ಭಟರು. 

◾ಈತನಿಗೆ ಕೈಸರ್ ಮತ್ತು ಸೀಜರ್, ದೇವಪುತ್ರ ಮಹಾರಾಜಾಧಿರಾಜ ಎಂಬ ಬಿರುದು ಬಂದಿದ್ದವು. 

◾ಸಾಮಾನ್ಯ ಶಕ  120 ರಲ್ಲಿ ತನ್ನ ಎರಡನೇ ದಾಳಿ ಚೀನಾದ ಮೇಲೆ ಮಾಡಬೇಕೆಂದಾಗ ತನ್ನ ಸೈನಿಕರಿಂದಲೇ ವಿಷಪ್ರಾಶನಕ್ಕೆ ಒಳಗಾಗಿ ಮರಣಹೊಂದಿದನು. 

◾ ಕನಿಷ್ಕ ನಂತರ  ಹುವಿಷ್ಕ, ಎರಡನೇ ಕನಿಷ್ಕ ಮತ್ತು ವಸುದೇವ ಎಂಬ ಅರಸರು ಆಡಳಿತ ಮಾಡಿದರು. 

◾ಕುಶಾನರ ಕೊನೆಯ ಅರಸ ವಸುದೇವ

ಕುಶಾನರ ಸಾಹಿತ್ಯ. 

01. ಅಶ್ವಘೋಷ. 

*ಬುದ್ಧಚರಿತೆ. 

*ಸೂತ್ರ ಅಲಂಕಾರ. 

*ವಜ್ರ ಸೂಚಿ. 

02.ವಸುಮಿತ್ರ. 

ಮಹಾವಿಭಾಷ್ಯ ಇದನ್ನು ಬೌದ್ಧಧರ್ಮದ ವಿಶ್ವಕೋಶ ಎಂದು ಕರೆಯುತ್ತಾರೆ. ಇದು ತ್ರಿಪಿಟಕಗಳು ಮೇಲೆ ಬರೆದ ಭಾಷ್ಯಗಳನ್ನು ಒಳಗೊಂಡಿದೆ. 

03.ಚರಕ 

ಚರಕ ಸಂಹಿತೆ ಇದು ಶಸ್ತ್ರಚಿಕಿತ್ಸೆಯ 127 ಬಗೆಗಳನ್ನು ತಿಳಿಸುತ್ತದೆ. ಚರಕನನ್ನು ಸರ್ಪ ದೇವತೆಯ ಅವತಾರ ಮತ್ತು ಭಾರತದ ಆಯುರ್ವೇದ ಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ.

04. ಒಂದನೇ ನಾಗಾರ್ಜುನ. 

ಮಾಧ್ಯಮಿಕ ಸೂತ್ರ ಶಸ್ತ್ರಚಿಕಿತ್ಸೆ. ಇವನನ್ನು ಭಾರತದ ಐನಸ್ಟಿನ ಮತ್ತು ಭಾರತದ ಮಾರ್ಟಿನ್ ಲೂಥರ್ ಎಂದು ಕರೆಯುತ್ತಾರೆ.

05. ಎರಡನೇ ನಾಗಾರ್ಜುನ. 

ರಸವೈದ್ಯ ಇವನನ್ನು ರಸಾಯನ ಶಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ. 

06.ವಾಗ್ಭಟ 

ಅಷ್ಟಾಂಗ ಸಂಗ್ರಹ. 

07.ಶುಶ್ರುತ 

ಶುಶ್ರುತ ಸಂಹಿತ. ಇವನನ್ನು ಪ್ಲಾಸ್ಟಿಕ್ ಸರ್ಜರಿಯ ಪಿತಾಮಹನೆಂದು ಕರೆಯುತ್ತಾರೆ.

ವಿಶೇಷ ಅಂಶಗಳು. 

◾ಕುಶಾಣರು ಭಾರತಕ್ಕೆ ಗಾಂಧಾರ ಕಲೆಯನ್ನು ಪರಿಚಯಿಸಿದರು. ಇದನ್ನು ಇಂಡೋ ಗ್ರೀಕ್ ಕಲೆ ಎಂತಲೂ ಕರೆಯುತ್ತಾರೆ. (ಈ ಕಲೆಯ ಲಕ್ಷಣ ಮೂರ್ತಿಗಳ ಬಾಹ್ಯ ಸೌಂದರ್ಯ ಹೆಚ್ಚಿಸುವ ಕಲೆ.) 

◾ಕನಿಷ್ಕನ ಆಸ್ಥಾನದ ಗಾಂಧಾರ ಕಲೆ ಮತ್ತು ಗ್ರೀಕ್ ಶಿಲ್ಪಿ      ಎಜಿಶೀಲನ್

◾ಕನಿಷ್ಕನ ಸ್ಥಿರವಿಲ್ಲ ದ ವಿಗ್ರಹ ಕಂಡು ಬಂದ ಸ್ಥಳ ಮಥುರಾ.

ಕಲ್ಹಣನ ರಾಜತರಂಗಿಣಿ ಯ ಪ್ರಕಾರ ಕನಿಷ್ಕ ಕಾಶ್ಮೀರದಲ್ಲಿ ಕನಿಷ್ಕಪುರ ಮತ್ತು ಹುವಿಷ್ಕಪುರ ಎಂಬ ನಗರವನ್ನು ನಿರ್ಮಿಸಿದನು.


🥎🥎🥎🥎🥎🥎🥎🥎🥎🥎🥎🥎🥎🥎🥎🥎🥎🥎🥎

Post a Comment

0 Comments

Important PDF Notes

Ad Code