ಮೌರ್ಯ ಸಾಮ್ರಾಜ್ಯದ ಸಂಭವನೀಯ ಬಹು ಆಯ್ಕೆಯ ಪ್ರಶ್ನೋತ್ತರಗಳು.
Possible multiple-choice questions and answers of the Mauryan Empire.
01.ಭಾರತದ ಮೊಟ್ಟ ಮೊದಲ ಸಾಮ್ರಾಜ್ಯ ?
1. ಶಾತವಾಹನ
2. ಮೌರ್ಯ ✔✔
3. ಕದಂಬ
4. ಗುಪ್ತ
02.ಮೌರ್ಯ ಸಾಮ್ರಾಜ್ಯದ ಸ್ಥಾಪಕ .
1. ಚಂದ್ರಗುಪ್ತ
2. ಅಶೋಕ ಮಹಾಶಯ
3. ಬಿಂದುಸಾರ
4. ಚಂದ್ರಗುಪ್ತ ಮೌರ್ಯ ✔✔
03.ಚಂದ್ರಗುಪ್ತ ಮೌರ್ಯನು ಯಾರ ಸಹಾಯದಿಂದ ಧನನಂದ ನನ್ನು ಕೊಂದು ಮೌರ್ಯ ವಂಶ ಸ್ಥಾಪಿಸಿದನು ?
1.ಕಾಲಶೋಕ
2.ಮಹಾಪದ್ಮನಂದನ
3.ಚಾಣಕ್ಯ ✔✔
4.ಬಿಂಬಸಾರ
04.ಚಂದ್ರಗುಪ್ತ ಮೌರ್ಯನ ಆಸ್ಥಾನದ ಪ್ರಧಾನಮಂತ್ರಿ
1.ಕೌಟಿಲ್ಯ ✔✔
2.ವಿಶಾಖದತ್ತ
3.ಪಾಣಿನಿ
4.ಅಶ್ವಘೋಷ
05.ಅರ್ಥಶಾಸ್ತ್ರದ ಕರ್ತೃ
1.ವಿಶಾಖದತ್ತ
2.ಕಲ್ಹಣ
3.ಬಾಣಭಟ್ಟ
4.ಕೌಟಿಲ್ಯ ✔✔
06.ಕೌಟಿಲ್ಯನ ಅರ್ಥಶಾಸ್ತ್ರ ಚಂದ್ರಗುಪ್ತ ಮೌರ್ಯನ ಕಾಲದ ಇವುಗಳ ಬಗ್ಗೆ ಖಚಿತ ವರದಿಯನ್ನು ನೀಡುತ್ತದೆ.
1. ಆರ್ಥಿಕ ಮತ್ತು ಸಾಮಾಜಿಕ ಜೀವನ
2.ಸಾಮಾಜಿಕ ಮತ್ತು ಆರ್ಥಿಕ ಮತ್ತು ರಾಜಕೀಯ ಅಂಶಗಳ ಬಗ್ಗೆ
3.ಸಾಮಾಜಿಕ ಆರ್ಥಿಕ ರಾಜಕೀಯ ಮತ್ತು ಸೈನಿಕ ಅಂಶಗಳ ಬಗ್ಗೆ✔✔
4.ಚಂದ್ರಗುಪ್ತ ಮೌರ್ಯನ ಆಸ್ಥಾನದ ಸೌಂದರ್ಯ ಮತ್ತು ವೈಭವ ಕುರಿತು.
07.ವಿಶಾಖದತ್ತನ ಕೃತಿ
1.ಬುದ್ಧಚರಿತ
2.ಮುದ್ರಾರಾಕ್ಷಸ✔✔
3.ರಾಜತರಂಗಿಣಿ
4.ವಿಕ್ರಮಂಕದೇವಚರಿತ
08.ಮೌರ್ಯರ ರಾಜಧಾನಿ
1.ಪಾಟಲಿಪುತ್ರ ✔✔
2.ವೈಶಾಲಿ
3.ರಾಜಗೃಹ
4ಮಗಧ
09.ಚಂದ್ರಗುಪ್ತ ಮೌರ್ಯ ಹಾಗೂ ಚಾಣಕ್ಯ ನಂದರ ವಿರುದ್ಧ ನಡೆಸಿದ ಕ್ರಾಂತಿಯ ವಿಷಯವನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ?
