Ad Code

Ticker

6/recent/ticker-posts

Click Below Image to Join Our Telegram For Latest Updates

100-GK MCQ's With Answers For All Competitive Exams/ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು

100-GK MCQ's With Answers For All Competitive Exams 

100 ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು

100-GK MCQ's With Answers For All Competitive Exams

💠💠

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸ್ನೇಹಿತರೇ 100 ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು/ ಮಾದರಿ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ ವಿಷಯವಾದ್ದರಿಂದ ಅಪಲೋಡ ಮಾಡಲಾಗುತ್ತದೆ. ನೋಟ್ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ.
💠💠

100-GK MCQ's With Answers For All Competitive Exams 

100 ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು


[1] ಸತತ ಮೂರು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು?
1)ಆರ್ ನರಸಿಂಹಾಚಾರ್ಯ
2) ಕರ್ಪೂರ ಶ್ರೀನಿವಾಸರಾವ್
3)ಎಮ್ ವೆಂಕಟಕೃಷ್ಣಯ್ಯ
4) ಎಚ್ ವಿ ನಂಜುಡಯ್ಯ+++


[2] ಇತ್ತೀಚೆಗೆ ಇಟಾಲಿಯನ್ ಗೋಲ್ಡನ್ ಸ್ಯಾಂಡ್ ಆರ್ಟ್ ಅವಾರ್ಡ್‍ಗೆ ಯಾವ ಭಾರತೀಯ ಮರಳು ಕಲಾವಿದನನ್ನು ಆಯ್ಕೆ ಮಾಡಲಾಗಿದೆ?
1) ಮನೀಷಾ ಸ್ವರ್‍ಂಕರ್
2) ಧನ್‍ರಾಜ್ ಶೆಲ್ಕೆ
3) ಸುದರ್ಶನ್ ಪಟ್ನಾಯಕ್+++
4) ನಿತೀಶ್ ಭಾರತಿ


[3] ಕೆಳಗಿನ ಪ್ರಮುಖ ಗಿರಿಧಾಮಗಳನ್ನು ಮತ್ತು ಅವುಗಳಿರುವ ರಾಜ್ಯಗಳನ್ನು ಹೊಂದಿಸಿ ಬರೆಯಿರಿ.
1)ನೈನಿತಾಲ್        ಎ)ಮೇಘಾಲಯ
2)ಡಾರ್ಜಲಿಂಗ್    ಬಿ)ಮಧ್ಯಪ್ರದೇಶ
3)ಪಚಮರಿ          ಸಿ)ಪಶ್ಚಿಮ ಬಂಗಾಳ
4)ಶಿಲ್ಲಾಂಗ್         ಡಿ)ಉತ್ತರಾಖಂಡ

1)ಡಿಸಿಬಿಎ+++
2)ಸಿಡಿಎಬಿ
3)ಬಿಎಡಿಸಿ
4)ಎಬಿಸಿಡಿ


[4] ಭಾರತದ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
1)ಭಾರತ ಸಂವಿಧಾನವು ನ್ಯಾಯಾಂಗವನ್ನು ಸ್ವತಂತ್ರವ ನ್ನಾಗಿರಿಸಿದೆ
2)ನ್ಯಾಯಾಂಗವು ಕಾರ್ಯಾಂಗದಿಂದ ಸ್ವತಂತ್ರವಾಗಿದೆ
3)ಭಾರತದ ನ್ಯಾಯಾಂಗವು ಏಕೀಕೃತವಾಗಿದೆ
4)ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ಗಳೆರಡೂ ಪ್ರತ್ಯೇಕ ವ್ಯವಸ್ಥೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ+++


[5] ಕೆಳಗಿನ ಹೇಳಿಕೆಗಳನ್ನು ಗಮನಿಸಿ
ಎ)1976ರಲ್ಲಿ 42ನೇ ತಿದ್ದುಪಡಿಯ ಮೂಲಕ ಭಾರತ ಸಂವಿಧಾನಕ್ಕೆ 4 ಎ' ಭಾಗವನ್ನು ಸೇರ್ಪಡೆ ಮಾಡಿ 51 ಎ' ವಿಧಿಯ ಅಡಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರ್ಪಡೆ ಮಾಡಲಾಯಿತು 
ಬಿ)ಮೂಲಭೂತ ಕರ್ತವ್ಯಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ
1)ಎ ಮಾತ್ರ ಸರಿ
2) ಬಿ ಮಾತ್ರ ಸರಿ
3)ಎ ಮತ್ತು ಬಿ ಸರಿ+++
4) ಎ ಮತ್ತು ಬಿ ತಪ್ಪು


[6] ಕೆಳಗಿನ ಜ್ವಾಲಾಮುಖಿಗಳು ಮತ್ತು ಅವುಗಳಿರುವ ಸ್ಥಳಗಳಿಗೆ ಸಂಬಂಧಿಸಿದಂತೆ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿಲ್ಲ?
1)ಮೌನಲೋವಾ ಹವಾಯಿ ದ್ವೀಪ
2)ಕ್ರಕಟೋವಾ ಇಂಡೋನೆಷ್ಯಾ
3)ವೆಸುವಿಯಸ್ ಇಟಲಿ
4)ಫ್ಯೂಜಿಯಾಮಾ ಇಕ್ವೇಡಾರ್+++


[7] ಬ್ಯಾಂಕಿಂಗ್ ವಲಯದಲ್ಲಿ ಸ್ಪರ್ಧೆಯನ್ನು ಹೆಚ್ಚಿಸುವ ಗುರಿಯೊಂದಿಗೆ ವ್ಯಾಪಕ ಸುಧಾರಣೆಯನ್ನು ತರಲು ಕೇಂದ್ರ ಸರ್ಕಾರ 1991 ರಲ್ಲಿ ಯಾರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು?
1) ಎಂ ನರಸಿಂಹಮ್+++
2) ರಂಗರಾಜನ್
3) ರಾಜಾ ಚೆಲ್ಲಯ್ಯ
4) ಕೇಳ್ಕರ್

[8] ಈ ಕೆಳಗಿನ ಯಾವುದು ಸಿಫಿಲಿಸ್ ಕಾಯಿಲೆಯನ್ನುಂಟು ಮಾಡುತ್ತದೆ?
1) ವೈರಸ್
2) ಬ್ಯಾಕ್ಟೀರಿಯ+++
3) ಫಂಗಸ್
4) ಯಾವುದೂ ಅಲ್ಲ



[9] ತೋಟಗಾರಿಕೆ ಬೆಳೆಗಳಿಗೆ ಯೋಗ್ಯವಾದ ಜಂಬಿಟ್ಟಿಗೆ ಮಣ್ಣಿನಲ್ಲಿ ಈ ಕೆಳಗಿನ ಯಾವ ಖನಿಜಾಂಶಗಳು ಹೇರಳವಾಗಿರುತ್ತವೆ?
1)ಕಬ್ಬಿಣ ಮತ್ತು ಅಲ್ಯೂಮಿನಿಯಂ+++
2)ಸಾರಜನಕ ಮತ್ತು ರಂಜಕ
3)ಮೆಗ್ನೀಶಿಯಂ ಮತ್ತು ಅಲ್ಯೂಮಿನಿಯಂ
4)ಸಿಲಿಕೇಟ್ ಮತ್ತು ಕ್ಯಾಲ್ಸಿಯಂ


