ಗಣಿತ ಬೋಧನೆಯ ಗುರಿಗಳು / ಮೌಲ್ಯಗಳು ಮತ್ತು ಉದ್ದೇಶಗಳು
Aims / Values and Objectives of The Teaching Mathematics
ಪ್ರಸ್ತಾವನೆ:-
ಯಾವ ಅಂಶವು ನಮ್ಮನ್ನು ಅರ್ಥಪೂರ್ಣವಾಗಿ ಕಾರ್ಯ ಮಾಡಲು ಸಮರ್ಥರನ್ನಾಗಿ ಮಾಡುವುದೋ ಅದುವೇ ಗುರಿ. ಗುರಿ ಎಂಬ ಪದ ಮೌಲ್ಯ, ಧ್ಯೇಯ ,ಪ್ರಯೋಜನ, ಕಾರ್ಯದ ಆರಂಭಿಕ ಬಿಂದು ,ಪೂರ್ವನಿರ್ಧಾರಿತ ಅಂಶ ಎಂಬ ಪದಗಳನ್ನು ಪಡೆದಿರುವುದು ಗುರಿಯು ಕೈಗೊಂಡ ನಿರ್ದಿಷ್ಟ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವುದು.
ಶಿಕ್ಷಣ ಕ್ಷೇತ್ರದಲ್ಲಿ ಮಾಡಬೇಕಾದ ಕಾರ್ಯದ ವ್ಯಾಪ್ತಿಗೆ ಒಂದು ನಿರ್ದಿಷ್ಟ ಚೌಕಟ್ಟನ್ನು ನಿರ್ಧರಿಸುವುದೇ ಶಿಕ್ಷಣದ ಗುರಿಗಳು. ಶಿಕ್ಷಣವು ಯಶಸ್ವಿಯಾಗಿ ಅರ್ಥಪೂರ್ಣವಾಗಿ ಸಾಗಲು ನಿರಂತರ ಪ್ರಕ್ರಿಯೆಯಾಗಿ ಶಿಕ್ಷಣದ ಉತ್ಪನ್ನಗಳನ್ನು ಅಳತೆ ಮಾಡಲು ಹಾಗೂ ಸಂಸ್ಥೆ ಮತ್ತು ಶಾಲೆಯ ಆಡಳಿತವನ್ನು ದಕ್ಷತೆಯಿಂದ ನಿರ್ವಹಿಸುವಲ್ಲಿ ಗುರಿಗಳು ಪ್ರಯೋಜನಕಾರಿ. ಗುರಿ ರಹಿತವಾದ ಶಿಕ್ಷಣ ಉಪ್ಪಿಲ್ಲದ ಅಡುಗೆಗೆ ಸಮ ಎಂಬಂತೆ ಶಿಕ್ಷಣದ ಗುರಿಗಳನ್ನು ರೂಪಿಸದೆ ಪಠ್ಯಕ್ರಮ ಹಾಗೂ ಬೋಧನಾ ವಿಧಾನಗಳನ್ನು ಯೋಜಿಸಲಾಗುವುದಿಲ್ಲ. ಕೈಗೊಳ್ಳುವ ಚಟುವಟಿಕೆಗಳಿಗೆ ಕ್ರಿಯಾತ್ಮಕ ಆರಂಭ ಹಾಗೂ ಹಾಕಿಕೊಂಡಂತಹ ಕಾರ್ಯವನ್ನು ಜಾಾಣ್ಮೆಯಿಂದ ನಿರ್ವಹಿಸಲು ಗುರಿ ಅವಶ್ಯಕ.
"ಸುಸಜ್ಜಿತ ಅಡಿಪಾಯವಿಲ್ಲದ ಸೌಧ ಕುಸಿದು ಬೀಳುವಂತೆ ಸ್ಪಷ್ಟವಾದ ಗುರಿಗಳನ್ನು ಹೊಂದದೆ ಇರುವ ಶಿಕ್ಷಣ ಫಲಪ್ರದವಾಗಲು". ಗುರಿಗಳ ಬಗ್ಗೆ ಜ್ಞಾನವಿಲ್ಲದ ಶಿಕ್ಷಣದ ಸ್ಥಿತಿಗತಿಯ ಗೊತ್ತುಗುರಿಯಿಲ್ಲದ ನಾವಿಕನಂತೆ ಆಗುವುದು ಹಾಗೂ ಮಗುವಿನ ಸ್ಥಿತಿ ಚುಕ್ಕಾಣಿ ಇಲ್ಲದ ಹಡಗಿನಂತಾಗುವುದು. ಒಂದು ನಿರ್ದಿಷ್ಟವಾದ ಶೈಕ್ಷಣಿಕ ಹಂತಕ್ಕೆ ಶಿಕ್ಷಕರ ಶಿಕ್ಷಣದ ಗುರಿಗಳನ್ನು ನಿಗದಿಪಡಿಸಿದ ನಂತರ ಪಠ್ಯಕ್ರಮ ಬೋಧನಾ ವಿಧಾನ ಬೋಧನಾ ತಂತ್ರ ಮೌಲ್ಯಮಾಪನಗಳನ್ನು ರೂಪಿಸಿ ಅವುಗಳ ಮುಖಾಂತರ ಅಪೇಕ್ಷಿತ ಗುರಿ ಮುಟ್ಟಲು ಸಾಧ್ಯ. ಹೀಗೆ ಗುರಿಯು ಉದ್ದೇಶಪೂರಿತವಾಗಿ ಸಂಘಟನೆ ಕಾರ್ಯನಿರ್ವಹಣೆ ಹಾಗೂ ಮೌಲ್ಯಮಾಪನವನ್ನು ಹೊಂದಿದೆ.
