ವೇದಗಳ ಕಾಲ ಅಥವಾ ಆರ್ಯರ ಆಗಮನ
The time of the Vedas or the arrival of the Aryans.
ವೇದ ಎಂಬ ಪದ ಮೂಲತಃ ಸಂಸ್ಕೃತ ಭಾಷೆಯಲ್ಲಿ ವಿಧ್ ಎಂಬುದರಿಂದ ಬಂದಿದೆ. ವೇದ ಎಂದರೆ ಜ್ಞಾನ ಅಥವಾ ತಿಳಿ ಎಂದರ್ಥ. ವೇದಗಳ ನಿರ್ಮಾಪಕರು ಆರ್ಯರು. ಆರ್ಯ ಎಂದರೆ ಕುಲೀನ ,ಒಡೆಯ ,ಕೃಷಿ ಅವಲಂಬಿತ ,ಶ್ರೇಷ್ಠ ಎಂದರ್ಥ.
ಆರ್ಯರ ಮೂಲದ ಬಗ್ಗೆ ಅಭಿಪ್ರಾಯಗಳು
● ಡಾ॥ ವಿಲಿಯಂ ಜೋನ್ಸ್ ➖ ಪೂರ್ವ ಯುರೋಪ್
● ಡಾ॥ ನೇಹರಂಗ ➖ ರಷ್ಯಾ
● ಗೈಲ್ಸ್ ಮತ್ತು ಮೆಕ್ ಡೊನಾಲ್ಡ್ ➖ ಹಂಗೇರಿಯಾ
● ಡಾ॥ ಪೆಂಕ್ ➖ ಸ್ಕ್ಯಾಂಡಿನೇವಿಯಾ
● ದಯಾನಂದ ಸರಸ್ವತಿ ➖ ಟಿಬೇಟ್
● ಬಾಲ ಗಂಗಾಧರ ತಿಲಕ ➖ ಆರ್ಕಟಿಕ್ ಧ್ರುವಪ್ರದೇಶ
● ಎಸಿ ದಾಸ್ ,ಅಮಲಾನಂದ ಘೋಷ್ ,ಸ್ವಾಮಿ ವಿವೇಕಾನಂದ, ಮತ್ತು ಗಂಗಾನಾಥ್ ತ್ರಿಪಾಟಿ ಜಾ ➖ ಸಪ್ತಸಿಂದೂ ಪ್ರದೇಶ (ಕಾಬೂಲ್, ಕಂದಹಾರ್ ,ತಕ್ಷಶಿಲೆ, ಪೇಶಾವರ )
● ಮ್ಯಾಕ್ಸ್ ಮುಲ್ಲರ್ ➖ ಮಧ್ಯ ಏಷ್ಯಾ, ಇವರು ಮಧ್ಯ ಏಷ್ಯಾದ ಷಪ್ಪಡೋ ಷಿಯಾ ಎಂಬ ಪ್ರದೇಶದಲ್ಲಿ ಭೋಗಜ ಕಾಯ ಜನಾಂಗದವರು. ಪ್ರಾಥ್ನಾಓಕಾಸ್ ಎಂಬ ಶಾಸನ ದೊರೆತದ್ದು ಅದರಲ್ಲಿನ ಕೆಲವು ಪದಗಳು ಋಗ್ವೇದದ ಪದ ಎಂದು ಆಧಾರಸಹಿತವಾಗಿ ಹೇಳಿದರು. ಇವರ ವಾದವನ್ನು ಎಲ್ಲಾ ಇತಿಹಾಸಕಾರರು ಒಪ್ಪಿಕೊಂಡರು. ಹೀಗೆ ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದ ಆರ್ಯರ ಆಗಮನದ ಕಾಲವನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ.
🌸🌸🌸🌸🌸🌸🌸🌸🌸🌸🌸🌸🌸🌸🌸🌸
=======================================
01. ಪೂರ್ವ ವೇದ ಅಥವಾ ಋಗ್ವೇದ ಕಾಲ ಸಾ. ಶ. ಪು 1500 ರಿಂದ 1000
02. ಉತ್ತರ ವೇದಕಾಲದ ಸಾ. ಶ.ಪು 1000 ರಿಂದ 600
=======================================
ಪೂರ್ವ ವೇದಕಾಲದ/ ಋಗ್ವೇದ ಕಾಲ ಸಾಮಾನ್ಯ ಶಕ ಪೂರ್ವ 1500 ರಿಂದ 1000
ಋಗ್ವೇದವು ಆರ್ಯರ ಆರಂಭಿಕ ಜೀವನದ ಬಗ್ಗೆ ತಿಳಿಸುತ್ತದೆ.
ರಾಜಕೀಯ ಜೀವನ
● ಆರ್ಯರ ರಾಜಕೀಯ ಮೂಲ ಘಟಕ ಕುಟುಂಬ.
● ಹಲವು ಕುಟುಂಬಗಳು ಸೇರಿಕೊಂಡು ಒಂದು ಬುಡಕಟ್ಟು ಆಗುತ್ತಿತ್ತು.
● ಬುಡಕಟ್ಟು ಜನಾಂಗದವರ ನಾಯಕನಿಗೆ ರಾಜನ್, ಸಾಮ್ರಾಟ ಮಹಾ ಸಾಮ್ರಾಟ ಎಂದು ಕರೆಯುತ್ತಿದ್ದರು.
