💥💥💥💥💥💥💥💥💥💥💥💥💥💥💥💥💥💥💥💥
ಸಾಮಾನ್ಯ ಜ್ಞಾನ ವಿವರಣೆ ಸಹಿತ ಪ್ರಮುಖ ಪ್ರಸ್ನೋತ್ತರಗಳು
1) ನಾಗರಿಕ ರಾಷ್ಟ್ರೀಯ ನೊಂದಣಿಯ ಮೊದಲ ಕರಡು ಯಾವ ರಾಜ್ಯಕ್ಕೆ ಬಿಡುಗಡೆಯಾಯಿತು.
A)ನಾಗಾಲ್ಯಾಂಡ್
B)ಅಸ್ಸಾಂ
C)ಪಂಜಾಬ್
D)ಕೇರಳ.
ಉತ್ತರ :- ಅಸ್ಸಾಂ.
ವಿವರಣೆ. :-ನಾಗರೀಕ ರಾಷ್ಟ್ರೀಯ ನೋಂದಣಿ NRC (National register of citizens) ಭಾರತದ ನಾಗರಿಕರು ಮತ್ತು ವಿದೇಶಿಗರನ್ನು ಗುರುತಿಸುವ ಅಧಿಕೃತ ದಾಖಲೆಯಾಗಿದ್ದು, ಅಸ್ಸಾಂನಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರ ಹೆಸರು, ವಿಳಾಸ ಮತ್ತಿತರ ಮಾಹಿತಿಗಳನ್ನು ಒಳಗೊಂಡಿದೆ. 1951 ರಲ್ಲಿ ಎನ್ ಆರ್ ಸಿ ಯನ್ನು ಮೊದಲ ಬಾರಿಗೆ ತಯಾರಿಸಲಾಯಿತು. ಅಸ್ಸಾಂ ಮಾತ್ರ ಈ ವ್ಯವಸ್ಥೆಯನ್ನು ಹೊಂದಿದೆ. ಈ ದಾಖಲೆಗಳನ್ನು ಅರ್ಥಮ್ ಜಿಲ್ಲಾಧಿಕಾರಿ ಮತ್ತು ವಿಭಾಗೀಯ ಕಚೇರಿಗಳಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.ಅಸ್ಸಾಂನಲ್ಲಿ ಅಕ್ರಮ ಬಾಂಗ್ಲಾದೇಶಿಗರು ಹೆಚ್ಚಾಗಿದ್ದಾರೆ ಎಂದು NRCಯನ್ನು ಪರಿಷ್ಕರಿಸಬೇಕು ಎಂದು ಅನೇಕ ಅರ್ಜಿಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟನ ಕಣ್ಗಾವಲಿನಲ್ಲಿ ಮೊದಲ ಕರಡು ಪಟ್ಟಿಯನ್ನು 2012 ಡಿಸೆಂಬರ್ 31 ರಂದು ತಯಾರಿಸಲಾಯಿತು. ಭಾರತ ದೇಶದ ಪ್ರತಿಯೊಬ್ಬ ನಿವಾಸಿಗಳ ಗುರುತಿನ ದತ್ತಾಂಶ ರಚನೆ ಮಾಡುವುದು ಎನ್ ಪಿ ಆರ್. ರಾಷ್ಟ್ರೀಯ ಜನಸಂಖ್ಯಾ ನೊಂದಣಿ ಉದ್ದೇಶವಾಗಿದೆ. 2019 ರ ಡಿಸೆಂಬರ್ 12ರಂದು ಕೇಂದ್ರ ಸರಕಾರದ ಪ್ರಸ್ತಾಪಿತ ಪೌರತ್ವ ತಿದ್ದುಪಡಿ ಮಸೂದೆಗೆ ಸಿಎಬಿ ರಾಷ್ಟ್ರಪತಿ ಸಹಿ ಹಾಕಿದ ನಂತರ ಪೌರತ್ವ ತಿದ್ದುಪಡಿ ಕಾಯ್ದೆ( CAA citizenship Amendment Act.) ಆಗಿದೆ.
