Ad Code

Ticker

6/recent/ticker-posts

Click Below Image to Join Our Telegram For Latest Updates

[NOTES]FDA/SDA/PDO/D.Ed/B.Ed General knowledge 10-11-2021 Top-10 Question Answers With Explanations For Competitive Exams

[NOTES]FDA/SDA/PDO/D.Ed/B.Ed General knowledge 

10-11-2021 Top-10  Question Answers With Explanations For Competitive Exams 

[NOTES]FDA/SDA/PDO/D.Ed/B.Ed General knowledge 10-11-2021 Top-10  Question Answers With Explanations For Competitive Exams

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು,ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ,
ಕಂಪ್ಯೂಟರ್ ಸಾಕ್ಷರತೆ, ಪ್ರಚಲಿತ ಘಟನೆಗಳನ್ನು ಒಳಗೊಂಡ ಟಾಪ್ 10 ವಿವರಣೆ ಸಹಿತ ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್ ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂಉಪಯುಕ್ತವಾಗಲಿದೆ.

🔷️💥🔷️

10-11-2021 Top-10  Question Answers With Explanations For Competitive Exams 


1) ಜೆಟ್ ಇಂಜಿನ್ನುಗಳು ಯಾವ ತತ್ವದ ಆಧಾರದ ಮೇಲೆ
ಕಾರ್ಯ ಮಾಡುತ್ತದೆ?


ಎ) ನ್ಯೂಟನ್ನಿನ ಮೂರನೆಯ ಚಲನೆಯ ನಿಯಮ

ಬಿ) ಅರ್ಕಿಮಿಡಿಸ್‌ನ ತತ್ವ

ಸಿ) ನ್ಯೂಟನ್ನಿನ ಎರಡನೆಯ ಚಲನೆಯ ನಿಯಮ

ಡಿ) ನ್ಯೂಟನ್ನಿನ ಮೊದಲನೆಯ ಚಲನೆಯ ನಿಯಮ

ಉತ್ತರ:- ನ್ಯೂಟನ್ನಿನ ಎರಡನೆಯ ಚಲನೆಯ ನಿಯಮ

ವಿವರಣೆ:- ನ್ಯೂಟನ್ನಿನ ಎರಡನೆಯ ನಿಯಮವು ಎಂಜಿನ್ನಿನ
ಕಾರ್ಯಾಚರಣೆಯು ಎಂಜಿನ್ನಿನ ಒಳಗೆ ಉಂಟಾದಂತಹ
ವೇಗೋತ್ಕರ್ಷದ ಮೇಲೆ ಅವಲಂಬಿತವಾಗಿರುತ್ತದೆ.ಆದುದ್ದರಿಂದ ನ್ಯೂಟನ್‌ನ ಎರಡನೆಯ ನಿಯಮದಲ್ಲಿ F=Ma ಎಂದು ಪ್ರತಿಪಾದಿಸಲಾಗಿದೆ. ರಾಕೆಟ್ ಮೇಲಕ್ಕೇರಿದಂತೆ ಹೊಗೆ .ಕೆಳಗಡೆ ಚಿಮ್ಮುವುದು ನ್ಯೂಟನ್ನಿನ ಮೂರನೆಯ ನಿಯಮವಾಗುತ್ತದೆ.


2) ಇವುಗಳಲ್ಲಿ ಯಾವ ಹೇಳಿಕೆ ತಪ್ಪು?

ಎ)ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳು ದ್ರವ್ಯರಾಶಿಯಲ್ಲಿ ಸಮನಾಗಿರುತ್ತವೆ.

ಬಿ) ಎಲ್ಲ ಪ್ರೋಟಾನ್‌ಗಳು  ಸಮಾನವಾದ ದ್ರವ್ಯರಾಶಿಯನ್ನು ಹೊಂದಿವೆ.

ಸಿ) ಪ್ರೋಟಾನುಗಳು ಬೀಜ ಕೇಂದ್ರಕ್ಕೆ ಸುತ್ತಲೂ ಚಲಿಸುತ್ತವೆ.

ಡಿ) ಎಲೆಕ್ಟ್ರಾನುಗಳು ಬೀಜ ಕೇಂದ್ರದ ಸುತ್ತಲೂ ಚಲಿಸುತ್ತವೆ.

ಉತ್ತರ:- ಪ್ರೋಟಾನುಗಳು ಬೀಜ ಕೇಂದ್ರಕ್ಕೆ ಸುತ್ತಲೂ
ಚಲಿಸುತ್ತವೆ.