1. ವಿಶಾಖದತ್ತನ ಮುದ್ರಾರಾಕ್ಷಸ ✔✔
2.ಕೌಟಿಲ್ಯನ ಅರ್ಥಶಾಸ್ತ್ರ
3.ಹಾಲನ ಗತಸಪ್ತಸತಿ
4.ಮೆಗಸ್ತನೀಸ್ ನ ಇಂಡಿಕಾ
10.ಚಂದ್ರಗುಪ್ತ ಮೌರ್ಯನು ಯಾವ ಜೈನ ಮುನಿಯ ಸಮ್ಮುಖದಲ್ಲಿ ಜೈನಧರ್ಮವನ್ನು ಸ್ವೀಕರಿಸಿದ ?
1.ಉಪಗುಪ್ತ
2.ಸ್ಥೂಲ ಬಾಹು
3.ಭದ್ರಬಾಹು ✔✔
4.ಸ್ಥೂಲಭದ್ರ
11.ಚಂದ್ರಗುಪ್ತ ಮೌರ್ಯನು ಈತನ ಸಮಕಾಲೀನವನು.
1. ಅಲೆಕ್ಸಾಂಡರ್ ✔✔
2.ಸಿಮುಖ
3.ಅಕ್ಬರ್
4.ಮಹಮ್ಮದ್ ಬಿನ್ ಕಾಸಿಂ
12.ಚಂದ್ರಗುಪ್ತ ಮೌರ್ಯನು ಈತನನ್ನು ಕೊಂದು ಮೌರ್ಯವಂಶ ಸ್ಥಾಪಿಸಿದನು.
1.ಬಿಂಬಸಾರ
2.ಶಿಶುನಾಗ
3.ಜರಾಸಂಧ
4.ಧನನಂದ ✔✔
13.ಚಂದ್ರಗುಪ್ತ ಮೌರ್ಯನ ತಾಯಿ
1.ಮುರಾ ದೇವಿ ✔✔
2.ಪ್ರಜಾಪತಿ ಗೌತಮಿ
3.ತೃಷಲ ದೇವಿ
4.ಯಶೋಧರ
14.ವಿಶಾಖದತ್ತನ ಮುದ್ರಾರಾಕ್ಷಸ ದಲ್ಲಿ ಚಂದ್ರಗುಪ್ತನನ್ನು ---------------ಎಂಬ ಉಪನಾಮದಿಂದ ಸೂಚಿಸಿದೆ.
1.ವಿಷ್ಣುಗೋಪ
2.ವೃಷಲ ✔✔
3.ಮೋರಿಸ್
15.ಚಂದ್ರಗುಪ್ತಮೌರ್ಯನು ಸೋಲಿಸಿದ ಗ್ರೀಕ್ ದೊರೆ ಯಾರು?
1. ಫಿಲಿಪ್ಸ್
2.ಅಲೆಕ್ಸಾಂಡರ್
3.ಸೆಲ್ಯೂಕಸ್ ನಿಕೇಟರ್ ✔✔
4.ಮೆಗಸ್ತನಿಸ್
16.ಚಂದ್ರಗುಪ್ತ ಮೌರ್ಯ ಸೆಲ್ಯೂಕಸ್ ನಿಕೇಟರ್ ಅವನನ್ನು ಸೋಲಿಸಿ ಅವನ ಮಗಳಾದ -----------ವಿವಾಹವಾದನು.
1. ಹೇರಾತ್
2.ಎಲಿಜಿಬತ್
3.ಹೆಲನ್✔✔
4.ಸೂಫಿ
17.ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಭೇಟಿ ಕೊಟ್ಟ ಗ್ರೀಕ್ ರಾಯಭಾರಿ?
1.ಅಬ್ದುಲ್ ರಜಾಕ್
2.ಪಾಹಿಯಾನ್
3.ಮೇಘಸ್ತನಿಸ್✔✔
4.ಇತ್ಸಿಂಗ್
18.ಚಂದ್ರಗುಪ್ತ ಮೌರ್ಯನು 500 ಆನೆಗಳನ್ನು ಕೊಟ್ಟಿದ್ದು ಯಾರಿಗೆ ?
1.ಅಲೆಗ್ಸಾಂಡರ್ ಗೆ
2.ಧನನಂದ
3. ಬಿಂದುಸಾರ
4. ಸೆಲ್ಯೂಕಸ್ ನಿಕೇಟರ್ ✔✔
19.ಅಶೋಕನು ಜಯಸಿದ ಒಂದೇ ಒಂದು ರಾಜ್ಯ ಯಾವುದು?
