Ad Code

Ticker

6/recent/ticker-posts

Click Below Image to Join Our Telegram For Latest Updates

TET Psychology Notes ಒಂದು ವಾಕ್ಯದ ಪ್ರಶ್ನೋತ್ತರಗಳು

 TET Psychology Notes 

ಒಂದು ವಾಕ್ಯದ ಪ್ರಶ್ನೋತ್ತರಗಳ ನೋಟ್ಸ್



ಹಾಯ್ ಸ್ನೇಹಿತರೇ ನಮಸ್ಕಾರ ಎಲ್ಲರಿಗೂ..!!!

ಸ್ನೇಹಿತರೇ ಟಿಇಟಿ ಪರೀಕ್ಷೆ ಇದೆ ಆಗಸ್ಟ್ 22 ರಂದು ನಿಗದಿಯಾಗಿರುವುದು ಹಾಗಾಗಿ ಟಿಇಟಿ ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳ ಅದ್ಯಯನ ಇನ್ನೂ ಬಲವಾಗಬೇಕಿದೆ.ಸ್ನೇಹಿತರೆ ನಿಮಗೆ ತಿಳಿದಿರುವ ಹಾಗೆ ಶೈಕ್ಷಣಿಕ ಮನೋವಿಜ್ಞಾನದ ವಿಷಯದ ಮೇಲೆ 30 ಅಂಕದ ಪ್ರಶ್ನೆಗಳಿರುತ್ತವೆ.ಹಾಗಾಗಿ ಪೇಪರ್ 1 & ಪೇಪರ 2 ಎರಡು ಪರೀಕ್ಷೆಗೆ ಉಪಯುಕ್ತವಾಗುವಂತಹ ಕೆಲವು ಪ್ರಮುಖ ಪ್ರಶ್ನೋತ್ತರಗಳ ನೋಟ್ಸ್ ನಿಮಗಾಗಿ ಓದಿ ನೋಟ್ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ. 

ಶೈಕ್ಷಣಿಕ ಮನೋವಿಜ್ಞಾನ :-

1.ಮನೋವಿಜ್ಞಾನದ Psycheಎಂಬ ಪದವು ಯಾವ ಭಾಷೆಯಿಂದ ಬಂದಿದೆ?

= ಗ್ರೀಕ್ ಭಾಷೆ.

2.ಮನೋವಿಜ್ಞಾನದ Psyche ಈ ಪದದ ಅರ್ಥ ಏನು?

= ಆತ್ಮ.

3.ಮನೋವಿಜ್ಞಾನದ ಅರ್ಥ ಹರಿದುಬಂದ ದಾರಿಯ ಸರಿಯಾದ ಕ್ರಮ. 

= ಆತ್ಮ ,ಮನಸ್ಸು, ಪ್ರಜ್ಞೆ ,ವರ್ತನೆ. 

4.ಪರಿಸರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಚಟುವಟಿಕೆಗಳ ವೈಜ್ಞಾನಿಕೆಗಳ ವೈಜ್ಞಾನಿಕ ಅಭ್ಯಾಸವೇ ಮನೋವಿಜ್ಞಾನ ಎಂದ ಮನೋವಿಜ್ಞಾನಿಯ ಹೆಸರು. 

= ವುಡ್ ವರ್ಥ್ ಮತ್ತು ಮಾರ್ಕ್ವಿಸ್.

5.ನಡತೆ ಮತ್ತು ವರ್ತನೆಗಳ ಸ್ಪಷ್ಟವಾದ ವಿಜ್ಞಾನವೇ ಮನೋವಿಜ್ಞಾನ ಎಂದು ವ್ಯಾಖ್ಯಾನಿಸಿದರು. 

= ಮ್ಯಾಕ್ ಡ್ಯೂಗಲ್.

6.ವ್ಯಕ್ತಿ ಸಮಾಜದಲ್ಲಿ ವರ್ತಿಸುವ ರೀತಿ ನೀತಿ ಹಾಗೂ ಜನರ ನಡುವಿನ ಸಂಬಂಧಗಳನ್ನು ಅಭ್ಯಾಸಮಾಡುವ ಶಾಖೆ ಯಾವುದು?

