Ad Code

Ticker

6/recent/ticker-posts

Click Below Image to Join Our Telegram For Latest Updates

10ನೇ ತರಗತಿಯ ಕನ್ನಡ ಕವಿ ಮತ್ತು ಲೇಖಕರ ಪರಿಚಯ ಸಾಮಾನ್ಯ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಉಪಯುಕ್ತ/Introduction to 10th Class Kannada Poets and Writers

10ನೇ ತರಗತಿಯ ಕನ್ನಡ ಕವಿ ಮತ್ತು ಲೇಖಕರ ಪರಿಚಯ ಸಾಮಾನ್ಯ ಕನ್ನಡ ಸ್ಪರ್ಧಾತ್ಮಕ  ಪರೀಕ್ಷೆಗೆ ತುಂಬಾ ಉಪಯುಕ್ತ

Introduction to 10th Class Kannada Poets and Writers 

10ನೇ ತರಗತಿಯ ಕನ್ನಡ ಕವಿ ಮತ್ತು ಲೇಖಕರ ಪರಿಚಯ ಸಾಮಾನ್ಯ ಕನ್ನಡ ಸ್ಪರ್ಧಾತ್ಮಕ  ಪರೀಕ್ಷೆಗೆ ತುಂಬಾ ಉಪಯುಕ್ತ/Introduction to 10th Class Kannada Poets and Writers

💥
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
💥
10ನೇ ತರಗತಿಯ ಕನ್ನಡ ಕವಿ ಮತ್ತು ಲೇಖಕರ ಪರಿಚಯ ಸಾಮಾನ್ಯ ಕನ್ನಡ ಸ್ಪರ್ಧಾತ್ಮಕ  ಪರೀಕ್ಷೆಗೆ ತುಂಬಾ ಉಪಯುಕ್ತ

10ನೇ ತರಗತಿಯ ಕನ್ನಡ ಕವಿ ಮತ್ತು ಲೇಖಕರ ಪರಿಚಯ ಸಾಮಾನ್ಯ ಕನ್ನಡ ಸ್ಪರ್ಧಾತ್ಮಕ  ಪರೀಕ್ಷೆಗೆ ತುಂಬಾ ಉಪಯುಕ್ತ/Introduction to 10th Class Kannada Poets and Writers


10ನೇ ತರಗತಿ ಪ್ರಥಮಭಾಷೆ ಕನ್ನಡ ಕವಿಗಳು ಮತ್ತು ಲೇಖಕರ ಪರಿಚಯ

01] ಸಾರಾ ಅಬೂಬಕ್ಕರ್

ಲೇಖಕಿಯರಾದ ಸಾರಾ ಅಬೂಬಕ್ಕರ್ ಅವರು 30 ಜೂನ್ 1936ರಂದು ಕಾಸರಗೋಡಿನಲ್ಲಿ ಜನಿಸಿದರು. ಇವರು ನಾಡಿನ ಖ್ಯಾತ ಕತೆಗಾರ್ತಿ ಹಾಗೂ ಕಾದಂಬರಿಗಾರ್ತಿಯಾಗಿ ಜನಪ್ರಿಯತೆ ಗಳಿಸಿದ್ದಾರೆ. ಚಂದ್ರಗಿರಿಯ ತೀರದಲ್ಲಿ,ಸಹನಾ, ಕದನ ವಿರಾಮ, ವಜ್ರಗಳು, ಸುಳಿಯಲ್ಲಿ ಸಿಕ್ಕವರು, ತಳ ಒಡೆದ ದೋಣಿಯಲ್ಲಿ ಇವು ಇವರ ಪ್ರಮುಖ ಕಾದಂಬರಿಗಳು, ಚಪ್ಪಲಿಗಳು, ಖೆಡ್ಡಾ,ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಪಯಣ ಇವು ಕಥಾ ಸಂಕಲನಗಳು, ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ದೊರೆತಿದೆ.
💥
02] ಪು.ತಿ.ನ

