Ad Code

Ticker

6/recent/ticker-posts

Click Below Image to Join Our Telegram For Latest Updates

TET Psychology Notes part 1 ಬೆಳವಣಿಗೆ ಮತ್ತು ವಿಕಾಸ

ಶೈಕ್ಷಣಿಕ ಮನೋವಿಜ್ಞಾನ ನೋಟ್ಸ್

ಬೆಳವಣಿಗೆ ಮತ್ತು ವಿಕಾಸ [ಭಾಗ-1]



ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!!ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ, ಈ ಒಂದು ವಿಷಯ ಟಿಇಟಿ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತ. ಪ್ರತಿ ಬಾರಿ ಟಿಇಟಿ ಪರೀಕ್ಷೆಯಲ್ಲಿ ಬೆಳವಣಿಗೆ ಮತ್ತು ವಿಕಾಸ ಅಧ್ಯಾಯದ ಮೇಲೆ ಸಾಕಷ್ಟು ಪ್ರಶ್ನೆಗಳು ಬರುತ್ತವೆ.ಹಾಗಾಗಿ ತುಂಬ ಪ್ರಮುಖ ಎಂದುಕೊಂಡು ಕೆಲವೊಂದಷ್ಟು ಪರೀಕ್ಷಾ ದೃಷ್ಟಿಯಿಂದ ಪಾಯಿಂಟ್ಸ್ ಗಳನ್ನ ಮಾಡಲಾಗಿದೆ.ಇನ್ನೂ ಕೆಲವು ಪಾಯಿಂಟ್ಸ್ ಗಳನ್ನ ಭಾಗ 2 ರಲ್ಲಿ ಅಪಲೋಡ ಮಾಡಲಾಗುವುದು. ಓದಿ ನೋಟ್ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.


💮💮💮💮💮💮💮💮💮💮💮💮💮💮💮💮💮💮

1.ವಿಕಾಸ ಎಂದರೆ ಬದಲಾವಣೆ ಎಂದರ್ಥ. 

2.ವಿಕಾಸವು ಆರಂಭವಾಗುವುದು ಜನನಪೂರ್ವ ಹಂತದಿಂದ. 

3.ವಿಕಾಸವು ಎಲ್ಲರಲ್ಲೂ ದ್ವಿಪಾರ್ಶ್ವ ತೆಯಿಂದ ಏಕ ಪಾರ್ವತಿಗೆ ಸಾಗುತ್ತದೆ. 

4.ಮಾನವನಲ್ಲಿ ಉಂಟಾಗುವ ಪರಿಮಾಣಾತ್ಮಕ ಬದಲಾವಣೆಗಳನ್ನು ಬೆಳವಣಿಗೆ ಎನ್ನುತ್ತಾರೆ. 

5.ಬೆಳವಣಿಗೆ ಒಂದು ದೈಹಿಕ ಪ್ರಕ್ರಿಯೆ ಆಗಿದೆ. ಬೆಳವಣಿಗೆ ಎಂಬ ಪದ ಅಂಗಾಂಗಗಳ ಅಳತೆ ಮತ್ತು ತೂಕದಲ್ಲಿ ಹೆಚ್ಚಳ ಹಾಗೂ ಕೋಶ ವಿಭಜನೆ ಮತ್ತು ಸಾಮರ್ಥ್ಯದಲ್ಲಿ ಹೆಚ್ಚಳ ಈ ಅಂಶಗಳನ್ನು ಒಳಗೊಂಡಿರುತ್ತದೆ. 

6.ಮಾನವನಲ್ಲಿ ಉಂಟಾಗುವ ಗುಣಾತ್ಮಕ ಬದಲಾವಣೆಗಳನ್ನು ವಿಕಾಸ ಎಂದು ಕರೆಯುವರು. ವಿಕಾಸವು ಒಂದು ನಿರಂತರ ಪ್ರಕ್ರಿಯೆ ಆಗಿದೆ.

7.ಜೀವನ ಪರ್ಯಂತ ನಡೆಯುವ ಪ್ರಕ್ರಿಯೆ ವಿಕಾಸಕ್ಕೆ ಸಂಬಂಧಿಸಿದ್ದಾಗಿದೆ. 

