Ad Code

Ticker

6/recent/ticker-posts

Click Below Image to Join Our Telegram For Latest Updates

Teachers Day Speech In Kannada 2023/A brief introduction by Dr. Sarvapalli Radhakrishnan/ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಂಕ್ಷಿಪ್ತ ಪರಿಚಯ

Teachers Day Speech In Kannada 2023

A brief introduction by Dr. Sarvapalli Radhakrishnan

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಂಕ್ಷಿಪ್ತ ಪರಿಚಯ 

Teachers Day Speech In Kannada 2023

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ|

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ|

A brief introduction by Dr. Sarvapalli Radhakrishnan

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸಂಕ್ಷಿಪ್ತ ಪರಿಚಯ 


ಜನನ : 5 ಸೆಪ್ಟಂಬರ್ 1888

ಸ್ಥಳ : ತಮಿಳುನಾಡಿನ ತಿರುತ್ತಣಿ

ತಂದೆ : ವೀರಸ್ವಾಮಿ

ತಾಯಿ : ಸೀತಮ್ಮ

ಮರಣ : 17 ಜುಲೈ 1975

A brief introduction by Dr. Sarvapalli Radhakrishnan

        ಪ್ರತಿ ವರ್ಷವು ನಾವು ಸಪ್ಟೆಂಬರ್ 5 ರಂದು  ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ. ಒಂದು ವಿಶಿಷ್ಟ ರೀತಿಯಲ್ಲಿ ಒಬ್ಬ ವ್ಯಕ್ತಿಯನ್ನು ನೆನಪಿಸಿಕೊಳ್ಳಬೇಕಾದರೆ ಅದರ ಜೊತೆಗೆ ಇಡೀ ಶಿಕ್ಷಕ ಬಳಗವನ್ನೇ ಜ್ಞಾಪಿಸಿಕೊಳ್ಳಬೇಕಾದರೆ ಈ ವ್ಯಕ್ತಿ ನಮಗೆಲ್ಲರಿಗೆ ನೀಡಿರುವ ಕಾಣಿಕೆ ಅವಿಸ್ಮರಣೀಯವಾದುದು ಎಂದು ನಮ್ಮೆಲ್ಲರಿಗೆ ತಿಳಿದಿರಬೇಕಾದ ವಿಷಯ.