2) ಜಪಾನ್ ದ್ವೀಪ ಸಮುದಾಯದ ಯಾವ ದ್ವೀಪದಲ್ಲಿ ಹಿರೋಷಿಮಾ ಮತ್ತು ನಾಗಸಾಕಿ ನಗರಗಳಿವೆ.
A) ಹೋನ್ ಶೂ ಮತ್ತು ಕ್ಯೂಶೂ ಅನುಕ್ರಮವಾಗಿ.
B) ಹೋನ್ ಶೂ ಮತ್ತು ಶಿಕೋಕು ಕ್ರಮವಾಗಿ.
C) ಹೊಕೈಡೊ ಮತ್ತು ಕ್ಯೂಸೋ ಕ್ರಮವಾಗಿ.
D) ಕ್ಯೂಶೂ ಮತ್ತು ಶಿಕೋಕು ಕ್ರಮವಾಗಿ.
ಉತ್ತರ :- ಹೊನ್ ಶೂ ಮತ್ತು ಕ್ಯೂಶೂ ಅನುಕ್ರಮವಾಗಿ.
ವಿವರಣೆ. :- ಜಪಾನ್ 6,852 ದ್ವೀಪಗಳನ್ನು ಹೊಂದಿರುವ ದೇಶವಾಗಿದೆ. 1945 ಆಗಸ್ಟ್ 6ರಂದು ಮತ್ತು ಆಗಸ್ಟ್ 9ರಂದು ಲಿಟ್ಲ್ ಬಾಯ್ ಮತ್ತು ಫ್ಯಾಟ್ ಮ್ಯಾನ್ ಎಂಬ ಅಮೆರಿಕಾದ ಅಣುಬಾಂಬ್ ದಾಳಿಗೆ ತುತ್ತಾದ ಹಿರೋಷಿಮಾ ಮತ್ತು ನಾಗಸಾಕಿ ನಗರಗಳು ಕ್ರಮವಾಗಿ ಹೋನ್ ಶೂ ಮತ್ತು ಕ್ಯೂಶೂ ದ್ವೀಪಗಳಲ್ಲಿ ಕಂಡುಬರುತ್ತವೆ. 2019 ರಲ್ಲಿ ಬರಾಕ್ ಒಬಾಮಾ ಅವರು ಬಾಂಬ್ ದಾಳಿಯ ನಂತರ ಜಪಾನಿನ ಹಿರೋಶಿಮಾ ನಗರಕ್ಕೆ ಭೇಟಿ ನೀಡಿದ ಮೊದಲ ಅಮೇರಿಕಾದ ಅಧ್ಯಕ್ಷರಾಗಿದ್ದಾರೆ.ವಿಕೋಪ ದೀಪವು ಜಪಾನಿನ ಪ್ರಮುಖ ದ್ವೀಪಗಳಲ್ಲಿ ಅತಿ ಚಿಕ್ಕ ದ್ವೀಪವಾಗಿದ್ದು ಬೌದ್ಧ ಸನ್ಯಾಸಿ ಕುಕೈಯ್ ಅವರ ಗೌರವಾರ್ಥವಾಗಿ ಹೆಸರಿಡಲಾಗಿದೆ. ಇಲ್ಲಿ ವೈಟ್ ವಾಟರ್ ನದಿಗಳು ಕಂಡುಬರುತ್ತವೆ. ಹೊಕೈಡೊ ಇದು ಹೊನ್ನು ದ್ವೀಪಕ್ಕೆ ಹತ್ತಿರದಲ್ಲಿದ್ದು, ಈ ದ್ವೀಪಗಳ ಕುರುಶಿವೊ ಉಷ್ಣೋದಕ ಪ್ರವಾಹ & ಒಯಾಶಿವೊ ಶೀತೋದಕ ಪ್ರವಾಹಗಳು ಸಂಧಿಸುವ ಸ್ಥಳವಾಗಿದ್ದು ಪ್ರಸಿದ್ಧ ಮೀನುಗಾರಿಕಾ ದ್ವೀಪ ಎನಿಸಿದೆ.