[10] ಅಸ್ಸೋಂ ರಾಜ್ಯವು ಭಾರತದಲ್ಲಿ ಅತಿ ಹೆಚ್ಚು ಚಹಾ ಬೆಳೆಯುವ ರಾಜ್ಯವಾಗಿದೆ. ಹಾಗಾದರೆ ಅತಿ ಹೆಚ್ಚು ತಂಬಾಕು ಬೆಳೆಯುವ ರಾಜ್ಯ ಯಾವುದು?
1)ಗುಜರಾತ್
2)ಆಂಧ್ರಪ್ರದೇಶ+++
3)ಕೇರಳ
4)ಮಹಾರಾಷ್ಟ್ರ
💠💠

[11] ಲೋಕಸಭೆಯ ಸಚಿವಾಲಯದ ಮುಖ್ಯಸ್ಥನಾದ ಲೋಕಸಭೆಯ ಮಹಾಕಾರ್ಯದರ್ಶಿಯನ್ನು
1)ಲೋಕಸಭಾ ಸದಸ್ಯರು ಆಯ್ಕೆಮಾಡುತ್ತಾರೆ
2)ಸಂಸತ್ತಿನ ಉಭಯ ಸದನಗಳ ಸದಸ್ಯರು ಆಯ್ಕೆ ಮಾಡುತ್ತಾರೆ
3)ರಾಷ್ಟ್ರಪತಿ ನೇಮಿಸುತ್ತಾರೆ
4)ಲೋಕಸಭಾ ಸ್ಪೀಕರ್‍ರವರು ನೇಮಿಸುತ್ತಾರೆ+++


[12] ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
1)ಭೀಮಸೇನ್ ಜೋಶಿ
2) ಪಿ ಬಿ ಶ್ರೀನಿವಾಸ್
3)ಶಿವಮೊಗ್ಗ ಸುಬ್ಬಣ್ಣ+++
4) ಎಲ್ ಎನ್  ಶಾಸ್ತ್ರೀ


[13 ಭಾರತ ದೇಶದ ಹೊರಗಿನ ಭದ್ರತೆ ಬಗ್ಗೆ ಗುಪ್ತಚರ ನಡೆಸುವ ಸಂಸ್ಥೆ ಯಾವುದು?
1)ಗುಪ್ತದಳ
2) ಕೇಂದ್ರ ತನಿಖಾ ದಳ (CBI)
3)RAW(Research and analysis Wing)+++
4)ಕೇಂದ್ರೀಯ ಜಾಗೃತ ಆಯೋಗ


[14] ಇತ್ತೀಚೆಗೆ 2019ರ 35ನೇ ಆಸಿಯಾನ್ ಶೃಂಗಸಭೆಯನ್ನು ಈ ಕೆಳಗಿನ ಯಾವ ನಗರದಲ್ಲಿ ಆಯೋಜಿಸಲಾಗಿತ್ತು ?
1) ನವದೆಹಲಿ
2) ಶಾಂಘೈ
3) ಬ್ಯಾಂಕಾಕ್+++
4) ಕಠ್ಮಂಡು


[15] ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಭಾರತದ ಆಕಸ್ಮಿಕ ನಿಧಿಯಿಂದ ಹಣವನ್ನು ಯಾರು ತೆಗೆಯಬಹುದು?
1)ಪ್ರಧಾನಮಂತ್ರಿ
2) ಕೇಂದ್ರ ಹಣಕಾಸು ಮಂತ್ರಿ
3)ರಾಷ್ಟ್ರಪತಿ+++
4)ಕಂಟ್ರೋಲರ್ ಮತ್ತು ಆಡಿಟರ್ ಜನರಲ್


[16] ಪೂರ್ವದಲ್ಲಿನ ತಮಿಳುನಾಡಿನ ಕರಾವಳಿಗೆ ಕೋರಮಂಡಲ ತೀರ ಎಂದು ಕರೆಯುವರು. ಹಾಗಾದರೆ ಕೇರಳದ ಕರಾವಳಿಗೆ ಏನೆಂದು ಕರೆಯುವರು?
1)ಕೊಂಕಣ ತೀರ
2)ಮಲಬಾರ್ ತೀರ+++
3)ಉತ್ಕಲ ತೀರ
4)ಸರ್ಕಾರ್ ತೀರ


[17] ಯಾವ ವರ್ಷದಲ್ಲಿ ಅರ್ಜುನ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು?
1)1965
2)1963
3)1961+++
4)1975


[18 ]ಕೆಲ್ವಿನ್ ಮಾಪಕದಲ್ಲಿ ಮಾನವನ ದೇಹದ ಸಾಮಾನ್ಯ ತಾಪಮಾನವೆಷ್ಟು?
1)310 ಕೆಲ್ವಿನ್+++
2) 320 ಕೆಲ್ವಿನ್
3)330 ಕೆಲ್ವಿನ್
4) 340 ಕೆಲ್ವಿನ್


[19] ಈ ಕೆಳಗಿನ ಪರಮಾಣು ವಿದ್ಯುತ್ ಕೇಂದ್ರಗಳು ಮತ್ತು ಅವುಗಳಿರುವ ರಾಜ್ಯಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿದೆ?
1)ನರೋರ ಉತ್ತರ ಪ್ರದೇಶ+++
2)ರಾಣಾಪ್ರತಾಪ ಸಾಗರ ಗುಜರಾತ್
3)ಕಕ್ರಪಾರಾ – ರಾಜಸ್ತಾನ
4)ತಾರಾಪುರ ಆಂಧ್ರಪ್ರದೇಶ


[20] ಈ ಕೆಳಗಿನವರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು ಯಾರು?
1)ನ್ಯಾ ಎಸ್ ಆರ್ ನಾಯಕ್
2) ನ್ಯಾ ರಂಗನಾಥ ಮಿಶ್ರಾ+++
3) ನ್ಯಾ ಎಂ ಎನ್ ವೆಂಕಟಾಚಲಯ್ಯ
4)ನ್ಯಾ ಜೆ ಎಸ್ ವರ್ಮ
💠💠

[21] ತೂಕವುಳ್ಳ ಯಾವುದೇ ಕಾಯದ ಕೆಳಮುಖ ಚಲನೆಯ ವೇಗ ಅದರ ಗಾತ್ರಕ್ಕೆ ಅನುಪಾತೀಯವಾಗಿರುವುದಿಲ್ಲ ಎಂದು ತೋರಿಸಿಕೊಟ್ಟವರು ಯಾರು?
1)ನ್ಯೂಟನ್
2) ಗೆಲಿಲಿಯೋ+++
3)ಫ್ಯಾರಡೆ
4) ಫಾಸ್ಕಲ್


[22] ಮೌಂಟ್ ಎವರೆಸ್ಟ್ ಪರ್ವತವನ್ನು ಏರಿದ ಮೊದಲ ಮಹಿಳೆ ಯಾರು?
1) ಮೇರಿ ಜೋಸ್ ಪೆರೆಕ್
2) ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್
3) ಜುಂಕೊ ತಬೀ+++
4) ಜಾಕಿ ಜಾಯ್ನರ್ ಕೆರ್ಸಿ

