Ad Code

Ticker

6/recent/ticker-posts

Click Below Image to Join Our Telegram For Latest Updates

[TET NOTES ] ವಿಷಯ ವಿಜ್ಞಾನ ಘಟಕ ಗಾಳಿ ಮತ್ತು ನೀರು - ಅಧ್ಯಾಯದ ಪ್ರಮುಖ ಅಂಶಗಳು

[ ಟಿಇಟಿ ಪೇಪರ 1 ರಲ್ಲಿ ಬರುವ ಪರಿಸರ ಅಧ್ಯಯನ ವಿಷಯದಲ್ಲಿ ಈ ವಿಷಯದ ಮೇಲೆ ಪ್ರಶ್ನೆ  ಬರುವ ಸಾಧ್ಯತೆಗಳಿರುತ್ತವೆ.ಈ ನೋಟ್ಸ್ ನ್ನ ಒಮ್ಮೆ ಓದಿ.]

ಘಟಕ 

ಗಾಳಿ ಮತ್ತು ನೀರು

ಹಾಯ್ ಸ್ನೇಹಿತರೆ ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ. ಈ ವಿಷಯವು ಟಿಇಟಿ ಪರೀಕ್ಷೆಗೆ ತುಂಬಾ ಉಪಯುಕ್ತವಿದೆ. 

ಗಾಳಿ ಮತ್ತು ನೀರು:

ನಿಮಗೆ ಗೊತ್ತಿರುವಂತೆ ನಾವೆಲ್ಲ ಜೀವಿಸುತ್ತಿರುವ ಭೂಗ್ರಹವು ಮಣ್ಣು, ನೀರು ಮತ್ತು ಗಾಳಿಯಿಂದ ಆವರಿಸಲ್ಪಟ್ಟಿದೆ. ಕಲ್ಲು, ಬಂಡೆ ಮತ್ತು ಮಣ್ಣು ಘನ ರೂಪದಲ್ಲಿವೆ. ಭೂಮಿಯ ಶೇಕಡಾ 70 ಕ್ಕಿಂತಲೂ ಅಧಿಕ ಭಾಗ ನೀರಿನಿಂದ ಆವೃತವಾಗಿದೆ. ಗಾಳಿಯು ಅನೇಕ ಅನಿಲಗಳ ಮಿಶ್ರಣವಾಗಿದೆ. ಭೂಗ್ರಹದಲ್ಲಿ ಸಸ್ಯ ಮತ್ತು ಪ್ರಾಣಿಗಳ ವಿಕಾಸ ಮತ್ತು ಪೋಷಣೆಗೆ ಭೂಮಿಯ ಮೇಲಿರುವ ಈ ಮಣ್ಣು ನೀರು ಮತ್ತು ಗಾಳಿ ಅವಶ್ಯಕವಾಗಿವೆ.


🍁🍁

ಇದನ್ನು ತಿಳಿಯಿರಿ:



ಸ್ವಾಭಾವಿಕ ಸಂಪನ್ಮೂಲಗಳಲ್ಲಿ ಗಾಳಿಯು ಒಂದು. ಇದು ಎಲ್ಲಾ ಕಡೆಯೂ ಹರಡಿಕೊಂಡಿದೆ. ಗಾಳಿಯ ಘಟಕಗಳು ನೈಟ್ರೋಜನ್, ಆಕ್ಸಿಜನ್, ಕಾರ್ಬನ್ ಡೈಯಾಕ್ಸೈಡ್, ನೀರಾವಿ, ಜಡ ಅನಿಲಗಳು ಮತ್ತು ಧೂಳಿನ ಕಣಗಳ ಮಿಶ್ರಣವಾಗಿದೆ.

ಜೋಸೆಫ್ ಪ್ರೀಸ್ಟ್ಲೇ ಎಂಬ ಬ್ರಿಟಿಷ್ ರಸಾಯನಶಾಸ್ತ್ರಜ್ಞ ರು 1774 ರಲ್ಲಿ ಆಕ್ಸಿಜನ್ ಅನ್ನು ಕಂಡುಹಿಡಿದರು.

