Ad Code

Ticker

6/recent/ticker-posts

Click Below Image to Join Our Telegram For Latest Updates

Republic day speech in kannada for school childrens 26 January 2023/ಶಾಲಾ ಮಕ್ಕಳಿಗೆ ಕನ್ನಡದಲ್ಲಿ ಗಣರಾಜ್ಯೋತ್ಸವದ ಭಾಷಣಗಳು 26 ಜನವರಿ 2023

Republic day speech in kannada for school childrens 26 January 2023

ಶಾಲಾ ಮಕ್ಕಳಿಗೆ ಕನ್ನಡದಲ್ಲಿ ಗಣರಾಜ್ಯೋತ್ಸವದ  ಭಾಷಣಗಳು 26 ಜನವರಿ 2023 

Republic day speech in kannada for school childrens 26 January  2023/ಶಾಲಾ ಮಕ್ಕಳಿಗೆ ಕನ್ನಡದಲ್ಲಿ ಗಣರಾಜ್ಯೋತ್ಸವದ  ಭಾಷಣಗಳು 26 ಜನವರಿ 2023
💥
ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 🙏💐💐

ಶಾಲಾ ಮಕ್ಕಳಿಗೆ ಕನ್ನಡದಲ್ಲಿ ಗಣರಾಜ್ಯೋತ್ಸವದ  ಭಾಷಣಗಳು ಜನವರಿ 2023 


ಗಣರಾಜ್ಯೋತ್ಸವದ ಪುಟ್ಟ ಭಾಷಣ:01

      ಎಲ್ಲರಿಗೂ ಈ ದಿನದ ಶುಭ ವಂದನೆಗಳು , ವೇದಿಕೆಯಮೇಲೆ ಆಸೀನರಾದ ಎಲ್ಲ ಅತಿಥಿ ಮೊಹೋದಯರಿಗೂ ಹಾಗೂ ನನ್ನ ಗುರುವೃಂದಕ್ಕೂ  74ನೇ ಗಣರಾಜ್ಯೋತ್ಸವದ ಶುಭಾಶಯಗಳು.

    ನಮಗೆಲ್ಲರಿಗೂ ತಿಳಿದಿರುವಂತೆ ಇಂದು ನಾವು 74ನೇ ಗಣರಾಜ್ಯೋತ್ಸವವನ್ನು ಆಚರಿಸಲು ಇಲ್ಲಿ ಸೇರಿದ್ದೇವೆ. ಪ್ರತಿ ವರ್ಷ  ಜನವರಿ 26ರಂದು ಗಣರಾಜ್ಯೋತ್ಸವವನ್ನು  ಆಚರಣೆ ಮಾಡುತ್ತೇವೆ. ಇಂದು ಭಾರತ ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ನಾನು ಭಾರತ ದೇಶದ ಪ್ರಜೆಯಾಗಿರುವುದಕ್ಕೆ ತುಂಬಾ ಹೆಮ್ಮೆಪಡುತ್ತೇನೆ. ಸಂವಿಧಾನ ಜಾರಿಗೆ ಬಂದ ನಂತರ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್ಯ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುತ್ತವೆ. ಇಂತಹ ಶುಭದಿನ ಮತ್ತು ಐತಿಹಾಸಿಕ ದಿನದಂದು ನಮ್ಮ ದೇಶದ ಸ್ವಾತಂತ್ರ್ಯ ಹಾಗೂ ಸಂವಿಧಾನಕ್ಕಾಗಿ ಶ್ರಮಿಸಿದ ಎಲ್ಲರಿಗೂ ತಲೆ ಬಾಗಿಸಿ ನೇಮಿಸಬೇಕಿದೆ. ಇಂದು ನಮ್ಮ ದೇಶದ ಬಗ್ಗೆ ಮತ್ತು ಸಂವಿಧಾನದ ಜಾರಿಗೆ ಬಂದ ದಿನದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ತುಂಬಾ ಸಂತೋವಾಗುತ್ತಿದ್ದು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ಜೈ ಹಿಂದ್ ಜೈ ಭಾರತ ಮಾತಾ 
💥
ಗಣರಾಜ್ಯೋತ್ಸವದ ಪುಟ್ಟ ಭಾಷಣ:02

     ಜನವರಿ 26 ಗಣರಾಜ್ಯೋತ್ಸವದ ಭಾಷಣ ಎಲ್ಲಾ ನನ್ನ ಸ್ನೇಹಿತರಿಗೆ ಹಾಗೂ ಗುರುವೃಂದರಿಗೆ ಬೆಳಗಿನ ಶುಭೋದಯ.