[23] ಉಪೋಷ್ಣ ವಲಯಗಳ ಹೆಚ್ಚು ಒತ್ತಡ ಪಟ್ಟಿಗಳಿಂದ ಉಪಧೃವಿಯ ಕಡಿಮೆ ಒತ್ತಡ ಪಟ್ಟಿಗಳ ಕಡೆಗೆ ಬೀಸುವ ಮಾರುತಗಳು
1)ವಾಣಿಜ್ಯ ಮಾರುತಗಳು
2)ಪ್ರತಿವಾಣಿಜ್ಯ ಮಾರುತಗಳು+++
3)ಧೃವಿಯ ಮಾರುತಗಳು
4)ಮಾನ್ಸೂನ್ ಮಾರುತಗಳು


[24] ಭಾರತದ ರಾಷ್ಟ್ರಪತಿಯವರನ್ನು ಮಹಾಭಿಯೋಗ ಮಾಡುವುದರ ಬಗ್ಗೆ ತಿಳಿಸುವ ಸಂವಿಧಾನದ ವಿಧಿ ಯಾವುದು?
1)60ನೇ ವಿಧಿ
2)61ನೇ ವಿಧಿ+++
3)62ನೇ ವಿಧಿ
4)63ನೇ ವಿಧಿ


[25] NPA (Non-Performing asset)ಎಂಬುದು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
1)ಕೃಷಿ
2) ಬ್ಯಾಂಕ್+++
3)ಪ್ರವಾಸೋದ್ಯಮ
4) ಷೇರುಪೇಟೆ


[26] ಈ ಕೆಳಗಿನವುಗಳಲ್ಲಿ ಚತುರ್ವಣ ಪದ್ಧತಿ ಬಗ್ಗೆ ತಿಳಿಸುವ ಪುರುಷ ಸೂಕ್ತವನ್ನು ಒಳಗೊಂಡಿರುವ ಋಗ್ವೇದದ ಮಂಡಲ ಯಾವುದು?
1)4ನೇ ಮಂಡಲ
2) 6ನೇ ಮಂಡಲ
3)8ನೇ ಮಂಡಲ
4)10ನೇ ಮಂಡಲ+++


[27] ಏಳು ಪಗೋಡಗಳೆಂದು ಪ್ರಸಿದ್ಧವಾಗಿರುವ ಮಹಾಬಲಿಪುರದ ಶಿಲಾರಥಗಳನ್ನು ಈ ಹೆಸರಿನಿಂದ ಕರೆಯಲಾಗುವುದು
1)ಪಾಂಡವರು+++
2)ಸಪ್ತರ್ಷಿಗಳು
3)ಗಂಧರ್ವರು
4)ಸಪ್ತಾಶ್ವಗಳು


[28] ಭಾರತದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಹೊಂದಿರುವ ಸಂಸ್ಥೆ
1)ರಾಜ್ಯ ವ್ಯಾಪಾರ ನಿಗಮ
2)ಭಾರತೀಯ ಆಹಾರ ನಿಗಮ+++
3)ಸಾರ್ವಜನಿಕ ವಿತರಣಾ ಸಂಸ್ಥೆ
4)ಆಹಾರ ಮತ್ತು ನಾಗರೀಕ ಪೂರೈಕೆ ಮಂತ್ರಾಲಯ


[29 ]ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ)ರಾಜಾರಾಮ್ ಮೋಹನ್‍ರಾಯ್‍ರವರು ಭಾರತೀಯ ಸಮಾಜದ ಪುನರುಜ್ಜೀವನದ ನಿರ್ಮಾಪಕ ಎಂದು ಪ್ರಸಿದ್ಧಿ ಹೊಂದಿದ್ದರು 
ಬಿ)ಆದಿ ಬ್ರಹ್ಮಸಮಾಜ ರಾಜಾರಾಮ್ ಮೋಹನ್‍ರಾಯ್‍ರವರು ಆರಂಭಿಸಿದ ಮೊದಲ ಸಂಘಟನೆಯಾಗಿದೆ
1)ಎ ಸರಿ, ಬಿ ತಪ್ಪು+++
2)ಬಿ ಸರಿ, ಎ ತಪ್ಪು
3)ಎ ಮತ್ತು ಬಿ ಸರಿ
4)ಎ ಮತ್ತು ಬಿ ತಪ್ಪು


[30] ಭೂಕಂಪನದಿಂದ ನೀಳ ಅಲೆಗಳು, ಅಡ್ಡ ಅಲೆಗಳು, ಮೇಲ್ಮೈ ಅಲೆಗಳು ಎಂಬ 3 ಪ್ರಕಾರದ ಅಲೆಗಳು ಹೊರ ಹೊಮ್ಮುತ್ತವೆ. ಹಾಗಾದರೆ ಇವುಗಳಲ್ಲಿ ಅತ್ಯಂತ ವಿನಾಶಕಾರಿ ಅಲೆಗಳು ಯಾವುವು?
1)ಅಡ್ಡ ಅಲೆಗಳು
2) ನೀಳ ಅಲೆಗಳು
3)ಮೇಲ್ಮೈ ಅಲೆಗಳು+++
4) ಯಾವುದೂ ಅಲ್ಲ
💠💠

[31] ಮಿಕಿರ್‍ಗಳು ಈ ಕೆಳಗಿನ ಯಾವ ರಾಜ್ಯದ ಆದಿವಾಸಿ ಗುಂಪಾಗಿದೆ?
1)ಅಸ್ಸೋಂ+++
2) ತ್ರಿಪುರ
3)ಮಧ್ಯಪ್ರದೇಶ
4)ಮಹಾರಾಷ್ಟ್ರ


[32] ಭಾರತದ ಉಪರಾಷ್ಟ್ರಪತಿಯವರನ್ನು ಆಯ್ಕೆ ಮಾಡುವವರು
1)ರಾಜ್ಯಸಭಾ ಸದಸ್ಯರು
2)ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರು+++
3)ಭಾರತದ ರಾಷ್ಟ್ರಪತಿ
4)ರಾಜ್ಯಸಭೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಸದಸ್ಯರು


[33] ಈ ಕೆಳಗಿನವುಗಳಲಿ ಮಾನವ ದೇಹದ ಅತಿದೊಡ್ಡ ಗ್ರಂಥಿ
1)ಥೈರಾಯಿಡ್
2) ಪಿಟ್ಯೂಟರಿ
3)ಪೀನಿಯಲ್
4) ಪಿತ್ತಜನಕಾಂಗ+++


[34] ಹಸಿರು ಕಾಯಿಲೆಗಳನ್ನು ಕೃತಕವಾಗಿ ಪಕ್ವಗೊಳಿಸಲು ಉಪಯೋಗಿಸುವ ರಸಾಯನಿಕ
1) ಈಥೇನ್
2) ಮೀಥೇನ್
3) ಇಥಿಲೀನ್+++
4) ಅಸಿಟಲೀನ್


