Ad Code

Ticker

6/recent/ticker-posts

Click Below Image to Join Our Telegram For Latest Updates

National Parks in India General Knowledge For All Competitive Exams/ಭಾರತದ ರಾಷ್ಟ್ರೀಯ ಉದ್ಯಾನಗಳು

National Parks in India

ಭಾರತದ ರಾಷ್ಟ್ರೀಯ ಉದ್ಯಾನಗಳು 

National Parks in India General Knowledge For All Competitive Exams/ಭಾರತದ ರಾಷ್ಟ್ರೀಯ ಉದ್ಯಾನಗಳು

ಭಾರತದ ರಾಷ್ಟ್ರೀಯ ಉದ್ಯಾನಗಳು
ರಾಜ್ಯವಾರು
ಕರ್ನಾಟಕದ ರಾಷ್ಟ್ರೀಯ ಉದ್ಯಾನಗಳು
1) ಬಂಡಿಪುರ ರಾಷ್ಟ್ರೀಯ ಉದ್ಯಾನವನ
2) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
3)ಅಣಶಿ/ ಅಂಶಿ ರಾಷ್ಟ್ರೀಯ ಉದ್ಯಾನವನ
4) ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ
5) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

1) ಬಂಡಿಪುರ ರಾಷ್ಟ್ರೀಯ ಉದ್ಯಾನಗಳು -1974
ಇದನ್ನು 1974 ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಮಾಡಲಾಯಿತು. ಇದು ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಕಂಡುಬರುತ್ತದೆ.ಇಲ್ಲಿ NH-67 & NH-212 ಈ  ರಾಷ್ಟ್ರೀಯ ಹೆದ್ದಾರಿಗಳು ಈ ಉದ್ಯಾನವನ ಮಾರ್ಗದಲ್ಲಿ ಹಾದು ಹೋಗುತ್ತದೆ. ಈ ಉದ್ಯಾನವನಕ್ಕೆ ಚಾಚಿಕೊಂಡಿರುವ ಇನ್ನಿತರ ಉದ್ಯಾನವನ ಮಧುಮಲೈ ರಾಷ್ಟ್ರೀಯ ಉದ್ಯಾನವನ.ಈ ಉದ್ಯಾನವನದಲ್ಲಿ ಕಂಡುಬರುವ ಪ್ರಾಣಿಗಳು ಪ್ರಮುಖವಾಗಿ-ಹುಲಿ, ಚಿರತೆ,ಆನೆ,ಕಾಡುನಾಯಿ ಮುಂತಾದವುಗಳು. ಅತಿ ಹೆಚ್ಚು ಹುಲಿಗಳು ಕಂಡುಬರುವ ಉದ್ಯಾನವನ ಬಂಡಿಪುರ ಉದ್ಯಾನವನವಾಗಿದೆ.

National Parks in India/ಭಾರತದ ರಾಷ್ಟ್ರೀಯ ಉದ್ಯಾನಗಳು


2) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ -1974
ಇದನ್ನು ಸಹ 1974ರಲ್ಲಿ  ರಾಷ್ಟ್ರೀಯ ಉದ್ಯಾನವನವಾಗಿ ಮಾಡಲಾಯಿತು.ಈ ಉದ್ಯಾನವನವು ಬೆಂಗಳೂರು ನಗರ ಜಿಲ್ಲೆಯಲ್ಲಿ ಕಂಡುಬರುತ್ತದೆ.ಈ ಉದ್ಯಾನವನದಲ್ಲಿ ದೇಶದ ಮೊದಲ ಚಿಟ್ಟೆ ಉದ್ಯಾನವನವನ್ನು 2016 ರಲ್ಲಿ ಸ್ಥಾಪಿಸಲಾಗಿದೆ.ಈ ಉದ್ಯಾನವನದಲ್ಲಿ ಕಂಡುಬರುವ ಪ್ರಾಣಿಗಳು ಪ್ರಮುಖವಾಗಿ-ಹುಲಿ, ಸಿಂಹ,ಆನೆ,ನವಿಲು ಮುಂತಾದವುಗಳು.

