Ad Code

Ticker

6/recent/ticker-posts

Click Below Image to Join Our Telegram For Latest Updates

[NOTES] History of Ancient India, Jainism. ಪ್ರಾಚೀನ ಭಾರತದ ಇತಿಹಾಸ, ಜೈನ ಧರ್ಮ.

ಹೊಸ ಮತಗಳ ಉದಯ, ಜೈನ ಧರ್ಮ

  👇 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಾದ

FDA, SDA, PDO, PSI, PC ಮುಂತಾದ ಪರೀಕ್ಷೆಗಳಿಗೆ

 ಉಪಯುಕ್ತವಾಗುವ ಜೈನ ಧರ್ಮದ ಸಂಕ್ಷಿಪ್ತ ಮಾಹಿತಿ.

         ವರ್ಧಮಾನ ಮಹಾವೀರ 




● ಹಿಂದೂ ಧರ್ಮವನ್ನು ವಿರೋಧಿಸಿದ ಮೊಟ್ಟಮೊದಲ ಧರ್ಮ.

● ಜೈನ ಧರ್ಮದ ಪ್ರತಿಪಾದಕರನ್ನು ತೀರ್ಥಂಕರರೆಂದು  ಕರೆಯುತ್ತಾರೆ.

● ತೀರ್ಥಂಕರ ಎಂದರೆ ಸಂಸಾರವೆಂಬ ಸಾಗರವನ್ನು ದಾಟಲು ದಾರಿತೋರಿಸುವ ಎಂದರ್ಥ.

● ಜೈನಧರ್ಮದ ಪರಂಪರೆಯಲ್ಲಿ 24 ತೀರ್ಥಂಕರರು ಕಂಡುಬರುತ್ತಾರೆ.

● ಮೊದಲ ತೀರ್ಥಂಕರ ವೃಷಭನಾಥನ / ಆದಿನಾಥ 

● 23ನೇ ತೀರ್ಥಂಕರ ಪಾರ್ಶ್ವನಾಥ 

● 24ನೇ ತೀರ್ಥಂಕರ ಮತ್ತು ಪ್ರಸಿದ್ಧ ತೀರ್ಥಂಕರ ವರ್ಧಮಾನ ಮಹಾವೀರ 


🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺

ವರ್ಧಮಾನ ಮಹಾವೀರ ಸಾಮಾನ್ಯ ಶಕ ಪೂರ್ವ 599-527


● ಈತ ಬಿಹಾರದ ವೈಶಾಲಿ ಪಕ್ಕದಲ್ಲಿರುವ ಕುಂದ ಅಥವಾ ಕುಂಡಲಿ ಎಂಬ ಗ್ರಾಮದಲ್ಲಿ ಜನಿಸಿದರು. 

● ಮೂಲಹೆಸರು ವರ್ಧಮಾನ 

● ತಂದೆ  ಸಿದ್ಧಾರ್ಥ 

● ತಾಯಿ ತ್ರಿಶಲಾದೇವಿ 

● ಹೆಂಡತಿ ಯಶೋಧೆ 

● ಮಗಳು ಅನುಜ್ಜಾ ಅಥವಾ ಪ್ರಿಯದರ್ಶಿನಿ 

● ಅಳಿಯ ಜಮಾಲಿ 

● ಮಹಾವೀರ ತನ್ನ ತಂದೆ-ತಾಯಿಯರ ಆಕಸ್ಮಿಕ ಮರಣದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ 30ನೇ ವಯಸ್ಸಿನಲ್ಲಿ ಸಂಸಾರಿಕ ಜೀವನವನ್ನು  ತ್ಯಜಿಸಿದನು.