ವಿವರಣೆ:- ಪರಮಾಣುವಿನ ಬೀಜದಲ್ಲಿ ಪ್ರೋಟಾನ್ ಮತ್ತು
ನ್ಯೂಟ್ರಾನ್‌ಗಳಿರುತ್ತವೆ. ಬೀಜದ ಸುತ್ತಲೂ ಎಲೆಕ್ಟ್ರಾನ್‌ಗಳು
ಸುತ್ತುತ್ತಿರುತ್ತವೆ. ಪರಮಾಣುವಿನ ಬೀಜದಲ್ಲಿರುವ
ಪ್ರೋಟಾನ್‌ಗಳ ಸಂಖ್ಯೆಯನ್ನು ಪರಮಾಣು ಸಂಖ್ಯೆ ಎಂದು ಕರೆಯುತ್ತಾರೆ.ಒಂದು  ಪರಮಾಣುವಿನ ಬೀಜದಲ್ಲಿರುವ ಪ್ರೋಟಾನ್ ಮತ್ತುನ್ಯೂಟ್ರಾನ್‌ಗಳ ಒಟ್ಟು ಮೊತ್ತವನ್ನು ರಾಶಿಸಂಖ್ಯೆ ಮತ್ತು ಪರಮಾಣು ತೂಕ ಎಂದು ಕರೆಯುತ್ತಾರೆ.ಪ್ರೋಟಾನ್‌ಗಳು ರುದರ್‌ಫೋರ್ಡ್ ಎಂಬುವನು ಸಂಶೋಧಿಸಿದರೆ, ನ್ಯೂಟ್ರಾನ್‌ನ್ನು ಛಾಡ್ವಿಕ್ ಸಂಶೋಧಿಸಿದರೆ,ಎಲೆಕ್ಟ್ರಾನ್‌ನ್ನು ಜೆ.ಜೆ. ಥಾಮೃ ನ್ ಸಂಶೋಧಿಸಿದ್ದಾರೆ.ಒಂದು ಬೀಜದಲ್ಲಿರುವ ಪ್ರೋಟಾನ್‌ಗಳ ದ್ರವ್ಯರಾಶಿಯು 1.67X10-27ಯಾಗಿದೆ. ಪ್ರೋಟಾನ್‌ಗಳ
ದವ್ಯರಾಶಿಯಷ್ಟೇ ನ್ಯೂಟ್ರಾನ್‌ನ ದ್ರವ್ಯರಾಶಿಯಿರುತ್ತದೆ.
ಪರಮಾಣುವಿನಬೀಜದ ಸುತ್ತಲೂ ಎಲೆಕ್ಟ್ರಾನ್ಸ್‌ಗಳು
ವಿವಿಧ ಕಕ್ಷೆಯಲ್ಲಿ ಸುತ್ತುತ್ತಿರುತ್ತವೆ.


3) 'ಸೈಫಿಗ್ರಾಫ್' ಯಾವ ಆಟಕ್ಕೆ ಸಂಬಂಧಿಸಿದೆ?

ಎ) ಟೆನಿಸ್

ಬಿ) ಅಥ್ಲೆಟಿಕ್ಸ್

ಸಿ) ಗಾಲ್ಫ್

ಡಿ) ಚೆಸ್

ಉತ್ತರ:- ಟೆನಿಸ್

ವಿವರಣೆ:-ಸೈಫಿಗ್ರಾಫ್‌ರವರು ಜರ್ಮನಿಯ ಆಟಗಾರರು. ಜಗತ್ತಿನ ನಂ.1ಮಾಜಿ ಟೆನ್ನಿಸ್ ಆಟಗಾರರು. ಇವರ ಜೀವನದಲ್ಲಿ 22 ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಗಳನ್ನು ಪಡೆದಿದ್ದಾರೆ. ಮಾರ್ಗರೇಟ್ ಕೋರ್ಟ್   ನಂತರ ಎರಡನೇ ಅತಿ ಹೆಚ್ಚು ಸಿಂಗಲ್ಸ್ ಆಟಗಾರ್ತಿ.


4) "ಪೈರೋಮೀಟರ್'ನ್ನು .......ಅಳತೆ ಮಾಡಲು
ಉಪಯೋಗಿಸುತ್ತಾರೆ?