ಇವರ ಪೂರ್ಣ ಹೆಸರು ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್. ಇವರ ಕಾಲ ಕಿ.ಶ 1905. ಇವರು ಮಂಡ್ಯ ಜಿಲ್ಲೆಯ ಮೇಲುಕೋಟೆಯವರು, ಗೀತನಾಟಕ ಇವರ ಪ್ರಾತಿನಿಧಿಕ ಸಾಹಿತ್ಯ ಪ್ರಕಾರ,ಅಹಲೈ, ಗೋಕುಲ ನಿರ್ಗಮನ, ಶಬರಿ, ವಿಕಟಕವಿ ವಿಜಯ, ಹಂಸದಮಯಂತಿ ರೂಪಕಗಳು,ಮತ್ತು ಇತರ ಹಣತೆ, ರಸಸರಸ್ವತಿ, ಗಣೇಶ ದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಇವು ಇವರ ಪ್ರಮುಖ ಕೃತಿಗಳು.ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಶ್ರೀಹರಿಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ ದೊರೆತಿವೆ.

03] ವಿ.ಕೃ.ಗೋಕಾಕ

ವಿನಾಯಕ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಇವರ ಪೂರ್ಣ ಹೆಸರು ಡಾ. ವಿನಾಯಕ ಕೃಷ್ಣ ಗೋಕಾಕ. ಇವರ ಕಾಲ ಕ್ರಿಶ 1909. ಇವರು ಹಾವೇರಿ ಜಲ್ಲೆಯ ಸವಣೂರಿನವರು, ಸಮುದ್ರಗೀತೆಗಳು, ಪಯಣ, ಉಗಮ, ಇಲ್ನೋಡು,ಸಮರಸವೇ ಜೀವನ, ಭಾರತ ಸಿಂಧುರ, ದ್ಯಾವಾ ಪೃಥಿವೀ ಮೊದಲಾದಕೃತಿಗಳನ್ನು ಬರದಿದ್ದಾರೆ. ದ್ಯಾವಾ ಪೃಥಿವೀ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.ಸಮಗ್ರ ಸಾಹಿತ್ಯಕ್ಕಾಗಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.ಕರ್ನಾಟಕ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್ ಪದವಿ ಲಭಿಸಿದೆ.

04] ಡಿ.ಎಸ್.ಜಯಪ್ಪಗೌಡ

ಇವರ ಪೂರ್ಣ ಹೆಸರು ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ, ಕಾಲ ಕ್ರಿಶ 1947. ಇವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯವರು. ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಕನಾಟಕದ ಕಡಲಾಚೆಯ ಸಂಪರ್ಕಗಳು, ಮೈಸೂರು ಒಡೆಯರು, ಜನಪದ ಆಟಗಳು, ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಇವರ ಪ್ರಮುಖ ಕೃತಿಗಳಾಗಿವೆ. ಇವರಿಗೆಕನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.ಮತ್ತು ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನ ದೊರೆತಿದೆ.
💥
05] ದೇವನೂರ ಮಹಾದೇವ

ಇವರ ಕಾಲ ಕ್ರಿ.ಶ 1948, ದೇವನೂರ ಮಹಾದೇವ ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಇವರು ದಲಿತ ಹಾಗೂ ಬಂಡಾಯ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರು.ದ್ಯಾವನೂರು, ಒಡಲಾಳ ಕುಸುಮಬಾಲೆ, ಗಾಂಧಿ ಮತ್ತು ಮಾವೊ, ನಂಬಿಕೆಯ ನೆಂಟ, ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ. ಇವು ಇವರ ಪ್ರಮುಖ ಕೃತಿಗಳು. ಇವರ ಕುಸುಮಬಾಲೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಡಲಾಳ ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ದೊರೆತಿವೆ. ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿದೆ.