3) ಅಣಶಿ/ಅಂಶಿ ರಾಷ್ಟ್ರೀಯ ಉದ್ಯಾನವನ -1987
ಈ ಉದ್ಯಾನವನವು 1987 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಮಾಡಲಾಯಿತು.ಇದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಹತ್ತಿರ ಕಂಡುಬರುತ್ತದೆ.ಈ ಉದ್ಯಾನವನದಲ್ಲಿ ಹರಿಯುವ ನದಿ ಕಾಳಿ ನದಿ.ಈ ಉದ್ಯಾನವನದಲ್ಲಿ ಕಂಡುಬರುವ ಪ್ರಾಣಿಗಳು ಪ್ರಮುಖವಾಗಿ-ಹುಲಿ ನವಿಲು,ಕಾಡುನಯಿ ಮುಂತಾದವುಗಳು ಇಲ್ಲಿ ವಿಶೇಷವಾಗಿ ಕರಿಚಿರತೆ ಕಂಡು ಬರುತ್ತದೆ.

4) ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ -1987
ಈ ಉದ್ಯಾನವನವನ್ನು 1987 ರಾಷ್ಟ್ರೀಯ ಉದ್ಯಾನವನವಾಗಿ ಪರಿಗಣಿಸಲಾಯಿತು.ಇದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಂಡುಬರುತ್ತದೆ.ಇದು ಅತಿ ಎತ್ತರದ ಉದ್ಯಾನವನ ಎಂದು ಕರೆಯಲಾಗುತ್ತದೆ. ಈ ಉದ್ಯಾನವನ ನೋಡಲು ಕುದುರೆ ಮುಖದಂತೆ ಕಾಣುವುದರಿಂದ ಇದಕ್ಕೆ ಕುದುರೆ ಮುಖ ಉದ್ಯಾನವನ ಎಂದು ಕರೆಯಲಾಗುತ್ತದೆ.ಈ ಉದ್ಯಾನವನದಲ್ಲಿ ಅತಿ ಹೆಚ್ಚು ಕಬ್ಬಿಣದ ನಿಕ್ಷೇಪ/ಅದಿರುಗಳು ಕಂಡುಬರುತ್ತವೆ.ಇಲ್ಲಿ ಉಗಮವಾಗುವ ನದಿಗಳು ತುಂಗಭದ್ರಾ & ನೇತ್ರಾವತಿ.ಇಲ್ಲಿ ಕಂಡುಬರುವ ಪ್ರಾಣಿಗಳು ಹುಲಿ, ನವಿಲು, ಕಾಡುಹಂದಿಗಳು ಮುಂತಾದವುಗಳು.

5) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ -1988
ಈ ಉದ್ಯಾನವನವನ್ನು 1988 ರಾಷ್ಟ್ರೀಯ ಉದ್ಯಾನವನವಾಗಿ ಮಾಡಲಾಯಿತು.ಇದು ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಕಂಡುಬರುತ್ತದೆ.ಈ ಉದ್ಯಾನವನದಲ್ಲಿ ಹರಿಯುವ ನದಿಗಳು ಕಬಿನಿ, ಲಕ್ಷ್ಮಣತೀರ್ಥ ಮತ್ತು ನಾಗರಹೊಳೆ.ಈ ನಾಗರಹೊಳೆ ಹೆಸರು ಬರಲು ಕಾರಣ ನಾಗರದಂತೆ ಹರಿಯುವ ನದಿಯನ್ನು ಅಲ್ಲಿಯ ಜನರು ನಾಗರಹೊಳೆ ಎಂದು ಕರೆದಿದ್ದರಿಂದ ಈ ಉದ್ಯಾನವನಕ್ಕೆ ನಾಗರಹೊಳೆ ಎಂದು ಕರೆಯಲಾಗುತ್ತದೆ.ಇಲ್ಲಿ ಕಂಡುಬರುವ ಪ್ರಾಣಿಗಳು ಹುಲಿ, ಸಿಂಹ, ನವಿಲು,ಕರಡಿ ಮುಂತಾದವುಗಳು. ಈ ಉದ್ಯಾನವನದಲ್ಲಿ ಕಂಡುಬರುವ ಬುಡಕಟ್ಟು ಜನಾಂಗಗಳು ಕಾಡುಕುರುಬ, ಹೆಕ್ಕಿ ನಿಕ್ಕಿ ಜನಾಂಗಗಳು ಕಂಡುಬರುತ್ತವೆ.