= ಸಾಮಾಜಿಕ ಮನೋವಿಜ್ಞಾನ. 

7.ಹುಟ್ಟಿನಿಂದ ಸಾಯುವವರೆಗೆ ವ್ಯಕ್ತಿಯ ಕಲಿಕೆಯ ಅನುಭವಗಳನ್ನು ತಿಳಿಸುವ ಶಾಸ್ತ್ರವೇ ಮನೋವಿಜ್ಞಾನ ಎಂದು ವ್ಯಾಖ್ಯಾನಿಸಿದವರು. 

= ಕ್ರೋ ಅಂಡ್ ಕ್ರೋ.

8.ಶೈಕ್ಷಣಿಕ ಮನೋವಿಜ್ಞಾನದ ಪಿತಾಮಹ ಯಾರು?

= ಎಡ್ವರ್ಡ್ ಲೀ ಥಾರ್ನಡೈಕ್. 

9.ಮನೋವಿಶ್ಲೇಷಣಾವಾದದ ಪಿತಾಮಹ ಯಾರು ?

= ಸಿಗ್ಮಂಡ್ ಫ್ರಾಯ್ಡ್. 

10.ದೇಹ ಶಾಸ್ತ್ರ ಮತ್ತು ಮನಃಶಾಸ್ತ್ರಕ್ಕೆ ನಡುವಿನ ಅಂತರವನ್ನು ಸಮೀಪಕ್ಕೆ ತಂದವನು?

= ವಿಲಿಯಂ ವೂಂಟ್. 

11.ಜೀವಿಯ ಹುಟ್ಟಿನಿಂದ ಸಾವಿನವರೆಗೆ ಉಂಟಾಗುವ ಬೆಳವಣಿಗೆ ಮತ್ತು ವಿಕಾಸವನ್ನು ಅಧ್ಯಯನ ಮಾಡುವ ಶಾಖೆ ಯಾವುದು?

= ವಿಭೇದಾತ್ಮಕ ಮನೋವಿಜ್ಞಾನ. 

12.ವಾಟ್ಸನ್ ರವರ ಪ್ರಕಾರ ಮನೋವಿಜ್ಞಾನವು ಯಾವುದರ ಅಧ್ಯಯನವಾಗಿದೆ. 

= ವರ್ತನೆಯ ಅಧ್ಯಯನ.


💮💮💮💮💮💮💮💮💮💮💮💮💮💮💮💮

13.ಅಂತರಾವಲೋಕನ ಪದ್ಧತಿಯನ್ನು ಬಳಕೆಗೆ ತಂದವರು ಯಾರು?

= ಎಡ್ವರ್ಡ್ ಬ್ರಾಡ್ ಫರ್ಡ್ ಟಿಷ್ನರ್.

14.ಎಲ್ಲಾ ಮನೋವಿಜ್ಞಾನ ಅಧ್ಯಯಗಳ ತಳಹದಿ ಎಂದರೆ ಯಾವುದು?

= ಅಂತರಾವಲೋಕನ. 

15.ನಡವಳಿಕೆ ವಿಜ್ಞಾನ ಎನಿಸಿಕೊಂಡಿರುವುದು ಯಾವುದು.

= ಮನಶಾಸ್ತ್ರ.

16.ವ್ಯಕ್ತಿಯ ಅಧ್ಯಯನ ವಿಧಾನದ ಪಿತಾಮಹ ಯಾರು?

= ಇ.ಬಿ. ಟಿಷ್ನರ್. 

17.ಮನೋವಿಜ್ಞಾನದಲ್ಲಿ ಪ್ರಥಮ ಪ್ರಯೋಗ ಮಾಡಿದವರು ಯಾರು?

= ವಿಲ್ಹ್ ಹೆಲ್ಮ್ ವೂಂಟ್. 

18.ಗೆಸ್ಟಾಲಿನ್ ವಿಧಾನ ಇದಾಗಿದೆ. 