● ರಾಜನಿಗೆ ಸಹಾಯ ಮಾಡಲು ಸಭಾ ಮತ್ತು ಸಮಿತಿ ಎಂಬ ಎರಡು ರಾಜಕೀಯ ಸಂಸ್ಥೆಗಳು ಹುಟ್ಟಿಕೊಂಡವು.
ಸಭಾ
● ಇದು ಹಿರಿಯರಿಂದ ಕೂಡಿದ ಸದನವಾಗಿತ್ತು.
● ಇದು ರಾಜನಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಿತ್ತು.
● ಇದರ ಸದಸ್ಯರಿಗೆ ಸಭಾ ಸದಸ್ಯರು ಅಥವಾ ಸುಜಾತ ಎಂದು ಕರೆಯುತ್ತಿದ್ದರು.
● ಇದರಲ್ಲಿ ಮಹಿಳೆಯರಿಗೆ ಅವಕಾಶವಿರಲಿಲ್ಲ.
ಸಮಿತಿ
● ಇದು ಕಿರಿಯರಿಂದ ಕೂಡಿದ ಸದನ ವಾಗಿತ್ತು.
● ಇದು ರಾಜನನ್ನು ಆಯ್ಕೆಮಾಡುವ ಮತ್ತು ವಜಾಗೊಳಿಸುವ ಅಧಿಕಾರ ಹೊಂದಿತ್ತು.
● ಇದರ ಸದಸ್ಯರನ್ನು ವಿಷ್ ಎಂದು ಕರೆಯುತ್ತಿದ್ದರು.
● ಇದರಲ್ಲಿ ಮಹಿಳೆಯರಿಗೆ ಮತದಾನ ಮಾಡಲು ಮಾತ್ರ ಅವಕಾಶವಿತ್ತು.
ವಿಧಾತ
● ಇದು ಅತ್ಯಂತ ಹಳೆಯದಾದ ರಾಜಕೀಯ ಸಂಸ್ಥೆ.
● ಇದು ರಾಜನಿಲ್ಲದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದರಲ್ಲಿ ಮಹಿಳೆಯರಿಗೆ ಸಂಪೂರ್ಣವಾಗಿ ಅವಕಾಶ ನೀಡಲಾಗಿತ್ತು.
● ಸಭಾ ಮತ್ತು ಸಮಿತಿಯ ಅಧ್ಯಕ್ಷರನ್ನು ಸಭಾಧ್ಯಕ್ಷ ಅಥವಾ ಸಭಾಪತಿ ಎಂದು ಕರೆಯುತ್ತಿದ್ದರು.
● ಪೂರ್ವ ವೇದ ಕಾಲದಲ್ಲಿ ರಾಜ್ಯ ಲೋಕಕಲ್ಯಾಣಕ್ಕಾಗಿ ರಾಜ್ಯದ ಅಭಿವೃದ್ಧಿಗಾಗಿ ಜನರ ಉದ್ಧಾರಕ್ಕಾಗಿ ಹಲವು ಯಜ್ಞಯಾಗಾದಿಗಳನ್ನು ಕೈಗೊಳ್ಳುತ್ತಿದ್ದರು.
● ಪೂರ್ವ ವೇದ ಕಾಲದಲ್ಲಿ ರಾಜ ಜನರ ಮೇಲೆ ಯಾವುದೇ ತೆರಿಗೆಗಳನ್ನು ಹೇರುತ್ತಿರಲಿಲ್ಲ .
● ಪೂರ್ವ ವೇದ ಕಾಲದ ರಾಜ್ಯ ಜನರ ಉದ್ಧಾರವೇ ತನ್ನ ಜೀವನದ ಪರಮ ಗುರಿ ಎಂದು ಭಾವಿಸಿದ್ದನು.
● ಪೂರ್ವ ವೇದ ಕಾಲದ ರಾಜನಿಗೆ ಸಹಾಯ ಮಾಡಲು ಮಂತ್ರಿಮಂಡಲದ ವ್ಯವಸ್ಥೆ ಇತ್ತು.
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
=======================================
ಮಂತ್ರಿಮಂಡಲದ ವ್ಯವಸ್ಥೆ
ಭಗದೂಗ ➖ ಕಂದಾಯ ಮಂತ್ರಿ
ಅಕ್ಷನಪ ➖ ಲೆಕ್ಕಿಗ
ದೂತ ➖ ರಾಯಭಾರಿ
ಗ್ರಾಮೀಣ ➖ ಗ್ರಾಮದ ಮುಖ್ಯಸ್ಥ
ಸುತ ➖ ಅರಮನೆಯ ದೂತ
ಸಂಧಿವಿಗ್ರಹಿಕ್ ➖ ವಿದೇಶಾಂಗ ಮಂತ್ರಿ
ಗೋವಿ ಕೃತ ➖ ಅರಣ್ಯ ಪಾಲಕರ
ರಥಕಾರ ➖ ರಥಗಳ ನಿರ್ಮಾಪಕ
=======================================
● ವೇದಗಳ ಕಾಲದಲ್ಲಿ ಗ್ರಾಮಗಳ ಗುಂಪಿಗೆ ವಿಷ್ ಎಂದು ಕರೆಯುತ್ತಿದ್ದರು.
