Ad Code

Ticker

6/recent/ticker-posts

Click Below Image to Join Our Telegram For Latest Updates

History of Ancient India. Mahajanapadas and republics. ಪ್ರಾಚೀನ ಭಾರತದ ಇತಿಹಾಸ ಮಹಾಜನಪದಗಳು ಮತ್ತು ಗಣರಾಜ್ಯ.

        ಮಹಾ ಜನಪದಗಳು(ರಾಜ್ಯಗಳು)


● ಸಾಮಾನ್ಯ ಶಕ ಪೂರ್ವ 6ನೇ ಶತಮಾನದಲ್ಲಿ ಕಬ್ಬಿಣದ ಬಳಕೆಯಿಂದಾಗಿ ಕೃಷಿ-,ವಾಣಿಜ್ಯ ,ಕಂದಾಯ ಸಂಗ್ರಹಣೆ, ಸೇನಾ ತಂತ್ರಜ್ಞಾನಗಳು ಅಧಿಕವಾಗಿ ವೈದಿಕ ಕಾಲದ ಸಣ್ಣ ಜನಪದಗಳು (ರಾಜ್ಯಗಳು )ಮಹಾಜನಪದಗಳು ಎಂಬ ದೊಡ್ಡ ರಾಜ್ಯಗಳಾಗಿ ಏಳಿಗೆಗೆ ಬಂದವು.

 ● ಈ ಅವಧಿಯ ಹದಿನಾರು ಮಹಾಜನಪದಗಳಲ್ಲಿ 

* ಅಂಗ ( ರಾಜಧಾನಿ ಚಂಪಾ )

* ಮಗಧ ( ರಾಜಗೃಹ )

* ಕಾಶಿ (ವಾರಣಾಸಿ. )

* ಕೋಸಲ( ಶ್ರಾವಸ್ತಿ )

* ವಜ್ಜಿ ( ವೈಶಾಲಿ )

* ಮಲ್ಲ (ಕುಶಿನಾರ )

* ಗಾಂಧಾರ 

* ಕಾಂಬೋಜ 

*ಚೀದಿ 

* ಕುರು 

* ಪಾಂಚಾಲ 

* ಮತ್ಸ್ಯ

* ವತ್ಸ ( ಕೌಶಂಬಿ )

* ಅಸ್ಸಕ

* ಆವಂತಿ 

* ಶೌರಸೇನ. 

👆 ಇವುಗಳಲ್ಲೆಲ್ಲಾ ಮಗಧ ಅತ್ಯಂತ ಪ್ರಬಲವಾಗಿದ್ದು ಈ ಎಲ್ಲ ರಾಜ್ಯಗಳನ್ನು ಆಕ್ರಮಿಸಿ ಭಾರತದ ಮೊದಲ ಸಾಮ್ರಾಜ್ಯವಾಗಿ ಬೆಳೆಯಿತು.

ಮಗಧ ಸಾಮ್ರಾಜ್ಯ. 

● ಇಂದಿನ ಬಿಹಾರವನ್ನು ಮಗದ ಎನ್ನಲಾಗುತ್ತದೆ. 

● ಮಗದ ಸಾಮ್ರಾಜ್ಯವನ್ನು ಮೌರ್ಯರು ಆಕ್ರಮಿಸುವವರೆಗೆ ಅಕ್ರಮವಾಗಿ ಹರ್ಯಂಕ ,ಶಿಶುನಾಗ ,ನಂದವಂಶ ಮೂರು ವಂಶಗಳು ನಗರವನ್ನು ಆಳಿದವು. 

ಹರ್ಯಂಕ ವಂಶ. 

● ಈ ವಂಶದ ಸ್ಥಾಪಕ ಬಿಂಬಸಾರ ಇವನ ರಾಜಧಾನಿ ಬಿಹಾರದ ರಾಜಗೃಹ

● ಇವನು ಅಂಗ ರಾಜ್ಯವನ್ನು ವಶಪಡಿಸಿಕೊಂಡನು. 

● ಇವನು ಕೋಸಲ, ವಜ್ಜಿ ಹಾಗೂ ಮಾದ್ರ ರಾಜಕುಮಾರಿಯರನ್ನು ವಿವಾಹವಾಗಿದ್ದನು. 

