Ad Code

Ticker

6/recent/ticker-posts

Click Below Image to Join Our Telegram For Latest Updates

[NOTES]5 Ways Of Acquiring Citizenship In India/ಪೌರತ್ವ ಪಡೆಯುವ ವಿಧಾನಗಳು

5 Ways Of Acquiring Citizenship In India/ಪೌರತ್ವ ಪಡೆಯುವ ವಿಧಾನಗಳು

[NOTES]5 Ways Of Acquiring Citizenship In India/ಪೌರತ್ವ ಪಡೆಯುವ ವಿಧಾನಗಳು

ಪೌರತ್ವ 

■ ಒಂದು ದೇಶದ ನಾಗರೀಕ ಮತ್ತು ರಾಜಕೀಯ ಹಕ್ಕುಗಳನ್ನು ಪೂರ್ತಿಯಾಗಿ ಅನುಭವಿಸುವ ವ್ಯಕ್ತಿಯು ಆ ದೇಶದ ಪೌರನಾಗಿರುತ್ತಾನೆ.

■ ಭಾರತದಲ್ಲಿ ಏಕಪೌರತ್ವ ಜಾರಿಯಲ್ಲದೆ.

■1955 ರಲ್ಲಿ ಪ್ರಥಮ ಪೌರತ್ವ ಕಾಯ್ದೆ ಜಾರಿಗೆ ಬಂದಿತು.

■ ಪೌರತ್ವದ ಬಗ್ಗೆ ಭಾಗ -2, ಕಲಂ 5-11 ವರೆಗೆ ತಿಳಿಸುತ್ತದೆ.

■ ಪೌರತ್ವಕ್ಕೆ 1986, 1992, 2003, 2005 ರಲ್ಲಿ ತಿದ್ದುಪಡಿ ಮಾಡಲಾಗಿದೆ.

🔷️📚🔷️

 ಪೌರತ್ವದ ನಿರ್ಣಯಗಳು

ಕಲಂ 5 - ಭಾರತದಲ್ಲಿ ಹುಟ್ಟಿರಬೇಕು ಇಲ್ಲವೇ ಅವನ ಪೋಷಕರು ಭಾರತದಲ್ಲಿ ಹುಟ್ಟಿರಬೇಕು.

ಕಲಂ 6 - 1948 ಜುಲೈ 19 ಕ್ಕಿಂತ ಮೊದಲು ಪಾಕಿಸ್ತಾನದಿಂದ ವಲಸೆ ಬಂದವರು.

■ ಕಲಂ 7 - 1947 ಮಾರ್ಚ 1 ರ ನಂತರ ಯಾವುದೇ ವ್ಯಕ್ತಿ ಪಾಕಿಸ್ತಾನಕ್ಕೆ ವಲಸೆಗಾರನಾಗಿದ್ದರೆ ಆತನು ಭಾರತದ ಪೌರತ್ವ ಕಳೆದುಕೊಳ್ಳುತ್ತಾನೆ.

■ ಕಲಂ 8 - ಭಾರತದ ಹೊರಗೆ ನೆಲೆಸಿರುವ ಕೆಲವು ಭಾರತೀಯ ಮೂಲಸ್ಥರ ನಾಗರಿಕತ್ವದ ಹಕ್ಕು.

■ ಕಲಂ 9 - ಸ್ವ-ಇಚ್ಛೆಯಿಂದ ವಿದೇಶಿ ನಾಗರಿಕತ್ವ ಪಡೆದ ವ್ಯಕ್ತಿಗಳಿಗೆ ನಾಗರಿಕತ್ವ ಇಲ್ಲದಿರುವುದು.

■ ಕಲಂ 10 - ನಾಗರಿಕ ಹಕ್ಕಿನ ಮುಂದುವರಿಕೆ.

■ ಕಲಂ 11 - ಕಾನೂನಿನ ಮೂಲಕ ಸಂಸತ್ತು ಪೌರತ್ವ ನಿಯಂತ್ರಿಸುವುದು.

🔷️📚🔷️

ಪೌರತ್ವ ಪಡೆಯುವ ವಿಧಾನಗಳು
01. ಹುಟ್ಟಿನಿಂದ (By Birth)
■ 1950 ಜನವರಿ 26 ರ ನಂತರ ಭಾರತದಲ್ಲಿ ಜನಿಸಿರುವ ಪ್ರತಿಯೊಬ್ಬನು ಭಾರತೀಯ ಪೌರನೆನಿಸುತ್ತಾನೆ.

