Ad Code

Ticker

6/recent/ticker-posts

Click Below Image to Join Our Telegram For Latest Updates

Political Science and Constitution of India Multiple Choice Questions with Explanations/ಭಾರತದ ರಾಜ್ಯಶಾಸ್ತ್ರ ಮತ್ತು ಸಂವಿಧಾನ ಬಹು ಆಯ್ಕೆಯ ಪ್ರಶ್ನೋತ್ತರಗಳು ವಿವರಣೆ ಸಹಿತ

Political Science and Constitution of India Multiple Choice Questions with Explanations

ಭಾರತದ ರಾಜ್ಯಶಾಸ್ತ್ರ ಮತ್ತು ಸಂವಿಧಾನ ಬಹು ಆಯ್ಕೆಯ ಪ್ರಶ್ನೋತ್ತರಗಳು ವಿವರಣೆ ಸಹಿತ

Political Science and Constitution of India Multiple Choice Questions with Explanation

1] ಲೋಕಸಭೆಯ ಕೆಳಕಂಡ ಯಾವ ಸಭಾಪತಿಯನ್ನು ಅವರು ಅಧಿಕಾರದಲ್ಲಿರುವಾಗಲೇ ಪಕ್ಷದಿಂದ ವಜಾ ಮಾಡಲಾಯಿತು.

1) ಬಲರಾಮ್ ಭಗತ್ 
2) ಸಂಜೀವರೆಡ್ಡಿ
3)  ಸೋಮನಾಥ ಚಟರ್ಜಿ 
4)  ಮಾವಳಂಕರ್‌

ವಿವರಣೆ : 14ನೇ ಲೋಕಸಭೆ 2004 ರಿಂದ 2009ರ ವರೆಗೆ ಅಸ್ತಿತ್ವದಲ್ಲಿತ್ತು. ಯು.ಪಿ.ಎ. ನೇತೃತ್ವದ ಮೊದಲ ಅವಧಿಯ ಈ ಸರ್ಕಾರದಲ್ಲಿ ಮನಮೋಹನ್ ಸಿಂಗ್‌ರವರು ಪ್ರಧಾನಿಯಾಗಿದ್ದರು. ಈ ಅವಧಿಯಲ್ಲಿ ಸಿಪಿಎಂ(ಎಂ) ಪಕ್ಷವು ಸರ್ಕಾರದಲ್ಲಿ ಭಾಗವಹಿಸದೆ ಬಾಹ್ಯ ಬೆಂಬಲ ನೀಡಿತ್ತು. ಈ ಪಕ್ಷದ ಹಿರಿಯ ಸದಸ್ಯರು ಹಾಗೂ ಹೆಚ್ಚು ಸಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಸೋಮನಾಥ ಚಟರ್ಜಿಯವರು ಲೋಕಸಭೆಯ ಸಭಾಪತಿ (ಸ್ಪೀಕರ್ ಆಗಿದ್ದರು. ಆದರೆ ಇವರನ್ನು ಸ್ಪೀಕರ್ ಆಗಿದ್ದಾಲೇ ಸಿಪಿಎಂ(ಎಂ) ಪಕ್ಷದಿಂದ ಉಚ್ಚಾಟಿಸಲಾಯಿತು.

2] --  ಭಾರತವು

1) ಸಂಯುಕ್ತ ರಾಜ್ಯಗಳ ಒಕ್ಕೂಟ 
2) ರಾಜ್ಯಗಳ ಸಂಯುಕ್ತ ಒಕ್ಕೂಟ
3) ರಾಜ್ಯಗಳ ಒಕ್ಕೂಟ 
4) ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟ

ವಿವರಣೆ : ಸಂವಿಧಾನದ 1ನೇ ವಿಧಿಯು ದೇಶದ ಹೆಸರು ಹಾಗೂ ಭೂ ಪ್ರದೇಶಗಳ ಬಗ್ಗೆ ವಿವರಿಸುತ್ತದೆ. ಭಾರತವನ್ನು ರಾಜ್ಯಗಳ ಒಕ್ಕೂಟವೆಂದು ವಿವರಿಸುತ್ತದೆ. ಈ ವಿಧಿಯು ವಿವರಿಸುವಂತೆ ಭಾರತದ ರಾಜ್ಯಗಳ ಒಕ್ಕೂಟವನ್ನು ಮೂರು ಭಾಗಗಳಾಗಿ ವರ್ಗಿಕರಿಸಲಾಗಿದೆ. ಅವುಗಳೆಂದರೆ
1) ರಾಜ್ಯಗಳು
2) ಕೇಂದ್ರಾಡಳಿತ ಪ್ರದೇಶಗಳು 
3) ಭಾರತ ಸರ್ಕಾರದಿಂದ ಯಾವುದೇ ಸಂದರ್ಭದಲ್ಲಿ ವಶಪಡಿಸಿಕೊಳ್ಳಬಹುದಾದ ಭೂ ಪ್ರದೇಶಗಳು.
4) ಭಾರತದ ರಾಜ್ಯಗಳ ಒಕ್ಕೂಟವು ಪ್ರಸ್ತುತ 28 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳಿಂದ ಕೂಡಿದೆ.