8.ವಿಕಾಸವು ಎಂದೂ ಮುಗಿಯದ ಪ್ರಕ್ರಿಯೆ ಈ ಹೇಳಿಕೆಯು ನಿರಂತರತೆಯ ತತ್ವವನ್ನು ಪ್ರತಿನಿಧಿಸುತ್ತದೆ. 

9.ಮಗು ಬೆಳವಣಿಗೆ ವರ್ಷಗಳಲ್ಲಿ ಬದಲಾವಣೆಗಳನ್ನು ಹೊಂದುತ್ತದೆ ಮತ್ತು ವ್ಯಕ್ತಿಯಾಗಿ ಬದಲಾಗುತ್ತದೆ ಹಾಗೂ ವಯಸ್ಸಿನ ಶಾರೀರಿಕ ಬದಲಾವಣೆಯಾಗುತ್ತದೆ ಇದು ಸಾಮಾನ್ಯ ಅಭಿವೃದ್ಧಿಯ ಭಾಗವಾಗಿದೆ. 

10.ಮಕ್ಕಳಲ್ಲಿ ಅಭಿವೃದ್ಧಿಯು ಒಂದು ಸಾಮಾನ್ಯ ಪ್ರಕಾರದಲ್ಲಿ ಮುಂದುವರೆಯುತ್ತದೆ.ಆ ಅಭಿವೃದ್ಧಿಯಲ್ಲಿ ಸರಳತೆಯಿಂದ ಕ್ಲಿಷ್ಟತೆ ಕಡೆಗೆ ಸಾಗುತ್ತದೆ. 

11.ಶಾರೀರಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಮಗುವು ಮೊದಲು ನಿಯಂತ್ರಣ ಪಡೆಯುವದು ಶಿರದ ಮೇಲೆ. 

12.ಹುಡುಗರ ಸ್ವರ ದಪ್ಪ ಆಗುವುದು ಈ ವಿಶಿಷ್ಟ ಲಕ್ಷಣಕ್ಕೆ ಶಾರೀರಿಕ ಅಭಿವೃದ್ಧಿ ಎನ್ನುತ್ತಾರೆ. ಶಾರೀರಿಕ ರೂಪ ಮತ್ತು ಕಾರ್ಯಗಳ ಸ್ಪಷ್ಟ ಲೈಂಗಿಕ ವಿಭಿನ್ನತೆಯು ಇದರ ಫಲವಾಗಿದೆ ಅದು ಕೂಡ ಶಾರೀರಿಕ ಅಭಿವೃದ್ಧಿ.


💮💮💮💮💮💮💮💮💮💮💮💮💮💮💮💮💮💮

13.ಬೆಳವಣಿಗೆ ಮತ್ತು ವಿಕಾಸ ಗಳ ನಡುವಿನ ಸಂಬಂಧವನ್ನು ಸರಿಯಾಗಿ ವ್ಯಕ್ತಪಡಿಸಲು ನಾವು ನೀಡುವ ಹೇಳಿಕೆ ಹೀಗಿದೆ ವಿಕಾಸವನ್ನು ಬೆಳವಣಿಗೆಯ ಮೂಲಕ ಸಾಧಿಸಲಾಗುವುದು. 

14.ಬಾಲ್ಯಾವಸ್ಥೆಯ ಆರಂಭದಲ್ಲಿ ಮಗುವಿನ ಭಾವನಾತ್ಮಕ ವಿಕಾಸದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶ ಯಾರು ಅಂದರೆ ಪಾಲಕರು. 

15.ಮಗುವಿನ ವಿಕಾಸದ ತತ್ವಗಳ ತಿಳುವಳಿಕೆ ಶಿಕ್ಷಕರಿಗೆ ಹೇಗೆ ಸಹಾಯಕವಾಗಿದೆ ಎಂದರೆ ಕಲಿಕಾಕಾರ ವಿಭಿನ್ನ ಕಲಿಕಾ ಶೈಲಿಗಳು ಅಗತ್ಯತೆಗಳನ್ನು ಪರಿಣಾಮಕಾರಿಯಾಗಿ ಪೂರೈಸುವುದಾಗಿದೆ. 

