Ad Code

Ticker

6/recent/ticker-posts

Click Below Image to Join Our Telegram For Latest Updates

ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-4

ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು

Modern Indian History Questions and Answers Part-4

ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-1


ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ...!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ....!!

ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪ್ಲೋಡ್ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಲೇಬಲ್ಸ್ ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ. ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.

ಇತಿಹಾಸವನ್ನ 3 ಭಾಗ ಮಾಡುತ್ತೇವೆ .

1. ಪ್ರಾಗೈತಿಹಾಸಿಕ ಕಾಲ : ಇಲ್ಲಿ ಲಿಪಿ ಇಲ್ಲ ಓದಲು ಬರೆಯಲು ಸಾಧ್ಯವಿಲ್ಲದನ್ನು ಪ್ರಾಗೈತಿಹಾಸಿಕ ಕಾಲ ಎನ್ನುವರು ಇದರ ಪಿತಾಮಹ ರಾಬರ್ಟ್ ಬ್ರೂಸ್ ಪುಟ್ 

2. ಇತಿಹಾಸ ಪೂರ್ವ ಕಾಲ : ಇಲ್ಲಿ ಲಿಪಿ ಇದೆ ಆದರೆ ಓದಲು- ಬರೆಯಲು ಸಾಧ್ಯವಿಲ್ಲದನ್ನು ಇತಿಹಾಸ ಪೂರ್ವ ಕಾಲ ಎನ್ನುವರು. ಇಲ್ಲಿ ಚಿತ್ರ ಲಿಪಿಯನ್ನು ಕಾಣುತ್ತೇವೆ.

3. ಇತಿಹಾಸ ಕಾಲ : ಇಲ್ಲಿ ಲಿಪಿ ಇದೆ ಓದಬಹುದು ಮತ್ತು ಬರೆಯಲುಬಹುದು.

ಈ ಇತಿಹಾಸ ಕಾಲವನ್ನು ಅಧ್ಯಯನದ ದೃಷ್ಟಿಯಿಂದ ಮತ್ತೆ 3 ಭಾಗ ಮಾಡಲಾಗುತ್ತದೆ.

1. ಪ್ರಾಚೀನ ಭಾರತದ ಇತಿಹಾಸ : ಇದು ಸಿಂಧೂ ನಾಗರಿಕತೆಯಿಂದ ಸಾ.ಶ.1206 ವರೆಗಿನ ಕಾಲ

2. ಮಧ್ಯಕಾಲೀನ ಭಾರತದ ಇತಿಹಾಸ : ಇದು ಸಾ.ಶ.1206 ರಿಂದ ಸಾ.ಶ.1707ರವರೆಗಿನ ಇತಿಹಾಸವನ್ನ ಮಧ್ಯಯುಗಿನ ಇತಿಹಾಸ ಅಂತ ಹೇಳಬಹುದು ಇಲ್ಲಿ 2 ಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು 1. ದೆಹಲಿ ಸುಲ್ತಾನರು 2. ಮೊಘಲ್ ಸಾಮ್ರಾಜ್ಯ 

3. ಆಧುನಿಕ ಭಾರತದ ಇತಿಹಾಸ : ಇದು ಸಾ.ಶ.1707 ರಿಂದ ಸಾ.ಶ. 1947 ರೋ ವರೆಗಿನ ಇತಿಹಾಸ. ಕೆಲವೊಂದಿಷ್ಟು ಇತಿಹಾಸಕಾರರು ಇದು ಸಾ.ಶ.1498 ರಿಂದ ಸಾ.ಶ.1947ರ ವರೆಗೆ ಎಂದು ಹೇಳುತ್ತಾರೆ.

ಆಧುನಿಕ ಭಾರತದ ಇತಿಹಾಸ ಸಂಕ್ಷಿಪ್ತ ಪರಿಚಯ  :

ಆಧುನಿಕ ಭಾರತದ ಇತಿಹಾಸ ಎಂಬ ಪದವು 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ ಭಾರತದ ಇತಿಹಾಸವನ್ನು ಉಲ್ಲೇಖಿಸುತ್ತದೆ. ಈ ಅವಧಿಯಲ್ಲಿನ ಪ್ರಮುಖ ಐತಿಹಾಸಿಕ ಘಟನೆಗಳೆಂದರೆ

