NAME OF THE PLANETS IN KANNADA
ಸೌರಮಂಡಲದ ಪ್ರತಿಯೊಂದು ಗ್ರಹದ ಬಗ್ಗೆ ಸಂಕ್ಷಿಪ್ತ ಮಾಹಿತಿ
🔰🔰🔰
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
🔰🔰🔰
NAME OF THE PLANETS IN KANNADA
ಸೌರಮಂಡಲದ ಪ್ರತಿಯೊಂದು ಗ್ರಹದ ಬಗ್ಗೆ ಸಂಕ್ಷಿಪ್ತ ಮಾಹಿತಿ
ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟು ಗ್ರಹಗಳು ಸೂರ್ಯನ ಸುತ್ತಲೂ ಅಂಡಾಕಾರದ ಪಥದಲ್ಲಿ ಗಡಿಯಾರದ ದಿಕ್ಕಿಗೆ ವಿರುದ್ಧವಾಗಿ ಚಲಿಸುತ್ತವೆ,ಸೌರವ್ಯೂಹದಲ್ಲಿ ಈ ಮುಂಚೆ "ಒಂಬತ್ತು ಗ್ರಹಗಳು ಇದ್ದವು 2006ರಲ್ಲಿ ಜೆಕ್ ಗಣರಾಜ್ಯದ ಪ್ರೇಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಎಂಬ ಗ್ರಹವನ್ನು ತೆಗೆದುಹಾಕಿ, ಈಗ ಪ್ರಸ್ತುತ 8 ಗ್ರಹಗಳಿವೆ.
ಎಂಟು ಗ್ರಹಗಳು
1) ಬುಧ ಗ್ರಹ
2) ಶುಕ್ರ ಗ್ರಹ
3) ಭೂಮಿ ಗ್ರಹ
4) ಮಂಗಳ ಗ್ರಹ
5) ಗುರು ಗ್ರಹ
6) ಶನಿ ಗ್ರಹ
7) ಯುರೇನಸ್ ಗ್ರಹ
8) ನೆಪ್ಯೂನ್ ಗ್ರಹ
NAME OF THE PLANETS IN KANNADA
ಸೌರಮಂಡಲದ ಪ್ರತಿಯೊಂದು ಗ್ರಹದ ಬಗ್ಗೆ ಸಂಕ್ಷಿಪ್ತ ಮಾಹಿತಿ
೧. ಬುಧ ಗ್ರಹ :
▪️ ಈ ಗ್ರಹ ಸೂರ್ಯನಿಗೆ ಅತ್ಯಂತ ಸಮೀಪದಲಿರುವಂತಹ ಗ್ರಹ.
▪️ಇದು ಸೂರ್ಯನಿಂದ ೫೭.೬ ಮಿಲಿಯನ್ ಕಿ.ಮೀ. ದೂರದಲ್ಲಿರುತ್ತದೆ.
▪️ ಇದು ಸೌರಮಂಡಲದಲ್ಲಿ ಅತ್ಯಂತ ಸಣ್ಣದಾಗಿರುವಂತಹ ಗ್ರಹ.
▪️ಈ ಗ್ರಹವು ಸೂರ್ಯನ ಸುತ್ತುವುದಕ್ಕೆ ತೆಗೆದುಕೊಳ್ಳುವ ಸಮಯ ೮೮ ದಿನಗಳು.
▪️ ಇದರ ಗಾತ್ರ ಬಂದು ಭೂಮಿಯ ಅರ್ಧದಷ್ಟು ಇರುತ್ತದೆ.
ಭಾರತದಲ್ಲಿ ಈ ಗ್ರಹಕ್ಕೆ ಚಂದ್ರನ ಮಗನಾದ ಬುಧನ ಹೆಸರನ್ನು ಇಡಲಾಗಿದೆ.
▪️ ಇದರಲ್ಲಿ ಯಾವುದೇ ಉಪಗ್ರಹಗಳು ಇಲ್ಲ.
