Ad Code

Ticker

6/recent/ticker-posts

Click Below Image to Join Our Telegram For Latest Updates

Description of National Flag, National Anthem, National Emblem for all competitive exams/ರಾಷ್ಟ್ರಧ್ವಜ ,ರಾಷ್ಟ್ರಗೀತೆ ,ರಾಷ್ಟ್ರಲಾಂಛನದ ವಿವರಣೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

Description of National Flag, National Anthem, National Emblem for all competitive exams

ರಾಷ್ಟ್ರಧ್ವಜ ,ರಾಷ್ಟ್ರಗೀತೆ ,ರಾಷ್ಟ್ರಲಾಂಛನದ ವಿವರಣೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 

Description of National Flag, National Anthem, National Emblem for all competitive exams


Description of National Flag, National Anthem, National Emblem for all competitive exams

ರಾಷ್ಟ್ರಧ್ವಜ ,ರಾಷ್ಟ್ರಗೀತೆ ,ರಾಷ್ಟ್ರಲಾಂಛನದ ವಿವರಣೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 

ರಾಷ್ಟ್ರಧ್ವಜ : ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹೋರಾಟಗಾರರು ಮಧ್ಯದಲ್ಲಿ ಚರಕವಿದ್ದ ತ್ರಿವರ್ಣ ಧ್ವಜವನ್ನೇ ಹಾರಿಸಿ, ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗುತ್ತಾ ಜೈಲು ಸೇರಿದರು. ಈ ಧ್ವಜವನ್ನೇ ರಾಷ್ಟ್ರಧ್ವಜ ಮಾಡಬೇಕೆಂಬ ಸಲಹೆ ಸಂವಿಧಾನ ರಚನಾ ಸಭೆಯ ಮುಂದೆ ಬಂತು. ಅನೇಕರು ಇದು ಒಂದು ಪಕ್ಷ (ಕಾಂಗ್ರೆಸ್)ದ ಧ್ವಜವೆಂಬ ಕಾರಣಕ್ಕಾಗಿ ವಿರೋಧಿಸಿದರು. ಅಂತಿಮವಾಗಿ ಒಂದು ರಾಜೀಸೂತ್ರ ಹೊರಬಂತು. ಸಾರಾನಾಥ್‌ನ ಮ್ಯೂಸಿಯಂನ ಅಶೋಕಸ್ತಂಭದಲ್ಲಿ ಅಳವಡಿಸಿರುವ 24 ಕಡ್ಡಿಗಳ ಧರ್ಮ ಚಕ್ರವನ್ನು ಚರಕದ ಜಾಗದಲ್ಲಿ ಹಾಕುವಂತೆ ನಿರ್ಧರಿಸಲಾಯಿತು. ಇದು ಎಲ್ಲರಿಗೂ ಒಪ್ಪಿಗೆಯಾಯಿತು.

ನಮ್ಮ ರಾಷ್ಟ್ರಧ್ವಜದ ಅಗಲ 2 ಅಡಿಗಳು ಮತ್ತು ಉದ್ದ ಮೂರು ಅಡಿಗಳು. ಅಗಲದ 24 ಇಂಚುಗಳನ್ನು ಎಂಟು ಇಂಚುಗಳ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. "ಮೇಲುಗಡೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿಯ ಬಣ್ಣ ಕೆಳಗೆ ಹಸಿರು ಬಣ್ಣ ಇದೆ. ಕೇಸರಿ ಬಣ್ಣ ಸ್ಟೈರ್ಯ ಮತ್ತು ತ್ಯಾಗದ ಸಂಕೇತವಾದರೆ, ಬಿಳಿ ಬಣ್ಣ ಪರಿಶುದ್ಧತೆಯ ಸಂಕೇತ. ಇದರ ಮಧ್ಯೆ ಅಳವಡಿಸಿರುವ ಅಶೋಕನ ಧರ್ಮಚಕ್ರ. ಸರ್ವಧರ್ಮಗಳ ಸಂಕೇತವೇ ಆಗಿದೆ. ಶ್ವೇತವರ್ಣ ಶಾಂತಿ ಮತ್ತು ಸತ್ಯದ ಸಂಕೇತವೂ ಹೌದು. ಕೆಳಗಿರುವ ಕಡು ಹಸಿರು ಬಣ್ಣ ಚಲನೆಯ ಅರ್ಥಾತ್ ಪ್ರಗತಿಯ, ಹಸಿರು ಕ್ರಾಂತಿಯ ಸಂಕೇತವೂ ಹೌದು". 22-7-1947ರಂದು ಸಂವಿಧಾನ ರಚನಾ ಸಭೆ ಇದನ್ನು ಒಪ್ಪಿಕೊಂಡಿತು. ಇದೇ ನಮ್ಮ ರಾಷ್ಟ್ರಧ್ವಜವಾಯಿತು.ಈ ಧ್ವಜಕ್ಕೆ ಸಂಬಂಧಿಸಿದ ನಿಯಮಗಳಿವೆ. ಅದನ್ನು ರಾಷ್ಟ್ರೀಯ ಧ್ವಜದ ನಿಯಮ (National Flag Code)ಗಳೆಂದೇ ಕರೆಯುತ್ತಾರೆ.