★ ಮೊಘಲ್ ಸಾಮ್ರಾಜ್ಯದ ಅವನತಿ 

★ ಭಾರತದ ಮೇಲೆ ಬ್ರಿಟಿಷ್ ರ ವಿಜಯ

★ 1857 ರ ದಂಗೆ 

★ ಎರಡು ವಿಶ್ವ ಯುದ್ಧಗಳ ಸಾಮಾಜಿಕ - ಆರ್ಥಿಕ ಪರಿಣಾಮಗಳು, ಕ್ಷಾಮಗಳು 

★ ರಾಷ್ಟ್ರೀಯತೆಯ ಉದಯ 

★ ಭಾರತೀಯ ಸ್ವಾತಂತ್ರ್ಯ ಚಳುವಳಿ, ವಿಭಜನೆ

★ ಎಡಪಂಥೀಯ ರಾಜಕೀಯ ಉದಯ 

★ ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣೆಗಳು 

★ ಅಲಿಪ್ತ ಚಳುವಳಿ, ನೆಹರೂ ಅವರ ಪಾತ್ರ 

★ ಜಾಗತೀಕರಣದ ಪರಿಣಾಮಗಳು ಮತ್ತು ಆರ್ಥಿಕ ನೀತಿಯಲ್ಲಿನ ಬದಲಾವಣೆ ಮುಂತಾದವುಗಳು.

ಈಗ ಆಧುನಿಕ ಭಾರತದ ಇತಿಹಾಸಕ್ಕೆ ಸಂಬಂಧಪಟ್ಟ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಅಧ್ಯಯನದ ದೃಷ್ಟಿಯಿಂದ 20 ಪ್ರಶ್ನೆಗಳಂತೆ ಅಪ್ಲೋಡ್ ಮಾಡಲಾಗುವುದು. ಈ ಒಂದು ವಿಷಯದ ಮೇಲೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಮಾರು 10-12 ಪ್ರಶ್ನೆಗಳು ಪರೀಕ್ಷೆಗೆ ಬರುವ ಸಾಧ್ಯತೆ ಹೆಚ್ಚು ಹಾಗಾಗಿ ಆ ಒಂದು ಕಾರಣಕ್ಕೆ ಈ ಒಂದು ಸಣ್ಣ ಪ್ರಯತ್ನ ಇದರ ಸದುಪಯೋಗ ಪಡೆದುಕೊಳ್ಳಿ.

ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು

Modern Indian History Questions and Answers Part-4

1. 14- 15ನೇ ಶತಮಾನದಲ್ಲಿ ಏಷ್ಯಾದ ದೇಶಗಳಲ್ಲಿ ವ್ಯಾಪಾರದ ಏಕಸ್ವಾಮ್ಯ ಗಳಿಸಿದ್ದವರು.

ಎ) ಯುರೋಪಿಯನ್ನರು

ಬಿ) ಅರಬ್ಬರು 

ಸಿ) ಭಾರತೀಯರು

ಡಿ) ಈಜಿಪ್ಟಿಯನ್ನರು

ಸರಿಯಾದ ಉತ್ತರ : ಬಿ) ಅರಬ್ಬರು 

2. ಯುರೋಪ್ ವರ್ತಕರಿಗೆ 1453ರ ನಂತರ ವ್ಯಾಪಾರ ಹೆಚ್ಚು ಲಾಭದಾಯಕವಾಗದಿರಲು ಮುಖ್ಯ ಕಾರಣ. 

ಎ) 1453ರ ಕಾನ್‌ಸ್ಟಾಂಟಿನೋಪಲ್ ಟರ್ಕರ ವಶ 

ಬಿ) ಟರ್ಕರು ತೀವ್ರ ತೆರಿಗೆ ವಿಧಿಸಿದರು

ಸಿ) ಅರಬ್ಬರು ಯುರೋಪ್‌ ನವರಿಗೆ ಸ್ಪರ್ಧೆ ಒಡ್ಡಿದರು.

ಡಿ) ಭಾರತದವರು ಸರಕುಗಳ ದರ ಹೆಚ್ಚಿಸಿದರು.

ಸರಿಯಾದ ಉತ್ತರ : ಬಿ) ಟರ್ಕರು ತೀವ್ರ ತೆರಿಗೆ ವಿಧಿಸಿದರು

3. ಭೂಮಿಯ ಮೇಲಿನ ಅಭಿಪ್ರಾಯಕ್ಕೆ ಬದಲಾಗಿ ಸಮುದ್ರದ ಮೇಲಿನ ಏಕಸ್ವಾಮ್ಯ (ನೀಲಿನೀರಿನ ನೀತಿ) ಪಡೆಯಲು ಪ್ರಯತ್ನಿಸಿದ ಅಧಿಕಾರಿ.