೨. ಶುಕ್ರ ಗ್ರಹ :
▪️ಇದು ಸೂರ್ಯನಿಂದ ಎರಡನೇ ಅತಿ ಸಮೀಪದಲ್ಲಿರುವಂತಹ ಗ್ರಹ.
▪️ಇದು ಸೂರ್ಯನಿಂದ ೧೦೭.೫೨ ಮಿಲಿಯನ್ ಕಿ. ಮೀ. ದೂರದಲ್ಲಿರುತ್ತದೆ.
▪️ಇದು ಭೂಮಿಯಿಂದ ೨.೬ ಕೋಟಿ ಮೈಲುಗಳಷ್ಟು ದೂರದಲ್ಲಿರುತ್ತದೆ.
▪️ ಇದು ಸೂರ್ಯನ ಒಂದು ಸುತ್ತುಹಾಕಲು ತೆಗೆದುಕೊಳ್ಳುವ ಅವಧಿ ೨೨೫ ದಿನಗಳು.
▪️ ಇದರ ಗಾತ್ರ ಬಂದು ಭೂಮಿಯಷ್ಟು.
▪️ ಇದರಲ್ಲಿ ಉಪಗ್ರಹ ಗಳು ಇಲ್ಲ.
🔰🔰🔰
೩. ಭೂಮಿ :
▪️ಇದು ಸೂರ್ಯನಿಂದ ಮೂರನೇ ಅತಿ ಸಮೀಪದಲ್ಲಿರುವಂತಹ ಗ್ರಹ.
▪️ ಇದು ಸೌರಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹ.
ಸೂರ್ಯನಿಂದ ೧೪೮.೮ ಮಿಲಿಯನ್ ಕಿ.ಮೀ.
▪️ಸೂರ್ಯನನ್ನು ಸುತ್ತು ಹಾಕಲು ಇದು ತೆಗೆದುಕೊಳ್ಳುವ ಅವಧಿ ೩೬೫ ದಿನಗಳು.
▪️ ಇದು ಸ್ವಯಂ ಪರಿಬ್ರಮಣೆಗೆ ತೆಗೆದುಕೊಳ್ಳುವ ಅವಧಿ ೨೩ ತಾಸು, ೫೬ ನಿಮಿಷ, ೪.೦೫ ಸೆಕೆಂಡು. ಇದರಲ್ಲಿ ಉಪಗ್ರಹ ಗಳು.
▪️ ಇದರ ಉಪಗ್ರಹಗಳು – 01
೪. ಮಂಗಳ ಗ್ರಹ :
▪️ಸೂರ್ಯನ ಗ್ರಹಮಂಡಲದಲ್ಲಿ ಇದು ನಾಲ್ಕನೇ ಸ್ಥಾನವನ್ನು ಹೊಂದಿದೆ.
▪️ ಇದರ ಗಾತ್ರ ಬಂದು ಭೂಮಿಯ ಅರ್ಧದಷ್ಟು ಇದೆ.
▪️ ಇದು ಸೂರ್ಯನಿಂದ ೨೨೫.೬ ಮಿಲಿಯನ್ ಕಿ.ಮೀ. ದೂರದಲ್ಲಿದೆ.
▪️ಇದು ಸೂರ್ಯನನ್ನು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೬೮೭ ದಿನಗಳು.
▪️ ಇದು ಭೂಮಿಯಿಂದ ೩.೫ ಕೋಟಿ ಮೈಲು ದೂರದಲ್ಲಿರುತ್ತದೆ.
▪️ಇಲ್ಲಿನ ವಾತಾವರಣ ಬಂದು ಆಮ್ಲಜನಕ ಸಾಂಧ್ರತೆ ಕಡಿಮೆ, ನೀರಿನ ಅಂಶ ಕೂಡ ಅಲ್ಪ, ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಯ ಹೊಂದಿದೆ.
▪️ ಇದರ ಉಪಗ್ರಹಗಳು – 02.