[35 ]ಗುಂತರ್ ಗ್ರಾಸ್ ಎಂದರೆ ಯಾರು?
1)ಮ್ಯಾನ್‌ಬೂಕರ್ ಪ್ರಶಸ್ತಿ ವಿಜೇತ ಹಂಗೇರಿಯಾದ ಲೇಖಕ
2)ನೊಬೆಲ್ ಪ್ರಶಸ್ತಿ ವಿಜೇತ ಜರ್ಮನ್ ಲೇಖಕ+++
3)ಅಮೆರಿಕಾದ ಹುಲ್ಲುಗಾವಲು ಪ್ರದೇಶ
4)ರೊಹಿಂಗ್ಯ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ಮ್ಯಾನ್ಮಾರ್ ದೇಶವು ನೀಡಬೇಕನ್ನುತ್ತಿರುವ ಅಮೆರಿಕಾದ ರಾಜತಾಂತ್ರಿಕ


[36] ಕಾಲರಾ ಮತ್ತು ಕ್ಷಯದ ಜೀವಾಣುವನ್ನು ಸಂಶೋಧಿಸಿದವರು
1) ಜೋಸೆಫ್ ಲಿಸ್ಟೆರ್
2) ರಾಬರ್ಟ್ ಕೋಚ್+++
3) ಲೂಯಿಸ್ ಪಾಶ್ಚರ್
4) ರೊನಾಲ್ಡ್ ರಾಸ್


[37] ಈ ಕೆಳಗಿನ ಯಾವುದನ್ನು ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲಾಗುವುದು?
1)ದಾವಣಗೆರೆ
2) ಕೊಯಮತ್ತೂರು+++
3)ಕೊಚ್ಚಿ
4) ಟುಟ್ಯಿಕೋರಿನ್


[38] ವಾಯ್ಸ್ ಮೇಲ್‍ಅನ್ನು ಕಂಡು ಹಿಡಿದವರು ಯಾರು?
1) ಅಲೆಗ್ಸಾಂಡರ್ ಗ್ರಹಾಂಬೆಲ್
2) ಜೆ ಎ ಫ್ಲೆಮಿಂಗ್
3) ಎ ಪೌಲ್ಸನ್
4) ಗೋರ್ಡಾನ್ ಮ್ಯಾಥ್ಯೂ+++


[39 ]ಹೈಡ್ರೋಫೋನ್' ಅನ್ನು
1) ದೇಹದ ಒಳಗಿನ ಅಂಗಗಳನ್ನು ಪರೀಕ್ಷಿಸಲು ಉಪಯೋಗಿಸುತ್ತಾರೆ
2) ನೀರಿನ ಕೆಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ+++
3) ವಿದ್ಯುಚ್ಛಕ್ತಿಯ ಇರುವಿಕೆಯನ್ನು ಅಳೆಯಲು
4) ಸಮುದ್ರದ ಆಳವನ್ನು ಅಳೆಯಲು ಉಪಯೋಗಿಸುತ್ತಾರೆ


[40] ಗ್ರಹಗಳು ಕಾಂತಕ್ಷೇತ್ರವನ್ನು ಹೊಂದಿರಲು ಕಾರಣವೇನೆಂದರೆ
1)ಡಾಪ್ಲರ್ ಪರಿಣಾಮ
2) ಡೈನಮೋ ಪರಿಣಾಮ
3)ದ್ಯುತಿ ವಿದ್ಯುತ್ ಪರಿಣಾಮ
4)ತನ್ನ ಅಕ್ಷದ ಮೇಲಿನ ಭ್ರಮಣೆ+++
💠💠

[41] ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ)ಗುರು ಗೋವಿಂದ ಸಿಂಗ್‍ರು ಸಿಖ್‍ರಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡುವ ಖಾಲ್ಸಾ ಪಂಥವನ್ನು ಆರಂಭಿಸಿದರು 
ಬಿ) ಗುರು ಅರ್ಜುನದೇವ ಔರಂಗ್‍ಜೇಬ್‍ನಿಂದ ಹತ್ಯೆಗೊಳಗಾದನು
1)ಎ ಸರಿ, ಬಿ ತಪ್ಪು+++
2)ಬಿ ಸರಿ, ಎ ತಪ್ಪು
3)ಎ ಮತ್ತು ಬಿ ಸರಿ
4)ಎ ಮತ್ತು ಬಿ ತಪ್ಪು


[42] ಹಣಕಾಸು ಕ್ಷೇತ್ರದಲ್ಲಿ ಆಗಾಗ ಕೇಳಿಬರುವ GDR ಎಂಬುದರ ಪೂರ್ಣರೂಪ
1)Gross Depositary Ratio
2)Gross Domestic Receipt
3)Global Depositary Receipt+++
4)Global Domestic Revenue


[43] ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಈ ಕೆಳಗಿನ ಯಾವ ನಗರಗಳಲ್ಲಿದೆ?
ಎ) ಮುಂಬೈ
ಬಿ) ನವದೆಹಲಿ+++
ಸಿ) ಭೋಪಾಲ್
ಡಿ) ಕೋಲ್ಕತಾ


[44] 49ನೇ ಸಮಾಂತರ ರೇಖೆಯಿಂದ ಬೇರ್ಪಡುವ ರಾಷ್ಟçಗಳು
1)ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ವಿಯೆಟ್ನಾಂ
2) ಅಮೆರಿಕ ಮತ್ತು ಕೆನಡಾ+++
3)ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ
4)ಪೊಲಂಡ್ ಮತ್ತು ಜರ್ಮನಿ


[45] ಈ ಕೆಳಗಿನವುಗಳಲ್ಲಿ ಮಾನವನ ದೇಹದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಂಡುಬರುವ ಅಂಶ
1)ಕ್ಯಾಲ್ಸಿಯ+++
2) ಪಾಸ್ಪರಸ್
3)ಸೋಡಿಯಂ
4) ಸಲ್ಫರ್


[46] ಗ್ರಾö್ಯಂಡ್ ಟ್ರಂಕ್ ರಸ್ತೆ'ಯನ್ನು ನಿರ್ಮಿಸಿದವರು
1)ಷಹಜಹಾನ್
2) ಅಕ್ಬರ್
3)ಷೇರ್ ಶಾ ಸೂರಿ+++
4) ಜಹಾಂಗೀರ್


[47] ಸೂರ್ಯನ ಸುತ್ತ ಗ್ರಹಗಳ ಚಲನೆ, ಭೂಮಿಯ ಸುತ್ತ ಚಂದ್ರನ ಚಲನೆ ಇವು ಯಾವ ಚಲನೆಗೆ ಉದಾಹರಣೆಯಾಗಿದೆ ?
1)ವೃತ್ತೀಯ ಚಲನೆ
2) ಏಕರೂಪ ವೃತ್ತೀಯ ಚಲನೆ+++
3)ಕೆಂದ್ರಾಭಿಮುಖ ಚಲನೆ
4) ಕೇಂದ್ರತ್ಯಾಗಿ ಚಲನೆ