ಎ) ಅನಿಲದ ಒತ್ತಡ

ಬಿ) ಅತಿ ಹೆಚ್ಚು ಉಷ್ಣತೆ

ಸಿ) ವಾತಾವರಣದ ಒತ್ತಡ

ಡಿ) ದ್ರವದ ಸಾಪೇಕ್ಷ ಸಾಂದ್ರತೆ

ಉತ್ತರ:- ಅತಿ ಹೆಚ್ಚು ಉಷ್ಣತೆ

ವಿವರಣೆ:- ಇದು ಅತಿ ಹೆಚ್ಚು ಉಷ್ಣತೆಯನ್ನು ಅಳೆಯುವ
ಸಾಧನವಾಗಿದೆ. ಸೂರ್ಯ,  ನಕ್ಷತ್ರಗಳಲ್ಲಿರುವ ತಾಪಮಾನವನ್ನು ಅಳೆಯಲು ಪೈರೋಮೀಟರ್‌ನ್ನು ಬಳಸುತ್ತಾರೆ.ಸಾಮಾನ್ಯ ಉಷ್ಣತೆ ಅಳೆಯಲು ಥರ್ಮೋಮೀಟರ್‌ನ್ನು ಬಳಕೆ ಮಾಡಲಾಗುತ್ತದೆ.


5) ಇವುಗಳಲ್ಲಿ ಯಾವುದರಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ?

ಎ) ಹಾಲು

ಬಿ) ಸಕ್ಕರೆ

ಸಿ) ಹಿಟ್ಟು

ಡಿ) ಅಲೂಗೆಡ್ಡೆ

ಉತ್ತರ:- ಹಾಲು

ವಿವರಣೆ:- ಹಾಲಿನಲ್ಲಿ ಕೊಲೆಸ್ಟರಾಲ್ ರೂಪದಲ್ಲಿ ಕೊಬ್ಬಿನಂಶ
ಇರುತ್ತದೆ. ಕೊಲೆಸ್ಟರಾಲ್‌ನಿಂದ ತುಪ್ಪ ಮತ್ತು ಬೆಣ್ಣೆಯನ್ನು
ಸಿದ್ಧಗೊಳಿಸುತ್ತಾರೆ. ಆಲೂಗಡ್ಡೆಯಲ್ಲಿ ಪಿಷ್ಯವಿರುತ್ತದೆ.
ಸಕ್ಕರೆಯಲ್ಲಿ ಕಾರ್ಬೋಹೈಡ್ರೆಟ್ ಇರುತ್ತದೆ.
🔷️💥🔷️
6) ಹುಚ್ಚು ನಾಯಿ ಕಡಿತಕ್ಕೆ ಔಷಧಿಯನ್ನು ಕಂಡು ಹಿಡಿದವನು?

ಎ) ಲಾರ್ಡ್ ಲಿಸ್ಟರ್‌

ಬಿ) ರೋನಾಲ್ಡ್ ರಾಸ್

5) ಲೂಯಿ ಪಾಶ್ಚರ್‌

ಡಿ) ಜಿನ್ನರ್

ಉತ್ತರ:- ಲೂಯಿ ಪಾಶ್ಚರ್

ವಿವರಣೆ:- ಹುಚ್ಚು ನಾಯಿ ಕಡಿತದಿಂದ ರೇಬಿಸ್ ರೋಗ
ಬರುತ್ತದೆ. ಈ ರೋಗವು ಹುಚ್ಚುನಾಯಿ ಕಡಿತದಿಂದ
ಬರುತ್ತದೆ. ಈ ರೋಗವನ್ನು ವೈರಸ್‌ನಿಂದ ಬರುವುದಾಗಿದ್ದು,
ಇದನ್ನು ತಡೆಯಲು ಲೂಯಿಪಾಶ್ಚರ್ ಎಂಬ ಫ್ರೆಂಚ್ ವಿಜ್ಞಾನಿ
ಚಿಕಿತ್ಸೆ ಕಂಡುಹಿಡಿದರು. ಇವರು ಆಂಡ್ರಾಕ್ಸ್ ರೋಗಕ್ಕೂ
ಕೂಡಾ ಚುಚ್ಚುಮದ್ದು ಕಂಡು ಹಿಡಿದಿದ್ದಾರೆ. ಮೊದಲ ಬಾರಿಗೆ
ವ್ಯಾಕ್ಸಿನೇಷನ್‌ನ್ನು 1885ರಲ್ಲಿ ಅಭಿವೃದ್ಧಿ ಪಡಿಸಲಾಯಿತು.
ಇದನ್ನು ಮೊದಲ ಬಾರಿಗೆ ಜುಲೈ 6  1885ರಂದು ಜೋಸೆಫ್ ಮಿಸ್ಟರ್ ಎಂಬ 9 ವರ್ಷದ ಮಗುವಿನ ಮೇಲೆ ಬಳಸಲಾಯಿತು.   ಲೂಯಿ ಪಾಶ್ವರ್‌ರೊಂದಿಗೆ  ಎಮಿಲಿ ರೋಕ್ಸ್ರು ಕೂಡಾ ರೇಬಿಸ್ ರೋಗದ ಚುಚ್ಚು ಮದ್ದು ಕಂಡು ಹಿಡಿಯಲು ಸಹಕರಿಸಿದರು.