ರಾಷ್ಟ್ರಗೀತೆ : ರಾಷ್ಟ್ರಗೀತೆಯ ವಿಷಯದಲ್ಲೂ ಸಾಕಷ್ಟು ಚರ್ಚೆ ನಡೆಯಿತು. ಸ್ವಾತಂತ್ರ ಹೋರಾಟಗಾರರು ಆಗ ಹಾಡುತ್ತಿದ್ದ ಗೀತೆ ಬಂಕಿಮ್ ಚಂದ್ರರು ರಚಿಸಿದ ವಂದೇ ಮಾತರಂ, ಇದನ್ನೇ ರಾಷ್ಟ್ರಗೀತೆ ಮಾಡಬೇಕೆಂಬ ಸಲಹೆ ಸಂವಿಧಾನ ರಚನಾ ಸಭೆಯ ಮುಂದೆ ಬಂತು. ಅದು ಒಂದು ಮೇಲ್ವರ್ಗದವರಿಗೆ ಹಾಗೂ ಒಂದು ಪಕ್ಷಕ್ಕೆ ಸಂಬಂಧಿಸಿದ್ದೆಂಬ ಟೀಕೆಯೂ ಬಂತು. ರವೀಂದ್ರನಾಥ ಠಾಕೂರರ 'ಜನಗಣಮನ ಅಧಿನಾಯಕ ಜಯಹೇ' ಮೇಲೆ ಸಲ್ಲದ ಟೀಕ ಮಾಡಲಾಯಿತು. ನಂತರ ಪಂಡಿತ ರವಿಶಂಕರ ನೇತೃತ್ವದ ತಜ್ಞರ ಸಮಿತಿ ರವೀಂದ್ರನಾಥ ಠಾಕೂರರ ಗೀತೆ ಪಾಶ್ಚಿಮಾತ್ಯ ವಾದ್ಯಗಾರರ ದೃಷ್ಟಿಯಿಂದಲೂ ಸೂಕ್ತವೆಂಬ ಅಭಿಪ್ರಾಯ ನೀಡಿತು. ಅದರ ಫಲವಾಗಿ ರವೀಂದ್ರರ ಗೀತೆ ರಾಷ್ಟ್ರದ ಗೀತೆಯಾಗಿ, ಬಂಕಿಮ ಚಂದ್ರ ಚಟರ್ಜಿಯವರ 'ವಂದೇಮಾತರಂ' 'ರಾಷ್ಟ್ರದ ಹಾಡಿನ' ಸ್ಥಾನಮಾನವನ್ನು ಪಡೆಯಿತು. ಸಂವಿಧಾನ ರಚನಾ ಸಭೆ 24-1-1950ರಂದು ರಾಷ್ಟ್ರಗೀತೆಗೆ ತನ್ನ ಒಪ್ಪಿಗೆ ನೀಡಿತು.


ರಾಷ್ಟ್ರಲಾಂಛನ : ಸಾರನಾಥ್ ಮ್ಯೂಸಿಯಂನಲ್ಲಿರುವ ತುಂಬಾ ಚೆನ್ನಾಗಿ ಪಾಲಿಷ್ ಆದ ಮರಳುಗಲ್ಲಿನ ಅಶೋಕ ಸ್ಥಂಭವೇ ಲಾಂಛನಕ್ಕೂ ಪ್ರಮುಖವಾಗಿದೆ. ರಾಷ್ಟ್ರಲಾಂಛನವನ್ನು 26-1-1950ರಂದು ಅಂಗೀಕರಿಸಲಾಯಿತು. ಮೂಲ ಅಶೋಕ ಸ್ತಂಭದ ಮೇಲ್ಬಾಗದಲ್ಲಿ ನಾಲ್ಕು ಸಿಂಹಗಳು ಬೆನ್ನಿಗೆ ಬೆನ್ನು ಮಾಡಿಕೊಂಡು ಕುಳಿತಿವೆ. ಇವು ಲಾಂಛನ ಪೀಠದ ಮೇಲೆ ಕುಳಿತಿವೆ. ಲಾಂಛನ ಪೀಠದ ಕೆಳಭಾಗದಲ್ಲಿ ಆನೆ, ಓಡುತ್ತಿರುವ ಕುದುರೆ, ಗೂಳಿ ಮತ್ತು ಸಿಂಹಗಳ ಕೆತ್ತನೆ ಇದೆ. ಪ್ರಾಣಿಗಳ ನಡುವೆ ಅಶೋಕ ಚಕ್ರವಿದೆ. ಇವುಗಳಡಿಯಲ್ಲಿ ಗಂಟೆಯಾಕಾರದ ಕಮಲವಿದೆ.

ಆದರೆ, ರಾಷ್ಟ್ರ ಅಳವಡಿಸಿರುವ ಲಾಂಛನದಲ್ಲಿ ನಾವು ಮೂರು ಸಿಂಹಗಳ ಮುಖವನ್ನು ಮಾತ್ರ ನೋಡುತ್ತೇವೆ. ಅದರ ಕೆಳಗೆ ಬಲಭಾಗಕ್ಕೆ ಗೂಳಿ ಮತ್ತು ಎಡಭಾಗಕ್ಕೆ ಕುದುರೆ. ಇವುಗಳ ನಡುವೆ ಅಶೋಕ ಚಕ್ರ ಮತ್ತು ಗೂಳಿ ಕುದುರೆಗಳ ಪಕ್ಕದಲ್ಲಿ ಭಾಗಶಃ ಚಕ್ರವನ್ನು ಕಾಣುತ್ತೇವೆ. ಲಾಂಛನ ಪೀಠದ ಕೆಳಗೆ ದೇವನಾಗರೀ ಲಿಪಿಯಲ್ಲಿ ಮುಂಡಕೋಪನಿಷತ್ತಿನಿಂದ ತೆಗೆದುಕೊಂಡ 'ಸತ್ಯಮೇವ ಜಯತೆ' ಎಂಬುದನ್ನು ಕೆತ್ತಲಾಗಿದೆ. ಇದೇ ನಮ್ಮ ರಾಷ್ಟ್ರಲಾಂಛನ.


Post a Comment

0 Comments

Important PDF Notes

Ad Code