● ಇವನ ಉತ್ತರಾಧಿಕಾರಿ ಅಜಾತಶತ್ರು. ಇವನು ಕೋಸಲದ ದೊರೆಯನ್ನು ಸೋಲಿಸಿ ಕಾಶಿಯನ್ನು ಹಾಗೂ ನಂತರ ವೈಶಾಲಿ ಯನ್ನು ವಶಪಡಿಸಿಕೊಂಡನು. 

● ಈ ವಂಶದ ನಂತರದ ದೊರೆಯಾದ ಉದಯನನು ಗಂಗಾ ಮತ್ತು  ಸೋನ್ ನದಿಗಳ ಸಂಗಮ ಸ್ಥಳದಲ್ಲಿ ಪಾಟಲೀಪುತ್ರ (ಪಾಟ್ನಾ )ಎಂಬ ರಾಜಧಾನಿಯನ್ನು ನಿರ್ಮಿಸಿ ರಾಜಗೃಹದಿಂದ ಅಲ್ಲಿಗೆ ತನ್ನ ರಾಜಧಾನಿಯನ್ನು ವರ್ಗಾಯಿಸಿದನು. 

ಶಿವು ನಾಗವಂಶ. 

● ಶಿಶುನಾಗ ಈ ವಂಶದ ಸ್ಥಾಪಕ. 

● ಇವನ ಕಾಲದಲ್ಲಿ ಅವನತಿಯನ್ನು ಮಗನ ಸಾಮ್ರಾಜ್ಯಕ್ಕೆ ವಶಪಡಿಸಿಕೊಳ್ಳಲಾಯಿತು. 

ನಂದವಂಶ ಸಾ. ಶ. ಪೂ. 345- 322. 

● ಮಹಾಪದ್ಮ ನಂದ ಈ ವಂಶದ ಸ್ಥಾಪಕ. 

● ಇವನು ಕಳಿಂಗ ರಾಜ್ಯವನ್ನು ಆಕ್ರಮಿಸಿ' ಏಕರಾಟ್' ಎಂಬ ಬಿರುದನ್ನು ಧರಿಸಿದನು. 

● ಈ ವಂಶದ ಕೊನೆಯ ದೊರೆಯಾದ ಧನನಂದನನ್ನು ಚಂದ್ರಗುಪ್ತ ಮೌರ್ಯನು ಕೊಂದು ಮಗಧದಲ್ಲಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದನು.

16 ಮಹಾಜನಪದಗಳು. 

====================

ಮಹಾಜನಪದ : ಕಾಶಿ 

ರಾಜಧಾನಿ  : ವಾರಣಾಸಿ 

ಈಗಿನ ಪ್ರದೇಶ : ವಾರಣಾಸಿ ಮತ್ತು ಸುತ್ತಲಿನ ಪ್ರದೇಶ.

====================

ಮಹಾಜನಪದ : ಕೋಸಲ 

ರಾಜಧಾನಿ : ಶ್ರಾವಸ್ತಿ ಸಾಂಕೇತ (ಅಯೋಧ್ಯೆ )

ಈಗಿನ ಪ್ರದೇಶ : ಉತ್ತರ ಪ್ರದೇಶದ ಈಶಾನ್ಯ ಭಾಗ ನಂತರದ ರಾಜಧಾನಿ ಚಂಪಾನಗರ. 

====================

ಮಹಾಜನಪದ : ಅಂಗ 

ರಾಜಧಾನಿ : ಚಂಪಾನಗರ 

ಈಗಿನ ಪ್ರದೇಶ : ಬಿಹಾರದ ಭಾಗಲ್ಪುರ್ ಮತ್ತು ಮುಂಗುರು ಜಿಲ್ಲೆ.

====================

ಮಹಾಜನಪದ : ಮಗಧ 

ರಾಜಧಾನಿ : ರಾಜಗೃಹ( ಗಿರಿ ವಜ್ರ.) 

ಈಗಿನ ಪ್ರದೇಶ : ಪಾಟ್ನಾ ಮತ್ತು ಗಯಾ ಜಿಲ್ಲೆ. 

====================

ಮಹಾಜನಪದ : ವಜ್ಜಿ (ಗಣರಾಜ್ಯ) 

ರಾಜಧಾನಿ : ವೈಶಾಲಿ 

ಈಗಿನ ಪ್ರದೇಶ : ವೈಶಾಲಿ ಜಿಲ್ಲೆ. 