● ವರ್ಧಮಾನ್ ಲೋಕ ಜ್ಞಾನಕ್ಕಾಗಿ ತನ್ನ ಸಮಕಾಲೀನ ವಯಸ್ಕ ಮಸ್ಕಾಲಿಗೋಸಲಪುತ್ತನನ್ನು ತನ್ನ ಗುರುವಾಗಿ ಸ್ವೀಕರಿಸಿಕೊಂಡನು. ಇವನಿಂದ ಯಾವುದೇ ಜ್ಞಾನೋದಯವಾದ ಕಾರಣ ಇವನನ್ನು ಬಿಟ್ಟು ಅಲೆಮಾರಿಯಾದನು. 

● ಈತ 43 ನೇ ವಯಸ್ಸಿನಲ್ಲಿ ಬಿಹಾರದ ಜೃಂಬಕ ಗ್ರಾಮದ ಋಜುಪಾಲಿಕಾ ನದಿಯ ದಂಡೆಯ ಮೇಲಿನ ಸಾಲು ಮರದ ಕೆಳಗಡೆ ತಪಸ್ಸಿಗೆ ಕುಳಿತನು ತಪಸ್ಸಿಗೆ ಕುಳಿತನು. ಹತ್ತನೇ ದಿನಕ್ಕೆ ಕೈವಲ್ಯ (ಸರ್ವಜ್ಞಾನಿ) ಜ್ಞಾನ ಲಭಿಸಿ ಮಹಾವೀರ ಎನಿಸಿಕೊಂಡನು. 

● ಮಹಾವೀರ ಎಂದರೆ ಎಲ್ಲವನ್ನೂ ಜಯಿಸಿದವನು ಎಂದರ್ಥ.

● ಮಹಾವೀರ ತಾನು ಪಡೆದುಕೊಂಡ ಜ್ಞಾನವನ್ನು ತನ್ನ 11 ಜನ ಶಿಷ್ಯರಿಗೆ ಬೋಧಿಸಿದರನು. 

● ಮಹಾವೀರನ 11 ಜನ ಶಿಷ್ಯರಿಂದ ಗುಂಪಿಗೆ ಗಣಾಧರರು ಅಥವಾ ಗಾಂಧಾರರು ಎಂದು ಕರೆಯುತ್ತಿದ್ದರು. 

● ಮಹಾವೀರ ಬಿಹಾರದ ಪಾವಪುರಿ ಎಂಬಲ್ಲಿ ಮರಣಹೊಂದಿದನು.


💮💮💮💮💮💮💮💮💮💮💮💮💮💮💮💮💮

ಜೈನ ಧರ್ಮದ ತತ್ವಗಳು ಅಥವಾ ಬೋಧನೆಗಳು 

01.ಅಹಿಂಸೆ

02. ಸತ್ಯ 

03.ಅಸ್ತೇಯ( ಕಳ್ಳತನ ಮಾಡದಿರುವುದು )

04.ಅಪರಿಗ್ರಹ( ಅವಶ್ಯಕತೆಗಿಂತಲೂ ಹೆಚ್ಚಿನ ಸಂಪತ್ತು ಸಂಗ್ರಹಿಸದಿರುವುದು) 

05.ಬ್ರಹ್ಮಚರ್ಯ ( ಪವಿತ್ರತೆ ಅಥವಾ ಇಂದ್ರಿಯಗಳನ್ನು ನಿಗ್ರಹಿಸುವುದು )


ತ್ರಿರತ್ನಗಳು 

 01.ಸಮ್ಯಕ ಜ್ಞಾನ 

02. ಸಮ್ಯಕ  ನಂಬಿಕೆ 

03. ಸಮ್ಯಕ ನಡತೆ 


ಗ್ರಂಥಗಳು 

ಜೈನ ಧರ್ಮದ ಗ್ರಂಥಗಳಿಗೆ ಅಂಗಗಳು ಎಂದು ಕರೆಯುತ್ತಾರೆ ಪ್ರಾಕೃತ ಭಾಷೆಯಲ್ಲಿದ್ದು ಅರ್ಧಮಾಗದಿ ಲಿಪಿಯನ್ನು ಒಳಗೊಂಡಿವೆ.