3] ಭಾರತದ ಸಂವಿಧಾನದ ಕೆಳಕಂಡ ಯಾವ ಪರಿಗಣನೆ ಗಳಿಗೆ ಒಳಪಟ್ಟು ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ,ಆಚರಿಸುವ & ಪ್ರಚಾರಮಾಡುವ ಹಕ್ಕನ್ನು ಪುರಸ್ಕರಿಸಲಾಗಿದೆ?

1) ಸಾರ್ವಜನಿಕ ಶಿಸ್ತು
2) ನೈತಿಕತೆ 
3) ಆರೋಗ್ಯ
4) ಸಮುದಾಯದ ಧಾರ್ಮಿಕ ನಂಬಿಕೆಗಳು

ವಿವರಣೆ : ಸಂವಿಧಾನದ 25ನೇ ವಿಧಿಯು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವಿವರಿಸುತ್ತದೆ. ಇದರ ಪ್ರಕಾರ ಅಂತಃ ಸಾಕ್ಷಿ, ಸ್ವಾತಂತ್ರ್ಯ & ಧರ್ಮದ ಅಭಾಧಿತ ಅವಲಂಬನೆ, ಆಚರಣೆ & ಪ್ರಚಾರ.
©ಇದರ ಅರ್ಥ ಭಾರತವು ಒಂದು ಜಾತ್ಯಾತೀತ ರಾಷ್ಟ್ರ. ಆದ್ದರಿಂದ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ತಮಗಿಷ್ಟವಾದ ಧರ್ಮವನ್ನು ಸ್ವೀಕರಿಸಲು ಹಾಗೂ ಪ್ರಚಾರ ಮಾಡಲು, ಧಾರ್ಮಿಕ ಆಚರಣೆಯನ್ನು ಮಾಡಲು ಅವಕಾಶವಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ & ಆರೋಗ್ಯ ಈ ಮೂರು ಕಟ್ಟು ಪಾಡುಗಳಿಗೆ ಒಳಪಟ್ಟಿದೆ.

4] ಭಾರತದಲ್ಲಿ “ಆಸ್ತಿಯ ಹಕ್ಕು” ಎಂಬುದರ ಸ್ಥಾನಮಾನ ಏನು?

1) ಇದು ಸಂವಿಧಾನದಲ್ಲಿರುವ ಮೂಲಭೂತ ಹಕ್ಕು. 
2) ಇದು ಸಂವಿಧಾನದ ಖಾತರಿ ಇಲ್ಲದ ಕಾನೂನಿನ ಹಕ್ಕು.
3) ಸಾಮಾನ್ಯ ಸ್ಥಾನಮಾನದ, ಸಂವಿಧಾನದ ಹಕ್ಕು. 
4) ಸಂವಿಧಾನದಲ್ಲಿ, ಆಸ್ತಿಯ ಹಕ್ಕು ಇಲ್ಲ.

ವಿವರಣೆ : ಸಂವಿಧಾನ ಜಾರಿಯಾದಾಗ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕಾಗಿ ಮಾಡಿದ್ದರು. ಆದರೆ 1978ರಲ್ಲಿ ಸಂವಿಧಾನದ 44ನೆಯ ತಿದ್ದುಪಡಿಯ ಮೂಲಕ ಇದನ್ನು ರದ್ದುಪಡಿಸಲಾಯಿತು. ಈಗ ಇದನ್ನು ಸಂವಿಧಾನದ 12ನೇ ಭಾಗದ 300 ಎ ವಿಧಿಯಲ್ಲಿ ಕಾನೂನಿನ ಹಕ್ಕನ್ನಾಗಿ ಮಾಡಲಾಯಿತು. ಈಗ ಇದೊಂದು ಸಂವಿಧಾನದ ಖಾತರಿ ಇಲ್ಲದ ಕಾನೂನಿನ ಹಕ್ಕು.

5] ಸಂವಿಧಾನದ 79ನೇ ತಿದ್ದುಪಡಿಯು ಇದಕ್ಕೆ ಸಂಬಂಧಿಸಿದೆ.

1) ಪ.ಜಾ. ಮತ್ತು ಪ.ಪಂ.ಗಳವರಿಗೆ ಮೀಸಲಾತಿಯನ್ನು ಹತ್ತು ವರ್ಷಗಳವರೆಗೆ ವಿಸ್ತರಿಸುವುದು. 
2) ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಾಗಿಡುವುದು.
3) ಮತದಾನದ ವಯಸ್ಸನ್ನು ಇಳಿಸುವುದು.
4) ಪಂಚಾಯತ್ ರಾಜ್ಯಕಾರ್ಯನಿರ್ವಹಣೆ.