ತಮಿಳುನಾಡು ರಾಜ್ಯದ ರಾಷ್ಟ್ರೀಯ ಉದ್ಯಾನಗಳು
1) ಗುಂಡ್ಯ ರಾಷ್ಟ್ರೀಯ ಉದ್ಯಾನವನ
2) ಮದುಮಲೈ ರಾಷ್ಟ್ರೀಯ ಉದ್ಯಾನವನ/ಇಂದಿರಾಗಾಂಧಿ ರಾಷ್ಟ್ರೀಯ ಉದ್ಯಾನವನ
3) ಗಲ್ಫ್ ಆಫ್ ಮುನ್ನಾರ್/ಮರಿನ ರಾಷ್ಟ್ರೀಯ ಉದ್ಯಾನವನ

National Parks in India/ಭಾರತದ ರಾಷ್ಟ್ರೀಯ ಉದ್ಯಾನಗಳು

ಕೇರಳ ರಾಜ್ಯದ ರಾಷ್ಟ್ರೀಯ ಉದ್ಯಾನಗಳು
1) ಪೆರಿಯಾರ್ ರಾಷ್ಟ್ರೀಯ ಉದ್ಯಾನವನ
2) ಪಂಭುಧಾಮ ರಾಷ್ಟ್ರೀಯ ಉದ್ಯಾನವನ
3) ಸೈಲೆಂಟ್ ವ್ಯಾಲಿ/ ನಿಶಬ್ಧ ಕಣಿವೆ ರಾಷ್ಟ್ರೀಯ ಉದ್ಯಾನವನ
4) ಎರ್ನಾಕುಲಂ ರಾಷ್ಟ್ರೀಯ ಉದ್ಯಾನವನ

ಆಂಧ್ರಪ್ರದೇಶ ರಾಜ್ಯದ ರಾಷ್ಟ್ರೀಯ ಉದ್ಯಾನಗಳು
1) ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನವನ

ತೆಲಂಗಾಣ ರಾಜ್ಯದ ರಾಷ್ಟ್ರೀಯ ಉದ್ಯಾನಗಳು
1)ಮೃಗವಾಣಿ ರಾಷ್ಟ್ರೀಯ ಉದ್ಯಾನವನ
2) ಶ್ರೀ ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನವನ

ಮಹಾರಾಷ್ಟ್ರ ರಾಜ್ಯದ ರಾಷ್ಟ್ರೀಯ ಉದ್ಯಾನಗಳು
1) ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ
2) ತಡೊಬ ರಾಷ್ಟ್ರೀಯ ಉದ್ಯಾನವನ
3) ಪಂಚ್ ರಾಷ್ಟ್ರೀಯ ಉದ್ಯಾನವನ
4) ಚಂಡೋಲಿ ರಾಷ್ಟ್ರೀಯ ಉದ್ಯಾನವನ