[48 ]ಭಾರತವು ವಿಶ್ವ ವ್ಯಾಪಾರ ಸಂಸ್ಥೆಯನ್ನು ಸೇರಿಕೊಂಡ ವರ್ಷ ಯಾವುದು?
1)1990
2)1995+++
3)2000
4)2005

[49] ಟಿ ಆರ್ ಸುಬ್ಬರಾವ್ ಅವರ ಕಾವ್ಯನಾಮ
1) ಶ್ರೀನಿವಾಸ
2) ರಸಿಕರಂಗ
3) ತರಾಸು+++
4) ಚದುರಂಗ


[50 ]ಮನುಷ್ಯನ ದೇಹದ ಅತ್ಯಂತ ಉದ್ದದ ಎಲುಬು ಯಾವುದು?
1)Femur+++
2)Fibula
3Humerus
4)Tibia
💠💠

[51] Yangko ನೃತ್ಯ ಈ ಕೆಳಗಿನ ಯಾವ ದೇಶದ ಸಾಂಪ್ರದಾಯಿಕ ಜಾನಪದ ನೃತ್ಯವಾಗಿದೆ ?
1)ಜಪಾನ್
2) ಥೈಲ್ಯಾಂಡ್
3)ಚೀನಾ+++
4) ಭೂತಾನ್


[52 ]ನೀರನ್ನು ಶುದ್ಧೀಕರಿಸಲು ನೀರಿನಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ?
1) ಪ್ಲೋರಿನ್
2) ಹೀಲಿಯಂ
3) ಸಿಯಾನ್
4) ಕ್ಲೋರಿನ್+++


[53] ಈ ಕೆಳಗಿನ ಯಾವ ಮಂಡಲದಲ್ಲಿ ಅತ್ಯಧಿಕ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಅಯಾನುಗಳಾಗಿ ಪರಿವರ್ತನೆ ಹೊಂದುತ್ತವೆ?
1)ಪರಿವರ್ತನಾಮಂಡಲ
2) ಉಷ್ಣತಾಮಂಡಲ+++
3)ಸಮೋಷ್ಣಮಂಡಲ
4) ಮಧ್ಯಂತರಮಂಡಲ


[54 ]ಈ ಕೆಳಗಿನ ಯಾವ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ ಮಹತ್ವವನ್ನು ಅರಿತು ಪ್ರಸ್ತಾವನೆಯು ಸಂವಿಧಾನದ ಭಾಗ ಎಂದು ತೀರ್ಪು ನೀಡಿತು?
1)ಬೇರುಬಾರಿ ಮೊಕದ್ದಮೆ
2)ಕೇಶವಾನಂದ ಭಾರತಿ ಮೊಕದ್ದಮೆ+++
3)LIC ಆಫ್ ಇಂಡಿಯಾ ಮೊಕದ್ದಮೆ
4) ಮೇಲಿನ ಯಾವುದೂ ಅಲ್ಲ


[55 ]ಜಮ್ಮು ಕಾಶ್ಮೀರ ಮತ್ತು ಲಡಾಖ್ ಅಧಿಕೃತ ಕೇಂದ್ರಾಡಳಿತ ಪ್ರದೇಶಗಳಾಗಿ ರಚನೆಯಾದ ನಂತರ ಈ ಕೆಳಕಂಡ ಯಾವ ಸಂಸ್ಥೆಯು ಭಾರತದ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ?
1)Survery of India+++
2)National Atlas & Thematic Mapping Organization (NATMO)
3)Visayan Prasar
4)National mapping agency


[56] ಇತ್ತೀಚೆಗೆ ಬಿಡುಗಡೆಯಾದ  "Ten Studies in Kashmir: History and Politics" ಪುಸ್ತಕದ ಲೇಖಕರು ಯಾರು?
1) ಜ್ಞಾನಚಂದ್ರ ಘೋಷ್
2) ರಾಜೇಶ್ವರ್ ಆಚಾರ್ಯ
3) ಕಾಶಿನಾಥ್ ಪಂಡಿತ್+++
4) ಗೀತಾ ಮೆಹ್ತಾ


[57] ಪ್ರಸಿದ್ಧ  One Hundred Years of Solitude ಎಂಬ ಕಾದಂಬರಿಯನ್ನು ರಚಿಸಿದವರು
1) ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್+++
2) ಜಾರ್ಜಸ್ ಗೂಡ್ಲ
3) ಜೋಸೆಫ್ ಆಸ್ಪಡಿನ್
4) ಜಾನ್ ಹ್ಯಾರಿಸನ್


[58] ಈ ಕೆಳಗಿನ ಯಾವ ಬಹುಮನಿ ಸುಲ್ತಾನನನ್ನು ವಾಲಿ ಅಥವಾ ಸಂತ ಎಂದು ಕರೆಯಲಾಗುತಿತ್ತು ?
1)1ನೇ ಮಹಮ್ಮದ್ ಷಾ
2) 2ನೇ ಮಹಮ್ಮದ್ ಷಾ
3)ಫಿರೋಜ್ ಷಾ
4) ಅಹಮ್ಮದ್ ಷಾ+++


[59] ನಾನು ಅಲ್ಲಾ ಮತ್ತು ರಾಮನ ಶಿಶು' ಎಂದು ಹೇಳಿಕೊಂಡವರು
1)ಕಬೀರ್‌ದಾಸ್+++
2) ರಮಾನಂದ
3)ಚೈತನ್ಯ
4) ಶಿಶುನಾಳ ಶರೀಫ


[60 ]ಎತ್ತರದ ಮಾನಸ್ತಂಭ ಮತ್ತು ಬ್ರಹ್ಮ ಮಾನಸ್ತಂಭಗಳು ಈ ಕೆಳಗಿನ ಯಾರ ಕಾಲದ ದೇವಾಲಯಗಳ ವಿಶಿಷ್ಟ ಕೊಡುಗೆಗಳಾಗಿವೆ?
1)ಹೊಯ್ಸಳರು
2) ಗಂಗರು+++
3)ಕದಂಬರು
4) ರಾಷ್ಟ್ರಕೂಟರು
💠💠

[61] ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಾವ ರಾಜ್ಯದ ಮೇಲೆ ರಾಷ್ಟçಪತಿ ಆಡಳಿತವನ್ನು ಹೇರಲಾಯಿತು?
1)ಕರ್ನಾಟಕ
2) ಆಂಧ್ರಪ್ರದೇಶ
3)ಹರಿಯಾಣ
4) ಪಂಜಾಬ್+++


[62] ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಅಮೆರಿಕ ಸಂವಿಧಾನದಿಂದ ಪಡೆಯಲಾಗಿದೆ. ಹಾಗಾದರೆ ಸಂವಿಧಾನದ ತಿದ್ದುಪಡಿ ವಿಧಾನವನ್ನು ಯಾವ ರಾಷ್ಟ್ರದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ?
1)ಬ್ರಿಟನ್
2) ರಷ್ಯಾ
3)ಕೆನಡಾ
4) ದಕ್ಷಿಣ ಆಫ್ರಿಕಾ+++