ವಿವರಣೆ : ಸಂವಿಧಾನದ 79ನೇ ತಿದ್ದು ಪಡಿಯನ್ನು 1999ರಲ್ಲಿ ಮಾಡಲಾಯಿತು. ಸಂವಿಧಾನದ 334 ನೇ ವಿಧಿಯ ಪ್ರಕಾರ ಪರಿಶಿಷ್ಟ ಜಾತಿ/ಪಂಗಡ, ಆಂಗ್ಲೋ ಇಂಡಿಯನ್ನರಿಗೆ 2000 ಇಸವಿಯವರೆಗೆ ಸಂಸತ್ತೂ & ರಾಜ್ಯ ಶಾಸನ ಸಭೆಗಳಲ್ಲಿ ನೀಡಲಾಗಿದ್ದ ಮೀಸಲಾತಿಯನ್ನು ಮತ್ತೆ 10 ವರ್ಷಗಳವರೆಗೆ ವಿಸ್ತರಿಸಲಾಯಿತು.


6] ನಮ್ಮರಾಜ್ಯದಲ್ಲಿ ಪ್ರಜಾಪ್ರತಿನಿಧಿ ಸಭೆ ಸ್ಥಾಪಿತವಾದ ವರ್ಷ ಯಾವುದು?

1) 1903
2) 1915
3) 1881
4) 1907

ವಿವರಣೆ : ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರಜಾಪ್ರತಿನಿಧಿ ಸಭೆ 1881ರಲ್ಲಿ ಮೈಸೂರು ಸಂಸ್ಥಾನದಲ್ಲಿ ಪ್ರಾರಂಭವಾಯಿತು. 10ನೇ ಚಾಮರಾಜಒಡೆಯರ್ ಆಡಳಿತದಲ್ಲಿ ಅಂದಿನ ದಿವಾನರಾಗಿದ್ದ ಸಿ. ರಂಗಾಚಾರ್ಲುರವರು ರಾಜ್ಯಾಡಳಿತದಲ್ಲಿ ಪ್ರಜೆಗಳು ಪಾಲ್ಗೊಳ್ಳುವಂತಾಗಲು ಕ್ರಿ.ಶ. 1881ರಲ್ಲಿ ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದರು.

7] ವಿಧಾನ ಸಭೆಯಲ್ಲಿ ಧರ್ಮವನ್ನು ಆಧರಿಸಿ ಒಂದು ಸ್ಥಾನವನ್ನು ಮೀಸಲಾಗಿ ಹೊಂದಿರುವ ರಾಜ್ಯ ಯಾವುದು?

1) ಸಿಕ್ಕಿಂ 
2) ಮಿಜೋರಾಂ
3) ಜಮ್ಮು ಮತ್ತು ಕಾಶ್ಮೀರ 
4) ನಾಗಲ್ಯಾಂಡ್

ವಿವರಣೆ : ಈ ವಿಧಾನಸಭೆಯ ಸದಸ್ಯರನ್ನು ಯಾವುದೇ ಜಾತಿ, ಮತ, ಧರ್ಮಗಳನ್ನು ಪರಿಗಣಿಸದೆ ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ಚುನಾಯಿಸಲಾಗುತ್ತದೆ.
* ಸಿಕ್ಕಿಂ ರಾಜ್ಯವು ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾಗಿದ್ದು ಭಾರತದ 22ನೇ ರಾಜ್ಯವಾಗಿ 1975ರಲ್ಲಿ ಅಸ್ಥಿತ್ವಕ್ಕೆ ಬಂದಿತು. ಸಿಕ್ಕಿಂ ರಾಜ್ಯದ ವಿಧಾನಸಭೆಯು ಏಕಸದನ ವಿಧಾನಸಭೆಯನ್ನು ಹೊಂದಿದ್ದು ಒಟ್ಟು 32 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಇದರಲ್ಲಿ 2 ಸ್ಥಾನಗಳು ಪರಿಶಿಷ್ಟ ಜಾತಿಗೂ, 12 ಸ್ಥಾನಗಳು ಪರಿಶಿಷ್ಟ ಪಂಗಡದವರಿಗೂ ಮೀಸಲಾಗಿವೆ. 32 ಸ್ಥಾನಗಳ ಪೈಕಿ ಒಂದು ಸ್ಥಾನವು ಬೌದ್ಧ ಸನ್ಯಾಸಿಗಳಿಗಾಗಿ(ಸಂಘ) ಮೀಸಲಾಗಿದೆ.
ನೆನಪಿಡಿ : ಬೌದ್ಧ ಧರ್ಮದ ಸನ್ಯಾಸಿಗಳು ಹಾಗೂ ಸನ್ಯಾಸಿನಿಯರನ್ನು ಬಿಕ್ಷುಗಳು ಎಂದು ಕರೆಯುತ್ತಾರೆ. ಸಿಕ್ಕಿಂ ರಾಜ್ಯದಲ್ಲಿ ಸುಮಾರು 100 ಸನ್ಯಾಸಾಶ್ರಮಗಳಿದ್ದು, ಇವುಗಳಲ್ಲಿ ಸುಮಾರು 2900 ಬೌದ್ಧ ಸನ್ಯಾಸಿಗಳು ಇದ್ದಾರೆ. ಸಿಕ್ಕಿಂ ರಾಜ್ಯ ವಿಧಾನಸಭೆಯು ಈ ಬೌದ್ಧ ಸನ್ಯಾಸಿಗಳಿಗಾಗಿ ಒಂದು ಸ್ಥಾನವನ್ನು ಮೀಸಲಿರಿಸಿದೆ. ಇದನ್ನು 'ಸಂಘ' ಎಂದು ಕರೆಯುತ್ತಾರೆ.