■ ಭಾರತದಲ್ಲಿ ನೇಮಕಗೊಂಡಿರುವ ರಾಜತಾಂತ್ರಿಕ ಅಥವಾ ರಾಯಭಾರಿ ವರ್ಗದವರಿಗೆ ಜನಿಸಿದ ಮಕ್ಕಳು ಒಳಪಡುವುದಿಲ್ಲ.

■ ಶತ್ರು ರಾಷ್ಟ್ರದವರು ಯಾವುದೇ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದು ಮತ್ತು ಅಲ್ಲಿ ಶತ್ರುಗಳಿಗೆ ಜನಿಸಿದಂತಹ ಮಕ್ಕಳು ಇದರಡಿಯಲ್ಲಿ ಒಳಪಡುವುದಿಲ್ಲ.

02. ರಕ್ತ ಸಂಬಂಧ (By desent)
■ 1950 ಜನವರಿ 26 ರ ನಂತರ  ವಿದೇಶದಲ್ಲಿ ನೆಲಿಸಿರುವ ಭಾರತೀಯ ಪೌರತ್ವವಿರುವ ಭಾರತೀಯ ತಂದೆ-ತಾಯಿಗಳಿಗೆ ಜನಿಸಿದ ಮಕ್ಕಳು ರಕ್ತ ಸಂಬಂಧದ ಮೂಲಕ ಪೌರತ್ವ ಪಡೆಯುತ್ತಾರೆ.

03. ನೋಂದಣಿ ಮೂಲಕ (By Registration)
💥ನೊಂದಣಿ ಮೂಲಕ ಪೌರತ್ವ ಪಡೆಯುವವರು ಕೆಳಗಿನ
5 ವರ್ಷಗಳಲ್ಲಿ ಬರುವಂತಿರಬೇಕು.

■ 6 ತಿಂಗಳಿಗೆ ಕಡಿಮೆ ಇಲ್ಲದಂತೆ ತಾತ್ಕಾಲಿಕವಾಗಿ ಭಾರತದಲ್ಲಿಯೇ ವಾಸವಾಗಿದ್ದು ಭಾರತದಲ್ಲಿ ಜನಿಸಿರುವವರು ನೋಂದಣಿಗಾಗಿ ಅರ್ಜಿ ನೀಡುವ ಮೂಲಕ ಪಡೆಯುವಿಕೆ.

■ ಭಾರತದಲ್ಲಿ ಜನಿಸಿದ್ದು ತಾತ್ಕಾಲಿಕವಾಗಿ ಯಾವುದೇ ರಾಷ್ಟ್ರದಲ್ಲಿ ನೆಲೆಸಿರುವವರು ಅರ್ಜಿ ನೋಂದಣಿ ಮಾಡಿಕೊಳ್ಳುವ ಮೂಲಕ ಪೌರತ್ವ ಪಡೆಯುವಿಕೆ.

■ ಭಾರತದ ಪೌರನನ್ನು ವಿವಾಹವಾದ ಮಹಿಳೆಯು ಅರ್ಜಿ ಸಲ್ಲಿಸಿ ಪೌರತ್ವ ಪಡೆಯುವಿಕೆ .

■ ಭಾರತದ ನಾಗರಿಕತ್ವ ಪಡೆದಿರುವವರ ವಯಸ್ಕರಲ್ಲದ ಮಕ್ಕಳ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳುವ ಮೂಲಕ ಪೌರತ್ವ ಪಡೆಯುವಿಕೆ.

■ ವಯಸ್ಕರು ಕಾಮನ್ವೆಲ್ತ್  ರಾಷ್ಟ್ರಗಳ ಪೌರತ್ವ ವಿರುವವರು ಭಾರತದ ಪೌರತ್ವ ಬಯಸಿದ್ದರೆ ಅರ್ಜಿ ಸಲ್ಲಿಸಿ ನೋಂದಣಿ ಮೂಲಕ ಪಡೆಯುವಿಕೆ.

04. ಸಹಜವಾಗಿ (By Naturalisation)
■ ಭಾರತೀಯರಿಗೆ ಯಾವ ದೇಶದಲ್ಲಿ ಪ್ರಜೆಗಳಾಗುವುದಕ್ಕೆ  ಸಾಧ್ಯವಿಲ್ಲವೋ ಅಂತಹ ದೇಶದಿಂದ ಬಂದಿರುವವರಿಗೆ.