ಶಿಕ್ಷಣದ ಗುರಿಗಳು ಕಾಲ, ವೇಗ, ದೇಶ, ವ್ಯವಸ್ಥೆ, ಪರಿಸ್ಥಿತಿಗೆ ಅನುಸಾರವಾಗಿ ಪರಿವರ್ತನೆ ಹೊಂದುತ್ತವೆ. ಒಮ್ಮೆ ನಿರ್ಧರಿಸಲ್ಪಟ್ಟ ಗುರಿಗಳು ಎಲ್ಲ ಕಾಲಕ್ಕೆ ಎಲ್ಲ ಪರಿಸ್ಥಿತಿಗೆ ಅನ್ವಯಿಸಲು ಬರುವುದಿಲ್ಲ. ಜೀವನದ ದೆಯೋದ್ದೇಶಗಳು ಬದಲಾದಂತೆ ಶಿಕ್ಷಣದ ಗುರಿಗಳು ಬದಲಾಗುತ್ತವೆ. ಬೇರೆ ಬೇರೆ ವಿಷಯಗಳಿಗೆ ಬೇರೆ ಬೇರೆ ಗುರಿ ಗಳಿರುತ್ತವೆ ಆಯಾ ವಿಷಯದ ಪರಿಕಲ್ಪನೆಗಳು ಮಹತ್ವ ಸ್ವಭಾವ ವ್ಯಾಪ್ತಿ ಇನ್ನು ಮುಂತಾದ ಅಂಶಗಳಿಗೆ ಸಂಬಂಧಿಸಿದಂತೆ ಗುರಿಗಳನ್ನು ನಿರ್ಧರಿಸಲಾಗುವುದು.
ಗಣಿತ ಬೋಧನೆಯ ಗುರಿಗಳು ಗಣಿತ ವಿಷಯದ ಸ್ವರೂಪ, ವ್ಯಾಪ್ತಿ, ಮಹತ್ವ, ವಿದ್ಯಾರ್ಥಿಗಳ ಅವಶ್ಯಕತೆ, ವಿದ್ಯಾರ್ಥಿಗಳ ಸಾಮರ್ಥ್ಯ ಹಾಗೂ ಸಮಾಜದ ಬೇಕು ಬೇಡಿಕೆಗಳಿಗೆ ಅನುಗುಣವಾಗಿ ನಿರ್ಧರಿಸಲ್ಪಡುತ್ತವೆ. ಗಣಿತವೂ ಅತ್ಯಂತ ಪ್ರಮುಖವಾದ ವಿಷಯವಾಗಿದ್ದು ಗಣಿತವನ್ನು ಬೋಧಿಸುವ ಶಿಕ್ಷಕರು ಹಾಗೂ ಗಣಿತವನ್ನು ಕಲಿಯುವ ಕಲಿಕಾರ್ಥಿ (ಶಿಕ್ಷಣಾರ್ಥಿ)ಗಳು ಗಣಿತ ಬೋಧನೆಯ ಮುಖ್ಯ ಮೌಲ್ಯಗಳು ಗುರಿಗಳು ಹಾಗೂ ಉದ್ದೇಶಗಳನ್ನು ತಿಳಿದಿರಲೇಬೇಕು. ಈ ಗಣಿತದ ಮೌಲ್ಯಗಳು ಶಿಕ್ಷಕನಿಗೆ ಗಣಿತವನ್ನು ಹೇಗೆ ಕಲಿಸಬೇಕು ಅದರ ಮಹತ್ವವೇನು ಏನನ್ನು ಸಾಧಿಸುವಂತೆ, ನಾವು ವಿದ್ಯಾರ್ಥಿಗಳನ್ನು ಪ್ರಚೋದಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ಸಹಾಯಕವಾಗಿವೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು ಗಣಿತದ ಮಹತ್ವ ಹಾಗೂ ಮೌಲ್ಯವನ್ನು ಅರಿಯಲು ಇವುಗಳು ಸಹಾಯಕವಾಗಿವೆ.
🏵
ಗಣಿತವು ಈ ಕೆಳಗಿನ ಗುರಿಗಳು /ಮೌಲ್ಯಗಳನ್ನು ಹೊಂದಿದೆ.
1.ಉಪಯುಕ್ತತೆಯ ಗುರಿ / ಮೌಲ್ಯ.
2.ಶಿಸ್ತಿನ ಗುರಿ / ಮೌಲ್ಯ.
3.ಸಾಂಸ್ಕೃತಿಕ ಗುರಿ / ಮೌಲ್ಯ.
4.ಸಾಮಾಜಿಕ ಗುರಿ / ಮೌಲ್ಯ
5.ನೈತಿಕ ಗುರಿ /ಮೌಲ್ಯ
6.ಸೌಂದರ್ಯ ಅಭಿಜ್ಞತಾ ಗುರಿ / ಮೌಲ್ಯ.
