Ad Code

Ticker

6/recent/ticker-posts

Click Below Image to Join Our Telegram For Latest Updates

TET Psychology Notes part 2 ಬೆಳವಣಿಗೆ ಮತ್ತು ವಿಕಾಸ

 ಶೈಕ್ಷಣಿಕ ಮನೋವಿಜ್ಞಾನ ನೋಟ್ಸ್

ಬೆಳವಣಿಗೆ ಮತ್ತು ವಿಕಾಸ [ಭಾಗ-2]




ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!!ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ, ಈ ಒಂದು ವಿಷಯ ಟಿಇಟಿ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತ. ಪ್ರತಿ ಬಾರಿ ಟಿಇಟಿ ಪರೀಕ್ಷೆಯಲ್ಲಿ ಬೆಳವಣಿಗೆ ಮತ್ತು ವಿಕಾಸ ಅಧ್ಯಾಯದ ಮೇಲೆ ಸಾಕಷ್ಟು ಪ್ರಶ್ನೆಗಳು ಬರುತ್ತವೆ.ಹಾಗಾಗಿ ತುಂಬ ಪ್ರಮುಖ ಎಂದುಕೊಂಡು ಕೆಲವೊಂದಷ್ಟು ಪರೀಕ್ಷಾ ದೃಷ್ಟಿಯಿಂದ ಪಾಯಿಂಟ್ಸ್ ಗಳನ್ನ ಮಾಡಲಾಗಿದೆ.ಓದಿ ನೋಟ್ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.


🏵🏵🏵🏵🏵🏵🏵🏵🏵🏵🏵🏵🏵🏵🏵🏵🏵

ಬೆಳವಣಿಗೆ ಮತ್ತು ವಿಕಾಸ :-

1.ಪಿಯಾಜೆ ರವರ ಪ್ರಕಾರ ಜ್ಞಾನಾತ್ಮಕ ವಿಕಾಸದ ಯಾವ ಹಂತದಲ್ಲಿ ಮಗು ಪರಿಕಲ್ಪನೆಗಳ ಮೇಲೆ ಪ್ರಭುತ್ವ ಗಳಿಸುತ್ತಾನೆ ಎಂದರೆ ಔಪಚಾರಿಕ ಕಾರ್ಯಗಳ ಹಂತ. 


2.ಮಗುವಿನ ತಾರ್ಕಿಕ ಆಲೋಚನಾಶಕ್ತಿ ಮೂಡುವದು ಔಪಚಾರಿಕ ಹಂತದಲ್ಲಿ. 


3.ಪಿಯಾಜೆರವರ ಪ್ರಕಾರ ವಿಕಾಸದ ಮೊದಲ ಹಂತದಲ್ಲಿ (ಸೊನ್ನೆಯಿಂದ ಎರಡು ವರ್ಷಗಳು) ಮಗುವು ಅತ್ಯುತ್ತಮವಾಗಿ ಸಂವೇದನಗಳ ಮೂಲಕ ಕಲಿಯುವುದರಿಂದ ಇದನ್ನು ಸಂವೇದನಾ ಗತಿ ಹಂತ ಎನ್ನುವರು. 


4.ಪಿಯಾಜೆರವರ ಪ್ರಕಾರ ಯಾವ ಹಂತದಲ್ಲಿ ಮಗುವು ವಸ್ತು ಸ್ಥಾಯಿತ್ವವನ್ನು ಪ್ರದರ್ಶಿಸುತ್ತದೆ ಎಂದರೆ ಅದು ಕಾರ್ಯ ಪೂರ್ವ ಹಂತ.


5.ಪಿಯಾಜೆರವರ ಬೌದ್ಧಿಕ ವಿಕಾಸದ ಕಲಿಕಾ ಸಿದ್ಧಾಂತದ ಪ್ರಕಾರ ಜ್ಞಾನಾತ್ಮಕ ಸಂರಚನೆ ಬದಲಾಗುವ ಪ್ರಕ್ರಿಯೆಗೆ ಹೊಂದಿಕೊಳ್ಳುವಿಕೆ ಎಂದು ಕರೆಯುವರು. 


6.ಮಕ್ಕಳ ಬೌದ್ಧಿಕ ವಿಕಾಸ ದಲ್ಲಿರುವ ನಾಲ್ಕು ಹಂತಗಳನ್ನು ಗುರುತಿಸಿದವರು ಜಿನ್ ಪಿಯಾಜೆ. 