     ಈ ಮಹಾನ್ ವ್ಯಕ್ತಿ ಯಾರೆಂದರೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಇವರು 1888, ಸೆಪ್ಟೆಂಬರ್ 5ರಂದು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಜನ್ಮ ತಾಳಿದರು. ಮೂಲತಃ ತಾತ್ವಿಕ ವಿಚಾರಗಳನ್ನೊಳಗೊಂಡ ಮನೋಭಾವದವರೇ ಆಗಿದ್ದರು. ಅವರ ಕೃತಿಗಳು ಭಾರತೀಯ ಹಾಗೂ ಅಂತರ್‌ರಾಷ್ಟ್ರೀಯ ಖ್ಯಾತಿಗೆ ಕಾರಣವಾಗಿದೆ. 1909 ರಲ್ಲಿ ಇವರು ಎಂ. ಎ ಪದವಿ ಪಡೆದು ಅಂದಿನಿಂದ 1917 ರವರೆಗೆ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಾಪಕನ ವೃತ್ತಿ ಸೇವೆ ಸಲ್ಲಿಸಿದರು. ರಾಧಾಕೃಷ್ಣನ್ ಅವರ ಮಾತೃಭಾಷೆ ತೆಲಗು, ಜೊತೆಗೆ ಇಂಗ್ಲೀಷ್, ಹಿಂದಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಗಾಧ ಪಾಂಡಿತ್ಯಗಳಿಸಿದ್ದರು. ವೇದ ಮತ್ತು ಉಪನಿಷತ್‌ಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಶಿಕ್ಷಣ ಸಂಸ್ಕೃತಿ ಮತ್ತು ಸಾಹಿತ್ಯಗಳಿಗೆ ಸಂಬಂಧಿಸಿದ ಯಾವುದೇ ವಿಷಯ ಇವರ ಆಸಕ್ತಿಯ ಕ್ಷೇತ್ರವಾಗಿರುತ್ತಿತ್ತು. ಈ ಎಲ್ಲ ವಿಷಯಗಳನ್ನು ಕುರಿತಂತೆ ಇವರು ವಿಪುಲವಾಗಿ ಬರೆದಿದ್ದಾರೆ. ಆದರೆ ಇವರ ಪ್ರಾತಿನಿಧಿಕ ಕಾರ್ಯ ಕ್ಷೇತ್ರ ತತ್ವಶಾಸ್ತ್ರ, ತತ್ವಶಾಸ್ತ್ರದ ಉಪನ್ಯಾಸಕರಾಗಿ ಅತ್ಯುತ್ತಮ ಕೀರ್ತಿ ಪಡೆದರು. ಸುಲಭವಾಗಿ ವಿಸ್ತರಿಸುತ್ತಿದ್ದರು. ಬ್ರಹ್ಮಚರ್ಯ ಹಾಗೂ ಬ್ರಹ್ಮಜ್ಞಾನ ಇವುಗಳಿಗೆ ರಾಧಾಕೃಷ್ಣನ್‌ ಅಪೂರ್ವ ಅರ್ಥವಂತಿಕೆಯನ್ನು ನೀಡಿದರು. ತತ್ವಶಾಸ್ತ್ರ ಅಥವಾ ಆಧ್ಯಾತ್ಮ ವಿದ್ಯೆ ಎಂದರೆ ಕೇವಲ ಚಿಂತನಾ ವಿಧಾನವಲ್ಲ. ಅದು ಮಾದರಿಯಾಗಿ ಬದುಕುವ ವಿಧಾನ ಎಂಬುದನ್ನು ಇವರು ಕಾರ್ಯತಃ ಸಾಧಿಸಿ ತೋರಿಸಿದರು. ಇವರು ಮುಂದೆ ಮೈಸೂರಿನಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕರಾದರು. ಇಲ್ಲಿ 1921 ರ ವರೆಗೆ ಬೋಧನೆ ಮಾಡಿದರು. ಮುಂದೆ 1929ರಲ್ಲಿ ಆಕ್ಸ್‌ ಫರ್ಡ್ ವಿಶ್ವವಿದ್ಯಾಲಯಕ್ಕೆ ಕರೆಪತ್ರ ಬಂದಿತು. ಅಲ್ಲಿಗೆ ಇವರನ್ನು ಆಹ್ವಾನಿಸಿಕೊಂಡರು. ಅಲ್ಲಿ ಹಲವಾರು ಅಂಶಗಳಿಂದ ಜನಮೆಚ್ಚಿನ ಉಪನ್ಯಾಸಕರಾದರು. ಪೌರಾತ್ಯ ಧರ್ಮ ಹಾಗೂ ನೀತಿಶಾಸ್ತ್ರದ ಪ್ರಾಧ್ಯಾಪಕರಾಗಿ ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡ ರಾಧಾಕೃಷ್ಣನ್ ಪ್ರಥಮ ಭಾರತೀಯರೆನಿಸಿಕೊಂಡರು. ಮ್ಯಾಂಚೆಸ್ಟರ್, ಆಕ್ಸಫರ್ಡ, ಷಿಕಾಗೂ, ಲಂಡನ್‌ಗಳಲ್ಲಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ಆಹ್ವಾನಿತ ಉಪನ್ಯಾಸಕರಾಗಿದ್ದ ರಾಧಾಕೃಷ್ಣನ್‌ ಪೌರಾತ್ಯ ತತ್ವಶಾಸ್ತ್ರಕ್ಕೆ ಜಾಗತಿಕ ನೆಲೆಯಲ್ಲಿ ಆಧುನಿಕ ದೃಷ್ಟಿಕೋನವನ್ನು ಅಳವಡಿಸಿ, ಈ ಬಗ್ಗೆ ಪಾಶ್ಚಾತ್ಯ ವಿದ್ವಾಂಸರಿಗೆ ಆಸಕ್ತಿ ಉಂಟಾಗುವಂತೆ ಮಾಡಿದರು. ಇವರು ಭಾರತೀಯ ನಿಯೋಗದ ಮುಖ್ಯಸ್ಥರಾಗಿ ಯುನೆಸ್ಕೋ ಸಂಸ್ಥೆಗೆ 1946-50 ರ ಅವಧಿಯಲ್ಲಿ ಹಲವು ಬಾರಿ ಬೇಟಿ ನೀಡಿದ ಮೊದಲ ಭಾರತೀಯ ಸದಸ್ಯ ತಂಡದಲ್ಲಿ ಒಬ್ಬರಾಗಿದ್ದರು. ಆಮೇಲೆ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾದರು. 1926ರಲ್ಲಿ ಅವರು ಚಿಕ್ಕಾಗೋ ವಿಶ್ವವಿದ್ಯಾಲಯದಲ್ಲಿ ಒಂದು ಬಾರಿ ಸೇವೆ ಸಲ್ಲಿಸಿದರು. ಈ ಉಪನ್ಯಾಸದಲ್ಲಿ ಅವರ ವಾಕ್ ಪಟುತ್ವವನ್ನು ಜನರು ಮುಕ್ತ ಕಂಠದಿಂದ ಹೊಗಳುತ್ತಿದ್ದರು. 1939 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಗೌರವ ಉಪಕುಲಪತಿಗಳಾದರು. ''ನಮ್ಮ ಅವಶ್ಯ ಧರ್ಮ'' The religiorn that we need, ನಾಗರಿಕತೆಯ ಭವಿಷ್ಯ (The future of civilization) ಸ್ವಾತಂತ್ರ್ಯ ಮತ್ತು ಸಂಸ್ಕೃತಿ (Freedom and Culture) ಮುಂತಾದ ಅನೇಕ ಗ್ರಂಥಗಳು ಜಗತ್ತಿಗೆ ಕೊಟ್ಟ ನಿದರ್ಶನಗಳಾಗಿವೆ. 1947ರಲ್ಲಿ ಇವರನ್ನು ರಷ್ಯಾ ದೇಶಕ್ಕೆ ಭಾರತದ ರಾಯಬಾರಿಯಾಗಿ ಕಳುಹಿಸಿತು. 1952 ರಲ್ಲಿ ಇವರು ಭಾರತದ ಉಪರಾಷ್ಟ್ರಪತಿಗಳಾದದ್ದು ಹೆಮ್ಮೆಯ ವಿಷಯ. 1960 ರಲ್ಲಿ ಇವರು ಭಾರತದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿಗಳ ಸ್ಥಾನದ ಗೌರವ ಗಿಟ್ಟಿಸಿಕೊಂಡರು. 1967ರಲ್ಲಿ ''ಭಾರತ ರತ್ನ' ಎಂಬ ಗೌರವವನ್ನು ತಮ್ಮದಾಗಿಸಿಕೊಂಡರು. ತಮ್ಮ ಕೊನೆಯ ಉಸಿರು ಇರುವವರೆಗೂ ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮನ್ನು ಪಳಗಿಸಿಕೊಂಡರು. 86 ರ ವಯಸ್ಸಿನಲ್ಲಿ 1975 ಎಪ್ರೀಲ್ 17 ರಂದು ನಿಧನರಾದರು.


ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ದೃಷ್ಟಿಯಲ್ಲಿ ಶಿಕ್ಷಣದ ಅರ್ಥ 

       ಶ್ರೀ ರಾಧಾ ಕೃಷ್ಣನ್‌ರವರ ಪ್ರಕಾರ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವದೇ ಶಿಕ್ಷಣ. ಇದು ಬೌದ್ಧಿಕ ಶಕ್ತಿಗಳನ್ನು ತರಬೇತಿ ಪಡಿಸುವದು ಮಾತ್ರವಲ್ಲದೇ, ಮಕ್ಕಳ ಮನಸ್ಸನ್ನು ಶುದ್ಧಗೊಳಿಸಿ ಆಧ್ಯಾತ್ಮ ಭಾವನೆಯನ್ನು ಪ್ರಚೋದಿಸಬೇಕು. ಮಗುವಿನಲ್ಲಿರುವ ಭಾವ ಭಾವನೆಗಳನ್ನು ಸುಧಾರಿಸದೇ ಕೇವಲ ಬುದ್ದಿಗೆ ತರಬೇತಿ ಕೊಡುವದರಿಂದ ಶಿಕ್ಷಣ ಸೂಕ್ತವೆನಿಸುವದಿಲ್ಲ. ಶಿಕ್ಷಣದಲ್ಲಿ ಅಸಹಾಯಕರಿಗೆ ಕರುಣೆ, ವಾತ್ಸಲ್ಯ, ಪ್ರೀತಿ ಇವುಗಳನ್ನು ಪ್ರಮುಖವಾಗಿ ವೃದ್ಧಿಸಬೇಕು. ವ್ಯಕ್ತಿಯ ಪ್ರಗತಿಯೇ ಶಿಕ್ಷಣದ ಪ್ರಮುಖ ಮುತುವರ್ಜಿಯಾಗಬೇಕು. ಶಿಕ್ಷಣವು ಆಲೋಚನಾತ್ಮಕವಾದ, ವಿವರಣಾತ್ಮಕವಾದಿ ಮನಸ್ಸನ್ನು ರೂಪಿಸಬೇಕು. ಸೃಜನಾತ್ಮಕವಾದ ಭಾವನೆ ಹಾಗೂ ಕೌಶಲ್ಯ ಸಂಪ್ರದಾಯಕತೆ, ಕ್ಲಿಷ್ಟಕರ ಆಲೋಚನೆಗಳನ್ನು ವರ್ಗಾಯಿಸಬೇಕು. ಮಕ್ಕಳು ಚಿಂತನೆಯನ್ನು ಒಳಗೊಂಡ ನವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಹೊಸ ವಿಜ್ಞಾನ ಅಧ್ಯಯನದಲ್ಲಿ ಲೀನರಾಗಬೇಕು. ಪ್ರಜಾಪ್ರಭುತ್ವಕ್ಕೆ ಮಕ್ಕಳೇ ಕಾರಣ. ಮಗು ತನ್ನನ್ನು ತಾನು ಪ್ರೀತಿಸಲು ಕಲಿಯಬೇಕು. ಇದಕ್ಕೆ ಶಿಕ್ಷಣ ಪ್ರಚೋದಿಸಬೇಕು. ಇದು ವ್ಯಕ್ತಿಯಲ್ಲಿ ಸಹನೆಯನ್ನು ಹುಟ್ಟಿಸುತ್ತದೆ. ಇಂತಹ ಶಿಕ್ಷಣ ಸಿಗದಿದ್ದರೆ ಶಿಕ್ಷಣ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಶಿಕ್ಷಣವು ವಿಜ್ಞಾನದಲ್ಲಿ ಅಭಿರುಚಿಯನ್ನು ಹುಟ್ಟಿಸಬೇಕು. ವ್ಯಕ್ತಿಯ ದೈಹಿಕ ಆಸಕ್ತಿ, ಆಲೋಚನಾ ಪ್ರವೃತ್ತಿ, ತಾಂತ್ರಿಕ ಕೌಶಲ್ಯಗಳೇ ಹೆಚ್ಚಾಗಿರುವ ಇಂದಿನ ಸಮಾಜದಲ್ಲಿ ನೈತಿಕ ಮೌಲ್ಯ ಹಾಗೂ ಆಧ್ಯಾತ್ಮಿಕ ಮೌಲ್ಯ ಹಿಂದೆ ಬೀಳುತ್ತದೆ. ವಿಜ್ಞಾನವನ್ನು ನಾವು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸುಧಾರಣೆ ತರಬೇಕು. ಇವತ್ತು ನಾವು ನೆಲದ ಮೇಲೆ ಮರದ ಹಲಗೆಯ ಮೇಲೆ ನಿಂತುಕೊಂಡು ನಕ್ಷತ್ರಗಳನ್ನು ತಲುಪಲು ಧಾವಿಸುತ್ತಿದ್ದೇವೆ. ಶಿಕ್ಷಣವು ನಮಗೆ ನಿಲುಕುವ ಗುರಿಯನ್ನು ತೋರಿಸಿಕೊಡಬೇಕು. ಸತ್ಯ ಸಾಕ್ಷಾತ್ಕಾರದಿಂದ ಮಾನವನ ಪರಿಪೂರ್ಣತೆ ಅಡಗಿದೆ. ಇದರ ದರ್ಶನವಾಗಿಸಿಕೊಂಡು ಮಾನವ ಜೀವನದ ಉದ್ಧಾರಕ್ಕೆ ಶ್ರಮಿಸಬೇಕು. ಭಾವನೆಗಳ ನಿಶ್ಚೇತನತೆ, ಮನಸ್ಸಿನ ಅಂಧಕಾರ ಹಾಗೂ ಕಾರ್ಯವನ್ನು ಪ್ರದರ್ಶನಗೊಳಿಸುವ ನಮ್ಮ ಸಂದರ್ಭಗೊಂಡ ನೀತಿಗಳು ನಮ್ಮ ಮನಸ್ಸಿನ ಶೂನ್ಯತೆಯನ್ನು ಪ್ರತಿಬಿಂಬಿಸುತ್ತವೆ. ಹೀಗಿರುವದರಿಂದ ಮನಸ್ಸನ್ನು ತಡೆಯುವ, ವಿಷಯ- ಕ್ರೂಢೀಕರಿಸುವ, ಮೌಲ್ಯಗಳನ್ನು ವೃದ್ಧಿಗೊಳಿಸುವ ಶಿಕ್ಷಣ ನಮ್ಮದಾಗಿರಬೇಕು. ಶಿಕ್ಷಕನು ಸಾಮಾನ್ಯ ಜ್ಞಾನ, ತಾಂತ್ರಿಕ ಕುಶಲತೆಯನ್ನು ಒದಗಿಸುವದರೊಂದಿಗೆ ಮನಸ್ಸಿನ ಮೃದುತ್ವ, ಜ್ಞಾನ, ಪ್ರಜಾಪ್ರಭುತ್ವಕ್ಕೆ ಬೇಕಾದ ಸಾಮರ್ಥ್ಯವನ್ನು ಪೂರೈಸಬೇಕು.


ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ದೃಷ್ಟಿಯಲ್ಲಿ ಅಧ್ಯಾಪಕ

     ಶ್ರೀ ರಾಧಾಕೃಷ್ಣನ್ ಅವರ ಪ್ರಕಾರ ಅಧ್ಯಾಪಕ ಸದ್ಗುಣಗಳ ಸಾಕಾರ ರೂಪ. ಮಕ್ಕಳಲ್ಲಿ ಆದರ್ಶವನ್ನು ರೂಢಿಸಿಕೊಳ್ಳಲು ಮಾದರಿ. ಇಂತಹ ಶಿಕ್ಷಕರನ್ನು 'ಆಚಾರ್ಯ' ಎಂದರೆ ಆಚಾರವುಳ್ಳವನು'' ಎಂದೂ ಕರೆಯುತ್ತಾರೆ. ಅವನು ನಿರಂತರ ಅಧ್ಯಯನಕಾರಿ. ಒಳ್ಳೆಯ ಗುಣಗಳನ್ನು ಒಳಗೊಂಡಿರುವನು. ತನ್ನ ಆಶ್ರಮದಲ್ಲಿರುವ ವಿದ್ಯಾರ್ಥಿಗಳನ್ನು ಕರುಣೆ, ಪ್ರೀತಿಯಿಂದ ಪೋಷಿಸುವನು. ಇದೇ ರೀತಿ ಪ್ರೋತ್ಸಾಹಿಸಬೇಕು. ಶಿಕ್ಷಕ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸುವದಲ್ಲದೇ ಆತ್ಮದ ಅಂಧ ಕಾರವನ್ನು ಹೋಗಲಾಡಿಸುವವನೇ ನಿಜವಾದ ಶಿಕ್ಷಕ ವಿದ್ಯಾರ್ಥಿಗಳು ಶಿಕ್ಷಕನ ಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡುವದಿಲ್ಲ. ಶಿಕ್ಷಕನ ನಡೆ, ನುಡಿ, ಆಚಾರ, ಶಿಸ್ತು, ವೇಷಭೂಷಣಗಳಿಗೆ ಒತ್ತು ನೀಡಿ ಅದನ್ನು ಅನುಸರಿಸುತ್ತಾರೆ. ಅವರಲ್ಲಿ ಉತ್ತಮತ ಜಾಗೃತ ಗೊಳ್ಳಬೇಕಾದರೆ ಶಿಕ್ಷಕನ ಪ್ರತೀಚರ ಅತಿ ಎಚ್ಚರಿಕೆಯಿಂದ ಕೂಡಿದ್ದಾಗಿರಬೇಕು. ಇದು ಸಹಜವಾಗಿರಬೇಕು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ದೃಷ್ಟಿಯಲ್ಲಿ ಅವರ ಜನ್ಮದಿನಾಚರಣೆ