ಮಧ್ಯ ಪ್ರದೇಶ  ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಬಂದ್ಹವ್ಯಾಘ್ರ ರಾಷ್ಟ್ರೀಯ ಉದ್ಯಾನವನ
2)ಕನ್ಹ ರಾಷ್ಟ್ರೀಯ ಉದ್ಯಾನವನ
3)ಪನ್ಹ ರಾಷ್ಟ್ರೀಯ ಉದ್ಯಾನವನ
4)ಮಾಧವ ರಾಷ್ಟ್ರೀಯ ಉದ್ಯಾನವನ
5) ಸಾತ್ಪುರ ರಾಷ್ಟ್ರೀಯ ಉದ್ಯಾನವನ
6) ಕುನೋ ರಾಷ್ಟ್ರೀಯ ಉದ್ಯಾನವನ

ಗುಜರಾತ್  ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1) ಬ್ಲಾಕ್ ಬುಕ್ ರಾಷ್ಟ್ರೀಯ ಉದ್ಯಾನವನ
2) ಗಲ್ಫ್ ಆಫ್ ಕಚ್ ರಾಷ್ಟ್ರೀಯ ಉದ್ಯಾನವನ
3) ಗಿರ್. ರಾಷ್ಟ್ರೀಯ ಉದ್ಯಾನವನ

ಉತ್ತರ ಪ್ರದೇಶ  ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ದುದ್ವ ರಾಷ್ಟ್ರೀಯ ಉದ್ಯಾನವನ

ಉತ್ತರ ಖಂಡ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1) ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
1936 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಯಿತು. ಇದು ದೇಶದ ಮೊದಲ ರಾಷ್ಟ್ರೀಯ ಉದ್ಯಾನವನವಾಗಿದೆ.ಈ ಉದ್ಯಾನವನದ ಮೊದಲ ಹೆಸರು ಹೈಲೆ ರಾಷ್ಟ್ರೀಯ ಉದ್ಯಾನವನ.
2) ರಾಜಾಜಿ ರಾಷ್ಟ್ರೀಯ ಉದ್ಯಾನವನ
3) ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ
4) ಫ್ಲವರ್ ಆಫ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ

ಹಿಮಾಚಲ ಪ್ರದೇಶ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1) ಗ್ರೇಟ್ ಹಿಮಾಲಯ ರಾಷ್ಟ್ರೀಯ ಉದ್ಯಾನವನ
2) ಪಿನ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ

ರಾಜಸ್ಥಾನ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಕಿಯೋಲಾಡಿಯೋ ರಾಷ್ಟ್ರೀಯ ಉದ್ಯಾನವನ
2) ಡೆಸಾರ್ಟ್  ರಾಷ್ಟ್ರೀಯ ಉದ್ಯಾನವನ
3) ಸರಿಸ್ಕಾ  ರಾಷ್ಟ್ರೀಯ ಉದ್ಯಾನವನ
4) ರಣತಂಬೂರ್ ರಾಷ್ಟ್ರೀಯ ಉದ್ಯಾನವನ

ಬಿಹಾರ್ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1) ವಾಲ್ಮೀಕಿ ರಾಷ್ಟ್ರೀಯ ಉದ್ಯಾನವನ

ಛತ್ತೀಸಗಢ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಇಂದಿರಾವತ ರಾಷ್ಟ್ರೀಯ ಉದ್ಯಾನವನ
2)ಗುರುದಾಸಿ ರಾಷ್ಟ್ರೀಯ ಉದ್ಯಾನವನ

ಜಾರ್ಖಂಡ್ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಬೆಟ್ವಾ ರಾಷ್ಟ್ರೀಯ ಉದ್ಯಾನವನ
2)ಹಜಾರಿ ಬಾಗ್ ರಾಷ್ಟ್ರೀಯ ಉದ್ಯಾನವನ

National Parks in India/ಭಾರತದ ರಾಷ್ಟ್ರೀಯ ಉದ್ಯಾನಗಳು

ಅರುಣಾಚಲ ಪ್ರದೇಶ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ನಮದಪಾ ರಾಷ್ಟ್ರೀಯ ಉದ್ಯಾನವನ