ಜೈನ ಧರ್ಮದ ಪಂಗಡಗಳು 

01.ಶ್ವೇತಾಂಬರ ➖ ಉತ್ತರಭಾರತ  ➖ಸ್ಥೂಲಭದ್ರ ಪ್ರಚಾರ

02. ದಿಗಂಬರ➖ ದಕ್ಷಿಣ ಭಾರತ ➖ಭದ್ರಬಾಹು ಪ್ರಚಾರ ಮಾಡಿದರು.

 ಶ್ವೇತಾಂಬರರು 

● ಇವರು ಪಾರ್ಶ್ವನಾಥನ ಅನುಯಾಯಿಗಳು. 

● ಬಿಳಿಯ ಬಟ್ಟೆಗಳನ್ನು ಧರಿಸುತ್ತಿದ್ದರು. 

● ಇವರ ಆಚರಣೆಗಳು ಸರಳವಾಗಿದ್ದವು.

● ಇವರ ನಾಯಕ   ಸ್ಥೂಲಭದ್ರ.  

ದಿಗಂಬರರು 

● ಮಹಾವೀರನ ಅನುಯಾಯಿಗಳು. 

● ಯಾವುದೇ ಬಟ್ಟೆಯನ್ನು ಧರಿಸುತ್ತಿರಲಿಲ್ಲ. 

● ಇವರ ಆಚರಣೆಗಳು ಕಠಿಣವಾಗಿದ್ದವು.

● ಇವರ ನಾಯಕ ಭದ್ರಬಾಹು. 


🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

ಜೈನ ಧರ್ಮದ ಸಮ್ಮೇಳನಗಳು 

ಮೊದಲ ಸಮ್ಮೇಳನ 

● ಸ್ಥಳ    ➖ಪಾಟಲಿಪುತ್ರ 

● ವರ್ಷ ➖ ಸಾಮಾನ್ಯ ಶಕ ಪೂರ್ವ 300 

● ಅಧ್ಯಕ್ಷ  ➖   ಸ್ಥೂಲಭದ್ರ 

ಈ ಸಮ್ಮೇಳನದಲ್ಲಿ ಜೈನ ಧರ್ಮದ ಪವಿತ್ರ ಗ್ರಂಥಗಳಾದ ಅಂಗಗಳನ್ನು  ಕ್ರೋಡೀಕರಿಿಸಲಾಯಿತು. 


ಎರಡನೇ ಸಮ್ಮೇಳನ 

● ಸ್ಥಳ ➖ ಗುಜರಾತ್( ವಲ್ಲಭಿ )

● ವರ್ಷ ➖ ಸಾಮಾನ್ಯ ಶಕ 512 

● ಅಧ್ಯಕ್ಷ  ➖ ದೇವಿಂದ್ರ ಕ್ಷೇಮಕರಣ 

ಈ ಸಮ್ಮೇಳನದಲ್ಲಿ ಜೈನ ಧರ್ಮದ ಪವಿತ್ರ ಗ್ರಂಥಗಳಾದ ಅಂಗಗಳನ್ನು ವಿಶ್ಲೇಷಣೆ ಮಾಡಿ ಗ್ರಂಥರೂಪದಲ್ಲಿ ಬಿಡುಗಡೆ ಮಾಡಲಾಯಿತು.

 ಕಲೆ ಮತ್ತು ವಾಸ್ತುಶಿಲ್ಪಕ್ಕೆ ಜೈನ ಧರ್ಮದ ಕೊಡುಗೆ 

● ಜೈನ ಸನ್ಯಾಸಿಗಳು ಉಳಿದುಕೊಳ್ಳಲು ಕೆಲವು ಗುಹಾಲಯಗಳು ಮತ್ತು ಬಸದಿಗಳನ್ನು ನಿರ್ಮಿಸಲಾಯಿತು. ಅವುಗಳೆಂದರೆ ಉದಯಗಿರಿ ,ಎಲ್ಲೋರಾ 