ಎ) ವಾಸ್ಕೋಡಗಾಮ

ಬಿ) ಪ್ರಾನ್ಸಿಸ್ಕೊ ಡಿ ಅಲ್ಮೆಡಾ

ಸಿ) ಆಲ್ಫಾನ್ಸೊ ಅಲ್ಬುಕರ್ಕ

ಡಿ) ಸರ್ ಥಾಮಸ್ ರೋ

ಸರಿಯಾದ ಉತ್ತರ : ಬಿ) ಪ್ರಾನ್ಸಿಸ್ಕೊ ಡಿ ಅಲ್ಮೆಡಾ

4. ಯುರೋಪಿನ ಹೆಬ್ಬಾಗಿಲು ಎಂದು ಹೆಸರುವಾಸಿಯಾದ ಪ್ರದೇಶ.

ಎ) ಪ್ಯಾರಿಸ್

ಬಿ) ಇಟಲಿ 

ಸಿ) ಕಾನ್‌ಸ್ಟಾಂಟಿನೋಪಲ್ 

ಡಿ) ಲಂಡನ್

ಸರಿಯಾದ ಉತ್ತರ : ಸಿ) ಕಾನ್‌ಸ್ಟಾಂಟಿನೋಪಲ್ 

5. ಟರ್ಕರಿಂದ ಕಾನ್ ಸ್ಟಾಂಟಿನೋಪಲ್ ವಶ

ಎ) 1543

ಬಿ) 1453

ಸಿ) 1553

ಡಿ) 1443

ಸರಿಯಾದ ಉತ್ತರ : ಬಿ) 1453

6. ಭಾರತದಲ್ಲಿ ಬ್ರಿಟಿಷರ ರಾಜಧಾನಿಯಾಗಿದ್ದ ಸ್ಥಳ

ಎ) ದೆಹಲಿ

ಬಿ) ಮದ್ರಾಸ್

ಸಿ) ಕಲ್ಕತ್ತ

ಡಿ) ಮುಂಬೈ

ಸರಿಯಾದ ಉತ್ತರ : ಸಿ) ಕಲ್ಕತ್ತ

7. ಬ್ರಿಟಿಷರು 1639 ರಲ್ಲಿ ಕಟ್ಟಿಸಿದ ಮೊದಲ ಬೃಹತ್ ಕೋಟೆ (ಸೆಂಟ್ ಫೋರ್ಟ್ ಜಾರ್ಜ) ಇರುವ ಸ್ಥಳ 

ಎ) ಕಲ್ಕತ್ತ

ಬಿ) ಮುಂಬೈ

ಸಿ) ಪಾಂಡಿಚೇರಿ

ಡಿ) ಮದ್ರಾಸ್

ಸರಿಯಾದ ಉತ್ತರ : ಡಿ) ಮದ್ರಾಸ್

8. ವಾಸ್ಕೋಡಗಾಮ ಭಾರತಕ್ಕೆ ಮೊದಲು ಬಂದು ತಲುಪಿದ ಸ್ಥಳ

ಎ. ಕಾಪ್ಪಡ್. 

ಬಿ. ಕೊಚ್ಚಿ

ಸಿ. ಮುಂಬೈ

ಡಿ. ಕಾರವಾರ

ಸರಿಯಾದ ಉತ್ತರ : ಎ. ಕಾಪ್ಪಡ್. 

9. ಪ್ರಾನ್ಸಿಸ್ಕೊ ಡಿ ಅಲ್ಮಡ ತನ್ನ ನೀಲಿನೀರಿನ ನೀತಿ ಜಾರಿಗೆ ತಂದ ಉದ್ದೇಶ

ಎ) ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆ

ಬಿ) ವಸಾಹತು ಸ್ಥಾಪನೆ

ಸಿ) ಭೂಮಿಯ ಮೇಲಿನ ಅಧಿಪತ್ಯಕ್ಕಾಗಿ

ಡಿ) ಸಮುದ್ರದ ಮೇಲಿನ ಅಧಿಪತ್ಯಕ್ಕಾಗಿ

ಸರಿಯಾದ ಉತ್ತರ : ಡಿ) ಸಮುದ್ರದ ಮೇಲಿನ ಅಧಿಪತ್ಯಕ್ಕಾಗಿ

10. ಭಾರತದಲ್ಲಿ ಪೋರ್ಚುಗೀಸರ ನಿಜವಾದ ಸಾಮ್ರಾಜ್ಯ ಸ್ಥಾಪಕ ಎಂದು ಗುರುತಿಸಲ್ಪಟ್ಟ ಅಧಿಕಾರಿ.