ಮಣಿಪುರ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಕೈಬುಲ್ ಲಾಮೊಜೋ ರಾಷ್ಟ್ರೀಯ ಉದ್ಯಾನವನ

ಮೇಘಾಲಯ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ನೇಕ್ರೆಕ್ ರಾಷ್ಟ್ರೀಯ ಉದ್ಯಾನವನ

ನಾಗಾಲ್ಯಾಂಡ್ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಇಂಟಿಕೆ ರಾಷ್ಟ್ರೀಯ ಉದ್ಯಾನವನ

ಒಡಿಶಾ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನವನ
2)ಬೈತರ ಕನ್ನಿಕಾ ರಾಷ್ಟ್ರೀಯ ಉದ್ಯಾನವನ
3)ಕಾನನ ರಾಷ್ಟ್ರೀಯ ಉದ್ಯಾನವನ

ಪಶ್ಚಿಮ ಬಂಗಾಳ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1) ಸುಂದರ ಬನ್ ರಾಷ್ಟ್ರೀಯ ಉದ್ಯಾನವನ
2) ಘೋಮೊರ್ ರಾಷ್ಟ್ರೀಯ ಉದ್ಯಾನವನ
3) ಬಕ್ಸ ರಾಷ್ಟ್ರೀಯ ಉದ್ಯಾನವನ

ಅಸ್ಸಾಂ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಕಾಜಿರಂಗ ರಾಷ್ಟ್ರೀಯ ಉದ್ಯಾನವನ
2)ಮಾನಸ ರಾಷ್ಟ್ರೀಯ ಉದ್ಯಾನವನ
3)ನಮೇರಿ ರಾಷ್ಟ್ರೀಯ ಉದ್ಯಾನವನ

ಗೋವಾ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಮಹಾವೀರ ರಾಷ್ಟ್ರೀಯ ಉದ್ಯಾನವನ

ಹರಿಯಾಣ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಸುಲ್ತಾನಪುರ ರಾಷ್ಟ್ರೀಯ ಉದ್ಯಾನವನ

ಸಿಕ್ಕಿಂ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಕಾಂಚನಜುಂಗ ರಾಷ್ಟ್ರೀಯ ಉದ್ಯಾನವನ

ಮಿಜೋರಾಂ ರಾಜ್ಯದ ರಾಷ್ಟ್ರೀಯ ಉದ್ಯಾನಗಳು

1)ಪುಂಗುಪಾಯಿ ರಾಷ್ಟ್ರೀಯ ಉದ್ಯಾನವನ

ಕೇಂದ್ರಾಡಳಿತ ಪ್ರದೇಶಗಳ ರಾಷ್ಟ್ರೀಯ ಉದ್ಯಾನಗಳು

ಜಮ್ಮು ಕಾಶ್ಮೀರ  ರಾಷ್ಟ್ರೀಯ ಉದ್ಯಾನಗಳು

1) ಸಲೀಂ ಅಲಿ ರಾಷ್ಟ್ರೀಯ ಉದ್ಯಾನವನ
2) ಡಚ್ಚಿಗಮ್ ರಾಷ್ಟ್ರೀಯ ಉದ್ಯಾನವನ

ಲಡಾಕ್ ರಾಷ್ಟ್ರೀಯ ಉದ್ಯಾನಗಳು
1)ಹೆಮಿಸ್ ರಾಷ್ಟ್ರೀಯ ಉದ್ಯಾನವನ

ಅಂಡಮಾನ್ ಮತ್ತು ನಿಕೋಬಾರ್ ರಾಷ್ಟ್ರೀಯ ಉದ್ಯಾನಗಳು
1) ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯಾನವನ
2) ಝಾನ್ಸಿ ರಾಣಿ ಮರಿನಾ ರಾಷ್ಟ್ರೀಯ ಉದ್ಯಾನವನ

Post a Comment

0 Comments

Important PDF Notes

Ad Code