====================

ಮಹಾಜನಪದ : ಮಲ್ಲ (ಗಣರಾಜ್ಯ) 

ರಾಜಧಾನಿ : ಕುಶಿನಗರ ಮತ್ತು ಪಾವಪುರಿ 

ಈಗಿನ ಪ್ರದೇಶ : ಇಂದಿನ ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕಾಸೈ ಹಳ್ಳಿಯ ಪ್ರದೇಶ ಎಂದು ಗುರುತಿಸಲಾಗಿದೆ.

====================

ಮಹಾಜನಪದ : ಚೇದಿ 

ರಾಜಧಾನಿ : ಸೂಕ್ತಿಮತಿ 

ಈಗಿನ ಪ್ರದೇಶ : ಯಮುನಾ ಮತ್ತು ನದಿಗಳ ನಡುವಿನ ಭೂಪ್ರದೇಶ. 

====================

ಮಹಾಜನಪದ : ವತ್ಸ 

ರಾಜಧಾನಿ : ಕೌಶಂಬಿ 

ಈಗಿನ ಪ್ರದೇಶ : ಅಲಹಾಬಾದ್ ಪ್ರಾಂತ್ಯ.

====================

ಮಹಾಜನಪದ : ಕುರು 

ರಾಜಧಾನಿ : ಹಸ್ತಿನಾಪುರ, ಇಂದ್ರಪ್ರಸ್ಥ 

ಈಗಿನ ಪ್ರದೇಶ : ದೆಹಲಿ ಮತ್ತು ಮೀರತ್ ಪ್ರದೇಶ ಹಾಗೂ ಇಸುಕರು.  

====================

ಮಹಾಜನಪದ : ಪಾಂಚಾಲ 

ರಾಜಧಾನಿ : ಅಹಿಚ್ಛತ್ರ ಮತ್ತು ಕಂಪಿಲ್ಯ 

ಈಗಿನ ಪ್ರದೇಶ : ಉತ್ತರ ಪ್ರದೇಶದಲ್ಲಿ ಹಾಗೂ ಫರೂಕಾಬಾದ್ ಹಾಗೂ ಪರುಕಬಾದ್ ಜಿಲ್ಲೆಗಳು. 

====================

ಮಹಾಜನಪದ : ಮತ್ಸ್ಯ 

ರಾಜಧಾನಿ :  ವಿರಾಟನಗರ 

ಈಗಿನ ಪ್ರದೇಶ : ರಾಜಸ್ಥಾನದ ಜೈಪುರ್, ಭರತಪುರ ಹಾಗೂ ಅಲ್ವಾರ್ ಪ್ರದೇಶ. 

====================

ಮಹಾಜನಪದ : ಶೂರಸೇನ. 

ರಾಜಧಾನಿ : ಮಥುರಾ 

ಈಗಿನ ಪ್ರದೇಶ : ಮಥುರಾ

====================

ಮಹಾಜನಪದ : ಆಸ್ಮಾಕ. 

ರಾಜಧಾನಿ : ಪದೌನ್ಯ 

ಈಗಿನ ಪ್ರದೇಶ : ಗೋದಾವರಿ ನದಿ ತೀರ. 

====================

ಮಹಾಜನಪದ : ಅವಂತಿ 

ರಾಜಧಾನಿ : ಉಜ್ಜಯಿನಿ 

ಈಗಿನ ಪ್ರದೇಶ : ಉಜ್ಜಯಿನಿ ಜಿಲ್ಲೆ. 

====================

ಮಹಾಜನಪದ : ಗಾಂಧಾರ. 

ರಾಜಧಾನಿ : ತಕ್ಷಶಿಲೆ 

ಈಗಿನ ಪ್ರದೇಶ : ಕಂದಹಾರ್ ಕಣಿವೆ ಪ್ರದೇಶ (ಕಾಬುಲ್ ಮತ್ತು ರಾವಲ್ಪಿಂಡಿ ನಡುವೆ.) 

====================

ಮಹಾಜನಪದ : ಕಾಂಬೋಜ 

ರಾಜಧಾನಿ : ರಾಜಪುರ 

ಈಗಿನ ಪ್ರದೇಶ : ಕಾಶ್ಮೀರದ ನಗರ.

====================

⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜


Post a Comment

0 Comments

Important PDF Notes

Ad Code