7.ಮಕ್ಕಳು ಜಗತ್ತಿನ ಗ್ರಹಿಕೆಯನ್ನು ಸಕ್ರಿಯವಾಗಿ ಸಂರಚಿಸುವರು ಈ ಹೇಳಿಕೆಯನ್ನು ನೀಡಿದವರು ಜಿನ್ ಪಿಯಾಜೆಯವರು. 


8.ಪಿಯಾಜೆ ಅವರ ಪ್ರಕಾರ ಮಗುವು ಪರಿಕಲ್ಪನೆಗಳ ಕುರಿತು ಅಮೂರ್ತವಾಗಿ ಚಿಂತಿಸಲು ಆರಂಭಿಸುವ ಹಂತ ಔಪಚಾರಿಕ ಕಾರ್ಯಗಳ ಹಂತ (11+ವರ್ಷಗಳು) 


9.ಮಗು ಘಟನೆಗಳ ಬಗ್ಗೆ ತಾರ್ಕಿಕವಾಗಿ ಚಿಂತಿಸಲು ಆರಂಭಿಸುವ ಹಂತ ಮೂರ್ತ ಕಾರ್ಯಗಳ ಹಂತ. 


10.ಪಿಯಾಜೆಯವರ ಹೇಳುವಂತೆ ಅಹಂ ಕೇಂದ್ರಿತ ಪರಿಕಲ್ಪನೆ ಮೂಡುವ ಹಂತ ಕಾರ್ಯ ಪೂರ್ವ ಹಂತ. 


11.ಪಿಯಾಜೆ ಸಿದ್ಧಾಂತದ ಪ್ರಕಾರ ಇದು ಸಂಜ್ಞಾನಾತ್ಮಕ ಅಭಿವೃದ್ಧಿಯ ಹಂತವಾಗಿರುವುದಿಲ್ಲ ಎಂದರೆ ಅದು ಹದಿಹರೆಯದ ಹಂತ. 


12.ಪಿಯಾಜೆ ಅವರ ಪ್ರಕಾರ ಜ್ಞಾನಾತ್ಮಕ ಬೆಳವಣಿಗೆಯ ಮೊದಲ ಹಂತ ಸಂವೇದನ ಗತಿ ಹಂತ.


13.ಸಾಮಾಜಿಕ - ಸಾಂಸ್ಕೃತಿಕ ವಾತಾವರಣ ಮಕ್ಕಳ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಪ್ರತಿಪಾದಿಸಿದವರು ವೈಗೋಟಸ್ಕಿ ರವರು. 


🏵🏵🏵🏵🏵🏵🏵🏵🏵🏵🏵🏵🏵🏵🏵🏵

14.ಕೋಹಲ್ಬರ್ಗ್ ನ ವಿಕಾಸ ಸಿದ್ಧಾಂತವು ನೈತಿಕ ಬೆಳವಣಿಗೆಗೆಹೆಚ್ಚು ಒತ್ತು ನೀಡುವುದು. 


15.ಮಗುವಿನ ಹೃದಯ ಬಡಿತ ಒಂದು ನಿಮಿಷಕ್ಕೆ 110 ರಿಂದ 120 ಬಾರಿ ಕಂಡುಬರುತ್ತದೆ. 


16.ಸ್ಮೃತಿ ಮತ್ತು ವಿಸ್ಮೃತಿಗೆ ಸಂಬಂಧಿಸಿದಂತೆ ಮರೆವಿನ ವಕ್ರರೇಖೆಯನ್ನು ರಚಿಸಿದವರು ಹರ್ಮನ್ ಎಬ್ಬಿಂಗ್ ಹೌಸ್. 


17.ಪರಿಕಲ್ಪನಾತ್ಮಕ ಬೆಳವಣಿಗೆ ಯಾರ ಕೊಡುಗೆ ಎಂದರೆ ಬ್ರೂನರ್ ರವರ ಕೊಡುಗೆ.


18.ಸಂಗೀತ ವಿದ್ವಾಂಸ ಕುಟುಂಬದ ಮೇಲೆ ಪ್ರಯೋಗ ಮಾಡಿದ ಮನೋವಿಜ್ಞಾನಿ ಗಾಲ್ಫನ್. 