ಉದಯಗಿರಿ  ➖ ಹುಲಿಯ ಗುಹೆ 

ಎಲ್ಲೋರಾ     ➖ ಇಂದ್ರಸಭಾ ಗುಹೆ 

ಓರಿಸ್ಸಾ         ➖   ಹಾಥಿಗುಂಪಾ ಶಾಸನ ಮತ್ತು ಗುಹೆ

ಮೂಡಬಿದರೆ ➖ ಸಾವಿರ ಕಂಬಗಳ ಬಸದಿ 

ಶ್ರವಣಬೆಳಗೊಳ ➖ ಗೊಮ್ಮಟೇಶ್ವರ ವಿಗ್ರಹ 


🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

ವಿಶೇಷ ಅಂಶಗಳು 

🔅 ವೃಷಭನಾಥನ ಧಾರ್ಮಿಕ ಚಿಹ್ನೆ ಎತ್ತು 

🔅 ಪಾರ್ಶ್ವನಾಥನ ಧಾರ್ಮಿಕ ಚಿಹ್ನೆ ಹಾವು 

🔅 ಮಹಾವೀರನ ಧಾರ್ಮಿಕ  ಚಿಹ್ನೆ  ಸಿಂಹ 

🔅 ಜೈನರ ಧಾರ್ಮಿಕ ಚಿಹ್ನೆ ಸ್ವಸ್ತಿಕ್ 

🔅 ಜೈನರ ಕಾಶಿ ಶ್ರವಣಬೆಳಗೊಳ 

🔅 ಸಾವಿರ ಕಂಬಗಳ ಬಸದಿ ಮೂಡಬಿದರೆ 

🔅 ಜೈನರ ಪ್ರಾರ್ಥನಾ ಮಂದಿರಗಳು ಬಸದಿಗಳು 

🔅 ಒಂದನೇ ತೀರ್ಥಂಕರ ವಿಗ್ರಹ ಕಂಡುಬಂದ ಸ್ಥಳ  ಮಥುರಾ

🔅 ಜೈನ ಧರ್ಮದ 24 ಜನ ತೀರ್ಥಂಕರರ ಬಗ್ಗೆ ಉಲ್ಲೇಖಗಳು ಕಂಡುಬಂದ ಮೊದಲ ಗ್ರಂಥ ಕಲ್ಪಸೂತ್ರ (ಭದ್ರಬಾಹು)

🔅 ಮಹಾವೀರನ ಮೊದಲ ಶಿಷ್ಯ ಇಂದ್ರಭೂತಿ 

🔅 ಜೈನಧರ್ಮದಲ್ಲಿ ಮಹಿಳೆಯರಿಗೂ  ಸನ್ಯಾಸಿಯಾಗಲು ಅವಕಾಶ ನೀಡಲಾಗಿತ್ತು. ಅವರು ಮಹಾವೀರನ ಸಹೋದರ ಸಂಬಂಧಿ ಖಂಡನಳ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

🔅 ಜೈನರ ದೇವಾಲಯಗಳು ರಾಜಸ್ಥಾನದ ಮೌಂಟ್ ಅಬು ಪರ್ವತದಲ್ಲಿ ಕಂಡುಬರುತ್ತವೆ.

🔅 ಪಾರ್ಶ್ವನಾಥನಿಗೆ ಸಂಬಂಧಿಸಿದವುಗಳಾಗಿವೆ ಇವುಗಳನ್ನು ದಿಲ್ವಾರ ದೇವಾಲಯಗಳೆಂದು ಕರೆಯುವರು .

🔅 ಜಾಕೋಬಿಯವರ ಪ್ರಕಾರ ಜೈನ ಧರ್ಮದ ನಿಜವಾದ ಸ್ಥಾಪಕ ಎಂದರೆ ಪಾಶ್ವನಾಥ.


🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷

Post a Comment

0 Comments

Important PDF Notes

Ad Code