      ಭಾರತೀಯ ಸಂವಿಧಾನ ಜಾರಿಗೆ ಬಂದು ಇಂದಿಗೆ 74 ವರ್ಷಗಳಾದವು,  ಭಾರತ ಗಣರಾಜ್ಯವಾದದ್ದು ಜನವರಿ 26 1950ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ, ಹಾಗೂ ಜನರಿಗೆ ಕೆಲಸ ಮಾಡುವ ಕಾರ್ಯುಗಗಳು ಹೇಗಿರಬೇಕು? ಯಾವೆಲ್ಲ ನಿಯಮಗಳನ್ನ ಕಟ್ಟಳೆಗಳನ್ನ ಅವರು ಪಾಲಿಸಬೇಕು? ಎಂಬೆಲ್ಲ ಸೂಚನೆಗಳನ್ನ ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಛವೇ ಸಂವಿಧಾನ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ 1950 ಜನವರಿ 26ರಂದು ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳದ್ದೇ ಸರಕಾರ  ಅಸ್ತಿತ್ವಕ್ಕೆ ಬಂದಿತು. ಭಾರತೀಯರಾದ ನಾವು ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನ ಕಾಪಾಡುವ ಭೂಸೇನೆ, ವಾಯು ಸೇನೆ ಹಾಗೂ ನೌಕಾಸೇನೆಯ ಎಲ್ಲಾ ಸೈನಿಕರಿಗೂ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲಾ ವಿಜ್ಞಾನಿಗಳಿಗೂ, ತಂತ್ರಜ್ಞರಿಗೆ ಮತ್ತು ದೇಶದ ಬೆನ್ನೆಲುಬಾದ ರೈತ ವರ್ಗಕ್ಕೂ ನಾವು ಈ ಸಂದರ್ಭದಲ್ಲಿ ಚಿರಋಣಿಯಾಗಿರುತ್ತಾ ದೇಶದ ಸರ್ವಂಗೀಣ  ಅಭಿವೃದ್ಧಿಗೆ ನಮ್ಮ ಸೇವೆ ಸಲ್ಲಿಸೋಣ ಎಂದು ಶಪಥ ಮಾಡೋಣ. ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. ಜೈ ಹಿಂದ್ ಜೈ ಭಾರತ ಮಾತಾ 

💥
ಗಣರಾಜ್ಯೋತ್ಸವದ ಪುಟ್ಟ ಭಾಷಣ:03

     ಎಲ್ಲರಿಗೂ ನಮಸ್ಕಾರಗಳು, ವೇದಿಕೆ ಮೇಲೆ ಆಸೀನರಾಗಿರುವ ಸನ್ಮಾನ್ಯ ಅತಿಥಿಗಳಿಗೆ ಹಾಗೂ ನನ್ನ ಸ್ನೇಹಿತರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

    1950ರಲ್ಲಿ ಔಪಚಾರಿಕವಾಗಿ ಅಂಗೀಕರಿಸಲ್ಪಟ್ಟ ಭಾರತದ ಸಂವಿಧಾನವು ಬ್ರಿಟಿಷ್  ವಸಾಹತುಶಾಹಿ ಸರ್ಕಾರದ ಕಾಯಿದೆ 1935ನ್ನು ದೇಶದ ಆಡಳಿತ ಪಠ್ಯವಾಗಿ ಬದಲಾಯಿಸಿತು. ಜನವರಿ 26, 1950 ರಂದು ಭಾರತದ ಸಂವಿಧಾನದ ಪೀಠಿಕೆ, ಸಂವಿಧಾನದ ಪ್ರಮುಖ ತತ್ವಗಳನ್ನು, ಪ್ರಸ್ತುತಪಡಿಸುವ ಹೇಳಿಕೆ ಜಾರಿಗೆ ಬಂದಿತು. ಇದು ಸಾರ್ವಭೌಮ ಗಣರಾಜ್ಯಕ್ಕೆ ದೇಶದ ಪರಿವರ್ತನೆಯನ್ನು ಪೂರ್ಣಗೊಳಿಸಿತು. ಸಂವಿಧಾನವು ಈ ದೇಶದ ಎಲ್ಲಾ ನಾಗರಿಕರು ಅವರ ರಾಜಕೀಯ ನಂಬಿಕೆಗಳನ್ನ ಲೆಕ್ಕಿಸದೆ ಅನುಭವಿಸಬೇಕಾದ ಮೂಲಭೂತ ಹಕ್ಕುಗಳನ್ನು ಸ್ಥಾಪಿಸುತ್ತದೆ. ಇದು ದೇಶದ ಎಲ್ಲಾ ನಾಗರಿಕರಿಗೆ ಪಾಲಿಸಬೇಕಾದ ಕೆಲವು ಮೂಲಭೂತ ಕರ್ತವ್ಯಗಳನ್ನ ಸಹ ಸ್ಥಾಪಿಸುತ್ತದೆ.ಎಂದು ಹೇಳುತ್ತಾ ನನ್ನ ಈ ಪುಟ್ಟ ಭಾಷಣಕ್ಕೆ ವಿರಾಮವಿಡುತ್ತೇನೆ. ಜೈ ಹಿಂದ್ ಜೈ ಭಾರತ ಮಾತಾ 