💥💥💥💥💥💥💥💥💥💥💥💥💥💥💥💥💥💥
3) ಈ ಕೆಳಗಿನವರಲ್ಲಿ ಯಾರು ಪಟ್ಟದಕಲ್ಲು ಮತ್ತು ಐಹೊಳೆಗಳ ಸುಂದರ ದೇಗುಲಗಳನ್ನು ನಿರ್ಮಿಸಿದರು.
A) ಚಾಲುಕ್ಯರು
B) ಹೊಯ್ಸಳರು
C) ಶಾತವಾಹನರು
D) ರಾಷ್ಟ್ರಕೂಟರು.
ಉತ್ತರ :- ಚಾಲುಕ್ಯರು.
ವಿವರಣೆ.:- ಬಾದಾಮಿ ಚಾಲುಕ್ಯರು ಪಟ್ಟದಕಲ್ಲು ಮತ್ತು ಐಹೊಳೆ ಗಳಲ್ಲಿ ಸುಂದರ ದೇಗುಲಗಳನ್ನು ನಿರ್ಮಿಸಿದರು. ಸಂಪೂರ್ಣ ಕರ್ನಾಟಕವನ್ನು ಒಂದೇ ಮನೆತನದ ಆಳ್ವಿಕೆಗೆ ಒಳಪಡಿಸಿದ ಮೊದಲ ರಾಜ್ಯ ಮನೆತನ ಬಾದಾಮಿ ಚಾಲುಕ್ಯರು. ವಾತಾಪಿ ಅಥವಾ ಬಾದಾಮಿಯನ್ನು ರಾಜಧಾನಿಯಾಗಿ ಹೊಂದಿ ರಾಜ ಜಯಸಿಂಹ ಆಡಳಿತವನ್ನು ಪ್ರಾರಂಭಿಸಿದರು. ಈ ಮನೆತನದ ಪ್ರಸಿದ್ಧ ಅರಸ ಇಮ್ಮಡಿ ಪುಲಿಕೇಶಿ ಆಗಿದ್ದಾರೆ. ಚಾಲುಕ್ಯರು ಚಾಲುಕ್ಯ ಶೈಲಿ ಎಂಬ ಶೈಲಿಯನ್ನು ಪ್ರಾರಂಭಿಸಿದರು. ಇವರ ದೇವಾಲಯಗಳನ್ನು ಐಹೊಳೆ ಬಾದಾಮಿ ಮತ್ತು ಪಟ್ಟದಕಲ್ಲಿನಲ್ಲಿ ಕಾಣಬಹುದಾಗಿದೆ. ಐಹೊಳೆಯನ್ನು ವಾಸ್ತು ಶಿಲ್ಪಕಲೆಯ ತೊಟ್ಟಿಲು ಎಂದು ಪರ್ಸಿಬ್ರೌನ್ ಕರೆದಿದ್ದಾರೆ. ಬಾದಾಮಿ ಅಥವಾ ವಾತಾಪಿ ಯಲ್ಲಿ ಗುಹಾಂತರ ದೇವಾಲಯಗಳು ಹಾಗೂ ಪಟ್ಟದಕಲ್ಲಿನಲ್ಲಿ 1987 ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ. ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ದೇವಾಲಯ (ಐಹೊಳೆಯಲ್ಲಿ ವಾಸ್ತುಶಿಲ್ಪಗಳ ತೊಟ್ಟಿಲು) ದುರ್ಗಾ ಹುಚ್ಚಿಮಲ್ಲಿಗುಡಿ, ಲಾಡಖಾನ್ ದೇವಾಲಯ ಕಂಡುಬರುತ್ತವೆ.
4) ಕಲ್ಯಾಣಿ ಚಾಲುಕ್ಯರಲ್ಲಿ ಜಗದೇಕಮಲ್ಲ ಬಿರುದು ಪಡೆದವರು.
A) ಎರಡನೆಯ ಜಯಸಿಂಹ.
B) ಏಳನೇ ವಿಕ್ರಮಾದಿತ್ಯ.
C) ಎರಡನೇ ವಿಜಯದಿತ್ಯ.
D) ಒಂದನೇ ಸೋಮೇಶ್ವರ.
ಉತ್ತರ :- ಎರಡನೇ ಜಯಸಿಂಹ.