16.ವ್ಯಕ್ತಿಗಳಲ್ಲಿ ಅವರ ಎತ್ತರ, ತೂಕ, ಚರ್ಮದ ಬಣ್ಣ, ಕಣ್ಣುಗಳ ಬಣ್ಣ, ಕೂದಲು, ಕಾಲುಗಳ ವಿಭಿನ್ನತೆಯನ್ನು ದೈಹಿಕ ವಿಭಿನ್ನತೆ ಎಂದು ಕರೆಯುವರು . 

17.ಶಿರಾ ಪಾದಾಬಿಮುಖ ತತ್ವಕ್ಕೆ ತಕ್ಕಂತೆ ವಿಕಾಸವು ಮುಡಿಯಿಂದ ಅಡಿಯವರೆಗೆ ನಡೆಯುವುದು.

18.ತೋಳುಗಳು, ಕಾಲುಗಳು ಮತ್ತು ಶರೀರ ಭಾಗಗಳ ಬಳಕೆಯಲ್ಲಿ ಶಕ್ತಿ ಮತ್ತು ವೇಗ ಮತ್ತು ಖಚಿತತೆ ಕಂಡುಬಂದರೆ ಅದನ್ನು ಸೈಕೋಮೋಟರ್ ವಿಕಸನ ಎನ್ನುವರು. 

19.ಬೆಳವಣಿಗೆ ಕುಂಠಿತವಾದರೆ ವಿಕಾಸವು ಕೂಡ ಕುಂಠಿತವಾಗುತ್ತದೆ. ಮಾನವನ ಬೆಳವಣಿಗೆಯನ್ನು ನಿರ್ಧರಿಸುವುದು ಅನುವಂಶೀಯತೆ ಮತ್ತು ಪರಿಸರ ಸಂಬಂಧಿ ಒತ್ತಡಗಳ ಸಂಕೀರ್ಣವಾಗಿದೆ. 

20.ಮಾನವನ ವಿಕಾಸವು ಅನುವಂಶೀಯತೆ ಮತ್ತು ಪರಿಸರ ಅಂಶಗಳ ಫಲಿತವಾಗಿದೆ. 

21.ವಿಕಾಸದ ಬದಲಾವಣೆಗಳು ಕಂಡು ಬರಲು ಕಾರಣ ಅನುವಂಶೀಯ ಮತ್ತು ಪರಿಸರದ ಅಂಶಗಳ ಅಂತರಕ್ರಿಯೆ. 

22.ಫಲಿತ ಅಂಡಾಣು ವನ್ನು ಜೈ ಗೋಟ್ ಎಂದು ಕರೆಯುವರು. 

23.ವರ್ಣತಂತುಗಳ ಲ್ಲಿ ಅನುವಂಶೀಯ ಗುಣಗಳನ್ನು ಹೊಂದಿರುವ ಅಂಶಗಳಿಗೆ ಗುಣಾಣುಗಳು ಎನ್ನುವರು.

24.ಎಕ್ಸ್ ಮತ್ತು ವಾಯ್ ವರ್ಣತಂತುಗಳ 2 ಕಂಡುಬರುವುದು ಗಂಡು ಲಿಂಗಾಣು ಕೋಶಗಳಲ್ಲಿ. 


💮💮💮💮💮💮💮💮💮💮💮💮💮💮💮💮💮💮

25.ಮಾನವನ ಪ್ರತಿ ವರ್ಣತಂತುವಿನಲ್ಲಿ ಕಂಡುಬರುವ ಗುಣಾಣುಗಳ ಸಂಖ್ಯೆ ಸರಾಸರಿ 3000. 

26.ಗುಣಾಣುಗಳು ಯಾವಾಗಲೂ ಜೋಡಿಯಾಗಿ ಕಾರ್ಯ ನಿರ್ವಹಿಸುವವು. 

27.ಗುಣಾಣು ಡಿಎನ್ಎ ರಾಸಾಯನಿಕ ವಸ್ತುವಿನಿಂದ ಮಾಡಲ್ಪಟ್ಟಿರುತ್ತದೆ. 

28.ಅನುವಂಶೀಯವಾಗಿ ಒಂದೇ ರೀತಿ ಇರುವ ಅವಳಿಗಳನ್ನು ಅನನ್ಯ ಅವಳಿಗಳು ಎನ್ನುವರು. 