7.ಬೌದ್ಧಿಕ ಗುರಿ / ಮೌಲ್ಯ
8.ವೃತ್ತಿಪರ ಗುರಿ / ಮೌಲ್ಯ
9.ಆರ್ಥಿಕ ಗುರಿ / ಮೌಲ್ಯ
10.ಮನರಂಜನಾ ಗುರಿ / ಮೌಲ್ಯ.
1.ಉಪಯುಕ್ತತೆಯ ಗುರಿ / ಮೌಲ್ಯ:-
ಗಣಿತದಲ್ಲಿನ ಪ್ರಥಮ ಮೌಲ್ಯವಾದ ಉಪಯುಕ್ತತಾ ಗುರಿಯು ತುಂಬಾ ಆದರ್ಶ ನೀಯವಾಗಿದೆ. ಏಕೆಂದರೆ ಗಣಿತವು ದಿನನಿತ್ಯ ಜೀವನದಲ್ಲಿ ಅತ್ಯಂತ ಉಪಯುಕ್ತವಾದ ವಿಷಯವಾಗಿದ್ದು ಇದರ ಮಹತ್ವವು ಎಲ್ಲಾ ಕ್ಷೇತ್ರಗಳಲ್ಲಿ ಹಾಸುಹೊಕ್ಕಾಗಿದೆ. ದಿನನಿತ್ಯ ಜೀವನದ ಪ್ರತಿಯೊಂದು ವ್ಯವಹಾರಕ್ಕೂ ಗಣಿತ ಅವಶ್ಯಕ. ಓದು-ಬರಹ ಬಾರದಿದ್ದರೂ ಪ್ರತಿಯೊಬ್ಬ ಮನುಷ್ಯನಿಗೂ ಗಣಿತದ ಪೂರ್ವಜ್ಞಾನ ಬೇಕೇ ಬೇಕು. ಒಂದು ವೇಳೆ ಭಾಷೆ ಇಲ್ಲದೆ ಜೀವನ ನಡೆಸಬಹುದು ಆದರೆ ಗಣಿತವಿಲ್ಲದ ಜೀವನವಿಲ್ಲ.
ಉಪಯುಕ್ತತೆಯ ಕ್ಷೇತ್ರಗಳು : ಪ್ರಾಥಮಿಕ ಅವಶ್ಯಕತೆ, ವಿವಿಧ ವೃತ್ತಿಗಳಲ್ಲಿ, ವಿವಿಧ ವಿಜ್ಞಾನಗಳ ಅಧ್ಯಯನ ದಲ್ಲಿ, ಆಯವ್ಯಯಕ್ಕಾಗಿ, ಭೌತಿಕ ಜಗತ್ತಿನ ತಿಳುವಳಿಕೆಗಾಗಿ, ವಿಶ್ವದ ವ್ಯಾಪಾರ ಹಾಗೂ ವಾಣಿಜ್ಯ ವ್ಯವಸ್ಥೆಯನ್ನು ತಿಳಿಯಲು ಗಣಿತ ಉಪಯುಕ್ತತೆಯನ್ನು ಹೊಂದಿದೆ.
2.ಶಿಸ್ತಿನ ಗುರಿ / ಮೌಲ್ಯ:-
ಶಿಸ್ತಿನ ಮನಸ್ಸು ಹೊಂದಬೇಕಾದರೆ ಗಣಿತ ವಿಷಯವು ತುಂಬಾ ಅವಶ್ಯಕ. ಸ್ಪಷ್ಟವಾಗಿ, ನಿಖರವಾಗಿ, ಸಂಕ್ಷಿಪ್ತವಾಗಿ, ವ್ಯಕ್ತಪಡಿಸುವ ಗುರಿಯನ್ನು ಬೆಳೆಸುತ್ತದೆ. ಮನಸ್ಸಿನ ಏಕಾಗ್ರತೆ, ಕ್ರಮಬದ್ಧ ಹಾಗೂ ವ್ಯವಸ್ಥಿತ ಸಂಘಟನೆ, ಸ್ವತಂತ್ರ ಆಲೋಚನೆ ಹಾಗೂ ಶೋಧನೆ, ಫಲಿತಾಂಶವನ್ನು ತಾಳೆ ನೋಡುವುದು, ಹೊಸದನ್ನು ಶೋಧಿಸುವುದು, ಸಾಮಾಜಿಕರಣ, ಆತ್ಮವಿಶ್ವಾಸ, ವೈಜ್ಞಾನಿಕ ಹಾಗೂ ತಾರ್ಕಿಕ ಆಲೋಚನೆ, ಅಪೇಕ್ಷಣೀಯ ಹವ್ಯಾಸಗಳನ್ನು ರೂಢಿಸುವದು ಹೀಗೆ ಅನೇಕ ವಿಧದಲ್ಲಿ ಗಣಿತ ಶಿಸ್ತಿನ್ನು ಮೂಡಿಸುತ್ತದೆ.
🌼
3.ಸಾಂಸ್ಕೃತಿಕ ಗುರಿ ಮೌಲ್ಯ;-
ಗಣಿತ ಬೋಧನೆಯಿಂದ ವಿದ್ಯಾರ್ಥಿಗಳಲ್ಲಿ ಈ ಕೆಳಗಿನ ಸಾಂಸ್ಕೃತಿಕ ಮೌಲ್ಯಗಳು ಬೆಳೆಯುವವು.