19.ಮಾಸ್ಟರ್ ಗ್ಲಾಂಡ್ ಎಂದು ಪಿಟ್ಯುಟರಿ ಗ್ರಂಥಿಯನ್ನು ಕರೆಯುತ್ತಾರೆ. 


20.ಲೈಂಗಿಕ ವರ್ತನೆಯ ಮೇಲೆ ಪ್ರಭಾವ ಬೀರುವ ಗ್ರಂಥಿ ಗೋನಾಡ್ಸ್. 


.ಹದಿಹರೆಯದವರ ಸರಾಸರಿ ಲೈಂಗಿಕ ಪರಿಪಕ್ವತೆಯ ವಯಸ್ಸು ಹೆಣ್ಣು 9ರಿಂದ 13 ವರ್ಷ ಹಾಗೂ ಗಂಡು 11ರಿಂದ 15ವರ್ಷ. 


22.ದ್ರವ್ಯರಾಶಿ, ತೂಕ, ಪರಿಮಾಣದ ವಿಕಾಸ ಉಂಟಾಗುವ ಅವಧಿ ಮೂರ್ತ ಕಾರ್ಯಗಳ ಅಂತ. 


23.ಈ ಹಂತವನ್ನು ಮಾನವನ ಬೆಳವಣಿಗೆಯ ಕೋಲಾಹಲದ ಅವಧಿ ಎಂದು ಕರೆಯುವರು ಅದು ಹದಿಹರೆಯದ ಅವಧಿ. 


24.ಮಾತೃತ್ವ ವರ್ತನೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಹಾರ್ಮೋನ ಪ್ರೋಜೆಸ್ಟಿರಾನ್.


25.ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ನಿರ್ನಾಳ ಗ್ರಂಥಿ ಅಡ್ರಿನಲ್ ಗ್ರಂಥಿ. 


26.ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನು ಇನ್ಸುಲಿನ್. 


🏵🏵🏵🏵🏵🏵🏵🏵🏵🏵🏵🏵🏵🏵🏵🏵🏵🏵

27.ಭಾವನಾತ್ಮಕ ವಿಕಾಸದ ಕ್ಷೇತ್ರಕ್ಕೆ ತನ್ನ ಅಧ್ಯಯನಗಳ ಮೂಲಕ ಹೆಚ್ಚು ಕೊಡುಗೆ ನೀಡಿದವರು ಬ್ರಿಡ್ಜಸ್.


28.ಮೆದುಳಿನ ಹೈಪೋಥಲಾಮಸ್ ಭಾಗವನ್ನು ಭಾವನೆಗಳ ಮೂಲಸ್ಥಾನ ಎಂದು ಕರೆಯುತ್ತಾರೆ. 


29.ಸಾಮಾನ್ಯವಾಗಿ ಕಂಡುಬರುವಂತೆ ಹುಡುಗಿಯರು ಹುಡುಗರಿಗಿಂತ ಹೆಚ್ಚು ಅಸೂಯೆ ಭಾವನೆ ಹೊಂದಿರುತ್ತಾರೆ. 


30.ವ್ಯಕ್ತಿಯ ವಯೋಮಾನ ಹೆಚ್ಚಾದಂತೆ ಅವನ ಭಾವನಾತ್ಮಕ ಸ್ಥಿರತೆಯು ಕೂಡ ಹೆಚ್ಚಾಗುತ್ತದೆ.ವಸ್ತುಗಳು ಶಾಶ್ವತ ಅಥವಾ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಅಸ್ತಿತ್ವವಿದೆ ಎನ್ನುವ ಪರಿಕಲ್ಪನೆಯನ್ನು ಮರು ಕಲಿಯುವುದು ಜ್ಞಾನಾತ್ಮಕ ವಿಕಾಸದ ಸಂವೇದನ ಗತಿ ಹಂತದ ಪ್ರಮುಖ ಲಕ್ಷಣವಾಗಿದೆ.


32.ಮಗುವಿನ ಬೆಳವಣಿಗೆಯ ಜ್ಞಾನಾತ್ಮಕ ವಿಕಾಸ ಸಿದ್ದಾಂತದ ಪ್ರತಿಪಾದಕ ಬ್ರೂನರ್. 


33.ಬ್ರೂನರ್ ರವರ  ಜ್ಞಾನಾತ್ಮಕ ಬೆಳವಣಿಗೆಯ ಹಂತಗಳಲ್ಲಿ ಪ್ರಮುಖ ಅಂಶಗಳ ಸರಿಯಾದ ಅನುಕ್ರಮ ಕ್ರಿಯೆ, ಬಿಂಬ, ಪದಗಳು. 