8] ಲೋಕಪಾಲರನ್ನು ಯಾರು ನೇಮಕ ಮಾಡುತ್ತಾರೆ?

1) ಪಾರ್ಲಿಮೆಂಟ್
2) ಸಚಿವ ಸಂಪುಟ
3) ರಾಷ್ಟ್ರಪತಿ 
4) ಸರ್ವೋಚ್ಛ ನ್ಯಾಯಾಲಯ

ವಿವರಣೆ :
*ಮುಖ್ಯವಾಗಿ ಭ್ರಷ್ಟಾಚಾರವನ್ನು ತಡೆಯಲು ಜನ್ಮತಾಳಿದ ಒಂದು ಸಂಸ್ಥೆಯೇ ಲೋಕ್ ಪಾಲ್.
*ವಿಶ್ವ ಸಂಸ್ಥೆಯ ಭ್ರಷ್ಟಾಚಾರ ವಿರುದ್ಧದ ಕನ್ವೆನ್‌ಷನ್ ಅನ್ನು ಅಕ್ಟೋಬರ್ 31, 2003ರಲ್ಲಿ ಅನುಮೋದಿ ಸಲಾಯಿತು.
*2005ರಲ್ಲಿ ಭಾರತವು ಇದಕ್ಕೆ ಸಹಿ ಹಾಕಿತು. 
*ಭಾರತದ ಸಂಸತ್ತು 2013ರಲ್ಲಿ ಲೋಕಪಾಲ್ & ಲೋಕಾಯುಕ್ತ ಕಾಯ್ದೆಯನ್ನು ಅನುಮೋದಿಸಿತು.
*2019 ರ ಮಾರ್ಚ್ 19ರಂದು ಕೇಂದ್ರವು ಮೊದಲ ಲೋಕಪಾಲ್‌ ರನ್ನು ನೇಮಿಸಿತು.
*ಭಾರತ ದೇಶದ ಮೊದಲ ಲೋಕಪಾಲ್ ನ್ಯಾಯಮೂರ್ತಿ "ಪಿನಾಕಿ ಚಂದ್ರಘೋಷ್" ಅವರನ್ನ ರಾಷ್ಟ್ರಾಧ್ಯಕ್ಷರಾದ "ರಾಮನಾಥ ಕೋವಿಂದ್" ರವರು ನೇಮಿಸಿದರು.

9] ಭಾರತದ ಸಂವಿಧಾನದ ಈ ಅನುಚ್ಛೇದವನ್ನು ಸಂವಿಧಾನದ ಆತ್ಮವೇ ಆಗಿದೆ ಎಂದು ಹೇಳುತ್ತಾರೆ. 