1. ಮಗದ
2.ಉಜ್ಜಯಿನಿ
3.ತಕ್ಷಶೀಲ
4.ಕಳಿಂಗ ✔✔
20.ಚಂದ್ರಗುಪ್ತ ಮೌರ್ಯನು ಬರಗಾಲದ ಮುನ್ಸೂಚನೆ ಗೊತ್ತಾಗಿ ಜೈನಮುನಿ ಭದ್ರಬಾಹುವಿನೊಂದಿಗೆ ಎಲ್ಲಿಗೆ ಬಂದು ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದನು ?
1.ಮೂಡಬಿದ್ರಿ
2.ಶ್ರವಣಬೆಳಗೊಳ ✔✔
3.ಕಾರ್ಕಳ
4.ಬ್ರಹ್ಮಗಿರಿ
21.ಕೌಟಿಲ್ಯ ಯಾವ ವಿಶ್ವವಿದ್ಯಾಲಯದಲ್ಲಿ ಪಾಂಡಿತ್ಯವನ್ನು ಪಡೆದಿದ್ದರು ?
1.ತಕ್ಷಶಿಲಾ ✔✔
2.ನಳಂದ
3.ವಿಕ್ರಮಶೀಲ ವಿಶ್ವವಿದ್ಯಾಲಯ
4.ಬನಾರಸ ವಿಶ್ವವಿದ್ಯಾಲಯ
22.ಕೌಟಿಲ್ಯನ ಅರ್ಥಶಾಸ್ತ್ರವನ್ನು ಬೆಳಕಿಗೆ ತಂದವನು ?
1.ಜೇಮ್ಸ್ ಪ್ರಿನ್ಸೆಪ್
2.ವಿ.ಎ. ಸ್ಮಿತ್
3.ಡಾ. ಶಾಮಶಾಸ್ತ್ರಿ ✔✔
4.ಸಿ. ಬೀಡ್
23.ಕೌಟಿಲ್ಯನನ್ನು ಏನೆಂದು ಕರೆಯುತ್ತಾರೆ ?
1.ಭಾರತದ ಮೇಕವಲಿ ✔✔
2.ಭಾರತದ ಮಾರ್ಟಿನ್ ಲೂಥರ್
3.ಭಾರತದ ಚಾಣಕ್ಯ
4.ಭಾರತದ ನೆಪೋಲಿಯನ್
24.ಮೆಗಸ್ತನಿಸನ ಕೃತಿ
1.ಅರ್ಥಶಾಸ್ತ್ರ
2.ಕಾದಂಬರಿ
3.ಪಂಚಸಿದ್ಧಾಂತಿಕ
4.ಇಂಡಿಕಾ ✔✔
25.ಚಂದ್ರಗುಪ್ತ ಮೌರ್ಯನ ಮಗ
1.ಅಶೋಕ
2.ಬಿಂದುಸಾರ ✔✔
3.ಬಿಂಬಸಾರ
4.ಬೃಹದ್ರಥ
26.ಅಮಿತ್ರಘಾತ ಅಥವಾ ಅಮಿತ್ರ ಕಾಡ ಅಥವಾ ಶತ್ರು ವಿನಾಶಕ ಎಂಬ ಬಿರುದು ಹೊಂದಿದ ರಾಜ ?
1.ಅಶೋಕ
2.ಚಂದ್ರಗುಪ್ತ ಮೌರ್ಯ
3.ಬಿಂದುಸಾರ ✔✔
4.ಅಸ್ಸಾ
27.ಬಿಂದುಸಾರನ ಕಾಲದಲ್ಲಿ ಅಶೋಕನು ಈ ಕೆಳಗಿನ ಯಾವ ಪ್ರಾಂತ್ಯಗಳ ರಾಜ್ಯಪಾಲನಾಗಿದ್ದನು?
1.ಕಳಿಂಗ ಮತ್ತು ಉಜ್ಜಯಿನಿ
2.ಉಜ್ಜಯಿನಿ ಮತ್ತು ಮಗಧ
3.ತಕ್ಷಶಿಲೆ ಮತ್ತು ಕಳಿಂಗ
4.ಉಜ್ಜಯಿನಿ ಮತ್ತು ತಕ್ಷಶಿಲೆ ✔✔
28.ಮೌರ್ಯ ವಂಶದ ಪ್ರಸಿದ್ಧ ದೊರೆ?