7) “ಏ ಡಿಸ್ಕವರಿ ಆಫ್ ಇಂಡಿಯಾ" ಕೃತಿಯನ್ನು ಬರೆದವರು ?

ಎ) ಮಹಾತ್ಮ ಗಾಂಧಿ

ಬಿ) ಸುಭಾಷ್ ಚಂದ್ರ ಬೋಸ್

ಸಿ) ಜವಹರಲಾಲ್ ನೆಹರು

ಡಿ)ರವೀಂದ್ರನಾಥ್ ಠಗೋರ್

ಉತ್ತರ:- ಜವಹರಲಾಲ್ ನೆಹರು

ವಿವರಣೆ:- ಜವಾಹರ್‌ಲಾಲ್ ನೆಹರೂ ರವರು "ದಿ ಡಿಸ್ಕವರಿ ಆಫ್ ಇಂಡಿಯಾ' ಎಂಬ ಪುಸ್ತಕವನ್ನು 1942 ರಿಂದ 1946ರವರೆಗೆ
ಮಹಾರಾಷ್ಟ್ರದ ಅಹಮದ್‌ನಗರದ ಜೈಲಿನಲ್ಲಿದ್ದಾಗ ಬರೆದಿದ್ದರು.
ಇದು ಭಾರತದ ಇತಿಹಾಸವನ್ನು ಒಳಗೊಂಡ ಗ್ರಂಥವಾಗಿದ್ದು,
ಇದನ್ನು ನೆಹರೂರವರು ಅಹಮದ್‌ನಗರದ ಜೈಲಿನಲ್ಲಿದ್ದ
ಕೈದಿಗಳಿಗೆ ಈ ಗ್ರಂಥವನ್ನು ಅರ್ಪಿಸಿದ್ದಾರೆ. 1942ರಲ್ಲಿ ಕ್ವಿಟ್
ಇಂಡಿಯಾ ಚಳುವಳಿ ಹೋರಾಟದ ಸಂದರ್ಭದಲ್ಲಿ ಇವರನ್ನು
ಸೆರೆಮನೆಗೆ ಬಂಧಿಸಿ ಅಹಮದ್‌ನಗರದ ಜೈಲಿನಲ್ಲಿಡಲಾಗಿತ್ತು.
ಇವರ ಪ್ರಮುಖ ಗ್ರಂಥಗಳೆಂದರೆ "ಗ್ಲಿಂಪ್ಸಸ್ ಆಪ್ ವರ್ಲ್ಡ್
ಹಿಸ್ಟರಿ” ಇವರ ಆತ್ಮ ಚರಿತ್ರೆ "ಟು ವರ್ಡ್ಸ್ ಫ್ರೀಡಂ'.


8) ರಾಜ್ಯಸಭೆಯ ಚುನಾವಣೆಗೆ ಅಭ್ಯರ್ಥಿ ಆಗಲು ಕನಿಷ್ಠ
ವಯೋಮಿತಿ ಎಷ್ಟು?

ಎ) 25 ವರ್ಷ

ಬಿ) 21 ವರ್ಷ

ಸಿ) 35 ವರ್ಷ

ಡಿ) 30 ವರ್ಷ

ಉತ್ತರ:- 30 ವರ್ಷ

ವಿವರಣೆ:- ರಾಜ್ಯಸಭೆ, ವಿಧಾನಪರಿಷತ್‌ಗೆ ಕನಿಷ್ಟ ವಯಸ್ಸು
- 30 ವರ್ಷ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರಿಗೆ
ಕನಿಷ್ಟ 35 ವರ್ಷ, ಲೋಕಸಭೆ, ವಿಧಾನಸಭೆ - ಕನಿಷ್ಠ
25 ವರ್ಷ, ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್,
ತಾಲ್ಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್, ಮತ್ತು ನಗರ
ಸ್ಥಳೀಯ ಸಂಸ್ಥೆಗಳಿಗೆ – ಕನಿಷ್ಠ 21 ವರ್ಷ


9) ಭಾರತದ ಅಟಾರ್ನಿ ಜನರಲ್‌ರವರನ್ನು ನೇಮಕ ಮಾಡಿದವರು ಯಾರು?