1) ಅನುಚ್ಛೇದ 19
2) ಅನುಚ್ಛೇದ 14
3) ಅನುಚ್ಛೇದ 21 
4) ಅನುಚ್ಛೇದ 32 

ವಿವರಣೆ :
© ಅನುಚ್ಛೇದ 19 : ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ವಿವರಿಸುತ್ತದೆ
© ಅನುಚ್ಛೇದ 14 : ಕಾನೂನಿನ ಮುಂದೆ ಸಮಾನತೆ
© ಅನುಚ್ಛೇದ 21: ಜೀವ ಸಂರಕ್ಷಣೆ & ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆ.
© ಅನುಚ್ಛೇದ 32 : ಮೂಲಭೂತ ಹಕ್ಕುಗಳ ಜಾರಿಗೆ ಪರಿಹಾರೋಪಾಯಗಳು
ನೆನಪಿಡಿ : ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರವರು 32ನೇ ವಿಧಿಯನ್ನು 'ಸಂವಿಧಾನದ ಆತ್ಮ ಹಾಗೂ ಹೃದಯವಿದ್ದಂತೆ' ಎಂದಿದ್ದಾರೆ.
© ಸುಪ್ರೀಂಕೋರ್ಟ್ 1950, 1959 ಹಾಗೂ 1963ರಲ್ಲಿ ಸಂವಿಧಾನದ ಪರಿಹಾರದ ಹಕ್ಕು (32ನೇ ವಿಧಿ)ನ್ನು ಮೂಲಭೂತ ಹಕ್ಕು ಎಂದು ತಿಳಿಸಿದೆ.
© ಮೂಲಭೂತ ಹಕ್ಕುಗಳನ್ನು 32ನೇ ವಿಧಿಯನ್ವಯ ಸುಪ್ರೀಂಕೋರ್ಟ್ ಹಾಗೂ 220ನೇ ವಿಧಿಯನ್ವಯ ಹೈಕೋರ್ಟ್‌ಗಳು ರಕ್ಷಿಸುತ್ತವೆ.
© ಈ ವಿಧಿಯ ಅನ್ವಯ ಸುಪ್ರೀಂಕೋರ್ಟ್ 5 ರೀತಿಯ   ಪ್ರಮುಖ ರಿಟ್‌ಗಳಾದ - ಹೇಬಿಯಸ್ ಕಾರ್ಪಸ್‌, ಮ್ಯಾಂಡಮಸ್, ಪ್ರೊಹಿಬಿಷನ್, ಕೋ ವಾರೆಂಟೋ ಹಾಗೂ ಸರ್ಷಿಯೋರರಿಗಳನ್ನು ಹೊರಡಿಸಲು ಸೇರ್ಪಡೆ ಮಾಡಲಾಯಿ ಅಧಿಕಾರವನ್ನು ಹೊಂದಿದೆ.


10] ಭಾರತೀಯ ಪ್ರಜಾಪ್ರಭುತ್ವ ಯಶಸ್ವಿಗೆ & ಭಾರತ ಸಂವಿಧಾನದ ಸುಗಮ ಕಾರ್ಯನಿರ್ವಹಣೆಗೆ ಸಾಮಾಜಿಕ ನ್ಯಾಯ ಅತ್ಯಗತ್ಯವೆಂದು ಪ್ರತಿಪಾದಿಸಿದ ರಾಷ್ಟ್ರೀಯ ನಾಯಕರು ಯಾರು?

1) ಡಾ|| ರಾಜೇಂದ್ರ ಪ್ರಸಾದ್
2) ಗಾಂಧೀಜಿ
3) ಜವಾಹರಲಾಲ್ ನೆಹರೂ
4) ಡಾ|| ಬಿ.ಆರ್. ಅಂಬೇಡ್ಕ‌ 

ವಿವರಣೆ : ಡಾ|| ಬಿ.ಆರ್. ಅಂಬೇಡ್ಕರ್‌ರವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ. ಇವರು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಒಟ್ಟು 7 ಜನ ಸದಸ್ಯರಿದ್ದರು.

11] 311ನೇ ಅನುಚ್ಛೇದ ಪ್ರಕಾರ ಸೇವೆಯಿಂದ ಯಾದೃಚ್ಛಿಕವಾಗಿ (ಇಚ್ಛಾನುಸಾರ) ತೆಗೆದುಹಾಕುವುದರ ವಿರುದ್ಧ ನೀಡುವ ಸಂವಿಧಾನಾತ್ಮಕ ರಕ್ಷಣೆ ಇವರುಗಳಿಗೆ ಅನ್ವಯವಾಗುತ್ತದೆ.

1) ಸಶಸ್ತ್ರ ಪಡೆಗಳಲ್ಲಿರುವ ಸೈನಿಕ ಸಿಬ್ಬಂದಿ
2) ಸಶಸ್ತ್ರ ಪಡೆಗಳಲ್ಲಿರುವ ಅಸೈನಿಕ ಸಿಬ್ಬಂದಿ
3) ಕಾನೂನಿನ್ವಯ ಸ್ಥಾಪಿಸಲಾದ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು.
4) ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು 