● ವಿಷ್ ದ ಮುಖ್ಯಸ್ಥ ವಿಷಯಪತಿಯಾಗಿದ್ದ. ಹೀಗೆ ಹಲವು ವಿಷಯಗಳು ಸೇರಿಕೊಂಡು ಜನಪದವಾಗುತ್ತಿತ್ತು. ಅದರ ಮುಖ್ಯಸ್ಥ ರಾಜನಾಗಿದ್ದ.
ಸಾಮಾಜಿಕ ಜೀವನ
● ಸಮಾಜದಲ್ಲಿ ಅವಿಭಕ್ತ ಕುಟುಂಬ ಪದ್ಧತಿ ರೂಢಿಯಲ್ಲಿತ್ತು.
● ಪಿತೃಪ್ರಧಾನ ವ್ಯವಸ್ಥೆ ರೂಢಿಯಲ್ಲಿತ್ತು.
● ಕುಟುಂಬದ ಮುಖ್ಯಸ್ಥನನ್ನು ಕುಲಪತಿ ಅಥವಾ ಗೃಹಪತಿ ಎಂದು ಕರೆಯುತ್ತಿದ್ದರು.
● ವರ್ಣ ವ್ಯವಸ್ಥೆ ಜಾರಿಯಲ್ಲಿತ್ತು.
● ವರ್ಣಗಳು ಸಾರವಾಗಿ ನಿರ್ಧಾರವಾಗುತ್ತಿದ್ದ ವರ್ಣಗಳ ಮಧ್ಯೆ ಸಹಭೋಜನ ಮತ್ತು ವೈವಾಹಿಕ ಸಂಬಂಧಗಳು ಏರ್ಪಡುತ್ತಿದ್ದವು.
● ಏಕಪತ್ನಿತ್ವ ಪದ್ಧತಿ ರೂಢಿಯಲ್ಲಿತ್ತು. ಬಹು ಪತ್ನಿತ್ವ ಪದ್ಧತಿ ಅರಸು ಮನೆತನಕ್ಕೆ ಮಾತ್ರ ಸೀಮಿತವಾಗಿತ್ತು.
● ಅಂತರ್ಜಾತಿ ವಿವಾಹಗಳಿಗೆ ಅವಕಾಶ ನೀಡಲಾಗಿತ್ತು.
● ಸ್ತ್ರೀಯರ ಸ್ಥಾನಮಾನಗಳು ಉನ್ನತ ವಾಗಿದ್ದವು.
● ಸ್ತ್ರೀಯರಿಗೆ ತನ್ನ ವರನನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು .
● ಸ್ತ್ರೀಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ನೀಡಲಾಗಿತ್ತು.
● ಸ್ತ್ರೀಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ನೀಡಲಾಗುತ್ತಿತ್ತು.
🌸🌸🌸🌸🌸🌸🌸🌸🌸🌸🌸🌸🌸🌸🌸🌸
ಋಗ್ವೇದ ಕಾಲದ ಪ್ರಮುಖ ಸ್ತ್ರೀಯರ ಎಂದರೆ
ಅಪಲಾ, ಘೋಷಲಾ, ಗಾರ್ಗಿ, ಲೋಪಮುದ್ರಾ, ಮೈತ್ರೇಯಿ, ವಿಶ್ವಾವರ, ಕಾತ್ಯಾಯಿನಿ, ಮೃಧಾಲಿನಿ.
● ಋಗ್ವೇದದ ಕೆಲವು ಮಂತ್ರಗಳನ್ನು ರಚಿಸಿದ ಮಹಿಳಾ ವಿದ್ವಾಂಸಿ ಘೋಷಲಾ .
● ಜನಕ ರಾಜನ ಆಸ್ಥಾನದಲ್ಲಿ ಯಜ್ಞವಲ್ಕ್ಯ ಎಂಬ ಋಷಿ-ಮುನಿಗಳಿಗೆ ದೇವರ ಅಸ್ತಿತ್ವವನ್ನು ಕುರಿತು ವಾದ ಮಂಡಿಸಿದ ಮಹಿಳೆ ಗಾರ್ಗಿ
● ವೇದಗಳ ಕಾಲದಲ್ಲಿ ಜನರು ಹತ್ತಿ ಉಣ್ಣೆ ಮತ್ತು ಚರ್ಮದಿಂದ ಮಾಡಿದ ಉಡುಪುಗಳನ್ನು ಧರಿಸುತ್ತಿದ್ದರು.
● ಆರ್ಯರು ಸಸ್ಯಹಾರಿಗಳಾಗಿದ್ದಾರೆ.
● ವೇದಗಳ ಕಾಲದಲ್ಲಿ ಸೋಮ ಮತ್ತು ಸುರ ಎಂಬ ಎರಡು ಪಾನೀಯಗಳನ್ನು ಸೇವಿಸುತ್ತಿದ್ದರು.
● ಪೂರ್ವ ವೇದಗಳ ಕಾಲದಲ್ಲಿ ಅನಿಷ್ಠ ಪದ್ಧತಿಗಳು ಜಾರಿ ಇರಲಿಲ್ಲ .