1.ಚಂದ್ರಗುಪ್ತ ಮೌರ್ಯ
2.ಅಶೋಕ ಮಹಾಶಯ ✔✔
3.ಬಿಂದುಸಾರ
4.ಈ ಮೇಲಿನ ಎಲ್ಲರೂ
29.ಇತಿಹಾಸ ಬಾಂದಳದಲ್ಲಿ ಎಂದೂ ಮಿನುಗಿ ಅಂದೇ ಮಾಯವಾಗಿರುವ ಸಾವಿರಾರು ಮಹಾರಾಜರುಗಳ ನಡುವೆ ಇಂದಿಗೂ ಬೆಳಗುತ್ತಿರುವ ದೃವತಾರೆ ಎಂದು ಯಾರನ್ನು ಬಿಂಬಿಸಲಾಗಿದೆ?
1.ಕಾನಿಷ್ಕ
2.ಕಾಲಶೋಕ
3.ಬಿಂದುಸಾರ
4.ಅಶೋಕ್ ✔✔
30.ಕಳಿಂಗ ಯುದ್ಧ ನಡೆಯಿತು
1.ಸಾ. ಶ. ಪೂ 265
2. ಸಾ. ಶ. ಪೂ 261 ✔✔
3.ಸಾ.ಶ.ಪೂ.299
4.ಸಾ.ಶ.ಪೂ.262
31.ಅಶೋಕ ಯಾವ ಧರ್ಮವನ್ನು ಸ್ವೀಕರಿಸಿದನು ?
1.ವೈಷ್ಣವ
2.ಜೈನ
3.ಇಸ್ಲಾಂ
4.ಬೌದ್ಧ ✔✔
32.ಅಶೋಕ ಬೌದ್ಧ ಧರ್ಮವನ್ನು ಯಾವ ಸನ್ಯಾಸಿಯ ಸಹಾಯದಿಂದ ಸ್ವೀಕರಿಸಿದನು?
1. ಸ್ಥೂಲಭದ್ರ
2.ಉಪಗುಪ್ತ ✔✔
3.ಚಂದ್ರಗುಪ್ತ
4.ಭದ್ರಬಾಹು
33.ಸಾರಾನಾಥದ ಶಾಸನದಲ್ಲಿ ಅಶೋಕನನ್ನು ಏನೆಂದು ವರ್ಣಿಸಲಾಗಿದೆ ?
1.ಧರ್ಮಶೋಕ ✔✔
2.ಚಂಡಾ ಶೋಕ
3.ಮಹಾಶಯ
4.ಎಲ್ಲವೂ
34.ಅಶೋಕನು ಬೌದ್ಧ ಧರ್ಮ ಸ್ವೀಕರಿಸಿದ ಬಗ್ಗೆ ತಿಳಿಸುವ ಶಾಸನ?
1.ಮಸ್ಕಿ ಶಾಸನ
2.ಶಹಾಬಾದ್ ಗಿರಿ ಶಾಸನ
3.ಬಾಬ್ರು ಶಾಸನ ✔✔
4.ಗಿರ್ನಾರ್ ಶಾಸನ
35. ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ ?
1.ಒಂದನೇ ಬಂಡೆಗಲ್ಲು ಶಾಸನ
2.ಐದನೇ ಬಂಡೆಗಲ್ಲು ಶಾಸನ
3.11ನೇ ಬಂಡೆಗಲ್ಲು ಶಾಸನ
4.13ನೇ ಬಂಡೆಗಲ್ಲು ಶಾಸನ ✔✔
36.ಅಶೋಕ ಬೌದ್ಧ ಧರ್ಮವನ್ನು ಸ್ವೀಕರಿಸಲು ಕಾರಣ?
1. ಅಶೋಕನ ಕಳಿಂಗ ಯುದ್ಧ
2.ಬುದ್ಧನ ಅಹಿಂಸಾ ತತ್ವ
3.ಶಾಂತಿ ತತ್ವ
4.ಎಲ್ಲವೂ ✔✔
37.ಅಶೋಕನ ಅಧಿಕಾರ ಅವಧಿಯಲ್ಲಿ ನಡೆದ ಬೌದ್ಧ ಸಮ್ಮೇಳನ?
