Ad Code

Ticker

6/recent/ticker-posts

Click Below Image to Join Our Telegram For Latest Updates

ಕನ್ನಡ ನುಡಿ ಮುತ್ತುಗಳು /ಬದುಕಿಗೊಂದು ಬರವಸಯ ಬೆಳಕು

ಕನ್ನಡ ನುಡಿ ಮುತ್ತುಗಳು ಬದುಕಿಗೊಂದು ಬರವಸಯ ಬೆಳಕು 

ಕನ್ನಡ ನುಡಿ ಮುತ್ತುಗಳು/ಬದುಕಿಗೊಂದು ಬರವಸಯ ಬೆಳಕು

💥💥

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಕನ್ನಡ "ನುಡಿಮುತ್ತುಗಳು" ಬದುಕಿಗೊಂದು ಬರವಸಯ ಬೆಳಕು.ಅನೇಕ ವ್ಯೆಕ್ತಿಗಳು ಜೀವನದಲ್ಲಿ ಸಾಕಸ್ಟು ಬಾರಿ ಸೋಲನ್ನ ಅನುಭವಿಸಿ ಜೀವನವೇ ಸಾಕಪ್ಪ ಅನ್ನೋ ನಿರಾಶೆಯ ಬಾಳನ್ನ ಬದುಕುತ್ತಾ ಜೀವನಕ್ಕೆ ಅರ್ಥವೇ ಇಲ್ಲ ಎಂಬಂತೆ ಸಾಗುತ್ತಿರುತ್ತಾರೆ. ಹಂತ ವ್ಯೆಕ್ತಿಗಳಿಗೆ ಇಲ್ಲಿವೆ ಉತ್ತಮ ನುಡಿಮುತ್ತುಗಳು. ಜೀವನ ಬದಲಾಗೋಕೆ ಅನೇಕ ಕಾರಣೀಕರ್ತರನ್ನ ನೋಡುತ್ತೇವೆ. ಉದಾಹರಣೆಗೆ ನಟ, ನಟಿಯರು, ಸಿನೆಮಾ, ಮಾದರಿ ವ್ಯೆಕ್ತಿಗಳು, ಹಾಡು, ಕಥೆ, ನಾಟಕ, ಕಾದಂಬರಿಗಳು, ಕವನಗಳು, ಜೊತೆಗೆ ನುಡಿಮುತ್ತುಗಳು ಹೀಗೆ ಅನೇಕ ಕಾರಣಗಳು ಕಾಣುತ್ತೇವೆ. ಅವೆಲ್ಲವುಗಳಲ್ಲಿ ನಿಮ್ಮ "ಚಾಣಕ್ಯ ಕಣಜ" ನುಡಿಮುತ್ತುಗಳನ್ನ ಪ್ರಸ್ತುತ ಪಡಿಸುತ್ತಿದೆ. 

💥💥

ಕನ್ನಡ ನುಡಿಮುತ್ತುಗಳು ಬದುಕಿಗೊಂದು ಬರವಸಯ ಬೆಳಕು

🔆ಸೋಲು ನಿಜಕ್ಕೂ ಗೆಲುವಿನ ಬುನಾದಿಯೇ, ತಾನೇಕೆ ಸೋತೆ ಎಂದು ಆ ವ್ಯೆಕ್ತಿ ಮರಳಿ ಪ್ರಯತ್ನ ಕೈಗೊಂಡಾಗ ವಿಜಯ ಆತನ ಜೇಬಿನಲ್ಲಿರುತ್ತದೆ. 

🔆ಯಶ ಎಂದರೆ ಬಯಸಿದ್ದು ಸಿಗುವದು, ಸುಖವೆಂದರೆ ಸಿಕ್ಕಿದ್ದನ್ನು ಬಯಸುವದು, ಯಶಸ್ಸು ಆಶೆಯ ಕನಸಲ್ಲ ಪರಿಶ್ರಮದ ಪರಿಣಾಮ. 

🔆ಅಪಮಾನವೆಂಬುದು ಸೇಡಿನ ಕಿಡಿಯಾಗಬಾರದು, ಬದಲಿಗೆ ಎದುರಾಳಿಯನ್ನ ಸಂಪತ್ತಿನಲ್ಲಿ, ಕೆಲಸದಲ್ಲಿ ಮೀರಿಸಿ ತೀರುವೆನೆಂದು ಪಣ ತೊಡಬೇಕು. 

🔆ಎಷ್ಟೇ ದೊಡ್ಡ ಸಮಸ್ಯೆಯೇ ಇರಲಿ, ಅದರಿಂದ ನುಣುಚಿಕೊಳ್ಳಲು ಯತ್ನಿಸದೆ, ನೇರವಾಗಿ ಎದುರಿಸಿದರೆ  ಸಣ್ಣದಾಗಿಬಿಡುವುದು. 

🔆ನಾವು ಏನನ್ನು ಮಾಡಬೇಕೆಂದು ಹೊರಟಿದ್ದೀವೋ ಅದಕ್ಕೆ ದೀರ್ಘಕಾಲ ಅಂಟಿಕೊಂಡಿದ್ದರೆ ಯಶಸ್ಸು ದೊರೆಯುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. 

🔆ಯಾವುದಾದರೊಂದು ಕೆಲಸವನ್ನು ಮಾಡುತ್ತಿರುವಾಗ ಅದರಾಚೆಗಿನ ಯಾವ ವಿಷಯವನ್ನು ಯೋಚಿಸಬಾರದು. 

🔆ಕನಿಷ್ಠ ಹದಿನೆಂಟು ತಾಸುಗಳವರೆಗೆ ಕೆಲಸ ಮಾಡದಿದ್ದರೆ ಆತ ಎಂದು ಶ್ರೀಮಂತನಾಗಲಾರನು. 

🔆ಚಿಕ್ಕ ಚಿಕ್ಕ ಗುರಿ ಸಾಧನೆಯೇ ನಮ್ಮನ್ನು ದೊಡ್ಡ ಸ್ಥಾನಕ್ಕೆ ವಯ್ಯುತ್ತದೆ. 

🔆ಆಗಲಾರದ ದೊಡ್ಡ ಗುರಿಗಳಿಗಿಂತ ಸಣ್ಣ ಸಣ್ಣ ಗುರಿಗಳನ್ನಿಟ್ಟುಕೊಂಡು ಕೆಲಸ ಮಾಡಿ ಖಂಡಿತ ಗುರಿ ಮುಟ್ಟುತ್ತೀರಿ. 

🔆ಒಳ್ಳೆಯದನ್ನು ಮಾಡಿದರೆ ಸಾಲದು ಅದನ್ನು ಒಳ್ಳೆಯ ರೀತಿಯಿಂದ ಮಾಡಬೇಕು. 

🔆ಅಭ್ಯಾಸ ಬಲದಿಂದ ಅಪ್ರಿಯ ವಸ್ತುಗಳೂ ಪ್ರಿಯವಾಗಿ ಕಾಣುತ್ತವೆ. 

🔆ಎಷ್ಟೇ ಕಠಿಣವಾದರೂ ಯೋಗ್ಯ ಮಾರ್ಗವನ್ನೇ ಸ್ವೀಕರಿಸಿರಿ. ಅಭ್ಯಾಸವಾದಂತೆ ಅದು ಸರಳವೆನಿಸುತ್ತ ಹೋಗುವುದು. 

🔆ವಿವೇಕವಂತ ಮನುಷ್ಯನಿಗೆ ಸಾವಧಾನ, ಚಾತುರ್ಯಗಳು ಜೊತೆಯಾಗಿರುತ್ತವೆ. 

🔆ಜಾಣನು ಸಾತ್ವಿಕ್ ನಿರಲೇಬೇಕೆಂದೇನೂ ಇಲ್ಲ, ಆದರೆ ಜಾಣತನವಿಲ್ಲದ ಸಾತ್ವಿಕತೆ ಹುಚ್ಚು ಎನಿಸಿಕೊಳ್ಳುವುದು. 

🔆ಮೂರ್ಖರಿಗೆ ಕಲಿಸುವುದೂ ತಿಳಿಸುವುದೂ, ಶವವನ್ನು ಜೀವಂತ ಮಾಡುವುದು ಒಂದೇ. 
💥💥
🔆ಪ್ರತಿಯೊಬ್ಬನು ತಪ್ಪು ಮಾಡುತ್ತಾನೆ, ಆದರೆ ಮೂರ್ಖನು ಮಾತ್ರ ಅದನ್ನು ಮುಂದುವರಿಸುತ್ತಾ ಸಾಗುತ್ತಾನೆ. 

🔆ನಮ್ಮ ವಿಚಾರ-ಪ್ರವಾಹ ಮತ್ತು ಸಮಯ ಕಳೆಯುವ ರೀತಿಯ ಮೇಲೆಯೇ ನಮ್ಮ ಚರಿತ್ರೆ ರೂಪುಗೊಳ್ಳುತ್ತದೆ. 

🔆ಮತ್ತೊಬ್ಬರ ಕಷ್ಟ ನೋಡಿ ಬುದ್ದಿ ಕಲಿಯುವವನೇ ಬುದ್ದಿವಂತ. 

🔆ಹಾದಿಯನ್ನ ತಪ್ಪಿಸುವವರೇ ಹದಿ ತೋರಿಸಬಲ್ಲರು. 