● ವಿಧವಾ ವಿವಾಹಕ್ಕೆ ಅವಕಾಶ ನೀಡಲಾಗಿತ್ತು. ವಿವಾಹಗಳು ಹೆಣ್ಣಿನ ತಂದೆ ತಾಯಿಯ ಮನೆಯಲ್ಲಿ ನಡೆಯುತ್ತಿತ್ತು.
● ನಿಯೋಗಕ್ಕೆ ಅವಕಾಶ ನೀಡಲಾಗುತ್ತಿತ್ತು. ನಿಯೋಗ ಎಂದರೆ ಮಕ್ಕಳಿಲ್ಲದ ವಿಧವೆ ಮೈದುನನೊಂದಿಗೆ ವಿವಾಹವಾಗಿ ಗಂಡು ಸಂತಾನ ಪಡೆಯುವುದು.
● ವೇದಗಳ ಕಾಲದಲ್ಲಿ ಸ್ತ್ರೀಯರು ಕಿವಿಗಳಿಗೆ ಕರಣ ಶೋಭನ ಎಂಬ ಆಭರಣವನ್ನು ಧರಿಸುತ್ತಿದ್ದರು.
● ವೇದಗಳ ಕಾಲದಲ್ಲಿ ಕ್ಷೌರಿಕನನ್ನು ವ್ಯಾಪ್ತ ಎಂದು ಕರೆಯುತ್ತಿದ್ದರು.
ಧಾರ್ಮಿಕ ಜೀವನ
● ಪೂರ್ವ ವೇದಕಾಲದ ಪ್ರಮುಖ ದೇವರು ಇಂದ್ರ .ಇವನನ್ನು ಪುರಂದರ ಕೋಟೆಗಳ ನಾಶಕ ಮತ್ತು ವಜ್ರಾಯುಧ ಹೊಂದಿದ ದೇವರೆಂದು ಕರೆಯುತ್ತಾರೆ.
● ಇಂದ್ರನನ್ನು ಕುರಿತು ಋಗ್ವೇದದಲ್ಲಿ 250 ಶ್ಲೋಕಗಳಿವೆ ( ಇಂದ್ರನ ವಜ್ರಾಯುಧ ತನ್ನ ಬೆನ್ನೆಲುಬುಗಳನ್ನು ದಾನವಾಗಿ ನೀಡಿದ ಋಷಿ ದದೀಚಿ )
● ಎರಡನೆಯ ಪ್ರಮುಖ ದೇವರು ಅಗ್ನಿ ಇವನನ್ನು ಮಾನವ ಮತ್ತು ದೇವರ ಮಧ್ಯ ಸಂಪರ್ಕ ಏರ್ಪಡಿಸುವವ ಎಂದು ಪಡೆಯುತ್ತಾರೆ .
● ಇವನನ್ನು ಕುರಿತು ಋಗ್ವೇದದಲ್ಲಿ ಎರಡುನೂರು ಶ್ಲೋಕಗಳಿವೆ.
● ಮೂರನೆಯ ಪ್ರಮುಖ ದೇವರು ವರುಣ ಇವನನ್ನು ನಿಯಮಗಳ ಪಾಲಕ ಮತ್ತು ಋತುಗಳ ಪಾಲಕನೆಂದು ಕರೆಯುತ್ತಾರೆ .
● ಇವನ ಕುರಿತು 200 ಶ್ಲೋಕಗಳಿವೆ.
● ವೇದಗಳ ಕಾಲದಲ್ಲಿ ಸಂದರ್ಭಕ್ಕೆ ಅನುಸಾರವಾಗಿ ಅನೇಕ ದೇವರುಗಳನ್ನು ಪೂಜಿಸುತ್ತಿದ್ದರು.
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
=======================================
ಮಹಿಳೆಯ ದೇವರು ➖ ಪರ್ಜನ್ಯ
ಮಿಂಚಿನ ದೇವರು ➖ ರುದ್ರ
ಮಿತ್ರ ದೇವರು ➖ ಸೂರ್ಯ
ಹಸುಗಳ ದೇವರು ➖ ಪ್ರಷನ್ಯ
ಶೂದ್ರರ ದೇವರು ➖ ಪುಷನ್
ಸೋಮದೇವರು ➖ ಅಶ್ವಿನಿ ದೇವತೆಗಳು
ವಾಯುದೇವರು ➖ ವಾಯು
=======================================
● ಪೂರ್ವ ವೇದಕಾಲದಲ್ಲಿ ಯಜ್ಞ-ಯಾಗಾದಿಗಳು ಸರಳವಾಗಿದ್ದವು.
● ಕೆಲವೊಂದು ಯಜ್ಞ ಯಾಗಾದಿಗಳಲ್ಲಿ ಹಸುಗಳನ್ನು ಬಲಿಕೊಡುತ್ತಿದ್ದರು.
● ಹಸುವಿನ ಮಾಂಸ ತಿನ್ನುವ ಅತಿಥಿಗಳಿಗೆ ಗೊಗ್ನಾ ಎಂದು ಕರೆಯುತ್ತಿದ್ದರು.
