Ad Code

Ticker

6/recent/ticker-posts

Click Below Image to Join Our Telegram For Latest Updates

[NOTES] ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನೋಟ್ಸ್

ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು 

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನೋಟ್ಸ್




ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!!  

ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.


🌼

ಶಾಸನಗಳು :- ಶಾಸನ ಎಂದರೆ ಬರೆಯಲ್ಪಟ್ಟಿರುವ ಎಂದರ್ಥ. ಕಲ್ಲು, ಬಂಡೆ, ಲೋಹ, ದಂತ, ಸುಟ್ಟ ಮಣ್ಣಿನ ಹಲಗೆ, ಮೊದಲಾದ ದೀರ್ಘಕಾಲ ಬಾಳಿಕೆ ಬರುವ ವಸ್ತುಗಳ ಮೇಲೆ ಶಾಸನಗಳನ್ನು ಬರೆಯಲಾಗುತ್ತಿತ್ತು. ಅಂದಿನ ಘಟನೆಗಳ ಜೊತೆಗೆ ನೇರ ಸಂಬಂಧಗಳನ್ನು ಹೊಂದಿರುವುದರಿಂದ ಶಾಸನಗಳು ಹೆಚ್ಚು ವಿಶ್ವಾಸಾರ್ಹ ಆಧಾರಗಳಾಗಿವೆ. ಅಶೋಕನ ಶಾಸನಗಳು ಭಾರತದಲ್ಲಿ ಕಂಡು ಬರುವ ಆರಂಭಿಕ ಶಾಸನಗಳಾಗಿವೆ. ಅಶೋಕನ ಬಹುತೇಕ ಶಾಸನಗಳು ಬ್ರಾಹ್ಮಿ ಲಿಪಿಯಲ್ಲಿವೆ. ಅವುಗಳ ಭಾಷೆ ಪ್ರಾಕೃತ ವಾಗಿದೆ. ಕನ್ನಡ, ತಮಿಳು, ತೆಲುಗು, ಸಂಸ್ಕೃತ, ಪ್ರಾಕೃತ ಭಾಷೆಗಳಲ್ಲಿನ ಸಾವಿರಾರು ಶಾಸನಗಳು ಕಂಡುಬರುತ್ತವೆ. ಸಮುದ್ರಗುಪ್ತನ ಅಲಹಾಬಾದ್ ಸ್ತಂಭ ಶಾಸನ, ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನ, ಕಾರವೇಲನ ಗುಂಪ ಶಾಸನ, ಮೊದಲಾದವುಗಳು ಅವರ ಸಾಧನೆಗಳನ್ನು ವಿವರಿಸುತ್ತವೆ. ಉತ್ತರಮೇರೂರಿನ ಶಾಸನ ಚೋಳರ ಗ್ರಾಮಾಡಳಿತವನ್ನು ತಿಳಿಸುತ್ತದೆ. ಇವಲ್ಲದೆ ಅನೇಕ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಸಂಗತಿಗಳನ್ನು ಶಾಸನಗಳು ತಿಳಿಸುತ್ತವೆ. ಅಂತಹ ಪ್ರಮುಖ ಶಾಸನಗಳು ಮತ್ತು ಅವುಗಳ ರಚನಾಕಾರರ ಮಾಹಿತಿ ನಿಮ್ಮ ಚಾಣಕ್ಯ ಕಣಜದಲ್ಲಿ.


🍁

 [NOTES] ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು 


👉ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ➖ *ಹರಿಷೇಣ*.


👉 ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ➖ *ಅಲಹಾ ಬಾದ್ ಸ್ತಂಭ ಶಾಸನ*.


👉ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ➖ *ಕೌಸಂಬಿ*.


👉 ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ➖*ಫೀರೋಜ್ ಷಾ ತುಘಲಕ್*.


👉 ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ➖ *ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ*.


👉 ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು  ➖*ಮಿರತ್ ಶಾಸನ ಹಾಗೂ ತೋಪ್ರ ಶಾಸನ*.


👉ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ➖ *ಕಂದಾಹಾರ್*.


👉ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ➖ *ರುದ್ರದಾಮನ್*.


👉ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ➖ *ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು*.


👉 ತೆಲುಗಿನ ಪ್ರಥಮ ಶಾಸನ ➖ *ಕಲಿಮಲ್ಲ ಶಾಸನ*.


👉ತಮಿಳಿನ ಪ್ರಥಮ ಶಾಸನ ➖ *ಮಾಂಗುಳಂ ಶಾಸನ*.


🌼🌼

👉 ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ➖ *ಅಶೋಕ*.


👉ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ➖ *ಬ್ರಾಹ್ಮಿ ಹಾಗೂ ಖರೋಷ್ಠಿ*.


👉ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ➖*13 ನೇ ಶಿಲಾ ಶಾಸನ*.


👉ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ➖ •1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ *ಜೇಮ್ಸ್ ಪ್ರಿನ್ಸಸ್*.


👉 ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ➖ *ಮಸ್ಕಿ ಶಾಸನ*.


