Ad Code

Ticker

6/recent/ticker-posts

Click Below Image to Join Our Telegram For Latest Updates

ಕನ್ನಡ ವ್ಯಾಕರಣ ಭಾಗ-೧ ವರ್ಣಮಾಲೆಗಳು/Kannada Grammar Part-1 Alphabets

ಕನ್ನಡ ವ್ಯಾಕರಣ ಭಾಗ-1 ವರ್ಣಮಾಲೆಗಳು

Kannada Grammar Part-1 Alphabets

ಕನ್ನಡ ವ್ಯಾಕರಣ ಭಾಗ-1 ವರ್ಣಮಾಲೆಗಳು/Kannada Grammar Part-1 Alphabets


ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ...🙏💐 ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ....💐

ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಲೇಬಲ್ಸ್ ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ. ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.

ಕನ್ನಡ ಬಗೆಗೆ ವಿಶೇಷ ಅಧ್ಯಯನ ಮಾಡಬಯಸುವ ವಿದ್ಯಾರ್ಥಿಗಳು ವ್ಯಾಕರಣವನ್ನು ತಿಳಿದಿರುವುದು ಅವಶ್ಯಕ.  ಈ ಹಿನ್ನಲೆಯಲ್ಲಿ ನಿಮ್ಮ ಚಾಣಕ್ಯ ಕಣಜ ವ್ಯಾಕರಣ ವಿಷಯಾಂಶವನ್ನು ತರಗತಿ ವಿಭಾಗದಂತೆ ಉಪ್ಲೋಡ್ ಮಾಡುತ್ತಿದೆ. 

ಕನ್ನಡ ವ್ಯಾಕರಣ ಭಾಗ-1 ವರ್ಣಮಾಲೆಗಳು

ಅಕ್ಷರಗಳನ್ನು ಕನ್ನಡದಲ್ಲಿ ವರ್ಣಗಳೆಂದು ಹೇಳುವರು ಅದ್ದುದ್ದರಿಂದ ಕನ್ನಡ ಭಾಷೆಯ ಎಲ್ಲಾ ಅಕ್ಷರಗಳನ್ನು ಕನ್ನಡ ವರ್ಣಮಾಲೆಗಳೆಂದು ಕರೆಯುತ್ತಾರೆ. ಕನ್ನಡ ವರ್ಣಮಾಲೆಯಲ್ಲಿ ಮುಖ್ಯವಾಗಿ ವಿಧಗಳು  

೧. ಮೂಲಾಕ್ಷರ 

೨. ಗುಣಿತಾಕ್ಷರ 

೩. ಒತ್ತಕ್ಷರ ಅಥವಾ ಸಂಯುಕ್ತಾಕ್ಷರ 

೧. ಮೂಲಾಕ್ಷರಗಳಲ್ಲಿ ೩ ವಿಧಗಳು  

೧. ಸ್ವರಗಳು 

೨. ವ್ಯಂಜನಗಳು 

೩. ಯೋಗವಾಹಗಳು

೧. ಸ್ವರಗಳು : “ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತೇವೆ” ಒಟ್ಟು ಕನ್ನಡದ ಸ್ವರಗಳು ೧೩

ಉದಾ:

ಸ್ವರಗಳಲ್ಲಿ ೩ ವಿಧಗಳು

೧.  ಹ್ರಸ್ವ ಸ್ವರ
೨.  ದೀರ್ಘ ಸ್ವರ
.  ಪ್ಲುತ ಸ್ವರ 

೧.  ಹ್ರಸ್ವ ಸ್ವರ : “ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು”.ಒಟ್ಟು ಹ್ರಸ್ವಸ್ವರಗಳು 

ಉದಾ:

೨.  ದೀರ್ಘ ಸ್ವರ :“ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ”. ಒಟ್ಟು  ದೀರ್ಘ ಸ್ವರಗಳು 

ಉದಾ:

೩.  ಪ್ಲುತ ಸ್ವರ :“ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ. 

ಉದಾ: ಅಣ್ಣಾss ಅಮ್ಮಾss ಗುರುಗಳೇss ಮುಂತಾದ..

ಮತ್ತು ಇವುಗಳಿಗೆ ಸಂಧ್ಯಾಕ್ಷರಗಳು ಎಂದು ಕರೆಯುತ್ತಾರೆ. 