1.ಒಂದನೇ ಬೌದ್ಧ ಸಮ್ಮೇಳನ
2.ಎರಡನೇ ಬೌದ್ಧ ಸಮ್ಮೇಳನ
3.ಮೂರನೇ ಬೌದ್ಧ ಸಮ್ಮೇಳನ
4.4 ನೇ ಬೌದ್ಧ ಸಮ್ಮೇಳನ ✔✔
38.ಮೂರನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದರು?
1. ಸಭಾ ಕಾವಿ
2.ಮೊಗ್ಗಲಿ ಪುತ್ರತಿಸ್ಸೆ ✔✔
3.ಮಹಾ ಕಶ್ಯಪ್
4.ವಸುಮಿತ್ರ
39.ಅಶೋಕನು ಬೌದ್ಧ ಧರ್ಮವನ್ನು ಪ್ರಚುರಪಡಿಸಲು ನೇಮಿಸಿದ ಅಧಿಕಾರಿ ?
1.ಅಮಾತ್ಯ
2.ಧರ್ಮಮಹಾಮಾತ್ರರು ✔✔
3.ವೈಚಾರಿಕ
4.ಪುರೋಹಿತ
40.ಅಶೋಕನು ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಭೇಟಿ ಕೊಟ್ಟು ಯಾವ ಶಾಸನವನ್ನು ಹೊರಡಿಸಿದ?
1.ರುಮಿಂಡೈ ಸ್ತಂಭಶಾಸನ ✔✔
2.ಶಾಂತಿ ಸ್ತಂಭಶಾಸನ
3.ಸಾರಾನಾಥ ಸ್ತಂಭ
4.ಶಾಸನ ಗಿರ್ನಾರ್ ಶಾಸನ
41.ಅಶೋಕನು ಬುದ್ಧನ ಜನ್ಮಸ್ಥಳವಾದ ಲುಂಬಿನಿ ಗ್ರಾಮಕ್ಕೆ ಭೇಟಿ ಕೊಟ್ಟು ರುಮಿಂಡೈ ಸ್ತಂಭಶಾಸನ ನೆಡಿಸಿ ಯಾವ ಗ್ರಾಮಕ್ಕೆ ಕಂದಾಯ ವಿನಾಯತಿ ನೀಡಿದನು?
1.ಸಾರಾನಾಥ
2.ಲುಂಬಿನಿ ✔✔
3.ಸಾಂಚಿ
4.ಕಳಿಂಗ
42.ನಾಲ್ಕು ಮುಖದ ಸಿಂಹ ವನ್ನು ಹೊಂದಿದ ಸ್ತಂಭ ಶಾಸನವು ಎಲ್ಲಿದೆ ?
1.ಸಾರಾನಾಥ ✔✔
2.ಸಾಂಚಿ
3.ಬೋಧಗಯಾ
4.ಮುನ್ಸೀರ
43.ಅಶೋಕನ ಮೊದಲ ಉತ್ತರಾಧಿಕಾರಿ ?
1.ತೀವರ
2.ಜಲೋಕ ✔✔
3.ಕುಣಾಲ
4.ಸಂಪ್ರತಿ
44.ಮೌರ್ಯರ ಕೊನೆಯ ದೊರೆ ?
1.ಅಶೋಕ
2.ಸಂಪ್ರತಿ
3.ಬೃಹದ್ರಥ ✔✔
4.ಸಂಪದಿ
45.ಅಶೋಕನ ಹೆಸರು ಕಂಡುಬರುವ ಮಸ್ಕಿ ಶಾಸನವನ್ನು ಸಂಶೋಧಿಸಿದವರು?
1. ಡಾ.ಸಿ .ಬೀಡ ✔✔
2.ಜೇಮ್ಸ್ ಪ್ರಿನ್ಸೆಪ್
3.ಕ್ಯಾನಿಂಗ್ ಹ್ಯಾಮ್
4.ಲಾರ್ಡ್ ಕರ್ಜನ್
46.ಮೌರ್ಯ ಸಾಮ್ರಾಜ್ಯದ ಮುಖ್ಯ ಆಡಳಿತ ಲಕ್ಷಣವೆಂದರೆ?