■ ಆತ ಸೇರಿರುವಂತಹ ರಾಷ್ಟ್ರದ ಪೌರತ್ವವನ್ನು ಪರಿತ್ಯಾಗ
ಮಾಡಿದಾಗ.

■ ಒಂದು ವರ್ಷ ಭಾರತದಲ್ಲಿ ನೆಲೆಸಿರುವವರು ಅಥವಾ
ಭಾರತ ಸರ್ಕಾರದಲ್ಲಿ ಇರುವ ಉದ್ಯೋಗಿಗಳು.

■ ಮೇಲಿನ ಒಂದು ವರ್ಷದಲ್ಲಿ ಅರ್ಜಿಸಲ್ಲಿಸಿದ್ದು, ಏಳು ವರ್ಷಗಳಲ್ಲಿ ಒಟ್ಟಾರೆ ನಾಲ್ಕು ವರ್ಷದವರೆಗೆ ಕಡಿಮೆ ಇಲ್ಲದಂತೆ ಭಾರತದಲ್ಲಿ ನೆಲೆಸಿರುವ ಅಥವಾ ಉದ್ಯೋಗದಲ್ಲಿರುವವರು.

■ ಉತ್ತಮ ನಡತೆಯುಳ್ಳವನಾಗಿರಬೇಕು.

■ ಈ ಭಾರತ ಸಂವಿಧಾನದಲ್ಲಿ ನಮೂದಿತವಾಗಿರುವ
ಭಾಷೆಯ ಬಗ್ಗೆ ಅವಶ್ಯಕ ಜ್ಞಾನವಿರುವವರು.

05. ಭೂಪ್ರದೇಶ ಸೇರ್ಪಡೆಯಿಂದ
(By Incorporation of Territory)
■ ಯಾವುದಾದರೂ ಪ್ರದೇಶವು ಭಾರತದ ಭೂಪ್ರದೇಶಕ್ಕೆ
ಸೇರ್ಪಡೆಯಾದರೆ, ಆ ಪ್ರದೇಶದಲ್ಲಿರುವಂತಹ ಜನತೆ ಭಾರತ ಸರ್ಕಾರದ ಒಂದು ಆದೇಶದ ಮೂಲಕ ಭಾರತದ ಪೌರರಾಗಿರುತ್ತಾರೆ.

💥ವಿದೇಶಿಯರಿಗೆ ಪೌರತ್ವ
■ ಪರದೇಶದ ಪೌರತ್ವ ತ್ಯಾಗ ಮಾಡಿರಬೇಕು.
■ ಭಾರತ ದೇಶಕ್ಕೆ ವಿಧೇಯನಾಗಿರಲು ಪ್ರಮಾಣ ಸ್ವೀಕರಿಸಬೇಕು.
■ ಸಂವಿಧಾನ ಗುರುತಿಸಿದ ಭಾಷೆಯ ಮೇಲೆ ಸಾಕಷ್ಟು ಜ್ಞಾನ ಹೊಂದಿರಬೇಕು.
■ ಭಾರತೀಯರ ಪೌರತ್ವ ಪಡೆಯಲು ಅವಕಾಶ
ನೀಡಿರುವ ದೇಶದವನಾಗಿರಬೇಕು.
🔷️📚🔷️










Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Health And Value Education in Kannada PDF For CET/GPSTR Aspirants
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] 6 ರಿಂದ 8 ಪದವಿದರ ಶಿಕ್ಷಕರ ನೇಮಕಾತಿ ಪರೀಕ್ಷೆಗಾಗಿ ಮೌಲ್ಯ ಶಿಕ್ಷಣ ಪಿಡಿಎಫ್ GPSTR ಸ್ಪರ್ಧಾರ್ಥಿಗಳಿಗಾಗಿ
Health Education PDF Notes For GPSTR Competitive Exams/ಆರೋಗ್ಯ ಶಿಕ್ಷಣ ಪಿಡಿಎಫ್
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
Yoga, Health And Value Education PDF
Educational Psychology Quiz Useful for PSTR/GPSTR/HSTR Competitive Exams Part-02/ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆಗಳು

Important PDF Notes

Ad Code