> ಗಣಿತ ಕೊಡುಗೆಯನ್ನ ಪ್ರೊತ್ಸಾಹಿಸುವುದು ಗೌರವಿಸುವುದು ಹಾಗೂ ಪ್ರೋತ್ಸಾಹಿಸುವುದು.
>ಗಣಿತದಲ್ಲಿ ಕಾರ್ಯವನ್ನು ಬೇಗನೆ ಕೈಗೆತ್ತಿಕೊಳ್ಳುವುದು.
> ತಪ್ಪುಗಳನ್ನು ಒಪ್ಪಿಕೊಳ್ಳುವುದು.
>ಮುಕ್ತ ಮನಸ್ಸು, ನೇರವಾಗಿ ತಪ್ಪುಗಳನ್ನು ಒಪ್ಪಿಕೊಳ್ಳುವುದು.
> ಕಾರ್ಯಕ್ಕೆ ಅಂಟಿಕೊಳ್ಳುವುದು
> ಗಣಿತದ ಹಾಗೂ ಗಣಿತಜ್ಞರ ಸಾಹಿತ್ಯವನ್ನು ಓದುವುದು.
> ಗಣಿತ ಸಮಸ್ಯೆಗಳನ್ನು ಹಾಗೂ ಒಗಟುಗಳನ್ನು ಚರ್ಚಿಸುವುದು
> ಗಣಿತದ ಕುರಿತು ಲೇಖನಗಳನ್ನು ಬರೆಯುವುದು
> ಗಣಿತ ಚಿತ್ರಗಳು, ಉಪಕರಣಗಳನ್ನು, ಫೋಟೋಗಳನ್ನು, ಸಂಗ್ರಹಿಸುವುದು
> ಗಣಿತದ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವುದು. ಹೀಗೆ ಗಣಿತ ಮುಂತಾದ ಸಾಂಸ್ಕೃತಿಕ ಮೌಲ್ಯವನ್ನು ಬೆಳೆಸುತ್ತದೆ.
4.ಸಾಮಾಜಿಕ ಗುರಿ / ಮೌಲ್ಯ:-
ಗಣಿತ ಬೋಧನೆಯು ವಿದ್ಯಾರ್ಥಿಗಳಲ್ಲಿ ಸತ್ಯ, ನ್ಯಾಯ, ಪ್ರಾಮಾಣಿಕತೆ ಮುಂತಾದ ಗುಣಗಳನ್ನು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವುದು.
5.ನೈತಿಕ ಗುರಿ / ಮೌಲ್ಯ:-
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ನೈತಿಕ ಮೌಲ್ಯವು ಅತ್ಯಂತ ಪ್ರಮುಖವಾದ ಒಂದು ಮುಖವಾಗಿದೆ. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ಬೆಳವಣಿಗೆಯಾಗದೆ ಸರ್ವತೋಮುಖ ಉನ್ನತಿ ಸಾಧ್ಯವಿಲ್ಲ. ವಿದ್ಯಾರ್ಥಿಗಳಲ್ಲಿ ಸತ್ಯ, ಸ್ವಚ್ಛತೆ, ಸಹಕಾರ, ಪ್ರೀತಿ, ಅಂತಃಕರಣ, ನಿಸ್ವಾರ್ಥ, ಸಮಾನತೆ ಮುಂತಾದ ಗುಣಗಳನ್ನು ಬೆಳೆಸಿದಾಗಲೇ ಅವರಲ್ಲಿ ನೈತಿಕ ಮೌಲ್ಯಗಳ ಅಭಿವೃದ್ಧಿಯಾಗುವುದು.
🏵
6.ಸೌಂದರ್ಯ ಭಿಜ್ಞತಾ ಗುರಿ / ಮೌಲ್ಯ:-
ಈ ಭೂಮಿಗೆ ಹಗಲು-ರಾತ್ರಿಗಳು ಹಾಗೂ ಕಾಲಗಳು ಎಷ್ಟು ಸುಂದರವಾಗಿ ಕಾಣುತ್ತವೆ ಸೂರ್ಯೋದಯ-ಸೂರ್ಯಾಸ್ತಗಳ ಬದಲಾವಣೆ,ಋತು ಬದಲಾವಣೆ, ಭೂಮಿಯ ಬ್ರಮಣ, ಗ್ರಹಗಳ ಚಲನವಲನ ಎಲ್ಲವೂ ಒಂದು ರೀತಿಯಾಗಿ ನಿಯಮಿತವಾಗಿ ನಡೆಯುತ್ತವೆ. ಈ ರೀತಿಯಾಗಿ ನಿಯಮಿತವಾಗಿ ನಡೆಯಲು ಗಣಿತವೂ ಕಾರಣ ಎನ್ನಬಹುದು. ಅಂದರೆ ಎಲ್ಲಾ ಪ್ರಕೃತಿಯ ನಿಯಮಗಳು ಗಣಿತವನ್ನು ಅವಲಂಬಿಸಿವೆ. ಪ್ರಕೃತಿಯು ಗಣಿತದ ನಿಯಮಗಳಿಗೆ ತಕ್ಕಂತೆ ನಡೆದುಕೊಳ್ಳುತ್ತದೆ.ಪ್ರತಿಯೊಂದು ವಸ್ತುವಿನಲ್ಲಿ ಸೌಂದರ್ಯ ಅಡಗಿದೆ ಎಂದರೆ ಅದು ಗಣಿತದಿಂದ ಮಾತ್ರ, ಅಂದರೆ ಗಣಿತಕ್ಕೆ ಸೌಂದರ್ಯದ ಮೌಲ್ಯವಿದೆ. ಗಣಿತದ ಅಧ್ಯಯನದಿಂದ ವಿದ್ಯಾರ್ಥಿಗಳಲ್ಲಿ ಸೌಂದರ್ಯದ ಮೌಲ್ಯಗಳು ಬೆಳೆಯುತ್ತವೆ.
