ಮಲೆಗಳಲ್ಲಿ ಮದುಮಗಳು
ರಾಷ್ಟ್ರ ಕವಿ ಕುವೆಂಪುರವರ ಕಾದಂಬರಿ PDF
ಹಾಯ್, ಪ್ರಿಯ ಓದುಗರಿಗೆಲ್ಲ ನಮಸ್ಕಾರಗಳು....!!
ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ 💐💐💐🙏🙏🙏 ಚಾಣಕ್ಯ ಕಣಜ ವಿಶೇಷ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ UPSC, RRB, KPSC, SSC, FDA, SDA, PDO, PSI, Police Constable, TET, CET, ಹೀಗೆ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ನೋಟ್ಸ್ ಮತ್ತು PDF ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ಹಾಗೆ ಮಾಡಲಾಗುತ್ತದೆ ಕೂಡ.ಸ್ಪರ್ಧಾ ಮಿತ್ರರೆಲ್ಲರೂ ಅವುಗಳ ಸದುಪಯೋಗ ಪಡೆದುಕೊಳ್ಳಿ.
ಅಷ್ಟೇ ಅಲ್ಲದೆ ಕಥೆ, ಕಾದಂಬರಿ,ನೈತಿಕ ಕಥೆಗಳು, ಉತ್ತಮ ಲೇಖನಗಳು, Motivational Stories, ಪ್ರವಾಸ ಕಥೆಗಳು ಮುಂತಾದವುಗಳ ನೋಟ್ಸ್, ಪಿಡಿಎಫ್ ನೋಟ್ಸ್ಗಳನ್ನು ಕೂಡ ಅಪಲೋಡ ಮಾಡಲಾಗುತ್ತಿದೆ. ಅವುಗಳ ಸದುಪಯೋಗ ಕೂಡಾ ಓದುವ ಹವ್ಯಾಸವುಳ್ಳ ಮಿತ್ರರು ಪಡೆದುಕೊಳ್ಳಿ.ಚಾಣಕ್ಯ ಕಣಜ ಇಂದು " ರಾಷ್ಟ್ರಕವಿ ಕುವೆಂಪುರವರ " ಕಾದಂಬರಿ " ಮಲೆಗಳಲ್ಲಿ ಮದುಮಗಳು ಕಾದಂಬರಿಯ" ಪಿಡಿಎಫ್ ಅಪಲೋಡ ಮಾಡುತ್ತಿದೆ.ಕೆಳಗೆ ನಾವು ಕೊಡುವ ಲಿಂಕ್ ಮೂಲಕ ಪಡೆದುಕೊಳ್ಳಬಹುದು.ಹೀಗೆ ಅನೇಕ ಪಿಡಿಎಫ್ ನೋಟ್ಸ್ ಗಳಿಗಾಗಿ ಪ್ರತಿ ದಿನ ಚಾಣಕ್ಯ ಕಣಜಕ್ಕೆ ಬೇಟಿ ನೀಡಿ.
ಕಾದಂಬರಿ ಕರತಲ ರಂಗಭೂಮಿ ಇದ್ದ ಹಾಗೆ: ಅಂಗೈ ಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ.
ವಾಚಕರ ಕಲ್ಪನೆ ಸದಾ ಎಚ್ಚತ್ತಿರಬೇಕು. ಅದು ನಿದ್ದೆ ಮಾಡುವುದಿರಲಿ ತೂಕಡಿಸಿದರೂ ರಸಾಸ್ವಾದನೆಗೆ ಭಂಗ ಬರುತ್ತದೆ.
ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುವಾಗ ದೃಶ್ಯಗಳನ್ನು ಚಿತ್ರಿಸಿಕೊಳ್ಳುವಾಗ, ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುವಾಗ, ಅವರ ಸಂಭಾಷಣೆಗಳನ್ನು ಅವರವರ ಬೇರೆಬೇರೆಯ ವಾಣಿಗಳೊಡನೆ ಆಲಿಸುವಾಗ ವಾಚಕರು ಸಿನಿಮಾ ವಾಶ್ಚಿತ್ರವನ್ನು ತತ್ಪರತೆಯಿಂದ ನೋಡುತ್ತಿರುವ ಪ್ರೇಕ್ಷಕರಂತಾಗಬೇಕಾಗುತ್ತದೆ. ಹಾಗೆ ಮಾಡದಿದ್ದರೆ ಓದು ಸಾರ್ಥಕವಾಗುವುದಿಲ್ಲ.
ಎಲ್ಲಕ್ಕೂ ಬಹು ಮುಖ್ಯವಾದುದು ಸಹಾನುಭೂತಿ. ಅದಿಲ್ಲದಿದ್ದರೆ ನಂದನವೂ, ಮರುಭೂಮಿಯಾಗುತ್ತದೆ. ಕೃತಿರಚನೆಯಂತೆಯೆ ಕೃತಿಯ ರಸಾಸ್ವಾದನೆಯೂ ಒಂದು ಸೃಷ್ಟಿಕಾರ್ಯ. ಸೃಷ್ಟಿಕಾರ್ಯವಲ್ಲದ ಸರ್ವಕರ್ಮಗಳೂ ನೀರಸವಾಗುತ್ತವೆ.