34.ಕ್ರಿಯಾತ್ಮಕ ಬಿಂಬಾತ್ಮಕ ಮತ್ತು ಸಾಂಕೇತಿಕ ಎಂಬ ಮೂರು ಹಂತಗಳು ಮಗುವಿನ ಚಿಂತನೆಯಲ್ಲಿ ಇರುತ್ತವೆ ಎಂದು ಪ್ರತಿಪಾದಿಸಿರುವ ಮನೋವಿಜ್ಞಾನಿ ಬ್ರೂನರ್. 


35.ಎರಿಕ್ಸನ್ ರವರ ಮಾನವನ ವ್ಯಕ್ತಿತ್ವ ವಿಕಾಸದಲ್ಲಿ ಮನೋಸಾಮಾಜಿಕ ವಿಕಾಸಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ ಅವರ ಪ್ರಕಾರ ವ್ಯಕ್ತಿಯ ಜೀವನ ಪರ್ಯಂತ ನಡೆಯುವ ವ್ಯಕ್ತಿತ್ವ ವಿಕಾಸ ಕಾರ್ಯದಲ್ಲಿ ಎಷ್ಟು ದ್ವಂದ್ವಗಳು ಎದುರಿಸಬೇಕಾಗುವುದು ಎಂದರೆ 8.


36.ಎರಿಕ್ಸನ್ ರವರ ಮನೋ ಸಾಮಾಜಿಕ ವಿಕಾಸ ಸಿದ್ಧಾಂತ ಪ್ರಾಯ್ಡ್ರವರ ಸಿದ್ಧಾಂತವನ್ನು ಆಧರಿಸಿ ರೂಪಿತವಾಗಿದೆ. 


37.ಎರಿಕ್ಸನ್ ರವರ ಪ್ರಕಾರ ಮಗು ನಂಬಿಕೆ ಮತ್ತು ಅಪನಂಬಿಕೆಯ ಮನೋಧೋರಣೆಗಳನ್ನು ಕಲಿಯುವ ಹಂತ ಶೈಶವ ಹಂತ. 


38.ಎರಿಕ್ಸನ್ ರವರಮನೋಸಾಮಾಜಿಕ ಸಿದ್ಧಾಂತದ ಪ್ರಕಾರ ಹದಿಹರೆಯ ಹಂತದಲ್ಲಿ ಕಂಡುಬರುವ ಪ್ರಮುಖ ಸಂಘರ್ಷ ಅನನ್ಯತೆ, ಪಾತ್ರ ಗೊಂದಲ. 


39.ವಿಕಾಸ, ಸಂಬಂಧ, ಕ್ರಿಯೆಗಳು ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದವರು ಹ್ಯಾಮ್ಮಿಂಗ್ ಹರ್ಸ್ಟ.


40.ಗರಿಷ್ಠ ಮತ್ತು ನಿರ್ಣಾಯಕ ಸಾಮಾಜಿಕರಣ ನಡೆಯುವ ಹಂತ ತಾರುಣ್ಯಾವಸ್ಥೆ ಹಂತ. 


41.ಪಿಟ್ಯುಟರಿ ಗ್ರಂಥಿಯನ್ನು ನಿಯಂತ್ರಿಸುವ ಮೂಲಕ ಸೂಕ್ಷ್ಮ ಪ್ರಮಾಣದ ಸ್ವಾಭಾವಿಕ, ದೈಹಿಕ ಬೆಳವಣಿಗೆಗೆ ಕಾರಣವಾದ ಗ್ರಂಥಿ ಥೈರಾಯಿಡ್ ಗ್ರಂಥಿ. 


42.ಯೋಚನೆ ಕೇವಲ ಭಾಷೆಯನ್ನು ನಿರ್ಧರಿಸುವುದಿಲ್ಲ ಅದನ್ನು ಸುಧಾರಿಸುತ್ತದೆ ಕೂಡ ಯೋಜನೆಯನ್ನು ಪ್ರತಿಪಾದಿಸಿದವರು  ವೈಗೋಟಸ್ಕಿ.


Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.


💐💐💐💐💐💐💐💐🙏🙏





Post a Comment

0 Comments

Important PDF Notes

Ad Code