ಶುದ್ಧ ನೀರು ವಿದ್ಯುತ್ ಮತ್ತು ಉಷ್ಣಅವಾಹಕ. ನೀರಿನ ಕುದಿಯುವ ಬಿಂದು ಸಮುದ್ರ ಮಟ್ಟದಲ್ಲಿ 100 ಡಿಗ್ರಿ ಸೆಲ್ಸಿಯಸ್. ನೀರಿನ ಘನೀಕರಣ ಬಿಂದು 0 ಡಿಗ್ರಿ ಸೆಲ್ಸಿಯಸ್. ನೀರಿನ ಸಾಂದ್ರತೆಯು 4 ಡಿಗ್ರಿ ಸೆಲ್ಸಿಯಸ್ ನಲ್ಲಿ ಒಂದು ಕೆಜಿ / ಲಿಟರ್

 ಸಸ್ಯಗಳಿಗೆ ನೀರು ಅವಶ್ಯಕ. ಕ್ಯಾಕ್ಟಸ್ ನಂತಹ ಕೆಲವು ಸಸ್ಯಗಳು ನೀರು ಪೂರೈಸದಿದ್ದರೆ ಅನೇಕ ದಿನಗಳವರೆಗೆ ಬದುಕಬಲ್ಲವು. ಒಂಟೆ ಮತ್ತು ಕಾಂಗ್ರೋ ಇಲಿಗಳ ಅಂತಹ ಕೆಲವು ಪ್ರಾಣಿಗಳು ಕೂಡ ನೀರು ಸೇವಿಸದೆ ಅನೇಕ ದಿನಗಳವರೆಗೆ ಬದುಕಬಲ್ಲವು.


🍀🍀


ನೆನಪಿಡಿ

1.ಜೀವಿಗಳಿಗೆ ಉಸಿರಾಡಲು ಗಾಳಿ ಅವಶ್ಯಕ. 

2.ಗಾಳಿಯು ಹಲವಾರು ಅನಿಲಗಳ ಮಿಶ್ರಣವಾಗಿದ್ದು ಭೂಮಿಯ ಮೇಲ್ಭಾಗದಲ್ಲಿ ದೊರೆಯುತ್ತದೆ. 

3.ಗಾಳಿಯನ್ನು ನೋಡಲು ಸಾಧ್ಯವಿಲ್ಲ ಆದರೆ ಅದರ ಇರುವಿಕೆಯು ನಮಗೆ ಅನುಭವವಾಗುತ್ತದೆ. 

4.ಗಾಳಿಗೆ ತೂಕವಿದೆ ಮತ್ತು ಸ್ಥಳವನ್ನು ಆಕ್ರಮಿಸುತ್ತದೆ.

5.ಗಾಳಿಯಲ್ಲಿ ನೈಟ್ರೋಜೆನ್ ಶೇಕಡಾ 78ರಷ್ಟು ಇದೆ. 

6.ಗಾಳಿಯು ವಸ್ತುಗಳ ದಹನಕ್ಕೆ ಸಹಾಯ ಮಾಡುವುದು. 

7.ಭೂಮಿಯ ಮೇಲೆ ನೀರು ಅತ್ಯಧಿಕವಾಗಿ ದೊರೆಯುವ ಅಮೂಲ್ಯ ಸಂಪತ್ತು. 

8.ಮೇಲ್ಮೈನ ಶೇಕಡಾ 70 ಭಾಗ ನೀರಿನಿಂದ ಆವೃತವಾಗಿದೆ.

9.ಜೀವಿಗಳ ಉಳಿವಿಗೆ ನೀರು ಅತ್ಯಗತ್ಯವಾಗಿ ಬೇಕು. 

10.ಭೂಮಿಯಲ್ಲಿ ಸಿಗುವ ನೀರಿನ ಶೇಕಡ 97.2ಭಾಗ ಸಮುದ್ರ ಮತ್ತು ಸಾಗರಗಳಲ್ಲಿದೆ. 

11.ನೀರು ತನ್ನಲ್ಲಿ ಅನೇಕ ವಸ್ತುಗಳನ್ನು ವಿಲೀನಿಸಿಕೊಳ್ಳುವುದರಿಂದ ಇದನ್ನು ಸಾರ್ವತ್ರಿಕ ದ್ರಾವಕ ಎನ್ನಲಾಗುತ್ತದೆ.


🌸🌸

ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.


🍁🌸🍁🌸🍁🌸🍁🌸🍁🌸🍁🌸🍁🌸🍁🌸🍁🌸🍁🌸





Post a Comment

0 Comments

Important PDF Notes

Ad Code