ಎ) ವಾಸ್ಕೋಡಗಾಮ

ಬಿ) ಪ್ರಾನ್ಸಿಸ್ಕೊ ಡಿ ಅಲ್ಮೆಡಾ

ಸಿ) ಆಲ್ಫಾನ್ಸೋ ಅಲ್ಬುಕರ್ಕ

ಡಿ) ಡೂಪ್ಲೆ

ಸರಿಯಾದ ಉತ್ತರ : ಸಿ) ಆಲ್ಫಾನ್ಸೋ ಅಲ್ಬುಕರ್ಕ

11. ಭಾರತದಲ್ಲಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು.

ಎ) ಇಂಗ್ಲೀಷರು

ಬಿ) ಡಚ್ಚರು

ಸಿ) ಫ್ರೆಂಚರು

ಡಿ) ಅರಬ್ಬರು

ಸರಿಯಾದ ಉತ್ತರ : ಬಿ) ಡಚ್ಚರು

12.  1617ರಲ್ಲಿ ಇಂಗ್ಲೆಂಡ್ ರಾಜನ ರಾಯಭಾರಿಯಾಗಿ ಜಹಾಂಗೀರನ ಆಸ್ತಾನಕ್ಕೆ ಬಂದವನು

ಎ) ವಾಸ್ಕೋಡಗಾಮ

ಬಿ) ಪ್ರಾನ್ಸಿಸ್ಕೊ ಡಿ ಅಲ್ಮೆಡಾ 

ಸಿ) ಸರ್ ಐರ್ ಕೂಟ್

ಡಿ) ಸರ್ ಥಾಮಸ್ ರೋ

ಸರಿಯಾದ ಉತ್ತರ : ಡಿ) ಸರ್ ಥಾಮಸ್ ರೋ 

13. ಇಂಗ್ಲೀಷರಿಗೆ ಭಾರತದಲ್ಲಿ ದಾಸ್ತಾನು ಮಳಿಗೆ ಸ್ಥಾಪಿಸಲು ಪರವಾನಿಗೆ ನೀಡಿದ ರಾಜ.

ಎ. ಜಹಾಂಗೀರ್

ಬಿ. ಪರೂಕ್ ಷಿಯಾರ್

ಸಿ. ಷಹಜಹಾನ್

ಡಿ. 2ನೇ ಬಹದ್ದೂರ್ ಷಾ

ಸರಿಯಾದ ಉತ್ತರ : ಎ. ಜಹಾಂಗೀರ್

14. ಭಾರತದಲ್ಲಿ ಫ್ರೆಂಚರ ರಾಜಧಾನಿಯಾಗಿದ್ದ ಸ್ಥಳ.

ಎ) ಮದ್ರಾಸ್

ಬಿ) ಪಾಂಡಿಚೇರಿ/ ಪುದುಚೇರಿ

ಸಿ) ಕಲ್ಕತ್ತ

ಡಿ) ಮುಂಬೈ

ಸರಿಯಾದ ಉತ್ತರ : ಬಿ) ಪಾಂಡಿಚೇರಿ/ ಪುದುಚೇರಿ

15. ಪ್ಲಾಸಿ ಕದನ : 1757 : : ಬಕ್ಸಾರ್ ಕದನ :