ವಿವರಣೆ : ಸಂವಿಧಾನದ 311ನೇ ವಿಧಿಯು ಕೇಂದ್ರದ ಅಥವಾ ರಾಜ್ಯದ ಅಧೀನದಲ್ಲಿ ಸಿವಿಲ್ ಸ್ಥಾನಗಳಲ್ಲಿ ನಿಯೋಜಿತರಾಗಿರುವ  ವ್ಯಕ್ತಿಗಳನ್ನು ವಜಾ ಮಾಡುವುದು, ತೆಗೆದುಹಾಕುವುದು ಅಥವಾ ಅವರ ದರ್ಜೆಯನ್ನು ಇಳಿಸುವುದರ ಬಗ್ಗೆ ವಿವರಿಸುತ್ತದೆ.
© ಕೇಂದ್ರ, ರಾಜ್ಯ ಅಥವಾ ಕೇಂದ್ರ / ರಾಜ್ಯದ ಅಧೀನ ದಲ್ಲಿರುವ ಸಿವಿಲ್ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಅವನು ಯಾರಿಂದ ನೇಮಕಗೊಂಡನೋ ಅವರಿಗೆ ಅಧೀನವಾಗಿರುವ ಯಾರೂ ವಜಾ ಮಾಡತಕ್ಕದ್ದಲ್ಲ ಅಥವಾ ತೆಗೆದುಹಾಕುವಂತಿಲ್ಲ.
© ಇಂತಹ ನೌಕರರ ವಿರುದ್ಧ ಅಪಾದನೆಗಳಿಗೆ ಸಂಬಂಧಿಸಿದ ಅವಹಾಲುಗಳನ್ನು ಕೇಳಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ವಿಚಾರಣೆಯಿಲ್ಲದೆ ವಜಾ ಮಾಡುವಂತಿಲ್ಲ ಅಥವಾ ತೆಗೆದುಹಾಕುವಂತಿಲ್ಲ.
ನೆನಪಿಡಿ : ಈ ಸಂವಿಧಾನದ 14ನೇ ಭಾಗವು ಕೇಂದ್ರ & ರಾಜ್ಯಗಳ ಅಧೀನದಲ್ಲಿನ ನಾಗರೀಕ ಸೇವೆಗಳ ಬಗ್ಗೆ ವಿವರಿಸುತ್ತದೆ. ಈ ಸಂವಿಧಾನ 308ರಿಂದ 323ರವರೆಗಿನ ವಿಧಿಗಳು ಇದಕ್ಕೆ ಸಂಬಂಧಿಸಿವೆ.

12] ಭಾರತದ ಉಪರಾಷ್ಟ್ರಪತಿಯು ಇವರುಗಳನ್ನೊಳ ಗೊಂಡ ನಿರ್ವಾಚಕ ಗಣ (ಎಲೆಕ್ಚರಲ್ ಕಾಲೇಜ್) ದಿಂದ ಚುನಾಯಿಸಲ್ಪಡುತ್ತಾರೆ.

1) ರಾಜ್ಯಸಭೆಯ ಸದಸ್ಯರು
2) ಲೋಕಸಭೆ ಮತ್ತು ರಾಜ್ಯಸಭೆಗಳೆರಡರ ಸದಸ್ಯರು 
3) ಲೋಕಸಭೆಯ ಸದಸ್ಯರು
4) ರಾಜ್ಯಗಳ ವಿಧಾನಸಭೆಗಳ ಸದಸ್ಯರು

ವಿವರಣೆ : 
© ಸಂವಿಧಾನದ 66ನೇ ವಿಧಿಯು ಉಪರಾಷ್ಟ್ರಪತಿ ಚುನಾವಣೆಯ ಬಗ್ಗೆ ವಿವರಿಸುತ್ತದೆ.
© ಸಂವಿಧಾನ 66 (1)ನೇ ವಿಧಿಯು ವಿವರಿಸುವಂತೆ ಉಪರಾಷ್ಟ್ರಪತಿಯ ಚುನಾವಣೆಯು ಪರೋಕ್ಷವಾಗಿ ನಡೆಯುವುದು. ಇವರನ್ನು ಸಂಸತ್ತಿನ ಎರಡೂ ಸದನಗಳ (ಲೋಕ ಸಭೆ, ರಾಜ್ಯಸಭೆಗಳ) ಸದಸ್ಯರು ಗುಪ್ತ ಮತದಾನದ ಮೂಲಕ ಏಕ ಮತವನ್ನು ಚಲಾಯಿಸುವುದರ ಮೂಲಕ ಚುನಾಯಿಸುತ್ತಾರೆ.
ನೆನಪಿಡಿ :
© ರಾಷ್ಟ್ರಪತಿಯವರನ್ನು ನಿರ್ವಾಚಣಗಣ (ಎಲೆಕ್ಟ್ರಾರಲ್ ಕಾಲೇಜ್) ಚುನಾಯಿಸುತ್ತದೆ.
© ರಾಷ್ಟ್ರಪತಿಯವರನ್ನು ಚುನಾಯಿಸಲು ಲೋಕಸಭೆ, ರಾಜ್ಯಸಭೆಯ ಚುನಾಯಿತ ಸದಸ್ಯರು & ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ಮಾತ್ರ ಅರ್ಹರಾಗಿರುತ್ತಾರೆ.


13] ಮತಪ್ರಾಧಾನ್ಯದ ಆಧಾರದ ಮೇಲೆ ಕನ್ನಡ ಸಾಹಿತ್ಯವನ್ನು ಜೈನ, ವೀರಶೈವ, ಬ್ರಾಹ್ಮಣ ಯುಗವೆಂದು ವಿಭಾಗ ಮಾಡಿದವರು.