1. ಕೇಂದ್ರೀಕೃತ ಆಡಳಿತ ✔✔
2.ಅಶೋಕನ ಧಾರ್ಮಿಕ ನೀತಿ
3.ಪಾಟಲೀಪುತ್ರ ನಗರಾಡಳಿತ
4.ಕಂದಾಯ ಮತ್ತು ಹಣಕಾಸು ವ್ಯವಸ್ಥೆ
47.ದೇವತೆಗಳ ಪುತ್ರ ,ದೇವನಾಮಪ್ರಿಯ ಎಂದು ಯಾರನ್ನು ಹೇಳುತ್ತಾರೆ?
1.ಅಶೋಕ ✔✔
2.ಬಿಂದುಸಾರ
3.ಚಂದ್ರಗುಪ್ತ ಮೌರ್ಯ
4.ಜೇಮ್ಸ್ ಪ್ರಿನ್ಸೆಪ್
48.ಕೌಟಿಲ್ಯನ ಅರ್ಥಶಾಸ್ತ್ರ ವು ಎಷ್ಟು ಇಲಾಖೆಗಳ ಕರ್ತವ್ಯವನ್ನು ಕುರಿತು ತಿಳಿಸುತ್ತದೆ?
1. 12
2. 8
3. 23
4. 32 ✔✔
49.ಮೌರ್ಯರ ಕಂದಾಯ ಮತ್ತು ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಹೇಳಿಕೆ ಸರಿಯಾಗಿದೆ ?
1.ಭಾಗ ಮತ್ತು ಬಲಿ ಎಂಬ ತೆರಿಗೆ ಗಳಿದ್ದವು
2.ಭೂಮಿಯಲ್ಲಿ ಬೆಳೆದ ಬೆಳೆಯಲ್ಲಿ ರಾಜನ ಪಾಲನ್ನು ಭಾಗ ಎಂದು ಕರೆಯಲಾಗುತ್ತಿತ್ತು
3.1 ಮತ್ತು 2 ತಪ್ಪು
4. 1 ಮತ್ತು 2 ಸರಿ ✔✔
50.ಮೌರ್ಯರ ಸಂತತಿ ಕೊನೆಯ ದೊರೆ ಬೃಹದ್ರಥನನ್ನು ಕೊಂದವನು ?
1.ಪುಷ್ಯ ಮಿತ್ರ ಸಂಗ ✔✔
2.ಬಿಂಬಸಾರ
3.ಚಂದ್ರಗುಪ್ತ
4.ಸಮುದ್ರಗುಪ್ತ
51.ಅಶೋಕನ ಮಸ್ಕಿ ಶಾಸನ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
1.ರಾಯಚೂರು ✔✔
2.ಬಳ್ಳಾರಿ
3.ತುಮಕೂರು
4.ಹಾಸನ
52.ಅಶೋಕನ ಶಾಸನಗಳು ಯಾವ ಭಾಷೆಯಲ್ಲಿ ರಚಿತವಾಗಿದೆ?
1. ಬ್ರಾಹ್ಮಿ
2.ಪ್ರಾಕೃತ ✔✔
3.ಖರೋಷ್ಠಿ
4.ಪಾಳಿ
53.ಅಶೋಕನ ಶಾಸನಗಳಲ್ಲಿ ದ್ವಿಭಾಷಾ ಹೊಂದಿದ ಶಾಸನ?
1. ಕಂದಹಾರ ಶಾಸನ ✔✔
2.ಸಾರಾನಾಥ ಶಾಸನ
3.ಬಬ್ರು ಶಾಸನ
4.ಮಸ್ಕಿ ಶಾಸನ
54.ಪ್ರಸ್ತುತ ಕಳಿಂಗ ಯಾವ ರಾಜ್ಯದಲ್ಲಿದೆ ?
1.ಬಿಹಾರ್
2.ಆಂಧ್ರಪ್ರದೇಶ
3.ಓಡಿಸಾ ✔✔
4.ಮಧ್ಯ ಪ್ರದೇಶ್
55.ಸಾಂಚಿಯ ಮಹಾಸ್ತೂಪ ಯಾವ ರಾಜ್ಯದಲ್ಲಿದೆ?
1. ಉತ್ತರಪ್ರದೇಶ
2.ಮಧ್ಯಪ್ರದೇಶ ✔✔
3.ರಾಜಸ್ಥಾನ
4.ಅಸ್ಸಾಂ
⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜⚜

0 Comments