● ಹಸು ಕೊಲ್ಲಲಾಗದ ಸಂಪತ್ತು ಅಗನ್ಯ ಎಂದು ಕರೆಯುತ್ತಿದ್ದರು. ಹಸುಗಳ ಸಂಖ್ಯೆ ಕಡಿಮೆಯಾದರೆ ಅಗ್ನ ಎಂದು ಕರೆಯುತ್ತಿದ್ದರು ಹಸುಗಳನ್ನು ಪಡೆಯುವುದಕ್ಕಾಗಿ ಗವಿಷ್ಟಿ ಎಂಬ ಯುದ್ಧಗಳು ನಡೆಯುತ್ತಿದ್ದವು.
ಆರ್ಥಿಕ ಜೀವನ
● ಆರ್ಯರ ಮುಖ್ಯ ಉದ್ಯೋಗ ಕೃಷಿ ಮತ್ತು ಪಶು ಸಂಗೋಪನೆ.
● ಆರ್ಯರ ಕೃಷಿ ಭೂಮಿಯನ್ನು ಕ್ಷೇತ್ರ ಅಥವಾ ಉರವರ ಎಂದು ಕರೆಯುತ್ತಿದ್ದರು.
● ಆರ್ಯರ ಮುಖ್ಯ ಸಂಪತ್ತು ಹಸು
● ಆರ್ಯರ ಸಾಕುಪ್ರಾಣಿ ಕುದುರೆ.
● ಆರ್ಯರು ಅವತಾಸ ಎಂಬ ಬಾವಿಗಳಿಂದ ನೀರನ್ನು ಪಡೆಯುತ್ತಿದ್ದರು.
● ವೇದಗಳ ಕಾಲದಲ್ಲಿ ನಿಷ್ಕ ಮತ್ತು ಶತಮಾನ ಎಂಬ ಎರಡು ಚಿನ್ನದ ತುಂಡುಗಳನ್ನು ನಾಣ್ಯಗಳ ರೂಪದಲ್ಲಿ ಬಳಸುತ್ತಿದ್ದರು.
● ವೇದಗಳ ಕಾಲದಲ್ಲಿ ಬಳಸುವ ಕೆಲವು ಪದಗಳು
=======================================
ಕೃಷಿಗೆ ➖ ಚರ್ಷಾಣಿ
ಚಿಲುಮೆ ➖ ಉತ್ಸವ
ಗೋಧಿ ➖ ಗೋಧೂಮ
ಕಬ್ಬಿನ ➖ ಕೃಷ್ಣ ಆಯಸ್
ತಾಮ್ರ ➖ ಆಯಸ್
ನೇಗಿಲು ➖ ಸಿರ್ ( ಲಂಗಲ್ )
ನೇಗಿಲಿನ ಸಾಲುಗಳಿಗೆ ➖ ಸೀಲ್
ಚಿನ್ನ ➖ ಹಿರಣ್ಯ
ಹಸು ➖ ಗೌ
💮💮💮💮💮💮💮💮💮💮💮💮💮💮💮💮💮💮
=======================================
ಉತ್ತರ ವೇದ ಕಾಲ
ರಾಜಕೀಯ ಜೀವನ
● ರಾಜ ಸರ್ವಾಧಿಕಾರಿಯಾದ.
● ವಂಶಪಾರಂಪರಿಕ ಆಳ್ವಿಕೆ ಪ್ರಾರಂಭವಾಯಿತು.
● ರಾಜ ಜನರಿಂದ ಬಲಿ ಎಂಬ ಒತ್ತಾಯದ ತೆರಿಗೆ ವಸೂಲಿ ಮಾಡಲು ಪ್ರಾರಂಭಿಸಿದನು.
● ಸಭಾ ಮತ್ತು ಸಮಿತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡುವು.
● ವಿಧಾತ್ ಸಂಪೂರ್ಣ ನಾಶವಾಯಿತು.
● ರಾಜ್ಯ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೆಲವು ಯಾಗಗಳನ್ನು ಕೈಗೊಂಡನು.
01.ರಾಜಸೂಯಾ : ರಾಜ ತಾನು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಕೈಗೊಳ್ಳುವ ಯಾಗವಾಗಿತ್ತು.
02.ವಾಜಪೇಯ : ರಾಜ ಜನರ ಮೇಲೆ ತನ್ನ ಶಕ್ತಿ ಸಾಮರ್ಥ್ಯ ತೋರ್ಪಡಿಸಲು ಕೈಗೊಳ್ಳುವ ಯಾಗ. (ರಥಾಸ್ಪರ್ಧೆ )
03. ಅಶ್ವಮೇಧ : ಇದು ರಾಜ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಕೈಗೊಳ್ಳುವ ಯಾಗವಾಗಿತ್ತು.
● ಜನರಿಂದ ರಾಜ ಜನರಿಂದ ದೂರ ಉಳಿಯಲು ಪ್ರಯತ್ನಿಸಿ ಯುದ್ಧಗಳಲ್ಲಿ ಜಯಸುವುದೇ ತನ್ನ ಜೀವನದ ಪರಮ ಗುರಿ ಎಂದು ಭಾವಿಸಿದನು.