06] ಎ.ಎನ್. ಮೂರ್ತಿರಾವ್

ಇವರ ಪೂರ್ಣ ಹೆಸರು ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್, ಕಾಲ ಕ್ರಿ.ಶ 1900. ಇವರು ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳಿನವರು. ಆಧುನಿಕ ಕನ್ನಡದ ಪ್ರಮುಖ ಬರಹಗಾರರಾದ ಇವರು ಪ್ರಬಂಧಕಾರರಾಗಿ ಪ್ರಸಿದ್ಧರು.ಹಗಲುಗನಸುಗಳು, ಅಲೆಯುವಮನ, ಅಪರವಯಸ್ಕನ ಅಮೆರಿಕಾಯಾತ್ರೆ, ಮಿನುಗು-ಮಿಂಚು, ಪೂರ್ವಸೂರಿಗಳೊಡನೆ, ಚಂಡಮಾರುತ, ಚಿತ್ರಗಳು-ಪತ್ರಗಳು ದೇವರು, ಇವರ ಪ್ರಮುಖ ಕೃತಿಗಳು. ಶ್ರೀಯುತರಿಗೆ ಚಿತ್ರಗಳು-ಪತ್ರಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರು ಎಂಬ ಕೃತಿಗೆ ಪಂಪ ಪ್ರಶಸ್ತಿ ಲಭಿಸದೆ.ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ ದೊರೆತಿದೆ.

07] ದುರ್ಗಸಿಂಹ

ಈ ಕವಿಯ ಕಾಲ ಕ್ರಿಶ 1031. ಈತನು ಕಿಸುಕಾಡು ನಾಡಿನ ಸಯ್ಯಡಿಯವನು.(ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ), ಇವನು ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು.ಕರ್ನಾಟಕ ಪಂಚತಂತ್ರ ಈತನೂ ರಚಿಸಿದ ಚಂಪೂಕಾವ್ಯ. ಇದರಲ್ಲಿ ಭೇದ.ಪರೀಕ್ಷಾ, ವಿಶ್ವಾಸ, ವಂಚನಾ, ಮಿತ್ರಕಾರ್ಯ ಎಂಬ ಐದು ತಂತ್ರಗಳನ್ನಾಧರಿಸಿದ ನಲವತ್ತೆಂಟು ಉಪಕತೆಗಳಿವೆ.
💥
08] ಶಿವಕೋಟ್ಯಾಚಾರ್ಯ

ಇವನ ಕಾಲ ಕ್ರಿ.ಶ ಸುಮಾರು ಹತ್ತ(10)ನೇ ಶತಮಾನ.ಈತನು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿನಾಡಿನವನು. ಕನ್ನಡದ ಪ್ರಥಮ ಗದ್ಯಕೃತಿಯಾದ ವಡ್ಡಾರಾಧನೆಯ ಕರ್ತೃ. ಈ ಕೃತಿಯಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಹತ್ತೊಂಬತ್ತು ಕಥೆಗಳಿವೆ. ಈ ಕಥೆಗಳ ನಾಯಕರೆಲ್ಲ ಧರ್ಮವೀರರು.

09] ಜಿ.ಎಸ್.ಶಿವರುದ್ರಪ್ಪ

ಇವರ ಪೂರ್ಣ ಹೆಸರು ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ, ಕಾಲ ಕ್ರಿಶ 1926. ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು. ಆಧುನಿಕ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು, ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಕಾವ್ಯಾರ್ಥ ಚಿಂತನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ ದೊರೆತಿದೆ.ಇವರಿಗೆ ರಾಷ್ಟ್ರಕವಿ ಅಭಿಧಾನ ಮತ್ತು ಪಂಪ ಪ್ರಶಸ್ತಿ ದೊರೆತಿವೆ. ಬೆಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳಿಂದ ಗೌರವ ಡಿ.ಲಿಟ್ ಪದವಿಗಳು ದೊರೆತಿವೆ.