29.ಗಂಡು ಮಗುವಿನ ಜನನಕ್ಕೆ ಕಾರಣವಾಗುವ ವರ್ಣತಂತು x&y.

30.ತಮ್ಮ ಗುಣಲಕ್ಷಣ ವ್ಯಕ್ತಪಡಿಸಲಾಗದ ಗುಣಾಣುಗಳನ್ನು ದುರ್ಬಲ ಗುಣಾಣುಗಳು ಎನ್ನುವರು. 

31.ಮಗುವಿನ ಲಿಂಗ ನಿರ್ಧಾರವಾಗುವುದು ತಂದೆಯ ವರ್ಣತಂತು ಗಳಿಂದ. 

32.ತಳಿ ಶಾಸ್ತ್ರದ ಪಿತಾಮಹ ಜಾನ್ ಗ್ರಿಗೋರ್ ಮೆಂಡೆಲ್. 

33.ಮಗುವಿನ ಮಾನಸಿಕ ಗುಣಲಕ್ಷಣಗಳಾದ ಸ್ಮರಣಶಕ್ತಿ, ಬುದ್ಧಿಶಕ್ತಿ ಮತ್ತು ಆಲೋಚನಾ ಶಕ್ತಿಗಳು ಅನುವಂಶೀಯ ಗುಣಗಳಾಗಿವೆ. ಅನುವಂಶಿಯತೆಯನ್ನು ಸ್ಥಿರ ಸಾಮಾಜಿಕ ರಚನೆ ಎಂದು ಪರಿಗಣಿಸಲಾಗುವುದು. 

34.ಮಾನವನ ಜೀವಕೋಶದಲ್ಲಿರುವ ವರ್ಣತಂತುಗಳ ಸಂಖ್ಯೆ 23 ಜೊತೆ. 

35.ಒಂದು ಮಗು ತನ್ನ ತಂದೆ ತಾಯಿ ಇಂದ ಅನುವಂಶೀಯವಾಗಿ ಪಡೆದುಕೊಳ್ಳುವ ಒಟ್ಟು ವರ್ಣತಂತುಗಳ ಸಂಖ್ಯೆ 46. 

36.ಪ್ರಬಲ ಗುಣವಿದ್ದರೆ ದುರ್ಬಲ ಹಿಂಜರಿಯುವುದು, ಈ ಸತ್ಯವನ್ನು ಸಿದ್ದಾಂತವನ್ನು ಮಂಡಿಸಿದವರು ಮೆಂಡಲ್.

37.ಬೆಳವಣಿಗೆಯನ್ನು ನಿಯಂತ್ರಿಸುವ ಪ್ರಮುಖ ನಿರ್ನಾಳ ಗ್ರಂಥಿ ಪಿಟ್ಯೂಟರಿ ಗ್ರಂಥಿ. 

38.ಸಮರೂಪಿ ಅವಳಿಗಳು ಬೇರೆಬೇರೆ ವಯಸ್ಸಿನಲ್ಲಿ ತಾರುಣ್ಯವಸ್ಥೆ ಗೆ ಬರಲು ದೇಹದ ಉಷ್ಣತೆ ಕಾರಣವಾಗುತ್ತದೆ.

39.ಪಿಟ್ಯುಟರಿ ಗ್ರಂಥಿಯನ್ನು ನಾಯಕ ಗ್ರಂಥಿ ಎಂದು ಕರೆಯುವರು.

 

ಮುಂದುವರೆಯುವುದು ಭಾಗ 2ರಲ್ಲಿ


ಈ ಅಧ್ಯಾಯದ ಇನ್ನೂ ಪ್ರಮುಖ ಅಂಶಗಳನ್ನು ಭಾಗ 2 ನೋಟ್ಸ್ ಲ್ಲಿ ಕೊಡಲಾಗುವುದು ಸಮಯ ಕಡಿಮೆ ಇರುವುದರಿಂದ ನಿರಂತರ ಅಧ್ಯಯನ ನಿರತರಾಗಿ.

ಧನ್ಯವಾದಗಳು

💐💐💐💐💐💐💐💐🙏



💮💮💮💮💮💮💮💮💮💮💮💮💮💮💮💮💮



Post a Comment

0 Comments

Important PDF Notes

Ad Code