ಎ) 1756

ಬಿ) 1857

ಸಿ) 1764

ಡಿ) 1575

ಸರಿಯಾದ ಉತ್ತರ : ಸಿ) 1764

16. ಆಗಿನ 'ದಿವಾನಿ ಹಕ್ಕು' ಎಂದರೆ

ಎ) ನ್ಯಾಯ ಧಾನ ಮಾಡುವ ಹಕ್ಕು

ಬಿ) ರಾಜ್ಯಾಡಳಿತ ನಡೆಸುವ ಹಕ್ಕು

ಸಿ) ಭೂಕಂದಾಯ ವಸೂಲಿ ಮಾಡುವ ಹಕ್ಕು

ಡಿ) ದೇಶದ ಎಲ್ಲಾ ಅಧಿಕಾರ

ಸರಿಯಾದ ಉತ್ತರ : ಸಿ) ಭೂಕಂದಾಯ ವಸೂಲಿ ಮಾಡುವ ಹಕ್ಕು

17.  1764 ರ ಬಕ್ಸಾರ್ ಕದನದಲ್ಲಿ ಮೂರು ಸಂಯುಕ್ತ ಸೇನೆಯನ್ನು ಸೋಲಿಸಿದ ಬ್ರಿಟೀಷ್ ಅಧಿಕಾರಿ

ಎ) ಲಾರ್ಡ್ ಡಾಲ್ ಹೌಸಿ

ಬಿ) ರಾಬರ್ಟ್ ಕ್ಲೈವ್

ಸಿ) ಸರ್ ಐರ್‌ ಕೂಟ್

ಡಿ) ಹೆಕ್ಟರ್ ಮನ್ರೋ

ಸರಿಯಾದ ಉತ್ತರ : ಡಿ) ಹೆಕ್ಟರ್ ಮನ್ರೋ

18. ಭಾರತಕ್ಕೆ ಬಂದ ಐರೋಪ್ಯರ ಕಾಲಾನುಕ್ರಮಣಿಕೆ

ಎ) ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು, ಫ್ರೆಂಚರು

ಬಿ) ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಇಂಗ್ಲೀಷರು,

ಸಿ) ಪೋರ್ಚುಗೀಸರು, ಇಂಗ್ಲೀಷರು, ಡಚ್ಚರು, ಫ್ರೆಂಚರು

ಡಿ) ಫ್ರೆಂಚರು, ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು,

ಸರಿಯಾದ ಉತ್ತರ : ಎ) ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು, ಫ್ರೆಂಚರು

19. ಬಂಗಾಳದಲ್ಲಿ 'ದ್ವಿ ಪ್ರಭುತ್ವ' ವನ್ನು ಜಾರಿಗೆ ತಂದವನು

ಎ) ಆಲ್ಪಾನ್ಸೋ  ಅಲ್ಬುಕರ್ಕ್

ಬಿ) ರಾಬರ್ಟ್ ಕ್ಲೈವ್

ಸಿ) ಡೂಪ್ಲೆ

ಡಿ) ಫ್ರಾನ್ಸಿಸ್ಕೊ ಡಿ ಅಲ್ಮೆಡ್

ಸರಿಯಾದ ಉತ್ತರ : ಬಿ) ರಾಬರ್ಟ್ ಕ್ಲೈವ್

20. ಬಕ್ಸಾರ್ ಕದನವು ಬ್ರಿಟಿಷರು ಈ ಕೆಳಗಿನ ಯಾವ ಪ್ರದೇಶಗಳ ಮೇಲಿನ ನಿಜವಾದ ಒಡೆಯರೆಂದು ದೃಢೀಕರಿಸಿತು.

ಎ) ಗುಜರಾತ್, ಬಿಹಾರ ಮತ್ತು ಮದ್ರಾಸ್ . 

ಬಿ) ಬಂಗಾಳ, ಪಂಜಾಬ್ ಮತ್ತು ಒರಿಸ್ಸಾ

ಸಿ) ಬಂಗಾಳ, ಬಿಹಾರ ಮತ್ತು ಒರಿಸ್ಸಾ

ಡಿ) ಮೈಸೂರು, ಬಿಹಾರ ಮತ್ತು ಮಹಾರಾಷ್ಟ್ರ,

ಸರಿಯಾದ ಉತ್ತರ : ಸಿ) ಬಂಗಾಳ, ಬಿಹಾರ ಮತ್ತು ಒರಿಸ್ಸಾ

Post a Comment

0 Comments

Social Science Quizzes For all Competitive Exams Part-125/ಸಮಾಜ ವಿಜ್ಞಾನ ರಸಪ್ರಶ್ನೆಗಳು
[PDF] ಎಸ್.ಎಲ್.ಭೈರಪ್ಪ ಅವರ ಗೃಹಭಂಗ ಕಾದಂಬರಿ PDF
GPSTR Social Science Descriptive Question Answers PDF/ ಸಮಾಜ ವಿಜ್ಞಾನ ವಿವರಣಾತ್ಮಕ ಪ್ರಶ್ನೋತ್ತರಗಳು
KARTET Educational Psychology Quiz Series-01/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-01
Social Science Quizzes For all Competitive Exams Part-126/ಸಮಾಜ ವಿಜ್ಞಾನ ರಸಪ್ರಶ್ನೆಗಳು
ಆಧುನಿಕ ಭಾರತ ಇತಿಹಾಸ ಸಂಪೂರ್ಣ ಗಾಂಧಿಯುಗ ಮೈಂಡ್ ಮ್ಯಾಪಿಂಗ್ ನೋಟ್ಸ್ ಪಿಡಿಎಫ್/History of Modern India Quick Revision Series PDF
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Social Science Quizzes For all Competitive Exams Part-122/ಸಮಾಜ ವಿಜ್ಞಾನ ರಸಪ್ರಶ್ನೆಗಳು
General Kannada, Kannada Literature Quizzes Part-1/ಸಾಮಾನ್ಯ ಕನ್ನಡ, ಕನ್ನಡ ಸಾಹಿತ್ಯ ರಸಪ್ರಶ್ನೆಗಳು
ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-4

Important PDF Notes

Ad Code