10] ದ.ರಾ.ಬೇಂದ್ರೆ

ಅಂಬಿಕಾತನಯದತ್ತ ಎಂಬುದು ಇವರ ಕಾವ್ಯನಾಮ. ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ನವೋದಯ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಇವರೂ ಒಬ್ಬರು. ನಾಕುತಂತಿ, ಅರಳು-ಮರಳು, ಗರಿ,ನಾದಲೀಲೆ, ಉಯ್ಯಾಲೆ, ಸಖೀಗೀತ,ಕುಮಾರಿ, ಮೇಘದೂತ,ಗಂಗಾವತರಣ, ಸೂರ್ಯಪಾನ, ನಗೆಹೊಗೆ, ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.ಇವರಿಗೆ ಅರಳು-ಮರಳು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ನಾಕುತಂತಿ ಕವನ ಸಂಕಲನಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆತಿವೆ. ಭಾರತ ಸರಕಾರದ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
💥
11] ಕುಮಾರವ್ಯಾಸ

ಈತನ ಹೆಸರು ಗದುಗಿನ ನಾರಣಪ್ಪ ಕಾಲ ಕ್ರಿಶ 1430. ಇವನು ಗದಗ ಪ್ರಾಂತದ ಕೋಳಿವಾಡದವನು. ವ್ಯಾಸರ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಕನ್ನಡದಲ್ಲಿ ರಚಿಸಿದ್ದಕ್ಕಾಗಿ ಈತನಿಗೆ ಕುಮಾರವ್ಯಾಸ ಎಂಬ ಹೆಸರು ಬಂದಿತು. ಕರ್ಣಾಟ ಭಾರತ ಕಥಾಮಂಜರಿ ಎಂಬುದು ಈತನು ರಚಿಸಿದ ಭಾಮಿನಿ ಪಟ್ಟದಿ ಕಾವ್ಯ, ಐರಾವತ ಎಂಬುದು ಈತನ ಇನ್ನೊಂದು ಕೃತಿ. ತನ್ನ ಕಾವ್ಯದಲ್ಲಿ ರೂಪಕಾಲಂಕಾರವನ್ನು ಹೆಚ್ಚಾಗಿ ಬಳಸಿದ್ದರಿಂದ ಇವನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಇದೆ.

12] ಕುವೆಂಪು

ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರು. ಜನನ 29 ಡಿಸೆಂಬರ್ 1904, ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ ಕವನಸಂಕಲನಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳು.ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿಯ ಕಿಂದರಿಜೋಗಿ- ಮಕ್ಕಳ ಪುಸ್ತಕಗಳು. ಜಲಗಾರ, ಯಮನ ಸೋಲು, ಬೆರಳ ಕೊರಳ ನಾಟಕಗಳು. ನೆನಪಿನ ದೋಣಿಯಲ್ಲಿ ಆತ್ಮಕಥನ. ಇವರಿಗೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ. ರಾಷ್ಟ್ರಕವಿ ಬಿರುದು, ಪದ್ಮಭೂಷಣ, ಪಂಪ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿಗಳು ಲಭಿಸಿವೆ. ಮೈಸೂರು, ಕರ್ನಾಟಕ ಬೆಂಗಳೂರು, ಮತ್ತು ಗುಲ್ಬರ್ಗ ವಿಶ್ವವಿದಾನಿಲಯಗಳಿಂದ ಗೌರವ ಡಾಕ್ಟರೇಟ ಪದವಿಗಳನ್ನು ಪಡೆದಿದ್ದಾರೆ.
💥
13] ರನ್ನ

ಈತನ ಕಾಲ ಕ್ರಿ.ಶ 949.(ಹತ್ತನೆಯ ಶತಮಾನ). ಈತನು ಬಾಗಲಕೋಟ ಜಿಲ್ಲೆಯ ಮುದುವೊಳಲು(ಈಗಿನ ಮುಧೋಳ) ಎಂಬ ಗ್ರಾಮದಲ್ಲಿ ಜನಿಸಿದನು.ತಂದೆ ಜಿನವಲ್ಲಭ; ತಾಯಿ ಅಬ್ಬಲಬ್ಬೆ. ಈತನು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು. ಅವನು ಸಾಹಸ ಭೀಮ ವಿಜಯಂ (ಗದಾಯುದ್ಧ), ಅಜಿತ ತೀರ್ಥಂಕರ ಪುರಾಣತಿಲಕಂ, ಪರಶುರಾಮ ಚರಿತಂ. ಚಕ್ರೇಶ್ವರ ಚರಿತಂ ಎಂಬ ಕಾವ್ಯಗಳನ್ನು ಬರೆದಿದ್ದಾನೆ. ಇವನಿಗೆ ತೈಲಪನು ಕವಿಚಕ್ರವರ್ತಿ ಎಂಬ ಬಿರುದನ್ನು ನೀಡಿದ್ದಾನೆ. ಕನ್ನಡದ ರತ್ನತ್ರಯರಲ್ಲಿ ಈತನೂ ಒಬ್ಬನು.

