ಕನ್ನಡ ಬೋಧನಾಶಾಸ್ತ್ರ ಕೆಲವು ಪ್ರಮುಖ ಪ್ರಶ್ನೋತ್ತರಗಳು.
💮
ಕನ್ನಡ ಬೋಧನಾಶಾಸ್ತ್ರ
1.ಮೂರನೇ ತರಗತಿಯ ವಿದ್ಯಾರ್ಥಿಯೊಬ್ಬ ನಾಲ್ಕನೇ ತರಗತಿಗೆ ಬಂದಾಗ ಅವನಲ್ಲಿ ನಿರೀಕ್ಷಿತ ಸಾಮರ್ಥ್ಯಗಳ ಕಲಿಕೆ ಆಗದಿದ್ದಲ್ಲಿ ಕೊರತೆಗಳನ್ನು ತುಂಬಲು ಮಾಡಬಹುದಾದ ಚಟುವಟಿಕೆ ಯಾವುದು.
= ಪರಿಹಾರ ಬೋಧನೆ ಮಾಡುವುದು.
2.ಬೋಧನೆಯ ಪ್ರಥಮ ಹಂತ. ಕಲಿಕಾ ಪೂರ್ವ ಹಂತ. ಓದು ಬರಹಗಳ ಸ್ವಯಂಕಲಿಕೆ ಅಭ್ಯಾಸ ಹಾಗೂ ಮೌಲ್ಯಮಾಪನಕ್ಕೆ ಸೂಕ್ತವಾದ ಸಾಧನ ಯಾವುದು ?
= ಅಭ್ಯಾಸ ಪುಸ್ತಕ.
3.ಆರನೇ ತರಗತಿಯ 25 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಕಾಗುಣಿತ ದೋಷಗಳನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಭಾಷಾ ಶಿಕ್ಷಕರು ಬಳಸಬಹುದಾದ ಸೂಕ್ತ ಕ್ರಮ ಯಾವುದು?
= ಕ್ರಿಯಾ ಸಂಶೋಧನೆಗಳನ್ನು ಕೈಗೊಳ್ಳುವುದು.
4.ಲಿಖಿತ ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸಲು ಅತ್ಯಂತ ಸೂಕ್ತವಾದ ಸಾಧನೆಯೆಂದರೆ.
= ಪ್ರಬಂಧ ಮಾದರಿ ಪ್ರಶ್ನೆಗಳು.
5.ಮಗುವಿನ ಭಾಷಾ ಕಲಿಕೆಯಲ್ಲಿ ಇದು ಮೂಲ ಕೌಶಲ.
= ಆಲಿಸುವಿಕೆ.
💮
6.ಭಾಷಾ ಕಲಿಕೆಯಲ್ಲಿ ವಾಕ್ಯ ಪದ್ಧತಿ ಎಂದರೆ.
= ಅರ್ಥಪೂರ್ಣ ವಾಕ್ಯಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ ಓದು ಕಲಿಸುವುದು.
7.ಎಷ್ಟೋ ಜನ ಆಪ್ತರು ಬಂದು ಈ ಕೆಲಸವನ್ನು ಖಂಡಿತವಾಗಿ ಮಾಡಬೇಡ ಎಂದು ಅವನಿಗೆ ಹೇಳಿದರು. ಆದರೆ ಅವನು ಯಾರೊಬ್ಬರ ಮಾತಿಗೂ ಕಿವಿಗೊಡದೆ ತನ್ನ ದಾರಿಯನ್ನು ಹಿಡಿದನು, ಇದರಿಂದಲೇ ಎಲ್ಲವನ್ನು ಕಳೆದುಕೊಂಡು ಈ ವಾಕ್ಯ ಯಾವುದಕ್ಕೆ ಉದಾಹರಣೆಯಾಗಿದೆ.
= ಮಿಶ್ರ ವಾಕ್ಯ.
8.ಪದ್ಯ ಬೋಧನೆಯ ಮುಖ್ಯ ಗುರಿಗಳಲ್ಲಿ ಇದು ಸಹ ಒಂದು.
= ರಸಸ್ವಾದನೆ ಮತ್ತು ಸೌಂದರ್ಯ ಪ್ರಜ್ಞೆ ಬೆಳೆಸುವುದು.
9.ಮಕ್ಕಳ ಭಾಷಾ ಕಲಿಕೆಯ ಆರಂಭದಲ್ಲಿ ಈ ಅಂಶವನ್ನು ಹೆಚ್ಚು ಪರಿಗಣಿಸುವ ಅಗತ್ಯವಿಲ್ಲ.
= ಮಕ್ಕಳ ಭಾಷಾ ಶುದ್ಧತೆಗೆ ಒತ್ತು ನೀಡುವುದು.
10.ಮಾತು ಎಂದರೆ ?
= ಮನಸ್ಸಿನ ಭಾವನೆ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಅರ್ಥಪೂರ್ಣವಾಗಿ ಸುಸಂಬದ್ಧವಾಗಿ ಶಾಬ್ದಿಕವಾಗಿ ಪ್ರಕಟಿಸುವುದು.
🏵

1 Comments
Thank you chanakya kanaja
ReplyDelete