7.ಬೌದ್ಧಿಕ ಗುರಿ / ಮೌಲ್ಯ:-
ಬೌದ್ಧಿಕ ಮೌಲ್ಯದ ಮಹತ್ವಪೂರ್ಣವಾದ ಕಾರ್ಯವೆಂದರೆ ವಿದ್ಯಾರ್ಥಿಗಳಲ್ಲಿ ಬುದ್ಧಿಶಕ್ತಿ ಹಾಗೂ ಮಾನಸಿಕ ಸ್ಥೈರ್ಯವನ್ನು ಬೆಳೆಸುವುದಾಗಿದೆ. ಅಂದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಬುದ್ಧಿಶಕ್ತಿಯನ್ನು ಒದಗಿಸುವುದಲ್ಲದೆ ಅವರನ್ನು ಚುರುಕುಗೊಳಿಸುವ ದಾಗಿದೆ. ಇಂದಿನ ಈ ಆಧುನಿಕ ಜಗತ್ತಿನಲ್ಲಿ ಸ್ಪರ್ಧಾತ್ಮಕ ಪರಿಸರವನ್ನು ಪ್ರವೇಶಿಸಲು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಬೆಳವಣಿಗೆಯು ಅತಿ ಅವಶ್ಯಕವಾಗಿದೆ. ಗಣಿತ ಒಂದು ವಿಷಯದಿಂದ ಬೌದ್ಧಿಕ ಮಟ್ಟವನ್ನು ಸುಲಭವಾಗಿ ಹೆಚ್ಚಿಸಬಹುದು. ಅಂತೆಯೇ ಗಣಿತವು ಬೌದ್ಧಿಕ ಕಸರತ್ತಿನ ವ್ಯಾಯಾಮ ಶಾಲೆಯಂತೆ ಎಂಬ ಮಾತು ಈ ಒಂದು ಮೌಲ್ಯಕ್ಕೆ ಸಮಂಜಸವೆನಿಸುತ್ತದೆ.
8.ವೃತ್ತಿಪರ ಗುರಿ / ಮೌಲ್ಯ:-
ಇಂದಿನ ಆಧುನಿಕ ಭಾರತದ ಪರಿಸ್ಥಿತಿಯಲ್ಲಂತೂ ಉದ್ಯೋಗವು ಶಿಕ್ಷಣದ ಎಂಬ ವಿಚಾರಕ್ಕೆ ಬಲ ಬಂದಿದೆ. ಇಂದಿನ ಬಾಲಕ ನಾಳಿನ ನಾಗರಿಕ. ಪಾಲಕರು ಬಾಲಕನನ್ನು ಶಾಲೆಗೆ ಕಳುಹಿಸುವಾಗ ತಮ್ಮ ಮಗನು ಉತ್ತಮ ಉದ್ಯೋಗ ಪಡೆದು ಉನ್ನತ ಮಟ್ಟದ ಜೀವನ ನಡೆಸಬೇಕೆಂದು. ಅವರು ಹೊಂದಿದ್ದ ಸಹಜ ಆಶಯ. ಈ ಆಶಯ ಈಡೇರದಿದ್ದರೆ ವ್ಯಕ್ತಿ ಪರಾವಲಂಬಿಯಾಗಿ ಬದುಕಬೇಕು. ವ್ಯಕ್ತಿ ಪಡೆದಂತಹ ಶಿಕ್ಷಣ ನಿರೂಪಯೋಗವಾಗುವುದು.