14] ಲಕ್ಷ್ಮೀಶ

ಲಕ್ಷ್ಮೀಶನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನವನು.ಈತನ ಕಾಲ ಕ್ರಿಶ 1550. ಈತನಿಗೆ ಲಕ್ಷ್ಮೀರಮಣ, ಲಕ್ಷ್ಮೀಪತಿ ಎಂಬ ಹೆಸರುಗಳಿವೆ. ಜೈಮಿನಿ ಭಾರತ ಈತನು ರಚಿಸಿದ ವಾರ್ಧಕ ಷಟ್ಟದಿ ಕಾವ್ಯ.ಲಕ್ಷ್ಮೀಶ ಕವಿಗೆ ಉಪಮಾಲೋಲ, ಕರ್ಣಾಟಕವಿಚೂತವನ ಚೈತ್ರ ಎಂಬ ಬಿರುದುಗಳಿವೆ.

15] ಮಹಾಕವಿ ಪಂಪ

ಈತನ ಕಾಲ ಕ್ರಿಶ 902. ಇವನು ವೆಂಗಿಮಂಡಲದ ವೆಂಗಿಪಳು ಅಗ್ರಹಾರದವನು. ಚಾಲುಕ್ಯರ ಅರಿಕೇಸರಿಯ ಆಸ್ಥಾನ ಕವಿಯಾಗಿದ್ದನು.ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯಂ (ಪಂಪ ಭಾರತ) ಎಂಬ ಮಹಾಕಾವ್ಯಗಳನ್ನು ರಚಿಸಿದ್ದಾನೆ. ಈತನು ಕಲಿಯೂ, ಕವಿಯೂ ಆಗಿದ್ದನು.ರತ್ನತ್ರಯರಲ್ಲಿ ಇವನೂ ಒಬ್ಬನು. ಸರಸ್ವತೀ ಮಣಿಹಾರ, ಸಂಸಾರ ಸಾರೋದಯ,ಕವಿತಾಗುಣಾರ್ಣವ ಎಂಬ ಬಿರುದುಗಳನ್ನು ಪಡೆದಿದ್ದನು.
💥💥



 

Post a Comment

0 Comments

[PDF] HSTR CET Syllabus PDF For High School Teacher Aspirants
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
[PDF]ಭಾರತದ ಇತಿಹಾಸ/ Indian History PDF For All Competitive Exams
10th Class Kannada Medium Social Science Solutions Notes PDF 2025/10ನೇ ತರಗತಿ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಪ್ರಶ್ನೋತ್ತರಗಳ ಪಿಡಿಎಫ್
ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಮಾಹಿತಿ ಪಿಡಿಎಫ್/Information About Kannada Jnanpith Award Winning Poets PDF
🏵ಪ್ರಮುಖ ವಚನಕಾರರು ಮತ್ತು ಅಂಕಿತನಾಮಗಳು 🏵
Kannada Grammar Sandhigalu MCQ Quizzes/ಕನ್ನಡ ವ್ಯಾಕರಣ ಸಂಧಿಗಳು ಉದಾಹರಣೆಗಳ ಮೇಲೆ ರಸಪ್ರಶ್ನೆಗಳು
[PDF] ಎಸ್.ಎಲ್.ಭೈರಪ್ಪ ಅವರ ಗೃಹಭಂಗ ಕಾದಂಬರಿ PDF
Kannada Grammar Samasagalu MCQ Quizzes/ಕನ್ನಡ ವ್ಯಾಕರಣ ಸಮಾಸಗಳ ಉದಾಹರಣೆಗಳ ಮೇಲೆ ರಸಪ್ರಶ್ನೆಗಳು

Important PDF Notes

Ad Code