👉 ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಅಶೋಕನ ಶಾಸನವನ್ನು ಪತ್ತೆ ಮಾಡಿದವರು➖ ಚಾರ್ಲ್ಸ್ ಬೇಡನ್.

(TET-2020) 


👉ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ➖ *ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ*.


👉ನಿಟ್ಟೂರಿನ ಶಾಸನದ ರಚನಾಕಾರ ➖ *ಉಪಗುಪ್ತ*.


👉 ನಿಟ್ಟೂರಿನ ಶಾಸನದ ಲಿಪಿಕಾರ ➖ *ಚಡಪ*.


👉 ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ➖ *1950ರಲ್ಲಿ*.


👉ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ➖ *ದೇವನಾಗರಿ*.


👉ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ➖ *ಬಬ್ರುಶಾಸನ*.


🍁🍁

👉ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ➖ *ಶಕರ ಪ್ರಸಿದ್ದ ಅರಸ ರುದ್ರಧಮನ*.


👉ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ➖ *ಸಂಜಾನ್ ದತ್ತಿ ಶಾಸನ*.


👉ದಂತಿದುರ್ಗ ➖*ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ*.


👉 ಒಂದನೇ ಕೃಷ್ಣ ➖*ಭಾಂಡ್ಕ ಮತ್ತು ತಾಳೇಗಾಂ ಶಾಸನ*.


👉 ಧೃವ ➖ *ಜೆಟ್ಟಾಯಿ ಶಾಸನ*.


👉ಅಮೋಘವರ್ಷ ➖ *ಸಂಜಾನ್ ತಾಮ್ರ ಶಾಸನ*.


👉 ಬಾದಾಮಿ ಶಾಸನದ ಕರ್ತೃ ➖*1 ನೇ ಪುಲಿಕೇಶಿ*.


👉ಮಹಾಕೂಟ ಸ್ತಂಭ ಶಾಸನದ ಕರ್ತೃ ➖*ಮಂಗಳೇಶ*.


👉ಮಹಾಕೂಟ ಸ್ತಂಭ ಶಾಸನ ➖  *ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ*.


👉ರವಿ ಕೀರ್ತೀ ➖ *ಐಹೋಳೆ ಶಾಸನ*.


👉 ಐಹೋಳೆ ಶಾಸನ ➖ *ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ*.


👉 ಚಂದ್ರವಳ್ಳಿ ಶಾಸನದ ಕರ್ತೃ ➖ *ಮಯೂರವರ್ಮ*. (ಚಿತ್ರದುರ್ಗ)


👉 ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ➖ *ಚಂದ್ರವಳ್ಳಿ ಶಾಸನ.*


🍁🍁

👉ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ➖ *ಚಂದ್ರವಳ್ಳಿ ಶಾಸನ*.


👉ಕನ್ನಡದ ಮೊಟ್ಟ ಮೊದಲ ಶಾಸನ ➖*ಹಲ್ಮಿಡಿ ಶಾಸನ.*


👉ಹಲ್ಮಿಡಿ ಶಾಸನ ಇಲ್ಲಿ ಇರುವುದು ➖*ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ*.


👉ಹಲ್ಮಿಡಿ ಶಾಸನದ ಕರ್ತೃ ➖  *ಕಾಕುಸ್ಥವರ್ಮ*.


👉 ತಾಳಗುಂದ ಶಾಸನದ ಕರ್ತೃ ➖*ಕವಿ ಕುಬ್ಜ*.


👉ತಾಳಗುಂದ ಶಾಸನವನ್ನು ಬರೆಯಿಸಿದವರು  ➖ *ಶಾಂತಿ ವರ್ಮ*. (ಶಿವಮೊಗ್ಗ ದಲ್ಲಿದೆ)


👉 ಮಹಿಪವೊಲು ತಾಮ್ರ ಶಾಸನದ ಕರ್ತೃ ➖*ಶಿವಸ್ಕಂದ ವರ್ಮ*.


👉 ವಾಯಲೂರು ಸ್ತಂಭ ಶಾಸನದ ಕರ್ತೃ ➖ *ರಾಜ ಸಿಂಹ* .


👉ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ➖*1ನೇ ಮಹೇಂದ್ರ ಮರ್ಮನ್ ನ*.

*ಕುಡಿಮಿಯಾ ಮಲೈ ಶಾಸನ*.


👉ನಾನಾ ಘಾಟ್ ಶಾಸನದ ಕರ್ತೃ ➖*ನಾಗನೀಕ*.


👉ಗುಹಾಂತರ ನಾಸಿಕ್ ಶಾಸನದ ಕರ್ತೃ ➖*ಗೌತಮೀ ಬಾಲಾಶ್ರೀ*.


👉ವೆಳ್ವಕುಡಿ ತಾಮ್ರ ಶಾಸನದ ಕರ್ತೃ ➖ *ಪರಾಂತಕ ಚೋಳ*.


🌼🌼🌼🌼🌼🌼🌼🌼🌼🌼🌼🌼🌼🌼🌼🌼🌼







Post a Comment

0 Comments

Important PDF Notes

Ad Code