ಅಂತಹ ಕರ್ಮಗಳಿಂದ ನಮಗೆ ಒದಗುವುದು ಆನಂದವಲ್ಲ, ಬೇಸರ. ಆದ್ದರಿಂದ ಕಾದಂಬರಿಯನ್ನು ಓದುವವರ ಪ್ರತಿಭೆಯಲ್ಲಿ ಅದು
ಮತ್ತೊಮ್ಮೆ ಸೃಷ್ಟಿಯಾಗಬೇಕಾಗುತ್ತದೆ. ರಸಾಸ್ವಾದನೆ ಎಂದರೆ ಕಟ್ಟಡದಿಂದ ಕಟ್ಟಡಕ್ಕೆ ವಿಗ್ರಹವನ್ನು ಸಾಗಿಸುವಂತಲ್ಲ; ಹೊಸದಾಗಿ
ಉತ್ತು ಬಿತ್ತಿ ಹೂದೋಟವನ್ನು ಬೆಳೆಯಿಸುವಂತೆ ಆದೊಂದು ಸಜೀವವಾದ ಪ್ರಾಣಪೂರ್ಣವಾದ ಕ್ರೀಡಾಕ್ರಿಯೆ.
ಕುವೆಂಪುರವರ ಕಾದಂಬರಿಯನ್ನು ಓದುವವರಲ್ಲಿ ನನ್ನದೊಂದು ವಿಜ್ಞಾಪನೆ. ಇದನ್ನು ಕಥೆಯ ಕೋಲಾಹಲಕ್ಕಾಗಿ ಓದಬೇಡಿ.ಸಾವಧಾನವಾಗಿ ಸಚಿತ್ರವಾಗಿ ಸಜೀವವಾಗಿ ಓದಿ. ಇಲ್ಲಿ ಚಿತ್ರಿತವಾಗಿರುವುದು ಮಲೆನಾಡಿನ ಬಾಳಿನ ಕಡಲಿನಲ್ಲಿ ಒಂದು ಹನಿ.
ಅನೇಕರಿಗೆ ಅದು ಸಂಪೂರ್ಣವಾಗಿ ಹೊಸ ಪ್ರಪಂಚವಾಗುತ್ತದೆ. ಹೊಸ ಊರಿಗೆ ಹೋಗುವವರು ಅಲ್ಲಿಯ ಜನ ಮತ್ತು ಜೀವನದ
ವಿಚಾರವಾಗಿ ತಟಕ್ಕನೆ ಯಾವ ನಿರ್ಣಗಳನ್ನೂ ಮಾಡಿಕೊಳ್ಳದೆ ಸ್ವಲ್ಪ ಕಾಲ ತಾಳ್ಮೆಯಿಂದಿದ್ದು ಕ್ರಮೇಣ ಬಳಕೆಯಿಂದ ಜನರನ್ನೂ
ಜೀವನವನ್ನೂ ಪರಿಚಯ ಮಾಡಿಕೊಳ್ಳುವಂತೆ ಈ ಕಾದಂಬರಿಯ ಅರಣ್ಯಜಗತ್ತನ್ನು ಪ್ರವೇಶಿಸುವ ವಾಚಕರು ವರ್ತಿಸಬೇಕಾಗುತ್ತದೆ.
ಎಂದರೆ, ಮೊದಲನೆಯ ಸಾರಿ ಓದಿದೊಡನೆ ಎಲ್ಲವನ್ನೂ ಪೂರೈಸಿದೆವು. ಎಂದುಕೊಳ್ಳುವವರು. ಮೋಟಾರಿನಲ್ಲಿ ಕುಳಿತು ಒಂದೂರಿನ ಪೂರ್ವದ್ವಾರದಿಂದ ಒಳನುಗ್ಗಿ, ಅದರ ಬೀದಿಗಳಲ್ಲಿ ಸರನೆ ಸಂಚರಿಸಿ, ಪಶ್ಚಿಮ ದ್ವಾರದಿಮದ ಹೊರಹೊರಟು, ಆ ಊರಿನ ಪೂರ್ಣ ಪರಿಚಯ ಮಾಡಿಕೊಂಡಿದ್ದೇವೆ ಎನ್ನುವವರಂತೆ ಹಾಸ್ಯಾಸ್ಪದರಾಗುತ್ತಾರೆ.
ಈ ಕಾದಂಬರಿಯನ್ನು ಮತ್ತೆ ಮತ್ತೆ ಓದುವಾಗಲೂ ಬಹುವಾಗಿ ಬಂದಿರುವ ರಸಸುಖದಲ್ಲಿ ಒಂದಿನಿತನ್ನಾದರೂ ಇದನ್ನು ಓದುವವರು ಸವಿಯುತ್ತಾರೆಂದು ಭಾವಿಸುತ್ತೇನೆ.
ಮಲೆಗಳಲ್ಲಿ ಮದುಮಗಳು
ರಾಷ್ಟ್ರ ಕವಿ ಕುವೆಂಪುರವರ ಕಾದಂಬರಿ PDF
PDF FILE DETAILS
0 Comments