Ad Code

Ticker

6/recent/ticker-posts

Click Below Image to Join Our Telegram For Latest Updates

[Short Story]She will become a story/ಅವಳೊಂದು ಕಥೆಯಾಗುವಳು

ಅವಳೊಂದು ಕಥೆಯಾಗುವಳು
She will become a story

💠💠

ಹಾಯ್ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ. ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ 🙏💐💐

ನಮಸ್ಕಾರ ಸ್ನೇಹಿತರೆ ಇತ್ತೀಚೆಗೆ ಒಂದು ದಿನ ಬೆಳಿಗ್ಗೆ ಏಳು ಏಳುತ್ತಲೆ ನನಗೆ ಗೊತ್ತಿರುವ ಒಬ್ಬ ಹೆಣ್ಣುಮಗಳ ಬದುಕಿನ ಕೆಲವು ದೃಶ್ಯಗಳು ಮಿಂಚಿ ಮರೆಯಾದವು, ಅದಕ್ಕೆ ಅವಳ ಬದುಕಿನ ಆ ಸಂಗತಿಗಳನ್ನ ಒಂದು ಪುಟ್ಟ ಕಥೆಯ ರೂಪದಲ್ಲಿ ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇಲ್ಲಿ ಮೂಡಿದ ಪ್ರತಿ ಸಾಲದಿ ಪುಟದಷ್ಟು ವಿಷಯವಿದೆ ಆದರೆ ಸಂಕ್ಷಿಪ್ತವಾಗಿ ಹೇಳ ಬಯಸುತ್ತೇನೆ .

ಅವಳು ಜನಿಸಿದ ಮೂರು ವರ್ಷಗಳವರೆಗೂ ಜನಕರ ಮುದ್ದಿನ ಮಗಳು, ನಂತರ ಬಾಲ್ಯದಿ ಸಂಬಂಧಿಗಳ ಕರುಣೆಯ ಕೂಸಾದಳು, ಪ್ರೌಢಾವಸ್ಥೆಯಲ್ಲಿ ಪ್ರತಿಯೊಬ್ಬರ ಕಲ್ಪನೆಗೆ ತುತ್ತಾಗುವಳು, ಹದಿಹರೆಯದ ಜೀವನದ ಕವಲುದಾರಿಯಲ್ಲಿ ಸರಿಯಾದ ದಾರಿ ಕಾಣದೆ ಕಂಗಾಲಾದವಳು, ಅವಳಾಶೆ ಕನಸಿನ ಕೋಟೆಯನ್ನು ಕಟ್ಟಲಾಗದವಳು ,ಕಾಲ ಕರ್ಮದಿ ಕಾಣದ ಹಣೆ ಬರಹವನ್ನು ನೆನೆದು ಅಳುವಳು, ತನ್ನವರಿಗಾಗಿ ತನ್ನ ಜೀವನದ ಅರಿವಿಲ್ಲದೇ ಸುಂದರ ಬದುಕಿನ ಅವಧಿಯನ್ನು ಮುಂದೂಡಿದವಳು, ಅವಳರಿತು ಅರಿಯದವಳಾದಳು. 

ಕೊನೆಯವರೆಗೂ  ಅವಳಿಗೆ ಅಯ್ಯೋ! ಅನ್ನುವ ಪದವಿ ಬೆನ್ನಟ್ಟಿಬಿಡುವುದೇ?  ವಯಸ್ಕತನದಿ ಕಾಡುವ ಭೂತಕಾಲದ ಸರಿ- ತಪ್ಪುಗಳ ಬದುಕಿನ ವಿಚಾರಧಾರೆಗಳೊಂದಿಗೆ ವರ್ತಮಾನದಿ ಮತ್ತೆ ಗೊಂದಲದ ಗೂಡಾಗಿರುವಳು. ತಿಳಿಯದ ಜೀವನಾಂತ್ಯದ ಆಯುಷ್ಯದಿಂದ ಭವಿಷ್ಯದ ಕನಸಿಗೆ ಬಣ್ಣ ಹಚ್ಚಲಾಗದವಳು, ಜೀವನದ ತಕ್ಕಡಿಯಲ್ಲಿ  ಧರ್ಮ -ಅಧರ್ಮ, ಸತ್ಯ -ಅಸತ್ಯ, ಸುಖ-ದುಃಖ, ಸಿಹಿ-ಕಹಿ, ಹೀಗೆ ಹಲವು ರೀತಿಯ ಕರ್ಮ ಫಲಾದಿ ಫಲಗಳನ್ನ ತೂಗುತ್ತಾ ಸಾಗುತ್ತಿರುವಳು. ಅವಳ ಜೀವನದ ಆಳ ಬಲ್ಲವರಾರು? ಯಾವ? ಕಾರಣದಿ ಅವಳ ಜನನ  ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿರುವಳು. ನಿರಾಶೆದಿ ಹತಾಶೆ ಜೀವನದಿ ಹುಸಿ ನಗೆಯನ್ನು  ಬೀರುತ್ತಾ  ಬದುಕಿನ  ಪಯಣ ಸಾಗಿಸುತ್ತಿರುವಳು. ಬದುಕಿನಲ್ಲಿ ಮೂಡುವ ಯಕ್ಷ ಪ್ರಶ್ನೆಗಳಿಗೆ ತುತ್ತಾಗುವಳು, ಕೆಲವೊಂದು ವಿಚಾರಗಳನ್ನು ಹೇಳಿಕೊಳ್ಳೋಕು ಆಗದೆ ಅನುಭವಿಸಕ್ಕೂ ಆಗದೆ " ಅವಳೊಂದು ಕಥೆಯಾಗುವಳು " 
                           ಧನ್ಯವಾದಗಳು. 

💠💠

Post a Comment

0 Comments

Important PDF Notes

Ad Code