"ಊಟ ಬಲ್ಲವನಿಗೆ ರೋಗವಿಲ್ಲ ಗಣಿತ ಬಲ್ಲವನಿಗೆ ಸಮಸ್ಯೆಗಳಿಲ್ಲ" ಎಂಬ ಉಕ್ತಿಯು ಗಣಿತದ ಪಾತ್ರವನ್ನು ಮಹತ್ವವನ್ನು ತಿಳಿಸುತ್ತದೆ.ಸಾಮಾನ್ಯವಾಗಿ ಗಣಿತವು ಮನೆ ಕಟ್ಟುವವ ನಿಂದ ಹಿಡಿದು ಅಭಿಯಂತರರ ವರೆಗೂ, ಸಾಮಾನ್ಯನಿಂದ ಹಿಡಿದು ರಾಷ್ಟ್ರಾಧ್ಯಕ್ಷರ ರವರೆಗೂ, ಸಹಾಯವನ್ನು ಒದಗಿಸುವ ವಿಷಯವಾಗಿದೆ." ಆಡು ಮುಟ್ಟದ ಸೊಪ್ಪಿಲ್ಲ ಗಣಿತವಿಲ್ಲದ ಕ್ಷೇತ್ರವಿಲ್ಲ" ಎನ್ನುವಂತೆ ಎಲ್ಲಾ ವೃತ್ತಿಗಳಲ್ಲೂ ಗಣಿತದ ಉಪಯುಕ್ತತೆ ಕಂಡುಬರುವುದು.ಗಣಿತವು ವಿವಿಧ ತೆರನಾದ ವೃತ್ತಿ ಮಾಡುವ ಎಲ್ಲಾ ಜನರಿಗೂ ಉಪಯುಕ್ತವಾಗಿದೆ. ಉದಾಹರಣೆಯಾಗಿ ಬಡಿಗಡನಿಗೆ ಅಳತೆಯ ಜ್ಞಾನ ನೀಡುವುದು, ಕಲಾಕಾರನಿಗೆ ರೇಖಾಕೃತಿಗಳ ಜ್ಞಾನ ಹಾಗೂ ಪ್ರಮಾಣದ ಜ್ಞಾನವನ್ನು ಒದಗಿಸುವುದಲ್ಲದೆ, ಬ್ಯಾಂಕ್ ವಿಮಾ ಸಂಸ್ಥೆ ಅಂಚೆಕಚೇರಿಯ ಉದ್ಯೋಗಿಗಳಿಗೆ ಲೆಕ್ಕಾಚಾರ ಯುಕ್ತ ಜ್ಞಾನವನ್ನು ವಿಶೇಷವಾಗಿ ನೀಡುವಲ್ಲಿ ಸಹಾಯಕಾರಿಯಾಗಿದೆ.
🌼
9.ಆರ್ಥಿಕ ಗುರಿ / ಮೌಲ್ಯ:-
ದುಡ್ಡೇ ದೊಡ್ಡಪ್ಪ ಎಂಬ ಉಕ್ತಿಯಂತೆ ಆಧುನಿಕ ಯುಗದಲ್ಲಿ ಹಣದ ಮಹತ್ವ ಅಪಾರವಾಗಿದೆ. ಒಂದು ವೇಳೆ ವಿದ್ಯೆ ಇಲ್ಲವಾದರೂ ಜೀವನ ನಡೆಸಬಹುದು ಆದರೆ ಹಣವಿಲ್ಲದೆ ಜೀವನ ನಡೆಸುವುದು ದುಸ್ತರ. ಹಣ ಇದೆ ಎಂದು ಅತೀ ಖರ್ಚುಮಾಡುವುದು ಒಳಿತಲ್ಲ ನಮ್ಮ ಜೈವಿಕ ಅಗತ್ಯತೆಗಳನ್ನು ಪೂರೈಸುವಲ್ಲಿ ಮಾತ್ರ ಹಣವನ್ನು ಬಳಸಬೇಕು. ಎಂಬ ಗುರಿ ಹಾಗೂ ಮೌಲ್ಯವನ್ನು ಗಣಿತ ವಿಷಯದಿಂದ ಬೆಳೆಸಿಕೊಳ್ಳಬಹುದು.
10.ಮನರಂಜನಾ ಗುರಿ /ಮೌಲ್ಯ:-
ಗಣಿತ ವಿಷಯವು ತನ್ನದೇ ಆದಂತಹ ಮನರಂಜನಾ ಮೌಲ್ಯವನ್ನು ಹೊಂದಿದೆ. ಗಣಿತದ ಮನರಂಜನಾ ಸಮಸ್ಯೆಗಳಂತೂ ಬುದ್ಧಿಶಕ್ತಿಯನ್ನು ಪರೀಕ್ಷಿಸುವ ದಲ್ಲದೆ ಮನಸ್ಸಿಗೆ ಮುದವನ್ನು ನೀಡುವುದು. ಗಣಿತದ ಈ ಮನರಂಜನಾ ಮೌಲ್ಯದಿಂದ ಎಷ್ಟೋ ವಿದ್ಯಾರ್ಥಿಗಳು ಗಣಿತವನ್ನು ಕಲಿಯುವಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಗಣಿತದ ಈ ಮನರಂಜನಾ ಸಮಸ್ಯೆಗಳಿಂದ ವಿದ್ಯಾರ್ಥಿಗಳ ಬುದ್ಧಿಶಕ್ತಿ ತೀಕ್ಷ್ಣ ಬುದ್ಧಿ ಮತ್ತು ಸಮಸ್ಯೆಗಳನ್ನು ಸ್ವತಂತ್ರವಾಗಿ ಬಿಡಿಸುವ ಸಾಮರ್ಥ್ಯಗಳು ಬೆಳೆಯುವವು.
ಇವಿಷ್ಟು ಗಣಿತ ಬೋಧನೆಯ ಗುರಿಗಳು ಹಾಗೂ ಮೌಲ್ಯಗಳಾಗಿವೆ.