[63] ಕಲ್ಯಾಣ ರಾಜ್ಯ (Welfare State) ಚಿಂತನೆಗಳನ್ನು ಒಳಗೊಂಡಿರುವ ಸಂವಿಧಾನದ ಭಾಗ ಯಾವುದು?
1)III ನೇ ಭಾಗ
2)V ನೇ ಭಾಗ
3)IX ನೇ ಭಾಗ
4)IV ನೇ ಭಾಗ+++


[64] ಈ ಕೆಳಗಿನವರಲ್ಲಿ ಬ್ರಿಟಿಷ್ ಸರ್ಕಾರದ ಮೇಲೆ ಮೊಟ್ಟ ಮೊದಲ ಬಾರಿಗೆ ಸಂವಿಧಾನ ರಚನಾ ಸಭೆಯನ್ನು ರಚಿಸಬೇಕೆಂದು ಒತ್ತಡವನ್ನು ಹಾಕಿದವರು ಯಾರು?
1)ಕೆ ಎಂ ಮುನ್ಷಿ
2) ಎಮ್ ಎನ್ ರಾಯ್+++
3)ಪಟ್ಟಾಭಿಸೀತಾರಾಮಯ್ಯ
4) ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್


[65] 1980ರಲ್ಲಿ ರಾಷ್ಟ್ರೀಕರಣಗೊಂಡ ಬ್ಯಾಂಕುಗಳ ಸಂಖ್ಯೆ ಎಷ್ಟು?
1)14
2)16
3)08
4)06+++


[66] ಇತ್ತೀಚೆಗೆ ಯುನೆಸ್ಕೋ ಭಾರತದ ಯಾವ ನಗರವನ್ನು   'Creative City of Gastronomy'  ಎಂದು ಹೆಸರಿಸಿದೆ?
1) ಮುಂಬೈ
2) ವಾರಣಾಸಿ
3) ಚೆನ್ನೈ
4) ಹೈದರಾಬಾದ್+++


[67] ಈ ಕೆಳಗಿನ ಯಾರನ್ನು ಪ್ರಧಾನಮಂತ್ರಿಯ ಸಲಹೆ ಮೇರೆಗೆ ರಾಷ್ಟ್ರಪತಿ ನೇಮಕ ಮಾಡುವರು?
ಎ)ಭಾರತದ ಅಟಾರ್ನಿ ಜನರಲ್
ಬಿ)ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹಾಗೂ ಸದಸ್ಯರು
ಸಿ)ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರು
ಡಿ)ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರು
1) ಎ ಮತ್ತು ಬಿ ಮಾತ್ರ
2) ಬಿ ಮತ್ತು ಸಿ ಮಾತ್ರ
3) ಎ, ಬಿ ಮತ್ತು ಸಿ+++
4) ಎ, ಬಿ, ಸಿ ಮತ್ತು ಡಿ


[68] ಈ ಕೆಳಗಿನವರಲ್ಲಿ `ಆಧುನಿಕ ಮೈಸೂರು  ರಾಜ್ಯದ ಸಾಂಸ್ಕೃತಿಕ ನಿರ್ಮಾಪಕ (Cultural founder of modern Mysore state)  ಎಂದು ಕರೆಯಿಸಿಕೊಂಡ ಒಡೆಯರ್
1)ಮೂರನೇ ಕೃಷ್ಣರಾಜ ಒಡೆಯರ್+++
2)ನಾಲ್ವಡಿ ಕೃಷ್ಣರಾಜ ಒಡೆಯರ್
3)ರಾಜ ಒಡೆಯರ್
4)ಚಿಕ್ಕದೇವರಾಜ ಒಡೆಯರ್


[69] ದಾಮೋದರ ನದಿಕೊಳ್ಳ ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
1)ಇದು ಸ್ವತಂತ್ರ ಭಾರತದ ಮೊಟ್ಟಮೊದಲ ನದಿಕೊಳ್ಳ ಯೋಜನೆಯಾಗಿದೆ
2)ಈ ಯೋಜನೆಯ ಮುಖ್ಯ ಉದ್ದೇಶ ಪ್ರವಾಹ ನಿಯಂತ್ರಣವಾಗಿದೆ
3)ಈ ಯೋಜನೆಯು ಜಾರ್ಖಂಡ್ ಮತ್ತು ಛತ್ತೀಸ್‍ಗಡ್ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ+++
4)ಮೇಲಿನ ಯಾವುದೂ ಅಲ್ಲ


[70] ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ನೀಲಿಗ್ರಹ ಯಾವುದು?
1)ಬುಧ ಗ್ರಹ
2) ಶುಕ್ರ ಗ್ರಹ
3)ಭೂಮಿ+++
4) ಶನಿ ಗ್ರಹ
💠💠

[71] ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯವು ಎಲ್ಲಿ ಇದೆ?
1) ಮುಂಬೈ
2) ಬೆಂಗಳೂರು
3) ಹೈದರಾಬಾದ್
4) ಪುಣೆ+++


[72] ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಸ್ಥಾಪಕರು ಯಾರು?
1)ಈಶ್ವರ ಚಂದ್ರ ವಿದ್ಯಾಸಾಗರ್
2)ಮಹಾತ್ಮ ಗಾಂಧೀಜಿ+++
3)ಮೊರಾರ್ಜಿ ದೇಸಾಯಿ
4) ನಾರಾಯಣ ಗುರು


[73] ಬ್ರಿಟಿಷರ ವಿರುದ್ಧ ಮಾಪ್ಲ ದಂಗೆ ನಡೆದ ಪ್ರದೇಶ ಯಾವುದು?
1)ಕೇರಳ (ಮಲಬಾರ್ ಪ್ರದೇಶ)+++
2)ಮಹಾರಾಷ್ಟ್ರ
3)ಪಂಜಾಬ್
4)ಬಿಹಾರ


[74] ಕೇoದ್ರ ಹಣಕಾಸು ಆಯೋಗವು ಎಷ್ಟು ಜನರನ್ನು ಒಳಗೊಂಡಿರುತ್ತದೆ?
1)ಅಧ್ಯಕ್ಷ ಮತ್ತು ಮೂವರು ಸದಸ್ಯರು
2)ಅಧ್ಯಕ್ಷ ಮತ್ತು 4 ಜನ ಸದಸ್ಯರು+++
3)ಅಧ್ಯಕ್ಷ ಮತ್ತು ಇಬ್ಬರು ಸದಸ್ಯರು
4)ಅಧ್ಯಕ್ಷ ಮತ್ತು 6 ಜನ ಸದಸ್ಯರು

[75] ಇತ್ತೀಚೆಗೆ  `Icon of Golden Jubilee of IFFI'  ಪ್ರಶಸ್ತಿಗೆ ಈ ಕೆಳಗಿನ ಯಾವ ಚಿತ್ರರಂಗದ ನಟನನ್ನು ಆಯ್ಕೆ ಮಾಡಲಾಗಿದೆ?
1) ಅಮಿತಾಬ್ ಬಚ್ಚನ್
2) ರಜನಿಕಾಂತ್+++
3) ಪವನ್ ಕಲ್ಯಾಣ್
4) ಚಿರಂಜೀವಿ


