Ad Code

Ticker

6/recent/ticker-posts

Click Below Image to Join Our Telegram For Latest Updates

Rivers in Karnataka. ಕರ್ನಾಟಕದ ನದಿಗಳು.

 

                        ⛔ಕರ್ನಾಟಕದ ನದಿಗಳು

🌺ಕರ್ನಾಟಕದ ನದಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್ .

🌺Rivers in Karnataka are useful for various competitive exams.




1) ಪೂರ್ವಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?

 * 1) ಘಟಪ್ರಭಾ.

   2) ಮಲಪ್ರಭಾ.

   3) ಭೀಮಾ.

   4) ತುಂಗಭದ್ರಾ.

   5) ಡೋಣಿ.

               - ಮುಂತಾದವು.


2) ಮಹಾರಾಷ್ಟ್ರದ "ಭೀಮಾಶಂಕರ್" ಬಳಿಯಲ್ಲಿ ಉಗಮವಾಗುವ ನದಿ ಯಾವುದು?

 * ಭೀಮಾನದಿ.


3) "ಉತ್ತರ ಪಿನಾಕಿನಿ ನದಿ"ಯ ಮತ್ತೊಂದು ಹೆಸರೇನು?

 * ಪೆನ್ನಾರ್.


4) "ಛಾಯಾ ಭಗವತಿ" ಜಲಪಾತವನ್ನು ನಿರ್ಮಿಸುವ ನದಿ ಯಾವುದು?

 * ಡೋಣಿ.


5) ಹಿರಣ್ಯಕೇಶಿ & ಮಾರ್ಕಂಡೇಯ ಇವು ಯಾವ ನದಿಯ ಉಪನದಿಗಳು?

 * ಘಟಪ್ರಭಾ.


6) ರಾಣೆಬೆನ್ನೂರಿನ ಬಳಿ ಯಾವ ನದಿಯು ತುಂಗಭದ್ರಾ ನದಿಯನ್ನು ಸೇರುವುದು?

 * ಕುಮುದ್ವತಿ.


7) "ನವಿಲುತಿರ್ಥ"ವೆಂದು ಯಾವ ನದಿಯನ್ನು ಕರೆಯುವರು?

 * ಮಲಪ್ರಭಾ.


8) "ಗೋಕಾಕ್ ಜಲಪಾತ"ವನ್ನು ಉಂಟು ಮಾಡುವ ನದಿ ಯಾವುದು?

 * ಘಟಪ್ರಭಾ.


9) ವೇದಾವತಿ & ಹಗರಿ ಯಾವ ನದಿಯ ಉಪನದಿಗಳು?

 * ತುಂಗಭದ್ರಾ.


10) ಘಟಪ್ರಭಾ ನದಿಯ ಉಗಮ ಸ್ಥಳ ಯಾವುದು?

 * ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಪಶ್ಚಿಮಘಟ್ಟ.


11) ಬಾದಾಮಿ ಯಾವ ನದಿಯ ಎಡದಂಡೆಗೆ ಸಮೀಪದಲ್ಲಿದೆ?

 * ಮಲಪ್ರಭಾ.


12)ಗುಲ್ಬರ್ಗ ಜಿಲ್ಲೆಯ ಜಪಾಲಪುರದ ಬಳಿ ಡೋಣಿ ಯಾವ ನದಿಯನ್ನು ಸೇರುವುದು ?

*  ಕೃಷ್ಣಾ

 

13) ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು?

 * ಕನಕುಂಬಿ.


14) ಕನಕುಂಬಿ ಬೆಳಗಾವಿ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?

 * ಖಾನಾಪುರ.


15) ಯಾವ ನದಿಗೆ "ಪಂಪಸಾಗರ" ಜಲಾಶಯ ನಿರ್ಮಿಸಲಾಗಿದೆ?

 * ತುಂಗಭದ್ರಾ.


16) ಮಹಾರಾಷ್ಟ್ರದ ದತ್ತಪಟ್ಟಣದ ಬಳಿ ಹುಟ್ಟುವ ನದಿ ಯಾವುದು?