೨. ವ್ಯಂಜನಗಳು : ಸ್ವತಂತ್ರವಾಗಿ ಉಚ್ಚಾರ ಮಾಡಲು ಬಾರದ ಅಕ್ಷರಗಳಿಗೆ ವ್ಯಂಜನಗಳು ಎನ್ನುತ್ತಾರೆ. ಒಟ್ಟು ವ್ಯಂಜನಾಕ್ಷರಗಳು ೩೪ 

ಕ್ ಖ್ ಗ್
ಚ್ ಛ್ ಜ್
ಟ್ ಠ್ ಡ್ ಣ್
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್
ಯ್ ರ್ ಲ್ ವ್ ಶ್ ಷ್ ಸ್ ಹ್ ಳ್

ವ್ಯಂಜನಗಳಲ್ಲಿ  ೨ ವಿಧಗಳು 

೧. ವರ್ಗೀಯ ವ್ಯಂಜನಗಳು 
೨. ಅವರ್ಗೀಯ ವ್ಯಂಜನಗಳು 

೧. ವರ್ಗೀಯ ವ್ಯಂಜನಗಳು : “ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”. ಒಟ್ಟು ವರ್ಗೀಯ ವ್ಯಂಜನಗಳು ೨೫
ಉದಾಹರಣೆ

ಕ್ ಖ್ ಗ್
ಚ್ ಛ್ ಜ್
ಟ್ ಠ್ ಡ್ ಣ್
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್

ವರ್ಗೀಯ ವ್ಯಂಜನಾಕ್ಷರಗಲ್ಲಿ ೩ ವಿಧಗಳು 

೧. ಅಲ್ಪ ಪ್ರಾಣಾಕ್ಷರಗಳು 
೨. ಮಹಾ ಪ್ರಾಣಾಕ್ಷರಗಳು 
೩. ಅನುನಾಸಿಕಗಳು 

೧. ಅಲ್ಪ ಪ್ರಾಣಾಕ್ಷರಗಳು : “ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ”. ಒಟ್ಟು ಅಲ್ಪ ಪ್ರಾಣಾಕ್ಷರಗಳು ೧೦

ಕ್ ಚ್ ಟ್ ತ್ ಪ್
ಗ್ ಜ್ ಡ್ ದ್ ಬ್

೨. ಮಹಾ ಪ್ರಾಣಾಕ್ಷರಗಳು :“ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ.ಒಟ್ಟು ಮಹಾ ಪ್ರಾಣಾಕ್ಷರಗಳು  ೧೦

ಖ್ ಛ್ ಠ್ ಥ್ ಫ್
ಧ್ ಭ್

೩. ಅನುನಾಸಿಕಗಳು : “ಮೂಗಿನ ಸಹಾಯದಿಂದುಚ್ಚರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ” .ಒಟ್ಟು ಅನುನಾಸಿಕಾಕ್ಷರಗಳು ೫ 

ಣ್ ನ್ ಮ್

೨. ಅವರ್ಗೀಯ ವ್ಯಂಜನಗಳು : “ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ಅವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು”. ಒಟ್ಟು ಅವರ್ಗೀಯ ವ್ಯಂಜನಗಳು  

ಯ್ ರ್ ಲ್ ವ್ ಶ್ ಷ್ ಸ್ ಹ್ ಳ್


೩. ಯೋಗವಾಹಗಳು : “ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ”. ಒಟ್ಟು ಯೋಗವಾಹಕ್ಷರಗಳು ೨ ಅಂ & ಅಃ .  ಯೋಗವಾಹಗಳಲ್ಲಿ ವಿಧಗಳು 

೧. ಅನುಸ್ವಾರ : ೦ 
೨. ವಿಸರ್ಗ : ಃ

೧. ಅನುಸ್ವಾರ : “ಯಾವುದೇ ಅಕ್ಷರವು ಒಂದು ಸೊನ್ನೆ(ಂ) ಬಿಂದು, ಎಂಬ ಸಂಕೇತವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು”, 

ಉದಾ: ಅಂಕ ಒಂದು ಎಂಬ ಮುಂತಾದ..

೨. ವಿಸರ್ಗ : “ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೆಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ ಎನಿಸುವುದು” 

ಉದಾ: ಅಂತಃ ದುಃಖ ನಃ ಮುಂತಾದ..

ಗಮನಿಸಿ : ಇಲ್ಲಿಯವರೆಗೂ ವರ್ಣಮಾಲೆಯ ಮೂಲಾಕ್ಷರಗಳ ಬಗ್ಗೆ ತಿಳಿಸಲಾಗಿದೆ. ಇನ್ನು ಮುಂದಿನ ಭಾಗದಲ್ಲಿ ಮೂಲಾಕ್ಷರಗಳ ಉಚ್ಚಾರ ಸ್ಥಾನ, ಮತ್ತು ಗುಣಿತಾಕ್ಷರಗಳು ಹಾಗೂ ಒತ್ತಕ್ಷರಗಳ ಬಗ್ಗೆ ಉಪಲೋಡ್ ಮಾಡಲಾಗುವುದು. ಪ್ರತಿ ದಿನದ ಉಪಡೇಟ್ಸ್ ಗಾಗಿ ನಮ್ಮ ವೆಬ್ ಸೈಟ್ ಗೆ ಭೇಟಿ ಕೊಡಿ. www.chanakyakanaja.com ಧನ್ಯವಾದಗಳು 


Post a Comment

0 Comments

Important PDF Notes

Ad Code