= ಒಳನೋಟ ಮತ್ತು ವರ್ತನೆಯ ವೀಕ್ಷಣೆ ಆಗಿದೆ.

19.ವಿಲ್ಹ್ ಹೆಲ್ಮ್ ವೂಂಟ್ ಎಷ್ಟರಲ್ಲಿ ತನ್ನ ಮನೋವಿಜ್ಞಾನ ಪ್ರಯೋಗಶಾಲೆಯನ್ನು ಸ್ಥಾಪಿಸಿದನು. 

= 1879 ರಲ್ಲಿ ಜರ್ಮನಿಯ ಲೈಪ್ಸಿಗ್ ಎಂಬಲ್ಲಿ. 

20.ಮಾನವನ ಅಗತ್ಯತೆಗಳ ಸೋಪಾನವನ್ನು ಸೂಚಿಸಿದ ವ್ಯಕ್ತಿ ಯಾರು?

= ಅಬ್ರಹಾಂ ಮಾಸ್ಲೋ.

21.ಯಾವ ವಿಧಾನ ವ್ಯಕ್ತಿನಿಷ್ಠ ಪ್ರಧಾನವಾಗಿದ್ದ ಆಗಿದೆ. 

= ಅಂತರ ವೀಕ್ಷಣೆ ವಿಧಾನ. 

22.ಮಾಸ್ಲೋ ವರ್ಗೀಕರಿಸಿದ ಅಭಿಪ್ರೇರಕಗಳು ಗುಂಪಿನ ಸಂಖ್ಯೆ ಎಷ್ಟು?

= 5. 

23.ಮನೋವಿಜ್ಞಾನ ಪದದ ಉತ್ಪತ್ತಿಯ ಅರ್ಥ. 

= ಆತ್ಮದ ಅಧ್ಯಯನ. 

24.ಅಭಿಜಾತ ಸೋಪಾದಿತ ಕಲಿಕೆಯ ಪ್ರತಿಪಾದಕ ಯಾರು?

= ಐ.ಎಫ್. ಪಾವಲೋ.

ನೆನಪಿರಲಿ

● ಥಾರ್ನಡೈಕ್ ಬೆಕ್ಕು ಬಳಸಿ ಪ್ರಯೋಗಿಸಿದ ಅದು ಪ್ರಯತ್ನ ಪ್ರಮಾದ ಕಲಿಕೆ.

● ಬಿ.ಎಫ್. ಸ್ಕಿನ್ನರ್ ಕ್ರಿಯಾಜನ್ಯ ಬದ್ಧ ಸೋಪಾದಿತ ಕಲಿಕೆ ಪ್ರಯೋಗದಲ್ಲಿ ಇಲಿ & ಪಾರಿವಾಳ ಬಳಸಿದ.

● ಐ ಎಫ್  ಪಾವಲೋ ಅನುಬಂಧಿತ ಕಲಿಕೆ ಪ್ರಯೋಗದಲ್ಲಿ ನಾಯಿ ಬಳಸಿದ.

● ಕೋಹ್ಲರ್ ಈತನ ಪ್ರಯೋಗದಲ್ಲಿ ಸುಲ್ತಾನ್ ಎಂಬ ಚಿಂಪಾಂಜಿಯನ್ನು ಬಳಸಿದ್ದಾನೆ ಅದು ಒಳನೋಟ ಕಲಿಕೆ.


ಆತ್ಮೀಯ ಟಿಇಟಿ ಸ್ಪರ್ಧಾ ಮಿತ್ರರೇ ಓದಿ ನೋಟ್ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಗಳಾಗಿ. ಇನ್ನೂ ಹೀಗೆ ಸಾಕಷ್ಟು ಪ್ರಶ್ನೋತ್ತರಗಳನ್ನು ದಿನಾ ಅಪಲೋಡ ಮಾಡಲಾಗುತ್ತದೆ.ಹಾಗಾಗಿ ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ಕೊಡಿ.

ಧನ್ಯವಾದಗಳು 🏵💐💐💐💐🙏🙏







Post a Comment

0 Comments

Important PDF Notes

Ad Code