ವಿವರಣೆ. :- ಕಲ್ಯಾಣಿ ಚಾಲುಕ್ಯರ ಪ್ರಮುಖ ಅರಸ ಎರಡನೇ ಜಯಸಿಂಹನು ಜಗದೇಕ ಮಲ್ಲ ಎಂಬ ಬಿರುದನ್ನು ಪಡೆದಿದ್ದನು. ಆರನೇಯ ವಿಕ್ರಮಾದಿತ್ಯ ಕಲ್ಯಾಣಿ ಚಾಲುಕ್ಯರ ಪ್ರಸಿದ್ಧ ಅರಸ ಇವನು ಅಧಿಕಾರಕ್ಕೆ ಬಂದ 1076ನ್ನು ಚಾಲುಕ್ಯ ವಿಕ್ರಮ ಶಕೆ ಎನ್ನಲಾಗಿದೆ. ಪೆರ್ಮಾಡಿದೇವ, ತ್ರಿಭುವನಮಲ್ಲ, ವಿಕ್ರಮಾದಿತ್ಯನ ಪ್ರಸಿದ್ಧ ಬಿರುದುಗಳು. ಇವನ ರಾಣಿ ಚಂದ್ರಲೇಖ ನೃತ್ಯ ವಿದ್ಯಾಧರಿ ಮತ್ತು ಅಭಿನಯ ಸರಸ್ವತಿ ಎಂಬ ಬಿರುದು ಹೊಂದಿದ್ದಳು. ವಂದನೆ ಸೋಮೇಶ್ವರನು ಕಲ್ಯಾಣ ಎಂಬ ನಗರವನ್ನು ಕಟ್ಟಿಸಿದ ಚಾಲುಕ್ಯರ ದೊರೆ. ಇದು ಪ್ರಸ್ತುತ ಬೀದರ್ ಜಿಲ್ಲೆಯ ಬಸವ ಕಲ್ಯಾಣ ಎನಿಸಿದೆ. ಮೂರನೇ ಸೋಮೇಶ್ವರ ಸಂಸ್ಕೃತದ ವಿಶ್ವಕೋಶ ಎನಿಸಿದ ಅಭಿಲಾಶಿತರ್ಥ ಚಿಂತಾಮಣಿ. ಅಥವಾ ಮಾನಸೋಲ್ಲಾಸ ಕೃತಿಯನ್ನು ರಚಿಸಿದ್ದಾರೆ.
💥💥💥💥💥💥💥💥💥💥💥💥💥💥💥💥💥💥
5) ತುಕ್ಕು ಹಿಡಿಯುವುದರಿಂದ ಕಬ್ಬಿಣದ ತೂಕವು.
A) ಕಡಿಮೆಯಾಗುತ್ತದೆ.
B) ಹೆಚ್ಚಾಗುತ್ತದೆ.
C) ಸಮಾನವಾಗಿ ಉಳಿಯುತ್ತದೆ.
D) ನಿಖರವಾಗಿಲ್ಲ.
ಉತ್ತರ :- ಹೆಚ್ಚಾಗುತ್ತದೆ.
ವಿವರಣೆ. :- ಕಬ್ಬಿಣವನ್ನು ವಾತಾವರಣದ ಗಾಳಿಗೆ ಇಟ್ಟಾಗ ವಾತಾವರಣದಲ್ಲಿ ತೇವವಾದ ಗಾಳಿಯಲ್ಲಿರುವ ಆಮ್ಲಜನಕವು ಕಬ್ಬಿಣ ದೊಂದಿಗೆ ವರ್ತಿಸಿ ಕಬ್ಬಿಣದ ಆಕ್ಸೈಡ್ ಉತ್ಪತ್ತಿಯಾಗುವ ಮೂಲಕ ಕಬ್ಬಿಣ ತುಕ್ಕು ಹಿಡಿಯುತ್ತದೆ. ಕಬ್ಬಿಣವು ತುಕ್ಕು ಹಿಡಿದಾಗ ಅದರ ತೂಕವು ಹೆಚ್ಚಾಗುತ್ತದೆ. ಇದು ರಾಸಾಯನಿಕ ಕ್ರಿಯೆಯಾಗಿದ್ದು ತುಕ್ಕು ಹಿಡಿಯುವುದರಿಂದ ಅಥವಾ ಬಣ್ಣದ ಲೇಖನವನ್ನು ಮಾಡಲಾಗುತ್ತದೆ. ಕಬ್ಬಿಣದಲ್ಲಿ ತುಕ್ಕು ಎಂಬುದು ಫೆರೋಸ್ ಪೆರಿಕ್ ಆಕ್ಸೈಡ್.