💥

ಗಣರಾಜ್ಯೋತ್ಸವದ ಪುಟ್ಟ ಭಾಷಣ:04

     ಸನ್ಮಾನ್ಯ ಅಧ್ಯಕ್ಷರೇ ಮುಖ್ಯ ಅತಿಥಿಗಳೇ ಊರಿನ ಗಣ್ಯರೇ ಮುಖ್ಯ ಗುರುಗಳೇ, ಶಿಕ್ಷಕರೇ ಹಾಗೂ ನನ್ನ ಪ್ರೀತಿಯ ಗೆಳೆಯರೇ, ಎಲ್ಲರಿಗೂ ಶುಭೋದಯ ಹಾಗೂ 74ನೆಯ ಗಣರಾಜ್ಯೋತ್ಸವದ ಶುಭಾಶಯಗಳು. 

     ಪ್ರತಿರ್ವ ನಾವು ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಭಾರತದಲ್ಲಿ ಗಣರಾಜ್ಯ ಮತ್ತು ಸಂವಿಧಾನ ಜಾರಿಗೆ ಬಂದ ದಿನವಿದು. ಈ ದಿನವೂ ನಮ್ಮ ದೇಶ ಹೆಮ್ಮೆ ಮತ್ತು ಗೌರವ ಹೆಚ್ಚಿಸುವ ಈ ದಿನವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಇದನ್ನು ಮೊದಲು 26 ಜನವರಿ 1950 ರಂದು ಆಚರಿಸಲಾಗಿತ್ತು. ಅಂದಿನಿಂದ ಈ ಹಬ್ಬವನ್ನು ಪ್ರತಿ ರ್ವ ಆಚರಿಸಲಾಗುತ್ತದೆ. ಈ ದಿನದ ಗೌರವಾರ್ಥವಾಗಿ ಅನೇಕ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಾರೆ. ಪ್ರತಿಯೊಂದು ಶಾಲಾ-ಕಾಲೇಜುಗಳನ್ನು ಕೂಡ ಕಾರ್ಯಕ್ರಮಗಳು ಜರಗುತ್ತವೆ ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ. ಜೈ ಹಿಂದ್ ಜೈ ಭಾರತ ಮಾತಾ 
💥
ಗಣರಾಜ್ಯೋತ್ಸವದ ಪುಟ್ಟ ಭಾಷಣ:05

     ವೇದಿಕೆಯ ಮೇಲೆ ಆಸಿನರಾಗಿರುವ ಗಣ್ಯರೇ, ಮುಖ್ಯ ಗುರುಗಳೇ, ಶಿಕ್ಷಕರೇ ಹಾಗೂ ನನ್ನ ಗೆಳೆಯರೆಲ್ಲರಿಗೂ ಶುಭೋದಯ ಹಾಗೂ ಗಣರಾಜ್ಯೋತ್ಸವದ ಶುಭಾಶಯಗಳು.

     ಗಣರಾಜ್ಯೋತ್ಸವದ ಕುರಿತು ಒಂದೆರಡು ಮಾತನಾಡಲು ಬಯಸುತ್ತೇನೆ. ಭಾರತದಲ್ಲಿ ಸಂವಿಧಾನ ಅಂಗೀಕಾರ ವಾಗಿದ್ದು 1949 ನವೆಂಬರ್ 26 ರಂದೇ ಆದರೂ ಅನುಷ್ಠಾನಕ್ಕೆ  ತಂದಿದ್ದು 1950 ಜನವರಿ 26ರಂದು. ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ. ಭಾರತ ಸಂವಿಧಾನ ಜನರನ್ನು ಸೂಕ್ಷ್ಮಗೊಳಿಸಿದೆ. ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲಭೂತ ಹಕ್ಕುಗಳನ್ನ ನೀಡಿದೆ. ಕರ್ತವ್ಯಗಳನ್ನ ನೀಡಿದೆ. ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ. ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಗ್ರಂಥ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ. ಜೈ ಹಿಂದ್ ಜೈ ಭಾರತ ಮಾತಾ 
💥
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
💥



Post a Comment

0 Comments

Social Science Quizzes For all Competitive Exams Part-95/ಸಮಾಜ ವಿಜ್ಞಾನ ರಸಪ್ರಶ್ನೆಗಳು
Karnataka TET Kannada Pedagogy Quiz Series-04/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-04
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Karnataka TET Environmental Science Quiz Series-03/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-03
General Kannada Quiz For All Competitive Exams Part-57
Geography Quizzes For All Competitive Exams Part-52/ ಭೂಗೋಳಶಾಸ್ತ್ರದ ರಸಪ್ರಶ್ನೆಗಳು-52
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
KARTET Educational Psychology Quiz Series-05/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-05
General Knowledge Questions Answers PDF/ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳ ಪಿಡಿಎಫ್
Karnataka TET Social Science and Social Science Pedagogy Quiz Series-02/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02

Important PDF Notes

Ad Code