🔰🔰🔰
೫. ಗುರು ಗ್ರಹ :
▪️ ಇದು ಸೂರ್ಯನಿಂದ ೫ನೇ ಗ್ರಹ ಮತ್ತು ಸೌರ ಮಂಡಲದಲ್ಲೇ ಅತಿ ದೊಡ್ಡ ಗ್ರಹ ಎನ್ನಲಾಗಿದೆ.
▪️ಇದು ಸೂರ್ಯನಿಂದ ೭೭೨.೮ ಮಿಲಿಯನ್ ಕಿ. ಮೀ. ದೂರದಲ್ಲಿದೆ.
▪️ಇದು ಸೂರ್ಯನನ್ನು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೧೧.೯ ವರ್ಷಗಳಷ್ಟು.
▪️ ಇದು ಭೂಮಿಯಿಂದ ೩೬.೯ ಕೋಟಿ ಮೈಲುಗಳಷ್ಟು ದೂರದಲ್ಲಿದೆ.
▪️ ಇದರ ಗಾತ್ರ ಬಂದು ಭೂಮಿಯ ೧.೩೦೦ ರಷ್ಟು.
▪️ ಇದರ ಉಪಗ್ರಹಗಳು – 16.
೬. ಶನಿ ಗ್ರಹ :
▪️ಇದು ಸೂರ್ಯನಿಂದ ೧೪೧೭.೬ ಮಿಲಿಯನ್ ಕಿ.ಮೀ. ದೂರದಲ್ಲಿರುತ್ತದೆ.
▪️ ಇದು ಸೂರ್ಯನ ಒಂದು ಸುತ್ತುಹಾಕಲು ತೆಗೆದುಕೊಳ್ಳುವ ಅವಧಿ ೨೯.೫ ವರ್ಷಗಳು.
▪️ಇದು ಭೂಮಿಯಿಂದ ೭೪.೪ ಕೋಟಿ ಮೈಲು ಅಷ್ಟು ದೂರದಲ್ಲಿರುತ್ತದೆ.
▪️ಇಲ್ಲಿನ ವಾತಾವರಣವು ದಟ್ಟ ವಾಯುಮಂಡಲದಿಂದ ಕೂಡಿದೆ., ಅಮೋನಿಯ, ಮೀಥೇನ್, ಜಲಜನಕ, ಹಿರಿಯಂ, ಅನಿಲಗಳಿವೆ.
▪️ ಇದರ ಉಪಗ್ರಹಗಳು – 20 ಅಥವಾ ಹೆಚ್ಚು.
🔰🔰🔰
೭. ಯುರೇನಸ್ ಗ್ರಹ :
▪️ ಇದು ಸೂರ್ಯನಿಂದ ಏಳನೇ ಗ್ರಹ ಎನ್ನಲಾಗುತ್ತದೆ.
▪️ಇದು ಸೂರ್ಯನಿಂದ ೨,೮೫೨.೩ ಮಿಲಿಯನ್ ಕಿ.ಮೀ. ನಷ್ಟು ದೂರದಲ್ಲಿರುತ್ತದೆ.
▪️ಇದು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೪೮ ವರ್ಷಗಳು.
▪️ ಇದರ ಉಪಗ್ರಹಗಳು – 15
೮. ನೆಪ್ಚೂನ್ ಗ್ರಹ :
▪️ ಇದು ಸೌರಮಂಡಲದ ಎಂಟನೆಯ ಗ್ರಹ ಎನ್ನಲಾಗುತದೆ.
▪️ಇದು ಸೂರ್ಯನಿಂದ ೪೪೯೭ ಮಿಲಿಯನ್ ಕಿ.ಮೀ. ರಷ್ಟು ದೂರದಲ್ಲಿರುತ್ತದೆ.
▪️ಇದು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೧೬೫ ದಿನಗಳು ಮಾತ್ರ.
▪️ ಇದರ ಉಪಗ್ರಹಗಳು – 08.
🔰🔰🔰
0 Comments