6) ಹೈನುಗಾರಿಕೆ ಕ್ಷೇತ್ರದಲ್ಲಿ ವಿಪರೀತ ದುರ್ಬಳಕೆಗಾಗಿ ಔಷಧೀಯ ಉತ್ಪಾದನೆ ಮತ್ತು ಮಾರಾಟವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇತ್ತೀಚಿಗೆ ನಿರ್ಬಂಧಿಸಿದೆ.
A) ಸಿಫೆಲೊಸ್ಫೂರಿನ್.
B) ಆಕ್ಸಿಟೋಸಿನ್.
C) ಆಕ್ಸಿ ಟೆಟ್ರಾಸೈಕ್ಲಿನ್.
D) ಪ್ಯುರಾ ಝೊಲಿ ಡೋನ್.
ಉತ್ತರ :- ಆಕ್ಸಿಟೋಸಿನ್.
ವಿವರಣೆ. :- ಇತ್ತೀಚೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಕ್ಸಿಟೋಸಿನ್ ಔಷಧಿ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಆಕ್ಸಿಟೋಸಿನ್ ಔಷಧಿಯನ್ನು ಕರ್ನಾಟಕ ಆಂಟಿಬಯೋಟಿಕ್ ಮತ್ತು ಫಾರ್ಮಸಿಟಿಕಲ್ ಲಿಮಿಟೆಡ್ ನವರು ತಯಾರಿಸಿ ಮಾರಾಟ ಮಾಡುತ್ತಿದ್ದರು. ಮೇನಕಾ ಗಾಂಧಿ ಅವರು 2014 ರಲ್ಲಿ ಕೇಂದ್ರ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಸಚಿವಾಲಯಕ್ಕೆ ಆಕ್ಸಿಟೋಸಿನ್ ಔಷಧಿಯನ್ನು ಜಾನುವಾರುಗಳಿಗೆ ಹಾಲಿನ ಹೆಚ್ಚು ಉತ್ಪಾದನೆಗೆ ಬಳಸುತ್ತಿರುವ ಪರಿಣಾಮಗಳನ್ನು ತಿಳಿಸಿ ಬರೆದ ಪತ್ರವನ್ನು ನಿಷೇಧಿಸಲಾಗಿದೆ. ಐಸಿಎಂಆರ್ ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ.
7) ಭಾರತದ 100ನೆಯ ವಿಮಾನ ನಿಲ್ದಾಣ ಪಾಕ್ಯಾಂಗ್ ಯಾವ ರಾಜ್ಯದಲ್ಲಿದೆ.
A) ಮಣಿಪುರ
B) ಮಿಜೋರಾಂ
C) ಸಿಕ್ಕಿಂ
D) ಅಸ್ಸಾಂ.
ಉತ್ತರ :- ಸಿಕ್ಕಿಂ.