🏵
ಗಣಿತ ಬೋಧನೆಯ ಉದ್ದೇಶಗಳು
ಉದ್ದೇಶಗಳು ಗುರಿಯನ್ನು ಸಾಧಿಸಲು ಬಳಸುವ ದಾರಿ ಗಳಾಗಿವೆ ಮತ್ತು ಸಾಧನಗಳಾಗಿವೆ. ಅವುಗಳು ಗುರಿಗಳಿಗೆ ಅರ್ಥವನ್ನು ನೀಡುತ್ತವೆ. ಸಾಧಿಸಬೇಕಾದ ತಲುಪಬೇಕಾದ ಗುರಿಗೆ ಮನುಷ್ಯನನ್ನು ಕೊಂಡೊಯ್ಯುತ್ತವೆ. ಮನುಷ್ಯ ಉದ್ದೇಶಗಳ ಸಹಾಯವಿಲ್ಲದೆ ಗುರಿಗಳನ್ನು ತಲುಪಲಾರ . ಉದ್ದೇಶಗಳು ತಾತ್ಕಾಲಿಕ ತೃಪ್ತಿಗೆ ಕಾರಣವಾಗಿವೆ. ಉದ್ದೇಶಗಳ ಅವಧಿ ತುಂಬಾ ಚಿಕ್ಕದು. ಅವು ಮನುಷ್ಯನಿಗೆ ಹತ್ತಿರವಾದವು ಗಳು. ಉದ್ದೇಶಗಳ ಮಾರ್ಗವಾಗಿ ಗುರಿಯ ದಾರಿಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಗಣಿತ ಬೋಧನಾ ಉದ್ದೇಶಗಳ ಹಿನ್ನಲೆ ಹೀಗಿದೆ
ರಾಬರ್ಟ್ ಮೇಗರ್ ರವರ ಪ್ರಕಾರ 1962. ರಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು ಅವುಗಳೆಂದರೆ ಬೋಧನಾ ಉದ್ದೇಶಗಳು ಹೀಗಿವೆ
1.ವರ್ತನಾ ಕ್ಷೇತ್ರ
2.ವಿಷಯ ಕ್ಷೇತ್ರ
3.ಸ್ವರೂಪಗಳನ್ನು ಒಳಗೊಂಡಿರಬೇಕು.
ಬೋಧನಾ ಉದ್ದೇಶಗಳನ್ನು ಬರೆಯುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಬೇಕು.
1.ಅಂತಿಮ ವರ್ತನೆಯನ್ನು ವರ್ಧನ ಪದಗಳ ಮೂಲಕ ಹೇಳಬೇಕು.
2.ಕಲಿಕೆಯ ನಂತರ ವಿದ್ಯಾರ್ಥಿ ಏನು ಮಾಡುತ್ತಾನೆ ಎಂಬುದನ್ನು ಸೂಚಿಸಬೇಕು.
3.ಯಾವುದೇ ಕೌಶಲ್ಯವನ್ನು ನಿರೀಕ್ಷಿತ ವರ್ತನೆಯ ಆಧಾರದ ಮೇಲೆ ಬರೆಯಬೇಕು. ಹೀಗೆ ಈ ಮೇಗರ್ ರವರ ಸಲಹೆಗಳನ್ನು ಒಪ್ಪಿಕೊಳ್ಳಲಾಯಿತು.
ಬೋಧನಾ ಉದ್ದೇಶಗಳ ವರ್ಗೀಕರಣದ ವೈಶಿಷ್ಟಗಳು ಹೀಗಿವೆ.
ಬೆಂಜಮಿನ್ ಎಸ್ ಬ್ಲೂಮ್ ಇವರು ಜ್ಞಾನಾತ್ಮಕ ವಲಯವನ್ನು 1956 ರಲ್ಲಿ ವಿವರಿಸಿದ್ದಾರೆ. ಈ ಒಂದು ವಲಯದಲ್ಲಿ ಉದ್ದೇಶಗಳನ್ನು ವರ್ಗೀಕರಿಸಲಾಗಿದೆ.
1.ಜ್ಞಾನಾತ್ಮಕ ವಲಯ :- ಮಕ್ಕಳಲ್ಲಿ ಜ್ಞಾನ ಉಂಟಾಗುವದು ಪ್ರಮುಖವಾದ ವರ್ತನೆಯಾಗಿದೆ. ಉಂಟಾದ ನಂತರ ಅವರು ಕಲಿಕೆಯ ಮುಂದಿನ ಹಂತಗಳಿಗೆ ತೊಡಗುವರು.
ಇದರಲ್ಲಿ ಪ್ರಮುಖವಾಗಿ 6 ವರ್ಗಗಳನ್ನು ಗುರುತಿಸಲಾಯಿತು. 1.ಜ್ಞಾನ
2.ತಿಳುವಳಿಕೆ.
3.ಅನ್ವಯಿಸುವಿಕೆ
4.ವಿಶ್ಲೇಷನೆ
5.ಸಂಸ್ಲೇಷಣೆ
6.ಮೌಲ್ಯಮಾಪನ.
ಬೋಧನಾ ಉದ್ದೇಶಗಳನ್ನು ಭಾವನಾತ್ಮಕ ವಲಯದಲ್ಲಿ ಡೇವಿಡ್ ಆರ್ ಕ್ರ್ಯಾಥೂಲರು 1964 ರಲ್ಲಿ ವರ್ಗೀಕರಿಸಿದರು.
🌼
2.ಭಾವನಾತ್ಮಕ ವಲಯ:- ಭಾವನಾತ್ಮಕ ವಲಯವು ಮಕ್ಕಳಲ್ಲಿ ಸಂಗತಿಯ ವಿಷಯದ ಪರಿಕಲ್ಪನೆಯ ಬಗ್ಗೆ ಭಾವನೆಯನ್ನು ಉಂಟು ಮಾಡುವುದಾಗಿದೆ.