ಎ) ಪ್ರಧಾನ ಮಂತ್ರಿ

ಬಿ) ಭಾರತದ ಶ್ರೇಷ್ಠ ನ್ಯಾಯಾಧೀಶರು

ಸಿ) ಉಪರಾಷ್ಟ್ರಪತಿ

ಡಿ) ರಾಷ್ಟ್ರಪತಿ

ಉತ್ತರ:- ರಾಷ್ಟ್ರಪತಿ

ವಿವರಣೆ:- ಸಂವಿಧಾನದ 76ನೇ ವಿಧಿಯ ಪ್ರಕಾರ
ಭಾರತದ ಅತ್ಯುನ್ನತ ಕಾನೂನು ಅಧಿಕಾರಿಯಾದ ಅಟಾರ್ನಿ
ಜನರಲ್‌ರವರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ಪ್ರಮಾಣ
ವಚನ ಬೋಧಿಸುತ್ತಾರೆ. ರಾಜೀನಾಮೆಯನ್ನೂ ರಾಷ್ಟ್ರಪತಿಗಳಿಗೆ ನೀಡಲಾಗುತ್ತದೆ.


10) ಹತ್ತು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?

ಎ) ರಾಷ್ಟ್ರಪತಿ

ಬಿ) ಭಾರತದ ರಿಸರ್ವ್ ಬ್ಯಾಂಕಿನ ಗೌವರ್ನರ್

ಸಿ) ಭಾರತದ ಪ್ರಧಾನ ಮಂತ್ರಿ

ಡಿ) ಭಾರತದ ಹಣಕಾಸು ಮಂತ್ರಿ

ಉತ್ತರ:- ಭಾರತದ ರಿಸರ್ವ್ ಬ್ಯಾಂಕಿನ ಗೌವರ್ನರ್

ವಿವರಣೆ:- ಒಂದು ರೂಪಾಯಿ ನೋಟನ್ನು ಹೊರತು ಪಡಿಸಿ
ಉಳಿದೆಲ್ಲಾ ನೋಟುಗಳಲ್ಲೂ ರಿಸರ್ವ್ ಬ್ಯಾಂಕ್‌ನ ಗವರ್ನರ್ ಸಹಿ ಇರುತ್ತದೆ. 1 ರೂ. ನೋಟಿನ ಮೇಲೆ ಭಾರತದ ಹಣಕಾಸು ಕಾರ್ಯದರ್ಶಿಗಳ ಸಹಿ ಇರುತ್ತದೆ.

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

🌸 09-11-2021 Daily Top 10 GK Question Answers With Explanations,Useful For All KPSC Exams

🔷️🔶️🔷️









Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] ಕನ್ನಡ ವ್ಯಾಕರಣ/ 10th Kannada Grammar PDF For All Competitive Exams
[PDF] HSTR CET Syllabus PDF For High School Teacher Aspirants
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
10ನೇ ತರಗತಿಯ ಕನ್ನಡ ಕವಿ ಮತ್ತು ಲೇಖಕರ ಪರಿಚಯ ಸಾಮಾನ್ಯ ಕನ್ನಡ ಸ್ಪರ್ಧಾತ್ಮಕ  ಪರೀಕ್ಷೆಗೆ ತುಂಬಾ ಉಪಯುಕ್ತ/Introduction to 10th Class Kannada Poets and Writers
[PDF]ಭಾರತದ ಇತಿಹಾಸ/ Indian History PDF For All Competitive Exams
Bhagavad Gita PDF in Kannada/ಕನ್ನಡದಲ್ಲಿ ಭಗವದ್ಗೀತಾ ಪಿಡಿಎಫ್
PU Lecturer Recruitment Syllabus PDF/ಪಿಯು ಉಪನ್ಯಾಸಕರ ನೇಮಕಾತಿ ಪಠ್ಯಕ್ರಮ ಪಿಡಿಎಫ್
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada

Important PDF Notes

Ad Code