ವಿವರಣೆ. :- 2018 ರ ಸೆಪ್ಟೆಂಬರ್ 24ರಂದು ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್ ಬಳಿಯ ಪಾಕ್ಯಾಂಗನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಇದು ಸಿಕ್ಕಿಂ ರಾಜ್ಯದ ಮೊದಲ ಮತ್ತು ದೇಶದ ನೂರನೆಯ ವಿಮಾನ ನಿಲ್ದಾಣವಾಗಿದೆ. ಇದು ಭಾರತ ಮತ್ತು ಚೀನಾದ ಗಡಿ ಇಂದ 60 ಕಿಲೋ ಮೀಟರ್ ದೂರದಲ್ಲಿದ್ದು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಲ್ಯಾಂಡ್ ಮಾಡಲು ಅನುಕೂಲಕರವಾಗಿದೆ. ರೈಲ್ವೆ ಸೌಲಭ್ಯವನ್ನು ಪಡೆಯದೇ ಇರುವ ಸಿಕ್ಕಿಂ ರಾಜ್ಯಕ್ಕೆ ವಾಯು ಸೌಲಭ್ಯ ದೊರೆತಿರುವುದು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. (ಕೇರಳದ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಮೊದಲ ಸಂಪೂರ್ಣ ಸೌರ ಚಾಲಿತ ವಿಮಾನ ನಿಲ್ದಾಣ ಹಾಗೂ ಪಶ್ಚಿಮಬಂಗಾಳದ ದುರ್ಗಾಪುರ ವಿಮಾನನಿಲ್ದಾಣವು ದೇಶದ ಮೊದಲ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವಾಗಿದೆ.)
💥💥💥💥💥💥💥💥💥💥💥💥💥💥💥💥💥💥
8) ಮೃಚ್ಛಕಟಿಕ ಅಥವಾ ಲಿಟಲ್ ಕ್ಲೇ ಕಾರ್ಟ್ ಅನ್ನು ಬರೆದ ಕವಿ.
A) ಭಾಸ.
B) ಕಾಳಿದಾಸ
C) ಬಾಣಭಟ್ಟ
D) ಶೂದ್ರಕ.
ಉತ್ತರ :- ಶೂದ್ರಕ.
ವಿವರಣೆ. :- ಮೃಚ್ಛಕಟಿಕ ಎಂಬುದು ಸಂಸ್ಕೃತ ಭಾಷೆಯಲ್ಲಿ ಶೂದ್ರಕ ನಿಂದ ರಚಿಸಲ್ಪಟ್ಟ ನಾಟಕವಾಗಿದೆ. ಇದು ಸುಮಾರು ಐದನೇಯ ಶತಮಾನದಲ್ಲಿ ರಚಿತವಾಗಿದೆ ಎನ್ನಲಾಗಿದೆ. ಭಾರತೀಯ ಇತಿಹಾಸದಲ್ಲಿ ಸಂಸ್ಕೃತ ಸಾಹಿತ್ಯದ ಸುವರ್ಣ ಯುಗ ಎಣಿಸಿದ ಗುಪ್ತರ ಕಾಲದಲ್ಲಿ ಭಾರತ ಸೆಕ್ಸ್ ಪಿಯರ್ ಎಂದೇ ಖ್ಯಾತವಾದ ಕಾಳಿದಾಸ ಹಲವಾರು ಕಾವ್ಯಗಳನ್ನು ರಚಿಸಿದರು. ಮೇಘದೂತ, ರಘುವಂಶ, ಕುಮಾರಸಂಭವ, ಋತುಸಂಹಾರ ಇವರ ಪ್ರಮುಖ ಕಾವ್ಯಗಳಾಗಿವೆ. ಅಭಿಜ್ಞಾನ ಶಾಕುಂತಲ, ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ ಎಂಬುದು ಇವರು ರಚಿಸಿದ ಪ್ರಮುಖ ನಾಟಕವಾಗಿದೆ. ಬಾಣಭಟ್ಟನು ಹರ್ಷನ ಜೀವನ ಚರಿತ್ರೆ ಯಾದ ಹರ್ಷಚರಿತವನ್ನು ಸಂಸ್ಕೃತ ಭಾಷೆಯಲ್ಲಿ ಬರೆದನು. ಹರ್ಷಚರಿತ ವನ್ನು ಭಾರತದ ಸಂಸ್ಕೃತಭಾಷೆಯ ಐತಿಹಾಸಿಕ ಬರಹ ಎಂದು ಬಣ್ಣಿಸಲಾಗಿದೆ. ಬಾಸ್ ಎಂಬ ಸಾಹಿತಿಯೂ ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದವರು. ಇವರ ಕಾವ್ಯಮೀಮಾಂಸೆ ಸ್ವಪ್ನವಾಸವದತ್ತ ಪ್ರಮುಖ ಕೃತಿಗಳಾಗಿವೆ.