1) ಆರ್. ಎಫ್. ಕಿಟೆಲ್
2) ಆರ್. ನರಸಿಂಹಾಚಾರ್ 
3) ತಿ. ತಾ. ಶರ್ಮ
4) ಕೆ. ವೆಂಕಟರಾಮಪ್ಪ

ವಿವರಣೆ :  ಆರ್. ನರಸಿಂಹಾಚಾರ್ - ಕನ್ನಡ ಸಾಹಿತ್ಯ ಚರಿತ್ರೆಗೆ 'ಓಂಕಾರ' ಬರೆದ ಇವರು ಮೂರು ಹಂತಗಳನ್ನು ಗುರುತಿಸಿದ್ದಾರೆ.
1) ಜೈನಯುಗ (ಆರಂಭದಿಂದ 12ನೇ ಶತಮಾನ)
2) ವೀರಶೈವಯುಗ - (12 ರಿಂದ 15ನೇ ಶತಮಾನ)
3) ಬ್ರಾಹ್ಮಣಯುಗ - (15 ರಿಂದ 19ನೇ ಶತಮಾನ)

14] ತನ್ನ ಹುದ್ದೆಯನ್ನು ತಪ್ಪಾಗಿ ಮತ್ತು ಕಾನೂನು ಬಾಹಿರ ವಾಗಿ ಹೊಂದಿರುವ ವ್ಯಕ್ತಿಯ ವಿರುದ್ಧ ಹೊರಡಿಸುವ ರಿಟ್ ಯಾವುದು?

1) ಹೇಬಿಯಸ್‌ ಕಾರ್ಪಸ್
2) ಮ್ಯಾಂಡಮಸ್ 
3) ಕೊ ವಾರಂಟ್ 
4) ಸರ್ಷಿಯೋರರಿ

ವಿವರಣೆ :  ಸಂವಿಧಾನಾತ್ಮಕ ಪರಿಹಾರೋಪಾಯಗಳ ಹಕ್ಕಿಗೆ  ಸಂಬಂಧಿಸಿದಂತೆ ಅನುಚ್ಛೇದ 32 ಇವುಗಳ ಬಗ್ಗೆ  ವಿವರಿಸುತ್ತದೆ.
1. ಪರಮಾದೇಶ (ಮ್ಯಾಂಡ್‌ಮಸ್) - ಸರ್ಕಾರಿ ಅಧಿಕಾರಿಯೊಬ್ಬ ಸಾರ್ವಜನಿಕ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವಂತೆ ಆದೇಶಿಸಿ ಕಳುಹಿಸುವ ಆಜ್ಞಾ ಪತ್ರಕ್ಕೆ ಪರಮಾದೇಶ ಎನ್ನುವರು. 

2. ಬಂಧೀ ಪ್ರತ್ಯಕ್ಷಿಕರಣ (ಹೇಬಿಯಸ್ ಕಾರ್ಪಸ್ ) - ವ್ಯಕ್ತಿಯೊಬ್ಬನನ್ನು ಪೋಲೀಸರು ಅಥವಾ ಇತರ ಯಾವುದೇ ವ್ಯಕ್ತಿ ಅಕ್ರಮವಾಗಿ ಬಂಧನದಲ್ಲಿಟ್ಟಾಗ 24 ಗಂಟೆಯೊಳಗೆ ಬಿಡುಗಡೆ ಮಾಡುವಂತೆ ನ್ಯಾಯಾಲಯವು ನೀಡುವ ಆದೇಶ. 

3. ನಿಷೇಧಾಜ್ಞೆ (ಪ್ರೊಹಿಬಿಷನ್) - ಕೆಳ ನ್ಯಾಯಾಲಯ ವೊಂದು ತಮ್ಮ ವ್ಯಾಪ್ತಿ ಮೀರಿ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಹೈಕೋರ್ಟ್ ಅಥವಾ ಸುಪ್ರಿಂ ಕೋರ್ಟ್‌ ವಿಚಾರಣೆಯನ್ನು ನಿಲ್ಲಿಸುವಂತೆ ಹೊರಡಿಸುವ ರಿಟ್

4. ಸರ್ಷಿಯೋರರಿ - ಕೆಳ ನ್ಯಾಯಾಲಯಗಳಲ್ಲಿನ  ತೀರ್ಪುಗಳಿಂದ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಅಂಥ ಎಲ್ಲಾ ಪ್ರಕರಣಗಳನ್ನು ಮೇಲಿನ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ ನೀಡುವ ಆಜ್ಞೆ.