ಸಾಮಾಜಿಕ ಜೀವನ
● ವರ್ಣವ್ಯವಸ್ಥೆ ಜಾರಿಯಲ್ಲಿತ್ತು ವರ್ಣಗಳು ಜನನಕ್ಕಾಗಿ ನಿರ್ಧರಿಸಲಾಗುತ್ತಿತ್ತು.
● ಮಧ್ಯ ಸಹಭೋಜನ ವೈವಾಹಿಕ ಸಂಬಂಧಗಳು ನಿಂತು ಹೋದವು.
● ಮಹಿಳೆಯರ ಸ್ಥಾನಮಾನ ಶೋಷಣೆಯ ಸ್ಥಿತಿಗೆ ತಲುಪಿದವು.
● ಬಾಲ್ಯವಿವಾಹ, ವರದಕ್ಷಿಣೆ, ಸತಿಸಹಗಮನ ಪದ್ಧತಿ, ಪರದಾ ಪದ್ಧತಿ, ಘೋಷಾ ಪದ್ಧತಿ ಮತ್ತು ಬಹುಪತ್ನಿತ್ವ ದಂತಹ ಅನಿಷ್ಠ ಪದ್ಧತಿಗಳು ಬೆಳೆದುಬಂದವು.
=======================================
ವಿವಾಹದ ಪ್ರಕಾರಗಳು
● ಸಮಾಜದಲ್ಲಿ ವಿವಿಧ ರೀತಿಯ ವಿವಾಹ ವಿವಾಹಗಳು ಕಂಡುಬರುತ್ತಿದ್ದವು. ಅವುಗಳೆಂದರೆ
ಬ್ರಹ್ಮ: ಒಂದೇ ವರ್ಣದ ಗಂಡು-ಹೆಣ್ಣು ವರದಕ್ಷಿಣೆಯೊಂದಿಗೆ ಶಾಸ್ತ್ರೋಕ್ತವಾಗಿ ವಿವಾಹವಾಗುವುದು.
ದೈವ : ದಕ್ಷಿಣೆಯ ರೂಪದಲ್ಲಿ ವಧುವನ್ನು ತಂದೆ ದಾನ ಮಾಡುವುದು.
ಆರ್ಷ : ವಧುದಕ್ಷಿಣೆಯ ರೂಪದಲ್ಲಿ ಎತ್ತು ಮತ್ತು ಹಸುಗಳನ್ನು ಪಡೆದು ಕನ್ಯಾದಾನ ಮಾಡುವುದು.
ಪ್ರಜಾಪತಿ : ವಧುದಕ್ಷಿಣೆ ಮತ್ತು ವರದಕ್ಷಿಣೆ ಇಲ್ಲದೆ ಮದುವೆ ಮಾಡುವುದು.
ಗಂಧರ್ವ : ಪರಸ್ಪರ ಪ್ರೀತಿಸಿ ಸ್ವಯಂವರದ ಮೂಲಕ ವಿವಾಹವಾಗುವುದು.
ಅಸುರ : ವಧುವನ್ನು ಖರೀದಿಸಿ ವಿವಾಹವಾಗುವುದು.
ಪೈಶಾಚ : ಯುವತಿಯ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಶೀಲಭಂಗ ಮಾಡಿ ಮದುವೆಯಾಗುವದು.
ರಾಕ್ಷಸ : ಅಪಹರಿಸಿ ಸೆರೆಹಿಡಿದು ವಿವಾಹವಾಗುವುದು.
ಧಾರ್ಮಿಕ ಜೀವನ
● ಇಂದ್ರ ನನ್ನ ಅಸ್ತಿತ್ವ ಕಳೆದುಕೊಂಡನು.
● ಉತ್ತರ ವೇದ ಕಾಲದ ಪ್ರಮುಖ ದೇವರು ಪ್ರಜಾಪತಿ (ಶಿವ ಮಹಾದೇವ)
● ಉತ್ತರ ವೇದಕಾಲದಲ್ಲಿ 33 ದೇವರುಗಳನ್ನು ಕಾಣುತ್ತೇವೆ.
11 ಸ್ವರ್ಗದಲ್ಲಿ
11 ಆಕಾಶದಲ್ಲಿ
11 ಸೃಷ್ಟಿಯಲ್ಲಿ
ಎಂದು ಹೇಳಲಾಗಿದೆ.
● ಯಜ್ಞ-ಯಾಗಾದಿಗಳು ಕಠಿಣ ಮತ್ತು ವೆಚ್ಚದಾಯಕವಾದವು.
● ಪುರೋಹಿತ ವರ್ಗ 16 ಸಂಸ್ಕಾರಗಳು ಜಾರಿಗೆ ತಂದಿತು. ಈ ಸಂಸ್ಕಾರಗಳು ಕಡ್ಡಾಯವಾಗಿ ಆಚರಿಸಬೇಕು. ಈ ಸಂಸ್ಕಾರಗಳು ಆಚರಿಸಲು ಪುರೋಹಿತ ಕಡ್ಡಾಯವಾಗಿ ಬೇಕೆಂದು ನಿಯಮ ಜಾರಿಗೆ ಬಂದಿತು. ಪುರೋಹಿತರಿಗೆ ಕೈತುಂಬಾ ದಕ್ಷಿಣೆ ಕೊಟ್ಟು ಕಳುಹಿಸುವ ಪದ್ಧತಿ ರೂಢಿಗೆ ಬಂದಿತು.