      ಮೊದಲ ಶಿಕ್ಷಕರ ದಿನಾಚರಣೆಯನ್ನು  5 ಸೆಪ್ಟೆಂಬರ್ 1962 ರಂದು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೂ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಈ ದಿನವನ್ನು ಶಿಕ್ಷಕರಿಗಾಗಿ ಮೀಸಲಿಡಲಾಗಿದೆ. ಶಿಕ್ಷಕರ ದಿನಾಚರಣೆಯನ್ನು ವಿವಿಧ ದೇಶಗಳಲ್ಲಿ ಬೇರೆ ಬೇರೆ ದಿನ, ದಿನಾಂಕದಂದು ಆಚರಿಸಲಾಗುತ್ತದೆ. ಭಾರತದಲ್ಲಿ, ಇದನ್ನು ಪ್ರತಿವರ್ಷ ಸೆಪ್ಟೆಂಬರ್ 5 ರಂದು ಪ್ರಸಿದ್ಧ ವಿದ್ವಾಂಸ, ಭಾರತ ರತ್ನ ಪುರಸ್ಕೃತ, ಮೊದಲ ಉಪರಾಷ್ಟ್ರಪತಿ ಮತ್ತು ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ.

      ಆದರೆ ಈ ದಿನದಂದೇ ಯಾಕೆ ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತದೆ ಎನ್ನುವುದು ಕುರಿತು ಒಂದು ಕುತೂಹಲಕಾರಿ ಸಂಗತಿ ಇದೆ. ಒಮ್ಮೆ ವಿದ್ಯಾರ್ಥಿಗಳು  ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಆಚರಿಸಲು ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ರಾಧಾಕೃಷ್ಣನ್‌ ಅವರು ನನ್ನ ಜನ್ಮದಿನವನ್ನು ಭಿನ್ನವಾಗಿ ಆಚರಿಸಿ ಎಂದರಂತೆ. ನನ್ನ ಜನ್ಮದಿನವನ್ನು ಆಚರಿಸಲು ಬಯಸಿರುವುದು ಒಳ್ಳೆಯದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ನೀಡಿದ ಕೊಡುಗೆ ಮತ್ತು ಸಮರ್ಪಣೆಯನ್ನು ಗೌರವಿಸುವ ಮೂಲಕ ನೀವು ನನ್ನ ಜನ್ಮ ದಿನವನ್ನು ಆಚರಿಸಿದರೆ ನನಗೆ ಅತ್ಯಂತ ಸಂತೋಷವಾಗುತ್ತದೆ ಎಂದಿದ್ದರು. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಈ ಮಾತನ್ನು ಗೌರವಿಸಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತದೆ.

ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು


Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
🏵ಪ್ರಮುಖ ವಚನಕಾರರು ಮತ್ತು ಅಂಕಿತನಾಮಗಳು 🏵
Garuda Purana PDF in Kannada language/ಗರುಡ ಪುರಾಣ ಪಿಡಿಎಫ್
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
History Quiz for All Competitive Exams Part-02/ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇತಿಹಾಸ ಕ್ವಿಜ್ ಭಾಗ -02
7th Class First Language Kannada Part-2 PDF/7ನೇ ತರಗತಿ ಪ್ರಥಮ ಭಾಷೆ ಕನ್ನಡ ಭಾಗ-2 ಪಿಡಿಎಫ್
PU Lecturer Recruitment Syllabus PDF/ಪಿಯು ಉಪನ್ಯಾಸಕರ ನೇಮಕಾತಿ ಪಠ್ಯಕ್ರಮ ಪಿಡಿಎಫ್

Labels

Important PDF Notes

Ad Code