 * ಡೋಣಿ.


17) ಬೆಣ್ಣೆ ಹಳ್ಳ  ಮತ್ತು ಹಿರೇ ಹಳ್ಳ  ಯಾವ ನದಿಯ ಉಪನದಿಗಳು ?

*  ಮಲಪ್ರಭಾ.



18) ತುಂಗಭದ್ರಾ ನದಿಯು ಆಂಧ್ರಪ್ರದೇಶದ ಯಾವ ಸ್ಥಳದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.?

* ಕರ್ನೂಲ್ ಬಳಿ ಆಲಂಪುರದಲ್ಲಿ.



19) ಇತಿಹಾಸ ಪ್ರಸಿದ್ಧ ಪಟ್ಟದಕಲ್ಲು ಮತ್ತು ಐಹೊಳೆ ಯಾವ ನದಿಯ ಬಲದಂಡೆಗೆ ಇವೆ ?

*  ಮಲಪ್ರಭಾ.



20) ಶಿವಮೊಗ್ಗದ ಮೂಲಕ ಹರಿದು ಬರುವ ವರದಾನದಿಯು ಬಿಲ್ವಿಗಿಯ ಬಳಿ ಯಾವ ನದಿಯನ್ನು ಸೇರುವುದು ?

*  ತುಂಗಭದ್ರಾ 



21) ವರದಾ & ಕುಮದ್ವತಿ ಯಾವ ನದಿಯ ಉಪನದಿಗಳು?

 * ತುಂಗಭದ್ರಾ.


22) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?

* 1) ಕಾಳಿ.

  2) ಶರಾವತಿ.

  3) ನೇತ್ರಾವತಿ.

  4) ಬೇಡ್ತಿ.

  5) ಅಘನಾಶಿನಿ.

  6) ವಾರಾಹಿ.

  7) ಮಹಾದಾಯಿ.

               --- ಮುಂತಾದವು.


23) "ಬಾರಪೊಳೆ ನದಿ"ಯು ಯಾವ ಎರಡು ರಾಜ್ಯಗಳಲ್ಲಿ ಹರಿಯುತ್ತದೆ?

 * ಕರ್ನಾಟಕ & ಕೇರಳ.


24) "ಮಾಗೋಡು ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?

 * ಬೇಡ್ತಿ.


25) ಬೇಡ್ತಿ ನದಿಯ ಮತ್ತೊಂದು ಹೆಸರೇನು?

 * ಗಂಗಾವಳಿ.


26) ಕಾಳಿ ನದಿಯ ಉಗಮ ಸ್ಥಳ ಯಾವುದು?

 * ಉತ್ತರಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ ಡಿಗ್ಗಿಘಾಟಿನಲ್ಲಿ.


27) "ಭಂಡಾಜೆ ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?

 * ನೇತ್ರಾವತಿ.


28) ಹರಿದ್ರಾತಿ ಮತ್ತು ಎಣ್ಣೆ ಹೊಳಿ  ಇವು ಯಾವ 

ನದಿಯ ಪ್ರಮುಖ ಉಪನದಿಗಳು ?

*  ಶರಾವತಿ



29) ಶರಾವತಿ ನದಿಯ ಉಗಮಸ್ಥಳ ಯಾವುದು?

 * ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ.


30) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಉದ್ದವಾದ ನದಿ ಯಾವುದು?

 * ಕಾಳಿನದಿ.


31) "ಉಂಚಳ್ಳಿ ಜಲಪಾತ"ವನ್ನು ನಿರ್ಮಿಸುವ ನದಿ ಯಾವುದು?

 * ಅಘನಾಶಿನಿ.


32) ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿರುವ ಏಕೈಕ ನದಿ ಯಾವುದು?

 * ವರಾಹಿ ನದಿ.


33) ನೇತ್ರಾವತಿ ನದಿಯ ಉಗಮಸ್ಥಳ ಯಾವುದು?

 * ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನದುರ್ಗದ ಬಳಿ.


34) "ಲಾಲಗುಳಿ ಜಲಪಾತ''ವನ್ನು ಉಂಟು ಮಾಡುವ ನದಿ ಯಾವುದು?

 * ಕಾಳಿ ನದಿ.


35) ಕಳಸ & ಬಂಡೂರಿ ಯಾವ ನದಿಯ ಉಪನದಿಗಳು?

 * ಮಹದಾಯಿ.


36) ಶಿವಗಂಗೆ & ಇಳಿಮನೆ ಜಲಪಾತಗಳನ್ನು ಉಂಟುಮಾಡುವ ನದಿ ಯಾವುದು?

 * ಅಘನಾಶಿನಿ.


37) ಗುರುಪುರ & ಕುಮಾರಧಾರ ಯಾವ ನದಿಯ ಉಪನದಿಗಳು?

 * ನೇತ್ರಾವತಿ.


38) ಮಹದಾಯಿ ನದಿಯು ಗೋವಾದಲ್ಲಿ ಯಾವ ಹೆಸರಿನಿಂದ ಹರಿಯುವುದು?

 * ಮಾಂಡೋವಿ.


39) ಜಗತ್ಪ್ರಸಿದ್ಧ "ಜೋಗ್ ಜಲಪಾತ"ವನ್ನು ಸೃಷ್ಟಿಸಿದ ನದಿ ಯಾವುದು?

 * ಶರಾವತಿ.

     

40) " ಕಪ್ಪುಕಾಳಿ " ಎಂದು ಯಾವ  ನದಿಯನ್ನು ಕರೆಯುತ್ತಾರೆ.?

*  ಕಾಳಿ



41) "ಪಣಜಿ" ಯಾವ ನದಿಯ ತೀರದಲ್ಲಿದೆ?

 * ಮಹದಾಯಿ.


42) ತಟ್ಟಿಹಳ್ಳ & ಪಂಡ್ರಿ ಯಾವ ನದಿಯ ಉಪನದಿಗಳು?

 * ಕಾಳಿನದಿ.


43)ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದೇವಾಂಗ ಎಂಬಲ್ಲಿ ಉಗಮವಾಗುವ ನದಿ"ಯಾವುದು ?

*  ಮಹದಾಯಿ.



44) ಚಾರ್ಮುಡಿ, ಶಿಶಿಲ & ಪಾಲ್ಗುಣಿ ಯಾವ ನದಿಯ ಉಪನದಿಗಳು?

 * ನೇತ್ರಾವತಿ.


45) ಕನೇರಿ, ವಾಕಿ &  ಇವು ಯಾವ ನದಿಯ ಉಪನದಿಗಳು?

 * ಕಾಳಿನದಿ.


  🧿🧿🧿🧿🧿🧿🧿🧿🧿🧿🧿🧿🧿🧿🧿🧿🧿🧿🧿

Post a Comment

0 Comments

[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] ಎಸ್.ಎಲ್.ಭೈರಪ್ಪ ಅವರ ಗೃಹಭಂಗ ಕಾದಂಬರಿ PDF
[PDF] HSTR CET Syllabus PDF For High School Teacher Aspirants
[PDF]ಭಾರತದ ಇತಿಹಾಸ/ Indian History PDF For All Competitive Exams
PU Lecturer Recruitment Syllabus PDF/ಪಿಯು ಉಪನ್ಯಾಸಕರ ನೇಮಕಾತಿ ಪಠ್ಯಕ್ರಮ ಪಿಡಿಎಫ್
ಕರ್ವಾಲೋ ಪೂರ್ಣಚಂದ್ರ ತೇಜಸ್ವಿ ರವರ ಕಾದಂಬರಿ ಪಿಡಿಎಫ್ /Carvalho Purnachandra Tejaswi Novel PDF
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
KAR-TET Social Science Quiz Series-10/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-10
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS

Important PDF Notes

Ad Code