[76] ನಿಕೊಟಿನಿಕ್ ಆಮ್ಲದ ಕೊರತೆಯಿಂದ ಮಾನವರಲ್ಲಿ ಉಂಟಾಗುವ ಕಾಯಿಲೆ
1)ಪೆಲಾಗ್ರಾ+++
2) ಅನೀಮಿಯ
3)ಗಂಟಲುಮಾರಿ
4) ಕ್ಯಾನ್ಸರ್


[77] ಇತ್ತೀಚೆಗೆ ಈ ಕೆಳಗಿನ ಯಾವ ಭಾರತೀಯ ಐಐಟಿ ಸಂಸ್ಥೆಯು ಮೊದಲ ಬಾರಿಗೆ ಭಾರತೀಯ ಬ್ರೈನ್ ಅಟ್ಲಾಸ್ ಅನ್ನು ಸಿದ್ಧಪಡಿಸಿದೆ?
1) ಐಐಟಿ ದೆಹಲಿ
2) ಐಐಟಿ ಹೈದರಾಬಾದ್+++
3) ಐಐಟಿ ಮದ್ರಾಸ್
4) ಐಐಟಿ ಪುಣೆ


[78] ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಈ ಕೆಳಗಿನ ಯಾವುದು ಹೆಚ್ಚಿನ ಸಹಾಯ ಮಾಡುತ್ತದೆ?
1) ಪ್ಯಾರಾಥೈರಾಯ್ಡ್
2) ಅಡ್ರಿನಲ್ ಗ್ರಂಥಿ
3) ಗುಲ್ಮ (Spleen)
4) ಮೇದೋಜೀರಿಕ ಗ್ರಂಥಿ+++


[79] ಈ ಕೆಳಗಿನವರಲ್ಲಿ ತತ್ವಬೋಧಿನಿ ಸಭಾದ ಸ್ಥಾಪಕರು
1)ದ್ವಾರಕನಾಥ ಠ್ಯಾಗೋರ್
2) ದೇಬೇಂದ್ರನಾಥ ಠ್ಯಾಗೋರ್+++
3)ರಾಜಾರಾಮ್ ಮೋಹನ್‌ರಾಯ್
4)ಕೇಶಬ್ ಚಂದ್ರಸೇನ್


[80]ಕೆಳಗಿನವುಗಳಲ್ಲಿ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿಲ್ಲ?
1)23 1/2 ಉತ್ತರ ಅಕ್ಷಾಂಶ ಕರ್ಕಾಟಕ ಸಂಕ್ರಾಂತಿ ವೃತ್ತ
2)23 1/2  ದಕ್ಷಿಣ ಅಕ್ಷಾಂಶ ಮಕರ ಸಂಕ್ರಾಂತಿ ವೃತ್ತ
3)00  ಅಕ್ಷಾಂಶ ಸಮಭಾಜಕ ವೃತ್ತ
4)66 1/2  ದಕ್ಷಿಣ ಅಕ್ಷಾಂಶ ಆರ್ಕಟಿಕ್ ವಲಯ+++
💠💠

[81] ಭಾರತದ ಈ ಕೆಳಗಿನವುಗಳಲ್ಲಿ ಯಾವ ವರ್ಷವು ಜನಸಂಖ್ಯಾ ವಿಭಜಕ ವರ್ಷವೆಂದು ತಿಳಿಯಲಾಗಿದೆ?
1)1901
2)1921+++
3)1931
4)1911


[82] ಕಾರ್ಡಿಯಾಲಜಿ' ಯಾವುದಕ್ಕೆ ಸಂಬಂಧಿಸಿದೆ?
1) ಹೃದಯ ವಿಜ್ಞಾನ+++
2) ಬರಹಗಳ ಅಧ್ಯಯನ
3) ಮಣ್ಣಿನ ವೈಜ್ಞಾನಿಕ ಅಧ್ಯಯನ
4) ಕೀಟಕಗಳ ಅಧ್ಯಯನ

[83 ]ಪ್ರತಿ ಎಷ್ಟು ಅವಧಿಗೊಮ್ಮೆ ಸಾಗರದಲ್ಲಿ ಉಬ್ಬರವಿಳಿತಗಳು  (Tides)ಸಂಭವಿಸುತ್ತವೆ?
1)6 ಗಂಟೆ, 26 ನಿಮಿಷ
2)12 ಗಂಟೆ, 26 ನಿಮಿಷ+++
3)16 ಗಂಟೆ, 26 ನಿಮಿಷ
4)18 ಗಂಟೆ, 26 ನಿಮಿಷ



[84] ದೇಶದ ಆರ್ಥಿಕತೆಯ ದೃಷ್ಟಿಯಿಂದ ಹೆಚ್ಚು ಬೆಲೆ ಬಾಳುವ ತೇಗ, ಬೀಟೆ, ಹೊನ್ನೆ, ಮತ್ತಿ, ನಂದಿ ಮುಂತಾದ ಮರಗಳನ್ನು ಒದಗಿಸುವ ಅರಣ್ಯಗಳು ಯಾವುವು?
1)ಉಷ್ಣವಲಯದ ತೇವಯುತ ಸದಾ ಹಸಿರಾಗಿರುವ ಅರಣ್ಯಗಳು
2)ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳು+++
3)ಮ್ಯಾಂಗ್ರೋವ್ ಅರಣ್ಯಗಳು
4)ಟೈಗಾ ಅರಣ್ಯಗಳು


[85 ]ವಿಶ್ವಸoಸ್ಥೆಯು 2019-2028ರ ದಶಕವನ್ನು ಹೀಗೆಂದು ಘೋಷಿಸಿದೆ
1)United Nations Decade of Family Farming
2)International Decade for Action Water for sustainable Development+++
3)United Nations Decade of sustainable Energy for all
4)International Decade of Ocean science for sustainable Development


[86] ಭಾರತ ಮತ್ತು ಚೀನಾ (ಟಿಬೆಟ್ ಸ್ವಾಯತ್ತ ಪ್ರದೇಶ)ಗಳನ್ನು ಸಂಪರ್ಕಿಸುವ ನಾಥೂಲಾ ಕಣಿವೆ (Nathula pass) ಯಾವ ರಾಜ್ಯದಲ್ಲಿದೆ ?
1) ಪಶ್ಚಿಮ ಬಂಗಾಳ
2) ಸಿಕ್ಕಿಂ+++
3)ಅರುಣಾಚಲ ಪ್ರದೇಶ
4) ಉತ್ತರಾಖಂಡ


[87] ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‍ರವರು
1)ಜನತೆಯ ಸ್ವಾತಂತ್ರಗಳ ರಕ್ಷಕ
2)ಸಾರ್ವಜನಿಕ ಹಣಕಾಸಿನ ರಕ್ಷಕ+++
3)ಸರ್ಕಾರದ ಮುಖ್ಯ ಕಾನೂನು ಸಲಹೆಗಾರ
4)ಮೇಲಿನ ಎಲ್ಲವೂ ಸರಿ


[88] 1976ರಲ್ಲಿ ಜಾತ್ಯಾತೀತ, ಸಮಾಜವಾದಿ ಎಂಬ ಪದಗಳನ್ನು ಎಷ್ಟನೇ ತಿದ್ದುಪಡಿ ಮೂಲಕ ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಲಾಯಿತು?
1)40ನೇ ತಿದ್ದುಪಡಿ
2) 41ನೇ ತಿದ್ದುಪಡಿ
3)42ನೇ ತಿದ್ದುಪಡಿ+++
4) 44ನೇ ತಿದ್ದುಪಡಿ