💮💮💮💮💮💮💮💮💮💮💮💮💮💮💮💮💮💮
ಸಾಹಿತ್ಯ
01. ಋಗ್ವೇದ
● ಇದು ಅತ್ಯಂತ ಪ್ರಾಚೀನವಾದ ವೇದ.
● ಇದು 1028 ಶ್ಲೋಕಗಳನ್ನು ಮತ್ತು 10 ಮಂಡಲ (ಅಧ್ಯಾಯ)ಗಳನ್ನು ಒಳಗೊಂಡಿದೆ.
● ಮೂರನೇ ಮಂಡಲದಲ್ಲಿ ಗಾಯತ್ರಿ ಮಂತ್ರವನ್ನು ಒಳಗೊಂಡಿದ್ದು ಸೂರ್ಯನ ತಾಯಿ ಸಾವಿತ್ರಿ ದೇವಿಯನ್ನು ಕುರಿತು ಆರಾಧಿಸುತ್ತದೆ.
● 7ನೇ ಮಂಡಲವು ದಶರಾಜನ್ ಯುದ್ಧದ ಬಗ್ಗೆ ತಿಳಿಸುತ್ತದೆ.
● 9ನೇ ಮಂಡಲವು ಸೋಮರಸದ ಬಗ್ಗೆ ತಿಳಿಸುತ್ತದೆ.
● ಹತ್ತನೇ ಮಂಡಲವು ಪುರುಷ ಸೂಕ್ತ ಮತ್ತು ವರ್ಣ ವ್ಯವಸ್ಥೆಯ ಬಗ್ಗೆ ತಿಳಿಸುತ್ತದೆ.
● ಋಗ್ವೇದದ ಮುಖ್ಯ ಪುರೋಹಿತ ಹೋತ್ರಿ
02.ಯಜುರ್ವೇದ
● ಈ ವೇದಗಳನ್ನು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ.
ಎ) ಕೃಷ್ಣಯಜುರ್ವೇದ ಗದ್ಯ ರೂಪದಲ್ಲಿದೆ
ಬಿ) ಶುಕ್ಲಯಜುರ್ವೇದ ಪದ್ಯರೂಪದಲ್ಲಿ ಇದೆ
● ಇದು ಯಜ್ಞಯಾಗಾದಿಗಳ ಬಗ್ಗೆ ತಿಳಿಸುವ ವೇದವಾಗಿದೆ.
● ಇದರ ಮುಖ್ಯ ಪುರೋಹಿತ ಅಧ್ವರ್ಯ
03.ಸಾಮವೇದ
● ಇದು ಸಂಗೀತದ ಬಗ್ಗೆ ಉಲ್ಲೇಖ ಹೊಂದಿರುವ ಮೊದಲ ವೇದವಾಗಿದೆ.
● ಇದು 1603 ಶ್ಲೋಕಗಳನ್ನು ಒಳಗೊಂಡಿದೆ.
● ಇದು ಸೋಮಯಾಗ ಮಾಡುವ ಸಂದರ್ಭದಲ್ಲಿ ಹಾಡುವ ಮಂತ್ರವಾಗಿದೆ.
● ಇದರ ಮುಖ್ಯ ಪುರೋಹಿತ ಉದ್ಗೋ ತ್ರಿ
04.ಅಥರ್ವಣ ವೇದ
● 731 ಸ್ಲೋಕ ಗಳನ್ನು ಒಳಗೊಂಡಿದೆ.
●.ಇದು ವೇದಗಳ ಕಾಲದಲ್ಲಿನ ಮಾಟ, ಮಂತ್ರ ,ತಂತ್ರಗಾರಿಕೆಯ ಬಗ್ಗೆ ತಿಳಿಸುತ್ತದೆ.
● ವೇದವನ್ನು ಬ್ರಹ್ಮ ವೇದ ಎಂತಲೋ ಕೂಡ ಕರೆಯುತ್ತಾರೆ.
● ಇದರ ಮುಖ್ಯ ಪುರೋಹಿತ ಅಂಗಿರಸ.