9) ಋಗ್ವೇದದ ಪ್ರಾರ್ಥನೆಯನ್ನು ಪಠಣಕ್ಕಾಗಿ ಸಮಯ ಅನುಸಾರವಾಗಿ ಬದಲಾಯಿಸಿ ಒಟ್ಟುಗೂಡಿಸಿದ್ದನ್ನು------ ಎಂದು ಹೇಳಲಾಗುತ್ತದೆ.
A) ಋಗ್ವೇದ
B) ಅಥರ್ವವೇದ
C) ಯಜುರ್ವೇದ
D) ಸಾಮವೇದ.
ಉತ್ತರ :- ಸಾಮವೇದ.
ವಿವರಣೆ. :- ವೇದ ಎಂಬ ಪದದ ಅರ್ಥ ಜ್ಞಾನ ಅಥವಾ ತಿಳುವಳಿಕೆ. ವೇದಗಳಲ್ಲಿ ಪ್ರಮುಖವಾಗಿ ನಾಲ್ಕು ವಿಧಗಳಿವೆ ಅವುಗಳೆಂದರೆ ಋಗ್ವೇದ, ಯಜುರ್ವೇದ, ಸಾಮವೇದ ,ಅಥರ್ವವೇದ. ಋಗ್ವೇದವು ಅತ್ಯಂತ ಪ್ರಾಚೀನ ವೇದವಾಗಿದೆ ಯಜುರ್ವೇದವು ಯಜ್ಞಗಳ ಆಚರಣೆ. ಸಾಮವೇದ ಪ್ರಾರ್ಥನೆಗಳು ಸಂಗೀತ ರಾಗ ಸಂಯೋಜನೆಯನ್ನು ತಿಳಿಸಿದರೆ, ಅಥರ್ವವೇದವು ಮಾಯಾಮಂತ್ರ ಔಷಧಗಳ ಬಳಕೆಯ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನು ತಿಳಿಸುತ್ತವೆ.
10) ವೈಸ್ ಪ್ರೆಸಿಡೆಂಟ್------ ವರ್ಷಗಳ ಕಾಲ ಅಧಿಕಾರದಲ್ಲಿರಬಹುದು.
A) 4
B) 5
C) 6
D) 7.
ಉತ್ತರ :- 5.
ವಿವರಣೆ. :- ಭಾರತದ ಸಂವಿಧಾನ 67ನೇ ವಿಧಿಯಲ್ಲಿ ಸೂಚಿಸಿರುವಂತೆ ಉಪರಾಷ್ಟ್ರಪತಿಗಳ ಅಧಿಕಾರವಧಿಯು ಅಧಿಕಾರ ಸ್ವೀಕರಿಸಿದ ದಿನದಿಂದ ಐದು ವರ್ಷಗಳು. ಸಂವಿಧಾನದ 67ನೇ ಸಿ ವಿಧಿ ತಿಳಿಸಿರುವಂತೆ ಉತ್ತರಾಧಿಕಾರಿ ಅಧಿಕಾರಕ್ಕೆ ಬರುವವರೆಗೂ ಮುಂದುವರೆಯ ಬಹುದಾಗಿದೆ. ಉಪರಾಷ್ಟ್ರಪತಿಗಳು ಮರಣಹೊಂದಿದರೆ ಅಥವಾ ರಾಜೀನಾಮೆ ನೀಡಿದರೆ ಪದಚ್ಯುತಿಗೊಂಡ ತಕ್ಷಣ ಚುನಾವಣೆ ನಡೆಸಬೇಕು. ರಾಜ್ಯಸಭಾ ಸದಸ್ಯರ ಅಧಿಕಾರ ಅವಧಿಯು 6 ವರ್ಷವಾಗಿರುತ್ತದೆ. ಲೋಕಸಭೆಯ ಸದಸ್ಯರ ಅಧಿಕಾರ ಅವಧಿ ಐದು ವರ್ಷಗಳಾಗಿವೆ.
💥💥💥💥💥💥💥💥💥💥💥💥💥💥💥💥💥💥
0 Comments