5. ಕೋ-ವಾರೆಂಟ್ - ಯಾವುದೇ ವ್ಯಕ್ತಿ ಸಾರ್ವಜನಿಕ ಹುದ್ದೆಯನ್ನು ಅರ್ಹತೆ ಇಲ್ಲದೆ ಹೊಂದಬಾರದು. ಅರ್ಹತೆ ಇಲ್ಲದಿದ್ದಾಗ ತನಗಿಂತ ಮೇಲ್ಮಟ್ಟದ ಹುದ್ದೆಗೆ
ನ್ಯಾಯಾಲಯ ಹೊರಡಿಸುವ ಆದೇಶವಾಗಿದೆ


15] ಭಾರತ ಸಂವಿಧಾನದ 9ನೇ ಅನುಸೂಚಿ ಇದಕ್ಕೆ ಸಂಬಂಧಿಸಿದೆ.

1) ಭಾಷೆ
2) ಪಂಚಾಯತ ರಾಜ್
3) ಭೂ ಸುಧಾರಣೆ
4) ರಾಜಕೀಯ ಪಕ್ಷಾಂತರ

ವಿವರಣೆ : ಭಾರತ ಸಂವಿಧಾನದಲ್ಲಿ ಒಟ್ಟು 12 ಅನುಚೂಚಿಗಳಿವೆ (12 Schedules)
©   ಮೊದಲನೇ ಅನುಸೂಚಿ- ರಾಜ್ಯಗಳು, ಒಕ್ಕೂಟ ರಾಜ್ಯ ಕ್ಷೇತ್ರಗಳು

©  ಎರಡನೇ ಅನುಸೂಚಿ: ರಾಷ್ಟ್ರಪತಿಯ ಮತ್ತು ರಾಜ್ಯಗಳ ರಾಜ್ಯಪಾಲರ ಬಗ್ಗೆ ಉಪಬಂಧಗಳು

©  ಮೂರನೇ ಅನುಸೂಚಿ: ಪ್ರಮಾಣವಚನಗಳ ಅಥವಾ ದೃಢೀಕರಣಗಳ ನಮೂನೆಗಳು

©  ನಾಲ್ಕನೇ ಅನುಸೂಚಿ:  ರಾಜ್ಯಸಭೆಯ ಸ್ಥಾನ ಹಂಚಿಕೆ

©  ಐದನೇ ಅನುಸೂಚಿ: ಅನುಸೂಚಿತ ಪ್ರದೇಶಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಆಡಳಿತ ಮತ್ತು ನಿಯಂತ್ರಣ

©  ಆರನೇ ಅನುಸೂಚಿ: ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳ ಬುಡಕಟ್ಟು ಪ್ರದೇಶಗಳ ಆಡಳಿತದ ಬಗ್ಗೆ ಉಪ ಬಂಧಗಳು

©  ಏಳನೇ ಅನುಸೂಚಿ: ಕೇಂದ್ರ, ರಾಜ್ಯ ಮತ್ತು - ಸಮವರ್ತಿ ಪಟ್ಟಿ

©  ಎಂಟನೇ ಅನುಸೂಚಿ: ಭಾಷೆಗಳು 

©  ಒಂಭತ್ತನೇ ಅನುಸೂಚಿ: ಜಮೀದ್ದಾರಿ ಪದ್ಧತಿ ರದ್ಧತಿ ಹಾಗೂ ಭೂ ಸುಧಾರಣೆಗಳು

©  ಹತ್ತನೇ ಅನುಸೂಚಿ:  ಪಕ್ಷಾಂತರ ವಿರೋಧಿ ಉಪಬಂಧ

©  ಹನ್ನೊಂದನೇ ಅನುಸೂಚಿ: ಪಂಚಾಯತ್‌ ರಾಜ್  ಸಂಸ್ಥೆಗಳ ಅಧಿಕಾರ ಮತ್ತು ಕಾರ್ಯಗಳು

©  ಹನ್ನೆರಡನೇ ಅನುಸೂಚಿ - ಪುರಸಭೆ (ನಗರ  ಸಭೆಗಳ) ಅಧಿಕಾರ ಮತ್ತು ಕಾರ್ಯಗಳು


Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
Health And Value Education in Kannada PDF For CET/GPSTR Aspirants
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] 6 ರಿಂದ 8 ಪದವಿದರ ಶಿಕ್ಷಕರ ನೇಮಕಾತಿ ಪರೀಕ್ಷೆಗಾಗಿ ಮೌಲ್ಯ ಶಿಕ್ಷಣ ಪಿಡಿಎಫ್ GPSTR ಸ್ಪರ್ಧಾರ್ಥಿಗಳಿಗಾಗಿ
Health Education PDF Notes For GPSTR Competitive Exams/ಆರೋಗ್ಯ ಶಿಕ್ಷಣ ಪಿಡಿಎಫ್
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
Yoga, Health And Value Education PDF
Educational Psychology Quiz Useful for PSTR/GPSTR/HSTR Competitive Exams Part-02/ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆಗಳು

Important PDF Notes

Ad Code