🔆ಚಟಗಳನ್ನು ಅವುಗಳ ಹುಟ್ಟಿನಲ್ಲೇ ಹತೋಟಿಯಲ್ಲಿಡಬೇಕು ಇಲ್ಲವಾದರೆ ಅವು ಅಗತ್ಯಗಳಾಗಿ ಬೆಳೆಯುತ್ತವೆ. 

🔆ದುಶ್ಚಟಗಳಿಗೆ ಆದೀನನಾದ ಮನುಷ್ಯನು ಇಂದಿಗೂ ಏಳ್ಗೆ ಹೊಂದುವುದಿಲ್ಲ. 

🔆ನೀವು ಎಂತೆಂಥ ಬಿರುಗಾಳಿ ಎದುರಿಸಿದಿರೆಂದು ಜಗತ್ತು ಕೇಳುವುದಿಲ್ಲ. ನೀವು ಹಡಗನ್ನು ಸುರಕ್ಷಿತವಾಗಿ ದಡಕ್ಕೆ ತಂದಿರಾ? ಎಂದಷ್ಟೇ ಅದು ವಿಚಾರಿಸುತ್ತದೆ. 

🔆ಚಿಂತೆಗೂ, ಚಿತೆಗೂ ಬಿಂದು ಮಾತ್ರ ವ್ಯತ್ಯಾಸ. ಚಿತೆಯು ನಿರ್ಜೀವ ವಸ್ತುಗಳನ್ನು ಸುಡುತ್ತದೆ. ಚಿಂತೆಯು ಸಜೀವ ವಸ್ತುಗಳನ್ನು ಸುಡುತ್ತದೆ. 

🔆ಪ್ರಪಂಚ ನನಗಾಗಿ ಇದೆಯೇ ಹೊರತು, ಪ್ರಪಂಚಕ್ಕಾಗಿ ನಾನಿಲ್ಲ. 

🔆ಮನುಷ್ಯನ ಹುಟ್ಟೇ ಅಶ್ಲೀಲದಿಂದಾಗಿರುವಲ್ಲಿ, ಅಶ್ಲೀಲವನ್ನು ಸಾಹಿತ್ಯದಿಂದ ತೊಡೆದು ಬಿಡುವುದಾದರೂ ಹೇಗೆ?

🔆ಮನುಷ್ಯನು ಒಂದೇ ತಟ್ಟೆ ಅನ್ನ ಉಣ್ಣುತ್ತಾನೆಂದಮೇಲೆ, ಕುಬೇರನಂತಹ ಸಂಪತ್ತಿನಿಂದೇನು ಪ್ರಯೋಜನ. 

🔆ಹೃದಯದಷ್ಟು ಹತೋಟಿ ಮೀರಿದ ವಸ್ತು ಬೇರೊಂದಿಲ್ಲ. ಅದಕ್ಕೆ ಅಪ್ಪಣೆ ಕೊಡುವ ಮಾತಂತೂ ದೂರ ಉಳಿಯಿತು. ಅದರ ಅಪ್ಪಣೆಯನ್ನೇ ನಾವು ಪಾಲಿಸಬೇಕಾಗುತ್ತದೆ.

🔆ನಾವು ದುಃಖಿಗಳು, ಪೀಡಿತರೂ ಆದರೆ ಆ ದುಃಖ ಮತ್ತು ಪಾಪಗಳಿಗೆ ನಾವೇ ಕಾರಣವಲ್ಲವೇ?

🔆ಚಿಕ್ಕ ಪುಟ್ಟ ಸ್ವಾರ್ಥ ತ್ಯಾಗಳಿಂದ ಒಳ್ಳೆಯ ನಡವಳಿಕೆಯನ್ನು ಕಟ್ಟಲಾಗುತ್ತದೆ. 

🔆ತ್ಯಾಗದಲ್ಲಿ ಸುಖವಿರುವುದೇ ಹೊರತು ಸ್ವಾರ್ಥದಲ್ಲಿ ಅಲ್ಲ. 
💥💥



Post a Comment

2 Comments

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete
  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ jayakumarcsj@gmail.com

    ReplyDelete

Karnataka TET Kannada Pedagogy Quiz Series-01/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Karnataka TET Kannada Pedagogy Quiz Series-07/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-07
Karnataka TET Environmental Science Quiz Series-06/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-06
Social Science Quizzes For all Competitive Exams Part-104/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-12/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-12
Karnataka TET Environmental Science Quiz Series-05/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-05
Social Science Quizzes For all Competitive Exams Part-105/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-13/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-13
Karnataka TET Kannada Pedagogy Quiz Series-06/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-06
KARTET Educational Psychology Quiz Series-14/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-14

Important PDF Notes

Ad Code