ಉಪವೇದಗಳು
01.ಆಯುರ್ವೇದ ➖ ಔಷಧ ಶಾಸ್ತ್ರ
02.ಗಂಧರ್ವವೇದ ➖ ಪ್ರೇಮವಿವಾಹ ಮತ್ತು ಸಂಗೀತ
03. ಧನುರ್ವೇದ ➖ ಯುದ್ಧಕಲೆ
04. ಶಿಲ್ಪವೇದ ➖ ಕಲೆ ಮತ್ತು ವಾಸ್ತುಶಿಲ್ಪ
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
ಆರು ವೇದಾಂಗಗಳು
01. ಶಿಕ್ಷ ➖ ಧ್ವನಿಶಾಸ್ತ್ರ
02. ಕಲ್ಪ ➖ ಸಂಸ್ಕಾರ ಶಾಸ್ತ್ರ
03.ನಿರುಕ್ತ ➖ ಶಬ್ದಗಳ ಉತ್ಪತ್ತಿ
04.ಛಂದಸ್ಸು ➖ ಅಳತೆ ಅಲಂಕಾರ
05.ವ್ಯಾಕರಣ ➖ ಕ್ರಮಬದ್ಧ ಅಧ್ಯಯನ
06.ಜ್ಯೋತಿಷ್ಯ ➖ ಭವಿಷ್ಯ ಶಾಸ್ತ್ರದ ಬಗ್ಗೆ
ಆರು ದರ್ಶನಗಳು
01.ಗೌತಮ ➖ ನ್ಯಾಯ ದರ್ಶನ
02.ಕಪಿಲ ➖ ಸಾಂಖ್ಯದರ್ಶನದ
03.ಕಣಾದ ➖ ವೈಶೇಷಿಕ ದರ್ಶನ
04.ಪತಂಜಲಿ ➖ ಯೋಗ ದರ್ಶನ
05. ಜೈಮಿನಿ ➖ ಪೂರ್ವಮೀಮಾಂಸೆ( ಕರ್ಮಸಿದ್ಧಾಂತ)
06. ಬಾದರಾಯಣ ➖ ಉತ್ತರ ಮೀಮಾಂಸೆ( ದೈವತ್ವ)
ಬ್ರಾಹ್ಮಣಕಗಳು
ವೇದಗಳಲ್ಲಿನ ಮಂತ್ರಗಳನ್ನು ಅಥವಾ ಶ್ಲೋಕಗಳನ್ನು ಗದ್ಯರೂಪದಲ್ಲಿ ತಿಳಿಸುವ ಗ್ರಂಥಗಳು.
ಉದಾಹರಣೆ :
ಋಗ್ವೇದ ➖ ಐತ್ಯರಿಯ, ಕೌಪೀತಕ
ಯಜುರ್ವೇದ ➖ ತೈತ್ತರೇಯ ಮತ್ತು ಶತಪತ
ಸಾಮವೇದ ➖ ಪಂಚವಿಂಶತಿ ಜೈಮಿನಿಯ
ಅಥರ್ವಣವೇದ ➖ ಗೋಪಥ
ಅರಣ್ಯಕಗಳು
ಅರಣ್ಯವಾಸಿಗಳು ಅಥವಾ ಅರಣ್ಯ ಋಷಿಗಳಿಂದ ರಚನೆಯಾದ ಗ್ರಂಥಗಳು.
ಉದಾಹರಣೆ : ಐತ್ಯರೀಯ, ಜೈಮಿನಿಯ ,ಬೃಹದಾರಣ್ಯಕ
ಸ್ಮೃತಿಗಳು
=======================================
01.ನಾರದ ಸ್ಮೃತಿ
=======================================
02.ಯಜ್ಞವಲ್ಕ ಸ್ಮೃತಿ
=======================================
03.ಮನಸ್ಮೃ ತಿ
=======================================
ಇವು ಆರ್ಯರರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಬಗ್ಗೆ ತಿಳಿಸುತ್ತದೆ.
🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸
ಉಪನಿಷತ್ತುಗಳು
ಉಪನಿಷತ್ತು ಎಂದರೆ ಗುರುವಿನ ಬಳಿ ಅಥವಾ ಗುರುವಿನ ಬಳಿ ಕುಳಿತುಕೊಂಡು ನಿಗೂಢವಾದ ಜ್ಞಾನ ತಿಳಿದುಕೋ ಎಂದರ್ಥ. ಒಟ್ಟು ಉಪನಿಷತ್ತುಗಳ ಸಂಖ್ಯೆ 400 ಆದರೆ ಅವುಗಳಲ್ಲಿ 108 ಪ್ರಸಿದ್ಧವಾಗಿವೆ.
● ಭಾರತದ ರಾಷ್ಟ್ರ ಲಾಂಛನದಲ್ಲಿರುವ ಸತ್ಯಮೇವ ಜಯತೆ ಎಂಬ ವ್ಯಕ್ತಿ ಮಂಡೂಕ ಉಪನಿಷತ್ತಿನಲ್ಲಿ ಇದೆ .
● 4 ಆಶ್ರಮಗಳ ಬಗ್ಗೆ ತಿಳಿಸುವ ಉಪನಿಷತ್ತು ಜಾಬಾಲ ಉಪನಿಷತ್ತು.
● ಯಮ ಮತ್ತು ನಚಿಕೇತರ ಕಥೆಯ ಬಗ್ಗೆ ತಿಳಿಸುವ ಉಪನಿಷತ್ತು ಕಠ ಉಪನಿಷತ್ತು .
● ಪುನರ್ಜನ್ಮದ ಬಗ್ಗೆ ತಿಳಿಸುವ ಉಪನಿಷತ್ತು ಬೃಹದಾರಣ್ಯಕ
● ಉಪನಿಷತ್ತು ಗಳಲ್ಲಿ ದೇವರನ್ನು ಪರಬ್ರಹ್ಮ ಎನ್ನುವರು.
● ಉಪನಿಷತ್ತುಗಳನ್ನು ವೇದಗಳ ಕೊನೆಯ ಭಾಗಗಳನ್ನುವರು.
⭐⭐⭐⭐⭐⭐⭐⭐⭐⭐⭐⭐⭐⭐⭐⭐⭐⭐

0 Comments