ಈ ವಲಯದಲ್ಲಿ ಮುಖ್ಯವಾಗಿ ಐದು ವರ್ಗಗಳಿವೆ.
1.ಸ್ವೀಕರಿಸುವಿಕೆ
2.ಪ್ರತಿಕ್ರಿಯಿಸುವಿಕೆ
3.ಮೌಲ್ಯಕರಿಸುವಿಕೆ
4.ಸಂಘಟಿಸುವಿಕೆ
5.ಚಾರಿತ್ರಿಕರಣ ಗೊಳಿಸುವಿಕೆ.
ಅದೇ ರೀತಿ ಮೂರನೆಯ ವಲಯ ಮನೋಕ್ರಿಯಾ ಜನ್ಯ ವಲಯವನ್ನು. ಅನಿಲ್ ಹೇರೋ 1972 ರಲ್ಲಿ ವರ್ಗೀಕರಿಸಿ ದರು.
3.ಮನೋ ಕ್ರಿಯಾಜನ್ಯ ವಲಯ:- ಮನೋ ಕ್ರಿಯಾಜನ್ಯ ವಲಯವು ಮನಸ್ಸು ಮತ್ತು ಕ್ರಿಯೆಗಳ ಸಂಗಮವಾಗಿದೆ ವರ್ಧನ ಬದಲಾವಣೆಗಳು ಕ್ರಿಯೆಯ ರೂಪದಲ್ಲಿ ಹೊರಬರುತ್ತವೆ.
ಈ ವಲಯದಲ್ಲಿ 6 ವರ್ಗಗಳಿವೆ.
1.ಗ್ರಹಿಕೆ
2.ಅನುಕರಣೆ
3.ಕೈಚಳಕ.
4.ಖಚಿತತೆ
5.ಸ್ಪಷ್ಟ ಉಚ್ಚಾರಣೆ
6.ಸ್ವಾಭಾವಿಕತೆ.
ಹೀಗೆ ಬೋಧನಾ ಉದ್ದೇಶಗಳು ವರ್ತನಾ ಬದಲಾವಣೆಗಳನ್ನು ಸೂಚಿಸುತ್ತವೆ. ಗಣಿತ ಬೋಧನ ಉದ್ದೇಶ ಗಳನ್ನು ಈ ಮೂರು ವಲಯಗಳನ್ನು ಕೇಂದ್ರವಾಗಿರಿಸಿಕೊಂಡು ಮತ್ತು ಮೇಗರ್ ರವರ ಸಲಹೆಗಳನ್ನು ಆಧಾರವಾಗಿಟ್ಟುಕೊಂಡು ವರ್ಗೀಕರಿಸುತ್ತವೆ.
1.ಜ್ಞಾನ
2.ತಿಳುವಳಿಕೆ
3.ಕೌಶಲ್ಯ
4.ಅನ್ವಯ
5.ಮನೋಭಾವ
6.ಪ್ರಶಂಸೆ
7.ಆಸಕ್ತಿ.
🏵
ಮನೋಭಾವ:-
ಇದು ಭಾವನಾತ್ಮಕ ವಲಯದ ಉದ್ದೇಶವಾಗಿದೆ ಉದ್ದೇಶದಿಂದ ವಿದ್ಯಾರ್ಥಿಗಳು ವಿಷಯ ವಸ್ತುವಿನ ಕುರಿತು ಧನಾತ್ಮಕ ಹಾಗೂ ವೈಜ್ಞಾನಿಕ ಮನೋಭಾವಗಳನ್ನು ಬೆಳೆಸಿಕೊಳ್ಳುವರು.
ಪ್ರಶಂಸೆ:-
ಇದು ಸಹ ಭಾವನಾತ್ಮಕ ವಲಯದ ಉದ್ದೇಶವಾಗಿದೆ ಇಲ್ಲಿ ವಿದ್ಯಾರ್ಥಿಯು ವಿಷಯ ವಸ್ತುವನ್ನು ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸುವ ನು.
ಆಸಕ್ತಿ:-
ಇದು ಕೂಡ ಭಾವನಾತ್ಮಕ ವಲಯದ ಉದ್ದೇಶವಾಗಿದೆ ವಿದ್ಯಾರ್ಥಿಗಳು ವಿಷಯ ವಸ್ತುವಿನ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯುವ ಆಸಕ್ತಿ ಹೊಂದುವರು.
ಈ ವಿಷಯವು ಟಿಇಟಿ ಬರೆಯುವಂತಹ ಗಣಿತ ವಿಷಯವನ್ನು ಆಯ್ಕೆ ಮಾಡಿಕೊಂಡಂತಹ ಪ್ರಶಿಕ್ಷಣಾರ್ಥಿಗಳಿಗೆ ತುಂಬಾ ಉಪಯುಕ್ತವಾದಂತಹ ವಿಷಯವಾಗಿದೆ ಈ ವಿಷಯ ತಿಳುವಳಿಕೆಯಿಂದ ಗಣಿತ ಶಿಕ್ಷಕ ವೃತ್ತಿಯಲ್ಲಿ ಅತ್ಯಂತ ಯಶಸ್ವಿ ಶಿಕ್ಷಕರಾಗಲು ತುಂಬಾ ಅವಶ್ಯಕವಾದ ವಿಷಯವಾಗಿದೆ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
💐💐💐💐💐🙏🙏
🌼
0 Comments