[89] ಈ ಕೆಳಗಿನವುಗಳಲ್ಲಿ ಸ್ಲೋವೇಕಿಯಾದ ರಾಜಧಾನಿ
1)ಬ್ರಾಟಿಸ್ಲಾವಾ+++
2) ಬೆಲ್‌ಗ್ರೇಡ್
3)ಲಿಸ್ಬನ್
4) ವಿಂಡ್‌ಹಾಕ್


[90] ಭಾರತದಲ್ಲಿ ಸ್ಥಾಪಿತವಾದ ಮೊದಲ ಸಹಕಾರಿ ಸಂಘ ಯಾವುದು?
1)ಗೃಹ ನಿರ್ಮಾಣ ಸಹಕಾರಿ ಸಂಘ
2)ಮಾರುಕಟ್ಟೆ ಸಹಕಾರಿ ಸಂಘ
3)ಪತ್ತಿನ ಸಹಕಾರಿ ಸಂಘ+++
4)ಕೃಷಿ ಸಹಕಾರಿ ಸಂಘ
💠💠

[91] ವಿಶ್ವ ಪ್ರಸಿದ್ಧ ಬೇಲೂರಿನ ಚನ್ನಕೇಶವ ದೇವಾಲಯವನ್ನು ನಿರ್ಮಿಸಿದ ದೊರೆ
1)ವಿಷ್ಣುವರ್ಧನ+++
2) 2ನೇ ವೀರಬಲ್ಲಾಳ
3)1ನೇ ನರಸಿಂಹ
4) ವಿನಯಾದಿತ್ಯ


[92] ವಾತಾವರಣದಲ್ಲಿರುವ ಅಲ್ಟ್ರಾವಯಲೆಟ್ ಕಿರಣಗಳನ್ನು ಯಾವುದು ಹೀರಿಕೊಳ್ಳುತ್ತದೆ?
1) ಹೀಲಿಯಂ
2) ಒಝೋನ್+++
3) ಸಾರಜನಕ
4) ಆಮ್ಲಜನಕ


[93] ಈ ಕೆಳಗಿನ ಯಾವುದರ ಶಿಫಾರಸ್ಸಿನ ಮೇರೆಗೆ ವಿವಿಧ ರಾಜ್ಯಗಳ ನಡುವೆ ಸಂಪನ್ಮೂಲವನ್ನು ಹಂಚಿಕೆ ಮಾಡಲಾಗುವುದು?
1)ನೀತಿ ಆಯೋಗ
2) ಭಾರತೀಯ ರಿಸರ್ವ್ ಬ್ಯಾಂಕ್
3)ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
4) ಹಣಕಾಸು ಆಯೋಗ+++


[94] ಜಲಸಸ್ಯಗಳು ನೀರಿನ ಮೇಲೆ ತೇಲಲು ಸಹಾಯಕವಾಗಿರುವ ಅಂಗಾಶ ಯಾವುದು?
1)ಏರಂಕೈಮಾ+++
2) ಕ್ಲೋರಂಕೈಮಾ
3)ಪ್ರೋಸಕೈಮಾ
4) ಪೇರಂಕೈಮಾ


[95] ಈ ಕೆಳಗಿನ ಯಾವುದರ ಮೇಲೆ ಹಬೆಯನ್ನು ಹಾಯಿಸಿದರೆ ಜಲ ಅನಿಲ ಉತ್ಪತ್ತಿಯಾಗುತ್ತದೆ ?
1)ಕೆಂಪಗೆ ಕಾದಿರುವ ತಾಮ್ರ
2)ಕೆಂಪಗೆ ಕಾದಿರುವ ಕೋಕ್+++
3)ಕೆಂಪಗೆ ಕಾದಿರುವ ಕಬ್ಬಿಣ
4)ಕೆಂಪಗೆ ಕಾದಿರುವ ಅಲ್ಯೂಮಿನಿಯಂ


[96] ಪರಿವರ್ತನ ಮಂಡಲಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
1)ಇದು ವಾಯುಮಂಡಲದ ಅತ್ಯಂತ ಕೆಳಸ್ತರವಾಗಿದೆ
2)ಈ ಮಂಡಲದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶ ಕಡಿಮೆಯಾಗುತ್ತದೆ
3)ಈ ಸ್ತರದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5 ಸೆಂಟಿಗ್ರೇಡ್ ಉಷ್ಣಾಂಶ ಕಡಿಮೆಯಾಗುತ್ತದೆ
4)ಮೇಲಿನ ಎಲ್ಲವೂ ಸರಿ+++


[97] 2 ಬಾರಿ ಲೋಕಸಭೆಯ ಉಪ ಸ್ಪೀಕರ್ ಆದ ಮೊದಲ ವ್ಯಕ್ತಿ ಯಾರು ?
1)ಎಂ ಎ ಅಯ್ಯಂಗಾರ್
2) ಜಿ ಜಿ ಸ್ವೆಲ್
3)ಜಿ ಲಕ್ಷ್ಮಣ್ ನ್
4) ಎಂ ಥಂಬಿದೊರೈ+++


[98] ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‍ಮೆಂಟ್ ಆರ್ಗನೈಸೇಷನ್ (DRDO) ಇರುವ ಸ್ಥಳ
1) ನವದೆಹಲಿ+++
2) ಕೋಲ್ಕತ್ತಾ
3) ಪಂಜಾಬ್
4) ಹೈದರಾಬಾದ್


[99] 1983 ರಲ್ಲಿ ಸರ್ಕಾರಿಯಾ ಆಯೋಗವು ನೇಮಕವಾದುದು
1)ಪಂಜಾಬ್ ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯಲು
2)ಕಾವೇರಿ ನದಿ ನೀರಿನ ಹಂಚಿಕೆಯ ಬಗೆಗಿನ ವಿವಾದಗಳನ್ನು ಪರಿಹರಿಸಲು
3)ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು+++
4)ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಯಾಚರಣೆಯನ್ನು ಪರಿಶೀಲಿಸಲು


[100] ಈ ಕೆಳಗಿನ ಯಾವ ಕಾಯ್ದೆಯನ್ವಯ ಬಂಗಾಳದ ಗವರ್ನರ್‍ನನ್ನು ಗವರ್ನರ್ ಜನರಲ್ ಎಂದು ನಾಮಕರಣ ಮಾಡಲಾಯಿತು?
1)1773ರ ರೆಗ್ಯುಲೇಟಿಂಗ್ ಕಾಯ್ದೆ+++
2)1784ರ ಪಿಟ್ಸ್ ಇಂಡಿಯಾ ಕಾಯ್ದೆ
3)1813ರ ಚಾರ್ಟರ್ ಕಾಯ್ದೆ
4)1833ರ ಚಾರ್ಟರ್ ಕಾಯ್ದೆ

💠💠


Post a Comment

0 Comments

Important PDF Notes

Ad Code